Author: Prajatv Kannada

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವರ್ಗಾವಣೆ ಆರೋಪಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಫುಲ್ ಶಾಕ್ ಹೊಡೆದ ಹಾಗೆ ಆಗಿ ಬಿಟ್ಟಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ. ಹೆಚ್‍ಡಿಕೆ ಆರೋಪದ ಬೆನ್ನಲ್ಲೆ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು `ಬಿ ಕೇರ್ ಫುಲ್’ ಎಂದಿದ್ದಾರೆ. ವರ್ಗಾವಣೆ ವಿಷಯದಲ್ಲಿ ಎಚ್ಚರಿಕೆಯಿಂದ ಇರುವಂತೆ ತನ್ನ ಆಸಪ್ತರಿಗೆ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರದ ವಿರುದ್ಧ ಸುಮ್ಮನೆ ಆರೋಪ ಮಾಡಿದ್ರೆ ಯಾರೂ ಸಹಿಸಿಕೊಳ್ಳಬಾರದು. ಸರ್ಕಾರದ ಇಮೇಜ್‍ಗೆ ಧಕ್ಕೆ ತರಲು ಕುಮಾರಸ್ವಾಮಿ ಯತ್ನ ಮಾಡ್ತಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕು. ಪ್ರತಿ ಇಲಾಖೆಯಲ್ಲಿ ವರ್ಗಾವಣೆ (Transfer) ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಎಂದಿದ್ದಾರೆ.

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಪೆನ್ ಡ್ರ್ವೈವ್ ಹಿಡಿದು ದಾಖಲೆ ಸಮೇತ ಬಂದಿದ್ದೇನೆ ಎಂದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನನ್ನ ಬಳಿ ದಾಖಲೆ ಇದೆ ಅಂತಾ ಪೆನ್ ಡ್ರೈವ್ ಪ್ರದರ್ಶನ ಮಾಡಿದ್ದಾರೆ. ಶರ್ಟ್ ಪಾಕೆಟ್ ನಲ್ಲಿ ಪೆನ್ ಡ್ರೈವ್ ಹಿಡಿದುಕೊಂಡು ಬಂದಿರುವ ಕುಮಾರಸ್ವಾಮಿ, ವರ್ಗಾವಣೆ ದಂಧೆಯ ಆಡಿಯೋ ಇದೆ ಎಂದು ಹೇಳುವ ಮೂಲಕ ಮತ್ತೊಂದು ಬಾಂಬ್ ಹಾಕಿದ್ದಾರೆ. KST ಟ್ಯಾಕ್ಸ್ ನಾನ್ ಇಟ್ಕೊಂಡಿಲ್ಲ. ತಾಜ್ ವೆಸ್ಟೆಂಡ್‍ದ್ದು ಬಾಕಿ ಬಿಲ್ ಕಾಂಗ್ರೆಸ್‍ಗೆ (Congress) ಕಳಿಸಿದ್ರಾ?. ನಾನೇನು ಬೀದಿಲಿ ಹೋಗುವವನಾ?. 2-3 ಲಕ್ಷ ಖರ್ಚು ಮಾಡುವ ಯೋಗ್ಯತೆ ನನಗಿಲ್ವಾ? ಬ್ಲ್ಯೂಫಿಲ್ಮ್‍ಂ ಅನ್ನು ಟೆಂಟ್ ನಲ್ಲಿ ತೋರಿಸಿ ಬಂದವನಲ್ಲ ನಾನು ಎಂದು ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಮಂಡ್ಯದಲ್ಲಿ ವರ್ಗಾವಣೆ ಆಯ್ತಲ್ಲ. ತನಿಖೆಯಾದವರನ್ನು ಸಸ್ಪೆಂಡ್ ಆದವರನ್ನು ಮತ್ತೆ ತೆಗೆದುಕೊಳ್ಳುತ್ತಾರೆ. ಲಾಟರಿ ದಂಧೆ ನಡೆಸಿದವರನ್ನು ಆಚೆ ಕಳಿಸಿದ್ದೇನೆ. ಈಗಲೂ ನಾನು ತಾಜ್ ವೆಸ್ಟೆಂಡ್‍ಗೆ ಹೋಗ್ತೀನಿ. ನಾನೇನ್ ಕಾಂಗ್ರೆಸ್ ನವರನ್ನು ಕೇಳ್ಕೊಂಡು ಹೋಗಬೇಕಾ?.…

Read More

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾಗಿದ್ದು ಚುನಾವಣಾ ಸಮಯದಲ್ಲಿ ಘೋಷಣೆ ಮಾಡಿದ್ದ ಪಂಚ ಗ್ಯಾರೆಂಟಿಗಳು. ಈಗ ಅದನ್ನ ಜಾರಿಗೆ ತರಲು ಸರ್ಕಾರ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಅದರಲ್ಲಿ ಸಿಎಂ ಸಿದ್ದರಾಮಯ್ಯನವರ (Siddaramaiah) ಬಹಳ ಮಹತ್ವದ ಘೋಷಣೆಯಾಗಿದ್ದು ಅನ್ನಭಾಗ್ಯ ಯೋಜನೆ ಕಾರ್ಡ್ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಜುಲೈನಿಂದ ನೀಡುವುದಾಗಿ ಹೇಳಿದ್ರು. ರಾಜ್ಯ ಸರ್ಕಾರ ಅಕ್ಕಿ (Rice) ನೀಡಲು  ನಾನಾ ಸರ್ಕಸ್ ಮಾಡಿದ್ರು 10 ಕೆ.ಜಿ ಅಕ್ಕಿ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, 5 ಕೆಜಿ ಅಕ್ಕಿ, 5 ಕೆಜಿ ಅಕ್ಕಿಗೆ ಹಣವನ್ನ ಖಾತೆಗೆ ಹಾಕಲು ಸರ್ಕಾರ ನಿರ್ಧರಿಸಿದ್ದೆ ತಡ ನ್ಯಾಯಬೆಲೆ ವರ್ತಕರು ನಮಗೆ ಇದರಿಂದ ನಷ್ಟ ಆಗೋದು ಪಕ್ಕ, ನಾವೂ 10 ಕೆಜಿ ಅಕ್ಕಿ ನೀಡಿದ್ರೇ ನಮಗೆ ಕಮಿಷನ್ ಹೆಚ್ಚಾಗಿ ಸಿಗುತ್ತೆ ಅಂತಾ ವೋಟ್ ಹಾಕಿದ್ವಿ. ಈಗ 5 ಕೆಜಿ ಅಕ್ಕಿ ನೀಡಿದ್ರೇ ಕಮಿಷನ್ ಕಟ್ ಆಗುತ್ತೆ. ಇದನ್ನೇ ನಂಬಿಕೊಂಡಿರೋ ನಾವೂ ಹೇಗೆ ಜೀವನ ಮಾಡೋದು…

Read More

ಬೆಂಗಳೂರು : ಜೀವನ್ ಭೀಮಾನಗರದಲ್ಲಿ ಟಿಕ್ಕಿ ಆಕಾಂಕ್ಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಪ್ರಿಯಕರ ಅರ್ಪಿತ್ ಕೊನೆಗೂ ಬಂಧಿಸಲಾಗಿದೆ. ಆರೋಪಿಯನ್ನು ವಿಜಯವಾಡದಲ್ಲಿ ನಗರ ಜೀವನ್ ಭೀಮಾನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಯು, ಕೊಲೆ ಮಾಡಿ ಯಾವುದೇ ಸುಳಿವು ನೀಡದೇ ತಲೆಮರೆಸಿಕೊಂಡಿದ್ದ. ಅರ್ಪಿತ್ ಬಂಧನಕ್ಕೆ ಸುಮಾರು ,200 ಸಿಸಿಟಿವಿ ಪೊಲೀಸರು ಚೆಕ್ ಮಾಡಿದ್ದು, ಅರ್ಪಿತ್ ಅಕೌಂಟ್ ಫ್ರೀಜ್ ಮಾಡಿದ ಕಾರಣ ಹಣಕ್ಕಾಗಿ ಸ್ನೇಹಿತನಿಗೆ ಕರೆ ಮಾಡಿದ್ದ. ಫೋನ್ ಕಾಲ್ ಸುಳಿವಿನ ಆಧಾರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಈ ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಕೊಲೆ ನಡೆದ ಸಂಪೂರ್ಣ ವಿವರ! ಆಂಧ್ರಪ್ರದೇಶ ಮೂಲದ ಅರ್ಪಿತ್ ಗುರಿಜಾಲ (28) ಜೂನ್ 5ರಂದು ಹೈದರಾಬಾದ್ ಮೂಲದ ಆಕಾಂಕ್ಷಾ (23) ಎಂಬಾಕೆಯನ್ನು ಆಕೆಯ ಫ್ಲ್ಯಾಟ್​ನಲ್ಲೇ ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ಆತ್ಮಹತ್ಯೆ ಕಥೆ ಕಟ್ಟಲು ಯತ್ನಿಸಿ ವಿಫಲಗೊಂಡು ಪರಾರಿಯಾಗಿದ್ದ. ಕಳೆದ ಒಂದು ತಿಂಗಳಿಂದ ಆರೋಪಿ ವಿಜಯವಾಡ, ಅಸ್ಸಾಂ ಭಾಗದಲ್ಲಿ ಸುತ್ತಾಡಿ, ಕೆಲ ದಿನಗಳ…

Read More

ಬೆಂಗಳೂರು: ಇಂದು ನಡೆಯಲಿರುವ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿರುವ ಶಾಸಕ ರುದ್ರಪ್ಪ ಲಮಾಣಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿದರು ಹಾಗೆ ಮುಖ್ಯಮಂತ್ರಿಗಳು ಸಹ ಶುಭಾಶಯ ಕೋರಿದರು. ಈಗಾಗಲೇ ವಿಧಾನಸಭೆಯ ಸ್ಪೀಕರ್ ಆಗಿ ಯು.ಟಿ ಖಾದರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಡೆಪ್ಯೂಟಿ ಸ್ಪೀಕರ್ ಸ್ಥಾನದ ಆಯ್ಕೆ ಬಾಕಿ ಇತ್ತು. ಇದೀಗ ವಿಧಾನಸಭೆ ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಈ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಶಾಸಕ ರುದ್ರಪ್ಪ ಲಮಾಣಿ ಅರ್ಜಿ ಸಲ್ಲಿಸಲಿದ್ದಾರೆ. ಅವರಿಗೆ ಸಿಎಂ ಸಿದ್ಧರಾಮಯ್ಯ ಶುಭಕೋರಿದ್ದಾರೆ.

Read More

ಬೆಂಗಳೂರು: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಗುಸುಗುಸು ಬಹಳ ದಿನದಿಂದ ಕೇಳಿಬರುತ್ತಿದೆ. ಅದಕ್ಕೆ ಬಿಎಸ್ ಯಡಿಯೂರಪ್ಪನವರ ಹೇಳಿಕೆಯಿಂದ ಸುಳಿವು ಸಿಕ್ಕಿದಂತಾಗಿದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೋ ಅದು ಅಕ್ಷರಶಃ ಸತ್ಯ. ನಾನು ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎಂದು ಬಿಎಸ್‌ ಯಡಿಯೂರಪ್ಪ ಹೇಳಿದ್ದಾರೆ. ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಕಾಂಗ್ರೆಸ್‌ ಸರ್ಕಾರದಲ್ಲಿನ ವರ್ಗಾವಣೆ ದಂಧೆ ಬಗ್ಗೆ ಎಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದರು. ಕೆಲಸ ಆಗಬೇಕೆಂದರೆ ಸಿಎಂ ಕಚೇರಿಗೆ 30 ಲಕ್ಷ ರೂ. ನೀಡಬೇಕು ಎಂಬ ಆರೋಪವನ್ನು ಮಾಜಿ ಸಿಎಂ ಮಾಡಿದ್ದರು. ಕಾಂಗ್ರೆಸ್‌ ಸರ್ಕಾರದ ಮೇಲೆ ಬಿಜೆಪಿಯವರಿಗಿಂತ ಹೆಚ್ಚು ಎಚ್‌ಡಿ ಕುಮಾರಸ್ವಾಮಿ ಅವರೇ ವಾಗ್ದಾಳಿ ನಡೆಸುತ್ತಿರುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹತ್ತಿರವಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ ಒಕ್ಕಲಿಗರ ಪ್ರಾಬಲ್ಯ ಇರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಗೆ ಪ್ಲಸ್‌ ಆಗುವ ಸಾಧ್ಯತೆ ಇದೆ.

Read More

ಬೆಂಗಳೂರು: ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಹಾಗೂ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು ಎಂದು ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಪ್ರಸ್ತಾಪ ಮಂಡಿಸಿ ಮಾತನಾಡಿದ ಅವರು, ಕುಟುಂಬದ ಮಹಿಳೆಯರಿಗೆ 2000 ರೂಪಾಯಿ ಅಂದ್ರು. ಗೃಹ ಲಕ್ಷ್ಮೀ ಗ್ಯಾರಂಟಿಯಿಂದ ಅತ್ತೆ ಸೊಸೆ ನಡುವೆ ಬೆಂಕಿ ಹಚ್ಚಿಬಿಟ್ರು. ಇವಾಗ ಪೋರ್ಟಲ್ ಹ್ಯಾಕ್ ಮಾಡ್ಬಿಟ್ಟಿದ್ದೀರಂತೆ. ಮೋದಿ ಮೇಲೆ ಜವಬ್ದಾರಿಯುತ ಸಚಿವರು ಈ ರೀತಿ ಆರೋಪ ಮಾಡ್ತಾರಲ್ಲ..? ಎಂದು ಪ್ರಶ್ನಿಸಿದರು. ಇದರಿಂದ ಜನರಿಗೆ ಏನು ಸಂದೇಶ ಹೋಗುತ್ತೆ? ಜನರೇ ಈ ಗ್ಯಾರಂಟಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಬಸ್ಸು ಯೋಜನೆ ನಿಂತು ಹೋಗುತ್ತದೆ ಎಂದು ಜನರು ಹೆಚ್ಚೆಚ್ಚು ಓಡಾಡ್ತಿದ್ದಾರೆ ಎಂದು ತಿರುಗೇಟು ನೀಡಿದರು. ಐದು ಗ್ಯಾರಂಟಿ ಕೊಟ್ಟರೂ ಷರತ್ತು ಹಾಕಿ ಜನರಿಗೆ ಮೋಸ ಮಾಡುತ್ತಿದೆ ಸರ್ಕಾರ. ಎಲ್ಲ ಗ್ಯಾರಂಟಿಗಳಿಗೂ ನೀವು ಚೆಕ್ ಪೋಸ್ಟ್ ಗಳನ್ನು ಇಟ್ಟಿದ್ದೀರಿ. ಅಧಿಕಾರಕ್ಕೆ‌‌ ಬಂದು 24 ಗಂಟೆಗಳಲ್ಲಿ ಗ್ಯಾರಂಟಿ ಜಾರಿ ಮಾಡಿಲ್ಲ,ಹೀಗಾಗಿ ಈ ಸರ್ಕಾರಕ್ಕೆ…

Read More

ಬೆಂಗಳೂರು: ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಇದೀಗ ವಂದೇ ಭಾರತ್ ರೈಲಿನ ಪ್ರಯೋಜನಗಳನ್ನು ಬೆಳಗಾವಿಯ ಜನರಿಗೆ ವಿಸ್ತರಿಸಲು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಮತ್ತು ಧಾರವಾಡದಿಂದ ಐಷಾರಾಮಿ ಬಸ್‌ಗಳನ್ನು ಪ್ರಾರಂಭಿಸಿದೆ. ರೈಲಿನ ಆಗಮನ ಮತ್ತು ನಿರ್ಗಮನದ ಸಮಯಕ್ಕೆ ತಕ್ಕಂತೆ ಐಷಾರಾಮಿ ಎಸಿ ಬಸ್​ಗಳನ್ನು ಬಿಡಲಾಗಿದೆ. ಜೂನ್ 27 ರಂದು, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪ್ರಧಾನಿ ನರೇಂದ್ರ ಮೋದಿಯವರು ಆನ್ ಲೈನ್ ಮೂಲಕ ಉದ್ಘಾಟಿಸಿದರು. 8 ಬೋಗಿಗಳಿರುವ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ಪ್ರತಿ ದಿನ ಬೆಂಗಳೂರು-ಧಾರವಾಡ ನಡುವೆ ಸಂಚರಿಸುತ್ತದೆ. ಈಗ, ಧಾರವಾಡದ ಹೊರಗಿನ ಜನರಿಗೆ ಸಹಾಯ ಮಾಡಲು, NWKRTC ಹುಬ್ಬಳ್ಳಿಯಿಂದ ಬೆಳಗಾವಿಗೆ ಮತ್ತು ಬೆಳಗಾವಿಯಿಂದ ಹುಬ್ಬಳ್ಳಿಗೆ ಮಲ್ಟಿ-ಆಕ್ಸಲ್ ವೋಲ್ವೋ ಬಸ್‌ಗಳನ್ನು ರಸ್ತೆಗಿಳಿಸಿದೆ.

Read More

ವಿವಾದಗಳಿಂದ ಸದಾ ದೂರವಿರುವ ನಟ ಕಿಚ್ಚ ಸುದೀಪ್ ಗೆ  ಆಗಾಗ ಅನಗತ್ಯವಾದ ಕಿರಿಕ್ ಗಳು ಎದುರಾಗುತ್ತಿರುತ್ತವೆ. ಸೋಶಿಯಲ್​ ಮೀಡಿಯಾದಲ್ಲೂ ಅನವಶ್ಯಕವಾಗಿ ಯಾರ ಬಗ್ಗೆಯೂ ಕಮೆಂಟ್​ ಮಾಡದ ಸುದೀಪ್ ಇದೀಗ ತನ್ನ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸುದೀಪ್ ಮಾಡಿರುವ ಎಚ್ಚರಿಕೆಯ ಟ್ವೀಟ್ ಯಾರಿಗೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸುದೀಪ್ ಬರೆದಿರುವ ಸಾಲುಗಳಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ಈ ಸಾಲನ್ನು ಓದಿ. ಇದು ತುಂಬ ಚೆನ್ನಾಗಿದೆ’ ಎಂಬ ಕ್ಯಾಪ್ಷನ್​ ಜೊತೆಯಲ್ಲಿ ಸುದೀಪ್​ ಅವರು ಟ್ವೀಟ್​ ಮಾಡಿದ್ದಾರೆ. ‘ಇದು ತಿಳಿದಿರಲಿ: ದುರುಪಯೋಗಕ್ಕೆ ಅಥವಾ ವಂಚನೆಗೆ ನನ್ನ ಒಳ್ಳೆಯತನ ಒಂದು ಸಾಧನ ಅಲ್ಲ. ಸತ್ಯವಾಗಿದ್ದಾಗ ಅದು ಪ್ರಜ್ವಲಿಸುತ್ತದೆ. ದುರಹಂಕಾರದಿಂದ ಅದರ ಕಾಂತಿ ಕಳೆಗುಂದಲು ನಾನು ಬಿಡುವುದಿಲ್ಲ. ವಿನಯದಿಂದಿರಿ, ಸತ್ಯವಂತರಾಗಿರಿ’ ಎಂಬ ಸಾಲನ್ನು ಸುದೀಪ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ‘ರಾಜಿಯಾಗದ ಒಳ್ಳೆಯತನ’ ಎಂದು ಸುದೀಪ್​ ಅವರು ಹ್ಯಾಶ್​ ಟ್ಯಾಗ್​ ಬಳಸಿದ್ದಾರೆ. ಅದರ ಜೊತೆ #k46 ಹ್ಯಾಶ್​ ಟ್ಯಾಗ್​ ಕೂಡ ಇದೆ. ಹಾಗಾಗಿ ಇದು…

Read More

ಬೆಂಗಳೂರು ;- ಪತಿಯ ಕತ್ತು ಸೀಳಿ ಕೊಲೆಗೈದ ಮಹಿಳೆಗೆ ಜಾಮೀನು ನೀಡಲು ಬೆಂಗಳೂರಿನ ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ಮಂಜೂರಾತಿಗೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಆರೋಪಿ ಡಿಲ್ಲಿ ರಾಣಿ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂಬ ಆಕೆಯ ಪರ ವಕೀಲರ ವಾದ ತಿರಸ್ಕರಿಸಿದ ಹೈಕೋರ್ಟ್‌, ಡಿಲ್ಲಿ ರಾಣಿ ಸಹ ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಆಕೆ ಅಮಾಯಕಳಾಗಿದ್ದಾರೆ ಎಂಬ ವಕೀಲರು ವಾದ ಒಪ್ಪಲಾಗದು. ಅರ್ಜಿದಾರೆ ಹಾಗೂ ಆಕೆಯ ಅಪ್ರಾಪ್ತ ಮಕ್ಕಳಿಬ್ಬರು ನೆಲೆಸಿದ್ದ ಮನೆಯಲ್ಲಿ ಪತಿ ಶಂಕರರೆಡ್ಡಿ ಕೊಲೆಯಾಗಿದ್ದಾರೆ. ಪ್ರಕರಣದ ಎರಡನೇ ಆರೋಪಿನೊಂದಿಗೆ ಡಿಲ್ಲಿ ರಾಣಿ ಅಕ್ರಮ ಸಂಬಂಧ ಹೊಂದಿರುವುದನ್ನು ಘಟನೆಯ ಮೂವರ ಸಾಕ್ಷಿಗಳ ಹೇಳಿಕೆ ಸ್ಪಷ್ಟಪಡಿಸುತ್ತದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿ ಶಂಕರರೆಡ್ಡಿಯನ್ನು ಕೊಲೆ ಮಾಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ. ಡಿಲ್ಲಿ ರಾಣಿ ಎಂಬುವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.

Read More