Author: Prajatv Kannada

ಸಿಂಗಾಪುರ: ಸಿಂಗಾಪುರದ ಅತ್ಯಂತ ಹಳೆಯ ಹಿಂದೂ ದೇವಾಲಯದ ಭಾರತೀಯ ಅರ್ಚಕನಿಗೆ ಆರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಅರ್ಚಕ ದೇವಾಲಯದ ದೇವತೆಗಳನ್ನು ಅಲಂಕರಿಸಲು ಬಳಸಿದ್ದ 1 ಮಿಲಿಯನ್ ಮೌಲ್ಯದ ಚಿನ್ನಾಭರಣಗಳನ್ನು ಪದೇ ಪದೇ ಗಿರವಿ ಇಟ್ಟು ಹಣ ಪಡೆದ ಆರೋದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಸೌತ್ ಬ್ರಿಡ್ಜ್ ರೋಡ್‌ನಲ್ಲಿರುವ ಶ್ರೀ ಮಾರಿಯಮ್ಮನ್ ದೇವಸ್ಥಾನದ ಅರ್ಚಕ ಕಂದಸಾಮಿ ಸೇನಾಪತಿ ಅವರು ಆಭರಣಗಳನ್ನು ಗಿರವಿ ಇಡುವ ಮೂಲಕ $2.3 ಮಿಲಿಯನ್ (ಸಿಂಗಪೋರಿಯನ್) ಗಳಿಸಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ವರದಿ ಮಾಡಿದೆ. ವಿಚಾರಣೆ ವೇಳೆ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದು ಇದೀಗ ಆರು ವರ್ಷ ಜೈಲು ಶಿಕ್ಷೆಗೊಳಗಾಗಿದ್ದಾರೆ. ಕಂದಸಾಮಿ ಅವರು ಡಿಸೆಂಬರ್ 2013 ರಲ್ಲಿ ಹಿಂದೂ ದತ್ತಿ ಮಂಡಳಿ ನಲ್ಲಿ ಉದ್ಯೋಗಿಯಾಗಿದ್ದು, ಜುಲೈ 2018 ರಲ್ಲಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ಬಡ್ತಿ ಪಡೆದರು ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನಿಸ್ ಸೀ ನ್ಯಾಯಾಲಯಕ್ಕೆ ತಿಳಿಸಿದ್ದರು. 2014 ರಲ್ಲಿ, ದೇವಾಲಯದ ಪವಿತ್ರ ಗರ್ಭಗುಡಿಯ…

Read More

12 ವರ್ಷದ ಅದ್ಭುತ ಪ್ರತಿಭೆ ಕ್ಲೋವಿಸ್ ಹಂಗ್ ಕ್ಯಾಲಿಫೋರ್ನಿಯಾದ ಫುಲ್ಲರ್ಟನ್ ಕಾಲೇಜಿನಿಂದ 5 ಪದವಿ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅತ್ಯಂತ ಕಿರಿಯ ಪದವೀಧರರಾಗಿದ್ದ 13 ವರ್ಷದ ಜ್ಯಾಕ್ ರಿಕೊ ಅವರು ನಿರ್ಮಿಸಿದ ಹಿಂದಿನ ದಾಖಲೆಯಿಂದ ಪ್ರೇರಿತರಾಗಿ 9 ನೇ ವಯಸ್ಸಿನಲ್ಲಿ ಕ್ಲೋವಿಸ್ ಹಂಗ್ ತಮ್ಮ ಕಾಲೇಜಿನ ಪ್ರಯಾಣ ಪ್ರಾರಂಭಿಸಿದರು ಎಂದು ಎನ್​ಬಿಸಿ ವರದಿ ಮಾಡಿದೆ. ರಿಕೊ ಸಾಧನೆಯಿಂದ ಪ್ರೇರಿತರಾದ ಕ್ಲೋವಿಸ್ ಹಂಗ್, ರಿಕೊರಂತೆ ಹೆಚ್ಚು ಓದುವ ಆಸೆಯನ್ನು ಇಟ್ಟುಕೊಂಡ ಹಂಗ್ ಅವರ ಧಾಖಲೆಯನ್ನು ಮುರಿಯಲು ಸಾಧ್ಯವಾಗುತ್ತದೆ ಎಂದು ಒಹಿಸಿರಲಿಲ್ಲ ಎಂದು ತಿಳಿಸಿದರು. ಪದವಿ ಪ್ರದಾನ ದಿನದಂದು, ಹಂಗ್ ಹೆಮ್ಮೆಯಿಂದ ಟೋಪಿ ಮತ್ತು ಗೌನ್ ಧರಿಸಿ ವೇದಿಕೆಯ ಮೇಲೆ ಅವರ ವಯಸ್ಸಿಗಿಂತ ದೊಡ್ಡವರಾದ ಸಹ ಪದವೀಧರರ ಜೊತೆ ಸಮಾರಂಭದಲ್ಲಿ ಭಾಗಿಯಾದರು. ಅವರು ಇತಿಹಾಸ, ಸಮಾಜ ವಿಜ್ಞಾನ, ಸಾಮಾಜಿಕ ನಡವಳಿಕೆ ಮತ್ತು ಸ್ವ-ಅಭಿವೃದ್ಧಿ, ಕಲೆ ಮತ್ತು ಮಾನವ ಅಭಿವ್ಯಕ್ತಿ, ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಐದು ಸಹಾಯಕ ಕಲಾ ಪದವಿಗಳನ್ನು…

Read More

ಲಂಡನ್‌ : ‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್‌ ಇದೀಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ ಸಂಗ್ರಹದಲ್ಲಿದೆ. ಇದು ಸುಮಾರು ₹ 2.04 ಕೋಟಿ ಬೆಲೆಯದ್ದಾಗಿದ್ದು ಅದನ್ನು ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ. ಭಾರತ ಮತ್ತು ಇಂಗ್ಲೆಂಡ್‌ ಇತಿಹಾಸ ಮತ್ತು ‘ಹೋರಾಟದ ಅವಧಿ’ಯ ಸಾರ್ವಜನಿಕ ಅಧ್ಯಯನದ ಉದ್ದೇಶಕ್ಕಾಗಿ ಬ್ರಿಟನ್‌ ಮೂಲದ ಸಂಸ್ಥೆಗೆ ಈ ಗನ್ ಅನ್ನು ಸ್ವಾಧೀನಕ್ಕೆ ಪಡೆಯಲು ಸಮಯಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ‘ಫ್ಲಿಂಟ್‌ಲಾಕ್‌ ಸ್ಪೋರ್ಟಿಂಗ್‌ ಗನ್’ನ ವಿಲೇವಾರಿಗೆ ನಿಷೇಧ ಹೇರುವ ತೀರ್ಮಾನವನ್ನು ಬ್ರಿಟನ್‌ನ ಕಲಾ ಮತ್ತು ಪಾರಂಪರಿಕ ಸಚಿವ ಲಾರ್ಡ್‌ ಸ್ಟೀಫನ್‌ ಪಾರ್ಕಿನ್‌ಸನ್‌ ಅವರು ಕಳೆದ ವಾರ ತೆಗೆದುಕೊಂಡಿದ್ದಾರೆ. ಸಾಂಸ್ಕೃತಿಕ ಮಹತ್ವದ ಕಲೆ ಮತ್ತು ಪರಿಕರಗಳ ರಫ್ತು ಕುರಿತ ಪರಿಶೀಲನಾ ಸಮಿತಿಯು (ಆರ್‌ಸಿಇಡಬ್ಲ್ಯುಎ) ಈ ಬಗ್ಗೆ ವರದಿ ಸಲ್ಲಿಸಿತ್ತು. 14 ಬೋರ್‌ನ ಈ ಗನ್ ಅನ್ನು 1793 ಮತ್ತು 1794ರ ನಡುವೆ ತಯಾರಿಸಲಾಗಿದೆ. ಹಕ್ಕಿಗಳನ್ನು ಶೂಟ್‌ ಮಾಡುವ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ.…

Read More

ಹೊಸದಿಲ್ಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಮಂಗಳವಾರ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜನಾಂಗೀಯ ಘರ್ಷಣೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದರು. ಮೂರು ದಿನಗಳ ಮಣಿಪುರ ಪ್ರವಾಸ ಕೈಗೊಂಡಿರುವ ಕೇಂದ್ರ ಸಚಿವ ಶಾ ಅವರು ಮಂಗಳವಾರ ಬೆಳಗ್ಗೆ ಸಿಎಂ ಬಿರೇನ್ ಸಿಂಗ್, ರಾಜ್ಯ ಸಚಿವರು, ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳು ಜತೆ ಮಹತ್ವದ ಸಭೆ ನಡೆಸಿದರು. ಕಳೆದ 27 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಅದಕ್ಕೆ ಕಾರಣವಾದ ಅಂಶಗಳು, ಕ್ಷಿಪ್ರವಾಗಿ ಶಾಂತಿ ಸ್ಥಾಪನೆಯ ಸೂತ್ರಗಳ ಬಗ್ಗೆ ಅವಲೋಕಿಸಿದರು. ಈ ವೇಳೆ ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗೆ ನಾಲ್ಕು ನಿರ್ಣಯ ಕೈಗೊಳ್ಳಲಾಯಿತು. ನಾಲ್ಕು ನಿರ್ಣಯಗಳು 1. ಶಾಂತಿ ಕದಡುವ ದಂಗೆಕೋರರು ಅಥವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಪೊಲೀಸ್…

Read More

ವಿಜಯಪುರ:  ವಿಜಯಪುರ ಜಿಲ್ಲೆಯಲ್ಲಿ ಬಸ್ ಚಾಲಕನಿಂದ ಅವಘಡ ನಡೆದಿದ್ದು ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪಾರಾಗಿದ್ದಾರೆ. ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಸರ್ಕಾರಿ ಬಸ್ ಪೆಟ್ರೋಲ್‌ ಬಂಕ್​ಗೆ ನುಗ್ಗಿರುವ ಘಟನೆ ಜಿಲ್ಲೆಯ ಸಿಂದಗಿ ನಗರದಲ್ಲಿ ನಿನ್ನೆ (ಮೇ.30) ರಂದು‌ ನಡೆದಿದೆ.

Read More

ಕೊಪ್ಪಳ:  ತನ್ನ ಗಂಡನ ಅಕ್ರಮ ಸಂಬಂಧದ ಹಿನ್ನೆಲೆಯನ್ನು ಪ್ರಶ್ನೆ ಮಾಡಿದ್ದಕ್ಕೆ ಪ್ರೇಯಸಿ ಜೊತೆ ಸೇರಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಷ್ಟಗಿ ತಾಲೂಕು ಮಾಲಗಿತ್ತಿ ಗ್ರಾಮದಲ್ಲಿ ನಡೆದಿದೆ. ಮಾಲಗಿತ್ತಿ ಗ್ರಾಮದ ವಿವಾಹಿತ ಟ್ರಾಕ್ಟರ್ ಡ್ರೈವರ್ ಪೀರಸಾಬ್ ನಧಾಪ್ ನೊಂದಿಗೆ ಅದೇ ಗ್ರಾಮದ ಶಾರವ್ವ ಶರಣಪ್ಪ ಬಸಾಪೂರ ಜೊತೆ ಅಕ್ರಮ ಸಂಬಂಧ ಇತ್ತು. ಈ ಅಕ್ರಮ ಸಂಬಂಧದ ವಿಷಯ ಪೀರಸಾಬ್ ನ ಪತ್ನಿಗೆ ಗೊತ್ತಾಗಿದೆ.ಗಂಡನ ಅಕ್ರಮದ ಬಗ್ಗೆ ಕುಪಿತಗೊಂಡ ಪತ್ನಿ, ಗಂಡನ ಪ್ರೇಯಸಿ ಶಾರವ್ವ ಜೊತೆ ಕ್ಯಾತೆ ತೆಗೆದಿದ್ದು, ಗಂಡನನ್ನು ಪ್ರಶ್ನೆ ಮಾಡಿದ್ದಾಳೆ.ಈ ಪ್ರಕರಣ ಇಷ್ಟಕ್ಕೆ ಬೀಡದೇ ಊರಿನ ಹಿರಿಯರ ಮುಂದೆ ಪ್ರಸ್ತಾಪಿಸಿದ್ದಾಳೆ. ಊರಿನ ಹಿರಿಯರು ಈ ಜಗಳ ಬುಧವಾರ ಬೆಳಗ್ಗೆ ಇತ್ಯಾರ್ಥಗೊಳಿಸುವುದಾಗಿ ತಿಳಿಸಿದ್ದಾರೆ. ಇವರ ಅಕ್ರಮದ ಗುಟ್ಟು ಪತ್ನಿಯಿಂದ ರಟ್ಟಾಗಿರುವ ಬಗ್ಗೆ ಮನನೊಂದ ಪಾಗಲ್ ಪ್ರೇಮಿಗಳು, ಡ್ರೈವರ್ ಪೀರಸಾಬ್ ನ ಚಿಕ್ಕಪ್ಪ ಹುಸೇನಸಾಬ್ ನದಾಫ್ ಊರಿನ ಹಿರಿಯರ ಸಮ್ಮುಖದಲ್ಲಿ ಇತ್ಯಾರ್ಥವಾಗುವ ಮೊದಲೇ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಕ್ರಮ ಜೋಡಿಯ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ತಾಲೂಕು ಸಹಿತ 16 ಕಡೆಗಳಲ್ಲಿ ಎನ್ಐಎ‌ (ರಾಷ್ಟ್ರೀಯ ತನಿಖಾ ದಳ) ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಕೇರಳ, ಬಿಹಾರದಲ್ಲೂ ದಾಳಿ ನಡೆದಿದೆ. ಎನ್‌ಐಎ ಅಧಿಕಾರಿಗಳು ಹಲವು ದಾಖಲೆಗಳ ಪರಿಶೀಲನೆಯನ್ನು ನಡೆಸಿದ್ದು, ಈ ಸಂದರ್ಭ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಬೆಳ್ಳಂಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಿಹಾರದಲ್ಲಿ ನಡೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ. ಬಿಹಾರದ ಫುಲ್ವಾರಿ ಶರೀಫ್ ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನಿಷೇಧಿತ ಪಿಎಫ್‌ಐ ನಡೆಸುತ್ತಿದ್ದ ಹಲವು ಕೃತ್ಯಗಳಿಗೆ ಸಂಬಂಧಿಸಿದಂತೆ ಎನ್‌ಐಎ ಕಳೆದ ವರ್ಷದಿಂದಲೇ ತೀವ್ರ ವಿಚಾರಣೆ ನಡೆಸುತ್ತಿದ್ದು, ಇದರ ಮುಂದುವರಿದ ಭಾಗವಾಗಿ ದಾಳಿ ನಡೆದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹತ್ಯೆಗೆ…

Read More

ಹುಬ್ಬಳ್ಳಿ: ಸಂಪುಟದಲ್ಲಿ ಜಗದೀಶ್ ಶೆಟ್ಟರ್ ಸ್ಥಾನ ಸಿಗದ ಹಿನ್ನೆಲೆ ಬೇಸರಗೊಂಡಿದ್ದ ಅಭಿಮಾನಿಗಳು ಶೆಟ್ಟರ್  ಭೇಟಿಯಾಗಿ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ಕೊಡಲಿರುವ ಡಿಕೆಶಿ ಲೋಕಸಭಾ ಚುನಾವಣೆಗೆ ಸಹ ತಯಾರಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಹಾಗೆ ಧಾರವಾಡ ಲೋಕಸಭಾ ಕ್ಷೇತ್ರದಿಂದ ಶೆಟ್ಟರ್ ಕಣಕ್ಕೆ ಇಳಿಸಲು ಚಿಂತನೆ ನಡೆದಿದ್ದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಶೆಡ್ಡು ಹೊಡಿಸಲು ಪಕ್ಷದ ಚಿಂತನೆ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಲಿರುವ ಉಭಯ ನಾಯಕರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿದ್ದು ಈಗಾಗಲೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟ ಸಹೋದ್ಯೋಗಿಗಳು ಪ್ರಮಾಣವಚನ ಸ್ವೀಕರಿಸಿದ್ದು, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಗ್ಯಾರಂಟಿಗಳ ಜಾರಿಗೆ ಸಿದ್ಧತೆ ನಡೆದಿದೆ. ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರಿಗೆ ಸೂಕ್ತ…

Read More

ಧಾರವಾಡ: ಯುವಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡದ ನಾಗಲಾವಿ ಕರೆಯಲ್ಲಿ ನಡೆದಿದ್ದು, ಆತನಿಗಾಗಿ ಸುಮಾರು ಐದು ಗಂಟೆ ಹುಡುಕಾಟ ನಡೆಸಿ ಕೊನೆಗೆ ಯುವಕನ ಮೃತ ದೇಹವನ್ನು ಹೊರತೆಗೆಯುವಲ್ಲಿ ಅಗ್ನಿ ಶಾಸಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಧಾರವಾಡದ ಕಂಠಿಗಲ್ಲಿಯ ನಿವಾಸಿ ಮಲ್ಲಿಕ್ ಎಂಬ ಮೂವತ್ತು ವರ್ಷದ ಯುವಕ ಮೃತನೆಂದು ಗುರುತಿಸಲಾಗಿದೆ. ಇನ್ನೂ ಶವವಾಗಿ ಪತ್ತೆಯಾಗಿರುವ ಮಲಿಕನಿಗೆ ಜೂನ್ ತಿಂಗಳಲ್ಲಿ ಮದುವೆ ನಿಶ್ಚಿಯವಾಗಿತ್ತೆಂದು ಹೇಳಲಾಗುತ್ತಿದೆ. ಕಳೆದೆರಡು ದಿನಗಳಿಂದ ಮಲಿಕ ಮನೆಯಿಂದ ನಾಪತ್ತೆಯಾಗಿದ್ದು, ನಾಗಲಾವಿ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ‌. ಇನ್ನೂ ನಾಗಲಾವಿ ಗ್ರಾಮದ ಕೆರೆಯಲ್ಲಿ ಯುವಕನೋರ್ವ ಶವ ಪತ್ತೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಮಲಿಕ್‌ನ ಮೃತ ದೇಹ ನೋಡಿ ಅಕ್ರಂದನ ಮುಗಿಲು ಮುಟ್ಟಿತ್ತು. ಯುವಕನಿಗಾಗಿ ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದರು. ಸುಮಾರು ಹೊತ್ತಿನ ನಾಲ್ಕು ಗಂಟೆ ಅಧಿಕ ಸಮಯ ಕಾರ್ಯಾಚರಣೆ ನಡೆಸಿದ ಅಗ್ನು ಶಾಮಕ ದಳದ ಸಿಬ್ಬಂದಿ ಕೊನೆಗೂ ತಡ ಸಂಜೆ ವೇಳೆ ಮೃತದೇಹ ಹೊರತೆಗೆದಿದ್ದು, ಮರಣೋತ್ತರ…

Read More

ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ್ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದಯಾನಂದ ಅವರು, ಪೊಲೀಸ್ ಇಲಾಖೆ ಮೇಲೆ ಜನರಿಗೆ ನಂಬಿಕೆ ಇದೆ, ಆ ನಂಬಿಕೆ ಉಳಿಸಿಕೊಳ್ಳಲು ಶ್ರಮಿಸುತ್ತೇನೆ. ಪೊಲೀಸ್ ಆಯುಕ್ತರಾಗಿ ಬೆಂಗಳೂರಿಗೆ ಸಂಬಂಧಪಟ್ಟಂತೆ ಹಲವು ಸವಾಲುಗಳಿದ್ದು, ಅವುಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಲಾಗುವುದು. ನಗರದಲ್ಲಿ ಸಂಚಾರ ನಿರ್ವಹಣೆಗೆ ನಾಗರಿಕ ಸಂಸ್ಥೆಗಳಿಂದ ಸಮನ್ವಯತೆ ಅಗತ್ಯ. ಸಂಚಾರ ದಟ್ಟಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಇಲಾಖೆಯು ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತದೆ ಎಂದರು. ಟೋಯಿಂಗ್ ವ್ಯವಸ್ಥೆಯನ್ನು ಹಿಂಪಡೆಯುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಇಲಾಖೆಯು ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ. ಇನ್ನೂ ನಿರ್ಗಮಿತ ಕಮಿಷನರ್ ಸಿ.ಎಚ್. ಪ್ರತಾಪ್ ರೆಡ್ಡಿ ಅವರು ಅಧಿಕೃತವಾಗಿ ಲಾಠಿ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಬಿ. ದಯಾನಂದ ಅವರು ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆ ಮತ್ತು ಸೈಬರ್ ಕ್ರೈಮ್ ಮೇಲೆ ಆದ್ಯತೆಯಿಂದ ಗಮನ ಹರಿಸುವುದಾಗಿ ಹೇಳಿದ್ದಾರೆ.

Read More