ಬೆಂಗಳೂರು: ಪರಪ್ಪನ ಅಗ್ರಹಾರ(Parappana Agrahara Jail) ಜೈಲಿನಿಂದ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ರಾಜ್ಯ ಸರ್ಕಾರ ಸನ್ನಡತೆ ಮೇಲೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 81 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದೆ. 214 ಕೈದಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದ್ರೆ ಮಂಗಳವಾರ(ಮೇ 23) ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ತಮ್ಮವರು ಶಿಕ್ಷೆಯಿಂದ ಬಿಡುಗಡೆಯಾಗಿ ವಾಪಾಸಾಗು ತ್ತಿರುವುದು ತಿಳಿದ ಬಳಿಕ ಕುಟುಂಬಸ್ಥರು ಕಾರಾಗೃಹದ ಬಳಿ ಬಂದು ಸ್ವಾಗತಿಸಿದರು. ಬಿಡುಗಡೆ ಆಗ್ತಾ ಇದ್ದಂತೆ ಕುಟುಂಬಸ್ಥರನ್ನು ತಬ್ಬಿ ಬಿಡುಗಡೆಗೊಂಡ ಕೈದಿಗಳು ಕಣ್ಣೀರು ಹಾಕಿದರು. ಜೈಲಿನ ಅಧಿಕಾರಿಗಳು ಬಿಡುಗಡೆ ಪ್ರಮಾಣ ಪತ್ರ ನೀಡಿ ಕಳುಹಿಸಿದ್ದಾರೆ. ಮತ್ತೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಲ್ಲ ಎಂದು ಕೈದಿಗಳು ಬರೆದುಕೊಟ್ಟಿದ್ದಾರೆ. ಹಾಗೂ ಕೆಟ್ಟ ವ್ಯಕ್ತಿಗಳ ಜೊತೆ ಸೇರಲ್ಲ ಎಂದು ಸಹಿ ಹಾಕಿ ಮನೆಗಳ ಕಡೆ ತೆರಳಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ತೆಗೆದುಕೊಳ್ಳಲಾಗಿದ್ದ ಬಿಡುಗಡೆ ನಿರ್ಣಯವನ್ನು ಸೋಮವಾರ ರಾಜ್ಯಪಾಲರ ಅಂಕಿತ ನಂತರ ಬಿಡುಗಡೆ ಭಾಗ್ಯ ಸಿಕ್ಕಿದೆ. ಇನ್ನು ಉತ್ತಮ ಸನ್ನಡತೆ ಇರೋ ಒಟ್ಟು 214 ಕೈದಿಗಳ ಬಿಡುಗಡೆಗೆ ಸ್ಥಾಯಿ ಸಮಿತಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
Author: Prajatv Kannada
ಚಿಕ್ಕಬಳ್ಳಾಪುರ: ಕೊಲೆಯಾಗಿ 3 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮನೆಯಲ್ಲಿಯೇ ಮಹಿಳೆ ಶವ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಗೌರಿಬಿದನೂರು ನಗರದ ಗಂಗಾನಗರದ ಮನೆಯಲ್ಲಿ ಮೃತ ಪಟ್ಟ ಮಹಿಳೆಯನ್ನು ಲಕ್ಷ್ಮಿದೇವಮ್ಮ (43) ಎಂದು ತಿಳಿದು ಬಂದಿದೆ. ಸದ್ಯ ಮೃತಳ ಗಂಡ ಕೃಷ್ಣಪ್ಪ ಪರಾರಿ ಯಾಗಿದ್ದು ಕೊಲೆಯ ಹಿಂದೆ ಮೃತಳ ಗಂಡನ ಕೈವಾಡ ಇದೆ ಎಂಬುವುದು ಮಾಹಿತಿ ತಿಳಿದು ಬಂದಿದೆ. ಗೌರಿಬಿದನೂರು ತಾಲ್ಲೂಕಿನ ರಾಮಚಂದ್ರಪುರ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೃಷ್ಣಪ್ಪ ಸೇವೆ ಸಲ್ಲಿಸುತ್ತಿದ್ದರು ಆದರೆ ಕಳೆದ ಮೂರು ದಿನಗಳಿಂದ ಕೃಷ್ಣಪ್ಪ ಪರಾರಿಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಇನ್ನೂ ಕಳೆದ ನಾಲ್ಕು ದಿನಗಳಿಂದ ಮೃತ ಮಹಿಳೆಯ ಮಕ್ಕಳು ತಾಯಿಯನ್ನು ಮಾತನಾಡಲು ಪೋನ್ ಕರೆ ಮಾಡಿದ್ದಾರೆ ಆದರೆ ಕರೆ ಸ್ವೀಕರಿಸದ ಹಿನ್ನಲೇ ಮನೆಯ ಬಳಿ ಬಂದು ನೋಡಿದ ವೇಳೆ ತಾಯಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಲಿಖಿತ ಎಂಬ ಮಗಳಿಗೆ ಮದುವೆ ಯಾಗಿದ್ದು ಎರಡನೇ…
ಮಂಗಳೂರು: ಡಿಕೆಶಿ ಪೊಲೀಸರಿಗೆ ನಿನ್ನೆ ಕೇಸರಿ ಶಾಲಿನ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಹರಿಹಾಯ್ದು ಎಚ್ಚರಿಕೆ ಕೊಟ್ಟಿರೋದು ಕಂಡು ಬಂದಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.. ಮಂಗಳೂರಿನಲ್ಲಿ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (kota srinivas poojary)ಮಾತನಾಡಿದ್ದು, ಕೇಸರಿ ಶಾಲು ಈ ರಾಜ್ಯದಲ್ಲಿ ನಿಷೇಧ ಇಲ್ಲ, ಕರ್ತವ್ಯದಲ್ಲಿ ಇದ್ದಾಗ ಯಾರೂ ಕೇಸರಿ ಪ್ರಯೋಗ ಮಾಡಿಲ್ಲ. ಅವರ ಖಾಸಗಿ ಜೀವನದಲ್ಲಿ ಅವರ ಉಡುಪುಗಳ ಬಗ್ಗೆ ಪ್ರಶ್ನೆ ಮಾಡಿ ಡಿಕೆಶಿ ದ್ವೇಷ ತೀರಿಸಿಕೊಂಡಿದ್ದಾರೆ. ಇದು ಸರಿಯಲ್ಲ, ಅವರು ತಮ್ಮ ಮಾತನ್ನ ಪುನರ್ ಪರಿಶೀಲನೆ ಮಾಡಬೇಕು ಎಂದರು.
ದಾವಣಗೆರೆ: ಒಳಮೀಸಲಾತಿಯಿಂದ 45 ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ ಎಂದು ಮಾಜಿ ಶಾಸಕ ರೇಣುಕಾಚಾರ್ಯ (Renukac harya) ತಿಳಿಸಿದ್ದಾರೆ. ಆತ್ಮಾವಲೋಕನಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ (BJP)ಕೇಂದ್ರ ನಾಯಕರ ತಂತ್ರಗಾರಿಕೆಯೇ ಬಿಜೆಪಿ ಸೋಲಲು ಕಾರಣ ಎಂದಿದ್ದಾರೆ. ಬಿಜೆಪಿ ಕೇಂದ್ರ ನಾಯಕರು 72 ಹೊಸಬರಿಗೆ ಟಿಕೆಟ್ ನೀಡಿದ್ದರು. 72 ಹೊಸಬರ ಪೈಕಿ 42 ಜನರು ಚುನಾವಣೆಯಲ್ಲಿ ಸೋತಿದ್ದಾರೆ. ಈ ತಂತ್ರಗಾರಿಕೆ ನಮ್ಮ ರಾಜ್ಯಕ್ಕಲ್ಲ. ಬೆಲೆ ಏರಿಕೆ ಸಂದರ್ಭದಲ್ಲಿ ಅಕ್ಕಿ ಕಡಿತ ಮಾಡಿದ್ದು ತಪ್ಪು. ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರನ್ನು ಗಾಯಕ ಅನೂಪ್ ಜಲೋಟಾ (Anup Jalota) ಅವರು ಶ್ಲಾಘಿಸಿದ್ದಾರೆ. ಅಲ್ಲದೆ ಪಾಕಿಸ್ತಾನದ ಜನ ಕೂಡ ನರೇಂದ್ರ ಮೋದಿಯವರನ್ನು ಭಾರೀ ಇಷ್ಟ ಪಡುತ್ತಾರೆ ಎಂದು ಹೇಳಿದ್ದಾರೆ. ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಮಾತನಾಡಿದ ಗಾಯಕ, ನೆರೆಯ ದೇಶದಲ್ಲಿ ಅವರಂತಹ ನಾಯಕನನ್ನು ಬಯಸುತ್ತೇವೆ ಎಂದು ಪಾಕಿಸ್ತಾನ (Pakistan) ದ ಜನ ಹೇಳುತ್ತಾರೆ ಎಂದರು. ಜನರು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತಾರೆ. ಒಟ್ಟಿನಲ್ಲಿ ಪಾಕಿಸ್ತಾನವೇ ಮೋದಿಯವರನ್ನು ಪ್ರೀತಿಸುತ್ತಿದೆ ಅಂತಾನೇ ಹೇಳಬಹುದು. ಮೋದಿಯಂತಹ ನಾಯಕ ನಮಗೆ ಬೇಕು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇತ್ತ ಸಿಡ್ನಿಯ ಜನ ಕೂಡ ಮೋದಿಯವರು ಶಾಶ್ವತವಾಗಿ ಪ್ರಧಾನಿಯಾಗಿರುವಂತೆ ಬಯಸುತ್ತಾರೆ ಎಂದು ಹೇಳಿದರು. ಮೂರು ದಿನದ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಸ್ಟ್ರೇಲಿಯಾಗೆ ಆಗಮಿಸಿದರು. ಜಿ7 ಸಮ್ಮೇಳನಕ್ಕಾಗಿ ಜಪಾನ್ ನ ಹಿರೋಶಿಮಾಗೆ ತೆರಳಿದ್ದ ಮೋದಿ ಬಳಿಕ ಪಪುವಾ ನ್ಯೂಗಿನಿ ದೇಶಕ್ಕೆ ಭೇಟಿ ನೀಡಿದ್ದರು.
ದೆಹಲಿ: 2022ರ ಯುಪಿಎಸ್‍ಸಿ (UPSC) ಮುಖ್ಯ ಪರೀಕ್ಷೆಯ ಅಂತಿಮ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು ಟಾಪ್-10 ಪಟ್ಟಿಯಲ್ಲಿ ಮೊದಲ 4 ಸ್ಥಾನವನ್ನು ಯುವತಿಯರೇ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ 6 ಸ್ಥಾನವನ್ನು ಯುವತಿಯರು ಪಡೆದುಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಟಾಪರ್ಸ್ (Toppers) ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇಶಿತಾ ಕಿಶೋರ್ (Ishita Kishore), ಗರಿಮಾ ಲೋಹಿಯಾ, ಉಮಾ ಹರತಿ ಎನ್, ಸ್ಮೃತಿ ಮಿಶ್ರಾ, ಮಯೂರ್ ಹಜಾರಿಕಾ, ಗಹನಾ ನವ್ಯಾ ಜೇಮ್ಸ್, ವಸೀಮ್ ಅಹ್ಮದ್ ಭಟ್, ಅನಿರುದ್ಧ್ ಯಾದವ್, ಕನಿಕಾ ಗೋಯಲ್ ಮತ್ತು ರಾಹುಲ್ ಶ್ರೀವಾಸ್ತವ. ಈ ಹತ್ತು ಅಭ್ಯರ್ಥಿಗಳು ಟಾಪ್ 10 ಪಟ್ಟಿಯಲ್ಲಿದ್ದಾರೆ. ಸೆ.2022 ರಲ್ಲಿ ನಾಗರಿಕ ಸೇವಾ ಆಯೋಗ ನಡೆಸಿದ ಲಿಖಿತ ಪರೀಕ್ಷೆ (Civil Services Examination 2022 )ಮತ್ತು ಮೇ 2023 ರಲ್ಲಿ ನಡೆದ ವ್ಯಕ್ತಿತ್ವ ಪರೀಕ್ಷೆಯ ಸಂದರ್ಶನಗಳ ಆಧಾರದ ಮೇಲೆ 933 ಅಭ್ಯರ್ಥಿಗಳನ್ನು ಶಿಪಾರಸು ಮಾಡಲಾಗಿದೆ ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಧಾರ್ಮಿಕ ನಂಬಿಕೆಗಳ ಹೊರತಾಗಿಯೂ ತುಳಸಿ ಎಲೆಗಳನ್ನು ಆಯುರ್ವೇದದಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ತುಳಸಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಶೀತ, ಒತ್ತಡ ಮತ್ತು ಆಮ್ಲೀಯತೆ ಕಡಿಮೆಯಾಗುತ್ತದೆ. ನಿಮ್ಮ ದಿನಚರಿಯಲ್ಲಿ ಹೊಸ ಆಯುರ್ವೇದ ಮತ್ತು ಆರೋಗ್ಯಕರ ಪದಾರ್ಥವನ್ನು ಸೇರಿಸಲು ನೀವು ಬಯಸಿದರೆ, ತುಳಸಿ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ತುಳಸಿ ನೀರು ಮಾಡುವುದು ಹೇಗೆ?: ತುಳಸಿ ನೀರನ್ನು ತಯಾರಿಸುವುದು ಬಹಳ ಸುಲಭ. ಕೆಲವು ತಾಜಾ ತುಳಸಿ ಎಲೆಗಳನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನಿಧಾನವಾದ ಶಾಖದಲ್ಲಿ ಕುದಿಸಿ. ಇದನ್ನು ಲೋಟದೊಳಗೆ ಹಾಕಿಟ್ಟುಕೊಂಡು, ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಆ ತುಳಸಿ ಎಲೆಗಳನ್ನು ಎಸೆಯಬೇಡಿ. ನೀವು ಅಡುಗೆ ಮಾಡುವ ಯಾವುದೇ ಊಟದಲ್ಲಿ ಇದನ್ನು ಬಳಸಬಹುದು. ಅಥವಾ ಬೇಯಿಸಿದ ಅನ್ನಕ್ಕೆ ಸೇರಿಸಿ ತಿನ್ನಲೂಬಹುದು. ತುಳಸಿ ನೀರಿನ ಪ್ರಯೋಜನಗಳು: – ತುಳಸಿ ನೀರನ್ನು ಕುಡಿಯುವುದರಿಂದ ಉಂಟಾಗುವ ದೊಡ್ಡ ಪ್ರಯೋಜನವೆಂದರೆ ಅದು ನಿಮ್ಮ ದೇಹ ಮತ್ತು ಅಂಗಗಳಲ್ಲಿರುವ ತ್ಯಾಜ್ಯ ಮತ್ತು…
ಬಾಲಿವುಡ್ ನ ಖ್ಯಾತ ನಟ ಅನುಪಮ್ ಖೇರ್ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅನುಪಮ್ ‘ವಿಜಯ್ 69’ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದು ವೇಳೆ ಭುಜಕ್ಕೆ ಗಾಯಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅನುಪಮ್ ಖೇರ್, ನಾನು ಆರೋಗ್ಯವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಆತಂಕದಲ್ಲಿರುವ ಅಭಿಮಾನಿಗಳಿಗೆ ಅನುಪಮ್ ಖೇರ್ ಸ್ಪಷ್ಟನೆ ನೀಡಿದ್ದಾರೆ. ಸ್ಪೋರ್ಟ್ಸ್ ಸಿನಿಮಾ ಮಾಡುತ್ತೀರಿ ಮತ್ತು ನೀವು ಗಾಯಗೊಂಡಿಲ್ಲ ಅಂದರೆ ಅದು ಹೇಗೆ ಸಾಧ್ಯ ‘ವಿಜಯ್ 69’ರ ಶೂಟಿಂಗ್ ಸಮಯದಲ್ಲಿ ಭುಜಕ್ಕೆ ತೀವ್ರವಾಗಿ ಗಾಯವಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ. ಸದ್ಯ ಅವರು ಗಾಯಗೊಂಡಿರುವುದರಿಂದ ಶೂಟಿಂಗ್‌ಗೆ ಬ್ರೇಕ್ ಪಡೆದಿದ್ದಾರೆ. ನೆಚ್ಚಿನ ನಟ ಶ್ರೀಘ್ರವೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ‘ವೈಆರ್‌ಎಫ್ ಎಂಟರ್‌ಟೈನ್ಮೆಂಟ್’ ಒಟಿಟಿ ಮೂಲಕ ವಿಜಯ್ 69 ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ತೆರೆ ಕಾಣಲಿದೆ. ಈ ಚಿತ್ರಕ್ಕೆ ಅಕ್ಷಯ್ ರಾಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಚೆನ್ನೈ: ಎಂಎಸ್ ಧೋನಿ ತಾನಾಗಿಯೇ ಐಪಿಎಲ್ ನಿವೃತ್ತಿ ಬಗ್ಗೆ ಮಾತನಾಡದೇ ಇದ್ದರೂ ಪದೇ-ಪದೆ ನಿವೃತ್ತಿ ಬಗ್ಗೆ ಸಿಎಸ್‌ಕೆ ನಾಯಕನಿಗೆ ಪ್ರಶ್ನೆ ಕೇಳಲಾಗುತ್ತಿದೆ. ಅದೇ ರೀತಿ ಮಂಗಳವಾರ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಬಳಿಕ ಎಂಎಸ್ ಧೋನಿಗೆ ಮತ್ತೊಮ್ಮೆ ನಿವೃತ್ತಿ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಸಿಎಸ್‌ಕೆ ನಾಯಕ ಖಡಕ್ ಉತ್ತರ ನೀಡಿದ್ದಾರೆ. ಗುಜರಾತ್ ಟೈನಟ್ಸ್ ವಿರುದ್ಧ 15 ರನ್‌ಗಳಿಂದ ಮೊದಲನೇ ಕ್ವಾಲಿಫೈಯರ್ ಪಂದ್ಯ ಗೆದ್ದ ಚೆನ್ನೈ ಸೂಪರ್ ಕಿಂಗ್ಸ, 10ನೇ ಬಾರಿ ಐಪಿಎಲ್ ಟೂರ್ನಿಯಲ್ಲಿ ಫೈನಲ್ ತಲುಪಿತು. ಈ ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಆರಂಭಕ್ಕೆ ಚೆನ್ನೈ ಪ್ರೇಕ್ಷಕರು ಅವಕಾಶ ಮಾಡಲಿಲ್ಲ. ಧೋನಿ..ಧೋನಿ.. ಎಂದು ಕೂಗುವ ಮೂಲಕ ಮೈದಾನವನ್ನು ಧೋನಿ ಮಯ ಮಾಡಿದ್ದರು. ಇದರ ಹೊರತಾಗಿಯೂ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಎಂಎಸ್ ಧೋನಿ, ಸದ್ಯಕ್ಕೆ ಐಪಿಎಲ್ ನಿವೃತ್ತಿ ಬಗ್ಗೆ ನಿರ್ಧಾರ ತಗೆದುಕೊಳ್ಳುವುದಿಲ್ಲ. 2024ರ ಐಪಿಎಲ್ ಮಿನಿ ಹರಾಜು ಡಿಸೆಂಬರ್‌ನಲ್ಲಿ…
ಚೆನ್ನೈ : ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ತಂಡ 10ನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ. ಐಪಿಎಲ್ 2023 ಟೂರ್ನಿಯ ಕ್ವಾಲಿಫೈಯರ್ 1 ಪಂದ್ಯದಲ್ಲಿ ಭರ್ಜರಿ ಆಟವಾಡಿದ ಸಿಎಸ್‌ಕೆ ಅಂಕಪಟ್ಟಿಯ ಅಗ್ರಸ್ಥಾನಿ ಗುಜರಾತ್ ಟೈಟನ್ಸ್ ತಂಡವನ್ನು 15 ರನ್‌ಗಳಿಂದ ಮಣಿಸಿ ಫೈನಲ್‌ಗೆ ದಾಪುಗಾಲಿಟ್ಟಿತು. ಸೋಲುಂಡ ಹಾರ್ದಿಕ್ ಪಾಂಡ್ಯ ಪಡೆ, ಇದೀಗ ಫೈನಲ್‌ಗೆ ಅರ್ಹತೆ ಪಡೆಯಲು ಕ್ವಾಲಿಫೈಯರ್ 2 ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಮುಗ್ಗರಿಸಿದ ಗುಜರಾತ್ ಟೈಟನ್ಸ್ ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ರನ್‌ಚೇಸ್‌ನಲ್ಲಿ ಅಬ್ಬರಿಸಿದ್ದ ಗುಜರಾತ್ ಟೈಟನ್ಸ್, ಕ್ವಾಲಿಫೈಯರ್ ಕದನದಲ್ಲಿ ಸಿಎಸ್‌ಕೆ ಎದುರು ಚೇಸಿಂಗ್ ಆಯ್ಕೆ ಮಾಡಿ ಮುಗ್ಗರಿಸಿತು. ಗೆಲ್ಲಲು 173 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಟೈಟನ್ಸ್, ತನ್ನ 20 ಓವರ್‌ಗಳಲ್ಲಿ 157 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಸಿಎಸ್‌ಕೆ ಭರ್ಜರಿ ಬೌಲಿಂಗ್ ಮನೆಯಂಗಣದ ಪಿಚ್‌ಗೆ ಸೂಕ್ತ ರಣತಂತ್ರ ಹೆಣೆದು ಬೌಲಿಂಗ್ ಮಾಡಿದ ಸೂಪರ್ ಕಿಂಗ್ಸ್ ಎದುರಾಳಿ ಬ್ಯಾಟರ್‌ಗಳ ಅಬ್ಬರಕ್ಕೆ ಬ್ರೇಕ್ ಹಾಕಿತು. ರಶೀದ್ ಖಾನ್…