ಬಾಗಲಕೋಟೆ: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಸೊಗಡಿನ ಮನಂಜನಾ ಹಬ್ಬವಾಗಿರುವ ಕಾರ ಹುಣ್ಣಿಮೆಯನ್ನು ರವಿವಾರ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ರೈತರು ಮತ್ತು ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ರಬಕವಿ ಸಣಕಲ್ ಮುಖ್ಯ ರಸ್ತೆಯಲ್ಲಿ ನಾಯಕರು ಮತ್ತು ಪಾಟೀಲ ಗೌಡರ ಮನೆವರೆಗೆ ಎತ್ತುಗಳ ಕರಿ ಹರಿಯುವ ಮೂಲಕ ಕಡು ಬೇಸಿಗೆ ಕಳೆದು ಮುಂಗಾರು ಸ್ವಾಗತಿಸಲು ಈ ಹಬ್ಬ ಸಾಕ್ಷಿಯಾಯಿತು. ರೈತರು ತಮ್ಮ ಎತ್ತು ಹಾಗು ಹೋರಿಗಳ ಮೈ ತೊಳೆದು, ಬಣ್ಣ ಹಚ್ಚಿ ಶೃಂಗರಿಸಿ ಸಂಜೆ ಹಮ್ಮಿಕೊಂಡ ಕರಿ ಹರಿಯುವ ದೃಶ್ಯ ರೋಮಾಂಚನಗೊಳಿಸಿತು. ವರ್ಷವಿಡೀ ದುಡಿಯುವ ಎತ್ತುಗಳಿಗೆ ಮನರಂಜನಾ ಕೂಟವಾಗಿರುವ ಕಾರ ಹುಣ್ಣಿಮೆ ನಿಮಿತ್ತ ವಿಶೆಷ ಅಲಂಕಾರದೊಂದಿಗೆ ಸಾವಿರಾರು ರೈತರು ಹಾಗು ಯುವಕರು ಸಾಕ್ಷಿಯಾದರು.ಶೃಂಗರಿಸಿ ಕರೆತಂದಿದ್ದ ತಮ್ಮ ಎತ್ತುಗಳನ್ನು ಸಾಲು ಸಾಲಾಗಿ ಓಡಿಸುತ್ತ ಸಂಭ್ರಮಪಟ್ಟ ರೈತರು ನಂತರ ಮನೆಗೆ ಬಂದಾಗ ಅವುಗಳಿಗೆ ಆರತಿ ಎತ್ತಿ ಖುಷಿ ಪಟ್ಟರು. ಇದಕ್ಕೂ ಮೊದಲು ನಾಯಕರು ಮತ್ತು ಗೌಡರ…
Author: Prajatv Kannada
ಹಸಿರೇ ಉಸಿರು ಅಂತಾ ಭಾಷಣ ಬಿಗಿಯೋರೇ ಹೆಚ್ಚು. ಅದ್ರಲ್ಲೂ ಪರಿಸರ ದಿನಾಚರಣೆ ಬಂದ್ರೆ ಒಂದೇ ಒಂದು ಗಿಡ ನೆಟ್ಟು ಪೋಸ್ ಕೊಡೋರಿಗೇನೂ ಕಮ್ಮಿಯಿಲ್ಲ, ವಾಟ್ಸಾಪ್,ಫೇಸ್ಬುಕ್,ಯುಟ್ಯೂಬ್ ಸೇರಿ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಪ್ರಕೃತಿ ಪ್ರೇಮ ಮೆರೆಯೋರಂತೂ ಕೊಂಚ ಜಾಸ್ತಿನೇ ಇದ್ದಾರೆ. ಇಂತವರ ಮಧ್ಯೆ ಅಲ್ಲೊಂದು ಕಾಲೋನಿಯ ಜನ್ರು ವರ್ಷಪೂರ್ತಿ ಪರಿಸರ ದಿನಾಚರಣೆ ಮಾಡ್ತಾರೆ. ಪ್ರತಿದಿನವೂ ಪ್ರಕೃತಿ ಮಾತೆಯನ್ನ ಪೂಜಿಸುವ ಆ ಜನ್ರು ಇರೋದಾದ್ರು ಎಲ್ಲಿ? ಆ ಕುರಿತು ಸ್ಟೋರಿ ನೋಡೋಣ ಬನ್ನಿ… ಇಲ್ಲಿನ ಜನ್ರಿಂದ ಪರಿಸರಕ್ಕೆ ದೇವರ ಮನ್ನಣೆ ಹೌದು ಪರಿಸರ ದಿನಾಚರಣೆ ಬಂದ್ರೆ ಸಾಕು ಜನ್ರು ವರ್ಷಕ್ಕೊಮ್ಮೆ ಮಾತ್ರ ಗಿಡ ನೆಡ ನೆಟ್ಟು ಕೈ ಬಿಡೋದೇ ನಮ್ಮ ಕಾಯಕ ಅಂದುಕೊಳ್ಳುವವರೇ ಹೆಚ್ಚಾಗಿದ್ದಾರೆ. ಯಾವುದಾದರೊಂದು ಸಸಿ ತಂದು ಮನೆಯಲ್ಲಿ ಕುಟುಂಬಸ್ಥರು, ಕಚೇರಿಯಲ್ಲಿ ಸಹೋದ್ಯೋಗಿಗಳೆಲ್ಲ ಸೇರಿ ಸಸಿಗೆ ನೀರೆರೆದು ಪರಿಸರ ದಿನಾಚರಣೆ ಮಾಡಿದ್ವಿ ಅಂತಾ ಫೇಸ್ಬುಕ್,ಯುಟ್ಯೂಬ್ ,ಇನಸ್ಟಾ, ಸೇರಿ ಸೋಶಿಯಲ್ ಮಿಡಿಯಾಗಳಲ್ಲಿ ರೀಲ್ಸ್ ಗಳ ಹಾವಳಿಯೇ ಶುರುವಾಗಿರತ್ತೆ. ಆದ್ರೆ ಇದೆಲ್ಲವನ್ನು ಮೀರಿದ ಜನ್ರು ಗಿಡ ಬೆಳೆಸೋಣ ನಾಡು ಉಳಿಸೋಣ ಅನ್ನೋ ಮಂತ್ರವನ್ನು ನಿತ್ಯ ಜಪಿಸ್ತಾಯಿದ್ದಾರೆ. ಗದಗ ನಗರದ ಕೂಗಳತೆಯ ದೂರದಲ್ಲಿರುವ ಕಳಸಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸಾರಿಗೆ ನಗರದ ಜನ್ರು ಪ್ರತಿದಿನವೂ ಹಸಿರೀಕರಣಕ್ಕೆ ಮುಂದಾಗಿದ್ದು, ಇಡೀ ಗದಗ ಸುತ್ತಾಡಿ ಬಿಸಿಲಿನ ಬೇಗೆಗೆ ಬೆಂದು ಈ ಸಾರಿಗೆ ನಗರಕ್ಕೆ ಕಾಲಿಟ್ರೆ ಕೂಲ್ ಕೂಲ್ ವಾತಾವರಣ ನಿಮಗೆ ಸಿಕ್ಕತ್ತೆ. ಅಷ್ಟಕ್ಕೂ ಇಷ್ಟೆಲ್ಲ ಹಸಿರು ಕಾಣೋಕೆ ಸಣ್ಣದಾದ ಕಾಡು ಅನ್ನೋ ರೀತಿ ಕಾಣ್ಸೊಕೆ ಹತ್ತಾರು ವರ್ಷಗಳ ಪರಿಶ್ರಮವಿದೆ ಅವ್ರೆ ಹೇಳ್ತಾರೆ ಕೇಳಿ Video Player 00:00 03:00 ಇನ್ನೂ ಪ್ರತಿ ಮನೆ ಮುಂದೆಯೂ ಸಹ ಐದ್ಹತ್ತು ಹೂ–ಹಣ್ಣಿನ ಸಸಿ ನೆಟ್ಟ ಪರಿಣಾಮ ಇಂದು ಅವೆಲ್ಲ ಮರವಾಗಿ ಫಲ ಕೊಡುತ್ತಿವೆ ಶ್ರಮಪಟ್ಟವರಿಗೆಲ್ಲ ವರವಾಗಿ ಪರಿಣಮಿಸಿವೆ. ಅಪ್ಪಿ ತಪ್ಪಿ ಈ ಏರಿಯಾಗಿ ನಿವೇನಾದ್ರೂ ಹೋದ್ರೆ ನಿಮ್ಮನ್ನು ಅಲ್ಲಿನ ಜನ್ರಿಗೂ ಮುಂಚೆ ಇವುಗಳೇ ಕೈ ಬೀಸಿ ಕರೆಯುತ್ತವೆ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿ ಗಿಡಮರಗಳು ಹೆಚ್ಚಾಗಲು ಈ ಕಾಲೋನಿಯಲ್ಲಿ ಜರುಗೋ ಪ್ರತಿ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಸಂರಕ್ಷಣೆ ಮಾಡ್ತಾ ಬಂದದ್ದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಒಟ್ಟಿನಲ್ಲಿ ಒಂದು ದಿನ ಸಸಿನೆಟ್ಟು ಸಂಭ್ರಮಿಸುವರ ಮಧ್ಯೆ ಅಂದು ಇಂದು ಎಂದೆಂದೂ ಸಹ ಸಸ್ಯಸಂಕುಲವನ್ನು ಬೆಳೆಸಿ ಪರಿಸರದ ಕಾಳಜಿಯ ಜೊತೆಗೆ ಹೂ–ಹಣ್ಣುಗಳ ಫಲ ಸೇವನೆ ಮೂಲಕ ಪ್ರಕೃತಿಯ ಆರಾಧನೆ ಹಾಗೂ ಸದ್ಬಳಕೆ ಮಾಡಿಕೊಳ್ತಿರುವ ಈ ಜನರು ಇಡೀ ರಾಜ್ಯಕ್ಕೆ ಮಾದರಿಯಂದ್ರೆ ತಪ್ಪಾಗೋದಿಲ್ಲ. ಇಲ್ಲಿನ ಹಿರಿಯರು ಮಾಡುವ ಪರಿಸರ ಪೂಜೆಯನ್ನು ಪ್ರತಿ ಮನೆಯ ಮಕ್ಕಳು ರೂಢಿಸಿಕೊಂಡಿದ್ದು ಇನ್ನು ವಿಶೇಷವಾಗಿದ್ದು ಪರಿಸರ ದಿನಾಚರಣೆ ಒಂದು ದಿನವಲ್ಲ ಪ್ರತಿದಿನವೂ ಬೇಕೆನ್ನುವ ಈ ಜನ್ರಿಗೆ ಪರಿಸರಪ್ರೇಮಿಗಳು ನಮ್ಮದೊಂದು ಸಲಾಂ ಎನ್ನುತ್ತಿದ್ದಾರೆ.
ಮಂಡ್ಯ :- ಸ್ವಾತಂತ್ರ್ಯ ಪೂರ್ವಕ್ಕೆ ಮೊದಲೇ ದೇಶದಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿದ್ದು, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಯ್ಯ ಬಣ್ಣಿಸಿದರು. ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140 ನೇ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಅನೇಕ ರಾಜರು ಆಳ್ವಿಕೆ ಮಾಡಿದ್ದಾರೆ. ಆದರೆ ನಾಲ್ವಡಿ ಅವರು ಇಂದಿಗೂ ಅಚ್ಚಳಿಯದೆ ಉಳಿದಿದೆ ಎಂದರೆ ಅದಕ್ಕೆ ಕಾರಣ ಅವರು ಮಾಡಿದ ಜನಪರ ಕೆಲಸಗಳು ಎಂದರು. ದೇಶದಲ್ಲೇ ಮೊದಲು ಎಂಬಂತೆ ಹಿಂದುಳಿದವರಿಗೆ ಮೀಸಲಾತಿ ಜಾರಿ ಮಾಡಿದರು. ದೇವದಾಸಿ ಪದ್ಧತಿ, ಬಸವಿ ಬಿಡುವುದು, ಗೆಜ್ಜೆ ಪೂಜೆ ಆಚರಣೆ, ವೇಶ್ಯಾ ವೃತ್ತಿಗಳನ್ನು ನಿಷೇಧಿಸಿದರು. ವಿಧವಾ ಮರು ವಿವಾಹ ಪ್ರೋತ್ಸಾಹಕ್ಕೆ ಕಾಯ್ದೆ ರೂಪಿಸಿದರು. ಶೋಷಿತರಿಗೆ ಶಾಲೆ ತೆರೆದು ಕ್ರಾಂತಿಕಾರಕ ಯೋಜನೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು ಎಂದು ಹೇಳಿದರು. ಮೈಸೂರು ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯ ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಾತ್ರ…
ಬೆಳಗಾವಿ: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸರ್ಕಾರ ಯೋಗ್ಯ ನಿರ್ಣಯ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂಬ ಬಿಜೆಪಿ (BJP) ನಾಯಕರ ಹೇಳಿಕೆ ವಿಚಾರವನ್ನು ವ್ಯಂಗ್ಯವಾಡಿದ ಸಚಿವ ಸತೀಶ್ ಜಾರಕಿಹೊಳಿ, ಅವರದ್ದಿನ್ನು ಐದು ವರ್ಷ ಹೋರಾಟವೇ ಅವರಿಗೆ ಇನ್ನೇನು ಕೆಲಸ ಇದೆ ಎಂದು ಪ್ರಶ್ನಿಸಿದ್ದಾರೆ. ಹೋರಾಟ.. ಹೋರಾಟ… ಗೆಲ್ಲುವವರೆಗೂ ಹೋರಾಟ ಅಂತಾ ಇನ್ನು ಬೋರ್ಡ್ ಬರೆದಿಡಬೇಕು. ಇನ್ನು ಐದು ವರ್ಷ ಅವರಿಗೆ ಕೆಲಸ ಏನೂ ಇಲ್ಲ ಎಂದರು. ಬರೀ ಕೋಮುದ್ವೇಷ ಹರಡಿಸೋದು, ಗಲಾಟೆ, ಒಬ್ಬರ ವಿರುದ್ಧ ಎತ್ತಿಕಟ್ಟೋದು ಇಷ್ಟೇ ಬಿಜೆಪಿ ನಾಯಕರಿಗೆ ಗೊತ್ತಿರುವುದು. ಅವರು ಇದನ್ನೇ ಮಾಡಿದ್ದಾರೆ ಅವರಿಗೆ ಅಭಿವೃದ್ಧಿ ಅಂತೂ ಗೊತ್ತೇ ಇಲ್ಲ ಎಂದರು. ಎಮ್ಮೆ ಕೋಣ ಕಡಿದು ಹಾಕುವುದಾದರೆ ಹಸು ಏಕೆ ಕಡಿಯಬಾರದು ಎಂಬ ಪಶುಸಂಗೋಪನಾ ಖಾತೆ ಸಚಿವ ಕೆ.ವೆಂಕಟೇಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಹೇಳಿಕೆಗೆ ಚರ್ಚೆ ಮಾಡಲು ಅವಕಾಶ ಇದೆ ಎಂದರು. ಚರ್ಚೆ…
ಮೈಸೂರು: ಮೈಸೂರಿನಲ್ಲಿ ನಿತ್ಯವೂ ನೂರಾರು ರೋಗಿಗಳಿಗೆ ಅನುಕೂಲವಾಗುವಂತೆ 100 ಹಾಸಿಗೆಯ ಡಯಾಲಿಸಿಸ್ ಸೇವೆ ಆರಂಭಿಸಲು ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆ ನಿರ್ಧರಿಸಿದೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ”ಮೈಸೂರಿನಲ್ಲಿ ಸಾಕಷ್ಟು ಮಂದಿ ಡಯಾಲಿಸಿಸ್ ಸೇವೆ ಪಡೆಯಲು ಪರದಾಡುವ ಸ್ಥಿತಿ ಇದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಹೀಗಾಗಿ 100 ಹಾಸಿಗೆ ಸೇವೆ ಆರಂಭಿಸಲು ಬೇಕಾದ ಅನುದಾನ, ಎಲ್ಲಿಮಾಡಬಹುದು ಎಂಬುದನ್ನು ತಿಳಿಸಿದರೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಕೇಂದ್ರ ಸರಕಾರದಿಂದ ಕೊಡಿಸುತ್ತೇನೆ” ಎಂದು ತಿಳಿಸಿದರು. ”ಡಯಾಲಿಸಿಸ್ ಯಂತ್ರ ಖರೀದಿಗೆ 8 ಲಕ್ಷ ರೂ. ಬೇಕು. 20 ಯಂತ್ರ ಖರೀದಿಗೆ ಪ್ರಯತ್ನಿಸೋಣ. ಟೆಕ್ನಿಷಿಯನ್, ನರ್ಸ್ ಸಿಬ್ಬಂದಿ ನಿಯೋಜಿಸಬೇಕು. ಕೆ.ಆರ್.ಆಸ್ಪತ್ರೆ, ಪಿಕೆಟಿಬಿ, ಜಿಲ್ಲಾಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ನಲ್ಲಿ ಖಾಲಿ ಇರುವ ಕಟ್ಟಡವನ್ನು ಬಳಸಿಕೊಳ್ಳಲು ಸಾಧ್ಯವೇ ಪರಿಶೀಲಿಸಿ” ಎಂದು ಸೂಚಿಸಿದರು.
ಮಂಗಳೂರು: ಕೆಎಸ್ಆರ್ಟಿಸಿ ಬಸ್‌ಗಳಲ್ಲಿ (KSRTC Bus) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಯನ್ನು(Shakti Scheme) ಜೂನ್ 11ರಿಂದ ಆರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಕರಾವಳಿ ಕರ್ನಾಟಕ ಭಾಗದ ಖಾಸಗಿ ಬಸ್ ನಿರ್ವಾಹಕರನ್ನು ಚಿಂತೆಗೀಡು ಮಾಡಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿರುವುದು ಖಾಸಗಿ ಬಸ್ಗಳಿಗೆ ಹೊರೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಸಂಖ್ಯೆಯೇ ಹೆಚ್ಚಿದೆ. ಸರ್ಕಾರದ ಯೋಜನೆಯಿಂದ ಖಾಸಗಿ ಬಸ್‌ಗಳ ಲಾಭದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡೀಸೆಲ್ ಸಬ್ಸಿಡಿ ರೂಪದಲ್ಲಿ ಪರಿಹಾರ ನೀಡುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರು ನಗರವೊಂದರಲ್ಲೇ ಸುಮಾರು 328 ಬಸ್‌ಗಳನ್ನು ಖಾಸಗಿ ನಿರ್ವಾಹಕರು ನಡೆಸುತ್ತಿದ್ದು, 68 ಬಸ್‌ಗಳು ಗ್ರಾಮಾಂತರ ಪ್ರದೇಶದಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಆಧಾರದ ಮೇಲೆ ಕಾರ್ಯಾಚರಿಸುತ್ತಿವೆ. ಇಲ್ಲಿ ಖಾಸಗಿ…
ಸೂರ್ಯೋದಯ: 05.52 AM, ಸೂರ್ಯಾಸ್ತ : 06.44 PM ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಪಾಡ್ಯ 06:38 AM ತನಕ ನಂತರ ಬಿದಿಗೆ ನಕ್ಷತ್ರ: ಇವತ್ತು ಜೇಷ್ಠ 03:23 AM ತನಕ ನಂತರ ಮೂಲ ಯೋಗ: ಇವತ್ತು ಸಾಧ್ಯ 08:49 AM ತನಕ ನಂತರ ಶುಭ ಕರಣ: ಇವತ್ತು ಕೌಲವ 06:38 AM ತನಕ ನಂತರ ತೈತಲೆ 05:15 PM ತನಕ ನಂತರ ಗರಜ ದುರ್ಮುಹೂರ್ತ: ಮ.12:40 ನಿಂದ ಮ.1:32 ವರೆಗೂ; ಮ.3:16 ನಿಂದ ಸಂಜೆ.4:08 ವರೆಗೂ ವರ್ಜ್ಯಂ: ಬೆಳಗ್ಗೆ.10:07 ನಿಂದ ಬೆಳಗ್ಗೆ.11:34 ವರೆಗೂ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ:01:30 ನಿಂದ 03:00 ವರೆಗೂ ಅಮೃತಕಾಲ: 07.31 PM to 08.59 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:40 ವರೆಗೂ ಜಾತಕ ಆಧಾರದ…
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ನಿಷೇಧ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದರು. ಬಿಜೆಪಿಯವರು ರೈತರಿಗೆ ಅನಾನುಕೂಲ ಆಗುವ ರೀತಿ ಮಾಡಿದ್ರು. ಬಿಜೆಪಿಯವರ ಸಂಘಟನೆಗಳು ಈ ಕಾಯ್ದೆಯ ಮೂಲಕ ವಸೂಲಿ ದಂಧೆ ಮಾಡಿಕೊಂಡಿದ್ದರು. ನಾವು ಕಾಯ್ದೆಯ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದರು.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ “ವಿಶ್ವ ಪರಿಸರ ದಿನ” ಕಾರ್ಯಕ್ರಮದ ಅಂಗವಾಗಿ ಸನ್ಮಾನ್ಯ ಉಪ ಮುಖ್ಯಮಂತ್ರಿಯವರಾದ ಡಿ.ಕೆ. ಶಿವಕುಮಾರ್ ಅವರು ರಾಚೇನಹಳ್ಳಿ ಕೆರೆ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದಾದ್ಯಂತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪರಿಸರ ಉಳಿಸುವ ಕೆಲಸ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿಶ್ವ ಪರಿಸರ ದಿನದ ಅಂಗವಾಗಿ ಪಾಲಿಕೆ ಶಾಲಾ ವಿದ್ಯಾರ್ಥಿಗಳಿಂದ ರಾಚೇನಹಳ್ಳಿ ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಲ್ನಡಿಗೆ ಹಾಗೂ ಸೈಕಲ್ ಜಾಥ ಮೂಲಕ ನಾಗರಿಕರಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾನ್ಯ ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೃಷ್ಣ ಭೈರೇಗೌಡ, ಮಾನ್ಯ ಶಾಸಕರಾದ ಎ.ಸಿ ಶ್ರೀನಿವಾಸ್, ಮಾನ್ಯ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಪ್ರೀತಿ ಗೆಹ್ಲೋಟ್, ಡಾ. ಹರೀಶ್ ಕುಮಾರ್, ಡಾ. ದೀಪಕ್, ರೆಡ್ಡಿ ಶಂಕರ…
ಬೆಂಗಳೂರು: ನಗರದಲ್ಲಿ ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಹಕರ ಸೇವೆ ಹಾಗೂ ವ್ಯಾಪಾರಿಗಳ ಅನುಕೂಲತೆಗಾಗಿ 24×7 ಹೋಟೆಲ್ ಸೇರಿದಂತೆ ಇನ್ನಿತರ ಮಳಿಗೆ ತೆರಯಲು 30 ದಿನದೊಳಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ. ಒಂದು ವೇಳೆ ಅನುಮತಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದರು. ಈ ಹಿಂದೆಯೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಡರಾತ್ರಿ 1 ಗಂಟೆವರೆಗೆ ಹೋಟೆಲ್ ಸೇವೆ ನೀಡಲು ಅನುಮತಿಸಿದ್ದವು. ಆದರೆ ಕೆಲವು ಕಾರಣ ನೀಡಿದ್ದ ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಪೊಲೀಸ್ ಇಲಾಖೆ ನಡೆಯಿಂದ ಬೆಂಗಳೂರಿನ ಜನದಟ್ಟಣೆಯ ಭಾಗದ ಹೋಟೆಲ್, ಸ್ವೀಟ್ ಸ್ಟಾಲ್, ಐಸ್‌ಕ್ರೀಂ ಪಾರ್ಲರ್, ಬೇಕರಿಯಂತಹ ಇನ್ನಿತರ ವ್ಯಾಪಾರಿಗಳ ನಿರೀಕ್ಷೆ ಹುಸಿಯಾಗಿತ್ತು. ವ್ಯಾಪಾರ ಮಾರ್ಗಸೂಚಿ ಹೊರಡಿಸಿದ್ದರೂ ಇದರ ಪ್ರಯೋಜನವಾಗಿಲ್ಲ ಎಂದರು. ಕೊರೊನಾ ನಂತರ ನಿರಂತರ ಬೆಲೆ ಏರಿಕೆಗಳಿಂದ ವ್ಯಾಪಾರ…