ಸೂರ್ಯೋದಯ: 06.01 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ತ್ರಯೋದಶಿ 08:32 PM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಪೂರ್ಣ ಮೃಗಶಿರ ಯೋಗ: ಇವತ್ತು ವೃದ್ಧಿ08:22 AM ತನಕ ನಂತರ ಧ್ರುವ ಕರಣ: ಇವತ್ತು ಗರಜ 07:52 AM ತನಕ ನಂತರ ವಣಿಜ 08:32 PM ತನಕ ನಂತರ ವಿಷ್ಟಿ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ:06:00 ನಿಂದ 07:30 ವರೆಗೂ ಅಮೃತಕಾಲ: 02.52 PM to 04.36 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:56 ನಿಂದ ಮ.12:47 ವರೆಗೂನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಮನೆ ಕಟ್ಟಡ…
Author: Prajatv Kannada
ಇಂದಿನ ದಿನಗಳಲ್ಲಿ ಮಕ್ಕಳನ್ನು ಪಡೆಯಲು ದಂಪತಿಗಳು ಸಾಕಷ್ಟು ಕಷ್ಟ ಪಡುತ್ತಿದ್ದಾರೆ, ಆದರೆ ಮಕ್ಕಳಾಗುವ ವಿಚಾರದಲ್ಲಿ ಹಾಗೂ ಫಲವತ್ತತೆ ಯ ವಿಚಾರ ಬಂದಾಗ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು ಅನಿವಾರ್ಯವಾಗಿದೆ. ಪುರುಷರು ಮತ್ತು ಮಹಿಳೆಯರು ತಮ್ಮ ಲೈಂಗಿಕ ಆರೋಗ್ಯದ ಬಗ್ಗೆ ಗಮನ ಕೊಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಈ ಲೇಖನದಲ್ಲಿ ವೀರ್ಯಾಣುಗಳ ಹಾಗೂ ಅಂಡಾಶಯಗಳ ಸಂತತಿಯನ್ನು ಹೆಚ್ಚು ಮಾಡುವ ಆಹಾರ ಪದಾರ್ಥಗಳ ಬಗ್ಗೆ ತಿಳಿಯೋಣ ಬನ್ನಿ.. ತಾಜಾ ಹಣ್ಣುಗಳು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೆಚ್ಚಾಗಿ ಒಳಗೊಂಡಿರುವ ತಾಜಾ ಹಣ್ಣುಗಳು ಪುರುಷರ ವೀರ್ಯಾಣುಗಳ ಗುಣಮಟ್ಟವನ್ನು ಹಾಗೂ ಮಹಿಳೆಯರ ಅಂಡಾಶಯಗಳ ಪ್ರಮಾಣವನ್ನು ಹೆಚ್ಚು ಮಾಡುತ್ತವೆ. ಒಂದು ವೇಳೆ ಮಗು ಪಡೆಯಬೇಕು ಎಂದು ನೀವು ಅಂದು ಕೊಂಡರೆ ನಿಮ್ಮ ಆಹಾರ ಪದ್ಧತಿಯಲ್ಲಿ ಕಿತ್ತಳೆ ಹಣ್ಣು, ಮಾವಿನ ಹಣ್ಣು, ಮೂಸಂಬಿ ಹಣ್ಣು ಇತ್ಯಾದಿಗಳನ್ನು ಸೇರಿಸಿ ಸೇವಿಸಿ. ಏಕೆಂದರೆ ಇವುಗಳಲ್ಲಿ ವಿಟಮಿನ್ ಸಿ ಪ್ರಮಾಣ ಮತ್ತು ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ. ಅದರಲ್ಲೂ ದಾಳಿಂಬೆ ಹಣ್ಣನ್ನು ಮಾತ್ರ…
ಬೆಂಗಳೂರು: ಕೊಹ್ಲಿ (Virat Kohli) ಟೀಂ ಇಂಡಿಯಾದ (Team India) ಅತ್ಯುತ್ತಮ ನಾಯಕ, ಯುವ ಆಟಗಾರರನ್ನು ಹೇಗೆ ಬೆಳೆಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ. ರಿಷಬ್ ಪಂತ್ ಹಾಗೂ ಇನ್ನುಳಿದ ಜೂನಿಯರ್‍ಗಳಿಗೆ ಕೊಹ್ಲಿ ತಮ್ಮದೇ ಶೈಲಿಯಲ್ಲಿ ಆಡಬೇಕು ಎಂದು ಪ್ರೋತ್ಸಾಹಿಸಿದ್ದರು. ನಿರ್ದಿಷ್ಟವಾಗಿ ಹೀಗೆ ಆಡಬೇಕು ಎಂದು ಒತ್ತಡ ಹೇರಿರಲಿಲ್ಲ ಎಂದು ಟೀಂ ಇಂಡಿಯಾ ಬೌಲರ್ ಇಶಾಂತ್ ಶರ್ಮಾ (Ishant Sharma) ಹೇಳಿದ್ದಾರೆ. ಯುವ ಕ್ರಿಕೆಟಿಗರ ಪ್ರಗತಿಗೆ ಕೊಹ್ಲಿ ವಹಿಸಬಹುದಾದ ಪಾತ್ರದ ಬಗ್ಗೆಯ ಕೇಳಲಾದ ಪ್ರಶ್ನೆಗೆ, ಹಿರಿಯ ಆಟಗಾರರಾಗಿದ್ದರೆ ಮೊದಲು ಉತ್ತಮ ರನ್ ಗಳಿಸಬೇಕು. ಇಲ್ಲದಿದ್ದರೆ ಜೂನಿಯರ್‍ಗಳು ನೀವು ಸೀನಿಯರ್ ಆಗಿರುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಾರೆ ಎಂದು ಉತ್ತರಿಸಿದರು. ಮುಂದುವರೆದು ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಶೈಲಿ ನೋಡುತ್ತಿದ್ದರೆ ಖಂಡಿತವಾಗಿಯೂ ಉತ್ತಮ ರನ್ ಗಳಿಸುತ್ತಾರೆ ವೆಸ್ಟ್ ಇಂಡೀಸ್ (West Indies) ಪ್ರವಾಸದ ಮೊದಲ ಪಂದ್ಯದಲ್ಲಿ ಚೊಚ್ಚಲ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಯಶಸ್ಸು ಟೀಂ ಇಂಡಿಯಾದ ಸಾಧನೆಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೇ ಜೈಸ್ವಾಲ್…
ಶಶಾಂಕ್ ನಿರ್ದೇಶನದ ಸಿನಿಮಾವೊಂದರ ಕಾರ್ಯಕ್ರಮದಲ್ಲಿ ನಟ ಕಿಚ್ಚ ಸುದೀಪ್ ಭಾಗಿಯಾಗಿದ್ದರು. ಈ ವೇಳೆ ವೇದಿಕೆಯ ಮೇಲಿದ್ದ ಕೆಲ ಕಲಾವಿದರು ಸುದೀಪ್ ಅವರನ್ನು ಹಿರಿಯನಟ ಎಂದು ಕರೆಯುತ್ತಿದ್ದರು. ಅದನ್ನು ಗಮನಿಸಿದ ಕಿಚ್ಚ, ಸಹನಟರಿಗೆ ತಮಾಷೆಯಾಗಿ ನಾನು ಹಿರಿಯ ನಟ ಅಲ್ಲ, ಹಾಗೆ ಕರೆಯಬೇಡಿ ಎಂದು ಹೇಳಿದ್ದಾರೆ. ಆರಂಭದಿಂದಲೂ ಕಿಚ್ಚ ಸುದೀಪ್ ಸಾಕಷ್ಟು ಸಿನಿಮಾಗಳಿಗೆ ಸಾಥ್ ನೀಡುತ್ತಾ ಬಂದಿದ್ದಾರೆ. ಅದರಂತೆ ಇಂದು ಕೂಡ ಶಶಾಂಕ್ ನಿರ್ದೇಶನದ ಸಿನಿಮಾಗೆ ವಿಶೇಷ ಅತಿಥಿಯಾಗಿ ಆಗಮಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಒಂದು ಕಡೆ ಸಿನಿಮಾ ಸಂಬಂಧಿ ನಾನಾ ಕಾರ್ಯಕ್ರಮಗಳಲ್ಲಿ ಸುದೀಪ್ ಬ್ಯುಸಿಯಾಗಿದ್ದರೆ ಮತ್ತೊಂದು ಕಡೆ ಅವರದ್ದೇ ಹೊಸ ಸಿನಿಮಾದ ಕೆಲಸಗಳಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸುದೀಪ್ ನಟನೆಯ 46ನೇ ಸಿನಿಮಾಗೆ ತಮಿಳಿನ ಯುವ ನಿರ್ದೇಶಕ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತಿದ್ದಾರೆ.ಚಿತ್ರಕ್ಕೆ ಸದ್ಯ Kiccha 46 ಎಂದು ಹೆಸರಿಡಲಾಗಿದ್ದು, ಸಿನಿಮಾ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ.
ಪ್ಯಾರಿಸ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಕಾಲ ಫ್ರಾನ್ಸ್ ಗೆ ಆಗಮಿಸಿದ್ದು ಈ ವೇಳೆ ಫ್ರಾನ್ಸ್‌ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ನೀಡಿ ಗೌರವಿಸಿದ್ದಾರೆ. ಎರಡು ದಿನಗಳ ಭೇಟಿಗಾಗಿ ಗುರುವಾರ ಪ್ಯಾರಿಸ್‌ಗೆ ಆಗಮಿಸಿದ ಮೋದಿಯವರಿಗೆ ಅಲ್ಲಿನ ನಾಯಕರು ಅಭೂತಪೂರ್ವ ಸ್ವಾಗತ ನೀಡಿದರು. ಶುಕ್ರವಾರ ಪ್ರಧಾನಿಯವರು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಮ್ಯಾಕ್ರೋನ್ ಜೊತೆಗೆ ಭಾಗಿಯಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಇಲ್ಲಿನ ಎಲಿಸೀ ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳನ್ನು ಟ್ವೀಟ್ ಮಾಡಿದ್ದು, “ಪಾಲುದಾರಿಕೆಯ ಮನೋಭಾವವನ್ನು ಸಾಕಾರಗೊಳಿಸುವ ಹೆಜ್ಜೆಯಿದು, ಫ್ರಾನ್ಸ್ ಅಧ್ಯಕ್ಷರಿಂದ ಅತ್ಯುನ್ನತ ಪ್ರಶಸ್ತಿ” ಎಂದು ಬರೆದುಕೊಂಡಿದ್ದಾರೆ. “ಭಾರತದ ಜನರ ಪರವಾಗಿ ಈ ಏಕಮಾನ ಗೌರವಕ್ಕಾಗಿ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು” ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.ಇದಕ್ಕೂ ಮುನ್ನ ಫ್ರೆಂಚ್ ಅಧ್ಯಕ್ಷ ಮತ್ತು ಪ್ರಥಮ…
ಜಮ್ಮು ಕಾಶ್ಮೀರ: ಅಮರನಾಥ ಯಾತ್ರೆಯಲ್ಲಿ(Amarnath Yatra) ಯಾತ್ರಾರ್ಥಿಗಳ ಸಾವು ಮುಂದುವರೆದಿದೆ. ಕಳೆದ 36 ಗಂಟೆಗಳಲ್ಲಿ ಐವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ ಈ ವರ್ಷದ ಯಾತ್ರೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ತಲುಪಿದೆ ಎಂದು ಅಧಿಕಾರಿಗಳುತಿಳಿಸಿದ್ದಾರೆ. ಬೆಳಿಗ್ಗೆಯಿಂದ ಸಾವನ್ನಪ್ಪಿದ ಐವರ ಪೈಕಿ ಒಬ್ಬ ಸಾಧು ಸೇರಿದ್ದಾರೆ. ಹೆಚ್ಚಿನ ಯಾತ್ರಿಕರು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಯಾತ್ರೆಯ ಪಹಲ್ಗಾಮ್ ಅಕ್ಷದಲ್ಲಿ ನಾಲ್ಕು ಜನರು ಸಾವನ್ನಪ್ಪಿದರೆ, ಬಾಲ್ಟಾಲ್ ಮಾರ್ಗದಲ್ಲಿ ಒಬ್ಬರು ( Baltal is one of the route) ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಯಾತ್ರಿಕರು ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಮತ್ತು ಗುಜರಾತ್‌ಗೆ ಸೇರಿದವರಾಗಿದ್ದಾರೆ. ಒಬ್ಬರ ಗುರುತು ಪತ್ತೆಯಾಗಿಲ್ಲ. ಬಲಿಯಾದವರಲ್ಲಿ ಯಾತ್ರಾ ಕರ್ತವ್ಯದಲ್ಲಿ ನಿಯೋಜಿಸಲಾದ ಇಂಡೋ–ಟಿಬೆಟಿಯನ್ ಬಾರ್ಡರ್ ಪೊಲೀಸ್ ಅಧಿಕಾರಿ, ಒಬ್ಬ ಸಾಧು ಮತ್ತು ಸೇವಾದಾರ್ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಿದೆ. ಇದರಿಂದಾಗಿ ಹೃದಯ ಸ್ತಂಭನ ಉಂಟಾಗುತ್ತಿದ್ದು, ಅಮರನಾಥ ಯಾತ್ರಿಕರು ಮತ್ತು ಅಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳ ಸಾವಿನ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ವಿಜಯನಗರ : ಮಾಜಿ ಸಚಿವ ಆನಂದ ಸಿಂಗ್ (Anand Singh) ರಾಜಕೀಯ ನಿವೃತ್ತಿಯತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮೂರು ಬಾರಿ ಬಿಜೆಪಿ ಒಮ್ಮೆ ಕಾಂಗ್ರೆಸ್ ನಿಂದ ಗೆದ್ದಿರೋ ಆನಂದ ಸಿಂಗ್ ಗೆ ಮಗ ಸಿದ್ದಾರ್ಥ ಸಿಂಗ್ ಸೋಲು ರಾಜಕೀಯ ನಿರಾಸಕ್ತಿ ಮೂಡಿಸಿದೆಯಾ ಎಂದು ಪ್ರಶ್ನೆ ಮೂಡಿಸಿದೆ. ಸಾವಿರಾರು ಮತಗಳ ಅಂತರದಿಂದ ಗೆದ್ದಿರೋ ಆನಂದ ಸಿಂಗ್ ಅವರಿಗೆ ಮಗನ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಮೊದಲು ಚುನಾವಣೆಯಿಂದ ಹಿಂದೆ ಸರಿದ್ರು. ಇದೀಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆನಂದ ಸಿಂಗ್ ರಾಜೀನಾಮೆಯಿಂದ ವಿಜಯನಗರ ಬಳ್ಳಾರಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಆನಂದ್ ಸಿಂಗ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಯಾಗಿದ್ದರು. ಇನ್ನೂ ಎರಡು ಮೂರು ವರ್ಷಗಳ ಅವಧಿ ಇರುವಾಗಲೇ ಆನಂದ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪ ಇರುವಾಗಲೇ ಆನಂದ ಸಿಂಗ್ ರಾಜೀನಾಮೆ ದೊಡ್ಡ ಸಂಚಲನ ಮೂಡಿಸಿದೆ.
ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡುವ ವಿಚಾರವಾಗಿ ಮಾತನಾಡಿದ(Shobha Karandlaje) ಕೇಂದ್ರ ಸಚಿವೆ ಶೋಭ ಕರಂದ್ಲಾಜೆ, ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕು. ಭಾರತಕ್ಕೆ ಎದ್ದುನಿತ್ತು ಗೌರವ ನೀಡುತ್ತಿರುವುದು ಪ್ರಧಾನಿ ಮೋದಿ ಅವರ ಕಾರಣಕ್ಕೆ. ನರೇಂದ್ರ ಮೋದಿ ಅವರಿಗೆ ರಾಜಕೀಯ ಭಿನ್ನಮತಗಳನ್ನ ದೂರವಿಟ್ಟು ಬೆಂಬಲ ಕೊಡಬೇಕು. ಇಂತಹ ಅಪೇಕ್ಷೆ ಎಲ್ಲಾ ರಾಜಕೀಯ ಪಾರ್ಟಿಯಲ್ಲೂ ಇದೆ. ಇದೆ ಅಪೇಕ್ಷೆಯನ್ನ ಜೆಡಿಎಸ್ನಿಂದ ನಿರೀಕ್ಷೆ ಮಾಡುತ್ತೇವೆ. ದೇಶದಲ್ಲಿರುವ ರಾಜಕೀಯ ಪಕ್ಷಗಳು ಪ್ರಧಾನಿ ಮೋದಿ ಜೊತೆ ಜೋಡಣೆ ಆಗುತ್ತಿದೆ. ಭಾರತ ನೂರನೇ ವರ್ಷದ ಸಂಭ್ರಮಾಚರಣೆಯ ದಿನ ವಿಶ್ವದಲ್ಲೇ ನಂಬರ್ ಓನ್ ಆಗಿರಬೇಕು ಎಂಬುದು ಮೋದಿ ಅವರ ಆಸೆ ಎಂದರು.
ಬೆಂಗಳೂರು: ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ದುಪ್ಪಟ್ಟು ಶುಲ್ಕ ವಸೂಲಿ ವಿರೋಧಿಸಿ ಹಾಗೂ ಅಪಘಾತದಲ್ಲಿ ಮೃತಪಟ್ಟಿರುವವರ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಪ್ರತಿಭಟನೆ ನಡೆಸಿದೆ. ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ್ರು ನೇತೃತ್ವದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ನೂರಾರು ಜನ ಕಾರ್ಯಕರ್ತರು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಿಂದ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದೆ. ಆದರೂ ಸಹ ಅದನ್ನ ಬಳಸಲು ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತಿದೆ.ಸರಿಯಾದ ರಸ್ತೆ ಕಾಮಗಾರಿ ಆಗುವ ಮುನ್ನವೇ ಶ್ರೀರಂಗಪಟ್ಟಣದಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ.ರಸ್ತೆ ಉದ್ಘಾಟನೆಯಾದ ಬಳಿಕ ಸರಿಸುಮಾರು 150 ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಸ್ಥರಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಐವತ್ತು ಲಕ್ಷ ಪರಿಹಾರ ನೀಡಬೇಕು ಮತ್ತು ಕುಟುಂಬದವರಿಗೆ ಉದ್ಯೋಗ ನೀಡಬೇಕು. ಸರ್ವಿಸ್ ರಸ್ತೆಯನ್ನ ನೀಡಬೇಕು, ಹಾಗೂ ಆಸ್ಪತ್ರೆ, ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕೆಂದು ಕರವೇ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ್ರು ಒತ್ತಾಯಿಸಿದ್ದಾರೆ. ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕು.…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ ನಡೆದಿದ್ದು ಪುಷ್ಪಾ ಸಿನಿಮಾ ರೀತಿಯಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಕುಖ್ಯಾತ ಗಾಂಜಾ ಪೆಡ್ಲರ್ ಸೇರಿದಂತೆ ಮೂವರು ಆರೋಪಿಗಳನ್ನ ಸೆರೆಹಿಡಿದು ಅವರ ಬಳಿ ಇದ್ದ ಬರೋಬ್ಬರಿ 12 ಕೋಟಿ ಮೌಲ್ಯದ 1500 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು ನಗರ ಸಿಸಿಬಿ ವಿಭಾಗದ ಮಹಿಳಾ ಸಂರಕ್ಷಕ ದಳದ ಪೊಲೀಸರಿಗೆ ಗಾಂಜಾ ಮಾರಾಟದ ಸುಳಿವು ಸಿಕ್ಕಿತ್ತು. ಅದರಂತೆ ಕಳೆದ ಮೂರು ವಾರಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸಿಸಿಬಿ ಪೊಲೀಸರು, ಕುಖ್ಯಾತ ಗಾಂಜಾ ಪೆಡ್ಲರ್ ಸೇರಿದಂತೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಂಜಾ ಪೂರೈಕೆ ಮಾಡಲು ಗೂಡ್ಸ್ ವಾಹನದ ಚಾರ್ಸಿ ಮಾರ್ಪಾಡು ಮಾಡಲಾಗಿದೆ. ಅಸಲಿ ಚಾರ್ಸಿ ಅಡಿಯಲ್ಲಿ ಒಂದು ಅಡಿ ಎತ್ತರದ ಸೀಕ್ರೇಟ್ ಚಾರ್ಸಿ ನಿರ್ಮಾಣ ಮಾಡಲಾಗಿದೆ. ಅದರಲ್ಲಿ ಗಾಂಜಾ ಪ್ಯಾಕ್ಗಳನ್ನ ಜೋಡಿಸಿ ಮುಚ್ಚಲಾಗುತ್ತಿತ್ತು. ಬಳಿಕ ಮೇಲೆ ಖಾಲಿ ಕಾಟನ್ ಬಾಕ್ಸ್ಗಳನ್ನು ತುಂಬಿಕೊಂಡು ಬರುತ್ತಿದ್ದರು. ಯಾರಿಗೂ ಅನುಮಾನ ಬರದಂತೆ ಆಂಧ್ರದ ವಿಶಾಕಪಟ್ಟಣದಿಂದ ಬೆಂಗಳೂರಿಗೆ ತರುತ್ತಿದ್ದರು. ಸೀಕ್ರೇಟ್ ಕಂಪಾರ್ಟ್ಮೆಂಟ್ ಮೂಲಕ…