ತುಮಕೂರು: ಇನ್ನೆರಡು ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಘೋಷಣೆ ಆಗಲಿದೆ. ಯಾರ ಮೇಲೆ ವಿಶ್ವಾಸ ಇದೆಯೋ ಅಂತಹ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಿಗಲಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ (Dr G Parameshwara) ಹೇಳಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು. ಹಾಲಿನ ಪ್ರೋತ್ಸಾಹಧನ ಕಡಿಮೆ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ಕೆಲವು ಒಕ್ಕೂಟಗಳು ಹಾಲಿನ ಪೋತ್ಸಾಹಧನ ಕಡಿಮೆ ಮಾಡಿವೆ. ಆದರೆ ಸರ್ಕಾರ ಕೊಡುವ ಪ್ರೋತ್ಸಾಹಧನ ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜುಲೈನಲ್ಲಿ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದ ಪರಮೇಶ್ವರ್, ಎತ್ತಿನಹೊಳೆ ಯೋಜನೆ 2 ವರ್ಷದಲ್ಲಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು. ಔರಾದ್ಕರ್ ವರದಿ ಬಗ್ಗೆ ಪರಿಶೀಲನೆ ಮಾಡಲಾಗುವುದು. ಪೊಲೀಸರಿಗೆ ಹೆಚ್ಚು ದಂಡ ವಸೂಲಿಗೆ ಯಾವ ಟಾರ್ಗೆಟ್ ನೀಡಿಲ್ಲ ಎಂದರು.
Author: Prajatv Kannada
ಮಂಗಳೂರು: ಫಲಿತಾಂಶ ಬಂದ 24 ಗಂಟೆ ಒಳಗಡೆ ಕಾಂಗ್ರೆಸ್ ಗ್ಯಾರಂಟಿ (Congress Guarantee) ಘೋಷಣೆ ಮಾಡೋದಾಗಿ ಹೇಳಿ ಇದೀಗ ತಡವಾಗಿ ಆದರೂ ಘೋಷಣೆ ಮಾಡಿರೋದನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ (Mangaluru) ಮಾತನಾಡಿದ ಅವರು ಗ್ಯಾರಂಟಿ ಈಡೇರಿಸಲು ಕಾಂಗ್ರೆಸ್ ಸರ್ಕಾರ ಹಣದ ಕ್ರೋಢೀಕರಣ ಹೇಗೆ ಮಾಡುತ್ತೆ? ಈ ಗ್ಯಾರಂಟಿ ಎಷ್ಟು ವರ್ಷ ಇರುತ್ತೆ? ಎನ್ನುವುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ. ನಿರುದ್ಯೋಗ ಭತ್ಯೆಗೆ ಮೊದಲು ಮಾನದಂಡ ಹೇಳದೆ ಈಗ ಮಾನದಂಡ ಹಾಕಿದ್ದಾರೆ. ಹಿಂದಿನ ಪಿಂಚಣಿ ಯೋಜನೆಗಳ ಗತಿ ಏನು? ರಾಜ್ಯದ ಬೊಕ್ಕಸದ ಹಣದ ಗತಿ ಏನು? ಯಾರಿಗೂ ಹೊರೆ ಆಗದಂತೆ ಹೇಗೆ ನಿಯಂತ್ರಿಸುತ್ತಾರೆ? ನಮ್ಮದು ಶ್ರೀಲಂಕಾ, ಪಾಕಿಸ್ತಾನದಂತೆ ಆರ್ಥಿಕ ಸ್ಥಿತಿ ಕುಸಿಯಬಾರದು. ಅವರು ಆದಷ್ಟು ಬೇಗ ಈ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದಿದ್ದಾರೆ.
ಬೀದರ್ (ಜೂ.03): ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ 230ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂಬ ಕಹಿ ಸುದ್ದಿ ಕೇಳಿ ಮನಸ್ಸು ತುಂಬಾ ಭಾರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗದಿರಲಿ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗಲಿ. ಮೃತರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ. ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ಹಂಚಿಕೊಂಡಿರುವ ಅವರು, ದುರಂತಕ್ಕೆ ಸಿಲುಕಿದ ರೈಲಿನಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಗಳಿಗೆ ಸಂಬಂಧಿಸಿದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ನೀಡಲಿ. ಗಾಯಾಳುಗಳಿಗೆ ಸರ್ಕಾರದಿಂದಲೇ ಉಚಿತ ಮತ್ತು ಅತ್ಯುತ್ತಮ ಚಿಕಿತ್ಸೆ ನೀಡುವ ವ್ಯವಸ್ಥೆಯಾಗಲಿ. ಘಟನೆಯಿಂದ ಧೈರ್ಯ ಕಳೆದುಕೊಂಡ ಪ್ರತಿಯೊಬ್ಬರಿಗೂ ಧೈರ್ಯ ತುಂಬುವ ಕೆಲಸವಾಗಲಿ ಎಂದಿದ್ದಾರೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕನ್ನಡಿಗರನ್ನು ರಕ್ಷಿಸಿ ರಾಜ್ಯಕ್ಕೆ ಕರೆ ತರುವ ಕೆಲಸ ಮತ್ತು…
ಚಿತ್ರದುರ್ಗ: ಕಾಂಗ್ರೆಸ್ ಗ್ಯಾರಂಟಿಗಳಿಗೆ ಷರತ್ತುಗಳನ್ನು ವಿಧಿಸುವುದಾಗಿ ಹೇಳಿದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದಿದ್ದರು, ಕೊಟ್ಟಿದ್ದಾರಾ? ಎಂದು ವಿಪಕ್ಷಗಳು ಹಾಗೂ ಕಾರ್ಯಕರ್ತರು ಪ್ರಶ್ನಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ (A Narayanaswamy) , ಸಿದ್ಧರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಅವರು ನೀಡಿದ ‘ಗ್ಯಾರಂಟಿ’ ಹೇಳಿಕೆಗಳು ಎಲ್ಲರ ಬಳಿ ಇವೆ. 15 ಲಕ್ಷ ಬಗ್ಗೆ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ್ದರೆ ಸಾಕ್ಷಿ ಕೊಡಿ, ಕ್ಷಮೆ ಕೇಳುತ್ತೇನೆ. 15 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದ ನಾರಾಯಣಸ್ವಾಮಿ, ರಾಜ್ಯದ ಜನರನ್ನು ಭಿಕ್ಷಾಟನೆ ಕೂಪಕ್ಕೆ ತಳ್ಳುವ ವ್ಯವಸ್ಥೆ ನಡೆದಿದೆ ಎಂದು ಆರೋಪಿಸಿದ್ದಾರೆ. ಜನರನ್ನು ಭಿಕ್ಷಾಟನೆ ಸರದಿಗೆ ನಿಲ್ಲಿಸಿ ಅಧಿಕಾರ ಪಡೆಯಲು ಷಡ್ಯಂತ್ರ ನಡೆಸಿದೆ. ಸ್ವತಂತ್ರ್ಯ ಹೋರಾಟಗಾರರ ಕನಸು ನುಚ್ಚುನೂರು ಮಾಡಿ, ಕಾಂಗ್ರೆಸ್ ಸಿದ್ಧಾಂತ ಗಾಳಿಗೆ ತೂರಿ ಮತದಾರರಿಗೆ ಆಮಿಷವೊಡ್ಡಿದೆ.…
ಮಂಗಳೂರು: ಡ್ರೋನ್ (Drone) ಮೂಲಕ ಭೂಮಾಪನ ಮತ್ತು ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ (Central Government) ಯೋಜಿಸುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ (Dr. Veerendra Heggade) ಹೇಳಿದರು. ಡ್ರೋನ್ ಮೂಲಕ ಜಾಗದ ಅಳತೆ ಮಾಡಿ, ಹಕ್ಕುಪತ್ರ ನೀಡುವ ಕ್ರಮ ಮೊದಲಾದ ಅನೇಕ ಹೊಸ ಪದ್ಧತಿಗಳು ಸದ್ಯದಲ್ಲೆ ಬಳಕೆಗೆ ಬರಲಿವೆ. ದೇಶದ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿ ಹಿನ್ನೆಲೆಯಲ್ಲಿ ವರ್ತಮಾನದ ಸ್ಥಿತಿಯನ್ನು ಗಮನಿಸಿ ರಾಷ್ಟ್ರದ ಉಜ್ವಲ ಭವಿಷ್ಯ ರೂಪಿಸಬೇಕಾಗಿದೆ ಎಂದರು. ಧರ್ಮಸ್ಥಳದ ಬೀಡಿನಲ್ಲಿ ಶುಕ್ರವಾರ ‘ರಾಜ್ಯಸಭೆಯಲ್ಲಿ ರಾಜರ್ಷಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ರಾಜ್ಯಸಭೆ ಸದಸ್ಯನಾಗಿ ಸಂಸತ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪ್ರಶ್ನೆ ಕೇಳಿ ಮಾಹಿತಿ ಕಲೆ ಹಾಕಿದ್ದೇನೆ. ನನ್ನನ್ನು ಈಗಾಗಲೇ ಮೂರು ಪ್ರಮುಖ ಸಮಿತಿಗಳ ಸದಸ್ಯನಾಗಿ ನೇಮಕ ಮಾಡಿದ್ದಾರೆ. ಎಲ್ಲ ಸಂದರ್ಭಗಳನ್ನು ಸಚಿತ್ರವಾಗಿ ಬಿಡುಗಡೆಯಾದ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು. ಪುಸ್ತಕವು ಎಲ್ಲಾ ಚಟುವಟಿಕೆಗಳ ವಿವರವಾದ ಮಾಹಿತಿಯನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ನೂತನ ಸಂಸತ್ ಭವನದಲ್ಲಿ ನಡೆಯುವ…
ಹುಬ್ಬಳ್ಳಿ; ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಅದಿಕಾರಕ್ಕೆ ಬಂದ 15 ದಿನಗಳಲ್ಲಿ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾದರಿಯಾಗಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ.ಆನಂದಕುಮಾರ್ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ್ದು 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2000 ರೂ., ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪದವಿಧರರಿಗೆ ನಿರುದ್ಯೋಗ ಭತ್ಯೆ ಯೋಜನೆ ಜಾರಿಗೊಳಿಸುವ ಮೂಲಕ ಬಡವರ ಕೈಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಈ ಹಿಂದಿನ ಡಬ್ಬಲ್ ಎಂಜಿನ್ ಸರ್ಕಾರದ ನೀತಿಗಳಿಂದ ಜನಸಾಮಾನ್ಯರ ಬದುಕು ಹೈರಾಣಾಗಿತ್ತು. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದರು. ನೋಟ್‍ಬ್ಯಾನ್, ಜಿಎಸ್‍ಟಿ, ಕೊರೋನ ಲಾಕ್‍ಡೌನ್‍ನಿಂದ ಜನರ ಬದುಕು ತಲ್ಲಣಗೊಂಡಿತ್ತು. ಪ್ರಸ್ತುತ ಈ ಗ್ಯಾರಂಟಿ ಯೋಜನೆಗಳ ಜಾರಿಯಿಂದ ಅವರ ಬದುಕಿಗೆ ಚೈತನ್ಯ ತುಂಬಿದೆ. ಯೋಜನೆಗಳು ಜನಸಾಮಾನ್ಯರಿಗೆ ಆಶಾದಾಯಕವಾಗವೆ. ಈ…
ಚಿಕ್ಕಮಗಳೂರು: ಒಡಿಸ್ಸಾದಲ್ಲಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ರೈಲಿನಲ್ಲಿದ್ದ ಕಳಸದ 110 ಮಂದಿ ಪ್ರಯಾಣಿಕರು ಸೇಫ್ ಆಗಿದ್ದಾರೆಂದು, ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಯಾತ್ರಿಕರ ಸಂಬಂಧಿ ಸತೀಶ್ ಜೈನ್ ಹೇಳಿದ್ದಾರೆ. ‘ನಮ್ಮ ಸಂಬಂಧಿಕರು 9 ಜನ ಯಾತ್ರೆಗೆ ತೆರಳಿದ್ರು. ಅಫಘಾತದ ವಿಚಾರ ತಿಳಿದು ನಮಗೆ ಗಾಬಾರಿಯಾಗಿತ್ತು. ಕರೆ ಮಾಡಿ ಮಾತನಾಡಿದಾಗ ಕ್ಷೇಮವಾಗಿರುವ ವಿಚಾರ ತಿಳಿದಾಗ ಸ್ವಲ್ಪ ಸಮಾಧಾನವಾಯ್ತು ಎಂದರು.
ಧಾರವಾಡ: ಓಡಿಸ್ಸಾ ರೈಲು ದುರಂತ ಹಿನ್ನೆಲೆ, ಧಾರವಾಡದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ ರದ್ದು ಮಾಡಲಾಗಿದೆ. ಹೌದು ನಗರದ ಕಲ್ಯಾಣ ನಗರದಲ್ಲಿ ನಿರ್ಮಾಣಗೊಂಡಿರುವ ಸೇತುವೆ ರೈಲ್ವೆ ಮೇಲ್ಸೇತುವೆ ಉದ್ಘಾಟನೆಯನ್ನ ಇಂದು(ಜೂ.3)ಸಂಜೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉದ್ಘಾಟಿಸಿಬೇಕಿತ್ತು. ಜೊತೆಗೆ ಕಾರ್ಯಕ್ರಮ ಹಿನ್ನೆಲೆ ತಯಾರಿ ಕೂಡ ಮಾಡಕೊಳ್ಳಲಾಗಿತ್ತು. ಆದರೆ ರೈಲು ದುರಂತ ಹಿನ್ನೆಲೆ ಇಡೀ ಕಾರ್ಯಕ್ರಮವನ್ನ ರದ್ದು ಮಾಡಲಾಗಿದೆ.
ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮತ್ತೆ ಮುಂದುವರಿದಿದ್ದು, ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾನೆ. ಮಾವಿನತೋಟ ಕಾಯುತ್ತಿದ್ದ ರೈತನ ಮೇಲೆ ಒಂಟಿಸಲಗ ದಾಳಿ ನಡೆಸಿದ್ದು, ರೈತ ಸಾವನ್ನಪ್ಪಿದ್ದಾನೆ. ಚನ್ನಪಟ್ಟಣ ತಾಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಶನಿವಾರ ಬೆಳಗ್ಗಿನ ಜಾವ ಘಟನೆ ನಡೆದಿದ್ದು, ಕನಕಪುರ ಮೂಲದ ವೀರಭದ್ರಯ್ಯ (52) ಅಸುನೀಗಿದ್ದಾರೆ. ವೀರಭದ್ರಯ್ಯ ಅವರು ಕಳೆದ ಮೂರ್ನಾಲ್ಕು ತಿಂಗಳಿಂದ ಲೋಕೆಶ್ ಎಂಬುವವರ ಮಾವಿನ ತೋಟ ಕಾಯುತ್ತಿದ್ದರು. ಈ ತೋಟಕ್ಕೆ ಮುಂಜಾನೆ ಅನೆ ದಾಳಿಯಾಗಿದೆ. ರಾಮನಗದ ರೈತರು ಕಾಡಾನೆ ಹಾವಳಿಯಿಂದ ಕಂಗೆಟ್ಟಿದ್ದು, ಇತ್ತೀಚೆಗಷ್ಟೇ ಕಬ್ಬಾಳು ಗ್ರಾಮ ಬಳಿಯೂ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗಿದೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಡ್ಯ: ಮನ್ಮುಲ್(Manmul) ರೈತರಿಗೆ ಬಿಗ್ ಶಾಕ್ ಕೊಟ್ಟಿದೆ. ರೈತರಿಂದ(Farmer) ಖರೀದಿಸುವ ಹಾಲಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್ಮುಲ್) ಲೀಟರ್ ಗೆ 1 ರೂ. ಕಡಿತ ಮಾಡಿ ಆದೇಶ ಹೊರಡಿಸಿದೆ. ಜೂನ್ 1ರಿಂದಲೇ ಪರಿಷ್ಕೃತ ಆದೇಶ ಜಾರಿ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರಿಯಲಿದೆ. ಮೇ.26ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ಜೂ.1 ರಿಂದ ಮುಂದಿನ ಆದೇಶದವರೆಗೆ ಈ ನೂತನ ದರ ಪರಿಷ್ಕರಣೆ ಮುಂದುವರಿಯುತ್ತದೆ ಎಂದು ಮನ್ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ ಪಿ.ಆರ್.ಮಂಜೇಶ್ ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲಾ ಹಾಲು ಒಕ್ಕೂಟವು ಪ್ರತಿದಿನ 9,38,035 ಕೆಜಿ ಹಾಲನ್ನು ಸಂಗ್ರಹಿಸುತ್ತಿದೆ. ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆಯಿಂದ ಉತ್ಪಾದಕರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಸದ್ಯ ನೂತನ ದರದಂತೆ ಸಂಘಗಳಿಗೆ ಶೇ 4.0 ಜಿಡ್ಡು ಮತ್ತು ಶೇ 8.5 ಜಿಡ್ಡೇತರ ಘನಾಂಶಕ್ಕೆ 33.15 ರೂ. ಬದಲು 32.15 ರೂ ಹಾಗೂ ಉತ್ಪಾದಕರಿಗೆ 32.25 ರೂ ಬದಲು 31.25 ರೂ. ನಿಗಧಿಗೊಳಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಅರಂಭವಾಗಿದ್ದು, ಹಸಿರು ಮೇವಿನ ಲಭ್ಯತೆ ಸುಧಾರಿಸಿದೆ. ಹೀಗಾಗಿ ದರ ಕಡಿತ ಮಾಡಲಾಗಿದೆ ಎಂದು ಮನ್‌ಮುಲ್ ಆಡಳಿತ ಮಂಡಳಿ ದರ ಇಳಿಕೆಗೆ ಸಮರ್ಥನೆ ನೀಡಿದ್ದಾರೆ.