ಹುಬ್ಬಳ್ಳಿ: ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಡಮಾರ್. ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು, ದೀಪಾವಳಿ ಒಳಗೆ ಕಾಂಗ್ರೆಸ್, ಸಿದ್ದರಾಮಯ್ಯ ಸರ್ಕಾರ ಢಮಾರ್ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಸಿಟಿ ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹೊಸ ಸಿಎಮ್,ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡುತ್ತದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಮಾಡಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದಿವಿ ಅಂತಾರೆ.ಸಿದ್ದರಾಮಯ್ಯ ಹೋಗೋದು ಫಿಕ್ಸ್ ಆಗಿದ್ದು, ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ. ಒಂದು ಡಜನ್ ಗೆ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಎಂದಿದ್ದರು. ನೀವು ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ ಎಂದರು. ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಬ್ರಷ್ಟಾಚಾರದ ಸರ್ಕಾರ.ಉಪ್ಪು ತಿಂದವರು ನೀರು ಕುಡಿಯಲಬೇಕು. ಕಳ್ಳನ ಹೆಂಡತಿ ಡ್ಯಾಶ್ ಡ್ಯಾಶ್ ಎಂದು ಸಿ.ಟಿ. ರವಿ ಗುಡುಗಿದರು. ಸುಳ್ಳು…
Author: Prajatv Kannada
ಉಡುಪಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿ ಅವರ ಪ್ರತಿಕೃತಿಗೆ ಚಪ್ಪಲಿ ಏಟು ಹಾಗೂ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿ 11 ಮಂದಿ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಾಂಶುಪಾಲರಿಗೆ ಪ್ರಶಸ್ತಿ ವಾಪಸ್ ಪಡೆದ ವಿಚಾರವಾಗಿ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ಸೆ.6ರಂದು ಪ್ರತಿಭಟನೆ ನಡೆಸಲಾಗಿತ್ತು. https://youtu.be/C6DFIl5WgVk?si=VX5eUUGoiQMZfDQM ಈ ವೇಳೆ ಹೆದ್ದಾರಿ ತಡೆದು ಬಿಜೆಪಿ ಮುಖಂಡರು ಸಿಎಂ ಪ್ರತಿಕೃತಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಹಿಂದೂ ವಿರೋಧಿ ಸಿದ್ದರಾಮಯ್ಯ ತೊಲಗಿಸಿ ಎಂದು ಘೋಷಣೆ ಕೂಡ ಕೂಗಿದ್ದರು. ಈ ಸಂದರ್ಭ ನಗರಸಭಾ ಸದಸ್ಯ ಗಿರೀಶ್ ಅಂಚನ್, ಯುವ ಮೋರ್ಚಾ ಮುಖಂಡ ಪೃಥ್ವಿರಾಜ್ ಶೆಟ್ಟಿ ಸಿಎಂ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದಿದ್ದರು. ಈ ಕುರಿತು ಎನ್‌ಎಸ್‌ಯುಐ ಮುಖಂಡ ಸೌರಭ್ ಬಲ್ಲಾಳ್ ಶಾಂತಿಭಂಗ ತರುವ ಉದ್ದೇಶದಿಂದ ಕೃತ್ಯ ಎಸೆಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಯಶ್‌ಪಾಲ್ ಸುವರ್ಣ ಎ5 ಆರೋಪಿಯಾಗಿದ್ದಾರೆ. ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯರಾದ ಗಿರೀಶ್ ಅಂಚನ್, ವಿಜಯ…
ಆನೇಕಲ್(ತಮಿಳುನಾಡು): ಕರ್ನಾಟಕದ ಗಡಿಭಾಗ ತಮಿಳುನಾಡಿನ ಹೊಸೂರಿನಲ್ಲಿ ಹೈಕೋರ್ಟ್ ಸೆಟ್ ಹಾಕಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. ಹೈಕೋರ್ಟ್ನಲ್ಲಿ ಜಡ್ಜ್, ವಕೀಲ, ಗುಮಾಸ್ತ ಎಲ್ಲವೂ ಗಣೇಶ. ಕರ್ನಾಟಕ ಗಡಿಭಾಗ ಹೊಸೂರಿನಲ್ಲಿ ಹೈಕೋರ್ಟ್ ಸೆಟ್ ಹಾಕಿ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ. https://youtu.be/C6DFIl5WgVk?si=VX5eUUGoiQMZfDQM ಕೋರ್ಟ್ ನಲ್ಲಿ ಆರೋಪಿಯಾದ ಮೂಷಿಕ ವಾಹನ ಅದ್ದೂರಿ ಹೈಕೋರ್ಟ್ ಥೀಮ್ ಸೆಟ್ ನಲ್ಲಿ ಗಣೇಶ ಪ್ರತಿಷ್ಠಾಪನೆ ಹೊಸೂರಿನ ಶ್ರೀನಗರದಲ್ಲಿ ಹೈ ಕೋರ್ಟ್ ಮಾದರಿಯ ಸೆಟ್ ನಿರ್ಮಾಣ ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರು ಬರೊಬ್ಬರಿ ಏಳು ಲಕ್ಷ ರೂಪಾಯಿ ಖರ್ಚು ಮಾಡಿ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಲಾಗಿದೆ. ಜಿಗಣಿಯ ಉದಯ್ ಕುಮಾರ್ ತಂಡದಿಂದ ಹೈಕೋರ್ಟ್ ಮಾದರಿ ಸೆಟ್ ನಿರ್ಮಾಣ ಮಾಡಿದೆ. ಇಪ್ಪತ್ತೈದು ದಿನದಲ್ಲಿ ಹೈಕೋರ್ಟ್ ಸೆಟ್ ನಿರ್ಮಾಣ ಮಾಡಲಾಗಿದೆ. ಇದೇ ಶ್ರೀನಗರದಲ್ಲಿ ಕಳೆದ ವರ್ಷ ಪೊಲೀಸ್ ಠಾಣೆ ಸೆಟ್ ಹಾಕಲಾಗಿತ್ತು.ಎಲ್ಲಾ ಪಾತ್ರಧಾರಿಗಳಲ್ಲು ಗಣಪತಿ ಮೂರ್ತಿಗಳ ಪ್ರಮುಖ ಪಾತ್ರ ಹದಿನಾರಕ್ಕೂ ಹೆಚ್ಚು ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ ಹೊರಗೆ ಪೋಲಿಸ್ ಜೀಪ್ ಸೇರಿದಂತೆ ಸಂಪೂರ್ಣ ಕೋರ್ಟ್ ಸೆಟ್ ನಿರ್ಮಾಣ…
ಮುಡಾ ಕೇಸಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಸಿಎಂ ಕುರ್ಚಿಗಾಗಿ ನಡೆದಿದೆ ಹಲವರ ಪೈಪೋಟಿ https://youtu.be/Q7RzKrzxJbY?si=YfxGOQxiePNdB2MQ ಇದೀಗ ಪರಮೇಶ್ವರ್ ಮುಂದಿನ ಸಿಎಂ ಎಂಬ ಅಭಿಯಾನ ಶುರುವಾಗಿದ್ದು ಈಗಾಗಲೇ ಅವರ ಪೋಸ್ಟರ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಪರಮೇಶ್ವರ್ ಯುವ ಸೈನ್ಯದ ಬಳಗದಿಂದ ಅಭಿಯಾನ ಶುರು ಮಾಡಲಾಗಿದೆ. ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ವೈರಲ್ ಆಗಿತ್ತು ಆದಾದ ನಂತರ ಇದೀಗ ಪರಮೇಶ್ವರ್ ಅಭಿಯಾನ ಶುರುವಾಗಿದ್ದು ಅವರ ಅಭಿಮಾನಿ,ಸಂಘಟನೆಗಳಿಂದ ಅಭಿಯಾನ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ ಅಭಿಯಾನ
ಸಾಮಾನ್ಯವಾಗಿ ಬೆಂಡೆಕಾಯಿಯನ್ನು ಆಹಾರವಾಗಿ ಸೇವಿಸಿದರೆ, ಇನ್ನು ಕೆಲವುರು ನೇರವಾಗಿ ಬೆಂಡೆಕಾಯಿಯನ್ನು ಕೂದಲಿನ ಆರೈಕೆಗಾಗಿ ಬಳಸುತ್ತಾರೆ. ಕೂದಲಿನ ಆರೋಗ್ಯಕ್ಕೆ ಬೆಂಡೆಕಾಯಿಯ ಕೆಲವು ಪ್ರಯೋಜನಗಳು ಇಲ್ಲಿವೆ.ಆಮ್ಲಾವು ವಿಟಮಿನ್ ಎ, ಸಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಂದ ಕೂಡ ಸಮೃದ್ಧವಾಗಿದೆ.ಮುಂಗ್ ಬೀನ್ಸ್ ನಂತಹ ಪೋಷಕಾಂಶ-ದಟ್ಟವಾದ ಆಹಾರಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ಒಟ್ಟಾರೆ ಆರೋಗ್ಯವನ್ನುಸುಧಾರಿಸುತ್ತದೆ ಮತ್ತು ಪರೋಕ್ಷವಾಗಿ ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ಬೆಂಡೆಕಾಯಿಯ ಬೀಜಗಳ ಪೇಸ್ಟ್ ಅನ್ನು ತಲೆಗೆ ಹಚ್ಚುವುದರಿಂದ ಶುಷ್ಕತೆಯನ್ನು ನಿವಾರಿಸಲು ಮತ್ತು ಆರೋಗ್ಯಕರ ನೆತ್ತಿಯನ್ನುಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕೆಲವರು ನಂಬುತ್ತಾರೆ.ಆದಾಗ್ಯೂ, ಇದಕ್ಕೆ ಪೂರಕವಾದ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ, ಕೆಲವರು ಅದನ್ನು ವೈಯಕ್ತಿಕವಾಗಿಬಳಸಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಹೇರ್ ಕಂಡೀಷನಿಂಗ್: ಈರುಳ್ಳಿಯಲ್ಲಿ ಲೋಳೆಸರ ಎಂಬ ನೈಸರ್ಗಿಕ ವಸ್ತುವಿದೆ. ಕೆಲವರು ಈ ಸ್ಲಿಮ್ಮಿಂಗ್ ಉತ್ಪನ್ನವನ್ನು ನೈಸರ್ಗಿಕ ಕೂದಲು ಕಂಡಿಷನರ್ ಆಗಿ ಬಳಸುತ್ತಾರೆ. ಇದರ ಕಾಳನ್ನು ಕುದಿಸಿ ತಣ್ಣಗಾಗಿಸಿ ಕೂದಲು ಬಾಚಿದರೆ ಸಿಗುವ ಲೋಳೆಸರದ ದ್ರವ ಉತ್ತಮ ಫಲಿತಾಂಶ ನೀಡುತ್ತದೆ ಎಂಬ…
ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಿಮಗೆ ಒಂಥರಾ ಅನಿಸೋದಿಲ್ಲವೇ? . ಅದರಲ್ಲೂ ನೀವು ನಿಮ್ಮ ಮನೆಯನ್ನು ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಘಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಜಿರಳೆಗಳು ಆಹಾರ ವಿಷದ ಅಪಾಯವನ್ನುಂಟುಮಾಡುತ್ತವೆ. ನೀವು ಅಡುಗೆಮನೆಯಲ್ಲಿಟ್ಟ ಆಹಾರದ ಮೇಲೆಲ್ಲ ಜಿರಳೆ ಓಡಾಡಿದರೆ ನೀವು ಅದನ್ನು ತಿನ್ನುತ್ತೀರಿ, ಇದು ಟೈಫಾಯಿಡ್‌ಗೆ ಕಾರಣವಾಗಬಹುದು. ಇದಲ್ಲದೇ ಜಿರಳೆ ಮುಟ್ಟಿದ್ದನ್ನು ತಿಂದರೆ ಅಲರ್ಜಿ, ದದ್ದು, ಕಣ್ಣಿನಲ್ಲಿ ನೀರು ಬರುವುದು ಮುಂತಾದ ಸಮಸ್ಯೆಗಳೂ ಎದುರಾಗಬಹುದು. ಇದಕ್ಕೆ ಜಿರಳೆಯ ಲಾಲಾರಸದಲ್ಲಿರುವ ವೈರಸ್ ಕಾರಣ. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣ ಅದನ್ನು ತೊಡೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಬೇವು ಕೀಟನಾಶಕ ಗುಣಗಳನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಜಿರಳೆಗಳನ್ನು ತೊಡೆದುಹಾಕಲು ಇದರ ಬಳಕೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಬೇವಿನ ಪುಡಿ ಅಥವಾ ಅದರ…
ಹೈದರಾಬಾದ್‌ನ ಮಹಿಳಾ ಪೊಲೀಸರು ಕಾರ್ಯಚರಣೆ ನಡೆಸಿ ಕಳೆದ 20 ದಿನಗಳಿಂದ ಹೋಟೆಲ್ ರೂಂನಲ್ಲಿ ಬಂಧಿಯಾಗಿದ್ದ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆಕೆಯನ್ನು ಕರೆದೊಯ್ದು ರೂಮಿನಲ್ಲಿ ಬಂಧಿಸಿಟ್ಟಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಹೈದರಾಬಾದ್ ಪೊಲೀಸ್ ವಿಭಾಗದ ‘SHE’ತಂಡವು ವಿದ್ಯಾರ್ಥಿನಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. 19 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ನಾರಾಯಣಗುಡ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಭೈಂಸಾ ಪಟ್ಟಣದ ವಿದ್ಯಾರ್ಥಿನಿಯ ಪೋಷಕರು ಹೈದರಾಬಾದ್‌ನ ಶಿ ಟೀಮ್ಗೆ ದೂರು ಸಲ್ಲಿಸಿದ್ದರು, ತಮ್ಮ ಮಗಳು ಟ್ರ್ಯಾಪ್ ಆಗಿದ್ದಾಳೆ ಎಂಬುದನ್ನು ತಿಳಿಸಿದ್ದರು. ಆರೋಪಿ ಬೆದರಿಕೆ ಹಾಕಿದ್ದ, ಹೈದರಾಬಾದ್ಗೆ ಬರುವಂತೆ ಒತ್ತಾಯಿಸಿದ್ದ, 20 ದಿನಗಳ ಕಾಲ ಹೋಟೆಲ್ ಕೊಠಡಿಯಲ್ಲಿ ಬೀಗ ಹಾಕಿ ಕೂರಿಸಿದ್ದ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆಕೆ ಇನ್ಸ್ಟೆಂಟ್ ಮೆಸೇಜಿಂಗ್ ಆ್ಯಪ್ ಮೂಲಕ ಪೋಷಕರಿಗೆ ಸಂದೇಶ ಕಳುಹಿಸಿದ್ದಳು. ತಕ್ಷಣವೇ ಪೊಲೀಸರು ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ನಾರಾಯಣಗುಡಾದಲ್ಲಿ ಬೀಗ ಹಾಕಲಾದ…
ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ಡಿಜಿಟಲ್ ಐಡಿ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್ನಂತೆಯೇ ಇರುತ್ತದೆ. ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಒದಗಿಸುತ್ತದೆ. ಆಧಾರ್ ಕಾರ್ಡ್ನಂತೆಯೇ ರೈತರಿಗೆ ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ ಹಣಕಾಸು ವರ್ಷದಲ್ಲಿ 6 ಕೋಟಿ, 2025-26ರ ಹಣಕಾಸು ವರ್ಷದಲ್ಲಿ 3 ಕೋಟಿ ಮತ್ತು 2026-27ನೇ ಸಾಲಿನಲ್ಲಿ 2 ಕೋಟಿ ಡಿಜಿಟಲ್ ಐಡಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಈ ಗುರುತಿನ ಚೀಟಿಗಳಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾವನ್ನು ಲಿಂಕ್ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. 2024-25 ರಲ್ಲಿ 400 ಜಿಲ್ಲೆಗಳು ಮತ್ತು 2025-26 ರಲ್ಲಿ…
ಉದ್ಯಮಿ ಮುಕೇಶ್ ಅಂಬಾನಿ ಮನೆಯಲ್ಲಿ ಗಣೇಶ ಹಬ್ಬವನ್ನು ಸಾಕಷ್ಟು ವಿಜೃಂಬಣೆಯಿಂದ ಆಚರಣೆ ಮಾಡಲಾಗಿದೆ. ಪ್ರತಿ ವರ್ಷ ಗಣೇಶನ ಹಬ್ಬವನ್ನು ಬಾಲಿವುಡ್ ಸೆಲೆಬ್ರಿಟಿಗಳು ಅಂಬಾನಿ ಮನೆಯಲ್ಲಿ ಸೆಲೆಬ್ರೇಟ್ ಮಾಡುತ್ತಾರೆ. ಅಂತೆಯೇ ಈ ಬಾರಿ ಸಲ್ಮಾನ್ ಖಾನ್, ಆಮೀರ್ ಖಾನ್, ಕರೀನಾ ಕಪೂರ್ ಸೇರಿದಂತೆ ಹಲವಾರು ಕಲಾವಿದರು ಅಂಬಾನಿ ಮನೆಯಲ್ಲಿ ಗಣೇಶನ ದರ್ಶನ ಪಡೆದರು. ಬಾಲಿವುಡ್ ನ ಸಾಕಷ್ಟು ಮಂದಿ ಗಣೇಶೋತ್ಸವವನ್ನು ಸದಾ ಸಡಗರದಿಂದ ಆಚರಿಸುತ್ತಾರೆ. ಅಂತೆಯೇ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವೂ ಕೂಡ ಗಣೇಶ ಹಬ್ಬವನ್ನು ಸಾಕಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಅಂಬಾನಿ ಕುಟುಂಬವು ತಮ್ಮ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಇದನ್ನು ನೋಡಲು ಬಾಲಿವುಡ್ ದಂಡೇ ಆಗಮಿಸಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಸೋದರ ಸೊಸೆ ಅಲಿಜೆಯೊಂದಿಗೆ ಅಂಬಾನಿ ಕುಟುಂಬದ ಗಣೇಶೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕೂಡ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಅಂಬಾನಿ ಮನೆಗೆ ಆಗಮಿಸಿ ಗಣಪತಿ…
ಸೂರ್ಯೋದಯ: 06:07, ಸೂರ್ಯಾಸ್ತ : 06:19 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಷಷ್ಠಿ ನಕ್ಷತ್ರ: ವಿಶಾಖ, ರಾಹು ಕಾಲ:07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ:03:00 ನಿಂದ 04:30 ತನಕ ಅಮೃತಕಾಲ: ಬೆ.8:20 ನಿಂದ ಬೆ.10:06 ತನಕ ಅಭಿಜಿತ್ ಮುಹುರ್ತ: ಬೆ.11:48 ನಿಂದ ಮ.12:37 ತನಕ ಮೇಷ ರಾಶಿ: ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಶುಭ ಮಂಗಳ ಕಾರ್ಯ ಜರುಗುವುದು. ಹೊಸ…