ಬೆಂಗಳೂರು: ಕಾಂಗ್ರೆಸ್ 5 ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಹಾಕಲಾಗುವುದು ಎಂದಿದ್ದ ಸರ್ಕಾರ. ನಾಳೆಯಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಿದೆ. ಇದಕ್ಕೆ ನಾಳೆ(ಜು.10) ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ 2023-24ನೇ ಸಾಲಿನ ಬಜೆಟ್ ಮಂಡನೆಯನ್ನ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಾರಿ ಬಜೆಟ್ ಮಂಡನೆ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ನಾಳೆಯಿಂದ ‘ಅನ್ನಭಾಗ್ಯ’ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿ ಬದಲು ಹಣ ಜಮೆ ಮಾಡಲು ಸಿಎಂ ಚಾಲನೆ ನೀಡಲಿದ್ದಾರೆ
Author: Prajatv Kannada
ಬೆಂಗಳೂರು: ಬೆಂಗಳೂರಿನ 2 ಸ್ಥಳಗಳಿಗೆ ಡಿಕೆ ಶಿವಕುಮಾರ್ ಸರ್ಪ್ರೈಸ್ ವಿಸಿಟ್ ಮಾಡಲಿದ್ದು, ರಸ್ತೆಯಲ್ಲಿ ತೆರೆಳುವ ವೇಳೆ ಬೆಂಗಾವಲು ವಾಹನ ದಾರಿ ತಪ್ಪಿದ ಘಟನೆ ನಡೆದಿದೆ. ಡಿಕೆಸಿ ವಾಹನ ಬಿಟ್ಟು ಮುಂದೆ ಹೋಗಿದ್ದು, ಬಳಿಕ ತಿರುವು ತೆಗೆದುಕೊಂಡು ಬಂದಿದೆ. ಅಲ್ಲಿಯವರೆಗೆ ಮಾರ್ಗ ಮಧ್ಯೆ ಡಿಕೆ ಶಿವಕುಮಾರ್ ವಾಹನ ನಿಲ್ಲಿಸಿದ್ದಾರೆ. Annabhagya Scheme: ನಾಳೆಯಿಂದ ಅನ್ನಭಾಗ್ಯ ಫಲಾನುಭವಿಗಳ ಖಾತೆಗೆ ಹಣ ಜಮೆ ಹಾಗೆ ಇಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನ 2 ಸ್ಥಳಗಳಿಗೆ ಸರ್ಪ್ರೈಸ್ ವಿಸಿಟ್ ನೀಡಲಿದ್ದಾರೆ. ಹೌದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಕೆಶಿ, ಕನ್ನಹಳ್ಳಿ ಮತ್ತು ಸೀಗೆಹಳ್ಳಿ ಕಸದ ಘಟಕಗಳಿಗೆ ತೆರಳುವ ಸಾಧ್ಯತೆಯಿದೆ. HDK Pendrive Bomb: ಹೆಚ್‌ಡಿಕೆ ಪೆನ್‌ಡ್ರೈವ್ ಬ್ರಹ್ಮಾಸ್ತ್ರ: ಸೋಮವಾರ ವಿಧಾನಸಭೆಯಲ್ಲಿ ಸ್ಫೋಟವಾಗಲಿದೆಯಾ? ಈ ಮಧ್ಯೆ ದಾಸರಹಳ್ಳಿ ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಸಾರ್ವಜನಿಕರೊಟ್ಟಿಗೆ ಆಹಾರದ ರುಚಿ ಬಗ್ಗೆ ಮಾಹಿತಿ ಪಡೆಯುತ್ತಾ ಕೇಸರಿಬಾತ್ ಉಪ್ಪಿಟ್ಟು ಸೇವಿಸಿದ್ದಾರೆ.
ಬೆಂಗಳೂರು ;- ಶೀತ, ಕೆಮ್ಮು, ಗಂಟಲು ನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ವಿಶ್ರಾಂತಿಗೆ ಜಾರಿದ್ದಾರೆ. ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿಗಳು ಯಾರನ್ನೂ ಭೇಟಿ ಮಾಡುತ್ತಿಲ್ಲ. ಅವರ ಭೇಟಿಗೆ ಬಂದ ಅಧಿಕಾರಿಗಳು ಮತ್ತು ರಾಜಕಾರಣಿಗಳು ವಾಪಸ್ ಆಗಿದ್ದಾರೆ. ಹವಾಮಾನದಿಂದಾಗಿ ಅವರಿಗೆ ನಿನ್ನೆಯೇ ಶೀತ ಕಾಣಿಸಿಕೊಂಡಿದ್ದು, ಅದನ್ನು ಲೆಕ್ಕಿಸದೇ ಸಿಎಂ ಬಜೆಟ್ಅನ್ನು 2.50 ನಿಮಷಗಳ ಕಾಲ ಓದಿ ಮುಗಿಸಿದ್ದರು. ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಜೆಟ್ಗೆ ಸಂಬಂಧಿಸಿದಂತೆ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಿದ್ದ ಸಿದ್ದರಾಮಯ್ಯ ಅವರು ಬಳಿಕ ತಮ್ಮ ನಿವಾಸಕ್ಕೆ ತೆರಳಿದ್ದರು. ರಾತ್ರಿಯಿಂದ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ.
ಬೆಂಗಳೂರು ;- ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿ ಪೆಟ್ರೋಲ್ ಸುರಿದು ಶವ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಈ ಘಟನೆ ಬೆಳಕಿಗೆ ಬಂದಿತ್ತು, ಆನಂದ್ ಎಂಬಾತನನ್ನು ಕೊಲೆ ಮಾಡಿದ ಆರೋಪಡಿ ಸತೀಶ್, ಪುಟ್ಟ ಹಾಗೂ ದಯಾನಂದ್ ಎಂಬುವರನ್ನು ಬಂಧಿಸಲಾಗಿದೆ. ಈ ಆರೋಪಿಗಳು ಕಳೆದ ಜುಲೈ 2 ರಂದು ಆನಂದ್ನನ್ನು ಹತ್ಯೆ ಮಾಡಿದ್ದರು. ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದ ಬಯಲಿನಲ್ಲಿ ಶವ ಕಂಡುಬಂದಿದ್ದು, ಬೇರೆಡೆ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಕೃತ್ಯಕ್ಕೂ ಮುನ್ನ ಸ್ಥಳದಲ್ಲಿ ಮದ್ಯಪಾನ ಸೇವಿಸಿರುವುದು, ಕಸದ ರಾಶಿಯ ಮೇಲೆ ಶವ ಇರಿಸಿ ಬೆಂಕಿ ಹಚ್ಚಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿತ್ತು. ಪ್ರಕರಣವನ್ನು ಚುರುಕುಗೊಳಿಸಿದ ಪೊಲೀಸರು 1 ವಾರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರು ;– ಜುಲೈ 17ರ ವರೆಗೆ ಯಾವುದೇ ಸಭೆ ನಡೆಸದಂತೆ ಒಕ್ಕಲಿಗರ ಸಂಘಕ್ಕೆ ಬೆಂಗಳೂರಿನ ಹೈಕೋರ್ಟ್ ತಾಕೀತು ಮಾಡಿದೆ. ನ್ಯಾಯಮೂರ್ತಿ ಹೆಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ಪ್ರತಿವಾದಿಗಳಲ್ಲಿ ಒಬ್ಬರಾಗಿರುವ ಕೆಂಚಪ್ಪಗೌಡರ ಪರ ವಕೀಲರು, ಸಂಘದ ಸಭೆ ನಡೆಸುವುದಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶನ ನೀಡಬೇಕು. ಇಲ್ಲವಾದಲ್ಲಿ ರೆಸಾರ್ಟ್ ರಾಜಕಾರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ನ್ಯಾಯಪೀಠಕ್ಕೆ ಕೋರಿದರು. ಪರಿಗಣಿಸಿ ಪೀಠ, ಬಾಲಕೃಷ್ಣ ನೇತೃತ್ವದ ಗುಂಪು 17ರ ವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಹೈಕೋರ್ಟ್ ಮೆಟ್ಟಿಲೇರಿದ ಸದಸ್ಯರನ್ನು ಹೊರತು ಪಡಿಸಿ ಉಳಿದ ಸದಸ್ಯರಿಗೆ ಪೂರ್ವ ನೋಟಿಸ್ ನೀಡಿ ಅವಿಶ್ವಾಸ ನಿರ್ಣಯ ಮಂಡಿಸುವಂತೆ ನಿರ್ದೆಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಬೆಂಗಳೂರು ;- ಕರಾವಳಿ ಕರ್ನಾಟಕ, ಕೊಡಗಿನಲ್ಲಿ ಭಾರೀ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಡಲ ತೀರದ ಬಳಿ ಹೋಗದೇ ಇರುವಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಈ ವಾರವೀಡಿ ಕರಾವಳಿ ಕರ್ನಾಟಕದಲ್ಲಿ ಮಳೆ ಸುರಿದಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಕನಿಷ್ಠ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿ ಹವಾಮಾನ ಇಲಾಖೆ ಆದೇಶ ಹೊರಡಿಸಿತ್ತು. ‘ಜುಲೈ 8 ಮತ್ತು 9 ರಂದು ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಂಭವವಿದೆ’ ಎಂದು ಹವಾಮಾನ ಇಲಾಕೆ ತಿಳಿಸಿದೆ. ಜುಲೈ 9 ರಂದು ಕರ್ನಾಟಕ ಕರಾವಳಿಯಲ್ಲಿ 40-45 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿರುವ ಕೊಡಗಿಗೆ ಶನಿವಾರ ಹಳದಿ ಅಲರ್ಟ್…
ಬೆಂಗಳೂರು ;– ಸಿಎಂ ಸಿದ್ದರಾಮಯ್ಯ ಅವರು ಇಂದು ಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಭಾಗಿಯಾಗಿದರು. ಈ ವೇಳೆ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ರಾಜ್ಯದ ಹಲವು ಕಡೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚಾಗಿದೆ. ನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸಲು ಯತ್ನಿಸುತ್ತಿದ್ದೇವೆ ಎಂದರು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ನಡೆಸಲಾಗುತ್ತದೆ. ಹಂತ ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ, ಆದಷ್ಟು ಬೇಗ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ;- ಗ್ಯಾರಂಟಿ ಅನ್ನಭಾಗ್ಯ ಯೋಜನೆ 5 ಕೆಜಿ ಅಕ್ಕಿ ಬದಲಿಗೆ ಬಿಪಿಎಲ್ ಕಾರ್ಡ್ದಾರರಿಗೆ ಹಣ ನೀಡುವ ಹಿನ್ನಲೆ ಈ ತಿಂಗಳ 10ರ ಸಂಜೆ 05 ಗಂಟೆಗೆ ಹಣ ಹಾಕುವುದಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ. ದೇವನಹಳ್ಳಿಯಲ್ಲಿ ಮಾತನಾಡಿದ ಮುನಿಯಪ್ಪ ‘ನೇರವಾಗಿ ಅವರವರ ಖಾತೆಗಳಿಗೆ 15 ದಿನಗಳಲ್ಲಿ ಹಣ ಹಾಕುತ್ತೇವೆ. ಒಟ್ಟು 1 ಕೋಟಿ 29 ಲಕ್ಷ ಕಾರ್ಡ್ಗಳಿದ್ದು, 4 ಕೋಟಿ 41 ಲಕ್ಷ ಜನರಿಗೆ 800 ಕೋಟಿ ರೂ.ವರೆಗೂ ಹಣ ಬೇಕಾಗಲಿದೆ. ತೆಲಂಗಾಣ ಛತ್ತಿಸ್ಘಡದವರು ಅಕ್ಕಿ ನೀಡಲು ಒಪ್ಪಿದ್ದು ಸಂಪರ್ಕದಲ್ಲಿದ್ದಾರೆ. ಅವರಿಂದ ನಾವು ಅಕ್ಕಿಯನ್ನು ಖರೀದಿ ಮಾಡಿ ಆದಷ್ಟು ಬೇಗ ವಿತರಣೆ ಮಾಡುತ್ತೇವೆ’ ಎಂದಿದ್ದಾರೆ.
ಹುಬ್ಬಳ್ಳಿ ;- ಹಿಟ್ಲರ್ ರೀತಿಯಲ್ಲಿ ಆಡಳಿತ ಮಾಡಲು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿದ್ದಾರೆ ಎಂದು ಸಚಿವ ಪ್ರಹ್ಲಾದ್ ಜೋಶಿ ಗಂಭೀರ ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಟ್ಲರ್ ರೀತಿಯಲ್ಲಿ ಆಡಳಿತ ಮಾಡಲು ತೀರ್ಮಾನ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಭಾರತ ದ್ವೇಷಿ ರಾಹುಲ್ ಗಾಂಧಿ ತರಹ ಮಾತನಾಡುತ್ತಿದ್ದಾರೆ ಎಂದ ಅವರು, ಆಸ್ತಿಕರ ಏರಿಕೆ ಮಾಡಿದ್ದಾರೆ. ಅಬಕಾರಿ ಟಾರ್ಗೆಟ್ ಕೊಟ್ಟಿದ್ದಾರೆ. ಇನ್ನು ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಎನ್‍ಇಪಿಗೆ ಮೊದಲು ಒಪ್ಪಿಗೆ ನೀಡಿತ್ತು. ಆದರೆ ಇವತ್ತು ಕೈ ಬಿಟ್ಟಿದ್ದಾರೆ. ಆದ್ದರಿಂದ ಸಂಪೂರ್ಣ ತುಷ್ಟೀಕರಣ ಬಜೆಟ್ ಮಂಡನೆ ಮಾಡಿದ್ದಾರೆ, ಅಭಿವೃದ್ಧಿ ಪೂರ್ವಕವಲ್ಲ ಎಂದರು. ಮೂಲಭೂತ ಸೌಕರ್ಯಗಳು ನೆಲಕಚ್ಚುವ ಬಜೆಟ್ ಆಗಿದ್ದು, ಶಾಸಕರಿಗೆ ಅನುದಾನ ಕೇಳಬೇಡಿ ಎಂದು ನೇರವಾಗಿ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಯಾವಸ್ಥಿತಿಗೆ ಬಂದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಯುವಶಕ್ತಿಗೆ ನಯಾಪೈಸೆ ಹಣ ಇಟ್ಟಿಲ್ಲ, ಗೃಹಲಕ್ಷ್ಮಿಗೆ ಈಗ ಹಣ ಇಟ್ಟಿದ್ದಾರೆ. ಇನ್ನು ರೈಲ್ವೆ ಯೋಜನೆಗೆ ರಾಜ್ಯದ ಪಾಲಿನ ಅನುದಾನ ಮೀಸಲಿಟ್ಟಿಲ್ಲ. ಇದರ…
ಚಿಕ್ಕಬಳ್ಳಾಪುರ: ಮಾಜಿ ಸಚಿವ ಕೆ. ಸುಧಾಕರ್ ಅವರ ಚಾಲೆಂಜ್ ಅನ್ನು ಶಾಸಕ ಪ್ರದೀಪ್ ಈಶ್ವರ್ ಅವರು ಸ್ವೀಕಾರ ಮಾಡಿ ಮತ್ತೆ ಅವರಿಗೆ ಮತ್ತೊಂದು ಚಾಲೆಂಜ್ ನೀಡಿದ್ದಾರೆ. ಅದು ಏನಂತೀರಾ ನೋಡೋಣ ಬನ್ನಿ.. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಪತ್ರ ವಿಚಾರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸುಳ್ಳು ಅಭಿಯಾನ ಮಾಡಿದ್ದರು ಹಾಗಾಗಿ ಅವರು ಶ್ರೀ ಭೋಗನಂಧೀಶ್ವರ ದೇವಾಲಯಕ್ಕೆ ಬಂದು ದೀಪ ಹಚ್ಚಲಿ ಅಂತ ಮಾಜಿ ಸಚಿವ ಸುಧಾಕರ್ ಸವಾಲು ಹಾಕಿದರು. ಈ ಸವಾಲಿಗೆ ಪ್ರತಿಕರಿಯೆ ನೀಡಿದ ಶಾಸಕ ಪ್ರದೀಪ್ ಈಶ್ವರ್ ನಾನು ಈ ಸವಾಲನ್ನ ಸ್ವೀಕರಿಸುತ್ತೇನೆ ಹಾಗೆ ಅವರು ಕೂಡ ನನ್ನ ಸವಾಲನ್ನ ಸ್ವೀಕರಿಸಲು ರೆಡಿಯಾಗಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ ಅಂತ ದೀಪ ಹಚ್ಚುವಂತೆ ಸವಾಲು ಹಾಕಿದ್ದಾರೆ. ಅವರು ದೀಪ ಹಚ್ಚೋದಾದರೆ ನಾನು ಸಹ ದೀಪ ಹಚ್ಚುತ್ತೇನೆ. ದೀಪದಿಂದ ದೀಪವ ಹಚ್ಚಬೇಕು ಮಾನವ ಅಂತ ಸಾಂಗ್ ಹಾಕಿ ದೀಪ ಹಚ್ಚೋಣ ಎಂದು ವ್ಯಂಗ್ಯ ಮಾಡಿದ್ದಾರೆ.