ಧಾರವಾಡ: ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಅವರು ದೀಪಕ್ ಚಿಂಚೋರೆ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ವತಿಯಿಂದ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಿಸುವಂತೆ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವ ಸಂತೋಷ ಲಾಡ್ ಧನಾತ್ಮಕವಾಗಿ ಸ್ಪಂದಿಸಿ ತಕ್ಷಣವೇ ಸಭೆಯನ್ನು ಕರೆದು ಸಂಪೂರ್ಣವಾಗಿ ಮಾಹಿತಿಯನ್ನು ಪಡೆದು ಸರ್ಕಾರ ಮಟ್ಟದಲ್ಲಿ ಆದಷ್ಟು ಬೇಗ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಈ ವೇಳೆ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳಿಗೆ ತಿಳಿಸಿದರು. ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವ ದೀಪಕ್ ಚಿಂಚೋರೆಯವರು ಮಾತನಾಡಿ ಪ್ರತ್ಯೇಕ ಪಾಲಿಕೆ ಮಾಡಿಸುವುದು ತುಂಬಾ ಮುಖ್ಯವಾಗಿದ್ದು, ಆದಷ್ಟು ಬೇಗ ಎಲ್ಲ ಹಿರಿಯ ಸಚಿವರನ್ನು ಭೇಟಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು. ನಿಯೋಗದಲ್ಲಿ ವೆಂಕಟೇಶ್ ಮಚಕನೂರ್, ರವಿಕುಮಾರ್ ಮಾಳಿಗೇರ, ಶಂಕರ್ ನೀರಾವರಿ, ವಸಂತ ಅರ್ಕಾಚಾರ, ನಾಗೇಶ ಕಟಕೊಳ, ಸತೀಶ್ ನಾಯ್ಕರ್, ಭಿಮಶೆನ್ ಕಾಗಿ,…
Author: Prajatv Kannada
ಬೆಂಗಳೂರು: ದಲಿತ ಮತ್ತು ಹಿಂದುಳಿದ ಜಾತಿ ಸಮುದಾಯಗಳ ಸ್ವಾಮೀಜಿಗಳ ನಿಯೋಗ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿಎಂ ಸಿದ್ದರಾಮಯ್ಯನವರರನ್ನು ಭೇಟಿ ಮಾಡಿದ್ದರು. ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಭೇಟಿಯಾಗಿ ಸನ್ಮಾನಿಸಿ ಅಭಿನಂದಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿ ಸಿದ್ದರಾಮಯ್ಯನವರು ಮುಖ್ಉಮಂತ್ರಿಯಾದ ಹಿನ್ನೆಲೆಯಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಬೆಂಗಳೂರು: ಆರಂಭದಲ್ಲಿಯೇ ಅಧಿಕಾರದ ಮದದಿಂದ ಜನ ಕೊಟ್ಟ ಅಧಿಕಾರ ವಿರೋಧಿಗಳ ದಮನಕ್ಕಾಗಿ ಇದೆ ಎಂದು ತಾವು ಭಾವಿಸಿದ್ದರೆ ಖಂಡಿತವಾಗಿಯೂ ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಟ್ವೀಟ್ ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಅವರು, ಕೇಂದ್ರದಲ್ಲಿ ಇಷ್ಟು ದಿನ ಅಪರಾಧಗಳನ್ನು ಮಾಡಿ ರಾಜಕೀಯ ರಕ್ಷಣೆಯನ್ನು ಯುಪಿಎ ಕಾಲದಲ್ಲಿ ಪಡೆಯುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಪರಾಧ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಂಡಿದೆ. ಇವೆಲ್ಲವೂ ಕೂಡ ನ್ಯಾಯಾಂಗದ ಪರಿಶೀಲನೆಯಲ್ಲಿ ನಡೆಯುತ್ತಿದೆ. Jaggesh Tweet: ಸಚಿವರ ಜೈಲಿಗೆ ಹಾಕುತ್ತೇವೆ ಹೇಳಿಕೆಗೆ ನಟ ಜಗ್ಗೇಶ್ ಕಿಡಿ: ಮಾನ್ಯರೇ ಕಾನೂನು ನಿಮ್ಮ ಜೇಬಲ್ಲಿ ಇದೆಯೇ? ಇಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಹದಿನೈದುಬ ದಿನ ಕಳೆದಿಲ್ಲ ಬರಿ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಎಂದು ಮಂತ್ರಿಗಳ ಬಾಯಲ್ಲಿ ಬರುತ್ತಿರುವುದು. ವಿರೋಧಿಗಳನ್ನು ನಿಮ್ಮ ಅಧಿಕಾರ ಬಲದಿಂದ ದಮನ ಮಾಡುವ ತಂತ್ರ 1975 ರ ಎಮರ್ಜನ್ಸಿಯನ್ನು ನೆನಪಿಸುತ್ತದೆ ಎಂದು…
ಬೆಂಗಳೂರು: ಚಕ್ರವರ್ತಿ ಸೂಲಿಬೆಲೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಎಂಬಿ ಪಾಟೀಲ್ ಹೇಳಿಕೆಗೆ ನಟ ಜಗ್ಗೇಶ್ ತಿರುಗೇಟು ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಅವರು, ಸೂಲಿಬೆಲಿ ಅವರು ಯಾವ ಅಧಿಕಾರದ ಹಿಂದೆ ಹೋಗದೇ ಸಾಂಸ್ಕೃತಿಕ, ತತ್ವ, ವಿಚಾರ, ಕೆರೆ-ಕಟ್ಟೆ ಪುನರುಜ್ಜೀವನ, ಪ್ರವಚನ ಮಾಡುವ ಸಾತ್ವಿಕ ಚಿಂತಕ ಅವರನ್ನು ಜೈಲಿಗೆ ಹಾಕುವೆ ಎಂದಿದ್ದಾರೆ. ಗೆದ್ದು ತಿಂಗಳಿಗೇ ಈ ಮಾತು!. ಮಾನ್ಯರೇ ಕಾನೂನು ನಿಮ್ಮ ಜೇಬಲ್ಲಿ ಇದೆಯೇ? ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಿದೆ ಅವರ ಬೆನ್ನಿಗೆ ಎಂದು ಸೂಲಿಬೆಲಿ ಪರ ಬ್ಯಾಟ್ ಬೀಸಿದ್ದಾರೆ. ಇನ್ನೂ ಜಗ್ಗೇಶ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಜಾಗ ಮಾಡಿಕೊಟ್ಟಿದೆ. ಕೆಲವರು ಜಗ್ಗೇಶ್ ಪರವಾಗಿ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ರದ್ದು ಮಾಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ಗೆ ಜಾಮೀನು ಸಿಕ್ಕಿದೆ. ರೂಪಾ ಮೌದ್ಗಿಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ರೋಹಿಣಿ ಸಿಂಧೂರಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ತನ್ನ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸಬೇಕು ಎಂದು ರೂಪಾ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 24 ನೇ ಎಸಿಎಂಎಂ ಕೋರ್ಟ್ ಹಾಲ್‌ಗೆ ಇಂದು ಐಪಿಎಸ್ ಅಧಿಕಾರಿ ರೂಪಾ ಹಾಜರಾದರು.…
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟಿ ಸುಲೋಚನಾ ಲಾತ್ಕರ್ ಚಿಕಿತ್ಸೆ ಪಲಕಾರಿಯಾಗದೆ ನಿಧನರಾಗಿದ್ದಾರೆ. ಇಂದು ಸಂಜೆ 5.30ಕ್ಕೆ ದಾದರ್ ಸ್ಮಶಾನದಲ್ಲಿ ಸುಲೋಚನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮುಂಬೈನ ಶುಶ್ರೂಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಲೋಚನ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 250ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಸುಲೋಚನಾ, ಮರಾಠಿ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 1940ರಲ್ಲಿ ಮರಾಠಿ ಸಿನಿಮಾಗಳ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಅವರು ನಂತರದ ದಿನಗಳಲ್ಲಿ ಹಿಂದಿ ಚಿತ್ರಗಳಲ್ಲೂ ನಟಿಸಿದರು. 50ಕ್ಕೂ ಹೆಚ್ಚು ಮರಾಠಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಘಳಿಸಿದ್ದರು. ಸಿನಿಮಾ ರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 1999ರಲ್ಲಿ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮಹಾರಾಷ್ಟ್ರ ಸರಕಾರವು ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೀವಮಾನ ಸಾಧನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಸುಲೋಚನ ಪಡೆದುಕೊಂಡಿದ್ದರು.
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ರಜನಿ ಕೆಲಹೊತ್ತು ಸಮಯ ಕಳೆದು ಬಳಿಕ ಚೆನ್ನೈಗೆ ವಾಪಸ್ ಆಗಿದ್ದಾರೆ. ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಶ್ ಅವಿವಾ ಬಿಡಪ್ಪ ಇಂದು ಗೌಡರ ಸಂಪ್ರದಾಯದಂತೆ ಹಸೆಮಣೆ ಏರಿದ್ದಾರೆ. ಗುರು ಹಿರಿಯರ ನಿಶ್ಚಯದಂತೆ ಬೆಳಗ್ಗೆ 9.30 ರಿಂದ 10.30ರ ಒಳಗೆ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದ್ದು, ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಅನೇಕ ಗಣ್ಯರು ಹಾಜರಿದ್ದರು. ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ. ಬಳಿಕ ಮಂಡ್ಯದಲ್ಲಿ ಅದ್ದೂರಿಯಾಗಿ ಬೀಗರ ಔತಣ ಕೂಡ ಏರ್ಪಡಿಸಲಾಗಿದೆ.
ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹಕಾರ್ಯ ನೆರವೇರಿದ್ದು, ನವ ದಂಪತಿಗೆ ಸಾಕಷ್ಟು ಮಂದಿ ಶುಭಾಶಯ ಕೋರುತ್ತಿದ್ದಾರೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅಭಿಷೇಕ್ ಹಾಗೂ ಅವಿವಾ ಗೃಹಸ್ತ್ರಾಶ್ರಮಕ್ಕೆ ಕಾಲಿಟ್ಟಿದ್ದಾರೆ. ಮುಂಜಾನೆಯೇ ಹೊಸ ಬಿಎಂಡಬ್ಲು ಕಾರಿನಲ್ಲಿ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದ್ದು, ಒಕ್ಕಲಿಗರ ಸಮುದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿವೆ. ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಮದುವೆಗೆ ಸೆಲೆಬ್ರಿಟಿಗಳ ದಂಡೇ ಹಾಜರಿತ್ತು. ಖ್ಯಾತ ನಟಿ ಸುಹಾಸಿನಿ, ಟಾಲಿವುಡ್ ನಟ ಮೋಹನ್ ಬಾಬು, ಮನೋಜ್ ಮಂಚು ಮೊದಲಾದವರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ. ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ. ಬಳಿಕ ಮಂಡ್ಯದಲ್ಲಿ ಅದ್ದೂರಿಯಾಗಿ ಬೀಗರ ಔತಣ ಕೂಡ ಏರ್ಪಡಿಸಲಾಗಿದೆ.
ಬೆಳಗಾವಿ: ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಹಿಂದೆ ಮುಂದೆ ವಿಚಾರ ಮಾಡದೇ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದರು. ಅಧಿಕಾರ ಹಿಡಿತದ ನಂತರ ಕರ್ನಾಟಕದ ಜನರಿಗೆ ಕಾಂಗ್ರೆಸ್ ಮೋಸ ಮಾಡಿದೆ ಎಂದು ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ ಜಂಟಿ ಕಾರ್ಯದರ್ಶಿ ರಾಜೀವ್ ಟೋಪಣ್ಣವರ್ ಹೇಳಿದರು. ಆಮ್ ಆದ್ಮಿ ಪಕ್ಷ ಸರ್ಕಾರ ದೆಹಲಿಯಲ್ಲಿ ಸತತ 10 ವರ್ಷಗಳಿಂದ 200 ಯೂನಿಟ್ ಫ್ರೀ ಕೊಡುತ್ತಿದೆ. ಪಂಜಾಬ್‌ನಲ್ಲಿ 300 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. 200 ಯೂನಿಟ್‌ಗಿಂತ ಒಂದೇ ಯೂನಿಟ್ ಜಾಸ್ತಿ ಆದರೂ ಪೂರ್ತಿ ಬಿಲ್ ಕಟ್ಟಬೇಕಾದ ವ್ಯವಸ್ಥೆ ಇದೆ. ದೆಹಲಿಯಲ್ಲಿ ಪವರ್ ಪ್ಲಾಂಟ್ಸ್ ಇಲ್ಲ, ಹೊರಗಿಂದ ವಿದ್ಯುತ್ ಖರೀದಿಸಿ ಪೂರೈಕೆ ಮಾಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತದೆ, ದೇಶದಲ್ಲೇ ಎರಡನೇ ಸ್ಥಾನ ಇದೆ. ದೆಹಲಿ ಮಾದರಿಯಲ್ಲಿ ಉಚಿತ ವಿದ್ಯುತ್ ನೀಡಿದರೆ ಯೋಜನೆ ಸಫಲವಾಗುತ್ತದೆ. ಈ ಯೋಜನೆ ಜಾರಿ ಮಾಡುವಲ್ಲಿ ಕಾಂಗ್ರೆಸ್ ಫೇಲ್ಯೂರ್ ಆಗುತ್ತಿದೆ. ಸರಾಸರಿ ನೋಡುತ್ತೇವೆ ಅಂತೆಲ್ಲಾ ಮಾತನಾಡುವುದನ್ನ ಬಂದ್ ಮಾಡಬೇಕು ಎಂದರು.
ಮಂಡ್ಯ : ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಕರ್ತವ್ಯವಲ್ಲ. ಪ್ರಕೃತಿಯ ಪ್ರಯೋಜನವನ್ನು ಪಡೆಯುತ್ತಿರುವ ಪ್ರತಿಯೊಬ್ಬರ ಮೇಲೂ ಪರಿಸರ ಉಳಿಸುವ ಜವಾಬ್ದಾರಿ ಇದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು. ಮದ್ದೂರು ಪಟ್ಟಣದ ಹೆಚ್.ಕೆ.ವೀರಣ್ಣಗೌಡ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ವೇದಿಕೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಮ್ಮ ಪೂರ್ವಿಕರು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು. ಅವರಿಗೆ ಮರ ಗಿಡಗಳ ಮಹತ್ವ ಗೊತ್ತಿತ್ತು. ಹೀಗಾಗಿ ಹಿಂದೆಲ್ಲ ಒಂದು ಮರ ಕಡಿದರೆ, ಮತ್ತೊಂದು ಗಿಡ ನೆಡುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಯುವ ಜನತೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹೆಚ್ಚು ಹೆಚ್ಚು ಕಾಡು ಬೆಳೆಸಬೇಕು. ಆಗ ಮಾತ್ರ ಪ್ರಕೃತಿ ವಿಕೋಪಗಳ ಸಂಖ್ಯೆ ಕಡಿಮೆ ಮಾಡಬಹುದು. ಇದು ಕೇವಲ ಅಧಿಕಾರಿಗಳ ಕೆಲಸ ಮಾತ್ರವಲ್ಲ, ಜನರ ಜವಾಬ್ದಾರಿಯು ಇದೆ ಎಂದು ಅಭಿಪ್ರಾಯಪಟ್ಟರು. ವಿಧ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅನಿರ್ವಾಯತೆ ಬಗ್ಗೆ ಅರಿವನ್ನು ಮೂಡಿಸಿಕೊಂಡು…