ಕೊಪ್ಪಳ: ತಾಲೂಕಿನ ಮಂಗಳಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ, ಡಿವೈಡರ್ಗೆ ಮಿನಿ ಲಾರಿ ಡಿಕ್ಕಿಯಾಗಿ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಕೊಪ್ಪಳದ ತೆಗ್ಗಿನಕೇರಿ ನಿವಾಸಿಗಳಾದ ರೇಣುಕಮ್ಮ(50), ಪ್ರಭು(25) ಮೃತರು. ಇನ್ನುಳಿದ 6 ಜನರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: Prajatv Kannada
ಮೈಸೂರು: ಅಪಘಾತಗಳನ್ನ ತಡೆಯಲು ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರು, ತಡೆಯಲಾಗುತ್ತಿಲ್ಲ. ಅದರಂತೆ ಹುಣಸೂರು (Hunsur) ತಾಲೂಕಿನ ಬಿಳಿಗೆರೆಗಾಯ ಬಳಿ ಬೈಕ್ಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಸುಹೇಬ್(24) ಮೃತ ವ್ಯಕ್ತಿ. ಇನ್ನು ಹಿಂಬದಿ ಸವಾರ ಜುನೇದ್‌ಗೆ ಗಾಯಗಳಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ: ರಾಜಕೀಯ ವೈಷಮ್ಯ ಹಾಗೂ ಹಳೆ ದ್ವೇಷ ಹಿನ್ನಲೆ ಮೂರುವರೇ ಎಕರೆಯಲ್ಲಿ 165 ಗಿಡಗಳನ್ನು ಕಡಿದ ನಾಶಮಾಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಣೂರು ಹೋಬಳಿಯ ಈಜುಕುಂಟೆ ಗ್ರಾಮದಲ್ಲಿ ನಡೆದಿದೆ. ರೈತ ವೆಂಕಟೇಶ್’ಗೆ ಸೇರಿದ ಜಮೀನಾಗಿದ್ದು, ದರಖಾಸ್ತು ಜಮೀನಲ್ಲಿ ಅರ್ಜಿ ಸಲ್ಲಿಸಿ ಮಾವು ಗಿಡಗಳನ್ನು ನೆಟ್ಟಿದ್ದರು. ಕಿಡಿಗೇಡಿಗಳಿಂದ ಮೂರನೇ ಬಾರೀಗೆ ಮಾವಿನ ಗಿಡಗಳ ನಾಶವಾಗಿದೆ. ಆದ್ದರಿಂದ ರೈತ ವೆಂಕಟೇಶ್ ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಇನ್ನೂ ಈ ಘಟನೆ ಸಂಭಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ 2023-24ರ ಶೈಕ್ಷಣಿಕ ವರ್ಷ ಪ್ರಾರಂಭವನ್ನು ಹಬ್ಬದ ರೀತಿಯಲ್ಲಿ ಸಡಗರದಿಂದ ಆ ಯೋಜನೆ ಮಾಡಿದ ಶಾಸಕರು ಸರ್ಕಾರಿ ಶಾಲೆಯ ಮಕ್ಕಳಿಗೆ ಜ್ಞಾನದ ಅರಿವು ಮೂಡಿಸುವ ರೀತಿಯಲ್ಲಿ ವಿಭಿನ್ನ ರೀತಿ ವಿನ್ಯಾಸಗೊಳಿಸಿ ಸಾಂಪ್ರದಾಯಿಕ ರೀತಿಯಲ್ಲಿ ಮಕ್ಕಳ ಮೇಲೆ ಪುಷ್ಪವೃಷ್ಟಿ ಹೂಗುಚ್ಚ,ಪಠ್ಯಪುಸ್ತಕ ಕೊಟ್ಟು ಸಿಹಿ ತಿನಿಸುವ ಮೂಲಕ ಮಕ್ಕಳನ್ನು ಆಕರ್ಷಿಸುವ ರೀತಿಯಲ್ಲಿ ಶಾಲೆಗೆ ಬರಮಾಡಿಕೊಂಡಿದ್ದು ವಿಶೇಷ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಾದರಿಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭ ಹೇಗಿತ್ತು ಎನ್ನುವುದರ ಸ್ಟೋರಿ ಇಲ್ಲಿದೆ ನೋಡಿ. ಹೌದು ವಿಭಿನ್ನ ಅತ್ಯಾಧುನಿಕ ರೀತಿಯಲ್ಲಿ ಖಾಸಗಿ ಶಾಲೆಗಳು ಮಕ್ಕಳನ್ನು ಹಾಗೂ ಪೋಷಕರನ್ನು ತಮ್ಮದೇ ಆದ ಶೈಲಿಯಲ್ಲಿ ಸ್ಪರ್ಧಾತ್ಮಕವಾಗಿ ಆಕರ್ಷಣೆಗೆ ಮುಂದಾಗಿರುವ ಸಂದರ್ಭದಲ್ಲಿ ಅವರಿಗಿಂತ ನಾವೇನು ಕಮ್ಮಿ ಇಲ್ಲ ಎನ್ನುವ ರೀತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ವೈಯಕ್ತಿಕ ಖರ್ಚಿನಿಂದ ಶಾಲೆಯ ಗೋಡೆಗಳ ಮೇಲೆ ಮಕ್ಕಳಿಗೆ ಅರಿವು ಮೂಡಿಸುವ ಮಾದರಿಯಲ್ಲಿ ಶೈಕ್ಷಣಿಕ ಮಾಹಿತಿಯ ಚಿತ್ರಕಲೆಗಳನ್ನು ಬಿಡಿಸುವ ಮೂಲಕ ಮಕ್ಕಳನ್ನು ಹಾಗೂ ಪೋಷಕರನ್ನು ಆಕರ್ಷಿಸಲು ಮುಂದಾಗಿದ್ದಾರೆ…
ಮೈಸೂರು : ಲವರ್ ಗೆ ಮೆಸೇಜ್ ಮಾಡಿದ ರೂಂ ಮೇಟ್ ಗೆ ಚಾಕು ಇರಿದಿರುವ ಘಟನೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ನಡೆದಿದೆ. ಶಿವಕುಮಾರ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಯುವಕ. ಶಿವಕುಮಾರ್ ಹಾಗೂ ಶ್ರೇಯಸ್ ಇಬ್ಬರು ರೂಮ್ ಮೇಟ್ ಗಳಾಗಿದ್ದರು. ಸ್ನೇಹಿತನ ಲವರ್ ಜೊತೆ ಸಂಪರ್ಕ ಬೆಳೆಸಿದ ಶಿವಕುಮಾರ್ ಆಕೆಯ ಜೊತೆ ಚಾಟ್ ಮಾಡುತ್ತಿದ್ದ. ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಲವರ್ ತಂಟೆಗೆ ಬಾರದಂತೆ ಶಿವಕುಮಾರ್ ಗೆ ಎಚ್ಚರಿಕೆ ನೀಡಿದ್ದನ್ನು. ಹೀಗಿದ್ದೂ ಶಿವಕುಮಾರ್ ಆಗಾಗ ಪ್ರಿಯಾಗೆ ಮೆಸೇಜ್ ಮಾಡುತ್ತಿದ್ದ. ಇದೇ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಶಿವಕುಮಾರ್ ಗೆ ಶ್ರೇಯಸ್ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಡೆಕೋರೇಟರ್ಸ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಲಕ್ಷಾಂತರ ಮೌಲ್ಯದ ಪದಾರ್ಥಗಳು ನಾಶವಾಗಿದೆ.ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಫೈರಿಂಗ್ ರೇಂಜ್ ಸಮೀಪ ಇರುವ ಸಂಗಮ್ ಫರ್ನಿಚರ್ಸ್ ರವರ ಗೋಡೌನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಕೆಲವೇ ಸಮಯದಲ್ಲಿ ಇಡೀ ಗೊಡೌನ್ ಗೆ ಬೆಂಕಿ ವ್ಯಾಪಿಸಿದೆ. ಮಾಹಿತಿ ಅರಿತ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಬೆಂಕಿ ನಂದಿಸಲು ಹರಸಾಹಸ ನಡೆಸುತ್ತಿದ್ದಾರೆ.ಅಜೀಮ್ ಎಂಬುವರು ಸಂಗಮ್ ಡೆಕೊರೇಷನ್ ಅಂಡ್ ಫರ್ನಿಚರ್ ಮಾಲೀಕರಾಗಿದ್ದಾರೆ.
ಮಂಗನಿಂದ ಮಾನವ ಅಂತೆವಿ. ಮಂಗನಾಟ ನೋಡಿದ್ರೆ ಇದಕ್ಕೆ ಕಣೀಕರನೇ ಇಲ್ವಾ ಅನ್ನೊದು ಸಹಜ. ಆದ್ರೆ ಈ ದೃಶ್ಯ ಮತ್ತು ಸಂಗತಿ ನೋಡಿದ್ರೆ. ಪ್ರತಿಯೊಬ್ಬರ ಕಣ್ಣಿನಲ್ಲೂ ಕಣ್ಣೀರು ಬರುವುದು ಸಹಜ. ಅಷ್ಟಕ್ಕೂ ಅದೇನಪ್ಪ ಸ್ಟೋರಿ ಅಂತಿರಾ ಇಲ್ಲಿದೆ ನೋಡಿ. ಹೌದು, ಒಬ್ಬ ತಾಯಿ ತನ್ನ ಮಗುವನ್ನು ಕಳೆದುಕೊಂಡಾಗ ಅದೆಷ್ಟೋ ಸಂಕಟ ಪಡುತ್ತಾಳೆ. ಅದೇ ರೀತಿ ಇಲ್ಲೊಂದು ಮಂಗ ತನ್ನ ಮಗುವನ್ನು ಕಳೆದುಕೊಂಡು ಅಷ್ಟೇ ರೋಧನೆ ಮಾಡುತ್ತಿದೆ. ಎಸ್ ವಿದ್ಯುತ್ ಸ್ಪರ್ಶದಿಂದ ಮರಿಮಂಗ ಸಾವನ್ನಪ್ಪಿದನ್ನು ಕಂಡು ತಾಯಿ ಮಂಗನ ರೋದನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರ ಕಣ್ಣಂಚ್ಚಲ್ಲಿ ಕೂಡ ನೀರು ಜಿನುಗಿತು. ಇಂತಹ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಗಿದ್ದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ. ದಿನಂಪ್ರತಿ ಗ್ರಾಮದಲ್ಲಿ ಮಂಗಗಳ ಹಿಂಡು ಪರಸ್ಪರ ಚಿನ್ನಾಟ ಆಡುತ್ತಾ , ಗೋಡೆ ಗೋಡೆಯಿಂದ ಜಿಗಿಯುತ್ತಿದ್ದವು. ಈ ವೇಳೆ ಮರಿ ಮಂಗ ಗೋಡೆಯಿಂದ ಗೋಡೆಗೆ ಜಿಗಿಯಲು ಹೋಗಿ ವಿದ್ಯುತ್ ಕಂಬದ ತಂತಿಗೆ ಸರ್ಶವಾಗಿದೆ. ಇದರಿಂದ ಕ್ಷಣಾರ್ಧದಲ್ಲೇ…
ತುಮಕೂರು: ಕರ್ತವ್ಯ ಸಮಯದಲ್ಲಿ ಲಂಚ (Bribe) ಪಡೆದಿದ್ದ ಮಹಿಳಾಧಿಕಾರಿಗೆ ಮುದ್ರಾಂಕ ಇಲಾಖೆ (Department Of Stamps) ಆಯುಕ್ತರು ಕಡ್ಡಾಯ ನಿವೃತ್ತಿಗೊಳಿಸಿ (Retirement) ಆದೇಶ ಹೊರಡಿಸಿದ್ದಾರೆ. ಗುಬ್ಬಿ (Gubbi) ತಾಲೂಕಿನ ಉಪನೋಂದಣಿ ಕಚೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕಿ ಯಶೋಧ ವಿರುದ್ಧ ಆದೇಶ ಹೊರಡಿಸಲಾಗಿದೆ. ಈಕೆ ಕರ್ತವ್ಯದ ಸಮಯದಲ್ಲಿ ಲಂಚ ಪಡೆದುಕೊಂಡಿದ್ದರು. ಲಂಚ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಲಂಚ ಪಡೆದದ್ದು ಸಾಬೀತಾದ ಹಿನ್ನೆಲೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ರಾಯಚೂರು : ತಂದೆ-ಮಗ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಕೊರ್ತಕುಂದಾ ಗ್ರಾಮದಲ್ಲಿ ನಡೆದಿದೆ. ತಂದೆ ಸಲೀಂ (32) ಮಗ ರಾಜ(12) ಸಾವನ್ನಪ್ಪಿದ್ದು, ಊರಿನ ಕೆರೆ ಹತ್ರ ಉದ್ಯೋಗ ಖಾತ್ರಿ ಕೆಲಸದಲ್ಲಿ ತಂದೆ ಸಲೀಂ ತೊಡಗಿದ್ದರು. ಇದೇ ವೇಳೆ ಕೆರೆಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದ ಮಗನನ್ನು ಉಳಿಸಲು ಹೋದ ತಂದೆ ಸಲೀಂ ಸಹ ಕೆರೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಸಂಬಂಧ ರಾಯಚೂರು ತಾಲೂಕಿನ ಯಾಪಲ್ದಿನ್ನಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟ ಕೂಡ ಸಂಪೂರ್ಣ ಭರ್ತಿಯಾಗಿದೆ. ಈಗಾಗಲೇ ಎಲ್ಲಾ ಸಚಿವರಿಗೆ ಖಾತೆ ಕೂಡ ಹಂಚಿಕೆ ಮಾಡಲಾಗಿದ್ದು, ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ಧಾರವಾಡ ಜಿಲ್ಲೆಯ ಉಸ್ತುವಾರಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೇ ನೀಡಬೇಕು ಎಂಬ ಒತ್ತಡವನ್ನು ವಿನಯ್ ಕುಲಕರ್ಣಿ ಅವರು ವರಿಷ್ಠರ ಮೇಲೆ ಹೇರುತ್ತಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಈಗಾಗಲೇ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂತೋಷ ಲಾಡ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಸಂತೋಷ ಲಾಡ್ ಅವರಿಗೆ ಕಾರ್ಮಿಕ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ. ಆದರೆ, ಧಾರವಾಡ ಜಿಲ್ಲಾ ಉಸ್ತುವಾರಿಯನ್ನು ಅವರಿಗೆ ಇನ್ನೂ ವಹಿಸಿಲ್ಲ. ಹೀಗಿರುವಾಗ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ವಹಿಸಬೇಕು ಎಂಬ ಒತ್ತಾಯವನ್ನು ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಮಾಡಿದ್ದಾರೆ ಎಂಬ ಮಾತುಗಳು…