Author: Prajatv Kannada

ಬೆಂಗಳೂರು:- ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ. ಎಚ್​ಎಎಲ್​ನಲ್ಲಿ 28.6ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 28.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.9 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.4ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಬೆಂಗಳೂರು:- ಜಿಮ್ ಟ್ರೇನರ್​ ರವಿ ಪೂಜಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ರನ್ನು ಬನಶಂಕರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೇ.26 ರಂದು ರಾತ್ರಿ ಪ್ರಾಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆದಿತ್ತು. ಹರ್ಷ ಮತ್ತು ಸುಭಾಷ್ ಎಂಬುವವರು ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿಸಿದ್ದು ಧ್ರುವ ಸರ್ಜಾ ಬಳಿ ಕೆಲಸ ಮಾಡಿಕೊಂಡಿದ್ದ ನಾಗೇಂದ್ರ. ಧ್ರುವ ಸರ್ಜಾಗೆ ನಾಗೇಂದ್ರ ಚಾಲಕನಾಗಿಯೂ ಕೆಲಸ ಮಾಡಿದ್ದ. ನಾಗೇಂದ್ರಗೆ ಸಾಥ್ ಕೊಟ್ಟಿದ್ದೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಅನ್ನೋದು ಗೊತ್ತಾಗಿದೆ. ಪ್ರಶಾಂತ್ ಪೂಜಾರಿ ಅವರು ಧ್ರುವ ಸರ್ಜಾಗೆ ಆಪ್ತರಾಗಿದ್ದರು. ಧ್ರುವಗೆ ಜಿಮ್​ನಲ್ಲಿ ಟ್ರೇನ್ ಮಾಡುತ್ತಿದ್ದುದು ಇದೇ ಪ್ರಶಾಂತ್. ಇಬ್ಬರ ನಡುವಿನ ಆಪ್ತತೆಯನ್ನು ನಾಗೇಂದ್ರ ಹಾಗೂ ಅಶ್ವಿನ್​ಗೆ ಸಹಿಸಿಕೊಳ್ಳಲು ಆಗುತ್ತಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹಲ್ಲೆಗೆ ಪ್ಲ್ಯಾನ್ ರೂಪಿಸಿದರು. ತಾವೇ ಹಲ್ಲೆ ಮಾಡಿದರೆ ಗೊತ್ತಾಗುತ್ತದೆ ಎಂದು ಸ್ನೇಹಿತರ ಕೈಯಲ್ಲಿ ಹಲ್ಲೆ ಮಾಡಿಸಿದ್ದರಂತೆ. ಕನಕಪುರ ಮೂಲದ ಹರ್ಷ ಮತ್ತು ಸುಭಾಷ್ ಅವರನ್ನು ಮುಂದಕ್ಕೆ ಬಿಟ್ಟು ಅಶ್ವಿನ್…

Read More

ಬೆಂಗಳೂರು:- ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನೀಡಿರುವ ಡೆಡ್ ಲೈನ್‌ಗೆ ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ 15ಕ್ಕೆ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಕೊಟ್ಟಿರುವ ಡೆಡ್‌ಲೈನ್ ಮುಗಿಯಲಿದೆ. ರಾಜ್ಯದಲ್ಲಿ ಒಟ್ಟಾರೆ 2 ಕೋಟಿಯಷ್ಟು ವಾಹನಗಳಿದ್ದು, ಇದರಲ್ಲಿ ಇಲ್ಲಿಯವರೆಗೆ 51 ಲಕ್ಷ ವಾಹನಗಳು ಮಾತ್ರ ಹೆಚ್‌ಎಸ್‌ಆರ್‌ಪಿ ನಂಬರ್ ಹಾಕಿಸಿದ್ದಾರೆ. ಉಳಿದ 1.49 ಕೋಟಿ ವಾಹನಗಳು ಇನ್ನೂ ಹೆಚ್‌ಎಸ್‌ಆರ್‌ಪಿ ಹಾಕಿಸಿಲ್ಲ. ಸೆ.16ರಿಂದಲೇ ನಮ್ಮ ಇಲಾಖೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ಪೆಷಲ್‌ ಡ್ರೈವ್ ಮಾಡಿ 500 ರೂ. ದಂಡ ಹಾಕುತ್ತೇವೆ. ಮೊದಲ ಸಲ 500 ರೂ. ದಂಡ ವಿಧಿಸಿದರೇ ಎರಡನೇ ಸಲಕ್ಕೆ 1,000 ರೂ. ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಹೇಳಿದೆ. ಕೇಂದ್ರ ಸರ್ಕಾರ ಇಡೀ ದೇಶದಲ್ಲೇ ಏಕ ಮಾದರಿಯ ನಂಬರ್ ಪ್ಲೇಟ್ ಇರಬೇಕೆಂಬ ದೃಷ್ಟಿಯಿಂದ ಮತ್ತು ಅಪರಾಧ ಕೃತ್ಯಗಳ ಬಗ್ಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ನಿಂದ ಮಾಹಿತಿ ಸಿಗಲಿದೆ ಎಂಬ ಉದ್ದೇಶದಿಂದ ಹೆಚ್‌ಎಸ್‌ಆರ್‌ಪಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದನ್ನು…

Read More

ಬೆಂಗಳೂರು:- ಗಣೇಶ ಮೆರವಣಿಗೆ ಹಿನ್ನೆಲೆ, ನಾಗವಾರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್​ ಆಗಲಿದ್ದು, ಪಾರ್ಕಿಂಗ್​ ನಿಷೇಧ ಮಾಡಲಾಗಿದೆ. ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾನರಿ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಹೀಗಾಗಿ ಸೆಪ್ಟೆಂಬರ್​ 11 ರಂದು ಈ ರಸ್ತೆಯಲ್ಲಿ ಮಧ್ಯಾಹ್ನ 12:30 ರಿಂದ ರಾತ್ರಿ 1:00 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರ ನಿರ್ಬಂಧ ನಾಗವಾರ ಮುಖ್ಯ ರಸ್ತೆ ಮತ್ತು ಟ್ಯಾನು / ಡೇವಿಸ್ ರೋಡ್ ಮುಖ್ಯ ರಸ್ತೆ ನೇತಾಜಿ ಜಂಕ್ಷನ್​ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ. ರೋಜರ್ ರಸ್ತೆ, ಆರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ಹಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮಾಸ್ಕ್ ಜಂಕ್ಷನ್‌ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.…

Read More

ಬೆಂಗಳೂರು: 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ವಿಪಕ್ಷ ನಾಯಕ ಅಶೋಕ್ ಹೊಸ ಬಾಂಬ್‌ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಗ್ಯಾರಂಟಿಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಇದೀಗ ಅಕ್ರಮ ಬಿಪಿಎಲ್ ಪಡಿತರದಾರರಿಗೆ ಚಾಟಿ ಬೀಸಲು ಮುಂದಾಗಿದೆ. ಇದನ್ನೇ ಈಗ ಬಿಜೆಪಿ ಅಸ್ತ್ರ ಮಾಡ್ಕೊಂಡಿದೆ. 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಹಲವು ಕಠಿಣ ನಿಬಂಧನೆ ಹಾಕಲು ಮುಂದಾಗಿದೆ. ಗುಡಿಸಲಿನಲ್ಲಿದ್ದವರಿಗೆ ಮಾತ್ರ ಗ್ಯಾರಂಟಿಗಳು ಸಿಗಬೇಕು ಅಂತ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡ್ತಿದ್ದಾರೆ ಅಂತ ದೂರಿದ್ದಾರೆ. ಸಿದ್ದರಾಮಯ್ಯ ಸರ್ಕಾರ (Siddaramaiah’s Government) ಪಾಪರ್ ಆಗಿದೆ. ತೆರಿಗೆ ಹೆಚ್ಚಿಸಿದ್ರೂ ಸಂಬಳ ಕೊಡೋಕೆ ಆಗ್ತಿಲ್ಲ. ನಮ್ಮ ರಾಜ್ಯವೂ ಹಿಮಾಚಲದ ಸ್ಥಿತಿ ತಲುಪಿದೆ ಎಂದು ಲೇವಡಿ ಮಾಡಿದ್ರು. ಅಂದ ಹಾಗೇ, ಗೃಹಲಕ್ಷ್ಮಿ ಹಣ ಕಳೆದ…

Read More

ಸುದೀಪ್ ರನ್ನು ಮತ್ತೆ ಸ್ಮಾಲ್ ಸ್ಕ್ರೀನ್ ನಲ್ಲಿ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಯಾವಾಗ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗುತ್ತೆ, ಯಾವಾಗ ಸುದೀಪ್ ರನ್ನು ನೋಡ್ತೇವೆ ಎಂದು ಸಾಕಷ್ಟು ಮಂದಿ ಕಾಯ್ತಿದ್ದಾರೆ. ಆದ್ರೆ ಸುದೀಪ್ ಈ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡೋದು ಸಾಕಷ್ಟು ಅನುಮಾನವೇ ಆಗಿದೆ. ಇದೀಗ ಸುದೀಪ್ ಬರುತ್ತಾರೆ ಎಂದು ಕಾದು ಕೂತವರಿಗೆ ಕಲರ್ಸ್ ಕನ್ನಡ ಬಿಗ್ ಶಾಕ್ ನೀಡಿದೆ. ಸುದೀಪ್ ಬರೋದು ಅನುಮಾನವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ. ವಾರದ ಹಿಂದೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಪ್ರೋಮೋ ರಿಲೀಸ್ ಆಗಿತ್ತು. ಈ ಪ್ರೋಮೋದಲ್ಲಿ ಕೇವಲ ಲೋಗೋ ಮಾತ್ರವೇ ಇತ್ತು. ಅಲ್ಲದೆ, ಹೊಸ ಸೀಸನ್ ಶೀಘ್ರವೇ ಆರಂಭ ಆಗಲಿದೆ ಎಂದು ಬರೆಯಲಾಗಿತ್ತು. #KichchaSudeep ಎಂದು ಬರೆಯುವ ಮೂಲಕ ಎಲ್ಲರಿಗೂ ಸರ್​ಪ್ರೈಸ್ ನೀಡಲಾಗಿತ್ತು. ಸುದೀಪ್ ಈ ಸೀಸನ್​ನಲ್ಲಿ ಇರುತ್ತಾರೆ ಅನ್ನೋದು ಬಹುತೇಕ ಖಚಿತವಾಯಿತು. ಆದರೆ, ಈಗ ಈ ಹ್ಯಾಶ್​ಟ್ಯಾಗ್ ತೆಗೆದು ಹಾಕಲಾಗಿದೆ. ಬಿಗ್ ಬಾಸ್ ಪ್ರೋಮೋನ ಕಲರ್ಸ್​…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರನ್ನು ಬಂಧಿಸಿ ಮೂರು ತಿಂಗಳು ಕಳೆದಿದೆ. ಇದು ಹೈಪ್ರೋಪೈಲ್ ಕೇಸ್ ಆಗಿರೋದ್ರಿಂದ ದರ್ಶನ್ ಗೆ ಸದ್ಯದ ಮಟ್ಟಿಗೆ ಜಾಮೀನು ಸಿಗೋದು ಅನುಮಾನವೇ ಆಗಿದೆ. ಇಷ್ಟು ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಅರಾಮಾಗಿದ್ದ ದರ್ಶನ್ ಗೆ ಇದೀಗ ಬಳ್ಳಾರಿ ಜೈಲಿನ ವಾಸ ನುಂಗಲಾರದ ಬಿಸಿ ತುಪ್ಪವಾಗಿದೆ. ಅಂದ ಹಾಗೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಆದರೆ ಈ ಕೇಸ್ ನಲ್ಲಿ ಪವಿತ್ರಾ ಗೌಡ ದರ್ಶನ್ ಗಿಂತ ಹೆಚ್ಚಾಗಿ ಪಾತ್ರವಿದ್ದಿದ್ದೆ ಪವನ್ ನದ್ದು. ಪವಿತ್ರಾ ಗೌಡ ಹೆಸರಿನಲ್ಲಿ ರೇಣುಕಾಸ್ವಾಮಿ ಜೊತೆ ಚ್ಯಾಟಿಂಗ್ ಆರಂಭಿಸಿ, ರೇಣುಕಾಸ್ವಾಮಿ ಪತ್ತೆ ಮಾಡಿ ಕೊಲೆ ಮಾಡುವವರೆಗೂ ಪವನ್ ಪಾತ್ರ ಪ್ರಮುಖದಾಗಿದ್ದೆ. ಪ್ರಕರಣದಲ್ಲಿ ಆತ ಎ3 ಆಗಿದ್ದಾನೆ. ಆತ ಪೊಲೀಸರ ಎದುರು ಹಲವು ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ. ಬಿಕಾಂ ಮುಗಿಸಿ ಎಂಬಿಎ ಮಾಡಿದ ಈತ ದರ್ಶನ್ ಮನೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಬಳಿಕ ಪವಿತ್ರಾ ಗೌಡ ಮನೆಯಲ್ಲಿ ಕೆಲಸ…

Read More

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯ ವಿಚಾರಣೆ ಮುಕ್ತಾಯದ ಹಂತ ತಲುಪಿದ್ದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಮೇಲೆ ಒಟ್ಟು 10 ಕೇಸ್ ಗಳಲ್ಲಿ ದಾಖಲು ಮಾಡಲಾಗಿದೆ. ಪ್ರಮುಖವಾಗಿ ಕೊಲೆ, ಅಪಹರಣ ಹಾಗೂ ಸಾಕ್ಷ್ಯ ನಾಶ ಸೆಕ್ಷನ್‌ ಹಾಕಲಾಗಿದೆ. ಕೇಸ್‌ಗೆ ಸಂಬಂಧಿಸಿದಂತೆ ನಟ ದರ್ಶನ್‌ ಹಾಗೂ ಪವಿತ್ರಾ ಗೌಡ ಇಬ್ಬರ ಮೇಲೆಗೂ ಒಂದೇ ರೀತಿ ಕೇಸ್‌ಗಳನ್ನು ಹಾಕಲಾಗಿದೆ. ಈ ಮೂಲಕ ಕೇಸ್‌ನಲ್ಲಿ ಇಬ್ಬರ ಪಾತ್ರವೂ ಒಂದೇ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಯಾವೆಲ್ಲಾ ಕೇಸ್‌ – ಗರಿಷ್ಠ ಶಿಕ್ಷೆ ಏನು? ಐಪಿಸಿ ಸೆಕ್ಷನ್‌ 302 – ಕೊಲೆ ಆರೋಪ- ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ. ಐಪಿಸಿ ಸೆಕ್ಷನ್‌ 201 – ಸಾಕ್ಷ್ಯ ನಾಶ/ ಸುಳ್ಳು ಮಾಹಿತಿ – ಜೈಲು ಶಿಕ್ಷೆ ಐಪಿಸಿ ಸೆಕ್ಷನ್‌ 120(ಬಿ) – ಕ್ರಿಮಿನಲ್‌ ಪಿತೂರಿ…

Read More

ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೆ ಇತ್ತು. ಆದರೆ ಈ ಬಗ್ಗೆ ಜಯಂ ರವಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರೋ ನಟ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಹಳ ಯೋಚನೆ ಮತ್ತು ಚರ್ಚೆಗಳ ನಂತರ ಆರತಿ ಜೊತೆಗಿನ ನನ್ನ ವಿವಾಹ ಸಂಬಂಧಕ್ಕೆ ಡಿವೋರ್ಸ್ ನೀಡುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ಮಾಡಿಲ್ಲ ಎಂದು ನಟ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಮಯದಲ್ಲಿ ನಮ್ಮ ಮತ್ತು ಕುಟುಂಬದ ಗೌಪ್ಯತೆಯನ್ನು ಗೌರವಿಸಲು ನಾನು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತೇನೆ. ಈ ನಿಟ್ಟಿನಲ್ಲಿ ಯಾವುದೇ ಊಹೆಗಳು, ವದಂತಿಗಳು, ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಜೊತೆಗೆ ಈ ವಿಷಯವು ಖಾಸಗಿಯಾಗಿ ಉಳಿಯಲಿ ಎಂದು ನಟ ಮನವಿ ಮಾಡಿದ್ದಾರೆ. ನನ್ನ ಆದ್ಯತೆ ಯಾವಾಗಲೂ ಒಂದೇ ಆಗಿರುತ್ತದೆ. ನನ್ನ ಪ್ರೀತಿಯ…

Read More

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರುವ ನಟಿ ಏನೇ ಮಾಡಿದ್ರು ಸದಾ ಸುದ್ದಿಯಲ್ಲಿರುತ್ತಾರೆ. ಆದ್ರೆ ಕಳೆದ ಎರಡು ಮೂರು ವಾರಗಳಿಂದ ರಶ್ಮಿಕಾ ಸೈಲೆಂಟ್ ಆಗಿ ಬಿಟ್ಟಿದ್ದಾರೆ.ಅದಕ್ಕೆ ಕಾರಣವೂ ಇದೆ. ಅಂದ ಹಾಗೆ ಆ ಕಾರಣ ಕೇಳಿ ರಶ್ಮಿಕಾ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಆಘಾತಕಾರಿ ಪೋಸ್ಟ್​ ಒಂದು ಮಾಡಿ ಸುದ್ದಿಯಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ರಶ್ಮಿಕಾ ಮಂದಣ್ಣ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿರಲಿಲ್ಲ. ಇದಕ್ಕೆ ಒಂದು ಕಾರಣ ಇದೆ. ಅದರ ಬಗ್ಗೆಯೇ ರಶ್ಮಿಕಾ ಮಂದಣ್ಣ ವಿವರವಾಗಿ ಬರೆದು ಪೋಸ್ಟ್​ ಹಾಕಿದ್ದಾರೆ. ತಾವು ಏಕೆ ಎಲ್ಲೂ ಕಾಣಿಸಿಕೊಂಡಿಲ್ಲ? ಅನ್ನೋ ವಿಚಾರ ಬಹಿರಂಗಗೊಳಿಸಿದ್ದಾರೆ. ‘ಕಳೆದ ತಿಂಗಳು ನಾನು ಯಾವುದೇ ಪಬ್ಲಿಕ್ ಈವೆಂಟ್​​ನಲ್ಲಿ ಕಾಣಿಸಿಕೊಂಡಿರಲಿಲ್ಲ. ಎಲ್ಲೂ ಹೊರಗಡೆ ಕೂಡ ಹೋಗಿಲ್ಲ. ಇದಕ್ಕೆ ಕಾರಣ ನನಗೆ ಸಣ್ಣ ಆ್ಯಕ್ಸಿಡೆಂಟ್​ ಒಂದು ಆಗಿದೆ. ವೈದ್ಯರು ಹೇಳಿದಂತೆ ರೆಸ್ಟ್​ ತೆಗೆದುಕೊಂಡಿದ್ದೇನೆ.…

Read More