Author: Prajatv Kannada

ಬೆಂಗಳೂರು: 14ನೇ ಬಾರಿಗೆ ಬಜೆಟ್​ ಮಂಡಿಸುತ್ತಿರುವ ಸಿದ್ದರಾಮಯ್ಯನವರು ‘ತೆಂಗು, ಅಡಕೆ, ದ್ರಾಕ್ಷಿ, ದಾಳಿಂಬೆ ಬೆಳೆ ಸಂಸ್ಕರಣೆಗೆ 10 ಕೋಟಿ ವೆಚ್ಚದಲ್ಲಿ ಯೋಜನೆ ಜಾರಿ, ಚಿಕ್ಕಮಗಳೂರು ಕಾಫಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ. ಅನುಗ್ರಹ ಯೋಜನೆ ಮರು ಜಾರಿ ಮಾಡಿ ‘ಕುರಿ ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರ ನೀಡಲಾಗುವುದು. ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ, ಅಬಕಾರಿ ಇಲಾಖೆಯಿಂದ 36,000 ಕೋಟಿ, ನೋಂದಣಿ & ಮುದ್ರಾಂಕ ಇಲಾಖೆಯಿಂದ 25,000 ಕೋಟಿ ಸೇರಿ ಒಟ್ಟು 1,62,000 ಕೋಟಿ ರಾಜಸ್ವ ಸಂಗ್ರಹ ಗುರಿಯನ್ನ ಸರ್ಕಾರ ಹೊಂದಿದೆ.

Read More

ಬೆಂಗಳೂರು: ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಲು ಸರ್ಕಾರ ಅಬಕಾರಿ ಸುಂಕವನ್ನು ಭಾರೀ ಏರಿಸಿದೆ. ಹಾಲಿ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‌ಗಳ ಮೇಲಿ ಹೆಚ್ಚುವರಿ 20% ಅಬಕಾರಿ ಸುಂಕ ಹೆಚ್ಚಿಸುವುದಾಗಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ. ತಮ್ಮ ಬಜೆಟ್‌ ಭಾಷಣದಲ್ಲಿ ಬಿಯರ್‌ ಮೇಲಿನ ಅಬಕಾರಿ ಸುಂಕವನ್ನು 175% ರಿಂದ 185% ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ. 2023-24ರ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ 36 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿಯನ್ನು ಸರ್ಕಾರ ನಿಗದಿಮಾಡಿದೆ.

Read More

ಆನೇಕಲ್: ಟ್ಯೂಶನ್ ಅಭ್ಯಾಸ ಮುಗಿಸಿ ಮನೆಯ ದಾರಿಯಲ್ಲಿ ಶಾಲಾ ವಾಹನದಿಂದ ಇಳಿಯುವಾಗ ಎಂಟು ವರ್ಷದ ಬಾಲಕನೊಬ್ಬ ಆಯತಪ್ಪಿ ಕೆಳಗೆ ಬಿದ್ದು ಪರಿಣಾಮ ಹಿಂಬದಿ ಚಕ್ರಕ್ಕೆ ಸಿಲುಕಿ ಪೋಷಕರ ಕಣ್ಣೆದುರಿಗೆ  ಸಾವನ್ನಪ್ಪಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ಪ್ಯಾರಡೈಸ್ ಲೇವೇಟ್ ನಲ್ಲಿ ನಡೆದಿದೆ .ಎಂಟು ವರ್ಷದ ಬಾಲಕ ದಿವಾನ್ ಸಿಂಗ್ ಮೃತಪಟ್ಟ ಬಾಲಕ ಇನ್ನು ಉತ್ತರಾಂಚಲ್ ಮೂಲದ ಚಂದ್ರಚೂಡ ಎಂಬವರು ಸುಮಾರು 50 ವರ್ಷಗಳ ಹಿಂದೆ ಹುಬ್ಬಳ್ಳಿ ಬಂದು ನೆಲೆಸಿ ಕೆಲಸ ನಿಮಿತ್ತ ಆನೇಕಲ್ ಪಟ್ಟಣದ ಮೇಡಹಳ್ಳಿ  ಸಮೀಪದ ಶ್ರೀ ಸಾಯಿ ಪ್ಯಾರಡೈಸ್ ನಲ್ಲಿ ಕುಟುಂಬ ಸಮೇತ ವಾಸವಾಗಿದ್ದರು . ಚಂದ್ರ ಚೋಡ್ ಇಬ್ಬರು ಮಕ್ಕಳಿದ್ದು  ಒಬ್ಬ ಮಗ ಇದೇ ಮೇಡಹಳ್ಳಿ  ಸಮೀಪದ ಎಸ್ ಎಸ್ ವಿ  ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸಂಜೆ ಆರು ಗಂಟೆಗೆ ಟ್ಯೂಶನ್ ಮುಗಿಸಿ ಮನೆಗೆ ಬರುವಾಗ ಇದೇ ಶಾಲೆಯ ವಾಹನದಲ್ಲಿ  ಇಳಿಯುತ್ತಿದ್ದಾಗ ವಾಹನ ತರಾತುರಿಯಲ್ಲಿ ಮುಂದೆ ಸಾಗಿತು. ಈ ವೇಳೆ ಚಾಲಕನ…

Read More

ಮುಂಬೈ: ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡದಲ್ಲಿ (Team India) ಸ್ಥಾನ ಪಡೆಯುವ ಅವಕಾಶವನ್ನು KKR ತಂಡದ ಫಿನಿಷರ್ ಖ್ಯಾತಿಯ ರಿಂಕು ಸಿಂಗ್ ಕಳೆದುಕೊಂಡಿದ್ದಾರೆ. ಹಾಗಾಗಿ ರಿಂಕು ಸಿಂಗ್ ಪರ ಧ್ವನಿ ಎತ್ತಿರುವ ಫ್ಯಾನ್ಸ್ ಟೀಂ ಇಂಡಿಯಾದ T20 ತಂಡದಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿ #ಜಸ್ಟೀಸ್ ಫಾರ್ ರಿಂಕು ಸಿಂಗ್ (#JusticeForRinkuSingh) ಕ್ಯಾಂಪೇನ್ ಆರಂಭಿಸಿದ್ದಾರೆ. ಹೌದು. ಆಗಸ್ಟ್ 3 ರಿಂದ ಆಗಸ್ಟ್ 13ರ ವರೆಗೆ 5 ಪಂದ್ಯಗಳ T20 ಸರಣಿ ನಡೆಯಲಿದೆ. ವೆಸ್ಟ್ ಇಂಡೀಸ್ ಪ್ರವಾಸದ 5 ಪಂದ್ಯಗಳ ಟಿ20ಐ ಕ್ರಿಕೆಟ್ ಸರಣಿಗೆ 15 ಸದಸ್ಯರ ಭಾರತ ತಂಡವನ್ನು BCCI ಪ್ರಕಟಿಸಿದೆ. ಈ ತಂಡದಲ್ಲಿ 2023ರ ಐಪಿಎಲ್ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಹಾಗೂ ತಿಲಕ್ ವರ್ಮಾ ಚೊಚ್ಚಲ ಅವಕಾಶ ಪಡೆದುಕೊಂಡಿದ್ದಾರೆ. ಆದ್ರೆ ಕೆಕೆಆರ್‌ನಲ್ಲಿ ಫಿನಿಷರ್ ಎಂದೇ ಗುರುತಿಸಿಕೊಂಡಿದ್ದ ರಿಂಕು ಸಿಂಗ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.…

Read More

ಹೈದರಾಬಾದ್: ಜುಲೈ 2 ರಿಂದ 5ರವರೆಗೆ 4 ದಿನಗಳ ಕಾಲ ಹೈದರಾಬಾದ್ ನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ 76ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕದ ಈಜು ಪಟುಗಳು ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕರ್ನಾಟಕಕ್ಕೆ ಸಮಗ್ರ ಪ್ರಶಸ್ತಿ ಪುರುಷ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಬಾಚಿಕೊಂಡ ಕರ್ನಾಟಕದ ಈಜುಪಟುಗಳು ಕ್ರೀಡಾಕೂಟದಲ್ಲಿ 16 ಚಿನ್ನ, 10 ಬೆಳ್ಳಿ ಮತ್ತು 12 ಕಂಚು ಸೇರಿದಂತೆ ಒಟ್ಟು 38 ಪದಕಗಳನ್ನು ಜಯಿಸುವುದರ ಜೊತೆಗೆ ಒಟ್ಟು 299 ಅಂಕ ಕಲೆಹಾಕುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. 8 ಚಿನ್ನ ಸೇರಿದಂತೆ ಒಟ್ಟು 25 ಪದಕಗಳನ್ನು ಜಯಿಸಿದ ಮಹಾರಾಷ್ಟ್ರ ಎರಡನೇ ಸ್ಥಾನ ಪಡೆಯಿತು. 200 ಮೀಟರ್ ಫ್ರೀಸ್ಟೈಲ್ ನಲ್ಲಿ ಕರ್ನಾಟಕದ ಧೀನಿಧಿ ದೇಸಿಂಗು 2:04.24 ನಿಮಿಷದಲ್ಲೇ ಗುರಿ ತಲುಪಿ ಸ್ವರ್ಣ ಪದಕವನ್ನು ಕೊರಳಿಗೇರಿಸಿಕೊಂಡಿದ್ದಲ್ಲದೆ, 2019ರಲ್ಲಿ ಶಿವಾನಿ ಕಟಾರಿಯಾ ಅವರು ನಿರ್ಮಿಸಿದ್ದ ದಾಖಲೆ (2:05.08ನಿಮಿಷ) ಮುರಿದು ಗಮನ ಸೆಳೆದರು. ಕರ್ನಾಟಕದವರೇ ಆದ ಹಷಿಕಾ ರಾಮಚಂದ್ರ (2:07.64ನಿಮಿಷ) ಬೆಳ್ಳಿ ಪದಕ…

Read More

MS ಧೋನಿ 42 ನೇ ಹುಟ್ಟುಹಬ್ಬದ ‘ತಲಾ’ ಮಾಜಿ ನಾಯಕನ ಐದು ಪ್ರಮುಖ ಸಾಧನೆಗಳು ಭಾರತೀಯ ಕ್ರಿಕೆಟ್‌ನ ಅದೃಷ್ಟವನ್ನು ಬದಲಾಯಿಸಿದವು | ಭಾರತೀಯ ಕ್ರಿಕೆಟ್‌ನ ಚಿತ್ರಣವನ್ನು ಬದಲಿಸಿದ ಧೋನಿಯ 5 ಸಾಧನೆಗಳನ್ನ ನೋಡೋಣ ಬನ್ನಿ.. 2006-2007ರ ಅವಧಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೆಟ್ಟ ಹಂತವನ್ನು ಎದುರಿಸುತ್ತಿದೆ. ನಂತರ 2007ರ ODI ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ ತಂಡವು ಮೊದಲ ಸುತ್ತಿನಲ್ಲೇ ಹೊರಬಿತ್ತು. ಇದಾದ ಬಳಿಕ ಭಾರತೀಯ ಕ್ರಿಕೆಟ್ ಸಂಕಷ್ಟಕ್ಕೆ ಸಿಲುಕಿತ್ತು. ಅದೇ ಸಮಯದಲ್ಲಿ ಅಂದಿನ ನಾಯಕ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದು, ನಾಯಕನ ಹುಡುಕಾಟ ನಡೆದಿದೆ. ನಂತರ ಎಂಎಸ್ ಧೋನಿಗೆ ನಾಯಕತ್ವವನ್ನು ಹಸ್ತಾಂತರಿಸಲಾಯಿತು. ಇಲ್ಲಿಂದ ಭಾರತೀಯ ಕ್ರಿಕೆಟ್‌ನ ಮುಖವೇ ಬದಲಾಗತೊಡಗಿತು. ಭಾರತ ಈ ವರ್ಷ ಟಿ20 ವಿಶ್ವಕಪ್‌ನ ಮೊದಲ ಆವೃತ್ತಿಯ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಎಂಎಸ್ ಧೋನಿಗೆ ಹಿಂತಿರುಗಿ ನೋಡದೆ ಇದು ಪ್ರಾರಂಭವಾಗಿದೆ. ಮಹಿ ಅವರ 42 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ವೃತ್ತಿಜೀವನದ ಐದು ವಿಶೇಷ ಸಾಧನೆಗಳನ್ನು…

Read More

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ಕಂಡ ಅತ್ಯಂತ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರು ಇಂದು 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಐಸಿಸಿ ಮೂರು ಪ್ರಶಸ್ತಿಗಳನ್ನು ಗೆದ್ದ ಭಾರತದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಜಾರ್ಖಂಡ್‌ ಆಟಗಾರ ಪಾತ್ರರಾಗಿದ್ದಾರೆ. ಮಾಜಿ ನಾಯಕನ ಜನುಮ ದಿನಕ್ಕೆ ಕ್ರಿಕೆಟ್‌ ದಿಗ್ಗಜರು ಸೇರಿದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆ ಹರಿಯುತ್ತಿದೆ. ಸುರೇಶ್‌ ರೈನಾ, ಶೇನ್‌ ವ್ಯಾಟ್ಸನ್‌, ದೀಪಕ್‌ ಚಾಹರ್‌, ಅಂಬಾಟಿ ರಾಯುಡು, ಮುರಳಿ ವಿಜಯ್‌, ಲಕ್ಷ್ಮಿಪತಿ ಬಾಲಾಜಿ ಕೂಲ್‌ ಕ್ಯಾಪ್ಟನ್‌ ಹುಟ್ಟುಹಬ್ಬಕ್ಕೆ ಶುಭಹಾರೈಸಿರುವ ವಿಡಿಯೋವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಟೀಮ್‌ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ, ಬಿಸಿಸಿಐ, ಎಸ್‌ ಬದ್ರಿನಾಥ್‌, ಮಾಜಿ ಆಟಗಾರ ಮೊಹಮ್ಮದ್ ಕೈಫ್‌ ಸೇರಿದಂತೆ ಅನೇಕ ದಿಗ್ಗಜರು ಎಂ.ಎಸ್‌ ಧೋನಿಯ 39ನೇ ಜನುಮ ದಿನಕ್ಕೆ ಶುಭಹಾರೈಸಿದ್ದಾರೆ. “ಹುಟ್ಟುಹಬ್ಬದ ಶುಭಾಶಯಗಳು ಮಾಹಿ ಭಾಯ್‌, ಆರೋಗ್ಯ ಹಾಗೂ ಸಂತೋಷ ನಿಮಗೆ ಸದಾ ಇರಲಿ, ದೇವರು ಒಳ್ಳೆಯದು ಮಾಡಲಿ,”…

Read More

ದೆಹಲಿ: ಎರಡು ಬಾರಿಯ ಟಿ20 ವಿಶ್ವ ಚಾಂಪಿಯನ್ಸ್‌ ವೆಸ್ಟ್‌ ಇಂಡೀಸ್‌ ಎದುರು ಪ್ರವಾಸಿ ಟೀಮ್ ಇಂಡಿಯಾ ಬರೋಬ್ಬರಿ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಈ ಸಲುವಾಗಿ ಅಜಿತ್ ಅಗರ್ಕರ್‌ ಸಾರಥ್ಯದ ಭಾರತ ತಂಡದ ಆಯ್ಕೆ ಸಮಿತಿಯು ಜುಲೈ 5ರಂದು (ಬುಧವಾರ) ಹಾರ್ದಿಕ್ ಪಾಂಡ್ಯ ಸಾರಥ್ಯದ 15 ಆಟಗಾರರ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ನಿರೀಕ್ಷೆಯಂತೆ ಆಯ್ಕೆ ಸಮಿತಿ ಕೆಲ ಯುವ ಆಟಗಾರರಿಗೆ ಮಣೆ ಹಾಕಿದೆ. ಆದರೆ, ಐಪಿಎಲ್‌ 2023 ಟೂರ್ನಿಯಲ್ಲಿ ಅಬ್ಬರಿಸಿ ಭಾರತ ಟಿ20 ತಂಡದ ಕದ ಬಡಿಯುತ್ತಿದ್ದ ಕೆಲ ಆಟಗಾರರಿಗೆ ಅದೃಷ್ಟ ಒಲಿಯಲಿಲ್ಲ ಅಂತಹ ಕೆಲ ಪ್ರಮುಖ ಆಟಗಾರರ ವಿವರವನ್ನು ಇಲ್ಲಿ ನೀಡಲಾಗಿದೆ. 16ನೇ ಆವೃತ್ತಿಯ ಐಪಿಎಲ್‌ನಲ್ಲಿ ರಿಂಕು ಸಿಂಗ್‌ ಆಡಿದ 14 ಇನಿಂಗ್ಸ್‌ಗಳಲ್ಲಿ 474 ರನ್‌ಗಳನ್ನು ಬಾರಿಸಿದ್ದರು. ಅಲಿಗಡ ಮೂಲದ 25 ವರ್ಷದ ಎಡಗೈ ಬ್ಯಾಟರ್‌ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬಲ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದರು. ಅಷ್ಟೇ ಅಲ್ಲದೆ ಫಿನಿಷರ್‌ ಕೆಲಸ ನಿಭಾಯಿಸುವಲ್ಲಿ ನಿಸ್ಸೀಮರಾಗಿದ್ದರು ಓಪನರ್‌ ಋತುರಾಜ್‌ ಗಾಯಕ್ವಾಡ್‌…

Read More

ಕಾಂತಾರ ಸಿನಿಮಾದ ಸ್ಟಾರ್ ನಟ ರಿಷಬ್ ಶೆಟ್ಟಿ ಗೆ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಕಾಂತಾರ ಸಿನಿಮಾದ ಮೂಲಕ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಸಪ್ತಮಿ ಗೌಡ ಸ್ವೀಟ್ ಆಗಿ ವಿಶ್ ಮಾಡಿದ್ದಾರೆ. ನಿಮ್ಮ ಉತ್ತುಂಗ ಮೇಲಿರಲಿ ಎಂದು ಲವ್ಲಿಯಾಗಿ ರಿಷಬ್ ಶೆಟ್ಟಿಗೆ ಸಪ್ತಮಿ ಗೌಡ ಶುಭಕೋರಿದ್ದಾರೆ. ಈ ಕುರಿತ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನಟ, ನಿರ್ದೇಶಕನಾಗಿ ಸಿನಿಮಾರಂಗದಲ್ಲಿ ಸೈ ಎನಿಸಿಕೊಂಡಿರುವ ರಿಷಬ್‌ಗೆ ಇಂದು 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದೆ. ಕಾಂತಾರ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ನೀವು ಮತ್ತೆ ಮತ್ತೆ ಮೇಲೇರಲಿ ಮತ್ತು ಹೆಚ್ಚಿನ ಯಶಸ್ಸು ತಲುಪಲಿ, ಮತ್ತು ನಿಮ್ಮ ಶುದ್ಧ ಗ್ರಿಟ್, ದೃಢನಿರ್ಧಾರ ಮತ್ತು ಸಿನಿಮಾದ ಬಗ್ಗೆ ನಿಮ್ಮಲ್ಲಿರುವ ಉತ್ಸಾಹದಿಂದ ಎಲ್ಲಾ ರೀತಿಯ ದಾಖಲೆಗಳನ್ನು ಮಾಡಿ. ಸಂತೋಷ, ಪ್ರೀತಿ ಮತ್ತು ಶಾಂತಿಯಿಂದ ತುಂಬಿದ ಹೆಚ್ಚು ಯಶಸ್ವಿ ವರ್ಷವನ್ನು ಬಯಸುತ್ತೇವೆ ಎಂದು ಫೋಟೋಗಳ ಜೊತೆ ಸಪ್ತಮಿ ಗೌಡ…

Read More

ಕಾಂತಾರ ಸಿನಿಮಾದ ಮೂಲಕ ಸಖತ್ ಖ್ಯಾತಿ ಘಳಿಸಿರುವ ನಟ ರಿಷಬ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಕುಟುಂಬಸ್ಥರ ಸಮ್ಮುಖದಲ್ಲಿ ರಿಷಬ್ 40ನೇ ವರ್ಷದ ಹುಟ್ಟಹಬ್ಬವನ್ನು ಸೆಲೆಬ್ರೇಟ್ ಮಾಡ್ತಿದ್ದಾರೆ. ಹುಟ್ಟುಹಬ್ಬದ ಈ ಸ್ಪೆಷಲ್ ದಿನದಂದು ರಿಷಬ್ ಸಿನಿಮಾದ ಅಪ್‌ಡೇಟ್ ಸಿಗುತ್ತಾ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಯಾವುದೇ ಸಿನಿಮಾದ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಿಷಬ್ ಶೆಟ್ಟಿ ಇಂದು ಸ್ಟಾರ್ ನಟನಾಗಿ ಮಿಂಚುತ್ತಿದ್ದಾರೆ. ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಾ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. ನಟನೆಯ ಜೊತೆ ಡೈರೆಕ್ಷನ್ ಕೂಡ ಆಸಕ್ತಿಯಿದ್ದ ಕಾರಣ, 2016ರಲ್ಲಿ ಅವರು ‘ರಿಕ್ಕಿ’ ಸಿನಿಮಾ ನಿರ್ದೇಶನ ಮಾಡಿದರು. ಅದೇ ವರ್ಷ ರಿಲೀಸ್ ಆದ ರಿಷಬ್ ನಿರ್ದೇಶನದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು. 2018ರಲ್ಲಿ ರಿಲೀಸ್ ಆದ ‘ಸಹಿಪ್ರಾ ಶಾಲೆ ಕಾಸರಗೋಡು’ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿತು. ಮಕ್ಕಳನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ್ದ ಈ ಸಿನಿಮಾ ಕನ್ನಡ ಶಾಲೆಗಳ ಉಳಿಸುವ ಅಗತ್ಯತೆಯ ಸಂದೇಶವನ್ನೂ ಈ ಸಿನಿಮಾದ ಮೂಲಕ ರಿಷಬ್ ತೆರೆಯ…

Read More