ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆತ್ಮಹತ್ಯೆಗೆ ಯತ್ನಿಸಿದ ನಾಗಮಂಗಲ ಡಿಪೋ (Nagamangala Bus Depot) ಸಾರಿಗೆ ನೌಕರ ಜಗದೀಶ್ ಆರೋಗ್ಯ ವಿಚಾರಿಸಿದ್ದಾರೆ. ಮುಂಜಾನೆಯೇ ಬೆಂಗಳೂರಿನಿಂದ ಓಡೋಡಿ ಬಂದ ಮಾಜಿ ಸಿಎಂ ಆತ್ಮಹತ್ಯೆಗೆ ಹತ್ನಿಸಿದ್ದ ಚಾಲಕನ ಆರೋಗ್ಯ ವಿಚಾರಿಸಿದ್ದಾರೆ. ಇನ್ನೂ ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಮಾಜಿ ಮೇಯರ್ ರವಿಕುಮಾರ್ ಸೇರಿದಂತೆ ಮುಖಂಡರು ಸಾಥ್ ನೀಡಿದರು.
Author: Prajatv Kannada
ಘಾಜಿಯಾಬಾದ್: ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್ ನಲ್ಲಿ ಇದ್ದಿದ್ದನ್ನು ಪ್ರಶ್ನಿಸಿದ ತಾಯಿಯನ್ನು ಕೊಲೆಗೈದಿರುವ ಘಟನೆ ದೆಹಲಿಯ ಕವಿ ನಗರದಲ್ಲಿ ನಡೆದಿದೆ. ಪುಷ್ಪಾದೇವಿ ರಾಣಾ ಮಗಳಿಂದಲೇ ಕೊಲೆಯಾದ ತಾಯಿ. 21 ವರ್ಷದ ಮಗಳು ರಶ್ಮಿ ರಾಣಾ ತನ್ನ ಶಿಕ್ಷಕಿ ನಿಶಾ ಗೌತಮ್ ಎಂಬಾಕೆ ಜೊತೆ ಸೆಕ್ಸ್ ರಿಲೇಶನ್ ಶಿಪ್ ನಲ್ಲಿದ್ದಳು. ಮಗಳ ವಿಷಯ ತಿಳಿದ ತಾಯಿ ಸಲಿಂಗ ಕಾಮದಿಂದ ದೂರ ಉಳಿಯುವಂತೆ ತಿಳಿಹೇಳಿದ್ದರು. ತನ್ನ ಸಂಬಂಧಕ್ಕೆ ತಾಯಿ ಅಡ್ಡವಾಗುತ್ತಾಳೆಂದು ತಿಳಿದ ರಶ್ಮಿ ತನ್ನ ಸಂಗಾತಿ ನಿಶಾ ಜೊತೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪುಷ್ಪಾರನ್ನು ಕೊಂದಿದ್ದಾರೆ. ತಲೆಯ ಭಾಗಕ್ಕೆ ತೀವ್ರವಾದ ಗಾಯಗೊಂಡಿದ್ದರಿಂದ ಪುಷ್ಪಾ ಸಾವನ್ನಪ್ಪಿದ್ದಾರೆ. ಪುಷ್ಪಾದೇವಿಯ ಕೊಲೆಯ ಬಳಿಕ ಪತಿ ಸತೀಶ್ ರಾಣಾ ಕವಿ ನಗರ ಪೊಲೀಸ್ ಠಾಣೆಯಲ್ಲಿ ರಶ್ಮಿ ಮತ್ತು ನಿಶಾ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಘಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ರಶ್ಮಿ ಮತ್ತು ನಿಶಾ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ರಶ್ಮಿ ತಾಯಿಯ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ರಶ್ಮಿ…
ರಾಯ್ಪುರ: ವ್ಯಕ್ತಿಯೊಬ್ಬ ದೇವರಿಗೆ ಬಲಿಕೊಟ್ಟ ಮೇಕೆಯನ್ನು (Goat) ಬಲಿಕೊಟ್ಟ. ಆದರೆ ಮೇಕೆ ಕಣ್ಣುಗಳೇ ಆತನನ್ನು ಬಲಿ ತೆಗೆದುಕೊಂಡ ಘಟನೆ ಛತ್ತೀಸಗಢದಲ್ಲಿ (Chhattisgarh) ನಡೆದಿದೆ. ಛತ್ತೀಸ್‌ಗಢದ ಸೂರಜ್‌ಪುರ ಜಿಲ್ಲೆಯ ಬಗರ್ ಸಾಯಿ (50) ಎಂಬ ವ್ಯಕ್ತಿ ತನ್ನ ಇಷ್ಟಾರ್ಥ ಈಡೇರಿದ ನಂತರ ದೇವಸ್ಥಾನದಲ್ಲಿ ಮೇಕೆಯನ್ನು ಬಲಿ ಕೊಡಲು ಯೋಜಿಸಿದ್ದ. ಮದನ್‌ಪುರ ಗ್ರಾಮದ ಇತರ ನಿವಾಸಿಗಳೊಂದಿಗೆ ಭಾನುವಾರ ಖೋಪಾಧಾಮ್‌ಗೆ ಆಗಮಿಸಿ ಅಲ್ಲಿ ಮೇಕೆಯನ್ನು ಬಲಿ ಕೊಟ್ಟರು. ಬಲಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ಮೇಕೆ ಮಾಂಸವನ್ನು ಬೇಯಿಸಿ ಊಟಕ್ಕೆ ಸಿದ್ಧಪಡಿಸಿದರು. ಪೂಜೆ ಕಾರ್ಯ ಮುಗಿದ ಮೇಲೆ ಎಲ್ಲರೂ ಮಾಂಸದೂಟಕ್ಕೆ ಸಿದ್ಧರಾಗಿ ಕುಳಿತರು. ಊಟ ಬಡಿಸುವ ವೇಳೆ ಮೇಕೆಯ ಕಣ್ಣು ಬಗರ್ ಸಾಯಿಗೇ ಊಟದಲ್ಲಿ ಸಿಕ್ಕಿದೆ. ಅದನ್ನು ಅವರು ತಿಂದಿದ್ದಾರೆ. ಈ ವೇಳೆ ಮೇಕೆ ಕಣ್ಣು ಆತನ ಗಂಟಲಲ್ಲೇ ಸಿಕ್ಕಿಹಾಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದೆ. ಉಸಿರಾಟದ ಸಮಸ್ಯೆಯಿಂದ ಏದುಸಿರು ಬಿಡುತ್ತಿದ್ದ ಬಗರ್ ಸಾಯಿಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ದೇವರಿಗೆ ಬಲಿಕೊಟ್ಟ ಮೇಕೆಯ ಕಣ್ಣು ಆತನನ್ನೇ ಬಲಿ ತೆಗೆದುಕೊಂಡಿತು.
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸೇರಿದ ಚಿನ್ನ, ವಜ್ರ, ಬೆಳ್ಳಿ ಬೆಲೆಬಾಳುವ ವಸ್ತುಗಳನ್ನು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಪ್ರಕರಣದ ಮೂಲ ಅರ್ಜಿದಾರರು ತಮಿಳುನಾಡು ವಿಚಕ್ಷಣಾ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ. ಜಯಲಲಿತಾ ಅವರಿಂದ ವಶಪಡಿಸಿಕೊಂಡಿದ್ದ ಅಮೂಲ್ಯ ವಸ್ತುಗಳ ಹರಾಜಿಗೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ತೀರ್ಪು ಕಾಯ್ದಿರಿಸಿರುವ ನಡುವೆಯೇ ಅವರು ಈ ಪತ್ರ ಬರೆದಿದ್ದಾರೆ. 1996 ಡಿಸಂಬರ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳವು ಚೆನ್ನೈನಲ್ಲಿರುವ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ 28 ವಿವಿಧ ಬಗೆಯ ವಸ್ತುಗಳನ್ನು ವಶಕ್ಕೆ ಪಡೆದಿತ್ತು. ಚಿನ್ನ, ಬೆಳ್ಳಿ, ವಜ್ರ, ಹವಳ, ಎಮರಾಲ್ಡ್, ಮುತ್ತು, ಬೆಲೆಬಾಳುವ ಹರಳುಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳು ಇದರಲ್ಲಿ ಸೇರಿತ್ತು. ಜಯಲಲಿತಾ ಪ್ರಕರಣವನ್ನು ಸುಪ್ರೀಂಕೋರ್ಟ್, ಕರ್ನಾಟಕಕ್ಕೆ ವಹಿಸಿದ ನಂತರ, ಈ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಬೆಂಗಳೂರು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಉಳಿದಿರುವ 28 ಬಗೆಯ ವಸ್ತುಗಳನ್ನು ಇನ್ನೂ ಬೆಂಗಳೂರು ನ್ಯಾಯಾಲಯಕ್ಕೆ ಒಪ್ಪಿಸಿಲ್ಲ. ಅದರಲ್ಲಿ 11344 ಸೀರೆಗಳು, ಚಿನ್ನದ ಪೆನ್, ಚಿನ್ನದ…
ಹೈದರಾಬಾದ್: ನಿಶ್ಚಿತಾರ್ಥ ಸಮಾರಂಭದಲ್ಲಿ ಚಿಕನ್ ಕರ್ರಿಗಾಗಿ ನಡೆದ ಕಲಹದಿಂದ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ಸೋಮವಾರ ಮಧ್ಯಾಹ್ನ ಸುಮಾರು 1.30 ಗಂಟೆಗೆ ಚಾರ್ಮಿನಾರ್ ಸಮೀಪದ ಹುಸೇನಿ ಅಲಂ ಎಂಬಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ. ನಿಶ್ಚಿತಾರ್ಥಕ್ಕೆ ಬಂದ ಅತಿಥಿಗಳ ಎರಡು ಗುಂಪು ನಿಶ್ಚಿತಾರ್ಥ ಮುಗಿದ ನಂತರ ಊಟಕ್ಕೆ ಕುಳಿತ್ತಿದ್ದರು. ಈ ವೇಳೆ ಅತಿಥಿಗಳಿಗೆ ಚಿಕನ್ ಕರ್ರಿ ಬೇಕಾಗಿತ್ತು. ಸರ್ವ್ ಮಾಡಲು ತಡವಾಗಿದ್ದಕ್ಕೆ ಕೆರಳಿದ ಗುಂಪು ನಡೆವೆ ಜಗಳ ಶುರವಾಗಿದೆ. ಬಡಿಸಲು ತಡ ಮಾಡಿದ್ದರಿಂದ ತಮಗೆ ಅವಮಾನವಾಗಿದೆ ಅಂತಾ ಹೇಳಿದ್ದಾರೆ. ಊಟ ಮುಗಿಸಿಕೊಂಡು ಹೋಗಿ ಚಾಕು ತೆಗೆದುಕೊಂಡು 15 ಅತಿಥಿಗಳು ವಾಪಸ್ ಬಂದಿದ್ದಾರೆ. ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಓರ್ವ ಯುವಕ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಅಷ್ಟೇ ಅಲ್ಲದೇ ಮಹಿಳೆಯರ ಕೋಣೆಗೂ ತೆರಳಿದ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಮೂವರನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ವಾಷಿಂಗ್ಟನ್: ಉತ್ತರ ಲೂಸಿಯಾನಾದ ಶ್ರೆವೆಪೋರ್ಟ್ನಲ್ಲಿ ನಡೆಯುತ್ತಿದ್ದ ಅಮೆರಿಕ ಸ್ವಾತಂತ್ರ್ಯದಿನದ ಸಂಭ್ರಮಾಚರಣೆಯ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದು ಕನಿಷ್ಟ 6 ಮಂದಿ ಗಾಯಗೊಂಡಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ. ಪ್ರತೀ ವರ್ಷ ಜುಲೈ 4ರಂದು ಅಮೆರಿಕದ ಉತ್ತರ ಲೂಸಿಯಾನಾದ ಶ್ರೆವೆಪೋರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಅಂತೆಯೇ ಈ ವರ್ಷ ಕೂಡ ಸ್ವಾಂತತ್ರ್ಯ ದಿನಾಚರಣೆ ನಡೆಯುತ್ತಿದ್ದು ಈ ವರ್ಷ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಹಾಜರಾಗಿದ್ದರು. ಈ ವೇಳೆ ಏಕಾಏಕಿ ಗುಂಡಿನ ದಾಳಿ ಆರಂಭವಾಗಿದೆ. ಸಭಾಂಗಣದ ಹೊರಗೆ ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ಜನರು ಹೊರಗೆ ಓಡಿ ಹೋಗಲು ಕಷ್ಟವಾಗಿ ನೂಕುನುಗ್ಗಲು ಉಂಟಾಗಿದೆ. ಈ ಗೊಂದಲದಲ್ಲಿ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಆಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ ಕನಿಷ್ಟ 7 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಶ್ರೆವೆಪೋರ್ಟ್ನ ಪೊಲೀಸ್ ಅಧಿಕಾರಿ ವ್ಯಾನ್ವ್ರೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ದಳಪತಿ ಪೆನ್ ಡ್ರೈವ್ ಬಾಂಬ್ ಹಾಕಿದ್ದಾರೆ.. ವರ್ಗಾವಣೆ ದಂಧೆ ಬಗ್ಗೆ ಸದನದಲ್ಲಿ ಗುಡುಗುತ್ತಿದ್ದ ಕುಮಾರಸ್ವಾಮಿ, ಇಂದು ಸಾಕ್ಷ್ಯ ಸಮೇತ ವಿಧಾನಸೌಧಕ್ಕೆ ಎಂಟ್ರಿ ಕೊಟ್ರು.. ಸಚಿವರೊಬ್ಬರು ವರ್ಗಾವಣೆಗೆ ಹಣ ಡಿಮ್ಯಾಂಡ್ ಮಾಡಿರೋ ಆಡಿಯೋ ಅದಾಗಿದ್ದು, ಸಿಎಂ, ಡಿಸಿಎಂನ್ನೂ ಬಿಡದೇ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ರು. ಯೆಸ್… ಸಿದ್ದರಾಮಯ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಮರವನ್ನೇ ಸಾರಿದ್ದಾರೆ.. ಇಷ್ಟು ದಿನ ಮಾತಿನಲ್ಲಿ, ಟ್ವಿಟರ್ ನಲ್ಲಿ ವರ್ಗಾವಣೆ ದಂಧೆ ಬಗ್ಗೆ ಕುಮಾರಸ್ವಾಮಿ ಮಾತಾಡ್ತಿದ್ರು. ಈಗ ಸಾಕ್ಷ್ಯ ಬಿಡುಗಡೆಗೂ ಮುಂದಾಗಿದ್ದಾರೆ. ಇವತ್ತು ಸದನಕ್ಕೆ ಬರುವಾಗ ಪೆನ್ ಡ್ರೈವ್ ವೊಂದನ್ನ ಜೇಬಲ್ಲಿಟ್ಟುಕೊಂಡೇ ಬಂದಿದ್ರು. ಮಾಧ್ಯಮಗಳ ಮುಂದೆ ಬಂದು ವರ್ಗಾವಣೆ ದಂಧೆಯ ಪೆನ್ ಡ್ರೈವ್ ಪ್ರದರ್ಶನ ಮಾಡಿದ್ರು. ವರ್ಗಾವಣೆಗಾಗಿ ಸಚಿವರೊಬ್ಬರು ಹಣಕ್ಕೆ ಡಿಮ್ಯಾಂಡ್ ಮಾಡಿರೋ ಆಡಿಯೋ ಇದರಲ್ಲಿದೆ ಎಂದು ಬಾಂಬ್ ಹಾಕಿದ್ರು. ಹೆಚ್ ಡಿಕೆ ಹಾಕಿದ ಪೆನ್ ಡ್ರೈವ್ ಬಾಂಬ್ ಗೆ ಇಡೀ ಸರ್ಕಾರ ಬೆಚ್ವಿ ಬಿದ್ದಿದೆ. ಆ ಆಡಿಯೋ ಯಾರದ್ದು ಅಂತಾ…
ಲಂಡನ್: ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಅವರ ಪಟ್ಟಾಭಿಷೇಕದ ಅಂಗವಾಗಿ ಸ್ಕಾಟ್ಲೆಂಡ್ ರಾಜಧಾನಿ ಎಡಿನ್‌ಬರ್ಗ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಇದೇ ವೇಳೆ ರಾಜ ಚಾರ್ಲ್ಸ್ ಹಾಗೂ ರಾಣಿ ಕ್ಯಾಮಿಲ್ಲಾ ಅವರಿಗೆ ರತ್ನಖಚಿತ ಕಿರೀಟವನ್ನು ಸಮರ್ಪಿಸಲಾಯಿತು. ‘ಯುನೈಟೆಡ್ ಕಿಂಗ್‌ಡಮ್ ಮತ್ತು ಕಾಮನ್‌ವೆಲ್ತ್ ಜನರ ಏಳಿಗೆಗೆ ಶ್ರಮಿಸಲು, ಅವರ ಸೇವೆ ಮಾಡಲು ಲಕ್ಷ್ಮಿ ದೇವಿ ಹಾಗೂ ವೆಂಕಟೇಶ್ವರ ದೇವರು ರಾಜಮನೆತನವನ್ನು ಅನುಗ್ರಹಿಸಲಿ’ ಎಂದು ಸ್ಕಾಟ್ಲೆಂಡ್‌ನ ಗ್ಲಾಸ್ಗೊದಲ್ಲಿರುವ ದೇವಸ್ಥಾನದ ಮುಖ್ಯ ಅರ್ಚಕ ಡಾ.ಶ್ರೀಹರಿ ವಲ್ಲಭಜೋಸುಲ ಪ್ರಾರ್ಥಿಸಿದರು. ಕ್ರೈಸ್ತ, ಮುಸ್ಲಿಂ ಧರ್ಮ ಗುರುಗಳ ಜೊತೆಗೆ ಯೆಹೂದಿ ಹಾಗೂ ಬೌದ್ಧ ಧರ್ಮಗಳ ಗುರುಗಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಚಳಿಗಾಲದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಗಂಟಲು ನೋವು ಬಹುತೇಕ ಜನರಲ್ಲಿ ಸಾಮಾನ್ಯವಾಗಿರುತ್ತದೆ. ಯಾರಿಗೆ ಗಂಟಲು ನೋವು ಹೆಚ್ಚಾಗಿರುತ್ತದೆ ಅವರಿಗೆ ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ, ಏನನ್ನಾದರೂ ತಿನ್ನಲು, ಕುಡಿಯಲು, ನುಂಗಲು ಕಷ್ಟವಾಗುತ್ತದೆ. ಆದರೆ ಇದಕ್ಕೆ ಭಯಪಡುವ ಅಗತ್ಯವಿಲ್ಲ. ಏಕೆಂದರೆ ಇಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಹಲವಾರು ಮನೆಮದ್ದುಗಳು ಪರಿಹಾರದ ರೂಪದಲ್ಲಿ ಕೆಲಸ ಮಾಡುತ್ತವೆ. ಚಳಿಗಾಲದಲ್ಲಿ ಗಂಟಲು ನೋವು ಬರಲು ಕಾರಣಗಳು ಮೊದಲಿಗೆ ಗಂಟಲು ನೋವು ಅಥವಾ ಚಳಿಗಾಲದಲ್ಲಿ ಗಂಟಲಿನ ಭಾಗದಲ್ಲಿ ಏಕೆ ನೋವು ಕಾಣಿಸಿ ಕೊಳ್ಳುತ್ತದೆ ಎಂದು ನೋಡುವುದಾದರೆ, ಇದೊಂದು ವೈರಲ್ ಸೋಂಕಿನ ಪ್ರಭಾವವಾಗಿದ್ದು, ಶೀತ ಹಾಗೂ ಜ್ವರದ ಸಂದರ್ಭದಲ್ಲಿ ಗಂಟಲಿನ ಭಾಗಕ್ಕೆ ತೊಂದರೆದಾಯಕವಾಗಿರುತ್ತದೆ. ಆದರೆ ಕೆಲವೊಂದು ವಿಶೇಷ ಪ್ರಕರಣಗಳಲ್ಲಿ ಮಾತ್ರ ಗಂಟಲು ನೋವು ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಏಕೆಂದರೆ ಗಂಟಲಿನ ಭಾಗದಲ್ಲಿ ವೈರಸ್ ಸಂತತಿ ಹೆಚ್ಚಾಗಿ ಉರಿಯೂತ ಕಂಡುಬರುತ್ತದೆ. ವಿಶೇಷವಾಗಿ ಟಾನ್ಸಿಲ್ ಭಾಗದಲ್ಲಿ ಈ ರೀತಿ ಆಗುತ್ತದೆ ಎಂದು ಹೇಳಲಾಗಿದೆ. ಆದರೆ ಮೊದಲೇ ಹೇಳಿದಂತೆ ಇದಕ್ಕೆ ಹೆದರಿಕೊಳ್ಳುವ ಅವಶ್ಯಕತೆ…
ಜಗತ್ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಕಲಾವಿದ ಮತ್ತು ಖ್ಯಾತ ನಟ ಜಾಕಿ ಚಾನ್ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಜಾಕಿ ಚಾನ್ ಸಿನಿಮಾಗಾಗಿ ಜನ ಈಗಾಲು ಕಾಯ್ತಿದ್ದಾರೆ. ಈ ಮಧ್ಯೆ ಜಾಕಿ ಚಾನ್ ಕುರಿತಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 1999 ರಲ್ಲಿ ಜಾಕಿ ಚಾನ್‌ಗೆ ಮಗಳಿದ್ದಳು. ಈಕೆಯ ಹೆಸರು ಎಟ್ಟಾಂಗ್ ಚೋಕ್ ಲಾಮ್. ಅವಳ ಜನನದ ಸುದ್ದಿ ಬಿಟ್ಟರೆ ಅವಳ ಬಗ್ಗೆ ಹೆಚ್ಚು ಯಾರಿಗೂ ತಿಳಿದಿಲ್ಲ. ಜಾಕಿ ಚಾನ್ ಅವರು ಭಾಗವಹಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ತಮ್ಮ ಮಗಳ ಬಗ್ಗೆ ಮಾತನಾಡುವುದಿಲ್ಲ. ಆರಂಭದಲ್ಲಿ ಇದರ ಕಾರಣ ಯಾರಿಗೂ ತಿಳಿದಿರಲಿಲ್ಲ. ಜಾಕಿ ಚಾನ್ ಮಗಳು ಭಿನ್ನಲಿಂಗೀಯ. ಆಕೆ ಮಹಿಳೆಯನ್ನು ಪ್ರೀತಿಸುತ್ತಿದ್ದಳು. ಈ ಕಾರಣದಿಂದಾಗಿ ಜಾಕಿ ಚಾನ್ ಅವರನ್ನು ಸ್ವೀಕರಿಸಲು ನಿರಾಕರಿಸಿದರು ಎಂದು ಹೇಳಲಾಗುತ್ತದೆ. ಜಾಕಿ ಚಾನ್ ತನ್ನ ಮಗಳನ್ನು ಕೆಲವು ವರ್ಷಗಳ ಹಿಂದೆ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನು ಇತ್ತೀಚಿಗೆ ಜಾಕಿ ರೀಲ್ ಒಂದನ್ನು ಹಂಚಿಕೊಂಡಿದ್ದರು. ರೈಡ್ ಆನ್ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ…