ಮೈಸೂರು ;- ವರ್ಗಾವಣೆ ದಂಧೆ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಸಂಬಂಧ ಮೈಸೂರಿನಲ್ಲಿ ಮಾತನಾಡಿದ ಅವರು, ಪೆನ್ ಡ್ರೈವ್ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ನಲ್ಲಿರುವ ದಾಖಲೆ ಬಿಡುಗಡೆ ಮಾಡ್ತೀನಿ ಎಂದರು. ಈ ಸರ್ಕಾರ ಏನು ಮಾತನಾಡುತ್ತದೆಯೋ ಎಲ್ಲವನ್ನು ಮಾತನಾಡಲಿ. ನನ್ನನ್ನು ಹಿಟ್ ಅಂಡ್ ರನ್ ಎಂದು ಹೇಳಿಕೊಳ್ಳಲಿ. ಕಾಂಗ್ರೆಸ್ ಹೀಗೆ ಮಾತನಾಡುತ್ತಿರಲಿ ಎಂದು ಹೇಳಿದ್ದಾರೆ. ಸಮಯ ಬಂದಾಗ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ. ಪೆನ್ ಡ್ರೈವ್ ಮಾಹಿತಿ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ವರ್ಗಾವಣೆ ದಂಧೆ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
Author: Prajatv Kannada
ಚಿತ್ರದುರ್ಗ: ಸವರ್ಣಿಯರಿಂದ ಪರಿಶಿಷ್ಟ ಜಾತಿ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಿದ್ದು ದೌರ್ಜನ್ಯದ ನಂತರ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸುರೇಶ್ ಹಾಗೂ ಸಹಚರರು ದಲಿತರ ಮನೆಗೆ ನುಗ್ಗಿ ಮನೆ ಮೇಲಿನ ಹಂಚು ಹೊಡೆದು ಪ.ಜಾತಿ ವ್ಯಕ್ತಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ ತಾಳ್ಯ ಗ್ರಾಮದ ಮಾರುತಿ (28) ಎನ್ನಲಾಗಿದ್ದು ಹಲ್ಲೆ ಬಳಿಕ ಮನೆಯಲ್ಲಿ ರಾತ್ರಿ ನಿಗೂಢವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಆಗಿದೆ. ರಾತ್ರಿ ವೇಳೆ ದೌರ್ಜನ್ಯ ಮಾಡಿದ ವ್ಯಕ್ತಿಗಳ ವಿರುದ್ದ ಕೊಲೆ ಕೇಸ್ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ: ಬೃಹತ್ ಗಾತ್ರದ ಮರ ಬೈಕ್ ಮೇಲೆ ಬಿದ್ದಿರುವ ಘಟನೆ ಮಡಿಕೇರಿ ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಐಗೂರಿನ ವಿಜಯನಗರದಲ್ಲಿ ನಡೆದಿದೆ. ಬೈಕ್ ಸವಾರ ಅಪಾಯದಿಂದ ಪಾರಾಗಿದ್ದು, ಟಾಟಾ ಸಂಸ್ಥೆಯ ತೋಟದಿಂದ ಮರ ಬಿದ್ದಿದೆ. ಇನ್ನೂ ಕರ್ನಾಟಕದಲ್ಲಿ ಮುಂಗಾರು (Karnataka Monsson) ಮಳೆ ಚುರುಕಾಗಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಶಾಲೆಗಳಿಗೆ ರಜೆ ನೀಡಲಾಗಿದೆ. ಅನೇಕ ಕಡೆ ವರುಣ ಅಬ್ಬರಿಸಿ ಬೊಬ್ಬೆರೆದಿದ್ದಾನೆ.
ಬೀದರ್: ಗೋ ಹತ್ಯೆ(Killing Go) ತಡೆಯಲು ಹೋದಾಗ ಅನ್ಯ ಕೋಮಿನ ವ್ಯಕ್ತಿ ಜೊತೆ ಕಿರಿಕ್ ವಿಚಾರವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನೆಯ ಮಾಲೀಕನ ಮಗ ಮೇಹರಾಜ್ ಇನಾಮುಲ್ಲಾಖಾನ್(Mehraj Inamullah Khan) ಅವರು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು ದೂರಿನ್ವಯ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಕ್ರೀದ್ ಹಬ್ಬದಂದು ಕುರ್ಬಾನಿ ಕೊಡುತ್ತಿದ್ದಾಗ ಮನೆಗೆ ಬಂದು ಶಾಸಕರು ಮತ್ತು ಅವರ ಬೆಂಬಲಿಗರು ಧಮ್ಮಿ ಹಾಕಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ. ಶಾಸಕ ಶರಣು ಸಲಗರ್ ಹಾಗೂ ಅವರ ಜೊತೆ ಬಂದಿದ್ದ 15-25 ಜನರು ನಮ್ಮ ಮನೆಯ ಬಳಿ ಬಂದು ಕಿರುಚಾಡಿದ್ದು ಅದು ಹೇಗೆ ಕುರ್ಬಾನಿ ಕೊಡುತ್ತೀರಿ ನೋಡೋಣ, ಕಲ್ಯಾಣದಲ್ಲಿ ನಿಮ್ಮದು ಜಾಸ್ತಿಯಾಗಿದ್ದು ನಾವು ಏನು ಎಂದು ತೋರಿಸುತ್ತೇವೆ ಎಂದು ನಮ್ಮ ಹಾಗೂ ನಮ್ಮ ತಂದೆಗೆ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ದೂರು ಸಲಿಸಿದ.ಮೇಹರಾಜ್ ಇನಾಮುಲ್ಲಾಖಾನ್ ಬಸವಕಲ್ಯಾಣ ನಗರ ಠಾಣೆ ಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹಾಸನ: ದೇಶಾದ್ಯಂತ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ಬೆಲೆ ಶತಕದ ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಹಲವರು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಟೊಮ್ಯಾಟೋಗಳನ್ನು ಕಾಪಾಡಲು ಮುಂದಾಗಿದ್ದಾರೆ. ಇದರ ನಡುವೆ ಹಾಸನ ಜಿಲ್ಲೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಕಳ್ಳತನವಾಗಿರುವ ಘಟನೆ ನಡೆದಿದೆ. ಲಕ್ಷಾಂತರ ಮೌಲ್ಯದ ಟೊಮ್ಯಾಟೋ ಕಳೆದುಕೊಂಡಿರುವ ರೈತ ಧರಣಿ ಕಂಗಾಲಾಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮ್ಯಾಟೋವನ್ನು ಕಳ್ಳರು ಎಗರಿಸಿದ್ದಾರೆ. ಗೋಣಿ ಸೋಮನಹಳ್ಳಿಯ ಧರಣಿ ಎಂಬುವವರ ಜಮೀನಿನಲ್ಲಿ ಕಳ್ಳತನವಾಗಿದೆ. ಧರಣಿ ಅವರ ಜಮೀನಿನಲ್ಲಿ ಉತ್ತಮ ಟೊಮ್ಯಾಟೋ ಇಳುವರಿ ಬಂದಿದ್ದು, ಕಳೆದ ಮೂರು ದಿನದಿಂದ ಟೊಮ್ಯಾಟೋ ಕೊಯ್ದು ಮಾರಾಟ ಮಾಡುತ್ತಿದ್ದರು. ಆದರೆ, ರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಬ್ಯಾಗ್‌ನಷ್ಟು ಟೊಮ್ಯಾಟೋ ಕೊಯ್ದಿದ್ದಿದ್ದಾರೆ. ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮ್ಯಾಟೋ ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಬುಧವಾರ ಬೆಳಗ್ಗೆ ಧರಣಿ ತಮ್ಮ…
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಸನದ ” ಗುರು ತೋರಿದ ದಾರಿ ತಿಂಗಳ ಮಾಮನ ತೇರು ” 105 ನೇ ಪವಿತ್ರವಾದ ಹುಣ್ಣಿಮೆ ಕಾರ್ಯಕ್ರಮ ” ಗುರು ಪೂರ್ಣಿಮೆಯ ” ಪ್ರಯುಕ್ತ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ” ಗುರು ಸ್ಮರಣೆ ” ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರಿಗೆ ” ಗುರು ಭಕ್ತಿಸಮರ್ಪಣೆಯ ” ಪವಿತ್ರವಾದ ಕಾರ್ಯಕ್ರಮವು ದಿನಾಂಕ 04 -07 -23 ರಂದು ಹಾಸನದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಾಸನ ಮತ್ತು ಕೊಡಗು ಜಿಲ್ಲೆಯ ಸದ್ಭಕ್ತರ ನೇತೃತ್ವದಲ್ಲಿ ನಡೆಯಿತು. *ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ ಉಪಸ್ಥಿತಿ ಇದ್ದರು. ಮಡಿಕೇರಿ ವಿಧಾನಸಭೆಯ ಸನ್ಮಾನ್ಯ ಶಾಸಕರಾದ ಶ್ರೀ ಡಾ. ಮಂತರ್ ಗೌಡರವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ…
ಚಿಕ್ಕಮಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಮಂಡಲದ ಮಟ್ಟದಲ್ಲಿ ಹೋರಾಟ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ. ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನವಿರೋಧಿ ನೀತಿ ಅನುಸರಿಸುತ್ತಿದೆ. ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಗ್ಯಾರಂಟಿ ಈಡೇರಿಸುತ್ತೇವೆ ಎಂದಿದ್ದರು. ಸರ್ಕಾರ ಬಂದು ಎರಡು ತಿಂಗಳು ಕಳೆದರೂ ಸಮರ್ಪಕ ಮಾರ್ಗಸೂಚಿ ರೂಪಿಸಿಲ್ಲ. ಭರವಸೆಗಳನ್ನು ಈಡೇರಿಸುವಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು. ಕೊಟ್ಟಮಾತನಿಂತೆ ಕಾಂಗ್ರೆಸ್ ಸರ್ಕಾರ ತಲಾ 10 ಕೆ.ಜಿ. ಅಕ್ಕಿ ಕೊಡಬೇಕು. ವಿದ್ಯುತ್ ಶುಲ್ಕ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ. ಹೀಗಾಗಿ ಶುಲ್ಕ ಹೆಚ್ಚಳ ಹಿಂಪಡೆಯಬೇಕು. ನಮ್ಮ ಸರ್ಕಾರ ಜಾರಿ ಮಾಡಿದ್ದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ರದ್ದು ಮಾಡಲು ಹೊರಟ್ಟಿದೆ. ಪಠ್ಯ ಪುಸ್ತಕದಲ್ಲಿ ಪಾಠ ಕೈ ಬಿಡುತ್ತಿದೆ. ಈ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಈಡೇರಿಸಬೇಕು. ದುಬಾರಿ ವಿದ್ಯುತ್ ಶುಲ್ಕ ಹಿಂಪಡೆಬೇಕು. ವಿದ್ಯುತ್ ಶುಲ್ಕ ಹಿಂಪಡೆಯದಿದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಜನರಿಗೆ ವಿದ್ಯುತ್ ಶುಲ್ಕ ಕಟ್ಟಲು ಬಿಡುವುದಿಲ್ಲ. ಇಂದು ಕೇವಲ ಸಾಂಕೇತಿಕ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಈ ಗ್ಯಾರಂಟಿಗಳನ್ನು ರಾಜ್ಯದ ಜನತೆಯ ಮನೆ–ಮನೆಗೆ ತಲುಪಿಸುವವರೆಗೂ ಈ ಹೋರಾಟ ಮುಂದುವರೆಯಲಿದೆ ಎಂದು ಕಟೀಲ್ ಗುಡುಗಿದರು.
ಉಡುಪಿ: ಉಡುಪಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೂಡ ನಿಡಂಬೂರು ದೈವಸ್ಥಾನ (Muda Nidambur Deity) ಜಲಾವೃತವಾಗಿದೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬಿದ್ದ ಭಾರಿ ಮಳೆಗೆ(Karnataka Monsson) ಅಗಾಧ ಪ್ರಮಾಣದ ನೀರು, ನದಿಯಲ್ಲಿ ಉಡುಪಿಯತ್ತ ಹರಿಯುತ್ತಿದೆ. ಬನ್ನಂಜೆ ಸಮೀಪದ ಮೂಡ ನಿಡಂಬೂರು ಬ್ರಹ್ಮ ಬೈದರ್ಕಳ ಗರಡಿ ಪ್ರಾಂಗಣ ನೀರಿನಿಂದ ತುಂಬಿಕೊಂಡಿದೆ. ಅರ್ಚಕರು ಬೆಳಗ್ಗೆ ನೆರೆ ನೀರಲ್ಲಿ ಬಂದು ಪೂಜೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಆರೆಂಜ್ ಅಲರ್ಟ್ ವಿಸ್ತರಿಸಲಾಗಿದೆ. ಮಳೆ, ನೆರೆ ಪರಿಸ್ಥಿತಿ ನೋಡಿಕೊಂಡು ಶಾಲಾ ಕಾಲೇಜಿಗೆ ರಜೆ ನೀಡುವ ಜವಾಬ್ದಾರಿಯನ್ನು ತಹಶೀಲ್ದಾರ್ ಮತ್ತು ಬಿಇಒ ಗೆ ಡಿಸಿ ಕೊಟ್ಟಿದ್ದಾರೆ. ಟೋಲ್ ಫ್ರೀ ನಂಬರ್ ಕೊಟ್ಟು ,ನೆರೆಪೀಡಿತ ಪ್ರದೇಶದ ಜನರು ಎಚ್ಚರಿಕೆಯಿಂದ ಇರಿ ಎಂದು ಜಿಲ್ಲಾಡಳಿತ ಸಂದೇಶ ರವಾನಿಸಿದೆ.
ಉಡುಪಿ: ಜೂನ್ ತಿಂಗಳಲ್ಲಿ ಕ್ಷೀಣವಾಗಿದ್ದ ಮುಂಗಾರು ಜುಲೈನಲ್ಲಿ ಬಡ್ಡಿ ಸಮೇತ ಲೆಕ್ಕ ಚುಕ್ತಾ ಮಾಡುತ್ತಿದೆ. ಕಳೆದ ನಾಲ್ಕು ದಿನದಿಂದ ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi Rain) ಭರ್ಜರಿ ಮಳೆ ಆಗುತ್ತಿದೆ. ಶಾಲಾ ಕಾಲೇಜಿಗೆ ರಜೆ ನೀಡಿದ್ದು ಜಿಲ್ಲೆಯ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಕೋಟಿ ಚೆನ್ನಯರ ಗರಡಿ ಪ್ರಾಂಗಣ ಮುಳುಗಿದೆ. ಹವಾಮಾನ ಇಲಾಖೆಯ (Weather Department) ಮುನ್ಸೂಚನೆಯಂತೆ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿತ್ತು. ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಹೆಬ್ರಿ, ಕಾರ್ಕಳದಲ್ಲಿ (Hebri Karkala) ಸುರಿದ ಭಾರೀ ಮಳೆಯಿಂದ ಸ್ವರ್ಣ ನದಿ ವಿರಾಟ್ ರೂಪವನ್ನು ತಾಳಿದೆ. ನಗರದ ಜನರ ಜೀವನಾಡಿ ಬಜೆ ಡ್ಯಾಮ್‍ನಿಂದ ನೀರನ್ನು ಹೊರಗೆ ಬಿಡಲಾಗಿದೆ.
ಗದಗ: ಬೆಕ್ಕುಗಳು ವಿಷಕಾರಿ ಹಾವಿನಿಂದ(poisonous snake) ಕುಟುಂಬಸ್ಥರನ್ನು ಬಚಾವ್ ಮಾಡಿರುವ ಘಟನೆ . ಗದಗ ಜಿಲ್ಲೆ ನರಗುಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಲಕ್ಷ್ಮಣ ಚಲವಾದಿ ಎನ್ನುವವರ ಕುಟುಂಬದವರು ಸಾಕಿದ್ದ ಬೆಕ್ಕುಗಳು(Domestic cats) ಕುಟುಂಬವನ್ನು ರಕ್ಷಿಸಿವೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆಮನೆಗೆ ಸೇರಿದೆ. ಮನೆ ಮಾಲೀಕರು ಆಗಮಿಸುತ್ತಿದ್ದಂತೆಯೇ ಅಡುಗೆ ಮನೆ ಬಳಿ ಎರಡು ಬೆಕ್ಕುಗಳು ನಿಂತು ಮೆಂವ್ ಮೆಂವ್ ಅಂತ ಅಂದಿವೆ. ಇದರಿಂದಾಗಿ ಮನೆ ಮಾಲೀಕರು ಬೆಕ್ಕುಗಳ ವರ್ತನೆಯಿಂದ ಗಾಬರಿಯಾಗಿ ಕಣ್ಣಾಡಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಕ್ಷಣವೇ ಉರಗ ತಜ್ಞ ಸುರೇಬಾನ ಅವರನ್ನು ಕರೆಸಿ ನಾಗರಹಾವು ಹಿಡಿಸಿದ್ದಾರೆ. ನಂತರ ನಾಗರಹಾವು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.