ಬೆಂಗಳೂರು: ಬೆಂಗಳೂರಿನ ವಸಂತನಗರದ ಅರಸು ಭವನದಲ್ಲಿ ಆಯೋಜಿಸಿರುವ ಸಾಹಿತಿಗಳು, ಲೇಖಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ರಾಜ್ಯದಲ್ಲಿ ಸಾರ್ವಜನಿಕ ಹೂಡಿಕೆ ಪ್ರಮಾಣ ಕಡಿಮೆ ಆಗ್ತಿದೆ? ಈ ಬಗ್ಗೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ, ಸಾರ್ವಜನಿಕ ಹೂಡಿಕೆ ಜಾಸ್ತಿಯಾದ್ರೆ ಕೈಗಾರಿಕೆಗಳು ಬೆಳೆಯುತ್ತವೆ. ಆಗ ಜಿಡಿಪಿ ಸಹ ಹೆಚ್ಚಾಗುತ್ತೆ, ನಾಡಿನ ಅಭಿವೃದ್ಧಿ ಸಹ ಆಗಲಿದೆ. ಯಾವ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಇರುತ್ತೋ, ಅಂತಹ ದೇಶದಲ್ಲಿ ಹೂಡಿಕೆ ಜಾಸ್ತಿ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Author: Prajatv Kannada
ಬೆಂಗಳೂರು: ಹಾಲು ಉತ್ಪಾದಕರಿಗೆ ಸಹಾಯಧನ ಹೆಚ್ಚಿಸಲು ಚಿಂತನೆ ಮಾಡಲಾಗಿತ್ತಿದೆ ಎಂದು ಪರೋಕ್ಷವಾಗಿ ಹಾಲಿನ ದರ ಏರಿಕೆ ಬಗ್ಗೆ ಮೈಸೂರಿನಲ್ಲಿ ಸಹಕಾರ ಖಾತೆ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಹಾಲಿನ ದರ ಏರಿಕೆ ಎಂದ ಕೂಡಲೇ ಎಲ್ಲರೂ ಗಾಬರಿಯಾಗುತ್ತಾರೆ ಎಂದಿದ್ದಾರೆ. ದರ ಏರಿಕೆ ಎಂದರೆ ಎರಡು ರೀತಿ ಇದೆ. ಒಂದು ಹಾಲು ಉತ್ಪಾದಕರಿಗೆ ಹೆಚ್ಚಿನ ದರವನ್ನು ಕೊಡುವುದು. ಇನ್ನೊಂದು ಖರೀದಿ ಮಾಡುವವರಿಗೆ ದರ ಜಾಸ್ತಿ ಮಾಡುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಎರಡು ದರ ಕಡಿಮೆ. ಹಾಲು ಉತ್ಪಾದಕರಿಗೆ ನಾವು ಸಹಾಯ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಯಾರಿಗೂ ಹೊರೆಯಾಗದಂತೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.
ಬೆಂಗಳೂರು: ಜೈನಮುನಿಗಳ ಕೊಲೆ ವಿಚಾರ ಗೊತ್ತಾಗಿ ನಿನ್ನೆ (ಜು.07) ರಂದು ಸದನದಲ್ಲಿ ಗೃಹಸಚಿವರ ಗಮನಕ್ಕೆ ತಂದಿದ್ದೆ. ಶ್ರೀಗಳದ್ದೇ ಈ ರೀತಿ ಕೊಲೆಯಾದರೇ ರಾಜ್ಯದ ಜನರ ಪರಿಸ್ಥಿತಿ ಏನು? ನಾಳೆ ಜನರಿಗೆ ಏನು ರಕ್ಷಣೆ ಕೊಡುತ್ತೀರಿ ನೀವು ಎಂದು ಗೃಹಸಚಿವರಿಗೆ ಕೇಳಿದ್ದೆ. ಆಗ ಇದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಪಡೆದು. ಸೋಮವಾರ ಹೇಳಿಕೆ ಕೊಡೋದಾಗಿ ಗೃಹಸಚಿವರು ಹೇಳಿದ್ದಾರೆ ಎಂದು ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲಿ ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರುನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈನ ಮುನಿಗಳು ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ನಿರ್ಮಾಪಕ ಕುಮಾರ್ ರಿಂದ ಕಿಚ್ಚ ಸುದೀಪ್ ಅವರು ಅಡ್ವಾನ್ಸ್ ಪಡೆದುಕೊಂಡು ನಮಗೆ ಈಗ ಮೋಸ ಮಾಡಿದ್ದಾರೆ ಎಂದು ಆರೋಪಗಳು ಕೇಳಿಬರುತ್ತಿದ್ದು ಈ ಆರೋಪಕ್ಕೆ ತಿರುಗೇಟು ನೀಡಿದ್ದ ಕಿಚ್ಚ ಸುದೀಪ್ ತಮ್ಮ ಮೇಲೆ ಆರೋಪ ಮಾಡಿದ ಕುಮಾರ್ ವಿರುದ್ಧ ಮಾನನಷ್ಟ ಪ್ರಕರಣವನ್ನು ದಾಖಲಿಸುವುದಾಗಿ ನೋಟಿಸ್ ಸಹ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಿರ್ಮಾಪಕ ಎಮ್.ಎನ್. ಕುಮಾರ್ ಸುದ್ದಿಗೋಷ್ಠಿ ನಡೆಸಿ ಕಿಚ್ಚ ಸುದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಟ ಕಿಚ್ಚ ಸುದೀಪ್ ತಮಗೆ ಕಾಲ್ ಶೀಟ್ ನೀಡದೇ ವಂಚನೆ ಮಾಡಿದ್ದಾರೆ ಅಡ್ವಾನ್ಸ್ ಪಡೆದುಕೊಂಡಿರುವ ಸುದೀಪ್, ಈವರೆಗೂ ನಮಗೆ ಕಾಲ್ ಶೀಟ್ ಕೊಡದೇ ಆಟವಾಡಿಸುತ್ತಿದ್ದಾರೆ. ಪರಭಾಷೆಯ ನಿರ್ಮಾಪಕರಿಗೆ ಮಣೆ ಹಾಕುತ್ತಿದ್ದಾರೆ ಎಂದು ಕುಮಾರ್ ಸುದೀಪ್ ವಿರುದ್ಧ ಗರಂ ಆದರು. ‘ನಾನು ಮಾಧ್ಯಮದ ಮುಂದೆ ನ್ಯಾಯ ಕೇಳಿದೆ. ನಾನು ಹಣ ಕೊಟ್ಟು ಇಷ್ಟು ವರ್ಷ ಆಗಿದೆ ಸ್ಪಂದಿಸುತ್ತಿಲ್ಲ. ವಾಣಿಜ್ಯ ಮಂಡಳಿಯಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಡಿ ಅಂತ ಕೇಳಿದ್ದೆ. ಈಗ ನನಗೆ ವಾಟ್ಸಪ್ ಮೂಲಕ ನೋಟಿಸ್ ಬಂದಿದೆ. ಪೋಸ್ಟ್ ಮುಖಾಂತರ…
ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಚಿತ್ರ ನಿರ್ಮಾಪಕರ ಬ್ಯಾಂಕ್ ಎಂದರೆ ತಪ್ಪಾಗಲಾರದು ಹಾಗೆ ಅವರ ಸಿನಿಮಾಕ್ಕೆ ಹಾಕಿದ ಬಂಡವಾಳಕ್ಕೆ ಯಾವುದೇ ದಕ್ಕೆ ಆಗುವುದಿಲ್ಲ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಚಾರ ಆದರೆ ಈಗ ಅದೇ ನಿರ್ಮಾಪಕರಿಂದಲೆ ಕಿಚ್ಚನ ಮೇಲೆ ಆರೋಪಗಳು ಕೇಳಿಬರುತ್ತಿವೆ ಏನಂತೀರಾ ನೋಡೋಣ ಬನ್ನಿ.. ಕಿಚ್ಚ ಸುದೀಪ್ ಅವರು ನಮಗೆ ತಮ್ಮ ನಟನೆಯ ಸಿನಿಮಾ ಮಾಡಲು ದಿನಾಂಕಗಳನ್ನು ನೀಡುತ್ತಿಲ್ಲ ನಾಳೆ ನಾಡಿದ್ದು ಮುಂದಿನ ತಿಂಗಳು ಎಂದು ದಿನಗಳನ್ನು ತಳ್ಳುತಿದ್ದಾರೆ. ಮೊದಲೆಲ್ಲ ಅವರ ಸಿನಿಮಾಕ್ಕೆ ನಾವೇ ಬಂಡವಾಳ ಹಾಕಿದ್ದೇವೆ ಆದರೆ ಈಗ ಅವೇ ನಮಗೆ ದಿನಾಂಕಗಳನ್ನು ನೀಡದೆ ಸತಾಯಿಸುತಿದ್ದಾರೆ ಎಂದು ನಿರ್ಮಾಪಕರಾದ ಎಂ ಎನ್ ಕುಮಾರ್ ಮತ್ತು ಸಿ ವಿ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಿಚ್ಚ ಸುದೀಪ್ ರವರು ವಕೀಲರ ಮೂಲಕ ಇಬ್ಬರು ನಿರ್ಮಾಪಕರಿಗೆ ಕೋರ್ಟ್ ಮೂಲಕ ನೋಟಿಸ್ ನಿಡಿದ್ದಾರೆ. ನನ್ನ ವಿರುದ್ದ ಅವಹೇಳನಕಾರಿಯಾಗಿ ನೀಡಿರುವ ಹೇಳಿಕೆಯ ವಿರುದ್ದ ದೂರನ್ನು ದಾಖಲಿಸಿ ನಿರ್ಮಾಪಕರಿಗೆ 10 ಕೋಟಿ ಮಾನನಷ್ಟ ನೀಡುವುದಾಗಿ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ರಾಜ್ಯದ 2023-24ನೇ ಸಾಲಿನ ಬಜೆಟ್ ಶುಕ್ರವಾರ (ಜು.07) ಮಂಡನೆಮಾಡಿದ್ದು ಅದರಲ್ಲಿ ಆನ್ ಲೈನ್ ಮೂಲಕ ವಿವಾಹ ನೋಂದಣಿ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಸರ್ಕಾರದ ವಿರುದ್ಧ ಶ್ರೀರಾಮಸೇನಾ ಅಧ್ಯಕ್ಷ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಲವ್ ಜಿಹಾದ್ ಪ್ರಕರಣ ಹೆಚ್ಚಾಗ್ತಿರುವ ನಡುವೆ ಈ ಆನ್ಲೈನ್ ವಿವಾಹ ನೋಂದಣಿ ಕುಮ್ಮಕ್ಕು ಕೊಡುತ್ತಿದೆ. ಹೀಗಾಗಿ ಇದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ರಿಜಿಸ್ಟರ್ ಕಚೇರಿಗಳಲ್ಲಿ ಒಂದು ತಿಂಗಳ ಮುಂಚೆ ಮಾಹಿತಿ ಕೊಡುವುದು. ಅವರ ವಿಳಾಸ, ಫೋಟೋಗಳನ್ನ ಹಾಕುವುದು ಯೋಗ್ಯವಾದ ವ್ಯವಸ್ಥೆಯಾಗಿದೆ. ಯಾರೂ ಯಾವುದೇ ರೀತಿಯ ಮೋಸ ವಂಚನೆ ಮಾಡಲು ಸಾಧ್ಯವಿಲ್ಲ. ಈ ಆನ್ಲೈನ್ ವಿವಾಹ ನೋಂದಣಿಯನ್ನು ರದ್ದು ಮಾಡಬೇಕು, ಜಾರಿ ಮಾಡಬಾರದು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ಬೆಂಗಳೂರು: ಹುಬ್ಬಳ್ಳಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರ ಶೀಘ್ರದಲ್ಲೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಪ್ರಯಾಣಿಕರ ನೀರಸ ಪ್ರತಿಕ್ರಿಯೆಯ ಕಾರಣ ಜುಲೈ 16 ರಿಂದ ಶಾಶ್ವತವಾಗಿ ರದ್ದಾಗಲಿದೆ ಎಂದು ವರದಿಯಾಗಿದೆ. ಬೆಂಗಳೂರು-ಹುಬ್ಬಳ್ಳಿ ರೈಲು ಬೆಂಗಳೂರಿನಿಂದ ಬೆಳಗ್ಗೆ 7:30ಕ್ಕೆ ಹೊರಟು ಮಧ್ಯಾಹ್ನ 2.30ಕ್ಕೆ ಹುಬ್ಬಳ್ಳಿಗೆ ತಲುಪುತ್ತದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 3.15 ಕ್ಕೆ ಹೊರಟು ರಾತ್ರಿ 11.10 ಕ್ಕೆ ಬೆಂಗಳೂರು ತಲುಪುತ್ತದೆ. ರೈಲು ಮೂರು ಎಸಿ ಕೋಚ್ಗಳು ಮತ್ತು ಏಳು ಸ್ಲೀಪರ್ ಕೋಚ್ಗಳು ಸೇರಿದಂತೆ 16 ಕೋಚ್‌ಗಳನ್ನು ಹೊಂದಿದೆ. ನೈಋತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ, ರೈಲಿನ ಶೇಕಡಾ 34 ಕ್ಕಿಂತ ಕಡಿಮೆ ಸೀಟುಗಳಷ್ಟೇ ಭರ್ತಿಯಾಗುತ್ತಿವೆ. ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಪ್ರಾರಂಭವಾದಾಗಿನಿಂದ, ರೈಲಿಗೆ ಉತ್ತಮ ಪ್ರತಿಕ್ರಿಯೆ ದೊರೆತಿಲ್ಲ. ಈ ರೈಲನ್ನು ನಷ್ಟದೊಂದಿಗೆ ನಿರ್ವಹಿಸಲಾಗುತ್ತಿದೆ. ಹೀಗಾಗಿ ಜುಲೈ 16ರಿಂದ ರೈಲನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ
ಬೆಂಗಳೂರು: ಮೇಟ್ರೋ ಕಾಮಗಾರಿ ವೇಳೆ ಕ್ರೇನ್ ಪಲ್ಟಿಯಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮಡಿವಾಳ ಮೆಟ್ರೋ ಕಾಮಗಾರಿ ವೇಳೆ ಈ ಅವಘಡ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ನಿನ್ನೆ ರಾತ್ರಿ 7 ಘಂಟೆಯ ಸುಮಾರಿಗೆ ಬೋರ್ಡ್ ಬಳಿ ಕ್ರೇನ್ ವಾಲಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಸದ್ಯ ಮೆಟ್ರೋ ಸಿಬ್ಬಂದಿಗಳು ಪರಿಶೀಲನೆ ಮಾಡುತ್ತಿದ್ದಾರೆ ಕೂದಳತೆ ಅಂತರದಲ್ಲಿ ಹತ್ತು ಜನರ ಜೀವ ಬಚಾವ್ ಆಗಿದ್ದು, ಕ್ರೇನ್ ಪಲ್ಟಿ ಹೊಡೆದ ರಭಸಕ್ಕೆ ರಾಜಕಾಲುವೆ ಅಡ್ಡಲಾಗಿ ಹಾಕಿದ್ದ ಕಬ್ಬಿಣದ ಬೇಲಿ ನುಚ್ಚುನೂರಾಗಿದೆ. ಕ್ರೇನ್ ಬಿದ್ದ ಜಾಗದಲ್ಲೇ ಸರ್ವಿಸ್ ರಸ್ತೆ ಇದ್ದು, ಸರ್ವಿಸ್ ರಸ್ತೆಯಲ್ಲಿ ಸೆಕೆಂಡಿಗೊಂದು ವಾಹನಗಳು ಓಡಾಟ ನಡೆಸುತ್ತವೆ. ಸರ್ವಿಸ್ ರಸ್ತೆಯ ಮೇಲೇಯೇ ಅತ್ಯಂತ ಭಾರವಾದ ಕ್ರೇನ್ ಬಿದ್ದಿದ್ದು, ಬಿದ್ದ ರಭಸಕ್ಕೆ ಕ್ರೇನ್ ನ ಬಲಿಷ್ಠವಾದ ಕಬ್ಬಿಣ ಭಾಗ ತುಂಡಾಗಿದೆ. ಆಟೋ, ಕಾರ್, ಬೈಕ್ ಮೇಲೆ ಬಿದ್ದಿದ್ರೆ ವಾಹನ ಸವಾರರು ಬದುಕುಳಿಯುವ ಯಾವ ಚಾನ್ಸ್ ಕೂಡಾ ಇರುತ್ತಿರಲಿಲ್ಲ. ಕ್ರೇನ್ ಬಿದ್ದ ಜಾಗದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ…
ಆನೇಕಲ್ : ರೈತನ ತೋಟಕ್ಕೆ ನುಗ್ಗಿದ ಕಾಡಾನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ರಾಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೈಪುರದೊಡ್ಡಿಯಲ್ಲಿ ನಡೆದಿದೆ. ಎನ್ಎ ಶೆಟ್ಟಿಯವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ 15 ವರ್ಷಗಳಿಂದ ವಿವಿಧ ಬಗ್ಗೆ ಹಣ್ಣು ಮರಗಳನ್ನು ಬೆಳಸಲಾಗಿತ್ತು ಆದರೆ ತಡರಾತ್ರಿ ಕಾಡಾನೆಗಳ ಹಿಂಡು ತೋಟಕ್ಕೆ ನುಗ್ಗಿ 15 ವರ್ಷಗಳಿಂದ ಬೆಳೆದಿದ್ದ ವಿವಿಧ ಬಗೆಯ ಹಣ್ಣುಗಳ ಮರಗಳಾದ ಮಾವಿನ ಮರ ತೆಂಗಿನ ಮರ ನೋನಿ ಹಣ್ಣು ಬಟರ್ ಫ್ರೂಟ್ ಬಾಳೆಹಣ್ಣು ಇನ್ನೂ 10 ಹಲವಾರು ಬಗ್ಗೆ ಸಸ್ಯಗಳನ್ನು ಒಳಗೊಂಡಂತೆ ಸಾವಿರಾರು ರೂಪಾಯಿ ಬೆಳೆಗಳನ್ನ ಕಾಡಾನೆಗಳು ತಿಂದು ನಾಶಮಾಡಿದೆ. ಇನ್ನು 15 ವರ್ಷಗಳಿಂದ ಕಷ್ಟಪಟ್ಟು ಹಣ್ಣಿನ ಮರಗಳನ್ನು ಬೆಳೆಸಿದ್ದ ರೈತ ಈಗ ಕಂಗಲಾಗಿದ್ದಾನೆ ಅಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾನೆ . ಇನ್ನು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ರು ಸಹ ಯಾರು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ರೈತರು ತಮ್ಮ ಅಳಲನ್ನ…
ಬೆಂಗಳೂರು: ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನೀಡಲಾಗುತ್ತದೆ. ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ರಾಜ್ಯದಲ್ಲಿ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್‍ಇಪಿ (NEP) ರದ್ದುಗೊಳಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನಿಡಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನ ಜಾರಿಗೆ ತರಲು 8 ತಿಂಗಳುಗಳ ಕಾಲಾವಕಾಶ ಇದೆ. ಸಣ್ಣ ತಂಡ ಮಾಡಿ ಪಠ್ಯ ಬದಲಾವಣೆ ಮಾಡಿದ ರೀತಿಯಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ಕುಟುಕಿದ್ದಾರೆ. ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ದೊಡ್ಡ ತಂಡವನ್ನು ರಚಿಸಲಾಗಿದೆ. ಭಾಷೆಗಳಿಗೆ ಪ್ರಯೋಗಿಕ ತರಗತಿಗಳನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತದೆ. ಈ ನೀತಿಯಲ್ಲಿ ರಾಜ್ಯ ಸಿಲೆಬಸ್, ನ್ಯಾಷನಲ್ ಸಿಲೆಬಸ್ ಎನ್ನುವ ವ್ಯತ್ಯಾಸ ಇರುವುದಿಲ್ಲ…