ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ತಾಲೂಕಿನ ಘಾಟಿ ದೇವಾಲಯದ ಸಮೀಪ ಮದುವೆ ಬಸ್ ಪಲ್ಟಿಯಾಗಿದ್ದು ಮೂರು ಜನಕ್ಕೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.. ಮಧುಗಿರಿ ತಾಲೂಕಿನ ಐಡಿಹಳ್ಳಿ ಗ್ರಾಮದಿಂದ ಮದುವೆಗೆಂದು ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಮದುವೆಗೆ ಬಂದಿದ್ದು ವಾಪಸ್ಸು ತೆರಳುವಾಗ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ. ಹನುಮಯ್ಯ (75),ಹನುಮಕ್ಕ ( 65),ಲಕ್ಷ್ಮೀ ದೇವಮ್ಮ( 65) ಗಂಭೀರ ಗಾಯಗೊಂಡ ವ್ಯಕ್ತಿಗಳಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ..ಇನ್ನು ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
Author: Prajatv Kannada
ತುಮಕೂರು: ನನಗೆ ರಾಜಕಾರಣ ಬೇಕೋ ಬೇಡ್ವೋ ಅನ್ನಿಸಿಬಿಟ್ಟಿದೆ ಎಂದು ಸಂಸದ ಡಿಕೆ ಸುರೇಶ್ (DK Suresh) ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ (Lok Sabha Elections) ನಾನು ಸ್ಪರ್ಧಿಸಬೇಕೋ ಬೇಡ್ವೋ ಎಂಬ ಗೊಂದಲ್ಲಿ ಇದ್ದೇನೆ ಎಂದು ಸುರೇಶ್ ಹೇಳಿದ್ದಾರೆ. ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ನಡೆದ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವರು ಲೋಕಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಿಂತ್ಕೋತೀನೋ ಇಲ್ಲವೋ ಇನ್ನೂ ತೀರ್ಮಾನ ಮಾಡಿಲ್ಲ. ನಾನು ಇನ್ನೂ ಗೊಂದಲದಲ್ಲಿ ಇದ್ದೀನಿ. ಯಾಕಂದ್ರೆ ನನಗೆ ರಾಜಕಾರಣ ಬೇಕೋ ಬೇಡ್ವೊ ಅನ್ನಿಸಿಬಿಟ್ಟಿದೆ ಎಂದು ಬೇಸರ ಹೊರಹಾಕಿದ್ದಾರೆ. ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆದು ಮುಂದುವರಿಯುತ್ತೇನೆ ಎಂದಿದ್ದಾರೆ. ಇದೀಗ ಸಂಸದ ಡಿಕೆ ಸುರೇಶ್‌ರ ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ.
ಶಿವಮೊಗ್ಗ: ಖಾಸಗಿ ವಸತಿ ಶಾಲೆಯಲ್ಲಿ 8 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಾಗರದಲ್ಲಿ (Sagar) ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿ (13) ಎಂದು ಗುರುತಿಸಲಾಗಿದೆ. ಈಕೆ ಸಾಗರದ ವನಶ್ರೀ ವಸತಿ ಶಾಲೆಗೆ (Residential School) ಕಳೆದ ಐದು ದಿನಗಳ ಹಿಂದೆ ದಾಖಲಾಗಿದ್ದಳು. ಗುರುವಾರ ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದ ತೇಜಸ್ವಿಯನ್ನು ಶಾಲೆಯ ಶಿಕ್ಷಕರು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇದೀಗ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ (Shivamogga) ಮೆಗ್ಗಾನ್ ಆಸ್ಪತ್ರೆಯಲ್ಲಿ (McGann Hospital) ಮರಣೋತ್ತರ ಶವ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ ವಿದ್ಯಾರ್ಥಿನಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ವಿದ್ಯಾರ್ಥಿನಿ ಕುಟುಂಬಸ್ಥರು ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಾಜೀವ್ ಗೌಡ ಹೀನಾಯವಾಗಿ ಸೋಲು ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯರ್ತರ ಸಭೆಯನ್ನ ಶಿಡ್ಲಘಟ್ಟ ನಗರದ ಕಾಂಗ್ರೇಸ್ ಭವನದಲ್ಲಿ ಏರ್ಪಡಿಸಲಾಗಿತ್ತು. ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಮತ್ತು ಮಾಜಿ ಶಾಸಕ ವಿ ಮುನಿಯಪ್ಪ ಅನುಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಈ ಬಾರಿ ಮೂರನೇ ಸ್ಥಾನಕ್ಕೆ ಹೋಗಿದ್ದು, ಕಾರ್ಯಕರ್ತರ ಹಾಗೂ ಮುಖಂಡರ ಸಭೆಯನ್ನ ಕರೆದು ಸೋಲಿಗೆ ಕಾರಣ ಏನೆಂದು ಅಭಿಪ್ರಾಯ ಸಂಗ್ರಹ, ಸೋಲಿನ ಪರಾಮರ್ಶೆ ಚರ್ಚೆಯ ಮಾಡುವ ಸಂದರ್ಭದಲ್ಲಿ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಬೆಂಬಲಿಗರು ಮತ್ತು ಮೂಲ ಕಾಂಗ್ರೇಸ್ ಕಾರ್ಯಕರ್ತರು, ಮುಖಂಡರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋದ ಪರುಣಾಮ ಕೈ ಕೈ ಮಿಲಾಯಿಸಿ ಗಲಾಟೆ ಮಾಡಿಕೊಂಡಿರುವ ಪ್ರಸಂಗ ನಡೆದಿದೆ. ಮುನಿಯಪ್ಪ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿಲ್ಲ, ಪಕ್ಷೇತರ ಅಭ್ಯರ್ಥಿ ಪರ ಮತಹಾಕಿದ್ದಾರೆ ಎಂದು ವಾದಿಸಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ…
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ಕಾಂಗ್ರೆಸ್ ಗ್ಯಾರಂಟಿಗಳದ್ದೇ ಚರ್ಚೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಷರತ್ತು ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಒಂದು ಗ್ಯಾರಂಟಿಯಲ್ಲಿ ಅಲ್ಲ, 5 ಗ್ಯಾರಂಟಿಗಳಲ್ಲೂ ಗೊಂದಲಗಳಿವೆ. ಗ್ಯಾರಂಟಿ ಘೋಷಣೆ ಮಾಡುವಾಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪರಿಜ್ಞಾನ ಇರಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಇಂಧನ ಇಲಾಖೆ ಸಚಿವರು ಜಾರ್ಜ್ ಅವರಿಗೆ ಅರ್ಥ ಆಗಿಲ್ಲ ಅನ್ನಿಸುತ್ತಿದೆ. ಸಂಪೂರ್ಣ ಮಾಹಿತಿ ಅವರಿಗೆ ಇಲ್ಲ. ಹೆಬ್ಬಾಳ್ಕರ್ ಅವರಿಗೂ ಮಾಹಿತಿ ಇಲ್ಲ ಅನ್ನಿಸುತ್ತಿದೆ. ಚುನಾವಣೆ ಪೂರ್ವದಲ್ಲಿ ಏನು ಘೋಷಣೆ ಮಾಡಿದ್ದರು? ಈಗ ಸಬೂಬು ಏನು ಕೊಡುತ್ತಾ ಇದ್ದಾರೆ? ಎಂದು ಪ್ರಶ್ನಿಸಿದರು. ಅಲ್ಲದೆ, 15 ಲಕ್ಷ ಬಿಜೆಪಿ ಯವರು ಕೊಟ್ಟಿದ್ದಾರಾ ಅಂತ ಕೇಳುತ್ತಿದ್ದಾರೆ. ಅವರು ಕೊಟ್ಟಿಲ್ಲ ಅಂತ ನಾನು ಕೊಡಲ್ಲ ಅನ್ನೋದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಚುನಾವಣೆಗೂ ಮುನ್ನ ಗ್ಯಾರಂಟಿಗಳನ್ನ ಘೋಷಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸದ್ಯ ಗ್ಯಾರಂಟಿ ಯೋಜನೆ ಅನುಷ್ಠಾಕ್ಕೆ ಭಾರೀ ಕಸರತ್ತು ಮಾಡುತ್ತಿದೆ.ಗೃಹ ಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಸಾಲು ಸಾಲು ಗೊಂದಲಗಳನ್ನ ಬಗೆಹರಿಸುಲು ಯತ್ನಿಸುತ್ತಿರೋ ಸರ್ಕಾರ, ಇದೀಗ ಶಕ್ತಿ ಯೋಜನೆ ಅನುಷ್ಠಾನಕ್ಕೆ ಸಜ್ಜುಗೊಂಡಿದೆ.ಹಾಗಾದರೆ ಭಾನುವಾರದಿಂದ ಮಹಿಳೆಯರಿಗೆ ಬಸ್ನಲ್ಲಿ ಫ್ರೀ ಸೇವೆ ನೀಡಲು ಸರ್ಕಾರ ಹೇಗೆಲ್ಲಾ ಸಿದ್ದಗೊಂಡಿದೆ ಅನ್ನೋ ರಿಪೋರ್ಟ್ ಇಲ್ಲಿದೆ. ಪಂಚ ಕಜ್ಜಾಯದಂತಹ ಪಂಚ ಗ್ಯಾರಂಟಿಗಳ ಪೈಕಿ ಅತಿ ಪ್ರಮುಖವಾದ ಗ್ಯಾರಂಟಿ ಅಂದರೆ ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ.ಈ ಯೋಜನೆಗೆ ರಾಜ್ಯದಲ್ಲಿ ಗದ್ದಲ -ಗಲಾಟೆ ನಡೆದಿದ್ದವು.ಸದ್ಯ ಈ ಶಕ್ತಿ ಯೋಜನೆಗೆ ಶಕ್ತಿ ತುಂಬಲು ಸರ್ಕಾರ ಮುನ್ನಟಿ ಇಟ್ಟಿದೆ.ಭಾನುವಾರ ಬೆಂಗಳೂರಿನ ವಿಧಾನಸೌಧ ಮುಂಭಾಗ ಶಕ್ತಿ ಯೋಜಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ರೆ,ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿಗಳು ಸಹ ಚಾಲನೆ ನೀಡಲು ಪ್ಲಾನ್ ರೂಪಿಸಿಲಾಗಿದೆ. ಜೂನ್ 11 ರಂದು ಶಕ್ತಿ ಸ್ಕೀಂಗೆ ಚಾಲನೆಗೆ ಏನೆಲ್ಲಾ ಸಿದ್ದತೆ.. -ಭಾನುವಾರ 11 ಗಂಟೆಗೆ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ…
ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟ ಅಭಿಷೇಕ್ ಹಾಗೂ ಅವಿವಾ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಸಾಕಷ್ಟು ಮಂದಿ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಸದ್ಯ ಮೋಹಕ ತಾರೆ ನಟಿ ರಮ್ಯಾ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಕೇಸರಿ ಸೀರೆಯುಟ್ಟು ನೋಡುಗರ ಕೇಂದ್ರಬಿಂದು ಆಗಿದ್ದರು. ರಮ್ಯಾ ಆರತಕ್ಷತೆಗೆ ಆಗಮಿಸುತ್ತಿದ್ದಂತೆ ಅಷ್ಟೂ ಕ್ಯಾಮೆರಾಗಳು ಅವರನ್ನು ಸುತ್ತುವರೆದಿದ್ದವು. ಬಂದಿದ್ದ ಅತಿಥಿಗಳು ಕೂಡ ರಮ್ಯಾರನ್ನು ಮಾತನಾಡಿಸಲು ಸಾಲುಗಟ್ಟಿದರು. ಒಂದು ರೀತಿಯಲ್ಲಿ ರಮ್ಯಾ ಎಲ್ಲರ ಗಮನ ಸೆಳೆಯುವಂತೆ ರೆಡಿಯಾಗಿ ಬಂದಿದ್ದು, ಅಷ್ಟೇ ಲವಲವಿಕೆಯಿಂದ ಎಲ್ಲರನ್ನೂ ಮಾತನಾಡಿಸುತ್ತಿದ್ದರು. ಸಿನಿಮಾ ರಂಗದಿಂದ ಹಲವು ವರ್ಷಗಳ ಕಾಲ ರಮ್ಯಾ ದೂರವಿದ್ದರೂ ಸಿನಿಮಾ ರಂಗ ಅವರಿಂದ ದೂರವಿರಲಿಲ್ಲ ಎನ್ನುವುದಕ್ಕೆ ಅವರ ಅಭಿಮಾನಿಗಳೇ ಸಾಕ್ಷಿಯಾಗಿದ್ದರು. ರಮ್ಯಾ ವಿಷಯ ಬಂದರೆ ಯಾವತ್ತಿಗೂ ಅವರು ನೆಚ್ಚಿನ ನಟಿಯ ಪರವಾಗಿಯೇ ಇರುತ್ತಿದ್ದರು. ಹಾಗಾಗಿ ಇವತ್ತಿಗೂ ಅಸಂಖ್ಯಾತ ಅಭಿಮಾನಿಗಳನ್ನು ರಮ್ಯಾ ಹೊಂದಿದ್ದಾರೆ.
ಬೆಳ್ಳಿಭೂಮಿಯಲ್ಲಿ ರಾಮನಾಗಿ ಹೋರಾಡೋದಿಕ್ಕೆ ಡಾರ್ಲಿಂಗ್ ಅಣಿಯಾಗಿದ್ದಾರೆ. ಇದೇ 16ರಂದು ಬಾಹುಬಲಿ ಸೂಪರ್ ಸ್ಟಾರ್ ಪ್ರಭಾಸ್ ಪ್ಯಾನ್ ವರ್ಲ್ಡ್ ಸಿನಿಮಾ ಆದಿಪುರುಷ ವಿಶ್ವಾದ್ಯಂತ ಮೆರವಣಿಗೆ ಹೊರಡಲಿದೆ. ಹೇಳಿಕೇಳಿ ಮಿರ್ಚಿ ಬಾಯ್ ಸಿನಿಕರಿಯರ್ ನ ಬಿಗ್ ಬಜೆಟ್ ಚಿತ್ರವೆನಿಸಿಕೊಂಡಿರುವ ಆದಿಪುರುಷನ ಆಗಮನಕ್ಕೆ ದಿನಗಣನೆಯಷ್ಟೇ ಬಾಕಿ ಇದೆ. ಹೀಗಾಗಿ ಡಾರ್ಲಿಂಗ್ ತಂಡ ಕಟ್ಟಿಕೊಂಡು ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಫರ್ ದಿ ಫಸ್ಟ್ ಟೈಮ್ ಪೌರಾಣಿಕ ಸಿನಿಮಾವೊಂದ್ರಲ್ಲಿ ಬಣ್ಣ ಹಚ್ಚಿದ್ದಾರೆ. ಜಾನಕಿವಲ್ಲಭ ರಾಮನಾಗಿ ಕಂಗೊಳಿಸಿದ್ದಾರೆ. ಬಾಲಿವುಡ್ ಸುಂದ್ರಿ ಕೃತಿ ಸನೂನ್ ಜಾನಕಿಯಾಗಿ, ಸೈಫ್ ಆಲಿಖಾನ್ ರಾವಣನಾಗಿ ಅಭಿನಯಿಸಿದ್ದಾರೆ. ದಕ್ಷಿಣ ಹಾಗೂ ಉತ್ತರ ತಾರೆಯರ ಸಂಗಮದ ಆದಿಪುರುಷ ಸಿನಿಮಾಗೆ ರಾಷ್ಟ್ರಪ್ರಶಸ್ತಿ ವಿಜೇತ ಓಂ ರಾವತ್ ಸಾರಥಿ.. ಆರಂಭದಿಂದಲೂ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರ ಅವಾಂತರ ಪುರುಷ ಎಂಬ ಹಣೆಪಟ್ಟಿಕಟ್ಟಿಕೊಂಡಿದ್ದು ಗೊತ್ತೇ ಇದೆ. ಬಾಯ್ಕಾಟ್, ಟ್ರೋಲ್ ಗೆ ಒಳಗಾಗಿ ಬ್ಯಾನ್ ಬಿಸಿಯಲ್ಲಿಯೂ ಬೆಂದಿದ್ದ ಆದಿಪುರುಷ ಇವೆಲ್ಲವನ್ನೂ ಆಲ್ ಹೋಪ್ ಆನ್ ಎನ್ನುವಂತೆ ಮಾಡಿದೆ. ಅದಕ್ಕೆ…
ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಮಿನಿ ಬಸ್ (mini bus) ಪಲ್ಟಿ ಆಗಿದ್ದು, 12 ಜನರಿಗೆ ಗಾಯಗಳಾ ಗಿರುವಂತಹ ಘಟನೆ ಹಾಸನ ತಾಲೂಕಿನ ಕಾರೇಕೆರೆ ಗೇಟ್ ಬಳಿ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣಕ್ಕೆ ಮದುವೆಗೆ ಹೋಗಿ ಹಿಂದಿರುಗುವಾಗ ಅವಘಡ ನಡೆದಿದೆ. ಸ್ಥಳಕ್ಕೆ ಶಾಂತಿಗ್ರಾಮ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ ತಿಂಗಳು ಈಜಿಪ್ಟ್ ಗೆ ಭೇಟಿ ನೀಡುವ ಸಾಧ್ಯತೆಯಿದೆ. ಇದು ಪ್ರಧಾನಿ ಮೋದಿ ಅವರ ಮೊದಲ ಈಜಿಫ್ಟ್ ಭೇಟಿ ಆಗಿರಲಿದೆ. ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಕಾರ್ಯತಂತ್ರ ಪಾಲುದಾರಿಕೆ ಮಟ್ಟಕ್ಕೆ ಏರಿಸಿದ ಸುಮಾರು ಆರು ತಿಂಗಳ ನಂತರ ಪ್ರಧಾನಿ ಭೇಟಿ ನೀಡುತ್ತಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. 2014ರಲ್ಲಿ ಪ್ರಧಾನಿಯಾದ ಬಳಿಕ ನರೇಂದ್ರ ಮೋದಿ ಈಜಿಪ್ಟ್ ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ವ್ಯಾಪಾರ, ಹೂಡಿಕೆ, ಕೃಷಿ ಮತ್ತು ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಈ ಭೇಟಿಯನ್ನು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿಯವರ ಈಜಿಪ್ಟ್ ಪ್ರವಾಸದ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಅರಬ್ ಜಗತ್ತು ಮತ್ತು ಆಫ್ರಿಕಾ ಎರಡರ ರಾಜಕೀಯದಲ್ಲಿ ಪ್ರಮುಖ ರಾಷ್ಟ್ರವಾಗಿರುವ ಈಜಿಪ್ಟ್ನೊಂದಿಗೆ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸಲು ಭಾರತ ಉತ್ಸುಕವಾಗಿದೆ. ಇದು ಆಫ್ರಿಕಾ ಮತ್ತು ಯುರೋಪ್ನ ಮಾರುಕಟ್ಟೆಗಳಿಗೆ ಪ್ರಮುಖ ಗೇಟ್ವೇ ಆಗಿಯೂ ಕಂಡುಬರುತ್ತದೆ. ಜನವರಿಯಲ್ಲಿ ಈಜಿಪ್ಟ್ ಅಧ್ಯಕ್ಷ…