ಮಂಗಳೂರು : ಮಂಗಳೂರಿನ ನಂತೂರು, ಕೆಪಿಟಿ ಹಾಗೂ ಕೂಳೂರುಗಳಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕಾಮಗಾರಿಗೆ ಅಡೆತಡೆಯಾಗಿರುವ ಪರಿಕರಗಳನ್ನು ಕೂಡಲೇ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಇನ್ನು ಒಂದು ವಾರದಲ್ಲಿ ಇಲ್ಲಿ ಕಾಮಗಾರಿ ಆರಂಭಿಸುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಪಾಲನಾ ವರದಿ ವೇಳೆ ವಿವಿಧ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪ್ರಸ್ತಾಪಿಸಿದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ(ಎನ್‌ಎಚ್‌ಐಎ) ಎಂಜಿನಿಯರ್ ಅನಿರುದ್ಧ ಕಾಮತ್, ಬಿ.ಸಿ.ರೋಡ್-ಪೆರಿಯಶಾಂತಿ ಹೆದ್ದಾರಿಯಲ್ಲಿ 48.48 ಕಿ.ಮೀ. ಪೈಕಿ 14.2 ಕಿ.ಮೀ. ಕಾಮಗಾರಿ ಮುಕ್ತಾಯವಾಗಿದ್ದು, ಶೇ.31.4 ಪ್ರಗತಿ ಆಗಿದೆ. ಪೆರಿಯಶಾಂತಿ-ಅಡ್ಡಹೊಳೆಯ 8.5 ಕಿ.ಮೀ. ಕಾಮಗಾರಿ ಮುಗಿದಿದ್ದು, ಶೇ.61 ಪ್ರಗತಿ ಆಗಿದೆ. ಈ ಕಾಮಗಾರಿಗಳು 2023ರ ಡಿಸೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಕಲ್ಲಡ್ಕದಲ್ಲಿ ಮೇಲ್ಸೇತುವೆ ಕಾಮಗಾರಿ ಶೇ.34ರಷ್ಟುಮುಕ್ತಾಯವಾಗಿದ್ದು, 2024ರ ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕುಲಶೇಖರ-ಸಾಣೂರು ಹೆದ್ದಾರಿ ಕಾಮಗಾರಿ ಶೇ.21ರಷ್ಟುಆಗಿದೆ, ಇಲ್ಲಿ 48 ಕಿ.ಮೀ. ಪೈಕಿ 15 ಕಿ.ಮೀ. ಕಾಮಗಾರಿ ಪೂರ್ತಿಯಾಗಿದ್ದು, 2024 ಅಕ್ಟೋಬರ್ ವೇಳೆಗೆ ಪೂರ್ತಿಯಾಗಲಿದೆ. ಆದರೆ ಹೆದ್ದಾರಿಯಲ್ಲಿರುವ ವಿದ್ಯುತ್ ಲೈನ್ ಮತ್ತಿತರ…
Author: Prajatv Kannada
ಧಾರವಾಡ: ಶಿವಮೊಗ್ಗ, ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಚಾಜ್‌ರ್‍ಶೀಟ್ ಸಲ್ಲಿಸಿದ್ದು, ಅದರಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಧಾರವಾಡದಲ್ಲಿ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಈಗ ಉತ್ತರ ಕೊಡಬೇಕು. ಅದೊಂದು ಸಣ್ಣ ವಿಷಯ. ಅದನ್ನು ಡೈವರ್ಟ್ ಮಾಡುತ್ತಿದ್ದಾರೆ ಎಂದು ಅಂದು ಡಿ.ಕೆ.ಶಿವಕುಮಾರ್ ಹೇಳಿದ್ದರು ಎಂದರು. ಭಯೋತ್ಪಾದಕರು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಕಾಂಗ್ರೆಸ್ ಯಾವಾಗಲೂ ಅನುಕಂಪ ತೋರುತ್ತಲೇ ಬಂದಿದೆ. ಈಗ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಅಂದು ಡಿ.ಕೆ.ಶಿವಕುಮಾರ್ ಹೇಳಿದ ಹೇಳಿಕೆಯನ್ನು ಮಾಧ್ಯಮಗಳು ತೋರಿಸಬೇಕು. ಅದಕ್ಕೆ ಡಿ.ಕೆ.ಶಿವಕುಮಾರ್ ಮತ್ತೇನು ಹೇಳುತ್ತಾರೆ ನೋಡಿ ಎಂದರು.
ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧದ ಮಧ್ಯೆಯೂ ಜನರು ಆಗಮಿಸಿದ್ದಾರೆ. ನಾಳೆ (ಜು.02) ಮುದ್ದೇನಹಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಹಿನ್ನೆಲೆ ಇಂದಿನಿಂದ 2 ದಿನ ನಂದಿಬೆಟ್ಟ, ಸ್ಕಂದಗಿರಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರವೇಶ ನಿರ್ಬಂಧ ಬಗ್ಗೆ ಮಾಹಿತಿ ಇಲ್ಲದೇ ಪ್ರವಾಸಿಗರು ಆಗಮಿಸಿದ್ದಾರೆ. ಪ್ರವಾಸಿಗರನ್ನು ವಾಪಸ್ ಕಳುಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರು: ಇಂದು ಸಂಜೆ ವಿಪಕ್ಷ ನಾಯಕನ ಹೆಸರು ಘೋಷಣೆಯಾಗಲಿದೆ ಎಂದು ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಎಸ್ ಟಿ ಸೋಮಶೇಖರ್ ಬಿಜೆಪಿ ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ದೆಹಲಿಯಲ್ಲಿ ವರಿಷ್ಟರು ಚರ್ಚೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಕೂಡ ದೆಹಲಿಗೆ ಹೋಗಿದ್ದಾರೆ. ವಿಪಕ್ಷ ನಾಯಕನಾಗಿ ಯಾರನ್ನು ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದರು. ಸಂಜೆ ಬಳಿಕ ಬಿಜೆಪಿಯ ವಿರೋಧ ಪಕ್ಷದ ನಾಯಕನ ಘೋಷಣೆಯಾಗಲಿದೆ ಎಂದು ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಬೆಂಗಳೂರು : ಎಫ್‌ಸಿಐ ಗೋದಾಮುಗಳಲ್ಲಿ ಶೇಖರಣೆಯಾಗಿರುವ ಅಕ್ಕಿಗೆ ಹುಳ ಹಿಡಿದರೂ ಪರವಾಗಿಲ್ಲ. ಬಡವರಿಗೆ ಅಕ್ಕಿ ನೀಡಬಾರದು ಹಾಗೂ ಅಕ್ಕಿ ನೀಡದ ಶ್ರೇಯ ಕಾಂಗ್ರೆಸ್ಸಿಗೆ ಸಿಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಪೂರೈಸುವುದನ್ನು ತಡೆದಿದೆ. ಇದೇ ವೇಳೆ, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಕ್ಕಿ ನೀಡುವ ವಿಚಾರವಾಗಿ ದೀರ್ಘಾವಧಿ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಾವು ಮಾತು ಕೊಟ್ಟಂತೆ ಹೆಚ್ಚುವರಿ 5 ಕೆಜಿ ಅಕ್ಕಿ ನೀಡುವತನಕ ಜನರ ಖಾತೆಗೆ ಹಣ ಪಾವತಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವ ಮುನಿಯಪ್ಪ ಅವರು ನಿಗದಿಯಷ್ಟುಅಕ್ಕಿಯನ್ನು ಹೊಂದಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಪಡಿತರ ಚೀಟಿದಾರರ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಶೇ. 85ರಷ್ಟುಮಂದಿಯ ಬ್ಯಾಂಕ್ ಖಾತೆ ಪತ್ತೆ ಮಾಡಲಾಗಿದೆ. ಉಳಿದವರ ಬ್ಯಾಂಕ್ ಖಾತೆಯನ್ನು ಪತ್ತೆ ಮಾಡಬೇಕಿದೆ. ಎಲ್ಲ ಪಡಿತರ ಚೀಟಿದಾರರಿಗೂ ಅಕ್ಕಿ ನೀಡಲಾಗುವುದು’ ಎಂದು ಹೇಳಿದರು.
ಬೆಂಗಳೂರು: ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರು ಯಾವ ವಿಷಯಕ್ಕೆ ದೆಹಲಿಗೆ ಬರಲು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಬರಲು ಹೇಳಿದ್ದಾರೆ, ಅದಕ್ಕಾಗಿ ತೆರಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲವು ಮುಖಂಡರು ಸ್ಥಾನಮಾನ ಕೇಳಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಎಲ್ಲದನ್ನೂ ಕೇಳುತ್ತಾರೆ, ಅದಕ್ಕೂ ನನಗೂ ಸಂಬಂಧ ಇಲ್ಲ. ಅದರ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಸಾಧ್ಯವಾದರೆ ಭೇಟಿಯಾಗಿ ವಾಪಾಸ್ ಆಗುತ್ತೇನೆ. ಇಲ್ಲವೇ ನಾಳೆ (ಸೋಮವಾರ) ಕರ್ನಾಟಕಕ್ಕೆ ಮರಳುತ್ತೇನೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ. ಅದರಲ್ಲಿ ಭಾಗವಹಿಸಲು ವಾಪಾಸ್ ಆಗುವ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ (Gruhajyothi Scheme) ನೋಂದಾಯಿಸಿ ಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಬಹುದು ಎಂದು ಇಂಧನ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ. ಗೃಹಜ್ಯೋತಿ ಯೋಜನೆ ನೋಂದಣಿ ಕುರಿತು ಪ್ರಕಟಣೆ ಹೊರಡಿಸಿರುವ ಇಂಧನ ಇಲಾಖೆ, ‘ಈ ಮಾಹಿತಿಯನ್ನು ಗಮನವಿಟ್ಟು ಓದಿ. ನೀವು ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ, ನೀವು ಆಗಸ್ಟ್ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ, ನೀವು ಆ ತಿಂಗಳಿಗೆ ನಿಮ್ಮ ಮಾಸಿಕ ಬಳಕೆಯು ಸರಾಸರಿ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದಲ್ಲಿ ವಿದ್ಯುತ್ ಉಚಿತವಾಗಿ ಪಡೆಯಬಹುದು. ಮೀಟರ್ ರೀಡಿಂಗ್ ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ನಡೆಯುತ್ತದೆ. ನೀವು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಕೋರಿಕೆ’ ಎಂದು ಜನತೆಗೆ ಕರೆ ಕೊಟ್ಟಿದೆ.
ಬೆಂಗಳೂರು: ನಾವು ಹೇಗೆ ಸಂಘಟನೆ ಮಾಡಬೇಕು, ಅಧಿವೇಶನದಲ್ಲಿ ನಮ್ಮ ಪಕ್ಷದ ನಿಲುವೇನು. ಸರ್ಕಾರದ ನಡವಳಿಕೆಯಿಂದ ಜನರ ಅಭಿಪ್ರಾಯ ಏನು. ಹೀಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಇಂದು (ಜುಲೈ.02) ಇಂದು ಸಭೆ ಕರೆಯಲಾಗಿದೆ. ಕಡಿಮೆ ಜನ ಇದ್ದರೂ ವಿರೋಧ ಪಕ್ಷದ ನಾಯಕರಾಗಿ ಹೇಗೆ ಮಾತಾಡಬೇಕು. ನಾನು ಗ್ಯಾರಂಟಿ ಬಗ್ಗೆ ಸದನದಲ್ಲಿ ಚರ್ಚೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೆಹಲಿ: ಆಧುನಿಕ ಕ್ರಿಕೆಟ್ ನ ದಿಗ್ಗಜ ವಿರಾಟ್ ಕೊಹ್ಲಿಗೆ ಈಗಾಗಲೇ 35 ವರ್ಷವಾಗಿದ್ದು, ಬಹುಶಃ ಇದು ಅವರ ಕೊನೆಯ ಏಕದಿನ ವಿಶ್ವಕಪ್ ಟೂರ್ನಿಯಾಗಿದ್ದು ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಟ್ರೋಫಿ ಜಯಿಸಬೇಕೆಂದು ವೀರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ಅಂತಿಮ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಹೇಳಿರುವ ಬೆನ್ನಲ್ಲೇ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರು ವಿರಾಟ್ ಕೊಹ್ಲಿ ಅವರಲ್ಲಿ ಮತ್ತೊಂದು ವಿಶ್ವಕಪ್ ಆಡುವ ಶಕ್ತಿ ಅಡಗಿದೆ ಎಂದು ಗುಣಗಾಣ ಮಾಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ 209 ರನ್‌ಗಳ ಸೋಲು ಕಂಡು ಟ್ರೋಫಿ ಬರ ಮುಂದುವರೆಸಿದೆ. ಆದರೆ ಅಕ್ಟೋಬರ್ 5 ರಿಂದ ನವೆಂಬರ್ 19ರವರೆಗೆ ತವರಿನ ಅಂಗಣದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿ ಜಯಿಸಿ ಚಾಂಪಿಯನ್ ಪಟ್ಟ ಅಲಂಕರಿಸುವತ್ತ ರೋಹಿತ್ ಶರ್ಮಾ ಪಡೆ ದೃಷ್ಟಿ ಹರಿಸಿದೆ.…
ದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಗೆ ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಅಜಿತ್ ಅಗರ್ಕರ್ ನೇಮಕವಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಮಾಧ್ಯಮವೊಂದರ ಸ್ಟ್ರಿಂಗ್ ಆಪರೇಷನ್‌ನಲ್ಲಿ ತಗಲಾಕಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಮಾಜಿ ಸೆಲೆಕ್ಟರ್ ಚೇತನ್ ಶರ್ಮಾ ಅವರು ಫೆಬ್ರವರಿ 17 ರಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ತೆರವಾಗಿದ್ದ ಚೀಫ್ ಸೆಲೆಕ್ಟರ್ ಹುದ್ದೆಯನ್ನು ತುಂಬಲು ಬಿಸಿಸಿಐ ಇತ್ತೀಚೆಗೆ ಅರ್ಜೆಗಳನ್ನು ಆಹ್ವಾನಿಸಿತ್ತು. ಜೂನ್ 30 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಜುಲೈ 1 ರಂದು ಅಭ್ಯರ್ಥಿಗಳ ಸಂದರ್ಶನ ನಡೆಸುವ ಸಾಧ್ಯತೆ ಇದೆ. ಭಾರತ ತಂಡದ ಮಾಜಿ ವೇಗದ ಬೌಲಿಂಗ್ ಆಲ್‌ರೌಂಡರ್ ಅಜಿತ್ ಅಗರ್ಕರ್ ಮುಖ್ಯ ಆಯ್ಕೆದಾರ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಕೊನೆಯ ಬಾರಿಯೂ ಅಗರ್ಕರ್ ಇದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇವರನ್ನು ಹಿಂದಿಕ್ಕಿ ಚೇತನ್ ಶರ್ಮಾ ಮುಖ್ಯಸ್ಥರಾಗಿದ್ದರು. ಈ ಬಾರಿಯೂ ಅರ್ಜಿ ಸಲ್ಲಿಸಿರುವ ಅಜಿತ್ ಅಗರ್ಕರ್ ಇಂಡಿಯನ್ ಪ್ರೀಮಿಯರ್ ಲೀಗ್ ತಂಡವಾದ…