Author: Prajatv Kannada

ದಕ್ಷಿಣ ಭಾರತದ ಖ್ಯಾತ ನಟ, ಸೂಪರ್ ಸ್ಟಾರ್ ಕಮಲ್ ಹಾಸನ್ ಯಾವುದೇ ಪಾತ್ರಕ್ಕೂ ಹೊಂದುವಂತ ಕಲಾವಿದ. ಹಾಸ್ಯ, ಗಂಭೀರ, ನಾಯಕ, ಖಳನಾಯಕ ಹೀಗೆ ಎಲ್ಲಾ ರೀತಿಯ ಪಾತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟಿ. ಇದೀಗ ನಟ ಕಮಲ್ ಹಾಸನ್ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಮುಂದೆ ವಿಲನ್ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಪ್ರಭಾಸ್ ಹಾಗೂ ದೀಪಿಕಾ ಪಡಕೋಣೆ ನಟನೆಯ ‘ಪ್ರಾಜೆಕ್ಟ್ ಕೆ’ ಚಿತ್ರ ಸಾಕಷ್ಟ ನಿರೀಕ್ಷೆ ಮೂಡಿಸಿದೆ. ಇದೀಗ ಚಿತ್ರತಂಡಕ್ಕೆ ನಟ ಕಮಲ್ ಹಾಸನ್ ಎಂಟ್ರಿಕೊಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ಪ್ರಭಾಸ್ ಮುಂದೆ ಕಮಲ್ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪ್ರಾಜೆಕ್ಟ್ ಕೆ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪ್ರಭಾಸ್, ದೀಪಿಕಾ ಜೊತೆ ಬಾಲಿವುಡ್ ಸ್ಟಾರ್ ನಟ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಬಿಗ್ ಬಿ ಬೆನ್ನಲ್ಲೇ ಇದೀಗ ನಟ ಕಮಲ್ ಹಾಸನ್ ಕೂಡ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಪ್ರಾಜೆಕ್ಟ್ ಕೆ’…

Read More

ಸ್ಯಾನ್ ಫ್ರಾನ್ಸಿಸ್ಕೋ: ಭಾರತದಲ್ಲಿ 1980ರ ದಶಕದಲ್ಲಿ ದಲಿತರು ಎದುರಿಸಿದ್ದ ಪರಿಸ್ಥಿತಿಯನ್ನು ಇಂದು ಮುಸ್ಲಿಮರು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಅಭಿಮಾನದಿಂದ ಹೋರಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ‘ಮೊಹಬ್ಬತ್ ಕಿ ದುಕಾನ್’ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೆಲವು ಕ್ರಮಗಳು ಅಲ್ಪಸಂಖ್ಯಾತರು, ದಲಿತ ಮತ್ತು ಬುಡಕಟ್ಟು ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು. “ಕೇಂದ್ರದ ಕ್ರಮಗಳು ಮುಸ್ಲಿಮರ ಮೇಲೆ ನೇರವಾಗಿ ಪರಿಣಾಮ ಬೀರುತ್ತಿವೆ. ಆದರೆ ವಾಸ್ತವವಾಗಿ, ಇದನ್ನು ಎಲ್ಲಾ ಸಮುದಾಯಗಳಿಗೆ ಮಾಡಲಾಗುತ್ತಿದೆ. ನೀವು(ಮುಸ್ಲಿಮರು) ಹೇಗೆ ದಾಳಿಗೆ ಒಳಗಾಗುತ್ತೀರಿ, ಹಾಗೆಯೇ ಸಿಖ್ಖರು, ಕ್ರಿಶ್ಚಿಯನ್ನರು, ದಲಿತರು ಮತ್ತು ಬುಡಕಟ್ಟು ಜನಾಂಗದವರೂ ದಾಳಿ ಒಳಗಾಗುತ್ತಿದದಾರೆ. ಆದರೆ ನೀವು ದ್ವೇಷದಿಂದ ದ್ವೇಷವನ್ನು ಕತ್ತರಿಸಲು ಸಾಧ್ಯವಿಲ್ಲ. ಪ್ರೀತಿ ಮತ್ತು ವಾತ್ಸಲ್ಯದಿಂದ ಮಾತ್ರ ಸಾಧ್ಯ” ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಇಂದು ಭಾರತದಲ್ಲಿ ಮುಸ್ಲಿಮರಿಗೆ ಏನಾಗುತ್ತಿದೆಯೋ ಅದನ್ನು 1980 ರ ದಶಕದಲ್ಲಿ ದಲಿತರು ಅನುಭವಿಸಿದ್ದಾರೆ.…

Read More

ಸ್ಟ್ಯಾನ್‌ಫೋರ್ಡ್: ರಾಜಕೀಯಕ್ಕೆ ಸೇರಿದಾಗ ನಾನು ಲೋಕಸಭೆಯಿಂದ ಅನರ್ಹಗೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಈ ಅನರ್ಹತೆ ನನಗೆ ಜನರ ಸೇವೆ ಮಾಡಲು ದೊಡ್ಡ ಅವಕಾಶ ನೀಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರವಾಗಿ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. 2000ನೇ ಇಸವಿಯಲ್ಲಿ ನಾನು ರಾಜಕೀಯಕ್ಕೆ ಬಂದಾಗ ಈ ರೀತಿ ಆಗಬಹುದೆಂದು ಊಹಿಸಿರಲಿಲ್ಲ. ನಾನು ರಾಜಕೀಯ ಪ್ರವೇಶಿಸಿದಾಗ ಅಂದುಕೊಂಡಿದ್ದಕ್ಕೆ ವಿರುದ್ಧವಾಗಿ ಈಗ ನಡೆಯುತ್ತಿದೆ. ನಾನು ಲೋಕಸಭೆಯಿಂದ ಅನರ್ಹಗೊಳ್ಳಬಹುದು ಎಂದು ಯಾವತ್ತೂ ಊಹಿಸಿರಲಿಲ್ಲ. ಆದರೆ ಅದು ನಿಜವಾಗಿ ನನಗೆ ಒಂದು ದೊಡ್ಡ ಅವಕಾಶವನ್ನು ನೀಡಿದೆ ಎಂದು ಭಾವಿಸುತ್ತೇನೆ. ಬಹುಶಃ ನನಗೆ ಸಿಗುವ ಅವಕಾಶಕ್ಕಿಂತ ದೊಡ್ಡದಾಗಿದೆ. ಅದು ರಾಜಕೀಯ ಕೆಲಸ ಮಾಡುವ ವಿಧಾನವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆರು ತಿಂಗಳ ಹಿಂದೆ ನಿಜವಾದ ನಾಟಕ ಆರಂಭವಾಯಿತು ಎಂದು ನಾನು ಭಾವಿಸುತ್ತೇನೆ. ಇಡೀ ಪ್ರತಿಪಕ್ಷಗಳೇ ಪ್ರಭುತ್ವದ ವಿರುದ್ಧ ಹೋರಾಡಲು…

Read More

ಇಸ್ಲಮಾಬಾದ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಜೂನ್ 19ರವರೆಗೆ ಜಾಮೀನು ಮಂಜೂರುಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನ ಇಮ್ರಾನ್, ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಇಸ್ಲಮಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಕೋರ್ಟ್‌ಗೆ ಹಾಜರಾಗಿದ್ದರು. ಜಾಮೀನು ಅವಧಿ 3 ದಿನ ವಿಸ್ತರಿಸಿದ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ದಳದ ಎದುರು ಹಾಜರಾಗಿ ಜಾಮೀನು ಪಡೆಯುವಂತೆ ಸಲಹೆ ನೀಡಿತ್ತು. ಅದರಂತೆ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದಲ್ಲಿ ಇಮ್ರಾನ್ ಹಾಜರಾಗಿದ್ದರು. ಇದೀಗ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಜೂನ್ 19ರವರೆಗೆ ಜಾಮೀನು ಮಂಜೂರು ಮಾಡಿದೆ.

Read More

ಇಸ್ಲಾಮಾಬಾದ್: 2008 ರಲ್ಲಿ ನಡೆದ ಮುಂಬೈ ಉಗ್ರ ದಾಳಿಯಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡಿದ್ದ ಎಲ್‌ಇಟಿ ಭಯೋತ್ಪಾದಕ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ. ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ವಿಶ್ವಸಂಸ್ಥೆಯಿಂದ ನಿರ್ಬಂಧ ಎದುರಿಸುತ್ತಿದ್ದ ಭಯೋತ್ಪಾದಕನಾಗಿದ್ದು, ಭಯೋತ್ಪಾದಕರಿಗೆ ಆರ್ಥಿಕ ನೆರವು ಒದಗಿಸಿದ್ದ ಆರೋಪದಡಿ ಹಫೀಜ್ ಅಬ್ದುಲ್ ಸಲಾಮ್ ಭುಟ್ಟಾವಿ ಪಾಕ್ ನ ಪಂಜಾಬ್ ಪ್ರಾಂತ್ಯದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ. ಪಂಜಾಬ್ ನ ಮುರಿಡ್ಕೆಯಲ್ಲಿ ಎಲ್ಇಟಿ ಪ್ರಧಾನ ಕಚೇರಿಯನ್ನು ಸ್ಥಾಪಿಸಿದ ಭುಟ್ಟವಿ, ಕಾನೂನುಬಾಹಿರವಾಗಿ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಮತ್ತು ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ಗೆ ಉಪನಾಯಕರಾಗಿದ್ದ. ಜೆಯುಡಿ ಎಲ್ಇಟಿಯ ಪ್ರಮುಖ ಸಂಘಟನೆಯಾಗಿದೆ. “77 ವರ್ಷದ ಭುಟ್ಟವಿ, ಭಯೋತ್ಪಾದನೆ ಹಣಕಾಸು ಪ್ರಕರಣದಲ್ಲಿ ಅಕ್ಟೋಬರ್ 2019 ರಿಂದ ಲಾಹೋರ್ನಿಂದ 60 ಕಿಮೀ ದೂರದಲ್ಲಿರುವ ಜಿಲ್ಲಾ ಜೈಲು ಶೇಖುಪುರದಲ್ಲಿ ಬಂಧಿಸಲ್ಪಟ್ಟಿದ್ದು ಇದೀಗ ಬಂಧನಕ್ಕೆ ಒಳಗಾದ ನಾಲ್ಕು ವರ್ಷಗಳ ಬಳಿಕ ಪಾಕ್ ಜೈಲಿನಲ್ಲಿ ಸಾವನ್ನಪ್ಪಿದ್ದಾನೆ.

Read More

ನವದೆಹಲಿ: ದೆಹಲಿ ಪೊಲೀಸರು ತನಿಖೆಯನ್ನು ಮುಗಿಸುವವರೆಗೆ ಕುಸ್ತಿಪಟುಗಳು (Wrestlers Protest)ಕಾಯಬೇಕು. ಅದೇ ವೇಳೆ ಅವರಿಗೇ ಹಾನಿಯುಂಟು ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur) ಹೇಳಿದ್ದಾರೆ. ಕುಸ್ತಿಪಟುಗಳು ದೆಹಲಿ ಪೊಲೀಸರು (Delhi Police) ತಮ್ಮ ತನಿಖೆಯನ್ನು ಮುಗಿಸುವವರೆಗೆ ಕಾಯಬೇಕು. ಕ್ರೀಡೆ ಅಥವಾ ಮಹತ್ವಾಕಾಂಕ್ಷಿ ಕುಸ್ತಿಪಟುಗಳಿಗೆ ಹಾನಿಯನ್ನುಂಟುಮಾಡುವ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು. ನಾವೆಲ್ಲರೂ ಕ್ರೀಡೆ ಮತ್ತು ಕ್ರೀಡಾಪಟುಗಳ ಪರವಾಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಮೋದಿ ಸರ್ಕಾರದ ಅಡಿಯಲ್ಲಿ ಕ್ರೀಡಾ ಬಜೆಟ್ ಅನ್ನು ₹ 874 ಕೋಟಿಯಿಂದ ₹ 2782 ಕೋಟಿಗೆ ಹೆಚ್ಚಿಸಲಾಗಿದೆ. ಖೇಲೋ ಇಂಡಿಯಾ ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (TOPS) ನಂತಹ ಯೋಜನೆಗಳನ್ನು ಪರಿಚಯಿಸಿ ಅದನ್ನು ತಲುಪುವ ಅವಕಾಶವನ್ನು ಒದಗಿಸಲಾಯಿತು. ಕ್ರೀಡಾಪಟುಗಳಿಗೆ ತರಬೇತಿ ನೀಡಲು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಲಾಗಿದೆ. ರಾಷ್ಟ್ರದಲ್ಲಿ ಸುಮಾರು ₹ 2700 ಕೋಟಿ ವೆಚ್ಚದಲ್ಲಿ 300 ಮಹತ್ವದ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.

Read More

ಮುಂದಿನ ಲೋಕಸಭಾ, ವಿಧಾನಸಭಾ ಚನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಕರ್ನಾಟಕದ ತಂತ್ರವೇ ನಮಗೆ ಮಾದರಿ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನ ಸಮರ್ಪಕ ಜಾರಿಗೆ ನಿರ್ಧಾರ ಮಾಡಲಾಗಿದೆ, ಈ ಮೂಲಕ ಲೋಕಾಸಭಾ ಚುನಾವಣೆಗೂ ಮುನ್ನ ರಾಜಕೀಯ ಆಡಳಿತದ ಮಾಡಲ್ ಸೃಷ್ಠಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಬಿಜೆಪಿಯ ಗುಜರಾತ್ , ಉತ್ತರ ಪ್ರದೇಶ್ ಮಾಡೆಲ್‌ಗೆ ಬದಲಾಗಿ, ಕರ್ನಾಟಕ ಮಾಡೆಲ್‌ ರಚನೆಗೆ ಚಿಂತನೆ ನಡೆದಿದೆ. ಉತ್ತಮ ಆಡಳಿತ ಜೊತೆ ಜೊತೆಗೆ ಸಮಾಜಿಕ ನ್ಯಾಯದ ಪರಿಕಲ್ಪನೆಯೂ ಇದೆ, ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಪರ ಸರ್ಕಾರ ಎಂಬ ಸಂದೇಶ ರವಾನಿಸಲು ಕಾಂಗ್ರೆಸ್ ಮುಂದಾಗಿದೆ. ಗ್ಯಾರಂಟಿ ಯೋಜನೆ ಜಾರಿ ಮೂಲಕ ಹೊಸದೊಂದು ಮಾದರಿ ಸೃಷ್ಟಿ ಮಾಡಲಾಗಿದೆ, ಈ ಮೂಲಕ ದೇಶದ ಇತರೆ ರಾಜ್ಯಗಳಿಗೆ ಸಂದೇಶ ರವಾನೆಗೆ ಯತ್ನಿಸಲಾಗುತ್ತಿದೆ. ಅಮೆರಿಕದ ಸಾಂತಾ ಕ್ಲಾರಾದ ಕ್ಯಾಲಿಫೋರ್ನಿಯಾ ವಿವಿ ಕ್ಯಾಂಪಸ್‌ನಲ್ಲಿ ನಡೆದ ಸಮಾರಂಭದಲ್ಲಿ ಸಭಿಕರೊಂದಿಗೆ ಸಂವಾದ ನಡೆಸಿದ ಗಾಂಧಿ, ಬಿಜೆಪಿಯಲ್ಲಿನ ದೌರ್ಬಲ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಒಬ್ಬ ರಾಜಕೀಯ…

Read More

ಮಂಡ್ಯ :- ರಾಜ್ಯ ಸರ್ಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ದಲಿತ ಮುಖಂಡ ಮರಳಿಗ ಶಿವರಾಜ್ ನನ್ನು ಮದ್ದೂರು ಪೋಲೀಸರು ಗುರುವಾರ ಬಂಧಿಸಿದ್ದಾರೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಅಧ್ಯಕ್ಷ ಕೆ.ದೊರೆಸ್ವಾಮಿ ನೀಡಿದ ದೂರಿನ್ವನಯ ಪೋಲೀಸರು ಮರಳಿಗ ಶಿವರಾಜ್ ವಿರುದ್ಧ ಐಪಿಸಿ ಸೆಕ್ಷನ್ 153 ರ ಅನ್ವಯ ಪ್ರಟರಣ ದಾಖಲು ಮಾಡಿಕೊಂಡಿದ್ದಾರೆ. ಆರೋಪಿ ಮರಳಿಗ ಶಿವರಾಜ್ ಕಳೆದ ಮೇ.30 ರಂದು ಗೃಹ ಸಚಿವ ಜಿ.ಪರಮೇಶ್ವರ್ ಒಬ್ಬ ಅಯೋಗ್ಯ, ಸ್ವಂತ ಮಗನನ್ನು ಉಳಿಸಿಕೊಳ್ಳಲಾಗಲಿಲ್ಲ. ಈತ ಅಂಬೇಡ್ಕರ್ ಅವರ ಆಶಯಗಳನ್ನು ಉಳಿಸಲಿಲ್ಲ. ಆರ್.ಎಸ್.ಎಸ್ ನವರ ಜೊತೆ ನಂಟು ಹೊಂದಿದ್ದಾರೆ. ಇವರ ಬಗ್ಗೆ ತಾಕತ್ ಇದ್ದವರು ಉತ್ತರಿಸಲಿ ಎಂದು ಜಾಲತಾಣದಲ್ಲಿ ಅವಹೇಳನವಾಗಿ ಪೋಸ್ಟ್ ನಿಂದಿಸಿದ್ದಾರೆ ಎಂದು ದೂರುದಾರ ದೊರೆಸ್ವಾಮಿ ದಾಖಲೆ ಸಮೇತ ಪೋಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಬಲಗೈ ಬಣದವರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ.…

Read More

ಕಾಂಗ್ರೆಸ್ ಸುಳ್ಳುಗಾರರು, ಮೋಸಗಾರರ ಪಾರ್ಟಿ ಎಂದು ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಕಟೀಲು ವಾಗ್ದಾಳಿ ನಡೆಸಿದರು. ಚುನಾವಣೆ ವೇಳೆ ಕಾಂಗ್ರೆಸ್​​ನವರು ಗ್ಯಾರಂಟಿ ಘೋಷನೆ ಮಾಡಿದ್ದರು. ಅಧಿಕಾರಕ್ಕೆ ಬಂದು 20 ದಿನಗಳಾದರೂ ಗ್ಯಾರಂಟಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಜನರನ್ನು ಮೂರ್ಖರನ್ನಾಗಿ ಮಾಡಿದೆ, ಕ್ಷಮೆ ಕೇಳಲಿ. ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ, ಬಸ್​​ಗಳಲ್ಲಿ ಟಿಕೆಟ್ ಪಡೆಯುತ್ತಿಲ್ಲ. ಅಡ್ಡ ದಾರಿಯಲ್ಲಿ ಕಾಂಗ್ರೆಸ್ ಅಧಿಕಾರ ಬಂದಿದೆ. ಮೋದಿ ಎಲ್ಲೂ $15 ಲಕ್ಷ ಕೊಡುವ ಗ್ಯಾರಂಟಿ ಕಾರ್ಡ್ ಕೊಟ್ಟಿಲ್ಲ. ಕಪ್ಪು ಹಣ ತಂದರೆ 15 ಲಕ್ಷ ರೂ. ಕೊಡ್ತೇವೆ ಅಂತಷ್ಟೇ ಹೇಳಿದ್ದಾರೆ. ಗ್ಯಾರಂಟಿ ಜಾರಿ ಮಾಡದಿದ್ರೆ BJP ಹೋರಾಟ ಮಾಡಲಿದೆ ಎಂದರು.

Read More

ಗಂಗಾವತಿ: ಗಂಗಾವತಿ ನಗರದ ಶಾಸಕರ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ನೂತನ ಶಾಸಕ ಜನಾರ್ಧನ್ ರೆಡ್ಡಿ ಅವರು ಆ ಶಾಲೆ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಗಂಗಾವತಿ ಪೌರ ಆಯುಕ್ತರು ವಿರುಪಾಕ್ಷಿ ಮೂರ್ತಿ ಹಾಗೂ ಆ ಶಾಲೆಯ ಮುಖ್ಯ ಗುರುಗಳು ಆ ಶಾಲೆ ಎಲ್ಲಾ ಸಿಬ್ಬಂದಿಗಳು ಹಾಗೂ ಗಂಗಾವತಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು

Read More