ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ ಮಳೆ (Rain in Ramanagar) ಅಬ್ಬರಕ್ಕೆ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿವೆ. ಧಾರಾಕಾರ ಮಳೆ ಹಾಗೂ ಸಿಡಿಲ ಬಡಿತಕ್ಕೆ ಮನೆಗಳು ಜಖಂ ಆಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಗುಡುಗು-ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಗೆ ಕನ್ನಮಂಗಲ ಗ್ರಾಮದ ಕುಮಾರ್, ನರಸಿಂಹಯ್ಯ, ರಾಜರಯ್ಯ ಎಂಬುವವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಸಿಡಿಲ ಬಡಿತಕ್ಕೆ ಕಟ್ಟಡದ ಮೇಲ್ಭಾಗಕ್ಕೆ ಹಾನಿಯಾಗಿದ್ದು ಮತ್ತೆರಡು ಮನೆಯ ಹೆಂಚುಗಳು ಪುಡಿಪುಡಿಯಾಗಿವೆ. ಇನ್ನೂ ಸಿಡಿಲಿನ ತೀವ್ರತೆಗೆ ಮನೆಯ ದಿನಬಳಕೆ ವಸ್ತುಗಳಿಗೂ ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ನಿವಾಸಿಗಳ ಮನವಿ ಮಾಡಿದ್ದಾರೆ.
Author: Prajatv Kannada
ಗಂಗಾವತಿ :- ಹಿಟ್ & ರನ್ ಅಪಘಾತಕ್ಕೆ ಒಳಗಾಗಿ ರಸ್ತೆ ಮೇಲೆ ಬಿದ್ದು ನರಳುತ್ತಿದ್ದ ಗಾಯಾಳುವನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಜರುಗಿದೆ. ಗಂಗಾವತಿ ನಗರದ ಕಾರಟಗಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಬೈಕ್ ಮೇಲೆ ತೆರಳುತಿದ್ದ ಸವಾರನಿಗೆ ಅಪರಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ ಸವಾರ ರಸ್ತೆ ಮೇಲೆ ಬಿದ್ದು ನರಳುತಿದ್ದ ವ್ಯಕ್ತಿಗಳನ್ನು ಗಮನಿಸಿದ ಶಾಸಕರು ತಕ್ಷಣ ತಮ್ಮ ವಾಹನದಲ್ಲಿ ಗಂಗಾವತಿ ಆಸ್ಪತ್ರೆಗೆ ಕಳುಹಿಸಿ ಮಾನವೀಯತೆಯನ್ನು ಮೆರೆದರು.
ಚಾಮರಾಜನಗರ: ತಾಲೂಕಿನ ಭೋಗಾಪುರ -ಮೂಕಳ್ಳಿ ಗ್ರಾಮದ ಬಳಿ ಜೆಟ್ ವಿಮಾನ ಪತನವಾಗಿದೆ. ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್ಗಳು ವಿಮಾನದಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಗ್ರಾಮದ ಮುಖ್ಯರಸ್ತೆಯ ಸಮೀಪದ ಖಾಲಿ ಜಮೀನಿನಲ್ಲಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿದ್ದು, ವಿಮಾನ ಸುಟ್ಟು ಕರಕಲಾಗಿದೆ. ವಿಮಾನದಲ್ಲಿ ಇದ್ದ ಇಬ್ಬರು ಪೈಲಟ್ಗಳು ಪ್ಯಾರಾಚೂಟ್ ಮೂಲಕ ಪಾರಾಗಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಲಘು ವಿಮಾನ ಅಪಘಾತವನ್ನು ಹಲವರು ಪ್ರತ್ಯಕ್ಷವಾಗಿ ನೋಡಿದ್ದು, ಕ್ಷಣಮಾತ್ರದಲ್ಲಿ ವಿಮಾನ ಮೇಲಿನಿಂದ ಕೆಳಕ್ಕೆ ಬಿದ್ದು ಸ್ವಲ್ಪ ಸಮಯದಲ್ಲೇ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಕುದೇರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ತಾಜುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದ್ರೆ ವಿಮಾನ ಎಲ್ಲಿಯದ್ದು? ಪ್ಯಾರಾಚೂಟ್ನಿಂದ ಬಳಸಿ ಹೊರ ಬಂದಿರುವ ಪೈಲಟ್ಗಳು ಯಾರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದಾವಣಗೆರೆ: ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿ (Honnali) ಕ್ಷೇತ್ರದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ (M.P.Renukacharya) ಗ್ಯಾರಂಟಿ ಕಾರ್ಡ್ ವಿರುದ್ಧ ಅಭಿಯಾನ ಮಾಡುವುದರ ಜೊತೆಗೆ ಮಕ್ಕಳೊಂದಿಗೆ ಕ್ರಿಕೆಟ್ (Cricket) ಆಡಿದ್ದಾರೆ.ನಿತ್ಯ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ತನ್ನ ಅವಧಿಯಲ್ಲಿ ಮಾಡಿದ ಕಾಮಗಾರಿಗಳನ್ನು ವೀಕ್ಷಣೆ ಮಾಡುತ್ತಿದ್ದು, ಕಂಕನಹಳ್ಳಿ ಹಾಗೂ ಕೊಡಚಗೊಂಡನಹಳ್ಳಿ ಗ್ರಾಮದ ಯುವಕರ ಜೊತೆ ಕ್ರಿಕೆಟ್ ಆಡಿದ್ದಾರೆ.ಹಾಲಿ ಶಾಸಕ ಸನ್ಮಾನಕ್ಕೆ ಮಾತ್ರ ಸೀಮಿತವಾದರೆ ಇತ್ತ ರೇಣುಕಾಚಾರ್ಯ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದಾರೆ. ಹಾಲಿ ಶಾಸಕ ಶಾಂತನಗೌಡ (Shanthanagowda) ಅವರ ಬದಲು ಅವರ ಪುತ್ರ ಕ್ಷೇತ್ರ ಸುತ್ತಾಟ ನಡೆಸುತ್ತಿದ್ದು, ಮಳೆ ಹಾನಿ ಪ್ರದೇಶ, ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ ರೇಣುಕಾಚಾರ್ಯ ತಾನೇ ಇನ್ನೂ ಶಾಸಕ ಎನ್ನುವ ಭ್ರಮೆಯಲ್ಲಿ ಕ್ಷೇತ್ರ ಸುತ್ತುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬೆಂಗಳೂರು: ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕರ್ನಾಟಕ ಚುನಾವಣೆ ಹಿನ್ನಲೆ ವರ್ಗಾವಣೆಗೊಂಡಿದ್ದ ಅಧಿಕಾರಿಗಳನ್ನಇವತ್ತು ಮತ್ತೆ ಅದೇ ಸ್ಥಳಕ್ಕೆ ಮರುನೇಮಕ ಮಾಡಿ ಎಂದು ರಾಜ್ಯ ಸರ್ಕಾರ ಆದೇಶ ನೀಡಿದೆ. ಐಪಿಎಸ್ ಅಧಿಕಾರಿಗಳಾದ ಗಿರೀಶ್ ಐಪಿಎಸ್ , ವೈಟ್ ಫೀಲ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಿ ಹಾಗೆ ಧರ್ಮೇಂದ್ರ ಕುಮಾರ್ ಮೀನಾ, ವಿಧಿವಿಜ್ಞಾನಪ್ರಯೋಗಾಲಯ ನಿರ್ದೇಶಕರಾಗಿ ನೇಮಕ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಡಿಕೆ ಶಿವಕುಮಾರ್ ಫುಲ್ ಆಕ್ಟೀವ್ ಆಗಿದ್ದಾರೆ. ಇಂದು ಬೆಂಗಳೂರು ಪಾಲಿಕೆ ಮಾಜಿ ಮೇಯರ್ಗಳ ಜೊತೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ . ಯಾವ ರೀತಿ ಅಭಿವೃದ್ಧಿ ಮಾಡಬಹುದು ಅಂತಾ ಸಲಹೆ ಕೇಳಿದ್ದೇನೆ. ರಿಂಗ್‌ರೋಡ್‌ಗಳಲ್ಲಿ ರಸ್ತೆ ಬದಿ, ಕೆರೆಗಳಲ್ಲಿ ಕಸ ಎಸೆಯುತ್ತಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಸಲಹೆಗಳನ್ನು ಕೇಳಿದ್ದಾರೆ ಎಂದು ಹೇಳಿದರು. ಬಳಿಕ ಮಾತನಾಡಿದ ಡಿಕೆಶಿ, ” ಬೆಂಗಳೂರು ಅಭಿವೃದ್ಧಿಗಾಗಿ ಹೇಗೆ ಹಣ ಸಂಗ್ರಹ ಮಾಡಬಹುದು. ಎಲ್ಲಿ ನ್ಯೂನ್ಯತೆಗಳಿವೆ, ತ್ಯಾಜ್ಯ ನಿರ್ವಹಣೆ, ರಸ್ತೆಗಳಲ್ಲಿ ಕಸ ಹಾಕುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೇವೆ.ಇದನ್ನು ಹೇಗೆ ತಡೆಯಬಹುದು ಎಂದು ಸಲಹೆ ಪಡೆದಿದ್ದು, ಕಸದ ವಾಹನ ಟ್ರ್ಯಾಕ್ ಮಾಡುವುದು, ಕಸವನ್ನು ಎಲ್ಲೆದರಲ್ಲಿ ಎಸೆಯುವ ವಾಹನಗಳಿಗೆ ಯಾವ ರೀತಿ ದಂಡ ವಿಧಿಸಬೇಕು, ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇನೆ. ಸದಸ್ಯದಲ್ಲೇ ಇದನ್ನು ನಿಯಂತ್ರಿಸಲು ಯಾವ ಸೂಚನೆ ನೀಡಬೇಕು ಎಂದು ಅಧಿಕಾರಿಗಳ ಜತೆ ಸಭೆ ಮಾಡಿ ತೀರ್ಮಾನಿಸುತ್ತೇನೆ ” ಎಂದರು.
ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬೆಂಗಳೂರು ಮಹಾನಗರದ ಎಲ್ಲಾ 28 ಕ್ಷೇತ್ರಗಳ ಪ್ರಮುಖ ಮುಖಂಡರ ಜತೆ ಗುರುವಾರ ಮಹತ್ವದ ಸಮಾಲೋಚನೆ ನಡೆಸಿದರು. ಬಿಡದಿಯ ತೋಟದಲ್ಲಿ ಕರೆದಿದ್ದ ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಪಾಲಿಕೆ ಚುನಾವಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಅವರು ಮುಖಂಡರಿಗೆ ಕೆಲ ಗಂಭೀರ ಸೂಚನೆಗಳನ್ನು ನೀಡಿದರು. ವಿಧಾನಸಭೆ ಚುನಾವಣೆಯ ಸೋಲಿನ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿಗಳು, ಗುಂಪುಗಾರಿಕೆ ಬೇಡ, ಕೆಲಸ ಮಾಡುವವರಷ್ಟೇ ಬೇಕು, ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಸಹಿಸುವ ಪ್ರಶ್ನೆ ಇಲ್ಲ ಎಂದರು. ಯಾರು ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ, ಪಕ್ಷವನ್ನು ಇನ್ನೂ ಅಧೋಗತಿಗೆ ತಳ್ಳುವುದು ಬೇಡ. ಪಕ್ಷದ ನೆಲೆ ಇರುವ ವಾರ್ಡುಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ. ಜನರ ಸಂಪರ್ಕದಲ್ಲಿರಿ ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಿ. ಪ್ರತಿ ವಾರ್ಡಿನ, ಪ್ರತಿ ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸಿ, ಜನರು ಹೆಚ್ಚೆಚ್ಚು…
ಬೆಂಗಳೂರು: ತಮಿಳುನಾಡಿನಲ್ಲಿ ಇರುವವರು ನಮ್ಮ ಅಣ್ಣತಮ್ಮಂದಿರರೂ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡು ನೀರಿಗಾಗಿ ಜಗಳ ಆಡಿದ್ದು ಸಾಕು. ಮೇಕೆದಾಟು ವಿಚಾರದಲ್ಲಿ ನಾವು ನೀರಿಗೋಸ್ಕರ ನಡೆದಿದ್ದೇವೆ. ತಮಿಳುನಾಡಿಗೆ ಯಾವುದೇ ತರಹದ ಸಮಸ್ಯೆ ಇಲ್ಲ. ನಮ್ಮ ಹೋರಾಟ ಆದ ಮೇಲೆ ಬಜೆಟ್ ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು 1 ಸಾವಿರ ಕೋಟಿ ರೂ. ಮೀಸಲಿಟ್ಟು ಪ್ರಸ್ತಾವನೆ ಮಾಡಿದ್ದಾರೆ. ಅದನ್ನು ಖರ್ಚು ಮಾಡುತ್ತೇವೆ”ಎಂದರು. ನಮಗೇನು ತಮಿಳುನಾಡಿನ ಮೇಲೆ ದ್ವೇಷ ಇಲ್ಲ, ಅವರೊಂದಿಗೆ ಯುದ್ದ ಮಾಡಬೇಕೆಂದಿಲ್ಲ. ಅಲ್ಲಿರುವವರು ನಮ್ಮ ಅಣ್ಣ- ತಮ್ಮಂದಿರು. ಅಲ್ಲಿರುವವರ ಅಣ್ಣ-ತಮ್ಮಂದಿರು ಇಲ್ಲಿದ್ದಾರೆ. ಯಾರ ಮೇಲೂ ದ್ವೇಷ-ಅಸೂಯೆ ಮಾಡಬೇಕಾಗಿಲ್ಲ” ಎಂದರು. ಮೇಕೆದಾಟು ಯೋಜನೆ ನಮ್ಮ ಯೋಜನೆ. ತಮಿಳುನಾಡಿನವರಿಗೂ ಅನುಕೂಲ ಆಗುತ್ತದೆ. ಸಮುದ್ರಕ್ಕೆ ಹೋಗುವಂತಹ ನೀರಿನಿಂದ ಅವರಿಗೂ ಅನುಕೂಲ ಆಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ರೈತರಿಗೆ ನಾವು ಸಾಹಾಯ ಮಾಡಬಹುದು. ಬೀಗ ನಮ್ಮ ಹತ್ತಿರ ಇಲ್ಲ, ಕೇಂದ್ರ ಸರಕಾರದ ಹತ್ತಿರ ಇದೆ.ಎಷ್ಟು…
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಿತ ಆಂಬರ್ ಗ್ರಿಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ತಮಿಳುನಾಡಿನ ಮೂಲದವರು ಎಂದು ಗುರುತಿಸಲಾಗಿದೆ. ಬಂಧಿತರು ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನಿಷೇಧಿತ ಆಂಬರ್ ಗ್ರಿಸ್ ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಬಂಧಿತರಿಂದ ಕೋಟ್ಯಾಂತರ ರೂ ಬೆಲೆಬಾಳುವ ಸುಮಾರು 6.5 ಕೆ.ಜಿ. ತೂಕದ ಆ್ಯಂಬರ್ ಗ್ರಿಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರು ಮಂದಿ ಮನೆ ಮುಂದೆ ಬೈಕ್ ಪಾರ್ಕ್ ಮಾಡುವ ಮುನ್ನ ಎಚ್ಚರ ವಹಿಸುವುದು ಸೂಕ್ತ. ಇಷ್ಟು ದಿನ ಹುಡುಗರು ಶೋಕಿಗಾಗಿ ಬೈಕ್ ಕಳ್ಳತನ ಮಾಡೋದು ಕೇಳಿದ್ವಿ. ಆದ್ರೀಗ ಬೈಕ್ ಕಳ್ಳತನದಲ್ಲಿ ಲೇಡಿ ಗ್ಯಾಂಗ್ ಆ್ಯಕ್ಟೀವ್ ಆಗಿದೆ. ರಾತ್ರಿಯಾಗುತ್ತಿದ್ದಂತೆ ಎಂಟ್ರಿಕೊಡುವ ಈ ಲೇಡಿ ಗ್ಯಾಂಗ್, ಒಬ್ಬಳು ರೋಡ್ ವಾಚ್ ಮಾಡಿದ್ರೆ ಮತ್ತೊಬ್ಬಳು ಬೈಕ್ ಲಾಕ್ ಬ್ರೇಕ್ ಮಾಡ್ತಾಳೆ. ಕ್ಷಣ ಮಾತ್ರದಲ್ಲೇ ಹ್ಯಾಂಡ್ ಲಾಕ್ ಮುರಿದು ಬೈಕ್ ಗಳನ್ನು ಕದ್ದು ಎಸ್ಕೇಪ್ ಆಗುತ್ತಾರೆ. ಈ ಲೇಡಿ ಗ್ಯಾಂಗ್ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಲೇಡಿ ಗ್ಯಾಂಗ್ ಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ. ನಗರದ ಬಾಬುಸಪಾಳ್ಯದಲ್ಲಿ ಕಳೆದ ವಾರ ಕೂಡ ಸ್ಕೂಟರ್ ಕದ್ದು ಕಳ್ಳರು ಎಸ್ಕೆಎಫ್ ಆಗಿದ್ದರು. ಅದೇ ರೀತಿ ನಾಗವಾರ, ವೈಯಲಿಕಾವಲ್ ಎಚ್‌ಬಿಸಿಎಸ್ ಲೇಔಟ್, ಇಂದಿರಾ ಕ್ಯಾಂಟಿನ್ ಎದುರು ಬೈಕ್ ಕಳ್ಳತನ ಮಾಡಿದರು. ನಾಗವಾರದಲ್ಲಿ 26 ತಾರೀಖು ಬೈಕ್ ಕಳ್ಳತನ ಮಾಡುವ…