ಬೆಂಗಳೂರು: ಇಂದು ಯು.ಎಸ್. ಇಂಡಿಯಾ ಬಿಸಿನೆಸ್ ಕೌನ್ಸಿಲ್ ನ ಪ್ರತಿನಿಧಿಗಳೊಂದಿಗೆ ಸಿಎಂ ಸಿದ್ದರಾಮಯ್ಯನವರು ದುಂಡು ಮೇಜಿನ ಸಭೆ ನಡೆಸಿದರು. https://youtu.be/GZ9vyKe8D34?si=vH47NJjhfQRK4xpQ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಯು.ಎಸ್. ಇಂಡಿಯಾ ಬಿಸಿನೆಸ್ ಕೌನ್ಸಿಲ್ ನ ಪ್ರತಿನಿಧಿಗಳೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು. ಈ ವೇಳೆ ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ಭಾಗಿಯಾಗಿದ್ರು. ಹಾಗೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ , ಐ.ಟಿ. ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್ ರೂಪ್ ಕೌರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Author: Prajatv Kannada
ಬೆಂಗಳೂರು: ದರ್ಶನ್, ಪವಿತ್ರಾ ಗೌಡ, ವಿನಯ್, ಪ್ರದೋಶ್ ಮುಂತಾದವರು ರೇಣುಕಾ ಸ್ವಾಮಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖವಾಗಿರುವ ಮತ್ತೋರ್ವ ವ್ಯಕ್ತಿ ಇದ್ದಾರೆ. ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಪಿಎಸ್‌ಐ ಪಿಎಸ್‌ಐ ವಿನಯ್ ಪಾತ್ರ ಏನು? ಅನುಮಾನಕ್ಕೆ ಕಾರಣವಾಗಿದೆ ತನಿಖೆ ವೇಳೆ ಪ್ರದೂಶ್ ನಡೆ ಪ್ರತಿ ಹಂತದಲ್ಲೂ ಓರ್ವನ ಪಾತ್ರ ಹೆಚ್ಚಿದೆ. ಅಷ್ಟಕ್ಕೂ ಆತ ಯಾರು? ಇಲ್ಲಿದೆ ಡಿಟೇಲ್ಸ್. https://youtu.be/ypjKQNAmmSo?si=L-DwloeWFRGYGMxg ಇದೇ ಪಿಎಸ್ಐ ವಿನಯ್ ಜೊತೆಗೆ ಪ್ರದೂಷ್ ಸಂಪರ್ಕ ಹೊಂದಿದ್ದು ಪ್ರಕರಣದಲ್ಲಿ ಎ14 ಆರೋಪಿಯಾಗಿರುವ ಪ್ರದೂಷ್ಜೂನ್ 8ರಿಂದ 10ರವರೆಗೆ ಇಬ್ಬರ ಮಧ್ಯೆ ಸಂಪರ್ಕಪ್ರದೂಷ್ ಮತ್ತು ವಿನಯ್ ಮಧ್ಯೆ ವ್ಯಾಟ್ಸಾಪ್ ಚಾಟ್122 ಬಾರಿ ವ್ಯಾಟ್ಸಾಪ್ ಚಾಟ್ ಮಾಡಿದ್ದು ಪತ್ತೆ ಚಾಟ್‌ನ ಕೆಲವು ಅಂಶಗಳು ಮೊಬೈಲ್‌ನಿಂದ ಡಿಲೀಟ್ ಜೂನ್ 9ರಂದು ಬೆಳಿಗ್ಗೆ ರೇಣುಕಾಸ್ವಾಮಿ ಮೃತದೇಹ ಪತ್ತೆ ಸಂಜೆ 6.28 ನಿಮಿಷಕ್ಕೆ ಪ್ರದೂಷ್‌ಗೆ ವಿಡಿಯೋ ರವಾನೆ ಸಿಸಿಟಿವಿ ವಿಡಿಯೋ ಕ್ಲಿಪ್ ಕಳುಹಿಸಿದ್ದ ಪಿಎಸ್‌ಐ ವಿನಯ್ ಅಪಾರ್ಟ್‌ಮೆಂಟ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವಿಡಿಯೋ ಬಿಳಿ ಬಣ್ಣದ ಸ್ಕಾರ್ಪಿಯೋ…
ಸೂರ್ಯೋದಯ: 06:07, ಸೂರ್ಯಾಸ್ತ : 06:18 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಸಪ್ತಮಿ, ನಕ್ಷತ್ರ: ಅನುರಾಧಾ, ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.8:48 ನಿಂದ ಬೆ.10:32 ತನಕ ಅಭಿಜಿತ್ ಮುಹುರ್ತ: ಬೆ.11:48 ನಿಂದ ಮ.12:37 ತನಕ ಮೇಷ ರಾಶಿ :ಮನಸ್ಸಿನಲ್ಲಿ ನೋವುಗಳು ದೂರವಾಗುತ್ತವೆ. ವೃತ್ತಿಯಲ್ಲಿ ಮುನಿಸಿಕೊಳ್ಳದ ಹಾಗೆ ಜಾಗ್ರತೆ ವಹಿಸಿ. ಸಹೋದರ ಸಹೋದರಿಯರಿಗೆ ಕಷ್ಟ-ಸುಖಕ್ಕೆ ಸಹಾಯ ಮಾಡುವಿರಿ. ನಿಮ್ಮ ಸುತ್ತ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತೀರಿ. ಕಾರ್ಯಯೋಜನೆಗೆ ಪೂರಕವಾದ ವಾತಾವರಣವಿದೆ. ಕುಟುಂಬದ ಎಲ್ಲ ಸದಸ್ಯರ ಸಂತೋಷ ಹೆಚ್ಚಾಗುತ್ತದೆ. ವ್ಯಾಪಾರ-ವಹಿವಾಟು ಯಶಸ್ಸಿನತ್ತ ಹೆಜ್ಜೆ ಹಾಕುವಿರಿ. ಮನೆಯಲ್ಲಿ ಶುಭ ಕಾರ್ಯಕ್ರಮ ಜರುಗುವುದು. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು…
ಕೇಂದ್ರ ಸರ್ಕಾರವು ರೈತರ ಏಳಿಗೆಗಾಗಿ ಶತ ಪ್ರಯತ್ನ ಮಾಡುತ್ತಿದೆ. ಅಂತೆಯೇ ಇದೀಗ ರೈತರ ಆದಾಯ ಹೆಚ್ಚಳದ ಉದ್ದೇಶವನ್ನಿಟ್ಟುಕೊಂಡು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಒಟ್ಟು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 2ರಂದು 14 ಸಾವಿರ ಕೋಟಿ ರೂ. ವೆಚ್ಚದ 7 ಬೃಹತ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದೆ. ಯೋಜನೆಗಳ ಪಟ್ಟಿ ಇಲ್ಲಿವೆ : ಬೆಳೆ ವಿಜ್ಞಾನ ಯೋಜನೆ (3979 ಕೋಟಿ ರು.) ಡಿಜಿಟಲ್ ಕೃಷಿ ಮಿಷನ್ (2817 ಕೋಟಿ ರು.) ಕೃಷಿ ಶಿಕ್ಷಣ, ನಿರ್ವಹಣೆ ಹಾಗೂ ಸಾಮಾಜಿಕ ವಿಜ್ಞಾನ ಕಾರ್ಯಕ್ರಮ (2291 ಕೋಟಿ ರು.) ಸುಸ್ಥಿರ ಜಾನುವಾರು ಆರೋಗ್ಯ ಹಾಗೂ ಉತ್ಪಾದನೆ ಯೋಜನೆ (1702 ಕೋಟಿ ರು.) ತೋಟಗಾರಿಕೆ ಸುಸ್ಥಿರ ಅಭಿವೃದ್ಧಿ (860 ಕೋಟಿ ರು.) ಕೃಷಿ ವಿಜ್ಞಾನ ಕೇಂದ್ರಗಳ ಬಲವರ್ಧನೆ (1202 ಕೋಟಿ ರು.) ನೈಸರ್ಗಿಕ ಸಂಪನ್ಮೂಲ ನಿರ್ವಹಣೆ (1115 ಕೋಟಿ ರು.) ಈ ಮೇಲಿನ 7 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ…
ಮಂಕಿಪಾಕ್ಸ್ ಎಂಬ ವೈರಸ್‌ನಿಂದ ಹರಡುವ ರೋಗವೇ ಮಂಕಿಪಾಕ್ಸ್. ಈ ವೈರಸ್ ಸಿಡುಬಿಗೆ ಕಾರಣವಾಗುವ ವೈರಾಣುವಿನ ವರ್ಗಕ್ಕೆ ಸೇರಿದ್ದಾಗಿದೆ. ಕ್ಲಾಡ್ ಐ ಮತ್ತು ಕ್ಲಾಡ್ ಐಐ ಎಂಬ ಎರಡು ವಿಧದ ಮಂಕಿಪಾಕ್ಸ್ ಸೋಂಕುಗಳಿವೆ. ಕ್ಲಾಡ್ ಐ ಮಧ್ಯ ಆಫ್ರಿಕಾದಲ್ಲಿ ಕಂಡುಬಂತು. ಕ್ಲಾಡ್ ಐಐ ಪಶ್ಚಿಮ ಆಫ್ರಿಕಾದಲ್ಲಿ ಪತ್ತೆಯಾಗಿದೆ. ಐಬಿ ಎಂದು ಕರೆಯಲ್ಪಡುವ ಕ್ಲಾಡ್ ಐನ ಹೊಸ ರೂಪಾಂತರ ಬಹುಬೇಗ ಹರಡುತ್ತದೆ. ಮೊದಲು ಪತ್ತೆಯಾಗಿದ್ದೆಲ್ಲಿ? ಆಫ್ರಿಕಾ ಖಂಡದ ದೇಶಗಳು. (1958ರಲ್ಲಿ ಮಂಕಿಪಾಕ್ಸ್ ಮೊದಲ ಬಾರಿಗೆ ಪತ್ತೆಯಾಯಿತು. ಈ ವೈರಾಣುವಿನ ಮೂಲ ಯಾವುದು ಎಂದು ಈವರೆಗೆ ಪತ್ತೆಯಾಗಿಲ್ಲ ಸೋಂಕಿನ ಲಕ್ಷಣಗಳೇನು? ಸೋಂಕು ತಗುಲಿದ ನಂತರ 6ರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ 5ರಿಂದ 21 ದಿನಗಳ ಅವಧಿಯಲ್ಲೂ ಕಾಣಿಸಿಕೊಳ್ಳಬಹುದು. * ಜ್ವರ * ತೀವ್ರವಾದ ತಲೆನೋವು * ದುಗ್ಧರಸ ಗ್ರಂಥಿಗಳಲ್ಲಿ ಊತ * ಬೆನ್ನು ನೋವು * ಸ್ನಾಯು ನೋವು * ತೀವ್ರತರ ನಿತ್ರಾಣ * ಮುಖ, ಕೈ, ಕಾಲುಗಳು, ಹಸ್ತ, ಪಾದಗಳಲ್ಲಿ ದುದ್ದುಗಳು…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ದೇವರುಗಳ ಮೊರೆ ಹೋಗುತ್ತಿದ್ದಾರೆ. ಅಂತೆಯೇ ಇದೀಗ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿ ಪತಿಯ ಬಿಡುಗಡೆಗಾಗಿ ಪ್ರಾರ್ಥಿಸಿದ್ದಾರೆ. ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮಿ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಅದಕ್ಕೆ ಸಿದ್ಧತೆ ಮಾಡಿಕೊಂಡಿರೋ ಬೆನ್ನಲ್ಲೇ ದರ್ಶನ್ ಪತ್ನಿ 51 ಶಕ್ತಿಪೀಠಗಳಲ್ಲಿ ಒಂದಾಗಿರುವ ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಭೇಟಿ ನೀಡಿರುವ ಫೋಟೋ ಶೇರ್ ಮಾಡಿ Prayer is Powerfull ಎಂದು ವಿಜಯಲಕ್ಷ್ಮಿ ಅಡಿಬರಹ ನೀಡಿದ್ದಾರೆ. ಆದರೆ ಎಲ್ಲೂ ದೇವಸ್ಥಾನ ಹೆಸರನ್ನು ಅವರು ಉಲ್ಲೇಖಿಸಿಲ್ಲ. ದರ್ಶನ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲಿ ದರ್ಶನ್ ಕೊಟ್ಟಿರುವ ಹೇಳಿಕೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತಿದೆ. ಈ ವೇಳೆ ಬಳ್ಳಾರಿಯಲ್ಲಿರುವ ದರ್ಶನ್ ಅವರನ್ನು ಇತ್ತೀಚೆಗೆ ವಿಜಯಲಕ್ಷ್ಮಿ ಹೋಗಿ ಆಗಾಗ…
ಹುಬ್ಬಳ್ಳಿ: ಕೇಂದ್ರದಿಂದ ಅಕ್ಕಿ ಕೊಡುತ್ತೇವೆ ಅಂದರೂ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವಾಗ ಅಕ್ಕಿ ಕೊಡ್ತೀನಿ ಅಂದರೂ ತಗೋತಿಲ್ಲ. ಮುನಿಯಪ್ಪ ಅವರು ಬಂದು ಅಕ್ಕಿ ಕೊಡ್ತೀರಾ ಅಂತಾ ಕೇಳಿದ್ರು. ನಾವು ಎಸ್ ಅಂದೀವಿ. ಆದ್ರೆ ಸಿದ್ದರಾಮಯ್ಯ ಅನುಮತಿ ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಅನ್ನೋದನ್ನ ಮುನಿಯಪ್ಪ ಹೇಳಬೇಕು? ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನಲ್ಲಿ ಸಿಎಂ ವಿಚಾರಕ್ಕೆ ಕೋಲಾಹಲ ವಿಚಾರ ಕುರಿತು ಮಾತನಾಡಿ, ಸಿಎಂ ವಿಚಾರವಾಗಿ ಮೊದಲು ದೇಶಪಾಂಡೆ ನಾನ ರೆಡಿ ಅಂದರು. ಆಮೇಲೆ ಪರಮೇಶ್ವರ, ಡಿಕೆ ಶಿವಕುಮಾರ್ ಅಂತೂ ಮೊದಲೇ ಕಾಯ್ತಿದ್ದಾರೆ. ಎಂ.ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಇನ್ನಷ್ಟು ದಿನಕ್ಕೆ ಪೋಸ್ಟರ್ ಹಾಕ್ತಾರೆ. ಕಾಂಗ್ರೆಸ್‌ನವರು ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತಾಡಿ ಅಂತ ಕೇಳಿದ್ದಾರೆ. ನಾನು ಇವಾಗ ದುಡ್ಡು ಕೊಡ್ರಪ್ಪಾ ಅಂತಾ ಕೇಳಬೇಕು. ಬರ ಪರಿಹಾರದ ದುಡ್ಡು ಕೊಟ್ಟಿಲ್ಲ.…
ಕಲಬುರಗಿ: ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಆರೋಪ ಪ್ರಕರಣದ ಪ್ರಮುಖ ಆರೋಪಿಯನ್ನು ಭಾನುವಾರ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ. ಪ್ರಭು ಹಿರೇಮಠ ಬಂಧಿತ ಆರೋಪಿ. ಈತ ಅಜ್ಞಾತ ಸ್ಥಳದಿಂದ ವೀಡಿಯೋ ಬಿಡುಗಡೆ ಮಾಡಿದ್ದ. ವಿಡಿಯೋನಲ್ಲಿ ಲಕ್ಷ ಲಕ್ಷ ಹಣ ವಸೂಲಿ ಬಗ್ಗೆ ಬಾಯ್ಬಿಟ್ಟಿದ್ದ. ಕೂಡಲೇ ವೀಡಿಯೋ ಬೆನ್ನುಹತ್ತಿದ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏನಿದು ಪ್ರಕರಣ? ಜಿಲ್ಲೆಯಲ್ಲಿ ಹನಿಟ್ರ್ಯಾಪ್ ಗ್ಯಾಂಗ್ ಸಕ್ರಿಯವಾಗಿದ್ದು, ಗ್ಯಾಂಗ್‌ನ ಸಂತ್ರಸ್ತೆಯೇ ಪೊಲೀಸ್ ಠಾಣೆಗೆ ದೂರು ದಾಖಲಿಸಿರುವ ಘಟನೆ ಶನಿವಾರ ಬೆಳಕಿಗೆ ಬಂದಿತ್ತು. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ಪರಿಚಯ ಮಾಡಿಕೊಂಡು ನಂತರ ಸಲುಗೆ ಬೆಳೆಸುತ್ತಾರೆ. ಅದಾದ ಬಳಿಕ ಮಂಚಕ್ಕೆ ಕರೆದು ವೀಡಿಯೋ ಮಾಡಲಾಗುತ್ತಿತ್ತು. ನಂತರ ಗ್ಯಾಂಗ್ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡುತ್ತಿತ್ತು. ಈ ವಿಚಾರವನ್ನು ಖುದ್ದು ಹನಿಟ್ರ‍್ಯಾಪ್ ಸಂತ್ರಸ್ತೆ ಬಿಚ್ಚಿಟ್ಟಿದ್ದಳು. ಸಂಘಟನೆ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಹುಡುಗಿಯರ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾಗುತ್ತಿದೆ.…
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿದೆ. ಮರಣೋತ್ತರ ಪರೀಕ್ಷೆಯಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ಭೀಕರತೆ ಬಗ್ಗೆ ಬಯಲಾಗಿದೆ. ಜೂನ್ 13ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡಿದ ಮೃತನ ಶವಪರೀಕ್ಷಾ ವರದಿಯನ್ನು ಪಡೆದು ಪರಿಶೀಲಿಸಿದ ನಂತರ, ವೈದ್ಯಾಧಿಕಾರಿಗಳು, ‘ಮೃತ್ಯುವು ಶಾಕ್ ಮತ್ತು ಅನೇಕ ಕಟು ಗಾಯಗಳ ಕಾರಣದಿಂದ ಸಂಭವಿಸಿದೆ’ ಎಂಬ ಅಭಿಪ್ರಾಯವನ್ನು ನೀಡಿರುತ್ತಾರೆ. ವೈದ್ಯರು ಮರಣೋತ್ತರ ಪರೀಕ್ಷಾ ವರದಿಯಲ್ಲಿ ನಮೂದಿಸಿರುವ ಮೃತನ ದೇಹದ ಮೇಲಿನ ಗಾಯಗಳ ವಿವರಗಳು ಬೆಚ್ಚಿ ಬೀಳಿಸುವಂತಿವೆ. ಎಡ ತಾತ್ಕಾಲಿಕ ಪಾರೈಟಲ್ ಪ್ರದೇಶದ ಮೇಲೆ 2.5cm x 1cm ಗಾತ್ರದ ಮಗ್ಗುಲು ಗಾಯವು ಬೋನ್ ಡೀಪ್ ಇದ್ದು, ಅದು ಪತ್ತೆಯಾಗಿದೆ. ಬಲಗಡೆಯ ಕುತ್ತಿಗೆಯ ಹಿಂಭಾಗದಲ್ಲಿ, ಹಿಂದಿನ ಕೂದಲು ಸಾಲಿನ ಕೆಳಗಿರುವ 3cm x 2cm ಗಾತ್ರದ ಕಾಟು (ಗಾಯ) ಪತ್ತೆಯಾಗಿದೆ. ಬಲಗಡೆಯ ಕುತ್ತಿಗೆಯ ಕೆಳಭಾಗದ ಹಿಂಭಾಗದಲ್ಲಿ, ಹಿಂದಿನ ಕೂದಲು ಸಾಲಿನಿಂದ 10cm ಕೆಳಗಿರುವ 5cm…
ಬೆಂಗಳೂರು:- ಲಕ್ನೋನ ಆರ್ಡಿಎಸ್‌ಓ ಅಧಿಕಾರಿಗಳಿಂದ ಮೆಟ್ರೋ ಹಳದಿ ಮಾರ್ಗ ತಪಾಸಣೆ ನಡೆದಿದೆ. ಕೇಂದ್ರ ರೈಲ್ವೆ ಇಲಾಖೆಯ ರಿಸರ್ಚ್ ಡಿಸೈನ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಅಧಿಕಾರಿಗಳಿಂದ ಆಸಿಲೇಷನ್ ಮತ್ತು ಇಬಿಡಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಅಂದರೆ ಈ ರೈಲಿನಲ್ಲಿ ಎಷ್ಟು ಪ್ರಯಾಣಿಕರು ಸಂಚಾರ ಮಾಡಬಹುದು, ಎಷ್ಟು ವೇಗದಲ್ಲಿ ಈ ರೈಲು ಸಂಚಾರ ಮಾಡುತ್ತದೆ, ಸಿಗ್ನಲ್ ಟೆಸ್ಟ್, ಬ್ರೇಕ್ ಕ್ಯಾಪಾಸಿಟಿ ಟೆಸ್ಟ್ ಹೀಗೆ ನಾನಾ ರೀತಿಯಲ್ಲಿ ಚೀನಾದ ಡ್ರೈವರ್ಲೆಸ್ ರೈಲಿನ ಪರಿಶೀಲನೆ ಮಾಡಲಾಗುತ್ತಿದೆ. ಹಳದಿ ಮೆಟ್ರೋ ರೈಲು ಮಾರ್ಗದ ವಿಶೇಷತೆಗಳು ಚಾಲಕ ರಹಿತ ಮೆಟ್ರೋ ಮಾರ್ಗವು 19.15 ಕಿಮೀ ಹೊಂದಿದೆ ಆರ್ ರಸ್ತೆ – ಬೊಮ್ಮಸಂದ್ರದ ನಡುವೆ ಕನೆಕ್ಟ್ ಮಾಡಲಿದೆ ಇದು ಒಟ್ಟು ಬರೋಬ್ಬರಿ 16 ನಿಲ್ದಾಣಗಳನ್ನ ಹೊಂದಿದೆ ಈ ಮೆಟ್ರೋ ಎತ್ತರಿಸಿದ ಮಾರ್ಗದಲ್ಲಿ ಮಾತ್ರ ಸಂಚರಿಸಲಿದೆ ಬೋಗಿಗಳಲ್ಲಿ 24 ಸಿಸಿ ಟಿವಿ ಇದ್ರೆ, ಮುಂಭಾಗದಲ್ಲಿ 2 ಸಿಸಿಟಿವಿ ಇರಲಿದೆ. ಪ್ರಯಾಣದ ದೃಶ್ಯವನ್ನ ಸೆರೆ ಹಿಡಿಯಲಿದೆ. ಇನ್ನೂ ನಿನ್ನೆಯಿಂದ 12 ರಿಂದ 15 ದಿನಗಳ ವರೆಗೆ…