ಮಧ್ಯಪ್ರದೇಶ;- ಬುಡಕಟ್ಟು ಜನಾಂಗದ ವ್ಯಕ್ತಿ ಮೇಲೆ ಮೂತ್ರ ವಿಸರ್ಜಿಸಿದ ಬಿಜೆಪಿ ನಾಯಕನನ್ನು ಅರೆಸ್ಟ್ ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯ ಮೇಲೆ ಸ್ಥಳೀಯ ಬಿಜೆಪಿ ನಾಯಕ ಪ್ರವೇಶ್ ಶುಕ್ಲಾ ವಿಸರ್ಜನೆ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಧ್ಯ ಪ್ರದೇಶ ಪೊಲೀಸರು ಆರೋಪಿ ಪ್ರವೇಶ್ ಶುಕ್ಲಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Author: Prajatv Kannada
ಉತ್ತರ ಪ್ರದೇಶ: ಹರ್ಯಾಣ ಮೂಲದ ವ್ಯಕ್ತಿ ಕುಟುಂಬ ಸಮೇತ ಉತ್ತರ ಪ್ರದೇಶ ಪ್ರವಾಸದಲ್ಲಿದ್ದರು. ವಿಶ್ವ ವಿಖ್ಯಾತ ತಾಜ್ ಮಹಲ್ ನೋಡುವ ಬಯಕೆಯಲ್ಲಿದ್ದರು. ಜೊತೆಯಲ್ಲೇ ತಮ್ಮ ಮುದ್ದಿನ ನಾಯಿಯನ್ನೂ ಕರೆ ತಂದಿದ್ದರು. ತಾಜ್ ಮಹಲ್ ಬಳಿ ತಮ್ಮ ಕಾರ್ ಪಾರ್ಕ್ ಮಾಡಿ, ನಾಯಿಯನ್ನ ಕಾರ್‌ನಲ್ಲೇ ಬಿಟ್ಟು ತಾಜ್ ಮಹಲ್‌ನತ್ತ ತೆರಳಿದ್ದಾರೆ. ಆದ್ರೆ, ವಾಪಸ್ ಬಂದು ನೋಡುವ ಹೊತ್ತಿಗೆ ನಾಯಿಯು ಉಸಿರುಗಟ್ಟಿ ಕಾರ್‌ನಲ್ಲೇ ಸತ್ತು ಹೋಗಿದೆ.. ಭಾನುವಾರ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗ್ರಾದಲ್ಲಿ ವಿಪರೀತ ಬಿಸಿಲು ಇತ್ತು. ಜೊತೆಗೆ ನಾಯಿಯನ್ನು ಕಾರ್‌ನಲ್ಲಿ ಲಾಕ್ ಮಾಡಿದ ವೇಳೆ ವಿಂಡೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. 2 ಗಂಟೆಗಳ ಕಾಲ ಕಾರ್ ಬಂದ್ ಆಗಿತ್ತು. ಹೀಗಾಗಿ, ಕಾರಿನ ಒಳಗೆ ಬಿಸಿಲ ಧಗೆ ಒಂದೆಡೆಯಾದರೆ ಉಸಿರಾಡಲು ಶುದ್ಧ ಗಾಳಿಯೂ ನಾಯಿಗೆ ಸಿಗಲಿಲ್ಲ. ಜೊತೆಗೆ ನಾಯಿಗೆ ಕುಡಿಯಲು ನೀರೂ ಕೂಡಾ ಸಿಗದೆ ಒದ್ದಾಟ ನಡೆಸಿ ದಾರುಣವಾಗಿ ಜೀವ ಬಿಟ್ಟಿದೆ. ಈ ಘಟನೆಯ ವಿಡಿಯೋ ಕೂಡಾ ವೈರಲ್ ಆಗಿದೆ. ಆಗ್ರಾದ ಸ್ಥಳೀಯ ನಿವಾಸಿಯೊಬ್ಬ…
ನವದೆಹಲಿ: ಸೇನೆಯಲ್ಲಿ ಮೇಜರ್ ಮತ್ತು ಕ್ಯಾಪ್ಟನ್ ಮಟ್ಟದ ಅಧಿಕಾರಿಗಳ ಕೊರತೆ ಬಗ್ಗೆ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ರಾಜಕೀಯ ಪಕ್ಷಗಳನ್ನು ಒಡೆಯಲು ಮೋದಿ ಸರ್ಕಾರಕ್ಕೆ ಸಮಯವಿದೆ ಆದರೆ, ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ ಅವರು ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದು, ಸೇನೆಯು ಮೇಜರ್ ಮತ್ತು ಕ್ಯಾಪ್ಟನ್ ಮಟ್ಟದಲ್ಲಿ ಅಧಿಕಾರಿಗಳ ತೀವ್ರ ಕೊರತೆಯನ್ನು ಎದುರಿಸುತ್ತಿದೆ ಮತ್ತು ಘಟಕಗಳಲ್ಲಿನ ಕೊರತೆಯನ್ನು ನೀಗಿಸಲು ವಿವಿಧ ಪ್ರಧಾನ ಕಚೇರಿಗಳಲ್ಲಿ ಸಿಬ್ಬಂದಿ ಅಧಿಕಾರಿಗಳ ಪೋಸ್ಟಿಂಗ್ ಅನ್ನು ಕಡಿಮೆ ಮಾಡಲು ಯೋಜಿಸುತ್ತಿದೆ ಎಂದು ಹೇಳಿದ್ದಾರೆ.ವರದಿಯ ಪ್ರಕಾರ, ಅಂತಹ ಹುದ್ದೆಗಳಿಗೆ ಮರು ನೇಮಕಗೊಂಡ ಅಧಿಕಾರಿಗಳನ್ನು ನೇಮಿಸುವ ಬಗ್ಗೆಯೂ ಸೇನೆಯು ಪರಿಗಣಿಸುತ್ತಿದೆ ಎನ್ನಲಾಗಿದೆ. ‘ಮೋದಿ ಸರ್ಕಾರಕ್ಕೆ ರಾಜಕೀಯ ಪಕ್ಷಗಳನ್ನು ಒಡೆಯಲು ಸಮಯವಿದೆ. ಆದರೆ, ಸಶಸ್ತ್ರ ಪಡೆಗಳಲ್ಲಿನ ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಲು ಸಮಯವಿಲ್ಲ. ಪ್ರತಿದಿನ ‘ರಾಷ್ಟ್ರೀಯತೆ’ ಎಂದು ಕಹಳೆ ಊದುವವರು…
ಹೈದರಾಬಾದ್: ಚರ್ಮ ಹಾಗೂ ಕೂದಲಿಗೆ ಚಿಕಿತ್ಸೆ ನೀಡೋ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿಯೊಬ್ಬಳು ಗ್ರಾಹಕರೊಬ್ಬರ 50 ಲಕ್ಷ ರೂ. ಮೌಲ್ಯದ ವಜ್ರದ ಉಂಗುರವನ್ನು (Diamond Ring) ಕದ್ದು, ಬಳಿಕ ಸಿಕ್ಕಿಬೀಳೋ ಭಯದಲ್ಲಿ ಅದನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿರೋ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ. ವರದಿಗಳ ಪ್ರಕಾರ, ದೂರುದಾರ ಮಹಿಳೆ ಚಿಕಿತ್ಸೆಗೆಂದು ನಗರದ ಜುಬಿಲಿ ಹಿಲ್ಸ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಚಿಕಿತ್ಸೆ ವೇಳೆ ಕ್ಲಿನಿಕ್‌ನ ಮಹಿಳಾ ಸಿಬ್ಬಂದಿ ಅವರಿಗೆ ಉಂಗುರವನ್ನು ಕಳಚಿ ಪೆಟ್ಟಿಗೆಯಲ್ಲಿ ಇಡುವಂತೆ ಹೇಳಿದ್ದಳು. ಚಿಕಿತ್ಸೆಯ ಬಳಿಕ ಮಹಿಳೆ ಮನೆ ತಲುಪಿದ್ದು, ನಂತನ ಅವರಿಗೆ ತನ್ನ ಉಂಗುರವನ್ನು ಕ್ಲಿನಿಕ್‌ನಲ್ಲಿ ಮರೆತಿರುವುದು ಅರಿವಾಗಿದೆ. ಬಳಿಕ ಮಹಿಳೆ ಸಿಬ್ಬಂದಿಯನ್ನು ವಿಚಾರಿಸಿದ್ದಾಳೆ. ಆದರೆ ತನ್ನ ಉಂಗುರದ ಬಗ್ಗೆ ಏನೂ ಮಾಹಿತಿ ಸಿಗದ ಹಿನ್ನೆಲೆ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಆಕೆ ಉಂಗುರವನ್ನು ಕದ್ದು, ತನ್ನ ಪರ್ಸ್‌ನಲ್ಲಿ ಇಟ್ಟಿರುವುದಾಗಿ ಬಾಯಿಬಿಟ್ಟಿದ್ದಾಳೆ. ಇಷ್ಟಾದ ಬಳಿಕವೂ ಸಿಬ್ಬಂದಿ ಸಿಕ್ಕಿ ಬೀಳುವ ಭಯದಲ್ಲಿ ಉಂಗುರವನ್ನು ಟಾಯ್ಲೆಟ್‌ಗೆ ಎಸೆದು ಫ್ಲಶ್…
ವಾಷಿಂಗ್ಟನ್: ಭಾರತೀಯ- ಅಮೆರಿಕನ್ ರಾಜಕಾರಣಿ, ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಲಿಸಿ, ಚುಡಾಯಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ 364 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. 49 ವರ್ಷ ವಯಸ್ಸಿನ ಬ್ರೆಟ್ ಫೋರ್ಸೆಲ್ ಎಂಬ ವ್ಯಕ್ತಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಹ್ಯಾಂಡ್‌ಗನ್ ಹಿಡಿದು ಪ್ರಮೀಳಾ ಜಯಪಾಲ್ ಅವರನ್ನು ಹಿಂಬಾಲಿಸಿ ಚುಡಾಯಿಸುತ್ತಿದ್ದ. ಅಲ್ಲದೆ ಕೆಲವೊಮ್ಮೆ ಪ್ರಾಣ ಬೆದರಿಕೆ ಕೂಡ ಹಾಕಿದ್ದ ಎಂದು ಪ್ರಮೀಳಾ ದೂರು ನೀಡಿದ್ದರು. ಪ್ರಮೀಳಾ ಜಯಪಾಲ್ ಅವರ ಮನೆಯ ಹೊರಗೆ ಬಂದೂಕು ಹಿಡಿದು ನಿಂತಿದ್ದ ಬ್ರೆಟ್ ಫೋರ್ಸೆಲ್‌ನನ್ನು ಸಿಯಾಟಲ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣವು ಸಿಯಾಟಲ್‌ನ ಕಿಂಗ್ ಕೌಂಟಿ ಸುಪೀರಿಯರ್ ಕೋರ್ಟ್ ಮೆಟ್ಟಿಲೇರಿತು. ವಿಚಾರಣೆ ವೇಳೆ ಬ್ರೆಟ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಆತನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಬೀಜಿಂಗ್: ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಧಾರಾಕಾರಕ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ಕಂಗಾಲಾಗಿದ್ದು ಸದ್ಯ 15 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ ಇದುವರೆಗೂ ನಾಲ್ವರು ನಾಪತ್ತೆಯಾಗಿದ್ದು ನಾಪತ್ತೆಯಾಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಸೋಮವಾರ ಬೆಳಗ್ಗೆ 7 ಗಂಟೆಯಿಂದ ನೈರುತ್ಯ ಚೀನಾದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆಗೆ 15 ಜನ ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಈ ಕುರಿತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping), ಎಲ್ಲಾ ಹಂತಗಳ ಅಧಿಕಾರಿಗಳು ಜನರ ಸುರಕ್ಷತೆ ಮತ್ತು ಆಸ್ತಿಯನ್ನು ಖಾತ್ರಿಪಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ಪ್ರಮುಖ ಅಧಿಕಾರಿಗಳು ಪ್ರವಾಹದ ವಿರುದ್ಧ ಹೋರಾಡುವಲ್ಲಿ ಮುಂದಾಳತ್ವ ವಹಿಸಬೇಕು. ನಷ್ಟಗಳನ್ನು ಕಡಿಮೆಗೊಳಿಸುವಲ್ಲಿ ಶ್ರಮಿಸಬೇಕು ಎಂದು ಹೇಳಿದ್ದಾರೆ. ನೆರೆಯ ಸಿಚುವಾನ್‌ನಲ್ಲಿ ಈ ತಿಂಗಳು ಭಾರೀ ಮಳೆಯಿಂದ 4,60,000ಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಭೀಕರ ಮಳೆಯ ಪರಿಣಾಮ ಸುಮಾರು 85,000 ಜನರನ್ನು ತಮ್ಮ ಮನೆಗಳಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಈ ವಾರ ಮಳೆಯಿಂದಾಗಿ…
ಮುರಿಯೆಟಾ: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಿಂಗಲ್ ಇಂಜಿನ್ ವಿಮಾನವೊಂದು ಪತನಗೊಂಡಿದ್ದು ಘಟನೆಯಲ್ಲಿ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ಜನರಿದ್ದ ಸೆಸ್ನಾ 172 ವಿಮಾನವು ಮುರ್ರಿಯೆಟಾದ ಫ್ರೆಂಚ್ ವ್ಯಾಲಿ ವಿಮಾನ ನಿಲ್ದಾಣದಿಂದ ಮಂಗಳವಾರ ಮಧ್ಯಾಹ್ನ 2:45 ರ ಸುಮಾರಿಗೆ ಟೇಕ್ ಆಫ್ ಆಗಿದೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ. ದೂರದರ್ಶನದ ಸುದ್ದಿ ದೃಶ್ಯಾವಳಿಗಳು ವ್ಯಾಪಾರದ ಪಾರ್ಕಿಂಗ್ ಸ್ಥಳದಲ್ಲಿ ಸಣ್ಣ ವಿಮಾನವನ್ನು ತಲೆಕೆಳಗಾಗಿ ಬಿದ್ದಿರುವುದನ್ನು ತೋರಿಸಿವೆ. ರಿವರ್‌ಸೈಡ್ ಕೌಂಟಿ ಅಗ್ನಿಶಾಮಕ ಇಲಾಖೆಯ ಪ್ರಕಾರ, ಡೌನ್‌ಟೌನ್ ಲಾಸ್ ಏಂಜಲೀಸ್‌ನ ಆಗ್ನೇಯಕ್ಕೆ ಸುಮಾರು 85 ಮೈಲಿಗಳು (135 ಕಿಲೋಮೀಟರ್) ಸ್ಥಳದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಮಣಿಪುರ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಇಂದಿನಿಂದ ಶಾಲೆಗಳು ಆರಂಭವಾಗಿವೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ತಿಳಿಸಿದ್ದಾರೆ. ‘ಸೂಕ್ಷ್ಮ ಪ್ರದೇಶಗಳಲ್ಲಿ ರಾಜ್ಯ ಭದ್ರತಾ ಪಡೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ. ಸಾಕಷ್ಟು ದಿನಗಳಿಂದ ಮುಚ್ಚಲಾಗಿದ್ದು ಶಾಲೆಗಳು ಇಂದಿನಿಂದ ಆರಂಭವಾಗಲಿದೆ. ಒಂದರಿಂದ ಎಂಟರವರೆಗಿನ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಿದ್ದಾರೆ. ಐದು ಜಿಲ್ಲೆಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಒಂದರಿಂದ ಎಂಟರವರೆಗಿನ ತರಗತಿಗಳನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದು ಬೀರೇನ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದು, ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದರಿಂದ ಮೇ ಮೊದಲ ವಾರದಿಂದಲೇ ಶಾಲೆಗಳು ಮುಚ್ಚಲಾಗಿತ್ತು. ಇದೀಗ ಪರಿಸ್ಥಿತಿ ಕೊಂಚ ಶಾಂತ ಸ್ಥಿತಿಗೆ ಮರಳಿದ್ದು ಈ ಹಿನ್ನೆಲೆಯಲ್ಲಿ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಚೆಚೆನ್ಯಾ ಪ್ರವಾಸದಲ್ಲಿ ರಷ್ಯಾದ ಪ್ರಶಸ್ತಿ ವಿಜೇತ ತನಿಖಾ ಪತ್ರಕರ್ತೆ ಎಲೆನಾ ಮಿಲಾಶಿನಾ ಅವರ ಮೇಲೆ ಸಶಸ್ತ್ರಧಾರಿಗಳು ಹಲ್ಲೆ ನಡೆಸಿದ್ದು, ತಲೆ ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ. ಹಲ್ಲೆಯಲ್ಲಿ ಎಲೆನಾ ಅವರ ಬೆರಳುಗಳು ಮುರಿದು ಹೋಗಿದ್ದು, ಪ್ರಜ್ಞೆಯನ್ನು ಕೂಡ ಕಳೆದುಕೊಂಡಿದ್ದರು. ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳವಾರ ಮುಂಜಾನೆ ಮಿಲಾಶಿನಾ ಮತ್ತು ವಕೀಲ ಅಲೆಕ್ಸಾಂಡರ್ ನೆಮೊವ್ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಸ್ತ್ರಾಸ್ತ್ರಧಾರಿಗಳು ಎಲೆನಾ ಅವನ್ನು ಅಮಾನವೀಯವಾಗಿ ಥಳಿಸಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಅವರ ಬಳಿ ಇದ್ದ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಮಾಸ್ಕೋದಲ್ಲಿ ರಷ್ಯಾದ ಕೆಲವು ಶಾಸಕರು ಮತ್ತು ಅಧಿಕಾರಿಗಳು ದಾಳಿಯನ್ನು ಖಂಡಿಸಿದ್ದು ಘಟನೆಯ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಎಲಾನಾಗೆ ಥಳಿಸಿ ತಲೆ ಬೋಳಿಸಿ ತಲೆಗೆ ಹಸಿರು ಬಣ್ಣವನ್ನು ಬಳಿದಿದ್ದಾರೆ. ನೊವಾಯಾ ಗೆಜೆಟಾ ಪತ್ರಿಕೆಯ ಪ್ರಸಿದ್ಧ ಪತ್ರಕರ್ತೆ ಮಿಲಾಶಿನಾ, ಜರೆಮಾ ಮುಸೇವಾ ಅವರ ಶಿಕ್ಷೆಯ ಕುರಿತು ವರದಿ…
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿವಾಸವಿರುವ ಶ್ವೇತಭವನದಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಶ್ವೇತಭವನದಲ್ಲಿ ಪತ್ತೆಯಾಗಿರುವ ಅನುಮಾನಾಸ್ಪದ ಬಿಳಿ ಬಣ್ಣದ ವಸ್ತುವನ್ನು ಕೊಕೇನ್ ಎಂದು ಗುರುತಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಾರಾಂತ್ಯದಲ್ಲಿ ಸ್ಥಳೀಯ ಸಮಯ ರಾತ್ರಿ 8.45 ರ ಸುಮಾರಿಗೆ ವೆಸ್ಟ್ ವಿಂಗ್‍ನ ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಪ್ರದೇಶದಲ್ಲಿ ರಹಸ್ಯ ಸೇವಾ ಏಜೆಂಟ್‍ಗಳು ಈ ಬಿಳಿ ಬಣ್ಣದ ಪುಡಿಯನ್ನು ಪತ್ತೆ ಹಚ್ಚಿದ್ದರು. ಅನುಮಾನಾಸ್ಪದ ಬಿಳಿ ಬಣ್ಣದ ಪುಡಿ ಪತ್ತೆಯಾದ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಅವರು ನಿವಾಸದಲ್ಲಿ ಇರಲಿಲ್ಲ, ಬದಲಿಗೆ ವಾರಾಂತ್ಯವನ್ನು ಕ್ಯಾಂಪ್ ಡೇವಿಡ್‍ನಲ್ಲಿ ಕಾಲ ಕಳೆಯುತ್ತಿದ್ದರು ಎನ್ನಲಾಗುತ್ತಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಯ ಸಿಬ್ಬಂದಿ ವಸ್ತುಗಳ ಮೇಲೆ ತ್ವರಿತ ಪರೀಕ್ಷೆ ನಡೆಸಲು ಆಗಮಿಸಿದರು. ಈ ಪ್ರಾಥಮಿಕ ಪರೀಕ್ಷೆಗಳಲ್ಲಿ ಪುಡಿ ಕೊಕೇನ್ ಎಂದು ತಿಳಿದುಬಂದಿದ್ದು, ಪುಡಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಲಾಯಿತು. ಪುಡಿಯನ್ನು ಹೆಚ್ಚಿನ ಮೌಲ್ಯಮಾಪನಕ್ಕಾಗಿ ಕಳುಹಿಸಲಾಗಿದೆ ಮತ್ತು ಅದು ಶ್ವೇತಭವನವನ್ನು ಹೇಗೆ ಪ್ರವೇಶಿಸಿತು ಎಂಬುದರ ಕುರಿತು ತನಿಖೆ ಬಾಕಿಯಿದೆ ಎಂದು…