Author: Prajatv Kannada

ಬೆಂಗಳೂರು: ಬಿಜೆಪಿ ಸರ್ಕಾರದ ದೌರ್ಬಲ್ಯ ಎತ್ತಿಹಿಡಿಯುವ ಕೆಲಸ ಮಾಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಎನ್​ಡಿಎ ಸಭೆಯಲ್ಲಿ ಪಾಲ್ಗೊಂಡು ಕೆಲವು ಪಕ್ಷಗಳ ಹೆಸರು ಚುಣಾವಣಾ ಆಯೋಗದಲ್ಲಿ ಇಲ್ಲ. ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಮಾಡುತ್ತಿದ್ದಾರೆ. ಅವರ ಜೊತೆಗಿರೋ ಪಕ್ಷಗಳು ತುಕಡೇ ತುಕಡೇ ಆಗಿವೆ. ವಿಪಕ್ಷಗಳ ಸಭೆ ಮಾಡೋದನ್ನ ನೋಡಿ ಮೋದಿಗೆ ಭಯವಾಗಿದೆ. ಹೀಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ಮಾಡುತ್ತಿದ್ದಾರೆ ಎಂದರು. ನ್​ಡಿಎ ಸಭೆಯನ್ನು ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ, ಎನ್​ಡಿಎ ಮೈತ್ರಿಕೂಟದಲ್ಲಿ 30 ಪಕ್ಷಗಳಿವೆ, ಅದರ ಹೆಸರು ಗೊತ್ತಿಲ್ಲ. ಸದ್ಯ ತುಕುಡೆ ತುಕುಡೆಯಾಗಿರುವ ಮೈತ್ರಿ ಪಕ್ಷಗಳನ್ನು ಒಂದು ಮಾಡಲು ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಹೊರಟಿದೆ. ಸಂವಿಧಾನ ನಾಶ ಮಾಡಲಿ ಹೊರಟಿದ್ದಾರೆ. ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ‌ಮಾಡಿಕೊಂಡು ವಿಪಕ್ಷಗಳ ವಿರುದ್ದ ಆಯುಧವಾಗಿ ಬಳಸುತ್ತಿದ್ದಾರೆ. ದೇಶದ ರಕ್ಷಣೆ ನಮ್ಮ ಹೊಣೆ ಅದೇ ನಮ್ಮ ಮೊದಲ ಆದ್ಯತೆಯಾಗಿದೆ. ಎಲ್ಲ ಪಕ್ಷಗಳ ನಾಯಕರು ಇದಕ್ಕೆ ಸಲಹೆ ನೀಡಿದ್ದಾರೆ ಎಂದರು.…

Read More

ಬೆಂಗಳೂರು: ಘಟಬಂಧನ್ ಸಭೆಗೆ ಆಗಮಿಸಿರುವ ಹೊರರಾಜ್ಯದ ರಾಜಕೀಯ ನಾಯಕರ ಆತಿಥ್ಯಕ್ಕೆ ಐಎಎಸ್ ನಿಯೋಜನೆ ಮಾಡಿರುವ ರಾಜ್ಯ ಸರ್ಕಾರ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಐಎಎಸ್ ಜೀತ ಪದ್ಧತಿಯನ್ನು ಜಾರಿಗೆ ತಂದು ಕರ್ನಾಟಕದ ಹೆಮ್ಮೆ, ಪರಂಪರೆಗೆ ಘಟಶ್ರಾದ್ಧ ಮಾಡಿದೆ ಎಂದು ಕಿಡಿಕಾರಿದೆ. ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆಥಿತ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು…

Read More

ಬೆಂಗಳೂರು: ಪ್ರತಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ಇಂಡಿಯನ್​ ನ್ಯಾಷನಲ್ ಡೆಮಾಕ್ರಟಿಕ್​​ ಇನ್​ಕ್ಲೂಸಿವ್​​​​ ಅಲೈನ್ಸ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ  ತಿಳಿಸಿದರು. ‘I-N-D-I-A’ ಎಂದರೆ Indian National Development Inclusive Alliance ಕನ್ನಡದಲ್ಲಿ ಹೇಳೋದಾದ್ರೆ ಭಾರತೀಯ ರಾಷ್ಟ್ರೀಯ ಅಭಿವೃದ್ದಿ ಅಂತರ್ಗತ ಒಕ್ಕೂಟ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ಪಡಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾರಥ್ಯದ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿ ಕೂಟದ ವಿರುದ್ಧ ಹೋರಾಟ ನಡೆಸಲು ಸಜ್ಜಾಗಿರುವ ವಿರೋಧ ಪಕ್ಷಗಳು ತಮ್ಮ ಒಕ್ಕೂಟಕ್ಕೆ ‘I-N-D-I-A’ ಎಂಬ ಹೊಸ ಹೆಸರು ಇಟ್ಟಿವೆ. ಬೆಂಗಳೂರಿನಲ್ಲಿ ನಡೆದ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳ ಒಕ್ಕೂಟದ ಸಭೆಯಲ್ಲಿ ತಮ್ಮ ಒಕ್ಕೂಟ ಹೊಸ ಹೆಸರನ್ನು ಅಂತಿಮಗೊಳಿಸಲಾಗಿದೆ. ವಿಪಕ್ಷ ಒಕ್ಕೂಟದ ಸಭೆಯಲ್ಲಿ ಭಾಗವಹಿಸಿದ್ದ 26 ರಾಜಕೀಯ ಪಕ್ಷಗಳ ನಾಯಕರು ಈ ಹೊಸ ಹೆಸರಿಗೆ ಸಮ್ಮತಿ ಸೂಚಿಸಿದ್ದಾರೆ. ಅಷ್ಟೇ ಅಲ್ಲ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವ ಕುರಿತಾಗಿ ರಣ ತಂತ್ರ ಸಜ್ಜಾಗುತ್ತಿದೆ. 26 ಪಕ್ಷಗಳು ಈ…

Read More

ಬೆಂಗಳೂರು: ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿ 26 ರಾಷ್ಟ್ರೀಯ ವಿಪಕ್ಷಗಳು ಸಾಮೂಹಿಕ ಸಂಕಲ್ಪ ಮಾಡಿಕೊಂಡಿದ್ದು, ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ನಿರ್ಧಾರ ಮಾಡಿವೆ. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯ ಕೈಗೊಂಡಿದ್ದು, ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪದ ವೇಳೆ ಪ್ರಸ್ತಾಪವಾಗಿದೆ. ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ ಮಾಡುವ ನಿರ್ಣಯ ಕೈಗೊಂಡಿದ್ದು, ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿಗಳ ರಚನೆಗೆ ಚರ್ಚೆ ನಡೆಸಲಾಗಿದೆ. ಯಾವ ಯಾವ ರಾಜ್ಯ ಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ ಎಂಬ ನಿರ್ಧಾರ ಮಾಡಲು ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನ ಮಾಡಲಾಗಿದೆ. ರಾಜ್ಯವಾರು ಸಮಿತಿ ಮಾಡಿ ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ.

Read More

ಸೂರ್ಯೋದಯ: 06.02 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಅದಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಅಮವಾಸ್ಯೆ 12:01 AM ತನಕ ನಂತರ ಪಾಡ್ಯ ನಕ್ಷತ್ರ: ಇವತ್ತು ಪುನರ್ವಸು 05:11 AM ತನಕ ನಂತರ ಪುಷ್ಯ ಯೋಗ: ಇವತ್ತು ಹರ್ಷಣ09:37 AM ತನಕ ನಂತರ ವಜ್ರ ಕರಣ: ಇವತ್ತು ನಾಗವ 12:01 AM ತನಕ ನಂತರ ಕಿಂಸ್ತುಘ್ನ 01:03 PM ತನಕ ನಂತರ ಬವ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 02.32 AM to 04.18 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:48 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ…

Read More

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಮ್ಮ ಅಳಿಯನ ಬಗ್ಗೆ ಸುನಿಲ್ ಶೆಟ್ಟಿಗೆ ತುಂಬಾ ಅಭಿಮಾನವಿದೆ. ಅದನ್ನು ಅವರು ಆಗಾಗ ಸಂದರ್ಶನಗಳಲ್ಲಿ ಹೇಳುತ್ತಲೇ ಇರುತ್ತಾರೆ. ಇದೀಗ ಕೆಎಲ್ ರಾಹುಲ್ ಬಗ್ಗೆ ಸಂದರ್ಶನವೊಂದರಲ್ಲಿ ಸುನಿಲ್ ಶೆಟ್ಟಿ ಮಾತನಾಡಿದ್ದಾರೆ. ‘ನೀನು ಅಷ್ಟೊಂದು ಒಳ್ಳೆಯವನಾಗಬೇಡ. ನಮಗೆ ನಮ್ಮ ಬಗ್ಗೇ ಕೀಳರಿಮೆಯಾಗುತ್ತದೆ ಎಂದು ನಾನು ರಾಹುಲ್ ಗೆ ಹೇಳುತ್ತಲೇ ಇರುತ್ತೇನೆ. ಆತ ಅಷ್ಟು ಒಳ್ಳೆಯವನು. ನಾನು ಯಾವತ್ತೂ ಅಥಿಯಾಗೆ ಹೇಳುತ್ತಿರುತ್ತೇನೆ, ನೀನು ರಾಹುಲ್ ನನ್ನು ಪಡೆಯುವುದಕ್ಕೆ ಪುಣ್ಯ ಮಾಡಿದ್ದೆ. ಅವಳು ಮಾತ್ರವಲ್ಲ, ನಮ್ಮ ಕುಟುಂಬವೇ ಅವರ ವಿಚಾರದಲ್ಲಿ ಪುಣ್ಯ ಮಾಡಿದೆ’ ಎಂದಿದ್ದಾರೆ.

Read More

ಇತ್ತೀಚೆಗಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಶಿವಣ್ಣನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಗಿದೆ. ಈ ಪೈಕಿ ಶಿವಣ್ಣ ‘SCFC01’ ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕರಾದ ಸ್ಯಾಮ್ ಸಿ.ಎಸ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. 2017ರಲ್ಲಿ ತೆರೆಕಂಡ ಹೃತಿಕ್ ರೋಷನ್, ಸೈಫ್ ಅಲಿ ಖಾನ್ ನಟನೆಯ ವಿಕ್ರಂ ವೇದ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಸ್ಯಾಮ್, ಇದೀಗ ಶಿವರಾಜ್ ಕುಮಾರ್ ನಟನೆಯ ಸಿನಿಮಾದ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಡ್ತಿದ್ದಾರೆ. ಈ ಚಿತ್ರವನ್ನು ಸುಧೀರ್ ಚಂದ್ರ ಪದ್ರಿ ನಿರ್ಮಿಸುತ್ತಿದ್ದು, ಕಾರ್ತಿಕ್ ಅದ್ವೈತ್ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣ ಹಾಗೂ ಕಾರ್ತಿಕ್ ಅದ್ವೈತ್ ಕಾಂಬಿನೇಷನ್ ನ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿರಲಿದ್ದು, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಪ್ರಾಜೆಕ್ಟ್…

Read More

ಅಲೋವೆರಾದಿಂದ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಿ ಉದ್ದವಾದ ಕೂದಲನ್ನು ಪಡೆಯಲು ಒಂದು ಕೊ್ ಅಲೋವೆರಾ ಜೆಲ್ ಗೆ 2ಚಮಚ ಹರಳೆಣ್ಣೆಯನ್ನು ಮಿಕ್ಸ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ವಾಶ್ ಮಾಡಿ.ಇದನ್ನು ವಾರದಲ್ಲಿ ಒಮ್ಮೆ ಮಾಡಿ. ಕೂದಲಿನ ಹೊಳಪನ್ನ ಹೆಚ್ಚಿಸಲು ಅಲೋವೆರಾಗೆ ಆಯಿಲ್ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಸೇರಿಸಿ ಪೇಸ್ಟ್ ತಯಾರಿಸಿ ನೆತ್ತಿಗೆ ಹಚ್ಚಿ 25 ನಿಮಿಷ ಬಿಟ್ಟು ಶಾಂಪು ಬಳಸಿ ವಾಶ್ ಮಾಡಿ.ಕೂದಲುದುರುವ ಮತ್ತು ತಲೆ ಹೊಟ್ಟು ಸಮಸ್ಯೆ ನಿವಾರಿಸಲು 1 ಕಪ್ ಮೆಂತ್ಯ ಕಾಳಿನ ಪೇಸ್ಟ್ ಗೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ 1 ಗಂಟೆ ಬಿಟ್ಟು ವಾಶ ಮಾಡಿ.ಕೂದಲು ಉದ್ದವಾಗಿಯೂ ಬೆಳೆಯುತ್ತದೆ. ಕೂದಲಿಗೆ ನಿತ್ಯವೂ ಮಾಯಿಶ್ಚರೈಸ್ ಆರೈಕೆಯನ್ನು ನೀಡಬೇಕು ಎನ್ನುವ ಬಯಕೆ ನಿಮ್ಮದಾಗಿದ್ದರೆ ಈ ಕ್ರಮವನ್ನು ಅನುಸರಿಸಬಹುದು. ಬೇಕಾಗುವ ಸಾಮಾಗ್ರಿಗಳು *ಒಂದು ಕಪ್ ನೀರು *1/2 ಕಪ್ ಅಲೋವೆರಾ ರಸ *ಒಂದು ಸ್ಪ್ರೇ…

Read More

ಇಸ್ಲಾಮಾಬಾದ್: ಪಬ್‌ಜಿ ಗೇಮ್ ಆಟದಲ್ಲಿ ಪರಿಚಯವಾದ ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆಗಾಗಿ ಆಕೆಯ ಪತಿ ಮೊರೆ ಇಟ್ಟಿದ್ದಾರೆ. ಆದರೆ ಇದೀಗ ಸೀಮಾ ಹೈದರ್ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಬಹಿಷ್ಕಾರಕ್ಕೊಳಗಾಗಿದ್ದಾಳೆ. ಸೀಮಾ ಕುಟುಂಬಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರು ಅವಳು ಪಾಕಿಸ್ತಾನಕ್ಕೆ ವಾಪಸ್ ಬರೋದು ಬೇಡ, ಆಕೆ ಅಲ್ಲಿಯೇ ಇರಲಿ ಎನ್ನುತ್ತಿದ್ದಾರೆ. ನಾಲ್ಕು ಮಕ್ಕಳ ಅವಿದ್ಯಾವಂತ ತಾಯಿ ಸೀಮಾ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಹಾಗೂ ಸಂಪ್ರದಾಯವಾದಿ ಸಮಾಜ ಎಲ್ಲವನ್ನ ತ್ಯಜಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಈಗ ಅವಳು ಮುಸಲ್ಮಾನಳಲ್ಲ, ಬೇಕಿದ್ದರೆ ಅವಳು ತನ್ನ ನಾಲ್ಕು ಮಕ್ಕಳನ್ನ ಕಳುಹಿಸಬಹುದು. ಆದ್ರೆ ಸೀಮಾ ಮಾತ್ರ ಬರೋದು ಬೇಡ ಎಂದು ಕುಟುಂಬಸ್ಥರು ಹಾಗೂ ನೆರೆಹೊರೆಯವರು ಹೇಳುತ್ತಿದ್ದಾರೆ. ಗುಲಿಸ್ತಾನ್-ಎ-ಜೌಹರ್ ನಗರದ ಬಿತ್ತೈಯಾಬಾದ್‌ನಲ್ಲಿದ್ದ ಸೀಮಾ ಕಳೆದ ಮೂರು ವರ್ಷಗಳಿಂದ ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಅವಳ ಸೋದರ ಮಾವ ನೂರ್ ಅಹ್ಮದ್ ಸ್ವಲ್ಪ ದೂರದಲ್ಲಿ ಮನೆ ಮಾಡಿಕೊಂಡಿದ್ದ. ಸೀಮಾ ಇದ್ದ ಜಾಗದಲ್ಲಿ ಹೆಚ್ಚು ಸೌಲಭ್ಯಗಳು ಇರಲಿಲ್ಲ. ಅಲ್ಲಿಯ…

Read More

ಶಿರಸಿ: ವೀರ ಸಾವರ್ಕರ್‌ ಸೇರಿದಂತೆ ದೇಶಭಕ್ತರ ಪಾಠವನ್ನು ಪಠ್ಯದಿಂದ ಹೊರಹಾಕಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌(Pramod Muthalik) ಹೇಳಿದರು. ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಸಾವರ್ಕರ್‌ ಒಬ್ಬ ಶ್ರೇಷ್ಠ ಹೋರಾಟಗಾರರಾಗಿದ್ದು, ಅಂಡಮಾನ್‌ ಜೈಲಿನಲ್ಲಿ 23 ವರ್ಷ ಇದ್ದರು. ಗಾಂಧೀಜಿ, ನೆಹರು ಅಥವಾ ಕಾಂಗ್ರೆಸ್ʼ‌ನ ಒಬ್ಬರೇ ಒಬ್ಬರು ಕೂಡ ಅಂಡಮಾನ್‌ ಜೈಲಿಗೆ ಹೋಗಿಲ್ಲ. ಜೈಲು ಎಂದರೆ ಕಾಂಗ್ರೆಸಿಗರಿಗೆ ರೆಸಾರ್ಟ್‌ ಆಗಿತ್ತು. ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ ಸಾವರ್ಕರ್‌ ಬಗ್ಗೆ ಅವಹೇಳನಕಾರಿ, ಅಸಹ್ಯವಾಗಿ ಮಾತನಾಡುವುದನ್ನು ಬಿಟ್ಟು ನಾಲಿಗೆ ಬಿಗಿಹಿಡಿದು ಮಾತನಾಡಲಿ ಎಂದು ಎಚ್ಚರಿಸಿದರು. ಬಿಜೆಪಿ ಹಿಂದುತ್ವವನ್ನು ಕಡೆಗಣಿಸುತ್ತಿದೆ. ಕಾರ್ಯಕರ್ತರನ್ನು ಅಲಕ್ಷ್ಯ ಮಾಡುತ್ತಿದೆ. ತಮ್ಮ ಸ್ವಾರ್ಥ ಹಾಗೂ ಭ್ರಷ್ಟಾಚಾರ ತುಂಬಿ ತುಳುಕಿದ ವಾತಾವರಣ ಮತ್ತು ಹಿಂದುತ್ವ ಕಡೆಗಣಿಸಿದ ಪರಿಣಾಮದಿಂದ ಇವತ್ತು ದೊಡ್ಡ ಪ್ರಮಾಣದಲ್ಲಿ ಹಿಂದೂಗಳಿಗೆ ಮತ್ತು ಬಿಜೆಪಿ ಪ್ರಮುಖರಲ್ಲಿ ವ್ಯತ್ಯಾಸ ಉಂಟಾಗಿದೆ. ಈ ವ್ಯತ್ಯಾಸ ಹೋಗಬೇಕಾದರೆ ತಮ್ಮ ತಪ್ಪನ್ನು ಒಪ್ಪಿಕೊಂಡು…

Read More