Author: Prajatv Kannada

ಬೆಂಗಳೂರು ;- ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ವಿವಿಧ ಪದವೀಧರ ಅಭ್ಯರ್ಥಿಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಬೆಂಗಳೂರಿನಲ್ಲಿ ಖಾಲಿ ಇರುವ ಯಂಗ್​ ಪ್ರೋಫೆಷನಲ್​ ಮತ್ತು ಜ್ಯೂನಿಯರ್​ ಕನ್ಸಲಟೆಂಟ್​ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಹತೆ: ಯಂಗ್​ ಪ್ರೊಫೆಷನಲ್​ (ಪಿಅಂಡ್​ಎ)- ಬಿಟೆಕ್​, ಎಂಬಿಎ, ಪಿಜಿಡಿಎಂ ಯಂಗ್​ ಪ್ರೊಫೆಷನಲ್​ (ಎಆರ್​ಎಂ)- ಪದವಿ, ಎಂಬಿಎ, ಪಿಜಿಡಿಎಂ ಜ್ಯೂನಿಯರ್​ ಕನ್ಸಲಂಟೆಂಟ್​ (ಪಿಎಂ)- ಸಿಎ, ಎಲ್​ಎಲ್​ಬಿ, ಬಿಇ ಅಥವಾ ಬಿಟೆಕ್​, ಎಂಬಿಬಿಎಸ್​ ಅನುಭವ: ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯ ವಿವಿಧ ಮಧ್ಯಸ್ಥಗಾರರೊಂದಿಗೆ ಸಂಪರ್ಕ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ರಾಜ್ಯ ಸರ್ಕಾರಗಳು ಸೇರಿದಂತೆ, ಖಾಸಗಿ ಅಕಾಡೆಮಿಗಳು, ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳೊಂದಿಗೆ ಕಾರ್ಯ ನಿರ್ವಹಣೆ ಸೇರಿದಂತೆ ಸಂಬಂಧಿತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಒಂದು ಅಥವಾ ಎರಡು ವರ್ಷದ ಅನುಭವವನ್ನು ಹೊಂದಿರಬೇಕು. ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಕಗೆ ಗರಿಷ್ಠ ವಯೋಮತಿ 40 ವರ್ಷ ಆಗಿದೆ. ಅರ್ಜಿ ಸಲ್ಲಿಕೆ: ಹುದ್ದೆಗಳಿಗೆ ಅಭ್ಯರ್ಥಿಗಳು ಇಮೇಲ್​ ಮೂಲಕ…

Read More

ಬೆಂಗಳೂರು: “ಚಂದ್ರಯಾನ-3 ಚಂದ್ರನ ಕಡೆಗಿನ ತನ್ನ ಪ್ರಯಾಣವನ್ನು ಆರಂಭಿಸಿದೆ. ISRO ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದ್ದು ಈ ಸಾಧನೆಗೆ ದೇಶದ ಅನೇಕ ಗಣ್ಯಾತಿ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.ದೇಶದ ಪ್ರಧಾನ ಮಂತ್ರಿ ಹಾಗೂ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಂದ ಶುಭಾಶಯಗಳ ಸುರಿಮಳೆಗೈದಿದ್ದಾರೆ. ಚಂದ್ರಯಾನ-3 ಯಶಸ್ವಿ ಉಡಾವಣೆಯಿಂದ ಇಸ್ರೋ ವಿಜ್ಞಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಇಸ್ರೋ ವಿಜ್ಞಾನಿಗಳ ಪರಿಶ್ರಮ ಮತ್ತು ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರಯಾನ-3 ಭಾರತದ ಬಾಹ್ಯಾಕಾಶ ಸಾಹಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಇದು ಪ್ರತಿಯೊಬ್ಬ ಭಾರತೀಯನ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಎತ್ತರಕ್ಕೆ ಏರಿಸುತ್ತದೆ. ಈ ಮಹತ್ವದ ಸಾಧನೆಯು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಅವರ ಚೈತನ್ಯ ಮತ್ತು ಜಾಣ್ಮೆಗೆ ನನ್ನ ಅಭಿನಂದನೆ ಎಂದು ಪ್ರಧಾನಿ ಮೋದಿ (Narendra Modi) ಟ್ವೀಟ್‌ ಮಾಡಿದ್ದಾರೆ. ಅಭಿನಂದನೆ ಎಂದು ಪ್ರಧಾನಿ ಮೋದಿ (Narendra Modi) ಟ್ವೀಟ್‌ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟ್ವೀಟ್‌ ಮಾಡಿ, ಚಂದ್ರಯಾನ-3…

Read More

ದೊಡ್ಡಬಳ್ಳಾಪುರ: ತಡ ರಾತ್ರಿ ಶಾಸಗಿ  ಶಾಲೆ ಮತ್ತು ಶನಿಮಹಾತ್ಮ ದೇವಾಲಯದಲ್ಲಿ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ತಾಲೂಕಿನ  ತೂಬಗೆರೆ ಗ್ರಾಮದಲ್ಲಿ ನಡೆದಿದೆ.. ಗ್ರಾಮದಲ್ಲಿರುವ ಎಸ್ ಎಲ್ ಆರ್ ಎಸ್ ಖಾಸಗಿ ಶಾಲೆಗೆ ನುಗ್ಗಿದ  ಕಳ್ಳರು ಪ್ರಾಂಶುಪಾಲರ ಕೊಠಡಿಗೆ ನುಗ್ಗಿ ಕಪಾಟುಗಳನ್ನು ತೆಗೆದು ಕಡತಗಳನ್ನು ಎಸೆದಿದ್ದಾರೆ. ಉಪ ಪ್ರಾಂಶುಪಾಲರ ಕೊಠಡಿಯ ಬೀಗ ಮುರಿದು  21 ಸಾವಿರ ನಗದು ಜೊತೆ ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿಟ್ಟಿದ್ದ ಡಿವಿಆರ್ ಬಾಕ್ಸ್‌ ಕದ್ದು ಪರಾರಿಯಾಗಿದ್ದಾರೆ. ಅದೆ ರಾತ್ರಿ ಶನಿ ಮಹಾತ್ಮ ದೇವಾಲಯದ ಬಾಗಿಲು ಮುರಿದು ಕಾಣಿಕೆ ಹುಂಡಿಯನ್ನು ಹಾಗೂ ಬೆಲಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರೆ.. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ…

Read More

ಬೆಂಗಳೂರು:  ಐದು ಗ್ಯಾರೆಂಟಿಗಳನ್ನ ಜಾರಿಗೊಳಿಸಲ್ಲ ಅಂತ ಬಿಜೆಪಿ ವ್ಯಂಗ್ಯ ಮಾಡಿತ್ತು. ದುಡ್ಡು ಎಲ್ಲಿಂದ ತರ್ತಾರೆ ಅಂತ ಕೇಳುತ್ತಿದ್ದರು. ನಾವು ವಾಣಿಜ್ಯ ತೆರಿಗೆ, ಮದ್ಯದ ದರವನ್ನ ಹೆಚ್ಚಿಸಿದ್ದೇವೆ. ಇದರಿಂದ 13,500 ಕೋಟಿ ಬರುತ್ತೆ, 8 ಸಾವಿರ ಕೋಟಿ ಸಾಲ ಮಾಡುತ್ತೇವೆ. ನನ್ನ ರಾಜಕೀಯ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ 12520 ಕೋಟಿ ರೆವಿನ್ಯೂ ಡೆಪಿಸಿಟ್ ಬಜೆಟ್ ಮಂಡಿಸಿದ್ದೇನೆ. ಮುಂದೆ ಸರ್‌ಪ್ಲೆಸ್ ಬಜೆಟ್ ಮಂಡಿಸುವ ವಿಶ್ವಾಸ ಇದೆ ಎಂದರು. ಹಿಟ್ಲರ್ ಒಬ್ಬ ಮತಾಂಧ, ನೀವು ಅವನ ಪರ ಇದ್ದೀರಾ? ಎಂದು ವಿಪಕ್ಷ ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಅಕ್ಕಿ, ರಾಗಿ, ಹಾಲು, ಮೊಸರು, ಪೆನ್ನು ಪೇಪರ್ ಮೇಲೆ ಜಿಎಸ್​ಟಿ ಹಾಕಿದ್ದೀರಿ. ಬಿಜೆಪಿಯವರು GST ಹಾಕಿ ಜನರಿಂದ ಹಣ ಕಿತ್ತುಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರ ಕೈಯಲ್ಲಿ ಹಣ ಇರಲಿಲ್ಲ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತೆ ಅಂತಾ ಮೋದಿ ಹೇಳಿದ್ದಾರೆ. ಐದು ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗುವುದಕ್ಕೆ ಬಿಡುವುದಿಲ್ಲ. ಪ್ರಮಾಣವಚನ ತೆಗೆದುಕೊಂಡು ನೇರ ವಿಧಾನಸೌಧಕ್ಕೆ ಹೋಗಿದ್ದೆ. ಮೊದಲು ಎಲ್ಲಾ ಗ್ಯಾರಂಟಿಗೆ…

Read More

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್ 3 ಅಥವಾ ಲಾಂಚ್ ವೆಹಿಕಲ್ ಮಾರ್ಕ್-3 ‘ಬಾಹುಬಲಿ ರಾಕೆಟ್’ ಆಗಸದತ್ತ ಚಿಮ್ಮಿದೆ. ಇಸ್ರೋ ತನ್ನ ಪ್ರತಿಷ್ಠಿತ ಯೋಜನೆಯ ಉಡಾವಣೆಯನ್ನು ಯಶಸ್ವಿಯಾಗಿ ನೆರವೇರಿಸುತ್ತಿದ್ದಂತೆಯೇ ಕೋಟ್ಯಂತರ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿದೆ. ಸಾವಿರಾರು ಜನರು ಶ್ರೀಹರಿಕೋಟಾದಿಂದ ಈ ಅಪರೂಪದ ವಿದ್ಯಮಾನವನ್ನು ನೇರವಾಗಿ ಕಣ್ತುಂಬಿಕೊಂಡರು. ರಾಕೆಟ್ ಉರಿಯುವ ಬೆಂಕಿಯೊಂದಿಗೆ ಮೇಲಕ್ಕೆ ಚಿಮ್ಮುತ್ತಿದ್ದಂತೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಕೊನೆಯ ಹಂತದಲ್ಲಿ ಯಾವುದೇ ಅಡೆತಡೆ ಎದುರಾಗದೆ ಇರಲಿ ಎಂಬ ಪ್ರಾರ್ಥನೆ, ಆತಂಕದೊಂದಿಗೆ ಕಾಯುತ್ತಿದ್ದ ವಿಜ್ಞಾನಿಗಳು ನಿಟ್ಟುಸಿರುಬಿಟ್ಟರು. 2019ರ ಜುಲೈನಲ್ಲಿ ಚಂದ್ರಯಾನ-2 ಯೋಜನೆ ಉಡಾವಣೆ ನಡೆದಿತ್ತು. ಆದರೆ ಅದರಲ್ಲಿ ವಿಕ್ರಂ ಲ್ಯಾಂಡರ್ ನಿಧಾನಗತಿಯಲ್ಲಿ ಚಂದಿರನ ದಕ್ಷಿಣ ಧ್ರುವದ ಮೇಲೆ ತನ್ನ ಕಾಲುಗಳನ್ನು ಇರಿಸುವಲ್ಲಿ ವಿಫಲವಾಗಿತ್ತು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈಗಾಗಲೇ ಚಂದ್ರನಲ್ಲಿ ನೌಕೆಗಳನ್ನು ಇಳಿಸಿವೆ. ಆದರೆ ಇದೆಲ್ಲವೂ ನಡೆದಿರುವುದು ಚಂದ್ರನ ಉತ್ತರ…

Read More

ಬೆಂಗಳೂರು: ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರ ಎಸ್​ಸಿ, ಎಸ್​​​ಟಿ ಗುತ್ತಿಗೆದಾರರಿಗೆ ಟೆಂಡರ್ ವಿನಾಯ್ತಿಗೆ ಅವಕಾಶ ಟೆಂಡರ್ ವಿನಾಯ್ತಿಗೆ ಅವಕಾಶ ಮಾಡಿಕೊಡುವ ವಿಧೇಯಕ 50 ಲಕ್ಷದಿಂದ 1 ಕೋಟಿ ರೂ.ಗೆ ಟೆಂಡರ್ ವಿನಾಯಿತಿ ಮಿತಿ ಹೆಚ್ಚಳ. ವಿಧಾನಸಭೆಯಲ್ಲಿ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ತಿದ್ದುಪಡಿ ವಿಧೇಯಕ ಅಂಗೀಕಾರವಾಯ್ತು. ಈ ವಿಧೇಯಕ ಅಡಿ ಎಸ್​ಸಿ, ಎಸ್​​​ಟಿ ಗುತ್ತಿಗೆದಾರರಿಗೆ ಟೆಂಡರ್ ವಿನಾಯ್ತಿಗೆ ಅವಕಾಶ ನೀಡಲಾಗಿದೆ. ಈ ವಿಧೇಯಕ ಟೆಂಡರ್ ವಿನಾಯಿತಿಗೆ ಅವಕಾಶ ಮಾಡಿಕೊಡಲಿದೆ.  50 ಲಕ್ಷದಿಂದ 1 ಕೋಟಿ ರೂ.ಗೆ ಟೆಂಡರ್ ವಿನಾಯಿತಿ ಮಿತಿ ಹೆಚ್ಚಳ ಮಾಡಲಾಗಿದೆ.

Read More

ಕೆ.ಆರ್‌.ಪುರ: ಕೆ.ಆರ್. ಪುರದ ರಾಷ್ಟ್ರೀಯ ಹೆದ್ದಾರಿ 75ರ ಮುಖ್ಯರಸ್ತೆಯಲ್ಲಿ  ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಚರಣೆ.ತೆರವು ಕಾರ್ಯಚರಣೆಗೆ ವ್ಯಾಪಾರಿಗಳು ಜೆಸಿಬಿಗೆ ಅಡ್ಡವಾಗಿ ನಿಂತು ತೆರವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ, ಕೆ.ಆರ್.ಪುರ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಒತ್ತುವರಿ ತೆರವು ಕಾರ್ಯ ನಡೆದಿದ್ದು ಪಾದಚಾರಿ ಮಾರ್ಗ ಒತ್ತುವರಿಯಿಂದ ಸಂಚಾರ ದಟ್ಟಣೆ ಸಮಸ್ಯೆ ಸಹ ಉಂಟಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿ ತೆರವು ಗೊಳಿಸಲಾಗಿದೆ. ಪಾದಚಾರಿ ಮಾರ್ಗದ  ಒತ್ತುವರಿ ತೆರವು ಸಂಬಂಧಿಸಿದಂತೆ ಮುಂಗಡವಾಗಿ ನೋಟಿಸ್ ನೀಡಿದ್ದು,ಸಮಾಯವಾಕಾಶದ ನಂತರ ತೆರವು ಕಾರ್ಯಚರಣೆ ಮಾಡಲಾಗಿದೆ ನೋಟಿಸ್ ಹಿನ್ನೆಲೆಯಲ್ಲಿ ಕೆಲವು ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ಪಾದಚಾರಿ ಮಾರ್ಗ ತೆರವು ಮಾಡಿಕೊಂಡಿದ್ದು,ಉಳಿದ  ಅಂಗಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ.

Read More

ಬೆಂಗಳೂರು: ಬಿಜೆಪಿ ಅವನತಿ ಕರ್ನಾಟಕದಿಂದ ಶುರುವಾಗಿದೆ.  ಪ್ರಧಾನಿ ಮೋದಿ ಜನಪ್ರಿಯತೆ ದಿನೇ ದಿನೆ ಕುಸಿಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಸೇಡಂನಲ್ಲಿ ಪ್ರಚಾರ ಮಾಡಿದರು. ಸೇಡಂನಲ್ಲಿ ಕಾಂಗ್ರೆಸ್​ 45 ಸಾವಿರ ಮತಗಳ ಅಂತರದಲ್ಲಿ ಗೆದ್ದಿತು. ನಾವು ಜನರಿಗೆ ಹಣ ನೀಡುತ್ತೇವೆ. ಆದರೆ ಬಿಜೆಪಿ ಜನರ ಜೇಬಿನಿಂದ ಹಣ ಕಿತ್ತುಕೊಂಡರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ಮಾಡಿದರು. ಈ ಬಾರಿ ನಮ್ಮ ಪಕ್ಷ ಶೇ.42.9ರಷ್ಟು ಮತ ಪಡೆದುಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ 135 ಸ್ಥಾನಗಳನ್ನು ಪಕ್ಷ ಗೆದ್ದಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಯಾವತ್ತೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬಿಜೆಪಿ 2 ಬಾರಿಯೂ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ ಎಂದು ವಿಧಾನಪರಿಷತ್​​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ಮಾಡಿದರು.

Read More

ಬೆಂಗಳೂರು: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿರುವ ಅಂಗನವಾಡಿಗಳ ಕೇಂದ್ರಗಳ ಸಂಖ್ಯೆ ಹಾಗೂ ಮಕ್ಕಳ ಸಂಖ್ಯೆ ಎಷ್ಟಿದೆ ವೈ ಎ ನಾರಾಯಣಸ್ವಾಮಿ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 67570 ಅಂಗನವಾಡಿ ಕೇಂದ್ರಗಳು 2329 ಮಿನಿ ಅಂಗನವಾಡಿ ಕೇಂದ್ರಗಳು 6 ತಿಂಗಳಿಂದ 3 ವರ್ಷದ 22,12,653 ಮತ್ತು 3 ರಿಂದ 6 ವರ್ಷದ 17,37,526 ಮಕ್ಕಳು ಒಟ್ಟು ಜಿಲ್ಲಾವಾರು 39,50,179 ಮಕ್ಕಳು ದಾಖಲಾಗಿವೆ ಎಂದು ತಿಳಿಸಿದರು. ವಿಧಾನಸಭೆ ಅಧಿವೇಶನ ಆರಂಭವಾಗಿದ್ದು,ಸದನಕ್ಕೆ ಸ್ಪೀಕರ್ ಯುಟಿ ಖಾದರ್​ ಆಗಮಿಸುತ್ತಿದ್ದಂತೆ ಆ ಕಡೆಯೇ ಗಮನ ಹರಿಸುತ್ತಿದ್ದೀರಾ ಎಂದ ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದರು. ಈ ವೇಳೆ ಸ್ಪೀಕರ್​ ಯುಟಿ ಖಾದರ್​ ನಾನು ವಿಪಕ್ಷಗಳ ಮಿತ್ರ ಎಂದಿದ್ದಾರೆ.

Read More

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಪುಂಡರ ಹಾವಳಿ ಹೆಚ್ಚಾಗಿದ್ದು ಪೊಲೀಸರ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಇತ್ತೀಚಿಗೆ ವಿಲೀಂಗ್​ ಮಾಡುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದ ಪುಂಡರನ್ನು ಜೈಲಿಗಟ್ಟಿರುವ ಘಟನೆ ನಗರದ ವರ್ತೂರು ಬಳಿ ನಡೆದಿದೆ. ಇವರ ಪಾಡಿಗೆ ಇವರು ವ್ಹೀಲಿಂಗ್ ಮಾಡುತ್ತಾ ದಾರಿಗೆ ಅಡ್ಡಲಾಗಿ ನಿಂತಿದ್ದಕ್ಕೆ ಹಾರ್ನ್​ ಮಾಡಿ ದಾರಿ ಕೇಳಿದ್ರೆ ಏನ್ ಮಾಡಿದ್ರು ಗೊತ್ತಾ, ಕಾರು ಅಡ್ಡಗಟ್ಟಿ, ಚಾಲಕನ ಮೇಲೆ ದರ್ಪ ತೋರಿದ ಘಟನೆ ಗುರುವಾರ ಮಧ್ಯಾಹ್ನ 2.30ರ ವೇಳೆಯಲ್ಲಿ ನಡೆದಿದೆ. ಹೌದು ರಸ್ತೆಯಲ್ಲಿ 3-4 ಬೈಕ್​​ ಸವಾರರು ಸೇರಿ ಅಡ್ಡಾದಿಡ್ಡಿ ಚಾಲನೆ ಮಾಡುತ್ತಿದ್ದರು. ಈ ವೇಳೆ ಕಾರು ಚಾಲಕ ದಾರಿ ಬಿಡುವಂತೆ ಹಿಂಬದಿಯಿಂದ ಹಾರ್ನ್ ಮಾಡಿದ್ದಾನೆ. ಇದಕ್ಕೆ ರೊಚ್ಚಿಗೆದ್ದ ಪುಂಡರು ಬೈಕ್ ನಿಲ್ಲಿಸಿ ಬಂದು ಚಾಲಕನ ಜತೆ ಗಲಾಟೆ ಮಾಡಿದ್ದಾರೆ. ಇನ್ನು ಹಾರ್ನ್ ಮಾಡಿದ್ದಕ್ಕೆ ನಡುರಸ್ತೆಯಲ್ಲಿ ಬೈಕ್ ನಿಲ್ಲಿಸಿ ಓರ್ವ ಅಸಾಮಿ ಬಂದಿದ್ದಾನೆ. ಇದಾದ ಬಳಿಕ ಆತನ ಜೊತೆಗೆ ಮತ್ತೆ ಮೂವರು ಜಮಾಯಿಸಿ ಕಾರು ಚಾಲಕನ ಮುಂದೆ ದರ್ಪ ತೋರಿದ್ದಾರೆ. ಅಷ್ಟೇ ಅಲ್ಲದೇ…

Read More