ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆದಿದೆ. ದರ್ಶನ್ ರನ್ನು ಹೇಗಾದರು ಮಾಡಿ ಹೊರ ತರಬೇಕು ಎಂದು ಪತ್ನಿ ವಿಜಯಲಕ್ಷ್ಮಿ ಪ್ರಯತ್ನಿಸ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸಾಕಷ್ಟು ದೇವರುಗಳ ಮೊರೆ ಹೋಗ್ತಿದ್ದಾರೆ. ಈ ಮಧ್ಯೆ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಚಾಟಿಂಗ್ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ. ಈ ಮಧ್ಯೆ ನಟಿ ರಚಿತಾ ರಾಮ್ ಮಾಡಿರುವ ಫೋಸ್ಟ್ ಒಂದು ಚರ್ಚೆಗೆ ಕಾರಣವಾಗಿದೆ. ಸಿನಿ ಜೀವನಕ್ಕೆ ಗುರುವಾದ ದರ್ಶನ್ ಪರ ರಚಿತಾ ರಾಮ್, ತನ್ನ ಇನ್ಸ್ಟಾಗ್ರಾಮ್ನಲ್ಲಿ ಮತ್ತೊಂದು ಪೋಸ್ಟ್ ಭಾರೀ ಸದ್ದು ಮಾಡ್ತಿದೆ. ನಕಲಿ ಜನರು ಮುಖವಾಡ ಹಾಕೊಂಡು ಬದುಕ್ತಾರೆ. ಆದ್ರೆ ಅಸಲಿ ಜನರು ಇದ್ಯಾವುದಕ್ಕೂ ಕೇರ್ ಮಾಡಲ್ಲ ಅಂತ ಪೋಸ್ಟ್ ಮಾಡಿದ್ದಾರೆ. ರಚಿತಾ ಫೇಕ್ ಪೀಪಲ್ ಅಂದಿದ್ಯಾರಿಗೆ? ಈ ಪೋಸ್ಟ್ ಹಿಂದಿನ ಸತ್ಯ ಏನು? ಎಂಬ ಚರ್ಚೆ ಇದೀಗ ಎಲ್ಲೆಡೆ ಸದ್ದು ಮಾಡ್ತಿದೆ. ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್, ತನ್ನ ಪತ್ನಿ ವಿಜಯಲಕ್ಷ್ಮಿ, ತಾಯಿ…
Author: Prajatv Kannada
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಬಳ್ಳಾರಿ ಜೈಲು ನರಕವಾಗಿದೆ. ದರ್ಶನ್ ನಿತ್ಯ ಪೊಲೀಸ್ ಅಧಿಕಾರಿಗಳ ಎದುರು ಹೊಸ ಹೊಸ ಬೇಡಿಕೆಗಳನ್ನು ಇಡ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವೇಳೆ ಕೆಲ ಗೆಳೆಯರು ಹೊಂದಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ಒಂಟಿತನ ಬೇಸರ ತರಿಸಿದೆ. ಇದರಿಂದ ದರ್ಶನ್ ಟಿವಿಗಾಗಿ ಮನವಿ ಮಾಡಿದ್ದರು. ಅಂತೆಯೇ ಅಧಿಕಾರಿಗಳು ದರ್ಶನ್ ಗೆ ಟಿವಿ ನೀಡಿದ್ದರು. ಆದರೆ ಇದೀಗ ದರ್ಶನ್ ನನಗೆ ಈ ಟಿವಿ ಬೇಡ, ತೆಗೆದುಕೊಂಡು ಹೋಗಿ ಎಂದು ಜೈಲಾಧಿಕಾರಿಗಳಿಗೆ ಹೇಳಿರುವ ವಿಚಾರ ಮೂಲಗಳಿಂದ ಗೊತ್ತಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿ 14 ದಿನಗಳಾಗಿದೆ. ಬಳ್ಳಾರಿ ಜೈಲಿಗೆ ಸೇರಿದ ಬಳಿಕ ಟಿವಿ ನೀಡುವಂತೆ ದರ್ಶನ್ ಮನವಿ ಮಾಡಿದ್ದರು. ಜೈಲಿನ ನಿಯಮಗಳ ಪ್ರಕಾರ ದರ್ಶನ್‌ಗೆ ಟಿವಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ನೀಡಿದ್ದ ಟಿವಿಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಪದೇ…
‘ಕನ್ನಡತಿ’ ಧಾರವಾಹಿ ಮೂಲಕ ಖ್ಯಾತಿ ಘಳಿಸಿರುವ ನಟ ಕಿರಣ್ ರಾಜ್ ಕಾರು ಅಪಘಾತಕ್ಕೆ ಒಳಗಾಗಿದೆ. ಕಿರಣ್ ರಾಜ್ ಎದೆ ಭಾಗಕ್ಕೆ ಪೆಟ್ಟಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ವೇಳೆ ಕಿರಣ್ ರಾಜ್ ಜೊತೆಗಿದ್ದ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಅದೃಷ್ಟವಶಾತ್ ಪಾರಾಗಿದ್ದಾರೆ. ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಈ ದುರ್ಘಟನೆ ನಡೆದಿದೆ. ಕಿರಣ್ ರಾಜ್ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅವರು ಓಡಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರಿನ ಬಲಭಾಗಕ್ಕೆ ಹಾನಿ ಆಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಿರಣ್ ರಾಜ್ ಅವರು ಸದ್ಯ ಕಿರುತೆರೆಯಿಂದ ದೂರ ಇದ್ದಾರೆ. ಅವರು ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಸೆಪ್ಟೆಂಬರ್ 12ರಂದು ಅವರ ನಟನೆಯ ‘ರಾನಿ’ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಈ…
ಬೆಂಗಳೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಅಕ್ರಮಗಳು MUDA Scam_ ಬಗೆದಷ್ಟು ಬಯಲಾಗ್ತಿವೆ. ಈ ಹೊತ್ತಲ್ಲೇ ಲೋಕಾಯುಕ್ತ ಎಂಟ್ರಿ ಕೊಟ್ಟಿದೆ. ಮೈಸೂರು (Mysuru) ಹಿನಕಲ್‌ನ ಸರ್ವೆ ನಂಬರ್ 89ರ 7.18 ಎಕರೆ ಭೂಮಿಯನ್ನು 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ನಿವೇಶನ ರೂಪದಲ್ಲಿ ನೀಡಿರುವ ಆರೋಪ ಸಂಬಂಧ ಲೋಕಾಯುಕ್ತ ತನಿಖೆಗೆ ಇಳಿದಿದೆ. 2017ರಲ್ಲಿ ಆರ್‌ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದರು. ಸರ್ಕಾರದ ಅನುಮತಿ ಪಡೆದು 2022ರಲ್ಲಿ ಲೋಕಾಯುಕ್ತರು ಪ್ರಕರಣ ದಾಖಲಿಸಿಕೊಂಡಿದ್ದರು. ಹಿನಕಲ್ ಸರ್ವೇ ನಂಬರ್ 89ರ ನಿವೇಶನ ಹಂಚಿಕೆ ಸಂಬಂಧ ಮುಡಾದ 7.18 ಗುಂಟೆ ಜಮೀನಿನಲ್ಲಿ ನಿವೇಶನ ಮಾಡಿ 350ಕ್ಕೂ ಹೆಚ್ಚು ಪ್ರಭಾವಿ ಅಧಿಕಾರಿಗಳಿಗೆ ಹಂಚಿರುವ ಆರೋಪ ಇದಾಗಿದೆ. ಮುಡಾ ಸೂಪರಿಂಟೆಂಡೆಂಟ್ ಇಂಜಿನಿಯರ್ ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ. ಇದೇ ಹೊತ್ತಲ್ಲಿ ಮುಡಾ ಆಯುಕ್ತರ ನಿವಾಸದಲ್ಲಿದ್ದ ಸಿಸಿಟಿವಿ, ಡಿವಿಆರ್ ನಾಪತ್ತೆಯಾಗಿವೆ. ಮುಡಾದ ಕೆಲ ಅಧಿಕಾರಿಗಳು ಸಿಸಿಟಿವಿ ಮತ್ತು ಡಿವಿಆರ್ ಅನ್ನು ಕೊಂಡೊಯ್ದ ಅನುಮಾನ ವ್ಯಕ್ತವಾಗಿದೆ. ಇದು…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿನ ಹಲವಾರು ಅಘಾತಕಾರಿ ಮಾಹಿತಿಗಳು ದಿನೇ ದಿನೇ ಬಹಿರಂಗವಾಗುತ್ತಿವೆ. ನಟಿ ಪವಿತ್ರಾಗೌಡ ಅವರನ್ನು ಮೆಚ್ಚಿಸಲು ನಟ ದರ್ಶನ್ ರೇಣುಕಾಸ್ವಾಮಿ ಜೀವ ತೆಗೆದರು ಎನ್ನುವ ಆರೋಪ ಕೇಳಿ ಬಂದಿದೆ. ಇದರ ಮಧ್ಯೆ ನಟ ದರ್ಶನ್‌ಗೆ ಪವಿತ್ರಾಗೌಡ ಬ್ಲಾಕ್ಮೇಲ್ ಮಾಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ. ನನ್ನ ಆಪ್ತ ವಲಯದಿಂದಲೇ ದರ್ಶನ್ ಹಾಗೂ ಪವಿತ್ರಾ ಸಂಬಂಧದ ಬಗ್ಗೆ ಗೊತ್ತಾಗಿತ್ತು. ನಾನು ಆ ವಿಚಾರದ ಬಗ್ಗೆ ಮಾತಾಡಿದಾಗ ದರ್ಶನ್, ನನ್ನ ನಡುವೆ ಜಗಳ ಆಗಿತ್ತು. ದರ್ಶನ್ ಕೂಡ ನನ್ನ ದುಡ್ಡು ನನ್ನಿಷ್ಟ ಎಂದಿದ್ದರು. ಈ ವಿಷಯಕ್ಕೆ ನಮ್ಮಿಬ್ಬರ ನಡುವೆ ಆಗಾಗ ಜಗಳ ಆಗುತ್ತಲೇ ಇತ್ತು. ಪವಿತ್ರಾಗೌಡ ಬಳಿ ದರ್ಶನ್ ಖಾಸಗಿ ವಿಡಿಯೋ, ಫೋಟೋಗಳಿರೋ ಹಾರ್ಡ್ ಡಿಸ್ಕ್ ಇತ್ತು. ಹಾರ್ಡ್ ಡಿಸ್ಕ್ ತನ್ನ ತಾಯಿ ಮನೆಯಲ್ಲಿ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಮೂರು ತಿಂಗಳು ಕಳೆದಿತ್ತ. ಅತ್ತ ಪೊಲೀಸರು ಚಾರ್ಜ್ ಶೀಟ್ ಸಬ್ಮೀಟ್ ಮಾಡ್ತಿದ್ದಂತೆ ಇತ್ತ ದರ್ಶನ್ ಹೊರ ಬರಲು ತಯಾರಿ ಮಾಡಿಕೊಳ್ತಿದ್ದಾರೆ. ಇದೀಗ ನಟ ರಮೇಶ್ ಅರವಿಂದ್ ಮೊದಲ ಭಾರಿಗೆ ದರ್ಶನ್ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ರಮೇಶ್ ಅರವಿಂದ್ ಮೂವರು ದರ್ಶನ್‌ಗಳ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಕೇಸ್ ಬಗ್ಗೆ ನಟ ರಮೇಶ್ ಅರವಿಂದ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಇಲ್ಲಿ ಮೂವರು ದರ್ಶನ್‌ಗಳಿದ್ದಾರೆ ಅಂತ ರಮೇಶ್ ಹೇಳಿದ್ದಾರೆ. ಇಷ್ಟು ದಿನ ದರ್ಶನ್ ಬಗ್ಗೆ ನಾನೆಲ್ಲೂ ಮಾತಾಡಿರಲಿಲ್ಲ. ದರ್ಶನ್ ಅಂದಾಕ್ಷಣ ನನಗೆ ಸೂಪರ್ ಸ್ಟಾರ್ ದರ್ಶನ್ ನೆನಪಾಗ್ತಾರೆ. ವೀಕೆಂಡ್ ವಿಥ್ ರಮೇಶ್ ವೇದಿಕೆ ಮೇಲೆ ಕೂತಿದ್ದ ದರ್ಶನ್ ನೆನಪಾಗುತ್ತೆ ಅಂತ ರಮೇಶ್ ನೆನಪಿಸಿಕೊಂಡಿದ್ದಾರೆ. ನಿನ್ನೆಯ ದರ್ಶನ್, ಇವತ್ತಿನ ದರ್ಶನ್, ನಾಳೆಯ ದರ್ಶನ್ ಇದ್ದಾರೆ ಅಂತ ರಮೇಶ್ ಅರವಿಂದ್ ಹೇಳಿದ್ದಾರೆ. ನಿನ್ನೆಯ ದರ್ಶನ್ ಅವರನ್ನು ಸ್ಟಾರ್ ಆಗಿ ನೋಡಿದ್ವಿ. ಇವತ್ತಿಗೆ ದರ್ಶನ್‌ನ ಇಂಥದ್ದೊಂದು ಸಮಸ್ಯೆಯಲ್ಲಿ,…
‘ಸ್ಯಾಂಡಲ್ವುಡ್ ಕ್ವೀನ್’ ನಟಿ ರಮ್ಯಾ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಆದರೆ ಈಕೆ ಹೆಸರು ಆಗಾಗ ಸುದ್ದಿಯಾಗುತ್ತಲೆ ಇರುತ್ತದೆ. ಅದರಲ್ಲೂ ರಮ್ಯಾ ಮದುವೆ ಮ್ಯಾಟರ್ ಕೇಳಿ ಬರ್ತಾ ಇರುತ್ತೆ. ಕಳೆದ ಎರಡು ದಿನಗಳಿಂದ ನಟಿ ರಮ್ಯಾ ಮದುವೆ ವಿಚಾರ ಮತ್ತೆ ಸುದ್ದಿಯಾಗುತ್ತಿದೆ. ಈ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯಿಸಿದ್ದು ಇದೆಲ್ಲಾ ಗಾಳಿ ಸುದ್ದಿ ಎಂದಿದ್ದಾರೆ. ಉದ್ಯಮಿಯೊಬ್ಬರ ಜೊತೆಗೆ ರಮ್ಯಾ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆ ಅಂತೆಕಂತೆಗಳ ಬಗ್ಗೆ ಈಗ ಸ್ವತಃ ರಮ್ಯಾ ಅವರೇ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮದುವೆಗೆ ಬಗ್ಗೆ ಹಬ್ಬಿರುವ ಮಾಹಿತಿ ಸುಳ್ಳು ಎಂದು ರಮ್ಯಾ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಅವರ ವೈಯಕ್ತಿಕ ಜೀವನದ ಬಗ್ಗೆ, ಅದರಲ್ಲೂ ಮದುವೆ ಬಗ್ಗೆ ಗಾಳಿಸುದ್ದಿ ಹಬ್ಬಿದ್ದು ಇದೇ ಮೊದಲೇನೂ ಅಲ್ಲ. ಆಗಾಗ ಈ ಕುರಿತು ಗಾಸಿಪ್ ಹರಡುತ್ತಲೇ ಇರುತ್ತದೆ. ಈ ಬಾರಿ ವರ ಇವರೇ ಎಂದು ಹೇಳುವ ಮೂಲಕ ವ್ಯಕ್ತಿಯೊಬ್ಬರ ಫೋಟೋವನ್ನು ಕೂಡ ಹಾಕಲಾಯಿತು. ಶೀಘ್ರದಲ್ಲೇ ಎಂಗೇಜ್ಮೆಂಟ್ ಎಂದು ಸುದ್ದಿ ಹರಿದಾಡಿತ್ತು. ಆದರೆ ಅದೆಲ್ಲ…
ಶಿವಮೊಗ್ಗ: ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣೆಗೆ ಕುಂಕುಮವನ್ನೇ ಹಚ್ಚಿಕೊಳ್ಳುತ್ತಿರಲಿಲ್ಲ. ತಲೆಗೆ ಕೇಸರಿ ಪೇಟ ಹಾಕಲು ಹೋದರೆ ಕಿತ್ತು ಬಿಸಾಕುತ್ತಿದ್ದರು. ಇದೀಗ ಇದ್ದಕ್ಕಿದ್ದ ಹಾಗೆ ತಾಯಿ ಚಾಮುಂಡೇಶ್ವರಿ ದೇವಿ ಮೇಲೆ ಭಕ್ತಿ ಬಂದಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಮೈಲಾರಕ್ಕೆ ಹೋಗಿ ಮಾಡಿದ್ದಾರೆ. ಇದನ್ನು ನಾನು ಟೀಕಿಸುವುದಿಲ್ಲ. ಸ್ವಾಗತ ಮಾಡುತ್ತೇನೆ’ ಎಂದು ಮಾಜಿ ಸಿಎಂ ಈಶ್ವರಪ್ಪ ಹೇಳಿದರು. https://youtu.be/OTIRRdR_ivE?si=V5d80sWn61yHMb2P ಭಾರತದಲ್ಲಿನ ಎಲ್ಲಾ ಹಿಂದುಗಳು ಪೂಜೆ ಮಾಡುವವರು. ದೇವರಿಗೆ ಗೌರವ ಕೊಡುವವರು. ದೇವರ ಭಕ್ತಿ ಮನಸ್ಸಿನಲ್ಲಿರುತ್ತೆ. ಆದರೆ ಮುಸಲ್ಮಾನರ ಓಲೈಕೆಗಾಗಿ ಅವರ ಟೋಪಿ ಹಾಕಿಕೊಳ್ಳುವುದು. ಅವರ ಪರವಾಗಿ ಹೇಳಿಕೆಗಳನ್ನು ಕೊಡುವುದು, ಅವರ ಪರವಾಗಿ ಆದೇಶಗಳನ್ನು ಹೊರಡಿಸುವುದು ಮಾಡ್ತಾರೆ. ಓಟ್ ಬ್ಯಾಂಕ್‌ಗಾಗಿ, ಕುರ್ಚಿಗಾಗಿ ಈ ರೀತಿ ಮಾಡ್ತಾರೆ. ಇವೆಲ್ಲ ಬಹಳ ದಿನ ನಡೆಯಲ್ಲ. ಮೊದಲು ದೇವೇಗೌಡರು ಈ ರೀತಿ ಮಾಡ್ತಿದ್ದರು. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದರು. ಸಿದ್ದರಾಮಯ್ಯನವರು ಪೂರ್ಣ ಮುಸಲ್ಮಾನರಿಗೆ ಶರಣಾಗಿದ್ದರು. ಅವರ ಸರ್ಕಾರ ಬಂದಿದ್ದು ಕೂಡಾ ಮುಸಲ್ಮಾನರ ಕೃಪಾಕಟಾಕ್ಷದಿಂದ ಎಂಬಂತೆ ಹೇಳಿದ್ದರು. ಇದೀಗ…
ಕಲಬುರಗಿ: ಶಿವಲಿಂಗದ ಮೇಲೆ ಕಾಲಿಟ್ಟು ಸ್ವಾಮೀಜಿ ಒಬ್ಬರು ಪಾದ ಪೂಜೆ ಮಾಡಿಸಿಕೊಂಡ ಘಟನೆ, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮಹಾಗಾಂವ ಗ್ರಾಮದಲ್ಲಿನಡೆದಿದೆ. ಪಂಚಗ್ರಹ ಹೀರೆಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರೆ ಪಾದ ಪೂಜೆ ಮಾಡಿಸಿಕೊಂಡ ಶ್ರೀಗಳಾಗಿದ್ದಾರೆ. ಶಿವಲಿಂಗದ ಮೇಲೆ ಕಾಲಿಟ್ಟ ಸ್ವಾಮೀಜಿಯ ಪಾದಕ್ಕೆ ಹಾಲಿನಿಂದ ಅಭಿಷೇಕ ಮಾಡಿ ನಂತರ ಕುಂಕುಮ ಬಿಲ್ವ ಪತ್ರೆ ಮತ್ತು ಹೂಗಳಿಂದ ಭಕ್ತರು ಪೂಜೆ ಸಲ್ಲಿಸಿದ್ದಾರೆ. ಸ್ವಾಮೀಜಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ಇದೀಗ ಪರ ವಿರೋಧದ ಚರ್ಚೆ ಜೋರಾಗಿ ಕೇಳಿ ಬರುತ್ತಿದೆ. ಆದರೆ ಮಠದ ಮೂಲಗಳ ಪ್ರಕಾರ ಇದು ಸಂಪ್ರದಾಯವಾಗಿದ್ದು ಶಿವಲಿಂಗ ಪ್ರಾಣ ಪ್ರತಿಷ್ಟಾಪನೆಗೂ ಈ ಪೂಜೆ ಸಾಮಾನ್ಯ ಅಂತ್ತಿದ್ದಾರೆ..
ಜನನ ನಿಯಂತ್ರಣ ಮಾತ್ರೆಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಹೆಚ್ಚಿನ ಮಹಿಳೆಯರು ಇದನ್ನು ಬಳಸುತ್ತಾರೆ. ಇದು ಬೇಡದ ಗರ್ಭಧಾರಣೆಯನ್ನು ತಡೆಯುತ್ತದೆ. ಅದರೆ ನಮ್ಮಲ್ಲಿ ಹೆಚ್ಚಿನವರಿಗೆ ಜನನ ನಿಯಂತ್ರಣ ಮಾತ್ರೆಗಳ ಬಗ್ಗೆ ಸರಿಯಾಗಿ ತಿಳಿದಿಲ್ಲ. ಬರೀ ಅದನ್ನು ತಿಂದ್ರೆ ಗರ್ಭಧಾರಣೆಯನ್ನು ತಡೆಯಬಹುದು ಎನ್ನುವ ಮಾಹಿತಿ ಅಷ್ಟೇ ಇದೆ. ಆದರೆ ಇದರಿಂದ ಇನ್ಯಾವೆಲ್ಲಾ ಲಾಭಗಳು ಹಾಗೂ ಅಡ್ಡಪರಿಣಾಮಗಳಿವೆ ಅನ್ನೋದು ತಿಳಿದಿಲ್ಲ. ಜನನ ನಿಯಂತ್ರಣ ಮಾತ್ರೆ ಎಂದರೇನು? ಜನನ ನಿಯಂತ್ರಣ ಮಾತ್ರೆಗಳು ಹಾರ್ಮೋನುಗಳೊಂದಿಗೆ ಒಂದು ರೀತಿಯ ಔಷಧವಾಗಿದೆ. ಗರ್ಭಾವಸ್ಥೆಯನ್ನು ತಡೆಗಟ್ಟಲು ಸಹಕಾರಿಯಾಗಿದೆ. ಜನನ ನಿಯಂತ್ರಣ ಮಾತ್ರೆಗಳು ಪ್ಯಾಕ್‌ನಲ್ಲಿ ಬರುತ್ತವೆ ಮತ್ತು ನೀವು ಪ್ರತಿದಿನ 1 ಮಾತ್ರೆ ತೆಗೆದುಕೊಳ್ಳಬೇಕು. ನೀವು ಯಾವಾಗಲೂ ನಿಮ್ಮ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡರೆ ಮಾತ್ರ ಈ ಮಾತ್ರೆ ಸುರಕ್ಷಿತವಾಗಿದೆ. ಜನನ ನಿಯಂತ್ರಣ ಮಾತ್ರೆಗಳಲ್ಲಿ ಏನಿದೆ? ಜನನ ನಿಯಂತ್ರಣ ಮಾತ್ರೆಗಳಲ್ಲಿ ಕಂಡುಬರುವ ಹೆಚ್ಚಿನ ಹಾರ್ಮೋನುಗಳು ಪ್ರೊಜೆಸ್ಟಿನ್ ಮತ್ತು ಈಸ್ಟ್ರೊಜೆನ್‌ನ ಸಂಶ್ಲೇಷಿತ ಆವೃತ್ತಿಗಳಾಗಿವೆ. ಗರ್ಭನಿರೋಧಕ ಮಾತ್ರೆಯು ವೀರ್ಯವನ್ನು ಮೊಟ್ಟೆಯೊಂದಿಗೆ ಸೇರುವುದನ್ನು ನಿಲ್ಲಿಸುವ ಮೂಲಕ ಕೆಲಸ ಮಾಡುತ್ತದೆ.…