Author: Prajatv Kannada

ಬಹುಭಾಷಾ ನಟ ಕಮಲ್ ಹಾಸನ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ಕಮಲ್ ಇವುಗಳ ಚಿತ್ರೀಕರಣ ಮುಗಿಸಿ ಸಕ್ರೀಯ ರಾಜಕಾರಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕಾಗಿ ಅವರು ತೆರೆ ಮರೆಯಲ್ಲಿ ಸಿದ್ದತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಕಮಲ್ ನಟನೆಯ ಮತ್ತೊಂದು ಸಿನಿಮಾ ಘೋಷಣೆಯಾಗಿದ್ದು, ಚಿತ್ರದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದೆ. ಕಮಲ್ ಹಾಸನ್ ಸದ್ಯ ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇಂಡಿಯನ್ 2 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದಾದ ಬಳಿಕ ಮಣಿರತ್ನಂ ನಿರ್ದೇಶನದ ಚಿತ್ರದಲ್ಲಿ ನಟಿಸಬೇಕಿದೆ. ಜೊತೆಗೆ ಪ್ರಭಾಸ್ ನಟನೆಯ ಮುಂದಿನ ಸಿನಿಮಾದಲ್ಲೂ ಕಮಲ್ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾಗಳ ಮಧ್ಯೆಯೇ ಮತ್ತೊಂದು ಸಿನಿಮಾ ಘೋಷಣೆಯಾಗಿದೆ. ಸದ್ಯ ಕಮಲ್ ನಟನೆಯ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಇದು ಕಮಲ್ ಅವರ 233ನೇ (KH 233) ಸಿನಿಮಾವಾಗಿದೆ. ಕಮಲ್ ನಟನೆಯ 233ನೇ ಚಿತ್ರವನ್ನು ಎಚ್.ವಿನೋದ್ ನಿರ್ದೇಶನ ಮಾಡಲಿದ್ದು, ಸ್ವತಃ ಕಮಲ್ ಹಾಸನ್ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ.…

Read More

ದೆಹಲಿ: ಭಾರತ ತಂಡ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿದ್ದು, ಜುಲೈ 12ರಿಂದ ಆತಿಥೇಯರ ಎದುರು 2 ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾ, ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಮೂರನೇ ಆವೃತ್ತಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.  ದೇಶಿ ಕ್ರಿಕೆಟ್‌ನಲ್ಲಿ ಮಿಂಚಿರುವ ಬಂಗಾಳದ ಪ್ರತಿಭಾನ್ವಿತ ವೇಗದ ಬೌಲರ್‌ ಮುಖೇಶ್‌ ಕುಮಾರ್‌ ಅವರಿಗೆ ಕೊನೆಗೂ ಟೀಮ್ ಇಂಡಿಯಾದ ಬಾಗಿಲು ತೆರೆದಿದೆ. ಭಾರತ ಟೆಸ್ಟ್‌ ತಂಡದಲ್ಲಿ ಸ್ಥಾನ ಕಳೆದುಕೊಂಡ ಅನುಭವಿ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಸ್ಥಾನದಲ್ಲಿ ಅವಕಾಶ ಪಡೆದುಕೊಂಡಿರುವ ಬಂಗಾಳ ಮೂಲದ 29 ವರ್ಷದ ಬಲಗೈ ವೇಗದ ಬೌಲರ್ ಮುಖೇಶ್‌ ಕುಮಾರ್‌, ಕಳೆದ ಮೂರು ವರ್ಷಗಳಲ್ಲಿ ಬಂಗಾಳ ತಂಡದ ಪರ ಬೆಸ್ಟ್‌ ವೇಗದ ಬೌಲರ್‌ ಎನಿಸಿದ್ದಾರೆ. ಅವರ ಈ ಕಠಿಣ ಪರಿಶ್ರಮಕ್ಕೆ ಫಲವಾಗಿ ಮೊತ್ತ ಮೊದಲ ಬಾರಿ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆ ಆಗಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವೇಗಿ, ಐಪಿಎಲ್‌ 2023…

Read More

ದೆಹಲಿ: ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಣ ಮುಖಾಮುಖಿಗಳಲ್ಲಿ ಟೀಮ್ ಇಂಡಿಯಾ ಏಕಪಕ್ಷೀಯ ಜಯ ದಾಖಲಿಸುತ್ತಾ ಬಂದಿದೆ, ಮುಂದೆಯೂ ಇಂಥದ್ದೇ ಫಲಿತಾಂಶ ಬರಲಿದೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕ್‌ ತಂಡದ ಮಾಜಿ ಆಟಗಾರ ಬಸಿತ್‌ ಅಲಿ ಗಂಗೂಲಿ ವಿರುದ್ಧ ಕಿಡಿಕಾರಿದ್ದಾರೆ. ಕ್ರಿಕೆಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯು ಸಂಪೂರ್ಣ ಭಾರತದ ಆತಿಥ್ಯದಲ್ಲಿ ಆಯೋಜನೆ ಆಗಲಿದೆ. ಅಕ್ಟೋಬರ್‌ 5ರಿಂದ ನವೆಂಬರ್‌ 19ರವರೆಗೆ ನಡೆಯಲಿರುವ ಟೂರ್ನಿಯಲ್ಲಿ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಕ್ಟೋಬರ್‌ 15ರಂದು ಪೈಪೋಟಿ ನಡೆಸಲಿವೆ. ಈ ಬಗ್ಗೆ ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸೌರವ್‌ ಗಂಗೂಲಿ, ಮುಂಬರುವ ವಿಶ್ವಕಪ್‌ನಲ್ಲಿ ಭಾರತ-ಪಾಕ್‌ ಪಂದ್ಯಕ್ಕಿಂತಲೂ ಭಾರತ-ಆಸ್ಟ್ರೇಲಿಯಾ ನಡುವಣ ಪಂದ್ಯವೇ ಅತ್ಯಂತ ಮಹತ್ವದ್ದು ಎಂದಿದ್ದರು. ಇನ್ನು ಸೌರವ್‌ ಗಂಗೂಲಿ ಹೇಳಿಕೆಯನ್ನು ಟೀಕೆ…

Read More

ಸೂರ್ಯೋದಯ: 05.58 AM, ಸೂರ್ಯಾಸ್ತ : 06.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ತದಿಗೆ 06:30 AM ತನಕ ನಂತರ ಚೌತಿ ನಕ್ಷತ್ರ: ಇವತ್ತು ಶ್ರವಣ  02:56 AM ತನಕ ನಂತರ ಧನಿಷ್ಠ ಯೋಗ: ಇವತ್ತು ವಿಷ್ಕುಂಭ03:49 AM ತನಕ ನಂತರ ಪ್ರೀತಿ ಕರಣ: ಇವತ್ತು ವಿಷ್ಟಿ 06:30 AM ತನಕ ನಂತರ ಬವ 04:49 PM ತನಕ ನಂತರ ಬಾಲವ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 09:00 ನಿಂದ 10:30 ವರೆಗೂ ಅಮೃತಕಾಲ: 03.06 PM to 04.32 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:54 ನಿಂದ ಮ.12:46 ವರೆಗೂ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ…

Read More

ಬೆಂಗಳೂರು ;- ತಾಜ್‌ ವೆಸ್ಟ್‌ಎಂಡ್‌ ಹೊಟೇಲ್‌ನಲ್ಲಿ ವಾಸ್ತವ್ಯ ಕುರಿತು ಲಘುವಾಗಿ ಮಾತನಾಡಿದ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡುವ ಅವರು, ಕೆಎಸ್‌ಟಿ’ ತೆರಿಗೆಯನ್ನು ನಾನು ಇಟ್ಟುಕೊಂಡಿಲ್ಲ. ಹಿಂದೆ ನಾನು ಕಾಂಗ್ರೆಸ್‌ ಪಕ್ಷದ ಜತೆ ಮೈತ್ರಿ ಸರ್ಕಾರ ರಚನೆ ಮಾಡಿದ್ದೆ. ವೆಸ್ಟೆಂಡ್‌ ಬಾಕಿ ಬಿಲ್‌ ಕಾಂಗ್ರೆಸ್‌ಗೆ ಕಳಿಸಿದರಾ? ತಿಂಗಳಿಗೆ 2-3 ಲಕ್ಷ ರು. ವೆಚ್ಚ ಮಾಡುವ ಯೋಗ್ಯತೆ ಇಲ್ಲವೇ? ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಈಗಲೂ ರೂಂ ಇದೆ ಎಂದರು. ಬೇಕಿದ್ದರೆ ನನ್ನ ಆಸ್ತಿಯ ಬಗ್ಗೆ ತನಿಖೆ ಮಾಡಲಿ. ರಾಜಕೀಯಕ್ಕೆ ಬರುವ ಮುಂಚೆ ನನ್ನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ ಎಂಬುದನ್ನು ತನಿಖೆ ಮಾಡಬಹುದು. ನಾನು ಬೇಸಾಯ, ಸಿನಿಮಾ ಮಾಡಿದ್ದೇನೆ. ಕೆಲವರಂತೆ ಟೆಂಟಿನಲ್ಲಿ ನೀಲಿಚಿತ್ರ ತೋರಿಸಿ ದುಡ್ಡು ಮಾಡಿದವನಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ಬಂದಿದ್ದೀನಾ? ನನ್ನ ಬಗ್ಗೆ ಮಾತನಾಡಲು ಹಿತಿಮಿತಿ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Read More

ಬೆಂಗಳೂರು:  ಅನ್ನಭಾಗ್ಯ ಯೋಜನೆ‌ಗೆ ಬಿಜೆಪಿ ಅಕ್ಕಿ ನೀಡದ ಹಿನ್ನೆಲೆ ಯೂತ್ ಕಾಂಗ್ರೆಸ್ ನ ನೂರಾರು ಕಾರ್ಯಕರ್ತರು ಮಲ್ಲೇಶ್ವರಂನ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ನೂರಾರು ಕೈ ಕಾರ್ಯಕರ್ತರು ಸಂಸದರ ಮುಕವಾಡ ಧರಿಸಿ, ಅಕ್ಕಿ ಮೂಟೆ ಹೊತ್ತು ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಮುಂದಾದ್ರು ಈ ವೇಳೆ ಪೊಲೀಸರು ಬಿಜೆಪಿ ಕಛೇರಿಯ ಮುಂಭಾಗದಲ್ಲೇ ಬ್ಯಾರಿಕೇಡ್ ಹಾಕಿ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆದ್ರು. ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರ ಮಧ್ಯೆ ವಾಗ್ವಾದ ನಡೆದು ಬ್ಯಾರಿಕೇಡ್ ಹತ್ತಿ ಬಿಜೆಪಿ ಕಛೇರಿ ಮುತ್ತಿಗೆ ಹಾಕಲು ನಲ್ಪಾಡ್ ಯತ್ನಿಸಿದಾಗ ಎಲ್ಲರನ್ನು ವಶಕ್ಕೆ ಪಡೆದು ಸ್ಥಳದಿಂದ ಕರೆದೊಯ್ದರು. ಈ ವೇಳೆ ಮಾತನಾಡಿದ ನಲಪಾಡ್ 25 ಜನ ನಾಲಾಯಕ್ ಎಂಪಿಗಳ ವಿರುದ್ಧ ಇವತ್ತು ಪ್ರತಿಭಟನೆ ಮಾಡ್ತಿದ್ದೀವಿ. ಕರ್ನಾಟಕದಿಂದ 25 ಸಂಸದರನ್ನು ದೆಹಲಿಗೆ ಕಳುಹಿಸಿದ್ದೇವೆ ಏನ್ ಕೆಲ್ಸ ಮಾಡ್ತಿದ್ದಾರೆ ಅವ್ರು. ನಾವು 10 ಕೆಜಿ ಅಕ್ಕಿಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ಅಷ್ಟೇ ಕೊಡ್ತಿಲ್ಲ ರಾಜ್ಯದ ಎಲ್ಲಾ…

Read More

ಬೆಂಗಳೂರು ;– ವಿಧಾನಮಂಡಲದ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕಂದಾಯ ಇಲಾಖೆಯ ಭೂಕಬಳಿಕೆಯ ವಿಷಯದ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ. ಟಿ. ಎ. ಶರವಣ ಅವರು ಪ್ರಸ್ತಾಪಿಸಿದರು. ರಾಜ್ಯದಲ್ಲಿ ಸರ್ಕಾರಿ ಜಾಗವನ್ನು ಖಾಸಗಿ ಸಂಘ ಸಂಸ್ಥೆಗಳಿಗೆ ಅಥವಾ ವೈಯಕ್ತಿಕ ವಿವಿಧ ಉದ್ದೇಶಗಳಿಗೆ ಕಬಳಿಕೆ ಮಾಡುತ್ತಿದ್ದರು ಕೂಡ ಅಧಿಕಾರ ವಹಿಸಿಕೊಂಡ ಯಾವ ಸರ್ಕಾರವೂ ಇದರ ಕುರಿತಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹೇಳಿದರು. ಈ ಒಂದು ಅಕ್ರಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳ ಕೈವಾಡವಿದೆ ಅದರ ಕುರಿತಂತೆ ಸೂಕ್ತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸಬೇಕು ಎಂದು ಈ ವೇಳೆ ಅವರು ಒತ್ತಾಯಿಸಿದರು. ರಾಜ್ಯದ ಗೋಮಾಳ ಭೂಮಿ, ಬೆಟ್ಟ ಪ್ರದೇಶಗಳನ್ನು ಉದ್ಯಮಿಗಳು ಮತ್ತು ಸಂಘ–ಸಂಸ್ಥೆಗಳಿಗೆ ಪರಭಾರೆ ಮಾಡಬಾರದು, ಗ್ರಾಮೀಣ ಭಾಗದ ಜನರ ಬದುಕನ್ನು ಕಾಯುವ ಮೂಲೆಸೆಲೆಗಳಲ್ಲೊಂದಾದ ಈ ಗೋಮಾಳ, ಬೆಟ್ಟ ಭೂಮಿಯನ್ನು ಸರ್ಕಾರ ರಕ್ಷಿಸಬೇಕೆಂದು ಅವರು ಮಂಡಿಸಿದ ವಿಷಯಕ್ಕೆ ಮಾನ್ಯ ಕಂದಾಯ ಸಚಿವರಾದ ಶ್ರೀ. ಕೃಷ್ಣ ಬೈರೇಗೌಡ ಅವರು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.…

Read More

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜನರಿಗೆ ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತಿದೆ. ಬಿಜೆಪಿ ನಾಯಕರಿಗೆ ರಾಜ್ಯದ ಜನ ವಿಶ್ರಾಂತಿ ಪಡೆಯಲು ಮನೆಗೆ ಕಳುಹಿಸಿದ್ದು, ಅವರಿಗೆ ಮಾಡಲು ಕೆಲಸವಿಲ್ಲದೆ ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಬಿಜೆಪಿಯವರು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಿರುವ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸರ್ಕಾರ ಹಾಗೂ ಭಾರತ ಆಹಾರ ಪ್ರಾಧಿಕಾರವು ಅಕ್ಕಿ ದಾಸ್ತನು ಇದ್ದರೂ ರಾಜ್ಯಕ್ಕೆ ನೀಡಲು ನಿರಾಕರಿಸಿದೆ. ಬಿಜೆಪಿ ನಾಯಕರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮೊದಲು ಧರಣಿ ನಡೆಸಬೇಕು. ಕೇಂದ್ರದ ಬಡವರ ವಿರೋಧಿ ನಿಲುವಿನ ವಿರುದ್ಧ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ತಂಡ ಹೋರಾಟ ಮಾಡಲಿ ಎಂದು ಕರೆ ನೀಡಿದರು. ಎಚ್‌ಡಿಕೆ ಬೇಸರದ ಹೇಳಿಕೆ: ವರ್ಗಾವಣೆಗೆ ಮುಖ್ಯಮಂತ್ರಿ ಕಚೇರಿಯಲ್ಲಿ 30 ಲಕ್ಷ ರು. ನೀಡಬೇಕು ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ, ‘ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದಿದೆ ಎಂಬ ಬೇಸರದಲ್ಲಿ ಮಾತನಾಡುತ್ತಿದ್ದಾರೆ. ಹೀಗಾಗಿ ಅವರ…

Read More

ಮೈಸೂರು ;- ಬೆಂ-ಮೈ ಹೆದ್ದಾರಿ ಅಪಘಾತ ಹಿನ್ನಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಗೆ ಸಂಸದ ಪ್ರತಾಪ್ ಸಿಂಹ ಸಮರ್ಥನೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈ ಮೇಲೆ ಏನೋ ಬಂದವರಂತೆ ವಾಹನ ಚಾಲನೆ ಮಾಡುತ್ತಾರೆ. ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ ಎಂದು ದೂರುತ್ತಾರೆ. ಮೈಸೂರು-ಬೆಂಗಳೂರು ಹೆದ್ದಾರಿಯನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು. ಹೆದ್ದಾರಿಯಲ್ಲಿ ಮನಬಂದಂತೆ ವಾಹನ ಚಲಾಯಿಸುವ ಬದಲು, ವೇಗದ ಮಿತಿಗೆ ತಕ್ಕಂತೆ ವಾಹನ ಚಲಾಯಿಸಿದ್ರೆ ಅಪಘಾತ ಉಂಟಾಗೊಲ್ಲ. ಇದರ ನಡುವೆಯೂ ಹೈವೇಯಲ್ಲಿ ಏನಾದ್ರೂ ಸಣ್ಣ-ಪುಟ್ಟ ದೋಷಗಳಿದ್ದರೆ, ಆ ಸಮಸ್ಯೆಗಳನ್ನು ಮುಂದಿನ 15 ದಿನಗಳಲ್ಲಿ ಸರಿಪಡಿಸುತ್ತೇವೆ. 6 ತಿಂಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಹೈವೇಯನ್ನು ಸಜ್ಜಿತಗೊಳಿಸ್ತೇವೆ ಎಂದು ತಿಳಿಸಿದರು.

Read More

ಬೆಂಗಳೂರು ;- ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲಿಯೂ ಆಗಲಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಆದ ಸ್ಥಿತಿಯೇ ಕರ್ನಾಟಕದಲ್ಲಿಯೂ ಆಗಲಿದೆ, ಇನ್ನು ಮೂರು ತಿಂಗಳು ಕಾದು ನೋಡಿ. ಮಹಾರಾಷ್ಟ್ರದ ರಾಜಕೀಯದ ರೀತಿ ಅಜಿತ್ ಪವಾರ್ ತರದ ನಾಯಕನೊಬ್ಬ ಕಾಂಗ್ರೆಸ್ ನಲ್ಲಿಯೇ ಹುಟ್ಟುತ್ತಾನೆ ಎಂದರು. ನಾವು ಸುಳ್ಳು ಗ್ಯಾರೆಂಟ್ ಕೊಟ್ಟು ಜನರಿಗೆ ಮೋಸ ಮಾಡಿದ್ದೇವೆ ಎಂದು ಕಾಂಗ್ರೆಸ್ ಶಾಸಕರಿಗೆ ಬೇಸರ ಇದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ವಿಚಾರವಾಗಿ ಮಾತನಾಡಿ, ಅವರು ನಾವು ಮಾಡಿದ ಮತಾಂತರ ನಿಷೇಧ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಹಿಂದೆ ಪಡೆಯುವ ಬಗ್ಗೆ ಕಾಂಗ್ರೆಸ್ ಸರ್ಕಾರ ಹೇಳಿದೆ. ಹಿಂಪಡೆಯುವ ಪ್ರಯತ್ನ ಮಾಡಿದ್ರೇ ಹಿಂದೂ ಸಮಾಜದ ಎಲ್ಲಾ ಸ್ವಾಮೀಜಿಗಳು‌ ಹೋರಾಟಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ. ಈ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಸದ್ಯಕ್ಕೆ ಮತಾಂತರ ನಿಷೇಧ…

Read More