Author: Prajatv Kannada

ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ. ನಾಳೆ ನಡೆಯಲಿರೋ ಬೆಂಗಳೂರು ವಿವಿಯ 59ನೇ ಘಟಿಕೋತ್ಸವದಲ್ಲಿ ಗುರುಕಿರಣ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗುತ್ತದೆ ಅಂತ ಬೆಂಗಳೂರು ವಿವಿ ಕುಲಪತಿ ಡಾ.ಜಯಕರ್ ತಿಳಿಸಿದ್ದಾರೆ. https://youtu.be/mcT3oUhg5Pg?si=G38euLequAsHqPMt ಘಟಿಕೋತ್ಸವದ ಹಿನ್ನಲೆಯಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲೆ, ಸಂಗೀತ ಕ್ಷೇತ್ರದ ಸಾಧನೆಗೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಕ್ರೀಡೆ, ಸಮಾಜ ಸೇವೆ ಕ್ಷೇತ್ರದಲ್ಲಿನ ಸಾಧನೆಗೆ ಕೆ.ಎಸ್.ರಾಜಣ್ಣ ರಾಜ್ಯ ಮಾಜಿ ಆಯುಕ್ತರು,ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ, ಕರ್ನಾಟಕ ಸರ್ಕಾರ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ ಅಂತ ತಿಳಿಸಿದರು. ಈ ಬಾರಿ 31382 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗ್ತಿದೆ. 140 ಜನರಿಗೆ ಪಿಹೆಚ್‌ಡಿ ಪ್ರದಾನ ಮಾಡಲಾಗುತ್ತದೆ ಅಂತ ಮಾಹಿತಿ ನೀಡಿದ್ರು. ಕಾರಣಾಂತರಗಳಿಂದ ರಾಜ್ಯಪಾಲರು ನಾಳೆಯ ಘಟಿಕೋತ್ಸವಕ್ಕೆ ಗೈರಾಗಲಿದ್ದಾರೆ. ಯುಜಿಸಿಯ ವೈಸ್ ಚಾನ್ಸೆಲರ್ ಡಾ.ದೀಪಕ್ ಕುಮಾರ್ ಶ್ರೀವಾಸ್ತವ್ ಮುಖ್ಯ ಆತಿಥಿಗಳಾಗಿ ಭಾಗಿಯಾಗಲಿದ್ದಾರೆ ಅಂತ…

Read More

ಹಾಸನ: ಈಗಿನ ಕಾಲದಲ್ಲಿ ಕೃಷ್ಣ ಇಲ್ಲದೇ ದುರ್ಯೋಧನ ಗೆಲ್ಲುತ್ತಾನೆ. ರಾಜ್ಯ ಮತ್ತು ಕೇಂದ್ರದಲ್ಲಿ ಇದೇ ಆಗೋದು ಎಂದು ಕೋಡಿಮಠದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಜಿಲ್ಲೆಯ ಅರಸೀಕೆರೆ  ತಾಲೂಕಿನ ಹಾರನಹಳ್ಳಿ ಗ್ರಾಮದ ಕೋಡಿಮಠದಲ್ಲಿ ಮಾತನಾಡಿದ ಅವರು, ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕತ್ತರಿಸಿದ್ದರು. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮಾ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ. ಸೆಂಟ್ರಲ್‌ನಲ್ಲೂ, ಸ್ಟೇಟ್‌ಲ್ಲೂ ಆಗೋದು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಎಂದು ಹೆಂದೆಯೇ ಹೇಳಿದ್ದೆ ಎಂದು ತಿಳಿಸಿದ್ದಾರೆ. ಪ್ರಕೃತಿ ವಿಕೋಪ ಕುರಿತು ಮಾತನಾಡಿ, ಮಳೆ ಇನ್ನೂ ಮುಂದುವರೆಯಲಿದೆ. ಜಾಸ್ತಿ ತೊಂದರೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಾಕೃತಿಕ ದೋಷವಿದ್ದು ಭೂಮಿ, ಅಗ್ನಿ, ವಾಯು, ಆಕಾಶದಿಂದ ಎಲ್ಲಾ ಕಡೆ ತೊಂದರೆ ಆಗಲಿದೆ ಎಂದು ಎಚ್ಚರಿಸಿದ್ದಾರೆ. ಜನ ಇದ್ದಂಗೆ ಸಾಯ್ತಾರೆ. ಭೂಮಿ ಬಿರುಕು ಬಿಡುತ್ತದೆ. ಗುಡ್ಡ ಕುಸಿದು ಹೋಗುತ್ತದೆ. ಪ್ರವಾಹದಲ್ಲಿ ಜಗತ್ತು ಮುಳುಗುತ್ತದೆ ಎಂದು ಹಿಂದೊಮ್ಮೆ ನಾನು ಹೇಳಿದ್ದೇನೆ. ಇನ್ನೂ…

Read More

ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು 6 ಜನ ಮೃತಪಟ್ಟಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಗೃಹ ಸಚಿವ ಜಿ.ಪರಮೇಶ್ವರ್‌ ಭೇಟಿ ನೀಡಿ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಯ ಶವಾಗಾರಕ್ಕೆ ತೆರಳಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದಿಂದ ಸಿಂಧೂ ಅವ್ರ ಪುತ್ರ ವೇದಾಸ್ ರೆಡ್ಡಿ, ಜನಾರ್ದನ್ ರೆಡ್ಡಿ, ಕಾರು ಚಾಲಕ ಆನಂದ್ ಹಾಗೂ ಗೀತಾಮತ್ತೊಂದ್ಕಡೆ ನಾಗರಾಜ್ ಹಾಗೂ ಸಿದ್ಧಗಂಗಾ ಅನ್ನೋರು ಟಿಯಾಗೋ ಕಾರಿನಲ್ಲಿಕಡೆಯಿಂದ ಮಧುಗಿರಿ ಕಡೆಗೆ ತೆರಳುತ್ತಿದ್ರು. ಆದ್ರೆ ಮಧುಗಿರಿ ತಾಲೂಕಿನ ಕಾಟಗಾನಹಟ್ಟಿ ಬಳಿ ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಮಾರುತಿ ಸಿಯಾಜ್‌ಕಾರ್‌ನಲ್ಲಿದ್ದ 33 ವರ್ಷದ ಸಿಂಧೂ ಅವರ ಪುತ್ರ 12 ವರ್ಷದ ವೇದಾಸ್‌ ರೆಡ್ಡಿ, 30 ವರ್ಷದ ಆನಂದ್, 60 ವರ್ಷದ ಜನಾರ್ದನ ರೆಡ್ಡಿ ಸಾವನಪ್ಪಿದ್ದಾರೆ. ಇನ್ನು ಟಿಯಾಗೋ ಕಾರಿನಲ್ಲಿದ ಪಿಗ್ಮಿ ಕಲೆಕ್ಟರ್ ನಾಗರಾಜ್ ಮತ್ತು…

Read More

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ  ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ  ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‍ನ  ವಿಭಾಗೀಯ ಪೀಠ ಸೆ.19ಕ್ಕೆ ಮುಂದೂಡಿದೆ. https://youtu.be/ZU4LJBsKSY4?si=GYvCxS4tGFGOGpex ವಿಚಾರಣೆಯನ್ನ ಮುಂದೂಡುವಂತೆ ಎಸ್‍ಪಿಪಿ ನಾಗೇಶ್ ನಾಯಕ್ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿತು. ಮಹಿಳೆಯೊಬ್ಬರು ತಮ್ಮ ಪುತ್ರಿಯ ಮೇಲೆ ಬಿಎಸ್‍ವೈ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಅವರು ನೀಡಿದ ದೂರಿನ ಅಡಿ, ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಸರ್ಕಾರ ಇದನ್ನು ಸಿಐಡಿಗೆ ವರ್ಗಾಯಿಸಿತ್ತು. ಏಪ್ರಿಲ್ 12 ರಂದು ತನಿಖಾಧಿಕಾರಿಯ ಮುಂದೆ ಯಡಿಯೂರಪ್ಪ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು. ಈ ಪ್ರಕರಣ ದಾಖಲಾದ ನಂತರ ಸಂತ್ರಸ್ತೆ ಮೃತಪಟ್ಟಿದ್ದಾರೆ. ಈಗ ಸಂತ್ರಸ್ತೆಯ ಪುತ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧ ಸಿಐಡಿ ಒಂದಷ್ಟು ಸಾಕ್ಷ್ಯ ಕಲೆ ಹಾಕಿದೆ. ದೂರುದಾರೆ ನೀಡಿದ್ದ ವಿಡಿಯೋ ಪಡೆದು ಪರಿಶೀಲನೆ ಜೊತೆಗೆ ಬಾಲಕಿ, ಬಿಎಸ್‍ವೈ ಧ್ವನಿ ಸಂಗ್ರಹ ಮಾಡಿ ವಿಧಿವಿಜ್ಞಾನ…

Read More

ತಮಿಳು ನಿರ್ಮಾಪಕ ದಿಲ್ಲಿ ಬಾಬು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 50 ವರ್ಷ ವಯಸ್ಸಾಗಿತ್ತು. ಮಧ್ಯರಾತ್ರಿ 12:30ರ ಸುಮಾರಿಗೆ ದಿಲ್ಲಿ ಬಾಬು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ತಮಿಳು ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿದ್ದ ದಿಲ್ಲಿ ಬಾಬು ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ದಿಲ್ಲಿ ಬಾಬು ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಮಟ್ಟದ ಶಾಕ್ ತಂದಿದೆ. ತಮಿಳು ಫಿಲ್ಮ್​ ಇಂಡಸ್ಟ್ರಿಯ ಅನೇಕರು ದಿಲ್ಲಿ ಬಾಬು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚೆನ್ನೈನ ಪೆರಂಗಳದೂರ್​ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30ರ ವೇಳೆಗೆ ಅವರ ಶವವನ್ನು ಮನೆಗೆ ತರಲಾಗಿದೆ. ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ನಿರ್ಮಾಪಕ ಎಸ್​ಆರ್ ಪ್ರಭು ಅವರು ಟ್ವೀಟ್ ಮಾಡಿದ್ದಾರೆ. ‘ದಿಲ್ಲಿ ಬಾಬು ನಿಧನ ವಾರ್ತೆ ಶಾಕಿಂಗ್…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಗಿದ ಕಾರಣ ಇಂದು ಮತ್ತೆ ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಮೂರ್ತಿಗಳ ಎದುರು ಹಾಜರಾಗಿದ್ದರು. ದರ್ಶನ್ ಅವರು ಬಳ್ಳಾರಿ ಜೈಲಿನಿಂದ, ಪವಿತ್ರಾ ಗೌಡ ಬೆಂಗಳೂರು ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದರು. ಅದೇ ರೀತಿ ಈ ಪ್ರಕರಣದಲ್ಲಿ ಬೇರೆ ಬೇರೆ ಜೈಲು ಸೇರಿರುವ ಎಲ್ಲರೂ ವಿಚಾರಣೆ ಎದುರಿಸಿದರು.  ದರ್ಶನ್​ ಸೇರಿದಂತೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಸೆಪ್ಟೆಂಬರ್ ಸೆಪ್ಟೆಂಬರ್ 12ರ ವರೆಗೆ ವಿಸ್ತರಣೆಯಾಗಿದೆ.. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್​ಗೆ ಹಾಜರಾದ ಸರ್ಕಾರಿ ವಕೀಲ ಪ್ರಸನ್ನ ಕುಮಾರ್​​ ಅವರು ಪ್ರಕರಣದ ಪ್ರಾಥಮಿಕ ಸಾಕ್ಷ್ಯಾಧಾರಗಳ ಸಲ್ಲಿಸಿದರು. ಪೆನ್​ಡ್ರೈವ್, ಹಾರ್ಡ್​ಡಿಸ್ಕ್ ಸೇರಿ ಹಲವು ಸಾಕ್ಷ್ಯಾಧಾರಗಳ ಸಲ್ಲಿಕೆ ಮಾಡಿದ್ದಾರೆ. ಇವುಗಳನ್ನು ಜಡ್ಜ್ ಪರಿಶೀಲನೆ ಮಾಡಲಿದ್ದಾರೆ. ನಟ ದರ್ಶನ್ ಅವರು ಜೈಲು ಸೇರಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಜೂನ್ 11ರಂದು ದರ್ಶನ್, ಪವಿತ್ರಾ ಮೊದಲಾದವರು ಅರೆಸ್ಟ್ ಆದರು. ಆ ಬಳಿಕ ಹಂತ ಹಂತವಾಗಿ…

Read More

ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ  ಸೇಂಟ್ ಮೇರಿ  ಹೆಸರಿಡುವಂತೆ ಮನವಿ ಸಲ್ಲಿಕೆಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ವಿರೋಧ ವ್ಯಕ್ತಪಡಿಸಿದ್ದಾರೆ. https://youtu.be/-3kUUPKmX58?si=52PzkR0TjErXxOpm ಪೋಸ್ಟ್‌ನಲ್ಲಿ ಏನಿದೆ? ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ವಿರೋಧ ವ್ಯಕ್ತಪಡಿಸಿದ ಅವರು, ಒಂದು ಸಂಸ್ಕೃತಿಯನ್ನು ಹೇಗೆ ನಾಶ ಮಾಡಬಹುದು ಎಂಬುದಕ್ಕೆ ಇದೆ ಉದಾಹರಣೆಯಾಗಿದೆ. ಹಿಂದೂಗಳ ಆರಾಧ್ಯದೈವ, ಔರಂಗಜೇಬನ ಹುಟ್ಟಡಗಿಸಿದ ಗಂಡುಗಲಿ, ಮಹಾಪರಾಕ್ರಮಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯವನ್ನು ಕಳೆದಂತ ಶಿವಾಜಿನಗರದ ಮೆಟ್ರೋಗೆ ಸಂತ ಮೇರಿ ಹೆಸರನ್ನು ಇಡಬೇಕಂತೆ ಇತಿಹಾಸವನ್ನು ಅರಿಯದ ಮೂಢರಷ್ಟೇ ಈ ರೀತಿ ಸಲಹೆ ಕೊಡಬಲ್ಲರು. 150 ವರ್ಷಗಳ ಇತಿಹಾಸವಿರುವ ಏಕಾಂಬರೇಶ್ವರ ಸ್ವಾಮಿಯ ದೇವಸ್ಥಾನ, ಮುತ್ಯಾಲಮ್ಮ ದೇವಸ್ಥಾನ, ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನ, ಅಂಗಾಲ ಪರಮೇಶ್ವರಿ ಅಮ್ಮನವರ ದೇವಸ್ಥಾನಗಳು ಶಿವಾಜಿನಗರದಲ್ಲಿದೆ. ಓಲೈಕೆ ರಾಜಕಾರಣಕ್ಕೆ, ಹೆಚ್ಚು ವೋಟು ಬೀಳುತ್ತಿರುವ ಸಮುದಾಯವನ್ನು ಸಂತುಷ್ಟಗೊಳಿಸಲು ಈ ರೀತಿ ವ್ಯರ್ಥ ಪ್ರಯತ್ನಗಳು ಬೇಕಾಗಿಲ್ಲ. ನಮ್ಮ ಸಂಸ್ಕೃತಿ, ಪರಂಪರೆ, ಧರ್ಮದ ಹೆಸರನ್ನು ಉಳಿಸಿದವರನ್ನೆಲ್ಲ ಬಿಟ್ಟು, ರಾಜಕೀಯ ಕಾರಣಕ್ಕಾಗಿ ಮೇರಿಯಮ್ಮನ ಹೆಸರು ನಾಮಕರಣ ಮಾಡುವ ಅವಶ್ಯಕತೆ ಇಲ್ಲ ಎಂದು…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಆರೋಗ್ಯ ಸಮುದಾಯ ಕೇಂದ್ರದಲ್ಲಿ ನ್ಯೂತನವಾಗಿ ಆರಂಭವಾದ ಡಯಾಲಿಸಿಸ್ ಕೇಂದ್ರ ಇಂದಿನಿಂದ ಪ್ರಾರಂಭವಾಗಿದೆ. ರಬಕವಿ ಬನಹಟ್ಟಿ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಡಯಾಲಿಸಿಸ್ ಪ್ರಾರಂಭ ಹಿನ್ನಲೆಯಲ್ಲಿ ಅತಿ ಕಡು ಬಡವರು ಮತ್ತು ನಿರ್ಗತಕರಿಗೆ ಇದು ವರವಾಗಿದೆ. ಬಹಳಷ್ಟು ಜನರು ಡಯಾಲಿಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು ಆದರೆ ದೂರದ ಊರುಗಳಿಗೆ ಹೋಗಿ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದರೆ ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿದ್ದು ನಮಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು. ಡಯಾಲಿಸಿಸ್ ಮಾಡಿಸಿಕೊಂಡ ಶಶಿ ಕಮತಗಿ ಮಾತನಾಡಿ ನನಗೆ ವಾರದಲ್ಲಿ ಎರಡು ದಿನ ಡಯಾಲಿಸಿಸ್ ನಾನು ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ದೂರದ ಊರುಗಳಿಗೆ ಹೋಗಿ ಅಲ್ಲಿ ಮೂರರಿಂದ ನಾಲ್ಕು ಸಾವಿರ ರೂಪಾಯಿ ಹಣ ಖರ್ಚು ಮಾಡಿ ಡಯಾಲಿಸಿಸ್ ಮಾಡಿಸುತ್ತಿದ್ದೆ ಆದರೆ ಇಂದು ನಮ್ಮ ರಬಕವಿ ಬನಹಟ್ಟಿ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಪ್ರಾರಂಭವಾಗಿದ್ದು ನಾನು ಉಚಿತವಾಗಿ ಇಲ್ಲಿ ಡಯಾಲಿಸಿಸ್ ಮಾಡಿಸಿದ್ದೇನೆ. ನನಗೆ ಎಲ್ಲಾ ರೀತಿ ಅನುಕೂಲವಾಗಿದೆ…

Read More

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿಯ ವಿಸರ್ಜನೆ ಮೆರವಣಿಗೆಗೆ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ, ಸಿ.ಟಿ.ರವಿ, ಮಹೇಶ ಟೆಂಗಿನಕಾಯಿ, ಶಂಕರಪಾಟೀಲ ಮುನೇನಕೊಪ್ಪ ವಿದ್ಯುಕ್ತವಾಗಿ ಚಾಲನೆ ನೀಡಿದರು. ಹೌದು.. ಪಾಲಿಕೆಯಿಂದ ಮೂರು ದಿನಗಳ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿಯನ್ನು ಇಂದು ವಿಸರ್ಜನೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡುವ ಮೂಲಕ ವಿದಾಯ ಹೇಳಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ವಿಸರ್ಜನೆ ಮೆರವಣಿಗೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದ್ದು, ಸಕಲ ವಾದ್ಯ ವೈಭವದೊಂದಿಗೆ ಮೆರವಣಿಗೆ ಸಾಗಿದೆ. ಇನ್ನೂ ಸಾವಿರಾರು ಭಕ್ತರ ಸಮ್ಮುಖದಲ್ಲಿಯೇ ಅದ್ದೂರಿಯಾಗಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ. ಅಲ್ಲದೇ ಇನ್ನೂ ಹಲವಾರು ಗಣ್ಯರು ಆಗಮಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ..

Read More