Author: Prajatv Kannada

ಇಸ್ಲಾಮಾಬಾದ್: ರಿಮೋಟ್ ಕಂಟ್ರೋಲ್ ಬಾಂಬ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಕ್ವಾದ ಬಜೌರ್ ಜಿಲ್ಲೆಯಲ್ಲಿ ಸಂಭವಿಸಿದೆ. ಸ್ಫೋಟವು ಪಿಕಪ್ ವ್ಯಾನ್‌ಗೆ ಅಪ್ಪಳಿಸಿದ್ದು ಪರಿಣಾಮವಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಮತ್ತು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗುತ್ತಿಗೆದಾರನಿಗೆ ಗಾಯಗಳಾಗಿವೆ ಎಂದು ಬಜೌರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸತ್ತಾರ್ ಖಾನ್ ತಿಳಿಸಿದ್ದಾರೆ. ಸಂತ್ರಸ್ತರು ಬಜಾರ್‌ನ ಭದ್ರತಾ ಚೆಕ್ ಪೋಸ್ಟ್‌ಗೆ ವಾಹನದಲ್ಲಿ ಮರಳನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ. ಮೃತದೇಹ ಮತ್ತು ಗಾಯಾಳುಗಳನ್ನು ಬಜಾರ್‌ನ ಜಿಲ್ಲಾ ಪ್ರಧಾನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಗೊಂಡಿದ್ದ ಗುತ್ತಿಗೆದಾರ ಸಾವನ್ನಪ್ಪಿದ್ದಾನೆ ಎಂದು ಡಿಎಸ್‌ಪಿ ತಿಳಿಸಿದ್ದಾರೆ. ಕೆಪಿಯ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಚೆಹ್ಕನ್ ಪ್ರದೇಶದಲ್ಲಿ ನಡೆದ ಆತ್ಮಹತ್ಯಾ ಬಾಂಬರ್ ಪ್ರಕರಣದ ಒಂದು ವಾರದ ನಂತರ ಈ ಘಟನೆ ನಡೆದಿದೆ. ಆ ದಾಳಿಯಲ್ಲಿ ಕನಿಷ್ಠ 22 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ಸ್ಫೋಟವು ಆತ್ಮಹತ್ಯಾ ದಾಳಿಯಾಗಿದೆ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ. ಇದರಲ್ಲಿ ಮೋಟಾರು ಸೈಕಲ್‌ನಲ್ಲಿ ಸವಾರಿ ಮಾಡುತ್ತಿದ್ದ ಅಪರಿಚಿತ ಆತ್ಮಹತ್ಯಾ ಬಾಂಬರ್…

Read More

ಕೆರೇಬಿಯನ್​ ರಾಷ್ಟ್ರ ಹೈಟಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಪ್ರವಾಹ ಉಂಟಾಗಿದ್ದು ಹಲವು ಕಡೆ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೂ 15 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ವರದಿ ಮಾಡಿವೆ. ವಾರಾಂತ್ಯದ ಖುಷಿಯಲ್ಲಿದ್ದ ಹೈಟಿ ಮಂದಿಗೆ ಧಾರಾಕಾರ ಮಳೆ ದೊಡ್ಡ ಹೊಡೆತವನ್ನೇ ನೀಡಿದೆ. ಹೈಟಿಯ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ದೇಶದಾದ್ಯಂತ ನೂರಾರು ಮನೆಗಳು ನಾಶವಾಗಿದ್ದು, ಮನೆಗಳಿಗೆ ನೀರು ನುಗ್ಗಿದ್ದರಿಂದ ಸುಮಾರು 13,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸತತವಾಗಿ ಸುರಿದ ಭಾರಿ ಮಳೆಗೆ ಜನವಸತಿ ಪ್ರದೇಶಗಳು ಕೆರೆ ಹಾಗೂ ನದಿಗಳಂತಾಗಿ ಪರಿವರ್ತನೆಯಾಗಿವೆ. ದಿಢೀರ್ ಎಂದು ಉಂಟಾಗಿರುವ ಪ್ರವಾಹಕ್ಕೆ ಸುಮಾರು 7,400 ಕ್ಕೂ ಹೆಚ್ಚು ಕುಟುಂಬಗಳು ದಿವಾಳಿ ಆಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೈಟಿ ಜನರನ್ನು ಹೈರಾಣಾಗಿಸಿರುವ ಮಳೆ, ಬೆಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಪ್ರವಾಹದಿಂದ ಸಂತ್ರಸ್ತರಾದವರ ಅಗತ್ಯಗಳಿಗೆ ಸ್ಪಂದಿಸಲು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೈಟಿ…

Read More

ನವದೆಹಲಿ: ನೈಜ ಕೋಮುವಾದಿ ಗುಂಪುಗಳಿಗೆ ಜಾತ್ಯಾತೀತರು ಅಂತ ಟೈಟಲ್ ಕೊಟ್ಟು ಬಣ್ಣಿಸುತ್ತಿರುವ ರಾಹುಲ್ ಗಾಂಧಿ ನಡೆ ಹಾಸ್ಯಾಸ್ಪದವಾಗಿದ್ದು, ಅವರು ಇದಕ್ಕೆ ತಕ್ಷಣ ಅಂತ್ಯ ಹಾಡಲಿ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ವಿದೇಶಿ ನೆಲದಲ್ಲಿ ಹಿಂದು ಸಂಘಟನೆಗಳನ್ನ ಟೀಕಿಸಿರುವ ರಾಹುಲ್ ಗಾಂಧಿ (Rahul Gandhi) ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಲ್ಹಾದ್ ಜೋಶಿ (Pralhad Josh), ರಾಹುಲ್ ಗಾಂಧಿ ಮೊದಲು ಯಾರು ಕೋಮುವಾದಿ (Communalist), ಯಾರು ಜಾತ್ಯಾತೀತರು (Secular)? ಎಂಬುದನ್ನ ಅರಿತಿಕೊಳ್ಳಲಿ ಎಂದಿದ್ದಾರೆ. ದೇಶದಲ್ಲಿ ಕೋಮುವಾದವನ್ನ ಬಿತ್ತುತ್ತಿರುವ ನೈಜ ಕೋಮುವಾದಿ ಮುಸ್ಲಿಂ ಲೀಗ್ ಪಕ್ಷಗಳನ್ನ ಜಾತ್ಯಾತೀತರು ಎಂದು ನಕಲಿ ಗಾಂಧಿ ಬಣ್ಣಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷದವರು ಜಾತ್ಯಾತೀತರು ಹೇಗೆ ಆಗುತ್ತಾರೆ? ಆ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡವರಿಗೆ ರಾಹುಲ್ ಗಾಂಧಿ ಮಾಡಿದ ಅತ್ಯಂತ ದೊಡ್ಡ ಅವಮಾನವಿದು. ಇವರ ತುಷ್ಟಿಕರಣದ ರಾಜಕೀಯಕ್ಕೆ ಕೊನೆಯೇ ಇಲ್ಲ ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.‌

Read More

ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅವರು ಅಮೆರಿಕದಲ್ಲಿ ದೇಶದ ಪ್ರಜಾಪ್ರಭುತ್ವದ (Indian Democracy)  ಕುರಿತು ನೀಡಿರುವ ನಕಾರಾತ್ಮಕ ಹೇಳಿಕೆಗೆ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ತಮ್ಮ ಹೋರಾಟ ಬಿಜೆಪಿ ವಿರುದ್ಧವೇ ಅಥವಾ ಭಾರತ ವಿರುದ್ಧವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತೀಯ ಪ್ರಜಾಪ್ರಭುತ್ವವು ಜಾಗತಿಕ ಒಳಿತಿಗೆ ಪೂರಕವಾದದ್ದಾಗಿದೆ. ಆದರೆ ಅದರ ಕುಸಿತವು ಪ್ರಪಂಚದ ಮೇಲೆ ಪರಿಣಾಮ ಬೀರಲಿದೆ.  ಇದನ್ನು ನಾವು ಅರ್ಥಮಾಡಿಕೊಂಡು, ಸ್ವೀಕರಿಸಬೇಕಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವುದು ನಮ್ಮ ಕೆಲಸ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಧರ್ಮೇಂದ್ರ ಪ್ರಧಾನ್, ನಿಮ್ಮ (ರಾಹುಲ್ ಗಾಂಧಿ) ಹೋರಾಟ ಬಿಜೆಪಿಯ ವಿರುದ್ಧ ಆಗಿದ್ದರೆ, ದೇಶದೊಳಗೆ ಇರುವ ವೇದಿಕೆಗಳಲ್ಲಿ ಸಾಕಷ್ಟು ಹೋರಾಡಿ. ಆದರೆ ವಿದೇಶಗಳಲ್ಲಿ ದೇಶವನ್ನು ಮತ್ತೆ ಮತ್ತೆ ಅವಮಾನಿಸುವುದನ್ನು ನಿಲ್ಲಿಸಿ. ರಾಹುಲ್ ಗಾಂಧಿ ತಮ್ಮ…

Read More

ಲಖನೌ: ಮದುವೆ ಸಮಾರಂಭದ ಶಾಸ್ತ್ರಗಳೆಲ್ಲ ಮುಗಿದಿದ್ದವು. ಹೊಸ ಜೋಡಿಯನ್ನು ಮನೆಗೆ ತುಂಬಿಸಿಕೊಂಡ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ತಮ್ಮ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ನವದಂಪತಿ ಮೊದಲ ರಾತ್ರಿಯ ರಸಮಯ ಕ್ಷಣಗಳನ್ನು ಊಹಿಸುತ್ತಾ ನಾಚಿದ್ದರು. ಬೆಳಿಗ್ಗೆ ಅವರಿಬ್ಬರೂ ಎದ್ದು ಕೊಠಡಿಯಿಂದ ಹೊರಬಂದಾಗ ಕಿಚಾಯಿಸಿ ಮಜಾ ತೆಗೆದುಕೊಳ್ಳೋಣ ಎಂಬ ಕೀಟಲೆ ಉದ್ದೇಶದಿಂದ ಮನೆಯವರು ಕಾಯುತ್ತಿದ್ದರು. ಆದರೆ ಸಂಭ್ರಮದಲ್ಲಿದ್ದ ಆ ಎರಡೂ ಕುಟುಂಬಗಳಿಗೆ ಬೆಳ್ಳಂಬೆಳಿಗ್ಗೆಯೇ ಆಘಾತ ಎದುರಾಗಿತ್ತು. ಮದುವೆಯ ರಾತ್ರಿ ಶೋಭನಕ್ಕೆಂದು ಕೊಠಡಿ ಒಳ ಸೇರಿದ ಈ ಹೊಸ ಜೋಡಿ ಜೀವಂತವಾಗಿ ಹೊರಗೆ ಬರಲೇ ಇಲ್ಲ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹೊಸದಾಗಿ ಮದುವೆಯಾಗಿದ್ದ ದಂಪತಿ ಮರು ದಿನ ಶವಗಳಾಗಿ ಪತ್ತೆಯಾಗಿದ್ದಾರೆ. ಅವರ ದಿಢೀರ್ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದ್ದವು. ಆದರೆ ಮದುಮಗ ಮತ್ತು ಮದುಮಗಳು ಇಬ್ಬರೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. 22 ವರ್ಷದ ಪ್ರತಾಪ್ ಯಾದವ್ ಹಾಗೂ 20 ವರ್ಷದ ಪುಷ್ಪಾ ಅವರ ಮದುವೆ ಮೇ…

Read More

ಮೈಸೂರು: ಗ್ಯಾರಂಟಿ ಗೊಂದಲ ಡೈವರ್ಟ್​ ಮಾಡಲು ಕಾಂಗ್ರೆಸ್ ಮುಂದಾಗಿದೆ. ಇದೇ ಕಾರಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ ಎಂದು ಮೈಸೂರಿನಲ್ಲಿ ಕೆ.ಆರ್​.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಆರೋಪ ಮಾಡಿದ್ದಾರೆ. ಒಂದು ಕೋಮಿನವರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ತಮಗೆ ಮತ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಪರ ನಿರ್ಣಯ ಮಂಡಿಸಿದೆ. ಈ ಮೂಲಕ ಕಾಂಗ್ರೆಸ್​​ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್​ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಮೈಸೂರಿನಲ್ಲಿ ಕೆ.ಆರ್​.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ತಿಳಿಸಿದರು.

Read More

ಕೊಪ್ಪಳ: ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗ್ಗೆ ತನಿಖೆ ಮಾಡಲೇಬೇಕು ಎಂದು ಕೊಪ್ಪಳದಲ್ಲಿ ಕನ್ನಡ & ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ಬಿಜೆಪಿಯವರು ಈ ರಾಜ್ಯವನ್ನು ಹರಾಜು ಹಾಕಿದ್ದಾರೆ. 40% ಸರ್ಕಾರ ಹೆಸರು ಪಡೆದು ರಾಜ್ಯದ ಮರ್ಯಾದೆ ತೆಗೆದಿದ್ದಾರೆ. ಪಿಎಸ್​ಐ ನೇಮಕಾತಿ ಹಗರಣದಲ್ಲಿ IPS ಅಧಿಕಾರಿ ಬಂಧನ ಆಗಿದೆ. ಪಿಎಸ್​ಐ ನೇಮಕಾತಿ ಹಗರಣದಲ್ಲಿ ಇದ್ದವರನ್ನು ಅರೆಸ್ಟ್​ ಮಾಡಿಲ್ಲ. ತನಿಖೆ ಮಾಡದಿದ್ರೆ ಯುವ ಜನತೆಗೆ ಅನ್ಯಾಯ ಮಾಡಿದಂತೆ ಆಗುತ್ತೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

Read More

ಮಂಗಳೂರು: ಇತ್ತೀಚೆಗಷ್ಟೇ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿರುವ ಯು.ಟಿ. ಖಾದರ್, ತಮ್ಮ ಆಪ್ತ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮಂಗಳೂರು ತಾಲೂಕು ಮುಡಿಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ ಭಾನುವಾರದಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಯು.ಟಿ. ಖಾದರ್ ಶವಕ್ಕೆ ಹೆಗಲು ಕೊಟ್ಟಿದ್ದಾರೆ. ಅಲ್ಲದೆ ಮೃತರ ಸಂಬಂಧಿಗಳಿಗೆ ಸಾಂತ್ವಾನ ಹೇಳಿದ ಯು.ಟಿ. ಖಾದರ್, ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಕೋರಿದ್ದಾರೆ.

Read More

ಶಿವಮೊಗ್ಗ, ಇಲ್ಲಿನ ಆಯನೂರು ಬಳಿಯಲ್ಲಿ ಬಾರ್​ವೊಂದರ ಕ್ಯಾಶಿಯರ್​ನ ಕೊಲೆಯಾಗಿದೆ.ಇಲ್ಲಿನ ನವರತ್ನ ಬಾರ್​ನಲ್ಲಿ ಈ ಘಟನೆ ಸಂಭವಿಸಿದೆ. 27 ವರ್ಷದ ಸಚಿನ್ ಕುಮಾರ್ ಕೊಲೆಯಾದ ಯುವಕ .ಈತ ಸೊರಬ ಮೂಲದ ನಿವಾಸಿಯಾಗಿದ್ದಾನೆ.  ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆಯನೂರು ಕೋಟೆ ತಾಂಡದ ಮೂವರು ಇಲ್ಲಿನ ನವರತ್ನ ಬಾರ್​ನಲ್ಲಿ ಕುಡಿದು ಗಲಾಟೆ ಮಾಡಿದ್ದಾರೆ. ಬಾರ್​ ಮುಚ್ಚುವ ಸಮಯವಾಗಿದ್ದರೂ ಮದ್ಯಪಾನ ಮಾಡುತ್ತಾ ಕುಳಿತಿದ್ದರಿಂದ ಬಾರ್ ಸಿಬ್ಬಂದಿ 112 ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದಿದ್ಧಾರೆ. ಪೊಲೀಸರನ್ನ ಏಕೆ ಕರೆಸಿದ್ದಿಯಾ ಎಂದು ಬಾರ್ ಸಿಬ್ಬಂದಿ ಜೊತೆ ಗಲಾಟೆ ತೆಗೆದಿದ್ಧಾರಷ್ಟೆ ಅಲ್ಲದೆ ಬಾರ್​ ಶಿವಕುಮಾರ್, ಸಚಿನ್​ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆಗೆ ಮುಂದಾಗಿದ್ಧಾರೆ. ಖಾಲಿ ಬಿಯರ್​ ಬಾಟಲಿಯನ್ನ ತನ್ನ ತಲೆಗೆ ಹೊಡೆದುಕೊಂಡು ಸತೀಶ್ ಎಂಬಾತ ಅಲ್ಲಿದ್ದವರಿಗೆ ಅದರಿಂದ ಚುಚ್ಚಲು ಮುಂದಾಗಿದ್ಧಾನೆ. ಈ ವೇಳೆ ಪೊಲೀಸರು ಅದನ್ನು ತಪ್ಪಿಸಿದಿದ್ಧಾರೆ. ಇದೇ ವೇಳೆ ಸತೀಶ್ ತನ್ನ  ಸೊಂಟದಲ್ಲಿದ್ದ ಚಾಕುವನ್ನ ತೆಗೆದು ಸಚಿನ್​ಗೆ ಚುಚ್ಚಿರುವುದಾಗಿ ದೂರು ದಾಖಲಾಗಿದೆ. ಪೊಲೀಸರ ಎದುರಲ್ಲೆ ನಡೆದು…

Read More

ಹಾವೇರಿ: ಮರಳಿನ ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತದಿಂದ ಇಬ್ಬರು ಸಾವು ಮತ್ತೋರ್ವ ಮಹಿಳೆ ಗಂಭೀರ ಗಾಯ ಗೊಂಡಿರುವ ಘಟನೆ ನಿನ್ನೆ ತಡರಾತ್ರಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅಂಕಸಾಪುರ ಗ್ರಾಮದ ಬಳಿ ನಡೆದಿದೆ.ಮಾಲತೇಶ್ ಕುಂದ್ರಳ್ಳಿ(21), ಮಾಲತೇಶ(24) ವರ್ಷ ಮೃತಪಟ್ಟ ದುರ್ದೈವಿಗಳು. ರಾಣೇಬೆನ್ನೂರಿನ ಲಲಿತಾ ಪಾಟೀಲ ಹಾಗೂ ನಾಗರಾಜ್ ಎಂಬುವರಿಗೆ ಗಾಯಗಳಾಗಿವೆ. ರಾಣೇಬೆನ್ನೂರಿನಿಂದ ಅಂಕಸಾಪುರ ಗ್ರಾಮದ ಕಡೆಗೆ ಹೋಗುತ್ತಿದ್ದ ವೇಳೆ ನಡೆದಿರುವ ದುರ್ಘಟನೆ. ಗಂಭೀರವಾಗಿ ಗಾಯಗೊಂಡ ಲಲಿತಾ ಪಾಟೀಲ ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More