ಮದುವೆಯಾದ 11 ವರ್ಷದ ಬಳಿಕ ರಾಮ್ ಚರಣ್ ಹಾಗೂ ಉಪಾಸನ ದಂಪತಿ ಪೋಷಕರಾಗಿದ್ದಾರೆ. ಇತ್ತೀಚೆಗೆ ಉಪಾಸನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ ಕ್ಲಿಂಕಾರ ಎಂದು ನಾಮಕರಣ ಮಾಡಿದ್ದಾರೆ. ಮಗುವಿನ ಈ ಹೆಸರಿಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇದೀಗ ಮಗುವಿಗೆ ಈ ಹೆಸರಿಟ್ಟಿದ್ದು ಯಾರು ಎಂಬುದು ರಿವೀಲ್ ಆಗಿದೆ. ರಾಮ್ ಚರಣ್ ಹಾಗೂ ಉಪಾಸನಾ ಮಗಳಿಗೆ ಕ್ಲಿಂಕರ ಎಂದು ಹೆಸರಿಟ್ಟಿರುವುದು ಉಪಾಸನಾರ ತಾಯಿ ಶೋಭನಾ ಕಾಮಿನೇನಿ. ಜನಪ್ರಿಯ ಉದ್ಯಮಿಯಾಗಿರುವ ಶೋಭನಾ ಕಾಮಿನೇನಿ ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ”ಉಪಾಸನಾ, ನೀನು ಜನಿಸಿದಾಗ ನಿನಗೆ ಕ್ಲಿಂಕಾರ ಎಂದು ಹೆಸರು ಇಡಬೇಕು ಎಂದುಕೊಂಡಿದ್ದೆ ಆದರೆ ಆಗ ಸಾಧ್ಯವಾಗಿರಲಿಲ್ಲ. ರಾಮ್ ಚರಣ್ ಹಾಗೂ ಉಪಾಸನಾ ನಿಮಗೆ ಅಭಿನಂದನೆಗಳು, ನಿಮಗೆ ಸೂಕ್ತವಾದ ಮಗು ನಿಮ್ಮ ಪ್ರೇಮದಿಂದ ಲಭಿಸಿದೆ. ಆ ಮಗು ನಮ್ಮ ಭವಿಷ್ಯದ ರೂಪಾಂತರದ ಶಕ್ತಿಯಾಗಿದೆ. ನಾವು ನಿನ್ನನ್ನು ಪ್ರೀತಿಸುತ್ತೇವೆ ಕ್ಲಿಂಕಾರಾ” ಎಂದು ಬರೆದುಕೊಂಡಿದ್ದು ತೊಟ್ಟಿಲು ಶಾಸ್ತ್ರದ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಾಯಿಯ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಉಪಾಸನಾ ಧನ್ಯವಾದ ಅಮ್ಮ ಎಂದು ಬರೆದುಕೊಂಡಿದ್ದಾರೆ. ಜೂನ್ 30 ರಂದು ಉಪಾಸನಾರ ತವರು ಮನೆಯಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಕಾರ್ಯಕ್ರಮದಲ್ಲಿ ರಾಮ್ ಚರಣ್ ತಂದೆ ತಾಯಿಯಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸುರೇಖಾ ಕೋನಿಡೆಲಾ, ಉಪಾಸನಾ ಪೋಷಕರು ಹಾಗೂ ಇನ್ನೂ ಕೆಲ ಆಪ್ತರು ಭಾಗವಹಿಸಿದ್ದರು.
Author: Prajatv Kannada
ರಿಲೀಸ್ ಗು ಮುನ್ನ ಸಾಕಷ್ಟು ವಿವಾದ ಹುಟ್ಟುಹಾಕಿದ್ದ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಇದರಿಂದ ಸಹಜವಾಗಿಯೇ ಶಾರುಖ್ ನಟನೆಯ ಮುಂದಿನ ಸಿನಿಮಾ ಜವಾನ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಮಧ್ಯೆ ಜವಾನ್ ಸಿನಿಮಾದ ಆಡಿಯೋ ರೈಟ್ಸ್ ಬರೋಬ್ಬರಿ 36 ಕೋಟಿಗೆ ಸೇಲ್ ಆಗಿದೆ. ಭಾರತದ ಖ್ಯಾತ ಆಡಿಯೋ ಸಂಸ್ಥೆಯಾದ ಟಿ-ಸೀರೀಸ್ ‘ಜವಾನ್’ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. 36 ಕೋಟಿ ರೂ.ಗಳನ್ನು ಕೊಟ್ಟು ಹಕ್ಕುಗಳನ್ನು ಪಡೆದಿದೆ ಎಂದು ಹೇಳಲಾಗಿದೆ. ಚಿತ್ರಕ್ಕೆ ತಮಿಳಿನ ಜನಪ್ರಿಯ ಸಂಗೀತ ನಿರ್ದೇಶಕರಾದ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು ಈ ಮೂಲಕ ಅನಿರುದ್ಧ್ ರವಿಚಂದರ್ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಸಂಸ್ಥೆ ಅಡಿಯಲ್ಲಿ ಜವಾನ್ ಚಿತ್ರವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಾಣ ಮಾಡಿದ್ದು ಈ ವರ್ಷದ ಅತೀ ನಿರೀಕ್ಷಿತ ಮತ್ತು ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.…
ತಮಿಳು ಚಿತ್ರದ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳು ನಾಡಿನ ಸುಪ್ರಸಿದ್ಧ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಜನಿಕಾಂತ್ ಭೇಟಿ ನೀಡಿರುವ ವಿಚಾರ ತಿಳಿಯುತ್ತಿದ್ದಂತೆ ಸಾಕಷ್ಟು ಮಂದಿ ದೇವಸ್ಥಾನಕ್ಕೆ ಆಗಮಿಸಿ ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ರಜನಿಕಾಂತ್ ಸದ್ಯ ಲಾಲ್ ಸಲಾಮ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ನಡುವೆ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಯಾವುದೇ ಭಾಗದಲ್ಲಿ ಚಿತ್ರೀಕರಣ ಆಗುತ್ತಿರಲಿ, ಆ ಭಾಗದಲ್ಲಿರುವ ಸುಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ರಜನಿಕಾಂತ್ ಅವರ ವಾಡಿಕೆ. ಅದರಂತೆ ಲಾಲ್ ಸಲಾಮ್ ಚಿತ್ರೀಕರಣ ಸಮಯದಲ್ಲೇ ಪೂಜೆ ಸಲ್ಲಿಸಿ ಸ್ವಲ್ಪ ಹೊತ್ತು ದೇವಸ್ಥಾನದಲ್ಲೇ ಕಳೆದಿದ್ದಾರೆ. ಟೀ ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ರಜನಿಯನ್ನು ನೋಡಿ ಅಭಿಮಾನಿಗಳು ಘೋಷಣೆ ಕೂಗಿ ಶುಭ ಹಾರೈಸಿದರು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ದೇವಸ್ಥಾನಕ್ಕೆ ಆಗಮಿಸಿದ ಸೆಲ್ಫಿಗಾಗಿ ಮುಗಿ ಬಿದ್ದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರನ್ನು ದೇವಸ್ಥಾನದಿಂದ ಕಾರ್ ಹತ್ತಿಸಲು ಸಿಬ್ಬಂದಿ…
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊದಲ ಭಾರಿಗೆ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಾಜಿ ಅಳಿಯ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ರಾಶಿ ರಾಶಿ ಹೆಣಗಳ ಮಧ್ಯ ಧನುಷ್ಯ ವಿಶೇಷ ಗನ್ ಹಿಡಿಕೊಂಡು ನಿಂತಿರುವ ಪೋಸ್ಟರ್ ರಿಲೀಸ್ ಆಗಿದ್ದು ಸಖತ್ ವೈರಲ್ ಆಗಿದೆ. ಈ ಫಸ್ಟ್ ಲುಕ್ ನೋಡುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಸಿನಿಮಾ ಕಥೆಯ ಬಗ್ಗೆ ಸಾಕಷ್ಟು ಕುತೂಹಲದ ಪ್ರಶ್ನೆಗಳನ್ನೂ ಕೇಳಿದ್ದಾರೆ. ಇದೊಂದು ಅಪರೂಪದ ಕಥೆಯಾಗಿದ್ದು, ಕಥೆಯ ಹಿನ್ನೆಲೆಯನ್ನಿಟ್ಟುಕೊಂಡು ಫಸ್ಟ್ ಲುಕ್ ರೆಡಿ ಮಾಡಿದೆಯಂತೆ ಚಿತ್ರತಂಡ. ಧನುಷ್ ಪಾತ್ರದ ಹಿನ್ನೆಲೆ ಒಂದು ಕಡೆಯಾದರೆ, ಶಿವರಾಜ್ ಕುಮಾರ್ ಪಾತ್ರಕ್ಕೆ ಮತ್ತೊಂದು ತೂಕವಿದೆ ಎಂದು ಹೇಳಲಾಗುತ್ತಿದೆ. ಈ ಪಾತ್ರದ ಕುರಿತು ಒಂದಷ್ಟು ವಿಷಯಗಳು ಸೋರಿಕೆ ಕೂಡ ಆಗಿವೆ. ಆಕಸ್ಮಿಕ ಎನ್ನುವಂತೆ ಧನುಷ್ ಜೊತೆ ಮಾಡುತ್ತಿದ್ದ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ…
ಕನ್ನಡ ಚಿತ್ರರಂಗದಲ್ಲಿ ತನ್ನ ವಿಭಿನ್ನ ಪಾತ್ರಗಳ ಮೂಲಕ ಸದ್ದು ಮಾಡುತ್ತಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಇದೀಗ ಮತ್ತೊಂದು ವಿಭಿನ್ನ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ಸದ್ಯ ಉಪೇಂದ್ರ ನಟನೆಯ ‘ಬುದ್ಧಿವಂತ 2’ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು ಈ ಪೋಸ್ಟರ್ ನಲ್ಲಿ ಉಪೇಂದ್ರ ಲುಕ್ ಗಮನ ಸೆಳೆಯುತ್ತಿದೆ. ಉಪೇಂದ್ರ ನಟನೆಯ ಬುದ್ಧಿವಂತ 2 ಸಿನಿಮಾ ಇದೇ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರಲಿದೆ. ಈ ವಿಚಾರ ತಿಳಿದು ಉಪ್ಪಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. 2008ರಲ್ಲಿ ‘ಬುದ್ಧಿವಂತ’ ಸಿನಿಮಾ ರಿಲೀಸ್ ಆಗಿದ್ದು, ಈ ಚಿತ್ರದಲ್ಲಿ ಹಲವು ಗೆಟಪ್ಗಳಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದರು. ಪ್ರೇಕ್ಷಕರಿಗೆ ಈ ಚಿತ್ರ ಹೆಚ್ಚು ಇಷ್ಟ ಆಗಿತ್ತುಅದೇ ರೀತಿ ‘ಬುದ್ಧಿವಂತ 2’ ಚಿತ್ರ ಈ ಮೊದಲು ಅನೌನ್ಸ್ ಆಗಿತ್ತು. ಈಗ ಸಿನಿಮಾ ಯಾವ ತಿಂಗಳಲ್ಲಿ ರಿಲೀಸ್ ಆಗಲಿದೆ ಎಂಬುದನ್ನು ತಂಡದವರು ತಿಳಿಸಿದ್ದಾರೆ. ಈ ಸಿನಿಮಾದ ಪೋಸ್ಟರ್ ಗಮನ ಸೆಳೆದಿದೆ. ಬುದ್ಧಿವಂತ 2 ಸಿನಿಮಾದ…
ಮೊದಲೆಲ್ಲಾ ಕೆಮ್ಮು, ಶೀತ ಬಂದರೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಯಾವಾಗಿನಿಂದ ಕೊರೊನಾ ವೈರಸ್ ಕಾಟ ಶುರುವಾಯ್ತೋ ಆಗಿನಿಂದ ಸಣ್ಣದಾಗಿ ಕೆಮ್ಮು ಬಂದರೂ ಭಯ ಆಗುತ್ತಿದೆ. ಏಕೆಂದರೆ ಕೆಮ್ಮು, ನೆಗಡಿ, ಜ್ವರ ಕೊರೊನಾ ವೈರಸ್ ಲಕ್ಷಣವಾಗಿದ್ದು, ಕೆಮ್ಮು ಬಂದಾಗ ಸೋಂಕಿಗೆ ತುತ್ತಾಗಿ ಬಿಟ್ವಾ? ಇದು ಸಾಧಾರಣ ಕೆಮ್ಮಾ? ಅಥವಾ ಕೊರೊನಾ ವೈರಸ್ ಲಕ್ಷಣವಾ ಎಂಬ ಪ್ರಶ್ನೆ ಕಾಡಲು ಆರಂಭವಾಗುತ್ತದೆ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬಿದ್ದ ಮೇಲೆ ವಾತಾವರಣ ಬದಲಾವಣೆಯಿಂದ ಕೆಮ್ಮು, ನೆಗಡಿ ಆಗುವುದು ಸಹಜ. ಸಾಧಾರಣ ಕೆಮ್ಮು, ನೆಗಡಿಯನ್ನು ಮನೆಮದ್ದಿನಿಂದಲೇ ಗುಣಪಡಿಸಿಕೊಳ್ಳಬಹುದು. ಕೆಮ್ಮು, ನೆಗಡಿಗೆ ಸಾಕಷ್ಟು ಮನೆಮದ್ದುಗಳಿವೆ. ಅದರಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈರುಳ್ಳಿ ಸಿರಪ್. ಹೌದು. ಈರುಳ್ಳಿ ಸಿರಪ್ ಕೆಮ್ಮು, ನೆಗಡಿಯನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದ್ದು, ಇದನ್ನು ತಯಾರಿಸುವುದು ಕೂಡ ಸುಲಭವಾಗಿದೆ. ಮನೆಯಲ್ಲಿ ಈರುಳ್ಳಿ ಸಿರಪ್ ಮಾಡಿ ಒಂದು ಡಬ್ಬದಲ್ಲಿ ತುಂಬಿಟ್ಟರೆ ಕೆಮ್ಮು ಬಂದಾಗ ಅದನ್ನು ಹೋಗಲಾಡಿಸಲು ಮದ್ದಾಗಿ ಬಳಸಬಹುದಾಗಿದೆ. ಈರುಳ್ಳಿಸಿರಪ್ಮಾಡುವವಿಧಾನ ಈರುಳ್ಳಿಯ ಸಿಪ್ಪೆ ಸುಲಿದು ಅದನ್ನು…
ಪಾಕಿಸ್ತಾನ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದ ಪ್ರಧಾನಿಯಾಗಲು ಸಹಾಯ ಮಾಡಿ ನಾನು ತಪ್ಪು ಮಾಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿಷಾದ ವ್ಯಕ್ತಪಡಿಸಿದ್ದಾರೆ. ಎಆರ್ಐ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರು ಪಿಟಿಐ ಅಧ್ಯಕ್ಷರಿಗೆ ಪ್ರಧಾನಿಯಾಗಲು ಸಹಾಯ ಮಾಡಿದೆ ಆದರೆ ಅವರು ಎಂದಿಗೂ ಧನ್ಯವಾದ ಹೇಳಲೇ ಇಲ್ಲ. ಅವರಿಗೆ ಪ್ರಧಾನಿಯಾಗಲು ಸಹಾಯ ಮಾಡಿ ನಾನು ತಪ್ಪು ಮಾಡಿದೆ ಎಂದು ಅನಿಸುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ಮಾತನಾಡಿದ ಅವರು, ನನ್ನ ತಂದೆಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ, ನಾನು ಮತ್ತು ನನ್ನ ಎಲ್ಲಾ ಸಹೋದರರು ಬೀದಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದೆವು ಎಂದಿದ್ದಾರೆ. ಜಾವೇದ್ ಮಿಯಾಂದಾದ್ ಅವರು ರಾಷ್ಟ್ರೀಯ ತಂಡಕ್ಕಾಗಿ ಆಡಿದಾಗಲೆಲ್ಲಾ ತಂಡವು ಸೋತರೆ ಕನಿಷ್ಠ ಅಂತರವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆ, ಯಾವುದೇ ಆಟಗಾರರು ನನ್ನ ನಾಯಕತ್ವವನ್ನು ವಿರೋಧಿಸಲಿಲ್ಲ ಎಂದರು. ಇಮ್ರಾನ್ ಖಾನ್ ಅವರು ಆಗಸ್ಟ್ 2018 ರಲ್ಲಿ ಪಾಕಿಸ್ತಾನದ ಪ್ರಧಾನಿಯಾದರು…
ಲಕ್ನೋ: ವಿದ್ಯಾರ್ಥಿಯೊಬ್ಬ ತಾನು ಪ್ರೀತಿಯಲ್ಲಿ ಬಿದ್ದ ಕಾರಣ ಪರೀಕ್ಷೆಗೆ ಓದಲು ಸಾಧ್ಯವಾಗಿಲ್ಲ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿಟ್ಟು ಉತ್ತೀರ್ಣಗೊಳಿಸುವಂತೆ ಮನವಿ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆ ಮೌಲ್ಯ ಮಾಪನದ ವೇಳೆ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಶಿಕ್ಷಣ ಕ್ಷೇತ್ರದಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಸೂಚಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅದೇಶದ ಬಳಿಕ ಲಕ್ಷ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದು ಪರೀಕ್ಷೆಯಲ್ಲಿ ಉತೀರ್ಣ ಮಾಡಲು ಕೇಳಿಕೊಂಡಿದ್ದಾರೆ. ಕೆಲ ವಿದ್ಯಾರ್ಥಿಗಳು ಉತ್ತರ ಪತ್ರಿಕೆಯೊಂದಿಗೆ ಹಣವನ್ನು ಇಟ್ಟು ಉತೀರ್ಣ ಮಾಡಲು ಅಮಿಷ ಒಡ್ಡಿದ್ದಾರೆ. ಅಲ್ಲದೇ ತನಗೆ ತಾಯಿ ಇಲ್ಲ, ಈ ಬಾರಿ ಪರೀಕ್ಷೆಯಲ್ಲಿ ನಾನು ಅನುತ್ತೀರ್ಣವಾದರೆ ತಂದೆ ತನ್ನನ್ನು ಕೊಲೆ ಮಾಡುವುದಾಗಿ ಮತ್ತೊಬ್ಬ ವಿದ್ಯಾರ್ಥಿ ಬರೆದಿದ್ದಾನೆ. ರಸಾಯನಶಾಸ್ತ್ರ ಪರೀಕ್ಷೆಯಲ್ಲಿ ತನ್ನ ಪ್ರೇಮದ ಬಗ್ಗೆ ಬರೆದಿದ್ದು, ತಾನು ಪ್ರೀತಿ ಮಾಡುವ ಯುವತಿಯ ಹೆಸರು ಹಾಗೂ ಹೃದಯದ ಚಿಹ್ನೆ ಬರೆದಿಟ್ಟಿದ್ದಾನೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿಕ್ಷಕರೊಬ್ಬರು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ…
ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಪರವಾಗಿ ಬ್ಯಾಟ್ ಬೀಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, 2024ರ ಲೋಕಸಭಾ ಚುನಾವಣೆಗೂ ಮುನ್ನ ಹೊಸ ಕಾಯಿದೆ ಜಾರಿ ಮಾಡುವ ಉತ್ಸಾಹದಲ್ಲಿದ್ದಾರೆ. ದೇಶದಲ್ಲಿ ಒಂದು ಕಾನೂನಿನ ಅಗತ್ಯತೆ ಬಗ್ಗೆ ಒತ್ತಿ ಹೇಳಿರುವ ಪ್ರಧಾನಿ ಮೋದಿ ಅವರು, ನಮ್ಮ ಸರಕಾರ ಜನರ ಸಂತುಷ್ಟೀಕರಣದ ಹಾದಿಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ. ಚುನಾವಣೆಗೆ ಇನ್ನೊಂದು ವರ್ಷವಿರುವಾದ ಏಕಾಏಕಿ ಏಕರೂಪ ನಾಗರಿಕ ಸಂಹಿತೆ ವಿಚಾರ ಪ್ರಸ್ತಾಪ ಮಾಡಿದ ಪ್ರಧಾನಿ ನಡೆಯಿಂದ ಪ್ರತಿಪಕ್ಷಗಳು ಅಡಕತ್ತರಿಯಲ್ಲಿ ಸಿಲುಕಿವೆ. ಕೆಲವು ಪಕ್ಷಗಳು ಬಹಿರಂಗವಾಗಿಯೇ ವಿರೋಧಿಸಿದ್ದರೆ, ಕೆಲವು ಪಕ್ಷಗಳು ತಾತ್ವಿಕ ಬೆಂಬಲ ನೀಡಿವೆ. ಕೆಲವು ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿವೆ. ಎಲ್ಲಾ ಧರ್ಮಗಳ ಸಹಮತ ಪಡೆದುಕೊಂಡು ಕಾನೂನು ಜಾರಿ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ಆಯೋಗ ಜನಾಭಿಪ್ರಾಯಗಳನ್ನು ಆಹ್ವಾನಿಸಿದೆ. ಆದರೆ, ರಾಜಕೀಯ ಒಮ್ಮತ ಮೂಡಿಸುವುದು ಸರಕಾರಕ್ಕೆ ಅಷ್ಟು ಸುಲಭದ ಕೆಲಸವಲ್ಲ. ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಬಹತೇಕ ನಾಯಕರು ಏಕರೂಪ ನಾಗರಿಕ ಸಂಹಿತೆಗೆ…
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಿವದಾಸಿಮಯ್ಯ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಜಮಖಂಡಿ ಮತ್ತು ರಬಕವಿ ಇವರ ಸಂಯುಕ್ತ ಆಶ್ರಯದಲ್ಲಿ 1679ನೇ ಮಧ್ಯವರ್ಜನ ವ್ಯವಸ್ಥಾಪನ ಶಿಬಿರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜನರನ್ನು ವ್ಯಸನ ರಹಿತ ಮಾರ್ಗದಲ್ಲಿಕೊಂಡೊಯ್ಯಲು ಪ್ರೇರೇಪಿಸಿ, ದುಶ್ಚಟಮುಕ್ತ ಸಮಾಜ ನಿರ್ಮಾಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿಯ ಬಗ್ಗೆ ಪೂಜ್ಯರು ಅಭಿಮಾನ ವ್ಯಕ್ತ ಪಡಿಸಿದರು. ಆಧುನಿಕ ಸಂಕಿರ್ಣ ಜಂಜಡದ ಬದುಕಿನಲ್ಲಿ ಮನುಷ್ಯ ದುಶ್ಚಟಗಳಿಗೆ ಬಲಿಯಾಗದೆ, ಅರೋಗ್ಯಪೂರ್ಣ ಬದುಕಿಗೆ ಮುಖಮಾಡಬೇಕು. ದಿನನಿತ್ಯದಲ್ಲಿ ಧ್ಯಾನ,ಯೋಗ, ಪ್ರಾಣಾಯಾಮ, ಚಿಂತನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಷ್ಟು ವ್ಯಕ್ತಿ ವಿಕಾಸ ಮತ್ತು ಕುಟುಂಬ ವಿಕಾಸವು ಸಾಧ್ಯ ಎಂದು ಪರಮಪೂಜ್ಯ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಬ್ರಹ್ಮಾನಂದ ಮಠ ಹೇಳಿದರು. ಮನುಷ್ಯ ಜೀವನ ಅತೀ ಅಮೂಲ್ಯ. ಆದರೆ ಇಂದು ನಾವು ದುಶ್ಚಟಗಳ ದಾಸರಾಗಿ ಮನಸ್ಸಿನ ನೆಮ್ಮದಿ ಹಾಳುಗೆಡವಿ…