Author: Prajatv Kannada

ಮಂಡ್ಯ :  ಕ್ಷೇತ್ರದ ಎಲ್ಲ ಧರ್ಮ, ಜಾತಿ – ಜನಾಂಗದವರು ತಮ್ಮನ್ನು ಚುನಾವಣೆಯಲ್ಲಿ ಪಕ್ಷಾತೀತವಾಗಿ ಬೆಂಬಲಿಸಿದ್ದು, ಈ ಗೆಲುವು ಕ್ಷೇತ್ರದ ಜನರ ಗೆಲುವಾಗಿದೆ. ನಿಮ್ಮ ಋಣವನ್ನು ನನ್ನ ಕೊನೆ ಉಸಿರಿರುವವರೆಗೆ ಮರೆಯಲ್ಲ ಎಂದು ಶಾಸಕ ಕೆ.ಎಂ.ಉದಯ್ ಭಾವುಕರಾದರು‌. ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಬಳಿ ಭಾನುವಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ಸಿ.ಟಿ.ಶಂಕರ್ ನೇತೃತ್ವದಲ್ಲಿ ಶಾಸಕ ಕೆ.ಎಂ.ಉದಯ್ ಅವರ ಹುಟ್ಟು ಹಬ್ಬ ಆಚರಣೆ ಹಾಗೂ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆಯ ಅಂಗವಾಗಿ ಬೆಳ್ಳಿ ಕಿರೀಟ ತೊಡಿಸಿ ಅದ್ದೂರಿ ಸನ್ಮಾನಿಸಲಾಯಿತು. ಬಳಿಕ ಬೃಹತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕೋವಿಡ್ ನಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ನನ್ನ ಕೈಲಾದ ಮಟ್ಟಿಗೆ ಸಮಾಜಸೇವೆ ಮಾಡಬೇಕೆಂದು ಹೆಜ್ಜೆ ಇಟ್ಟಾಗ ನೀವೆಲ್ಲ ನನ್ನ ಸಮಾಜಮುಖಿ ಸೇವೆಗೆ ಬೆನ್ನೆಲುಬಾಗಿ ನಿಂತು ಬೆಂಬಲ ನೀಡಿದ್ದೀರಿ. ಬಳಿಕ ಸಮಾಜಸೇವೆ ಜೊತೆಗೆ ರಾಜಕೀಯದಲ್ಲೂ ಸ್ಥಾನ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂಬ ದೃಷ್ಟಿಯಿಂದ ಚುನಾವಣೆಯಲ್ಲಿ…

Read More

ಹಾಸನ: ರಾಜ್ಯದಲ್ಲಿ ಉಚಿತ ಕರೆಂಟ್ ಘೋಷಣೆ ಮಾಡಿ ದರ ಏರಿಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಚಿವ ಭೈರತಿ ಸುರೇಶ್, ವಿದ್ಯುತ್ ದರ ಏರಿಕೆ ವಿಚಾರ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ನಾವು ಬಂದು ಕೇವಲ ಹದಿನೈದು ದಿನ ಆಗಿದೆ ದರ ಏರಿಕೆಗೆ ನಾವು ಯಾವುದೇ ಪ್ರಸ್ತಾಪ ಮಾಡಿಲ್ಲ. ಇದು ಹಳೆ ಸರ್ಕಾರ ಮಾಡಿರುವುದು, ಅದನ್ನ ಪರಿಶೀಲನೆ ಮಾಡಬಹುದು ಅನ್ನಿಸುತ್ತದೆ. ಉಚಿತ ಕೊಡುಗೆಯಿಂದ ಅಭಿವೃದ್ಧಿಗೆ ಹಿನ್ನಡೆ ಆಗುವುದಿಲ್ಲ.. ದೇಶದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದರೆ ಅದು ಕಾಂಗ್ರೇಸ್ ಸರ್ಕಾರ ಮಾತ್ರ ಎಂದರು. ಉಚಿತ ಕೊಡುಗೆಯಿಂದ ರಾಜ್ಯ ದಿವಾಳಿ ಆಗಲಿದೆ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಆರೋಪ ಮಾಡುವವರು ಹಿಂದೆ ಯಾಕೆ ಕೊಟ್ಟ ಮಾತಿನಂತೆ ಯೋಜನೆ ಜಾರಿ ಮಾಡಿ ಅಂತಾ ಪ್ರಶ್ನಿಸಿದರು.

Read More

ಉಡುಪಿ: ಮುದಿ ಹಸುಗಳನ್ನ ಕೊಲ್ಲಬಾರದೇಕೆ? ಪಶುಸಂಗೋಪನ ಸಚಿವರ ಹೇಳಿಕೆ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಪಶುಸಂಗೋಪನಾ ಸಚಿವರು ಗೋವುಗಳನ್ನ ಕಡಿದರೆ ಏನಾಗುತ್ತೆ ಅಂತ ಅಬ್ಬರದ ಮಾತನ್ನಾಡಿದ್ದಾರೆ. ಬಿಜೆಪಿ ಸರ್ಕಾರ ಎರಡೂ ಮನೆಗಳಲ್ಲಿ ಗೋ ಹತ್ಯೆ ನಿಷೇದ ಕಾನೂನು ಜಾರಿ ಮಾಡಿದೆ. ರೈತರು, ಸಾಧುಸಂತರು, ಮಹಾತ್ಮಗಾಂಧೀಜಿ ಅಭಿಪ್ರಾಯ ಗಮನದಲ್ಲಿಟ್ಟು ಈ ಕಾನೂನು ಜಾರಿ ಮಾಡಲಾಗಿದೆ. ಹಿಂದೂ ಧರ್ಮಕ್ಕೆ ಗೋವು ಪೂಜನೀಯ ಹಿನ್ನಲೆಯಲ್ಲಿ ಗೋ ಹತ್ಯೆ ನಿಷೇದ ಜಾರಿ ಮಾಡಲಾಗಿದೆ. ಪಶುಸಂಗೋಪನಾ ಮಂತ್ರಿಗಳಾಗಿ ಯಾವುದೇ ಸರ್ಕಾರ ಇದ್ರೂ ಗೋ ಶಾಲೆ ತೆರೆದು ಗೋ ರಕ್ಷಣೆ ಮಾಡುವ ಕ್ರಮ ಇದೆ. ಗೋವಿನ ರಕ್ಷಣೆ, ಹಾಲಿನ ಗುಣಮಟ್ಟ ಉತ್ತೇಜನ, ಕ್ಷೀರಾಭಿವೃದ್ದಿ , ಗೋತಳಿಗಳ ಬಗ್ಗೆ ಯೋಚನೆ ಮಾಡಬೇಕು. ಇವೆಲ್ಲವನ್ನ ಬಿಟ್ಟು ಗೋವು ಕಡಿಯುತ್ತೇವೆ ಎಂಬ ಧ್ರಾಷ್ಟ್ಯದ ಮಾತು ಆಡಿರುವುದು ಆಶ್ಚರ್ಯ. ಸಿದ್ದರಾಮಯ್ಯನವರೇ ನಿಮ್ಮ ಮಂತ್ರಿಗಳಿಗೆ ಗೋ ಸಂರಕ್ಷಣೆ ಕಾಯಿದೆ ಹಾಗೂ ಜನಸಾಮಾನ್ಯರ ಭಾವನೆ ಅರ್ಥಮಾಡಿಸಿ. ಗೋ ಹತ್ಯೆ ನಿಷೇದ ತಿದ್ದಯಪಡಿ ಮಾಡಿ ಗೋವುಗಳ ಮಾರಣ…

Read More

ವಿಜಯಪುರ : ಚಕ್ರವರ್ತಿ ಸೂಲಿಬೆಲೆ ಆಟ ಇನ್ನು ನಡೆಯಲ್ಲ. ಇನ್ಮುಂದೆ ಇಂಥ ನಾಟಕ ಮಾಡಿದರೆ ಜೈಲು ಗ್ಯಾರಂಟಿ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷ ಸೂಲಿಬೆಲೆ ಏನ್‌ ಮಾಡಿದ್ದಾರೆ ಕೇಳಿ, ನಾಲ್ಕು ವರ್ಷ ಅನಾಹುತ ಮಾಡಿದ್ದು, ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ದೂರಿದರು. ಇವರಿಗೇನು ಜನರು ಕೇಸರಿ ಗುತ್ತಿಗೆ ನೀಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಹಿಜಾಬ್‌, ಹಲಾಲ್‌, ಉರಿಗೌಡ, ನಂಜೇಗೌಡ ಅಂತೆಲ್ಲ ಸಮಾಜದಲ್ಲಿ ಸಂಘರ್ಷಮಯ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ ಬಿಜೆಪಿ, ರಾಜ್ಯದ ಅಭಿವೃದ್ಧಿ ಕಡೆಗಣಿಸಿತು. ರೋಸಿಹೋದ ಮತದಾರರು ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡಿದೆ. ಮಾಧ್ಯಮಗಳೂ ಸೇರಿದಂತೆ ಎಲ್ಲರ ನಿರೀಕ್ಷೆ ಹುಸಿಗೊಳಿಸಿ ಕಾಂಗ್ರೆಸ್‌ ಪಕ್ಷಕ್ಕೆ ಅದ್ಭುತ ಬಹುಮತದ ಸರ್ಕಾರ ರಚನೆಗೆ ಮತದಾರ ಪ್ರಭುಗಳು ಆಶೀರ್ವಾದ ಮಾಡಿದ್ದಾರೆ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ರಕ್ಷಣೆ ವಿಷಯದಲ್ಲಿ ವಿಶೇಷ ಕಾಳಜಿ ತೋರಲಿದೆ ಎಂದು ಹೇಳಿದರು. ಗೋಹತ್ಯೆ ನಿಷೇಧ ಕಾನೂನು, ಮುಸ್ಲಿಮರಿಂದ ಕಿತ್ತುಕೊಂಡ ಶೇ 4ರಷ್ಟು ಮೀಸಲಾತಿ, ಮತಾಂತರ ನಿಷೇಧ…

Read More

ಬೆಂಗಳೂರು: ಅನಾಥಶ್ರಮದಲ್ಲಿ ಬೆಳೆದವಳ ಮೆಚ್ಚಿ ಮದುವೆಯಾಗಿದ್ದ.ಸುಖವಾಗಿ ಸಂಸಾರ ನಡೆಸಲು ಶುರುಮಾಡಿದ್ದ ಇಬ್ಬರು ಬಡತನದ ನಡುವೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರೊದ್ರಲ್ಲಿ ಖುಷಿಕಂಡ ಬದುಕು ಕಟ್ಟಿಕೊಂಡಿದ್ರು.. ಮದುವೆಯಾಗಿ 12 ವರ್ಷ ಇಬ್ಬರು ಮಕ್ಕಳ ದ ಮೇಲೆ ಪತಿಗೆ ಪತ್ನಿ ನಡತೇ ಮೇಲೆ ಅನುಮಾನ ಮೂಡಿದ ಅನೈತಿಕ ಸಂಬಂಧದ ಭೂತ ಹೊಕ್ಕಿತ್ತು.ಆ ಸಂಶಯಕ್ಕೆ ಪುಷ್ಟಿ ಕೊಡುವಂತೆ ಆಕೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ಲು.ಕೋಪದ ಕೈಗೆ ಬುದ್ದಿ ಕೊಟ್ಟ ಗಂಡ ಮಾಡಿದ್ದಾದ್ರೂ ಏನು ಅನ್ನೋದನ್ನ ತೋರಿಸ್ತಿವಿ ನೋಡಿ.. ಈಕೆ ನಾಗರತ್ನ ಹಾಗೂ ಈತ ಅಯ್ಯಪ್ಪ.. ಮೂಲತಃ ಮೈಸೂರು ಮೂಲದ ಈ ಜೊಡಿ ಹಲವು ವರ್ಷಗಳಿಂದ ಬೆಂಗಳೂರಿನ ಬಸವೇಶ್ವರನಗರದ ಮಂಜುನಾಥ ನಗರದ ಮನೆಯೊಂದಕ್ಕೆ ಬಾಡಿಗೆಗೆ ಬಂದ ದಂಪತಿ ನಡುವೆ ಜಗಳ ನಡೆಯುತಿತ್ತು.. ಏರಿಯಾದ ಜನ ಇವರದ್ದು ಮಾಮೂಲಿ ಅನ್ನೊ ಮಟ್ಟಿಗೆ ಕಿತ್ತಾಡುತಿದ್ರು.. ಆದ್ರೆ ಮೊನ್ನೆ ನಡೆದ ಆ ಜಗಳ ಇಡಿ ಏರಿಯಾವನ್ನೇ ಈಗ ಬೆಚ್ಚಿ ಬೀಳಿಸಿದೆ.. ಕಾರಣ ಪತಿಯ ಕೋಪಕ್ಕೆ ಸಿಕ್ಕಿಬಿದ್ದ ನಾಗರತ್ನ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಹೌದು, ಹೀಗೆ 12…

Read More

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆಯಬೇಕಾದ ಸರ್ವ ಪಕ್ಷಗಳ ಸಭೆಗೆ ಬಿಜೆಪಿ ಶಾಸಕರು ಬಹಿಷ್ಕಾರ ಹಾಕಿದ್ದಾರೆ. ಆದರೆ 11 ಗಂಟೆಗೆ ಶುರುವಾಗಬೇಕಾದ ಸಭೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಒಂದು ಗಂಟೆ ತಡವಾಗಿ ಆಗಮಿಸಿದರು‌. ಇದರಿಂದ ಅಸಮಾಧಾನಗೊಂಡ ಮಾಜಿ ಸಚಿವರು ಹಾಗೂ ಶಾಸಕರು ಡಿಸಿಎಂ ನಡವಳಿಕೆ ಸಿಟ್ಟಾಗಿ ಸಭೆ ಆರಂಭಕ್ಕೂ ಮೊದಲೇ ಹೊರನಡೆದರು. ಸಭೆ ವಿಳಂಬ ಕಾರಣಕ್ಕಾಗಿ ಸಭೆ ಆರಂಭಕ್ಕೂ ಮೊದಲು ಹೊರ ನಡೆದ ಬಿಜೆಪಿ ಶಾಸಕರ ಮನವೊಲಿಕೆ ಮಾಡಲು ಸಚಿವ ಜಮೀರ್ ಅಹ್ಮದ್ ಖಾನ್ ಯತ್ನಿಸಿದರು‌. ವಿಧಾನಸೌಧ ಕಾರಿಡಾರ್‌ನಲ್ಲಿ ಏ ಸೋಮಣ್ಣ, ಏ ಮುನಿ ಬಾ, ಬಾ ಎಂದು ಕರೆದುಕೊಂಡು ಅವರ ಹಿಂದೆಯೇ ಹೋಗಿ ನಿಂತುಕೊಳ್ಳುವಂತೆ ಕರೆದರು. ಆದರೆ ಶಾಸಕರು ಹೊರ ನಡೆದರು. ಸಭೆಯಿಂದ ಹೊರ ನಡೆಯುತ್ತಿದ್ದ ಸಂದರ್ಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಭೆಗೆ ಆಗಮಿಸಿದರು. ಬೆಂಗಳೂರು ಸಮಗ್ರ ಅಭಿವೃದ್ಧಿ ಸಂಬಂಧ ಸಮಾಲೋಚನೆ ನಡೆಸಲು ಡಿಸಿಎಂ ಡಿ ಕೆ ಶಿವಕುಮಾರ್…

Read More

ಬೆಂಗಳೂರು: ಕಾಂಗ್ರೆಸ್ ನವರು ಮೊದಲು ಏನು ಹೇಳುತ್ತಾರೋ ನಂತರ ಅದರ ವಿರುದ್ಧವಾಗಿ ಮಾಡ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ರವರು, ಕಳ್ಳರಿಗೆ ಕಳ್ಳ, ಅಲ್ಲೇ ಕದಿಯೋದು ಇನ್ನೊಬ್ರಿಗೆ ಕೊಡೋದು ಕಾಂಗ್ರೆಸ್ ಕೆಲಸ. ಎಲ್ಲೆಲ್ಲಿ ಬೆಲೆ ಏರಿಕೆ ಮಾಡಬಹುದೋ ಅಲ್ಲಲ್ಲಿ ಏರಿಕೆ ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಮೋಸಗಾರ ಪಕ್ಷ. ಉಚಿತ ವಿದ್ಯುತ್ ಎಂದು ಈಗ ಸರಾಸರಿ ಬಳಕೆಯಷ್ಟೇ ಫ್ರೀ ಅಂತಿದ್ದಾರೆ. ದೇಶದ ಮಟ್ಟದಲ್ಲಿ ರಾಜ್ಯ ಯಾವ ಮಟ್ಟಕ್ಕೆ ಹೋಗುತ್ತೆ ನೋಡಿ ಎಂದು ಗುಡುಗಿದರು.

Read More

ಬೆಂಗಳೂರು: ಬಿಜೆಪಿ ಹಾಗೂ ಸಂಸದ ಪ್ರತಾಪ್ ಸಿಂಹ ಅವರದ್ದು ಒಡೆದು ಆಳುವ ಸಂಸ್ಕೃತಿ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿರುವ ಡಿ.ಕೆ.ಸುರೇಶ್, ಪ್ರತಾಪ್ ಸಿಂಹ ಒಡೆದು ಆಳುವ ಸಂಸ್ಕೃತಿ ಇಟ್ಟುಕೊಂಡು ಮನೆಹಾಳು ಮಾಡುತ್ತಿದ್ದಾರೆ. ಬಿಜೆಪಿ ನಾಯಕರದ್ದು ಒಡೆದು ಆಳುವ ಸಂಸ್ಕೃತಿ ಎಂದು ಕಿಡಿಕಾರಿದ್ದಾರೆ. ಪ್ರತಾಪ್ ಸಿಂಹ ಮುಸ್ಲಿಂ ರನ್ನು ವಿರೋಧಿಸುತ್ತಿ ದ್ದರು. ಈಗ ಯಾಕೆ ಮುಸ್ಲಿಂ ರ ಮೇಲೆ ಅವರಿಗೆ ಪ್ರೀತಿ? ಅವರ ತತ್ವ ಸಿದ್ಧಾಂತದಿಂದ ಅವರು ಆಚೆ ಬರುವುದು ಬೇಡ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ. ನಾವು ಏನು ಗ್ಯಾರಂಟಿ ಕೊಟ್ಟಿದ್ದೇವೆ ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.

Read More

ಬೆಂಗಳೂರು: ಪ್ರಭಾವಿ ಅಪಾರ್ಟ್ ಮೆಂಟ್ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ, ಅನುಷ್ಠಾನಕ್ಕೆ ತಂದ ಎಲ್ಲ ಅಧಿಕಾರಿಗಳು, ಇಂಜಿನಿಯರ್ ಗಳನ್ನು ಇವತ್ತು ಸಂಜೆ ಒಳಗೆ ಸೇವೆಯಿಂದ ಅಮಾನತು ಮಾಡುವಂತೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಅವರಿಗೆ ಸೂಚನೆ ನೀಡಿದರು. ಈ ಕೆರೆ ಮಧ್ಯೆ ರಸ್ತೆ ನಿರ್ಮಾಣ ಮಾಡುವ ಐಡಿಯಾ ಕೊಟ್ಟವರು ಯಾರು? ಯೋಜನೆ ರೂಪಿಸಿದವರು ಯಾರು? ಅನುಷ್ಠಾನಕ್ಕೆ ತಂದವರು ಯಾರು? ಯಾಕಾಗಿ ಇದನ್ನು ಮಾಡಿದಿರಿ? ಯಾರಿಗೆ ಅನುಕೂಲ ಮಾಡಿಕೊಡಲು ಮಾಡಿದಿರಿ? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದೀರಿ ಎಂದು ಶಿವಕುಮಾರ್ ಅವರು ಸಭೆಯಲ್ಲಿ ಪ್ರಶ್ನಿಸಿದರು. ಅಧಿಕಾರಿಗಳು ಇದಕ್ಕೆ ಉತ್ತರಿಸಲು ತಡಬಡಾಯಿಸಿದರು. ತಕ್ಷಣವೇ ಉಪಮುಖ್ಯಮಂತ್ರಿಗಳು ಹೊಸಕೆರೆಹಳ್ಳಿ ಕೆರೆ ಭಾಗ ಮಾಡಿ ರಸ್ತೆ ನಿರ್ಮಾಣ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.

Read More

ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಹೇಳಿದ್ದ ಗ್ಯಾರಂಟಿ ಒಂದು ಈಗ ಜನರಿಗೆ ಹೇಳುವುದೊಂದು ಆಗಿದೆ. ಅದೇನೆಂದರೆ ವಿದ್ಯುತ್ ದರ ಏರಿಕೆ ಬಗ್ಗೆ ಆಕ್ರೋಶ ಹೊರಹಾಕಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಈ ಹಿಂದೆಯೂ ಕಾಂಗ್ರೆಸ್​ನವರು ಬೆಸ್ಕಾಂ ಮೇಲೆ ದೊಡ್ಡ ಹೊರೆ ಹಾಕಿದ್ದರು. ಒಟ್ಟು ಬಿಲ್​​ನಲ್ಲಿ 50 ಪರ್ಸೆಮಟ್​​​ ಬಿಲ್ ಸರ್ಕಾರದಿಂದ ಬರುತ್ತದೆ. ಹಳೇ ಬಾಕಿ ಅಂತಾ ಪುಕ್ಕಟೆ ಹೊರೆಯನ್ನು ಜನರ ಮೇಲೆ ಹಾಕಿದ್ದರು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು.

Read More