ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಅರಣ್ಯದಂಚಿನ ಶೀಗನಳ್ಳಿ ಗ್ರಾಮದ ಸುತ್ತಮುತ್ತಲು ಪ್ರತ್ಯಕ್ಷವಾದ ಚಿರತೆ ಸೆರೆ ಹಿಡಿದು ಬೋನಿಗೆ ಕೆಡವಿದ್ದಾರೆ.ಗುರುವಾರ ತಡರಾತ್ರಿ ಚಿರತೆ ಕಂಡು ಅಲ್ಲಿನ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಬೋನು ಸಮೇತ ಸ್ಥಳಕ್ಕೆ ಬಂದು ಕೆಲವು ಗಂಟೆಗಳ ಕಾಲ ಕಾರ್ಯಚರಣೆ ಮಾಡಿ ನಂತರ ಬೋನಿಗೆ ಬಿಳ್ಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿರತೆ ಕಂಡು ಅಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದರು ಈಗ ಚಿರತೆ ಸೆರೆ ಸಿಕ್ಕ ಕಾರಣ ನಿಟ್ಟುಸಿರು ಬಿಟ್ಟಂತಾಗಿದೆ. ಕಾರ್ಯಚರಣೆಯಲ್ಲಿ ಉಪ ವಲಯ ಅರಣ್ಯಧಿಕಾರಿ ಎಂ. ವೈ ಛಲವಾದಿ, ಸಿದ್ದಪ್ಪ ದೇವಣ್ಣವರ, ಮಾತೇಶ ಮಾಳಗಿ, ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Author: Prajatv Kannada
ಹುಬ್ಬಳ್ಳಿ: ರಾಜ್ಯ ಸರ್ಕಾರ ಇಂದು ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ. ಧಾರವಾಡ ಜಿಲ್ಲೆಗೆ ಕಲಘಟಗಿ ಮತ ಕ್ಷೇತ್ರದಿಂದ ಆಯ್ಕೆಯಾ ಸಂತೋಷ ಲಾಡ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದೆ. ಸಂತೋಷ ಲಾಡ್ ಅವರಿಗೆ ಕಾರ್ಮಿಕ ಸಚಿವ ಖಾತೆ ನೀಡಿದ್ದ ಸರ್ಕಾರ ಇದೀಗ ಅವರನ್ನು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿಯೂ ನೇಮಕ ಮಾಡಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ ಹಾಗೂ ಸಂತೋಷ ಲಾಡ್ ಮಧ್ಯೆ ಧಾರವಾಡ ಜಿಲ್ಲಾ ಉಸ್ತುವಾರಿಗಾಗಿ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಸರ್ಕಾರ ಧಾರವಾಡ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಂತೋಷ ಲಾಡ್ ಹೆಗಲಿಗೆ ನೀಡುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.
ಬೆಂಗಳೂರು: ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಿನ್ನೆ ನಡೆದ ನೂತನ ಶಾಸಕರ ಅಭಿನಂದನಾ ಸಮಾರಂಭದ ನಂತರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನೂತನ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಗಿದೆ. ವಿಧಾನಾಸಭೆ ಚುನಾವಣಾ ಸಂದರ್ಭದಲ್ಲಿ ಏನೆಲ್ಲಾ ಮಾಡಬಹುದಿತ್ತು ಅನ್ನುವ ಬಗ್ಗೆಯೂ ಚರ್ಚೆಯಾಗಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಮುಂದೆ ಏನೆಲ್ಲಾ ಮಾಬೇಕು ಎನ್ನುವ ಕುರಿತಂತೆ ಚರ್ಚೆ ಮಾಡಲಾಗಿದೆ ಎಂದರು. ಇದೇ ವೇಳೆ ವಿಧಾನಸಭೆ ಪ್ರತಿಪಕ್ಷದ ನಾಯಕನ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಪಕ್ಷ ನಾಯಕರ ಆಯ್ಕೆ ಕುರಿತು ಈ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾಜಿ ಶಾಸಕ ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ಶಾಲಾ ಪಠ್ಯದಲ್ಲಿ ಪ್ರಜಾಪ್ರಭುತ್ವ ಒಪ್ಪದ ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು. ಅವರು ಈ ದೇಶಕ್ಕೆ ಸಂಬಂಧಪಟ್ಟವರೇ ಅಲ್ಲ. ಕಾರ್ಲ್ ಮಾರ್ಕ್ಸ್, ಮಾವೋ ಇಬ್ಬರೂ ಪ್ರಜಾಪ್ರಭುತ್ವ ವಿರೋಧಿಗಳು. ಮಾವೋವಾದಿಗಳ ಪಾಠ ಇರಬಹುದು, ಮಾರ್ಕ್ಸ್ ವಾದಿಗಳ ಪಾಠ ಇರಬಹುದು. ಆದರೆ ದೇಶಭಕ್ತ ಡಾ. ಹೆಡ್ಗೇವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ ಎಂದು ಟೀಕಿಸಿದರು. ಇನ್ನೂ ಕಾಂಗ್ರೆಸ್ ನವರು ಪಠ್ಯ ಪರಿಷ್ಕರಣೆ ಮಾಡಲಿ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಹಾಗಂತ ಏನೂ ಬೇಕಾದರೂ ಮಾಡುತ್ತೇವೆ ಎಂದರೆ ಅದಕ್ಕೂ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಇದ್ದಿಲಿನ ಹೆಸರನ್ನು ಕೇಳಿದಾಗ, ಈ ಕಪ್ಪು ಮತ್ತು ಹೊಲಸು ನಿಮಗೆ ಹೇಗೆ ಸೌಂದರ್ಯವನ್ನು ನೀಡುತ್ತದೆ ಎಂಬುದನ್ನು ನಿಮ್ಮ ಮನಸ್ಸಿಗೆ ಬಂದಿರಬೇಕು. ಆದರೆ ಇದ್ದಿಲು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂಬುದೂ ನಿಜ. ಇದಕ್ಕಾಗಿ, ನೀವು ಸಕ್ರಿಯ ಇದ್ದಿಲು ಬಳಸಬೇಕಾಗುತ್ತದೆ. ನೀವು ಅದನ್ನು ಸುಲಭವಾಗಿ ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು. ಈಗಂತೂ ಮಾರುಕಟ್ಟೆಗಳಲ್ಲಿ ಇದ್ದಿಲಿನ ಅಥವಾ ಚಾರ್ಕೋಲಿನ ಫೇಸ್ ಮಾಸ್ಕ್ ಮತ್ತು ಫೇಸ್ ವಾಶ್ ಲಭ್ಯವಿದೆ. ಜೊತೆಗೆ ಇವುಗಳಿಗೆ ಹೆಚ್ಚಿನ ಬೇಡಿಕೆ ಸಹ ಇದೆ. ಇವುಗಳನ್ನು ಬಳಕೆ ಮಾಡುವುದರಿಂದ ಸೌಂದರ್ಯ ಮತ್ತಷ್ಟು ನಿಖರವಾಗುತ್ತದೆ. ಜೊತೆಗೆ ತ್ವಚೆಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಅನ್ನೋದರಲ್ಲಿ ದೂಸ್ರಾ ಮಾತಿಲ್ಲ.. ಈ ಕಪ್ಪಾದ ಇದ್ದಿಲಿನ ಪ್ರಯೋಜನಗಳೇನು ತಿಳಿದುಕೊಳ್ಳೋಣ,.. ನಿಮ್ಮಲ್ಲಿ ಪಿಂಪಲ್ ಅಥವಾ ಬ್ಲ್ಯಾಕ್‌ಹೆಡ್ ಇದ್ದರೆ, ಅದು ಈ ಎಲ್ಲ ಸಮಸ್ಯೆಗಳಿಂದ ತ್ವರಿತವಾಗಿ ಪರಿಹಾರ ನೀಡುತ್ತದೆ. ಇದಕ್ಕಾಗಿ, ನೀವು ಚಾರ್ಕೋಲ್ ಫೇಸ್ ಪ್ಯಾಕ್ ಅಥವಾ ಫೇಸ್‌ವಾಶ್ ಬಳಸಬಹುದು. ಇದನ್ನು ನಿಯಮಿತವಾಗಿ ಬಳಸುವುದರಿಂದ ಮುಖದ ಮೇಲೆ ಸುಕ್ಕುಗಳು ಉಂಟಾಗುವುದಿಲ್ಲ, ಏಕೆಂದರೆ ಅದು ಚರ್ಮವನ್ನು ಅದರ ಬಳಕೆಯಿಂದ ಬಿಗಿಯಾಗಿರಿಸುತ್ತದೆ.ಚಾರ್ಕೋಲ್…
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಸದ್ಯ ಸಿನಿಮಾದ ಕೆಲಸಗಳ ಜೊತೆಗೆ ತಮ್ಮ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಿದ್ದಾರೆ. ನಯನ ಹಾಗೂ ವಿಘ್ನೇಶ್ ರ ಮುದ್ದು ಅವಳಿ ಮಕ್ಕಳನ್ನು ನೋಡಬೇಕು ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ನಟಿ ನಯನತಾರಾ ಮಕ್ಕಳ ಜೊತೆ ಚೆಂದದ ಫೋಟೋಶೂಟ್ ಮಾಡಿಸಿದ್ದು, ಅವುಗಳನ್ನು ನಿರ್ದೇಶಕ ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ. ನಯನತಾರಾ- ವಿಘ್ನೇಶ್ ಶಿವನ್ ಜೋಡಿ ಜೂನ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಬಳಿಕ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನ ಪಡೆದುಕೊಂಡರು. ಇತ್ತೀಚಿಗೆ ನಟಿ ಮಕ್ಕಳಿಗೆ ಉಯಿರ್ ರುದ್ರೋನೀಲ್ ಎನ್.ಶಿವನ್ ಹಾಗೂ ಉಳಗ್ ದೇವಗನ್ ಎನ್.ಶಿವನ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಮಕ್ಕಳ ಜೊತೆ ನಟಿ ನಯನತಾರಾ ಮುದ್ದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ಚೆಂದದ ಫೋಟೋವನ್ನ ನಿರ್ದೇಶಕ ವಿಘ್ನೇಶ್ ಶಿವನ್ ಶೇರ್ ಮಾಡಿದ್ದಾರೆ. ನಯನತಾರಾ ಜೊತೆಗಿನ ದಾಂಪತ್ಯಕ್ಕೆ ಒಂದು ವರ್ಷ ತುಂಬಿದ ಸಂತಸದಲ್ಲಿ ನಯನತಾರಾ ಪತಿ ಫೋಟೋಸ್ ಹಂಚಿಕೊಂಡಿದ್ದಾರೆ. ಜೀವನದಲ್ಲಿ ಅದೆಷ್ಟೇ ಕಷ್ಟಗಳಿದ್ದರೂ ಮಕ್ಕಳ…
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯ ಎಂಟ್ರಿಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಈ ಹಿಂದೆ ಸಾಕಷ್ಟು ಭಾರಿ ವಿಜಯ್ ರಾಜಕೀಯಕ್ಕೆ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದೀಗ ಕನ್ಪಾರ್ಮ್ ಆಗಿದ್ದು ವಿಜಯ್ ಎಂಟ್ರಿಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ತಮಿಳುನಾಡಿನ ರಾಜಕೀಯ ಈ ಭಾರಿ ಸಾಕಷ್ಟು ಕುತೂಹಲ ಮೂಡಿಸಿದೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಟ ದಳಪತಿ ವಿಜಯ್ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಆದರೆ ಇದುವರೆಗೂ ರಾಜಕೀಯ ಎಂಟ್ರಿಗೆ ಹಿಂದೇಟು ಹಾಕಿದ್ದ ನಟ ಈ ಭಾರಿ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.…
ಸಾಕಷ್ಟು ನಿರೀಕ್ಷೆಯ ಮೂಲಕ ತೆ್ರೆಗೆ ಬಂದ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಹಾಕಿದ್ದ ಬಂಡವಾಳವು ಬರದೆ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿತ್ತು. ಈ ಸಿನಿಮಾದ ಸೋಲಿನ ಬಳಿಕ ನಟ ನಿವೃತ್ತಿ ಘೋಷಿಸಿದ್ದು ಇದೀಗ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ. ಆಮೀರ್ ಖಾನ್- ಕರೀನಾ ಕಪೂರ್ ನಟನೆಯ ಲಾಲ್ ಸಿಂಗ್ ಚಡ್ಡಾ ಫ್ಲಾಪ್‌ನಿಂದ ಬೆಸತ್ತ ಆಮೀರ್ ಖಾನ್ ಅವರು ತಾವು ಸದ್ಯಕ್ಕೆ ಸಿನಿಮಾ ಮಾಡೋದಿಲ್ಲ ಅಂತಾ ಹೇಳಿಕೊಂಡಿದ್ದರು. ವೈಯಕ್ತಿಕ ಜೀವನಕ್ಕೆ ಸಮಯ ಕೊಡುವೆ ಅಂತಾ ತಿಳಿಸಿದ್ದರು. ಇದೀಗ ಮತ್ತೆ ಸಿನಿಮಾ ಮಾಡುವ ಮನಸ್ಸು ಮಾಡಿದ್ದಾರೆ. ಆಮೀರ್ ಖಾನ್ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ರಾಜಮೌಳಿ ಅವರ ತಂದೆ ಕೆ.ವಿ. ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿದ್ದು, ನಿಜ ಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ ಎಂದು ಹೇಳಲಾಗುತ್ತದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ…
ಭಾರತ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಪ್ರಸಿಧ್ ಕೃಷ್ಣ ಅವರು ಗುರುವಾರ ತಮ್ಮ ದೀರ್ಘ ಕಾಲದ ಗೆಳತಿ ರಚನಾ ಕೃಷ್ಣ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದ ಸಾಂಪ್ರದಾಯದಂತೆ ಈ ಜೋಡಿ ಜೀವನದ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಕಳೆದ ಮಂಗಳವಾರ ಈ ಜೋಡಿ ನಿಶ್ಚಾತಾರ್ಥ ಮಾಡಿಕೊಂಡಿತ್ತು. ನಿಶ್ಚಿತಾರ್ಥ ಮಾಡಿಕೊಂಡ ಕೇವಲ ಎರಡೇ ದಿನಗಳಲ್ಲಿ ಈ ಇಬ್ಬರು ವಿವಾಹವಾಗಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಜಸ್ಥಾನ್ ರಾಯಲ್ಸ್ ತಂಡ, ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಜೋಡಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಹಾರೈಸಿದೆ. ಕರ್ನಾಟಕ ಹಾಗೂ ರಾಜಸ್ಥಾನ್ ರಾಯಲ್ಸ್ ಸಹ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ನವ ಜೋಡಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ. ಇನ್ನು ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡಿರುವ ನವ ಜೋಡಿಯ ಫೋಟೋ ವೀಕ್ಷಿಸಿದ ಅಭಿಮಾನಿಗಳು ಕರ್ನಾಟಕ ಜೋಡಿಗೆ ಶುಭ ಹಾರೈಸಿದ್ದಾರೆ. ಪ್ರಸಿಧ್ ಕೃಷ್ಣ ವಿವಾಹವಾಗಿರುವ ರಚನಾ ಕೃಷ್ಣ…
ಲಂಡನ್: ಕಳೆದ ಒಂದು ದಶಕದಿಂದ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವನ್ ಸ್ಮಿತ್ ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಲಂಡನ್‌ನ ದಿ ಓವಲ್ ಅಂಗಣದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಟೀಮ್ ಇಂಡಿಯಾ ಮಾಜಿ ನಾಯಕ, ಆಸ್ಟ್ರೇಲಿಯಾದ ಉಪನಾಯಕನ ಬ್ಯಾಟಿಂಗ್ ಶೈಲಿಯನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯಾದ ಭರವಸೆಯ ಆಟಗಾರ ಸ್ಟೀವನ್ ಸ್ಮಿತ್ ಅವರು ಕಳೆದ ಒಂದು ದಶಕದಿಂದ ತಮ್ಮ ಬ್ಯಾಟಿಂಗ್‌ನಲ್ಲಿ ತೋರಿರುವ ಸ್ಥಿರತೆ ಮತ್ತು ರನ್ ಸರಾಸರಿಯನ್ನು ಆಧಾರವಾಗಿಟ್ಟುಕೊಂಡು ಮಹತ್ವದ ಹೇಳಿಕೆ ನೀಡಿದ್ದಾರೆ. “ನನ್ನ ಪ್ರಕಾರ ಸ್ಟೀವನ್ ಸ್ಮಿತ್ ಅವರು ಪ್ರಸಕ್ತ ತಲೆಮಾರಿನ ನಿಜವಾದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಇದನ್ನು ಸಾಬೀತುಪಡಿಸಿದ್ದಾರೆ. ಈ ಕಾಲದ ಯಾವುದೇ ಬ್ಯಾಟರ್‌ಗಳಿಗೆ ಹೋಲಿಸಿದರೆ, ಅವರ ಆಟದಲ್ಲಿರುವ ಕೌಶಲತೆ ನಿಜಕ್ಕೂ ಅದ್ಭುತವಾಗಿದೆ,” ಎಂದು ವಿರಾಟ್…