ಶಿವಮೊಗ್ಗ: ಪ್ರತಾಪ್ ಸಿಂಹ (Prata Simha) ಅಣ್ಣನವರು ಬಹಳ ಬುದ್ಧಿವಂತರು. ಅವರು ಸರ್ವಜ್ಞ ಇದ್ದಂತೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laksmi Hebbalkar) ತಿರುಗೇಟು ನೀಡಿದರು. 10 ದಿನಗಳ ಹಿಂದೆ ಹೆಣ್ಣುಮಗುವಿಗೆ ಜನ್ಮ ನೀಡಿದ ಸೊಸೆಯನ್ನು ನೋಡಲು ಭದ್ರಾವತಿಗೆ ಬಂದಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತಾಪ್ ಸಿಂಹ ಅವರ ಚಿಂತನೆಗಳಿಗೆ ಸರಿಸಾಟಿ ಆಗುವ ರಾಜಕಾರಣಿಗಳು ಈ ರಾಜ್ಯ, ದೇಶದಲ್ಲಿ ಇಲ್ಲ. ಜನರು ಅವರನ್ನು ಸುಮ್ಮನೆ ಕೂರಿಸುವುದಕ್ಕೆ ನಮಗೆ ಅಧಿಕಾರ ಕೊಟ್ಟಿದ್ದಾರೆ. ಅವರು ಸ್ವಲ್ಪ ದಿನ ಸುಮ್ಮನಿದ್ದರೆ ಒಳ್ಳೆಯದು ಎಂದು ಕುಟುಕಿದರು. ಗೃಹಲಕ್ಷ್ಮಿ ಯೋಜನೆ ಎಲ್ಲರಿಗೂ ತಲುಪುತ್ತದೆ. ಯಾವುದೇ ಕುಟುಂಬಗಳನ್ನು ಹೊಡೆಯುವ ಕೆಲಸ ನಮ್ಮ ಸರ್ಕಾರ ಮಾಡುವುದಿಲ್ಲ. ಈಗಾಗಲೇ ಎಲ್ಲರಿಗೂ ಫಾರಂ ವಿತರಿಸಲಾಗುತ್ತದೆ ಎಂದು ಸಂಸದರ ಟೀಕೆಗೆ ಠಕ್ಕರ್ ಕೊಟ್ಟರು. ರಾಜ್ಯದಲ್ಲಿ 88% ಜನ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೋಲ್ಡರ್ ಇದ್ದಾರೆ. ಅವರ ಅಂಕಿ-ಅಂಶಗಳನ್ನು ತೆಗೆದುಕೊಂಡು ರಾಜ್ಯ ಸರ್ಕಾರ ಅವರಿಗೆ ಗೃಹಲಕ್ಷ್ಮಿ ಯೋಜನೆ ವಿಸ್ತರಿಸಲಾಗುತ್ತದೆ. ಅದಕ್ಕೆ ಕೆಲ ಸಮಯ ಬೇಕಾಗುತ್ತದೆ. ಆ ಕಾರಣದಿಂದ…
Author: Prajatv Kannada
ಮಂಡ್ಯ : ಕಳ್ಳರ ಗುಂಪೊಂದು ಕಲ್ಯಾಣ ಮಂಟಪಕ್ಕೆ ನುಗ್ಗಿ ಅಡುಗೆ ಪರಿಕರ, ಕುರ್ಚಿ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಲೂಟಿ ಮಾಡಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸರಸಮ್ಮ ಚನ್ನಪ್ಪ ಕಲ್ಯಾಣ ಮಂಟಪದಲ್ಲಿ ಮಧ್ಯರಾತ್ರಿ ಜರುಗಿದೆ. ಸೋಮನಹಳ್ಳಿಯ ಎಸ್.ಸಿ.ಮಲ್ಲಯ್ಯ ವಿದ್ಯಾಸಂಸ್ಥೆ ಆವರಣದಲ್ಲಿರುವ ಸರಸಮ್ಮ ಚನ್ನಪ್ಪ ಕಲ್ಯಾಣ ಮಂಟಪದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರ ಗುಂಪು ಸುಮಾರು 4 ಲಕ್ಷ ರೂ ಮೌಲ್ಯದ ಅಡಿಗೆ ಪಾತ್ರಗಳು, ಕುರ್ಚಿ, ಜಮಖಾನ, ವಿದ್ಯುತ್ ಉಪಕರಣ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಕಲ್ಯಾಣ ಮಂಟಪದ ಬೀಗ ಮುರಿದು ಆಕ್ಸಾಬ್ಲೇಡ್ ನಿಂದ ಮುಂಭಾಗಿಲು ಮತ್ತು ಕಿಟಕಿಗಳ ಸರಳುಗಳನ್ನು ಕತ್ತರಿಸಿದ ನಂತರ ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಮದ್ದೂರು ಪೋಲಿಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ವರದಿ : ಗಿರೀಶ್ ರಾಜ್ ಮಂಡ್ಯ
ಗದಗ: ಜಿಲ್ಲೆ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಶಾಲಾ ಮೇಲ್ಛಾವಣಿ ಕಿತ್ತು ಹೋಗಿದೆ. ಭಾರಿ ಗಾಳಿ ಸಹಿತ ಮಳೆಯಿಂದ ಪ್ರಾಥಮಿಕ ಶಾಲೆಯ ಕೊಠಡಿಗಳ ಮೇಲ್ವಿಚಾವಣಿ ಹಾನಿಯಾಗಿದೆ. ಕಟ್ಟಡ ದುರಸ್ತಿ ಮಾಡಿಸಿ ವರ್ಷಗಳು ಕಳೆದಿಲ್ಲ. ಕಳಪೆ ಕಾಮಗಾರಿಯಿಂದ ಮಳೆಗಾಳಿಗೆ ತಗಡುಗಳು ಹಾರಿಹೋಗಿವೆ ಅಂತ ಗ್ರಾಮಸ್ಥರ ಆರೋಪಿಸಿದ್ದಾರೆ. ನಾಲ್ಕು ಕೊಠಡಿಗಳ ಪೈಕಿ ಮೂರು ಕೊಠಡಿಗಳ ಮೇಲ್ಚಾವಣಿ ಹಾನಿಯಾಗಿದೆ.
ಬೆಳಗಾವಿ: ಬೆಳಗಾವಿಗೆ ಇಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಮಧ್ಯಾಹ್ನ 12 ಗಂಟೆಗೆ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳಿಗೂ ಸಭೆಗೆ ಆಹ್ವಾನಿಸಲಾಗಿದೆ. ಸೋಲಿನ ಪರಾಮರ್ಶೆ ಜತೆ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷ ಸಂಘಟನೆ ಕುರಿತು ಮಾಜಿ ಸಿಎಂ ಬೊಮ್ಮಾಯಿ ಚರ್ಚಿಸಲಿದ್ದಾರೆ.
ಮಂಡ್ಯ: ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿದ ಕಾರು 25 ಅಡಿ ಆಳದ ನಾಲೆಗೆ ಉರುಳಿ ಬಿದ್ದಿರುವ ಘಟನೆ ಮಾಚಹಳ್ಳಿ ಗ್ರಾಮ ದಲ್ಲಿ ನಡೆದಿದೆ. ಈ ಬಗ್ಗೆ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ವರು ಸದಸ್ಯರನ್ನೊಳಗೊಂಡ ಕುಟುಂಬ ಪಾಂಡವಪುರದ ಕಡೆ ಕ್ರೇಟಾ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು 25 ಅಡಿ ಆಳದ ನಾಲೆಗೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದುದರಿಂದ ಜೀವಹಾನಿ ಸಂಭವಿಸಿಲ್ಲ. ಕಾರು ನಾಲೆಗೆ ಉರುಳಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಮಾಚಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಬಳಿಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೋಲಾರ: ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬಳಿ ಇರುವ ಕ್ವಾರಿಹಳ್ಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ದರ್ಶಿನಿ (24) ಮೃತ ವಿದ್ಯಾರ್ಥಿನಿ. ಕ್ವಾರೆಯಲ್ಲಿನ ನೀರಿಗೆ ಜಿಗಿದು ದರ್ಶಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಳ್ಳಾರಿ ಮೂಲದ ವಿದ್ಯಾರ್ಥಿನಿ ದರ್ಶಿನಿ ಹೊಸಕೋಟೆ ತಾಲೂಕಿನ, ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪಿಡಿಯಾಟ್ರಿಕ್ ವ್ಯಾಸಾಂಗ ಮಾಡುತ್ತಿದ್ದರು. ಇನ್ನು ದರ್ಶಿನಿ ಸಾವಿಗು ಮುಂಚೆ ಸ್ನೇಹಿತರಿಗೆ ದೂರವಾಣಿ ಕರೆ ಮಾಡಿದ್ದಾಳೆ ಎಂಬುವುದು ತಿಳಿದು ಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ದರ್ಶನಿಯ ಶವ ಹೊರತೆಗೆದಿದ್ದಾರೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ
ಬಳ್ಳಾರಿ: ಮೈಸೂರು ಸಮೀಪ ಟಿ.ನರಸೀಪುರದ ಕುರುಬೂರು ಬಳಿ (ಮೇ.29) ಭೀಕರ ರಸ್ತೆ ಅಪಘಾತದಲ್ಲಿ ಮೃತರಾಗಿದ್ದ ಬಳ್ಳಾರಿ ಜಿಲ್ಲೆ ಸಂಗನಕಲ್ಲು ಗ್ರಾಮದ ಮೃತರ ಕುಟುಂಬಸ್ಥರಿಗೆ ಭಾನುವಾರ ಸಂಜೆ ಸಚಿವ ಬಿ.ನಾಗೇಂದ್ರ ಅವರು ಪರಿಹಾರದ ಚೆಕ್ ವಿತರಣೆ ಮಾಡಿದರು. ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದಂತೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಅಪಘಾತದಲ್ಲಿ ಒಟ್ಟು ಈವರೆಗೆ 11 ಜನ ಮೃತರಾಗಿದ್ದು, ಮೃತರ ಪೈಕಿ ಸಂಗನಕಲ್ಲು ಗ್ರಾಮದ 10 ಜನರು ಮೃತರಾಗಿದ್ದರು. ಮೃತರಾದವರಿಗೆ ಸದ್ಯ 7 ಜನರಿಗೆ ಮಾತ್ರ ಚೆಕ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಮೂರು ಜನರಿಗೆ ಶೀಘ್ರ ಚೆಕ್ ವಿತರಿಸಲಾಗುವುದು ಎಂದು ಸಚಿವ ನಾಗೇಂದ್ರ ಅವರು ತಿಳಿಸಿದರು. ಕಳೆದ ತಿಂಗಳು 29ನೇ ತಾರೀಕು ದೇವರ ದರ್ಶನಕ್ಕೆಂದು ಸಂಗನಕಲ್ಲು ಗ್ರಾಮದ ಮೂರು ಕುಟುಂಬಗಳ 13 ಜನರು ಪ್ರವಾಸ ತೆರಳಿದ್ದರು. ಮೈಸೂರಿಗೆ ಹೋಗಿ ತಾಯಿಯ ದರ್ಶನ ಪಡೆದು ವಾಪಸ್ ಬರುವಾಗ ದುರ್ದೈವವಶಾತ್ ಅಪಘಾತ ಆಗಿ ಈವರೆಗೆ 11 ಜನ ಮೃತಪಟ್ಟಿದ್ದಾರೆ. ಸ್ಥಳದಲ್ಲೇ…
ಹುಬ್ಬಳ್ಳಿ: ಮನೆಯಲ್ಲಿ ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಕಾವೇರಿ ಹಡಪದ (17) ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಹೋದರಿಯರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ: ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿ ಯಾಡುವಾ ಆನೆ ಬೇಡಗನೊಪ್ಪಿ’ ಎಂಬ ನಮ್ಮ ಜಾನಪದ ಹಾಡಿನಂತೆ ಕಾರಹುಣ್ಣಿಮೆ ಹಬ್ಬವನ್ನ ಧಾರವಾಡ ಜಿಲ್ಲೆಯಲ್ಲಿ ಅಲ್ಲಲ್ಲಿ ವಿವಿಧ ರೀತಿಯಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಕಾರಹುಣ್ಣಿಮೆ ಆಚರಣೆ ಮಾಡಲಾಯಿತು. ರೈತರ ಪ್ರಮುಖ ಮುಂಗಾರು ಹಬ್ಬವಾದ ಕಾರಹುಣ್ಣಿಮೆಯನ್ನು ಗುರುವಾರ ಬೀದರ್ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ರೈತರು ಎತ್ತುಗಳನ್ನು ಮತ್ತು ಎತ್ತಿನಗಾಡಿ, ಕೂರಗಿ, ಗುಂಟಿ ಇನ್ತಿತರ ಕೃಷಿ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಿ ಎತ್ತುಗಳಿಗೆ ಹೊಸ ಗೆಜ್ಜೆಗಳನ್ನು ಹಾಕಿ ಕೊಂಬುಗಳಿಗೆ ಬಣ್ಣ ಬಳಸಿ ನೋಡುಗರ ಗಮನ ಸೇಳೆಯುವಂತೆ ಮಾಡಲಾಗಿತ್ತು. ಎತ್ತುಗಳಿಗೆ ಅಲಂಕರಿಸಿ ಹೊನ್ನುಗ್ಗಿ ಆಚರಿಸಿದರು. ಎತ್ತುಗಳಿಗೆ ಜೋಳ, Video Player 00:00 00:40 ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಹುಗ್ಗಿಯನ್ನು ತಿನ್ನಿಸುವ ಮೂಲಕ ಎತ್ತುಗಳನ್ನು ಗೌರವಿಸುವ ಕಾರ್ಯ ನಡೆಯಿತು. ಎತ್ತುಗಳಿಗೆ ಹೋಳಿಗೆ, ಹುಗ್ಗಿನೀಡಿ ರೈತರು ಸಂಭ್ರಮಿಸಿದರು.…
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಶ್ರೀ ನಂದಿಕೇಶ್ವರ ದೇವಸ್ಥಾನದಲ್ಲಿ ತಾಲೂಕು ಗಾಣಿಗ ಸಮಾಜ ಹಾಗೂ ತಾಲೂಕಾ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಮಖಂಡಿ ಇವರ ಸಹಯೋಗದಲ್ಲಿ ಎಸ್.ಎಸ್.ಎಲ್. ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಷ್ಟಪಟ್ಟು ಶ್ರಮವಹಿಸಿ ಪಾಲಕರ ಶಿಕ್ಷಕರ ಹಾಗೂ ಸಮಾಜದ ಹೆಸರು ಬರುವಂತಾಗಬೇಕು. ತಳಮಟ್ಟದಲ್ಲಿಯೇ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕೃತಿ ನೀಡಬೇಕು ಎಂದರು. ಈಗಾಗಲೇ ಸಮಾಜದ ೩ ಎಕರೆ ಜಮೀನು ಇದ್ದು ಅದನ್ನು ಸಮಾಜದ ಅಭಿವೃಧ್ಧಿಗಾಗಿ ಬೆಳೆಸಲು ಎಲ್ಲರೂ ಕೈ ಜೋಡಿಸೋಣ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ಪಾಲಕರ ಹೊಣೆಯಾಗಿದೆ. ಸಮಾಜದ ವಿದ್ಯಾರ್ಥಿಗಳು ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದರು. ಗಾಣಿಗ ಸಮಾಜದ ತಾಲೂಕಾ ಅಧ್ಯಕ್ಷ ಕೆ.ಕೆ ತುಪ್ಪದ ಮಾತನಾಡಿ ಪಾಲಕರು ಮಕ್ಕಳ ಕಡೆಗೆ ಎಚ್ಚರ ವಹಿಸಬೇಕು ಮಕ್ಕಳು ಏನು ಮಾಡುತ್ತಿದ್ದಾರೆ ಹಾಗೂ, ಅವರು ಎಷ್ಟರಮಟ್ಟಿಗೆ ಓದುತ್ತಿದ್ದಾರೆ ಹಾಗೂ ಯಾವ ರೀತಿಯ…