Author: Prajatv Kannada

ಬೆಂಗಳೂರು: ಮಳೆಯಿಂದಾಗಿ ಎದುರಾಗುವ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ. ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ಮಾತನಾಡಿದ ಅವರು,ಎಲ್ಲಾ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಇಂಜಿನಿಯರ್ಗಳು, ಕಾರ್ಯನಿರ್ವಾಹಕ ಇಂಜಿನಿಯರ್ಗಳು ಮತ್ತು ಅರಣ್ಯ ವಿಭಾಗದ ಅಧಿಕಾರಿಗಳು ಕ್ಷೇತ್ರದಲ್ಲಿ ಹೆಚ್ಚಿನ ಜಾಗರೂಕರಾಗಿರುವಂತೆ ಮತ್ತು ನಿರಂತರವಾಗಿ ಮಳೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವಂತೆ ನಿರ್ದೇಶಿಸಲಾಗಿದೆ. ಯಂತ್ರೋಪಕರಣಗಳನ್ನು ಸಿದ್ಧವಾಗಿರುವಂತೆ, ಯಾವುದೇ ಸಮಯದಲ್ಲಿ ಯಾವುದೇ ರೀತಿಯ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಉಪ ಮುಖ್ಯಮಂತ್ರಿಗಳ ಆದೇಶದಂತೆ ನಿಯಂತ್ರಣ ಕೊಠಡಿಗಳು ವಲಯದಿಂದ ಉಪ-ವಿಭಾಗ ಮಟ್ಟದವರೆಗೆ 2*7 ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಉಪಕರಣಗಳು, ವಾಹನಗಳು ಮತ್ತು ಇತರ ಸಾಮಗ್ರಿಗಳು ಸನ್ನದ್ಧ ಸ್ಥಿತಿಯಲ್ಲಿರಸಲಾಗುತ್ತಿದೆ. ಯಾವುದೇ ಸಿಬ್ಬಂದಿ ಅಸಡ್ಡೆ, ಆಲಸ್ಯ ಅಥವಾ ಬೇಜವಾಬ್ದಾರಿ ವರ್ತನೆ ತೋರಿದ್ದೇ ಆದರೆ, ಅಮಾನತು ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದರು.

Read More

ಬೆಂಗಳೂರು: ಕಾಂಗ್ರೆಸ್ ಭರ್ಜರಿ ಗೆದ್ದ ಬಳಿಕ ಜನ ಗ್ಯಾರಂಟಿಗಳನ್ನ ಯಾವಾಗ ನೀಡುವುದೆಂದು ಪ್ರಶ್ನೆ ಮಾಡುತ್ತಲೇ ಇದ್ದಾರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ 5 ಗ್ಯಾರಂಟಿಗಳ ಜಾರಿ ಬಗ್ಗೆ ಸಭೆಯಲ್ಲಿ ಸಂಪೂರ್ಣವಾಗಿ ಚರ್ಚೆ ಆಗಿದೆ ಎಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಗ್ಯಾರಂಟಿಗಳನ್ನು ಜಾರಿ ಮಾಡೇ ಮಾಡುತ್ತೇವೆ. 5 ಗ್ಯಾರಂಟಿಗಳ ವಿಚಾರವಾಗಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಮಾನದಂಡ ಇಲ್ಲದೆ ಯಾವ ಯೋಜನೆ ಇದೆ ಹೇಳಿ ನೋಡೋಣ. ಜನರಿಗೆ ನಾವು ಲೆಕ್ಕ ಕೊಡಬೇಕು ಅಲ್ವಾ ಎಂದಿದ್ದಾರೆ.

Read More

ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ವಿಧಾನಸೌಧದಲ್ಲಿ ಮಂಗಳವಾರ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಸಚಿವರು ಸಭೆ ನಡೆಸಿದರು. 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆ ಅನುಷ್ಠಾನದಿಂದಾಗುವ ಸಾಧಕ-ಬಾಧಕಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ರಾಜ್ಯ ವಿಧಾನಸಭಾ ಚುನಾವಣಾ ಪೂರ್ವದಲ್ಲಿ 200 ಯೂನಿಟ್ವರೆಗೂ ಉಚಿತ ವಿದ್ಯುತ್ ಬಳಕೆಗೆ ಅವಕಾಶ ನೀಡುವ ಗ್ಯಾರಂಟಿಯನ್ನು ಕಾಂಗ್ರೆಸ್ ನೀಡಿತ್ತು. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗಳಿಸುವಂತೆ ಸಾರ್ವಜನಿಕರಿಂದ ಒತ್ತಡ ತೀವ್ರಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದು ಎಲ್ಲಾ ಸಚಿವರ ಸಭೆ ಕರೆದಿದ್ದಾರೆ. ಸಭೆಗೆ ಪೂರಕ ಮಾಹಿತಿಯೊಂದಿಗೆ ಹಾಜರಾಗುವ ಉದ್ದೇಶದಿಂದ ಸಚಿವ ಜಾರ್ಜ್ ಅವರು, ಇಂಧನ ಇಲಾಖೆಯ ಹಿರಿಯ ಆಧಿಕಾರಿಗಳ ಜತೆ ಸಭೆ ನಡೆಸಿ ಅಂಕಿ-ಅಂಶಗಳ ಸಹಿತ ಮಾಹಿತಿ ಪಡೆದುಕೊಂಡರು.

Read More

ದೊಡ್ಡಬಳ್ಳಾಪುರ: ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ಬುಧವಾರ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ‌ ನಡೆಸಿದ್ದು, ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಕೊಡಿಗೇಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ರಂಗಸ್ವಾಮಿ‌ ಮನೆಯ ಲೋಕಾಯುಕ್ತ‌ ಪೊಲೀಸರು ದಾಳಿ‌ ನಡೆಸಿದ್ದಾರೆ. ದೊಡ್ಡಬಳ್ಳಾಪುರದ ಟಿ.ಬಿ.ನಾರಾಯಣಪ್ಪ ಬಡಾವಣೆಯಲ್ಲಿರುವ ರಮಗಸ್ವಾಮಿ ಅವರ ನಿವಾಸ, ವಾಣಿಜ್ಯ ಸಂಕೀರ್ಣ, ಪಾಲನ‌ಜೋಗಹಳ್ಳಿಯ‌ ನಿವಾಸಗಳ ಮೇಲೂ ದಾಳಿ‌ ನಡೆಸಿ ಕಡತಗಳ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೇ ಸ್ವಂತ ಊರಾದ ತೂಬಗೆರೆ ಹೋಬಳಿಯ ಸೋತೇನಹಳ್ಳಿ ಗ್ರಾಮದ ನಿವಾಸ, ರಾಜಾನುಕುಂಟೆಯ ಕಾಕೋಳು ರಸ್ತೆಯಲ್ಲಿರುವ 7 ಕೋಟಿ ಬೆಲೆ ಬಾಳುವ ನಿವಾಸ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಬಳಿಯ ಜಮೀನು ಸೇರಿದಂತೆ ಹಲವೆಡೆ ಪೊಲೀಸರು ದಾಳಿ‌ ಮಾಡಿದ್ದಾರೆ. ಸುಮಾರು‌ 20 ಅಧಿಕಾರಿಗಳ ತಂಡ ಬೆಳಿಗ್ಗೆ 5.30ಕ್ಕೆ ಏಕಕಾಲದಲ್ಲಿ‌ ದಾಳಿ‌ ನಡೆಸಿದ್ದು, ಅದಾಯಕ್ಕಿಂತ ಹೆಚ್ಚು ಆಸ್ತಿ‌ ಹಾಗೂ ಬೇನಾಮಿ‌ ಹೆಸರಿನಲ್ಲಿ ಆಸ್ತಿ ಹೊಂದಿರುವ ಆರೋಪದ ಮೇಲೆ ದಾಳಿ‌ ಮಾಡಿ ದಾಖಲೆ‌ ಪರಿಶೀಲಿದ್ದಾರೆ. ಪಿಎಒ ರಂಗಸ್ವಾಮಿ‌ಅವರ ಪತ್ನಿ…

Read More

ಬೆಂಗಳೂರು: ಸರ್ಕಾರದ 5 ಗ್ಯಾರೆಂಟಿ ಯೋಜನೆಗಳ ಜಾರಿ ಸಂಬಂಧ ಗುರುವಾರ ನಿಗದಿ ಪಡಿಸಲಾಗಿದ್ದ ಸಚಿವ ಸಂಪುಟ ಶುಕ್ರವಾರಕ್ಕೆ ಮುಂದೂಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ನಡೆಯಲಿದೆ. ಐದು ಗ್ಯಾರಂಟಿಗಳ ಜಾರಿ ಸಂಬಂಧ ಮತ್ತಷ್ಟು ತಯಾರಿ ಅಗತ್ಯ ಹಿನ್ನೆಲೆ ನಾಳೆಯೂ ಕೂಡ ಅಧಿಕಾರಿಗಳು, ಸಚಿವರು ಪ್ರತ್ಯೇಕ ಸಭೆ ಮಾಡಲಿದ್ದಾರೆ.

Read More

ಚಿತ್ರದುರ್ಗ: ಗ್ಯಾರಂಟಿ ಕಾರ್ಡ್‌ಗೆ ‘ನಗದು ರೂಪ’ ಕೊಡುವ ಜವಾಬ್ದಾರಿಯ ಸ್ಥಾನದಲ್ಲಿ ಕಾಂಗ್ರೆಸ್‌ ಇದೆ. ಚುನಾವಣೆಗೆ ಮೊದಲು ಇದು ಭರವಸೆಯಷ್ಟೇ ಆಗಿತ್ತು. ಇದನ್ನು ಲಾಗೂ ಮಾಡಲು ಜನರು ಅಧಿಕಾರ ಕೊಟ್ಟಾಗಿದೆ. ಹಾಗಾಗಿ ಕಾಂಗ್ರೆಸ್‌ ಸರಕಾರಕ್ಕೆ ಈ ವಾಗ್ದಾನ ಈಡೇರಿಸುವುದು ಪ್ರಾಶಸ್ತ್ಯವಾಗಬೇಕಿದೆ. ಚುನಾವಣೆಯಲ್ಲಿ ಕಾಂಗ್ರೆಸ್​ ನೀಡಿರುವ ಐದು ಗ್ಯಾರಂಟಿಗಳ (Congress guarantees)ಬಗ್ಗೆ ಇದೀಗ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕೊಟ್ಟ ಮಾತಿನಿಂತೆ ಈ ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಇನ್ನು ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ನೀಡುವ ಬಗ್ಗೆ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ(Taralabalu Shivamurthy Shivacharya Swamiji) ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಸಿರಿಗೆರೆ ತರಳಬಾಳು ಮಠಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ ವೇಳೆ ಸಲಹೆ ನೀಡಿರುವ ಸ್ವಾಮೀಜಿ, ನಿರುದ್ಯೋಗ ಭತ್ಯೆಯನ್ನು ನೀಡಿ ಯುವಕರಿಂದ ಕೆಲಸ ಮಾಡಿಸಿ. ಟ್ಯಾಕ್ಸ್ ಪೇಯರ್ ಮನಿ ಸದ್ಬಳಕೆ ಆಗಲಿ ಎಂದು ಸಲಹೆ ನೀಡಿದ್ದಾರೆ. ನಿರುದ್ಯೋಗಿ ಯುವಕರಿಗೆ 3000…

Read More

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದ್ದ ಜಗದೀಶ್ ಶೆಟ್ಟರ್  ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋತಿದ್ದರು. ಆದರೂ ಅವರಿಗೆ ಉನ್ನತ ಸ್ಥಾನಮಾನ ನೀಡುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​ ನಾಯಕ ಜಗದೀಶ್​ ಶೆಟ್ಟರ್​ ಅವರೊಂದಿಗೆ ಗೌಪ್ಯ ಸಭೆ ನಡೆಸಿದರು. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಗದೀಶ್​ ಶೆಟ್ಟರ್​​, ಡಿಕೆ ಶಿವಕುಮಾರ ಅವರ ಜೊತೆ ಔಪಚಾರಿಕವಾದ ಮಾತುಕತೆಯಾಗಿದೆ. ಉತ್ತರ ಕರ್ನಾಟಕ ಭಾಗದ ಸಂಘಟನೆ ಬಗ್ಗೆ ಡಿಕೆಶಿ ಸಂತೋಷ ವ್ಯಕ್ತಪಡಿಸಿದರು. ಮುಂಬರುವ ಚುನಾವಣೆ ಕುರಿತು ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

Read More

ಬೆಳಗಾವಿ: ಕಾಂಗ್ರೆಸ್ ಚುನಾವಣೆಯುಲ್ಲಿ ಭಾರಿ ಅಂತರದಿಂದ ಗೆದ್ದು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಕೂಡ ಹಿಡಿದಿದ್ದು ಸಚಿವರುಗಳಿಗೂ ಸ್ಥಾನ ಮಾನ ಸಿಕ್ಕಿದ್ದು ಆದರೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರಿದ್ದ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಗೆ ಸ್ಥಾನ ಮಾನ ನೀಡದಿದ್ದಕ್ಕೆ ಭಾರೀ ಚರ್ಚೆ ನಡೆಯುತ್ತಿತ್ತು ಈ ಹಿನ್ನೆಲೆಯಲ್ಲಿ ಇಂದು ಭೇಟಿ ಮಾಡಲು ಬೆಳಗಾವಿಗೆ ಬಂದಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಂತರ ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್, ಶಾಸಕ ಲಕ್ಷ್ಮಣ್ ಸವದಿ ಅವರಿಗೆ  ಸೂಕ್ತ ಸ್ಥಾನಮಾನ ನೀಡುವ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಮಾತನಾಡಿ ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು ಬೆಳಗಾವಿಯಲ್ಲಿ ಹೇಳಿದ್ದಾರೆ. ಯಾರು ನಮ್ಮ ಜೊತೆ ಧೈರ್ಯ ಮಾಡಿ ಕೈ ಜೋಡಿಸಿದ್ದಾರೆ ಯಾರನ್ನೂ ಕೈ ಬಿಡುವ ಪ್ರಶ್ನೆ ಬರಲ್ಲ,…

Read More

ಚೆನ್ನೈ : ಆತಿಥೇಯ ಗುಜರಾತ್ ಟೈಟನ್ಸ್ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ 5 ವಿಕೆಟ್ಗಳ ಜಯ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಐದನೇ ಟ್ರೋಫಿ ಎತ್ತಿ ಹಿಡಿಯುವ ಮೂಲಕ ದಾಖಲೆ ಬರೆಯಿತು. ಟ್ರೋಫಿ ಗೆದ್ದು ಮನೆಯಂಗಣಕ್ಕೆ ಮಂಗಳವಾರ (ಮೇ 30) ಹಿಂದಿರುಗುತ್ತಿದ್ದಂತೆಯೇ ಸಿಎಸ್ಕೆ ಫ್ರಾಂಚೈಸಿ ವಿಶೇಷ ಪೂಜೆ ಕೈಗೊಂಡಿದೆ. ಚೆನ್ನೈನ ತ್ಯಾಗರಾಯ ನಗರದಲ್ಲಿ ಇರುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ದೇವಸ್ಥಾನದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಪಾದದಡಿ ಟ್ರೋಫಿಯನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದರ ಫೋಟೊಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರಿ ಸದ್ದು ಮಾಡಿದೆ. ಚೆನ್ನೈನ ವಿಮಾನ ನಿಲ್ದಾಣದಿಂದ ಸಿಎಸ್ಕೆ ಅಧಿಕಾರಿಗಳು ಟ್ರೋಫಿಯನ್ನು ನೇರವಾಗಿ ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿದ್ದಾರೆ. ಅಂದಹಾಗೆ ಸಿಎಸ್ಕೆ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿರಲಿಲ್ಲ. ಫ್ರಾಂಚೈಸಿಯ ಅಧಿಕಾರಿಗಳಷ್ಟೇ ಟ್ರೋಫಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಿದ್ದಾರೆ.

Read More

ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಜೀವನದಲ್ಲಿ ಗುರಿಗಳನ್ನು ಸಾಧಿಸಲು ಫಿಟ್ನೆಸ್ ಬಗ್ಗೆ ಅರಿವು ಮತ್ತು ಶಿಸ್ತು ಬಹಳ ಮುಖ್ಯ ಎಂದು ನಂಬಿಕೊಂಡು ಬಂದಿದ್ದಾರೆ. ತಂಬಾಕು ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಸಾಕಷ್ಟು ಅವಕಾಶಗಳು ಬಂದಿದ್ದವು ಆದರೆ ನಾನದನ್ನೆಲ್ಲಾ ನಿರಾಕರಿಸಿದ್ದೇನೆ ಎಂದು ಸಚಿನ್ ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರದ ಮೌಖಿಕ ನೈರ್ಮಲ್ಯ- ಸ್ವಚ್ಛ ಮುಖ್ ಅಭಿಯಾನದ “ಸ್ಮೈಲ್ ಅಂಬಾಸಿಡರ್” ಆಗಿರುವ ಸಚಿನ್ ತೆಂಡೂಲ್ಕರ್ ಎಂದಿಗೂ ತಂಬಾಕು , ಆಲ್ಕೋಹಾಲ್ ಜಾಹೀರಾತಿಗೆ ಪ್ರೋತ್ಸಾಹ ನೀಡುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಆಲ್ಕೋಹಾಲ್ ಜಾಹೀರಾತನ್ನೂ ತ್ಯಜಿಸಿದ್ದರು ನಿಮಗೆಲ್ಲಾ ನೆನಪಿರಬಹುದು IPL ಸಮಯದಲ್ಲಿ ಕ್ರಿಕೆಟಿಗರ ‘ಊ ಲಾ ಲಾ ಲಾ ಲೆ ಓ’ ಜಾಹೀರಾತು ಬಹಳ ಫೇಮಸ್ ಆಗಿತ್ತು. ಆದರೆ ಆ ಜಾಹೀರಾತಿನಲ್ಲಿ ತೆಂಡೂಲ್ಕರ್ ಕಾಣಿಸಿಕೊಂಡಿರಲಿಲ್ಲ ಅದಕ್ಕೆ ಕಾರಣ ಅದು ಆಲ್ಕೋಹಾಲ್ ಸಂಬಂಧಿತ ಜಾಹೀರಾತು ಆಗಿತ್ತು. ಫಿಟ್ನೆಸ್ ಕಡೆಗೆ ಗಮನ ನೀಡುವ ಸಚಿನ್ ನೋಟದಲ್ಲಿ ಮಾತ್ರವಲ್ಲ, ಮಾನಸಿಕವಾಗಿಯೂ ಹಾಗೂ ಮೌಖಿಕ ಆರೋಗ್ಯದಲ್ಲೂ ಫಿಟ್ ಆಗಿರಬೇಕು ಎನ್ನುತ್ತಾರೆ. 50 ಪ್ರತಿಶತದಷ್ಟು ಮಕ್ಕಳು ಮೌಖಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಬಾಯಿಯ…

Read More