ಬೆಂಗಳೂರು: ಒಡಿಶಾದ ಬಹನಾಗ ನಿಲ್ದಾಣದ ಬಳಿ ಶುಕ್ರವಾರ 3 ರೈಲುಗಳ ನಡುವೆ ಡಿಕ್ಕಿಯಾಗಿದ್ದು, ದುರಂತ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತೆರಳಿದ್ದಾರೆ. ಹೌದು ರಾಜ್ಯದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತರಲು ಸಿಎಂ ಸಿದ್ದರಾಮಯ್ಯ ಅವರು ಸಂತೋಷ್ ಲಾಡ್ ಅವರನ್ನ ಒಡಿಶಾಗೆ ಕಳುಹಿಸಿದ್ದಾರೆ. ದುರಂತ ಸ್ಥಳದಲ್ಲಿರುವ ಕನ್ನಡಿಗರು ನನ್ನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಸಚಿವ ಸಂತೋಷ್ ಲಾಡ್ ಒಡಿಶಾ ರೈಲು ದುರಂತಕ್ಕೆ ಸಂಬಂಧಿಸಿದಂತೆ ‘ ಕನ್ನಡಿಗರನ್ನ ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ‘ವಿಶೇಷ ಏರ್ ಕ್ರಾಫ್ಟ್ ಮೂಲಕ ಮಧ್ಯಾಹ್ನ 2.30 ಕ್ಕೆ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳ ಜೊತೆ ಭುವನೇಶ್ವರಕ್ಕೆ ಹೋಗುತ್ತಿದ್ದೇನೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸ್ಥಳಕ್ಕೆ ತೆರಳಬೇಕಾಗಿದೆ. ಸಂಜೆ 6-7 ಗಂಟೆಗೆ ನಾನು ದುರಂತ ಸ್ಥಳಕ್ಕೆ ತಲುಪಬಹುದು. ಅಲ್ಲಿ ಹೋದ ಮೇಲೆ ವ್ಯವಸ್ಥೆಗೆ ಏನು ಲಭ್ಯ ಇದೆ ಅಂತಾ ನೋಡಬೇಕಾಗುತ್ತದೆ. ಕನ್ನಡಿಗರಿಗೆ ಯಾವುದೇ ತೊಂದರೆ ಇದ್ದರೆ ಚಿಕಿತ್ಸೆ, ಸುರಕ್ಷಿತವಾಗಿ ಕರೆತರುವುದು ನಮ್ಮ ಜವಾಬ್ದಾರಿ…
Author: Prajatv Kannada
ಬೆಂಗಳೂರು: ಒಡಿಶಾ ರೈಲು ಅಪಘಾತ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ‘ರೈಲು ಅಪಘಾತ ದುರದೃಷ್ಟಕರ, ಕರ್ನಾಟಕ ಜನರ ದುಃಖ ಜೊತೆಯಲ್ಲಿದೆ. ಅಪಘಾತದ ಕಾರಣ ಹುಡುಕೋದು ಕಷ್ಟ. ಆದರೆ, ಮುಂದೆ ಈ ರೀತಿ ಆಗದ ಹಾಗೇ ನೋಡಿಕೊಳ್ಳಬೇಕು ಅಂದರೆ ಕಾರಣ ಹುಡುಕಬೇಕು ಎಂದಿದ್ದಾರೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದ್ದು,(Odisha Train Accident) ಮೃತಪಟ್ಟವರ ಸಂಖ್ಯೆ 280ಕ್ಕೆ ಏರಿಕೆಯಾಗಿದೆ. ಈಗಾಗಲೇ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಸೂರ್ಯೋದಯ: 05.52 AM, ಸೂರ್ಯಾಸ್ತ : 06.43 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಚತುರ್ದಶಿ 11:16 AM ತನಕ ನಂತರ ಹುಣ್ಣಿಮೆ ನಕ್ಷತ್ರ: ಇವತ್ತು ವಿಶಾಖ 06:16 AM ತನಕ ನಂತರ ಅನುರಾಧ ಯೋಗ: ಇವತ್ತು ಶಿವ 02:48 PM ತನಕ ನಂತರ ಸಿದ್ದಿ ಕರಣ: ಇವತ್ತು ಗರಜ 12:07 AM ತನಕ ನಂತರ ವಣಿಜ 11:16 AM ತನಕ ನಂತರ ವಿಷ್ಟಿ 10:17 PM ತನಕ ನಂತರ ಬವ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 07.11 PM to 08.42 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:48 ನಿಂದ ಮ.12:40 ವರೆಗೂ ಮೇಷ ರಾಶಿ: ಅವಿವಾಹಿತರಿಗೆ ಮದುವೆ ಯೋಗ,ಮರಳು ಕಂಪನಿ ಮಾಲಕರಿಗೆ ಆರ್ಥಿಕ ಚೇತರಿಕೆ,ಗೃಹ…
ಬೆಂಗಳೂರು: ಕಾಂಗ್ರೆಸ್ ನವರು ಗ್ಯಾರಂಟಿಯಲ್ಲಿ ದೋಖಾ ಮಾಡುತ್ತಾ ಇದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ರೇಸ್ ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಮಾತನಾಡಿದ ಅವರು, ನಾವು ಖಂಡಿತವಾಗಿ ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರಿ ಆದೇಶವಾದ ನಂತರ ಜನರ ಬಳಿ ಹೋಗುತ್ತೇವೆ. ಇದರಲ್ಲಿ ಸಾಕಷ್ಟು ಹಿಡನ್ ಅಜೆಂಡಾ ಇದೆ. ಚುನಾವಣಾ ಪೂರ್ವದಲ್ಲಿ ಜನರಿಗೆ ಬಹಳಷ್ಟು ದೊಡ್ಡ ಬೆಟ್ಟದಷ್ಟು ಭರವಸೆ ತೋರಿಸಿದ್ದರು. ಜನರ ನಿರೀಕ್ಷೆಗಳನ್ನು ದೊಡ್ಡಮಟ್ಟದಲ್ಲಿ ಇರಿಸಿ ಕಾಂಗ್ರೆಸ್ ಚುನಾವಣೆ ಗೆದ್ದಿದೆ ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ಚುನಾವಣಾ ಪೂರ್ವದ ಮಾತು, ಚುನಾವಣಾ ನಂತರದ ಮಾತುಗಳಿಗೂ ಬಹಳಷ್ಟು ವ್ಯತ್ಯಾಸಗಳಿವೆ. ಎಲ್ಲರಿಗೂ 200 ಯೂನಿಟ್ ಕರೆಂಟ್ ಫ್ರೀ ಅಂತಾ ಘಂಟಾ ಘೋಷವಾಗಿ ಹೇಳಿದ್ದಾರೆ. ಅವರು ಹೇಳಿದ ಪ್ರಕಾರ ವಿದ್ಯುತ್ ಬಳಕೆ 200 ಯೂನಿಟ್ ಒಳಗೆ ಇದ್ದರೆ ಉಚಿತ ಕೊಡಬೇಕು. ಇಂದು ಸಿಎಂ ಮಾತಿನಲ್ಲಿ ಬಹಳ ವ್ಯತ್ಯಾಸ ಇದೆ. ಅಂದರೆ 200 ಯೂನಿಟ್ ಫ್ರೀ ಅಲ್ಲ ಸಾಮಾನ್ಯ ಜನ 75-80 ಯೂನಿಟ್ ಅಷ್ಟೇ ಬಳಸುತ್ತಾರೆ ಅಂತಾ…
ಬೆಂಗಳೂರು: 292 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಸಂಬಂಧ ಆದೇಶ ಹೊರಡಿಸಲಾಗಿದೆ 292 ಪೊಲೀಸ್ ಇನ್ಸ್‍ಪೆಕ್ಟರ್ ಗಳನ್ನು ವರ್ಗಾವಣೆ ಮಾಡುವ ಮೂಲಕ ಪೊಲೀಸ್ ಇಲಾಖೆಯಲ್ಲಿ ಸರ್ಕಾರವು ಮೇಜರ್ ಸರ್ಜರಿ ಮಾಡಿದೆ. ಚುನಾವಣೆ ನಿಮಿತ್ತ ವರ್ಗಾವಣೆಗೊಳಿಸಲಾಗಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಗಳನ್ನು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಹಿಂತಿರುಗಿಸಿ ಸರಕಾರ ಆದೇಶಿಸಿದ್ದು, ವರ್ಗಾವಣೆಗೊಂಡಿರುವ ಪೊಲೀಸ್ ಅಧಿಕಾರಿಗಳು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರದಿಂದ ಸೂಚಿಸಲಾಗಿದೆ.
ಬೆಂಗಳೂರು: ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಗೆ ಮತ್ತೆ ಬಿಗ್ ರಿಲೀಫ್ ಸಿಕ್ಕಿದೆ. ಒಸಿಐ ಕಾರ್ಡ್ ಅನ್ನು ರದ್ದುಗೊಳಿಸಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಬೆಂಗಳೂರಿನ ಹೈಕೋರ್ಟ್ ವಿಸ್ತರಣೆ ಮಾಡಿದೆ. ಆ ಮೂಲಕ ಗಡಿಪಾರು ಭೀತಿಯಲ್ಲಿದ್ದ ಚೇತನ್‍ಗೆ ಹೈಕೋರ್ಟ್ ಮತ್ತೆ ರಿಲೀಫ್ ಸಿಕ್ಕಂತಾಗಿದೆ. ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನದ ಆರೋಪ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆ ಕೇಂದ್ರ ಸರಕಾರ ನೋಟಿಸ್ ನೀಡಿ ಉತ್ತರ ಪಡೆದಿತ್ತು. ಆದರೆ ಚೇತನ್ ಅವರಿಂದ ಸಮಾಧಾನಕರ ಉತ್ತರ ಸಿಗದ ಹಿನ್ನೆಲೆ 2018 ರಲ್ಲಿ ನೀಡಿದ್ದ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಅನ್ನು ಕೇಂದ್ರ ಸರಕಾರ ರದ್ದುಗೊಳಿಸಿತ್ತು. ಕೇಂದ್ರ ಸರಕಾರದ ಕ್ರಮದ ವಿರುದ್ಧ ಚೇತನ್ ಅಹಿಂಸಾ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಕೋರ್ಟ್ ಎ.21 ರಂದು ಚೇತನ್‍ಗೆ ಷರತ್ತುಬದ್ಧ ರಿಲೀಫ್ ನೀಡಿತ್ತು. ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಶುಕ್ರವಾರ ಜೂನ್ 20ರ ವರೆಗೆ ವಿಸ್ತರಿಸಿ ಆದೇಶಿಸಿದೆ.
ಬೆಂಗಳೂರು: ಒಡಿಶಾದ ಬಾಲಸೋರ್ ಬಳಿ ಶುಕ್ರವಾರ ಸಂಜೆ ನಡೆದ ಭೀಕರ ರೈಲು ಸರಣಿ ಅಪಘಾತ ಸಂಭವಿಸಿದೆ. ಮೃತಪಟ್ಟವರ ಸಂಖ್ಯೆ 237 ಕ್ಕೆ ಏರಿಕೆಯಾಗಿದೆ. 900 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ ಅದೃಷ್ಟವಶಾತ್, ಯಶವಂತಪುರ-ಹೌರಾ ರೈಲಿನಲ್ಲಿದ್ದ 110 ಕನ್ನಡಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರಿನ ನಿವಾಸಿಗಳಾಗಿರುವ 110 ಕ್ಕೂ ಹೆಚ್ಚು ಕನ್ನಡಿಗರು, ಜೈನ ತೀರ್ಥ ಕ್ಷೇತ್ರವಾದ ಜಾರ್ಖಂಡ್‌ನ ಸಮ್ಮೇದ ಶಿಖರ್ಜಿಗೆ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಹೊರಟಿದ್ದರು. ಬಾಲಸೋರ್‌ನಲ್ಲಿ ಸರಣಿ ಅಪಘಾತದ ವೇಳೆ, ಯಶವಂತಪುರ-ಹೌರಾ ರೈಲಿನ ಕೊನೇಯ ಮೂರು ಬೋಗಿಗಳಿಗೂ ಮತ್ತೊಂದು ಟ್ರೈನ್ ಡಿಕ್ಕಿ ಹೊಡೆದ ಪರಿಣಾಮ, ಈ ಬೋಗಿಗಳು ಕಳಚಿ ಸುಮಾರು ಒಂದುವರೆ ಕಿ.ಮೀ ದೂರಕ್ಕೆ ಉಳಿದಿದೆ. ಈ ಬೋಗಿಗಳಿದ್ದ ಪ್ರಯಾಣಿಕರಲ್ಲಿ ಹಲವರು ಗಾಯಗೊಂಡಿದ್ದಾರೆ, ಮೃತಪಟ್ಟಿದ್ದಾರೆ, ತಕ್ಷಣ ಸ್ಥಳೀಯರೆಲ್ಲ ಓಡಿ ಬಂದು ರಕ್ಷಣೆಗಿಳಿದಿದ್ದಾರೆ ಎಂದು ರೈಲಿನಲ್ಲಿ ಅಪಘಾತದಿಂದ ಬಚಾವಾದ ಕನ್ನಡಿಗರು ವಿವರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ 12-30 ರವೇಳೆಗೆ ಯಶವಂತಪುರ- ಹೌರಾ ರೈಲು ಮತ್ತೆ ಪ್ರಯಾಣ ಮುಂದುವರಿಸಿದೆ ಎಂದು ಅವರು ತಿಳಿಸಿದ್ದಾರೆ.…
ಬೆಂಗಳೂರು: ಒಡಿಶಾ ರೈಲು ಅಪಘಾತದಲ್ಲಿ 50 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಒಡಿಶಾದ ಬಾಲಾಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟ ಸುದ್ದಿ ಕೇಳಿ ಅತೀವ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಗಾಯಗೊಂಡಿರುವವರೆಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ’ ಎಂದು ತಿಳಿಸಿದ್ದಾರೆ. ಇನ್ನೂ ಬಾಲಸೋರ್ ಜಿಲ್ಲೆಯಲ್ಲಿ ಪ್ಯಾಸೆಂಜರ್ ರೈಲು ಹಳಿತಪ್ಪಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 50 ಕ್ಕೂ ಮಂದಿ ಮೃತಪಟ್ಟಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಒಡಿಶಾದ ಬಾಲಸೋರ್(Balasore)ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಬಳಿ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದ್ದು,(Odisha Train Accident) ಮೃತಪಟ್ಟವರ ಸಂಖ್ಯೆ 240ಕ್ಕೆ ಏರಿಕೆಯಾಗಿದೆ. ಇದೀಗ ಘಟನಾ ಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ 50ಕ್ಕೂ ಅಧಿಕ ಜನ ಮೃತಪಟ್ಟಿದ್ದು, ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ. ಮೃತರ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣ-ಪುಟ್ಟ ಗಾಯಾಳುಗಳಿಗೆ 50 ಸಾವಿರ ರೂಪಾಯಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ಬೆಂಗಳೂರು: ಒಡಿಶಾದ ಬಹನಾಗ ನಿಲ್ದಾಣದ ಬಳಿ 3 ರೈಲುಗಳ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ. ಕರ್ನಾಟಕದಿಂದ ಪ್ರಯಾಣ ಬೆಳಸಿದ್ದ ಕನ್ನಡಿಗರು ಸೇಫ್ ಆಗಿದ್ದು, ಘಟನಾ ಸ್ಥಳಕ್ಕೆ ರಾಜ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.