ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ಡಿಜಿಟಲ್ ಐಡಿ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್ನಂತೆಯೇ ಇರುತ್ತದೆ. ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಒದಗಿಸುತ್ತದೆ. ಆಧಾರ್ ಕಾರ್ಡ್ನಂತೆಯೇ ರೈತರಿಗೆ ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ ಹಣಕಾಸು ವರ್ಷದಲ್ಲಿ 6 ಕೋಟಿ, 2025-26ರ ಹಣಕಾಸು ವರ್ಷದಲ್ಲಿ 3 ಕೋಟಿ ಮತ್ತು 2026-27ನೇ ಸಾಲಿನಲ್ಲಿ 2 ಕೋಟಿ ಡಿಜಿಟಲ್ ಐಡಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ. ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಈ ಗುರುತಿನ ಚೀಟಿಗಳಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾವನ್ನು ಲಿಂಕ್ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ. 2024-25 ರಲ್ಲಿ 400 ಜಿಲ್ಲೆಗಳು ಮತ್ತು 2025-26 ರಲ್ಲಿ…
Author: Prajatv Kannada
ಉದ್ಯಮಿ ಮುಕೇಶ್ ಅಂಬಾನಿ ಮನೆಯಲ್ಲಿ ಗಣೇಶ ಹಬ್ಬವನ್ನು ಸಾಕಷ್ಟು ವಿಜೃಂಬಣೆಯಿಂದ ಆಚರಣೆ ಮಾಡಲಾಗಿದೆ. ಪ್ರತಿ ವರ್ಷ ಗಣೇಶನ ಹಬ್ಬವನ್ನು ಬಾಲಿವುಡ್ ಸೆಲೆಬ್ರಿಟಿಗಳು ಅಂಬಾನಿ ಮನೆಯಲ್ಲಿ ಸೆಲೆಬ್ರೇಟ್ ಮಾಡುತ್ತಾರೆ. ಅಂತೆಯೇ ಈ ಬಾರಿ ಸಲ್ಮಾನ್ ಖಾನ್, ಆಮೀರ್ ಖಾನ್, ಕರೀನಾ ಕಪೂರ್ ಸೇರಿದಂತೆ ಹಲವಾರು ಕಲಾವಿದರು ಅಂಬಾನಿ ಮನೆಯಲ್ಲಿ ಗಣೇಶನ ದರ್ಶನ ಪಡೆದರು. ಬಾಲಿವುಡ್ ನ ಸಾಕಷ್ಟು ಮಂದಿ ಗಣೇಶೋತ್ಸವವನ್ನು ಸದಾ ಸಡಗರದಿಂದ ಆಚರಿಸುತ್ತಾರೆ. ಅಂತೆಯೇ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬವೂ ಕೂಡ ಗಣೇಶ ಹಬ್ಬವನ್ನು ಸಾಕಷ್ಟು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ ಅಂಬಾನಿ ಕುಟುಂಬವು ತಮ್ಮ ನಿವಾಸದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಇದನ್ನು ನೋಡಲು ಬಾಲಿವುಡ್ ದಂಡೇ ಆಗಮಿಸಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಸೋದರ ಸೊಸೆ ಅಲಿಜೆಯೊಂದಿಗೆ ಅಂಬಾನಿ ಕುಟುಂಬದ ಗಣೇಶೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕೂಡ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗೆ ಅಂಬಾನಿ ಮನೆಗೆ ಆಗಮಿಸಿ ಗಣಪತಿ…
ಸೂರ್ಯೋದಯ: 06:07, ಸೂರ್ಯಾಸ್ತ : 06:19 ಶಾಲಿವಾಹನ ಶಕೆ :1946, ಸಂವತ್ :2080, ಸಂವತ್ಸರ :ಕ್ರೋಧಿ ನಾಮ, ಋತು: ವರ್ಷ ಋತು ಅಯಣ: ದಕ್ಷಿಣ ಮಾಸ: ಭಾದ್ರಪದ ಪಕ್ಷ :ಶುಕ್ಲ ತಿಥಿ: ಷಷ್ಠಿ ನಕ್ಷತ್ರ: ವಿಶಾಖ, ರಾಹು ಕಾಲ:07:30 ನಿಂದ 09:00 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ:03:00 ನಿಂದ 04:30 ತನಕ ಅಮೃತಕಾಲ: ಬೆ.8:20 ನಿಂದ ಬೆ.10:06 ತನಕ ಅಭಿಜಿತ್ ಮುಹುರ್ತ: ಬೆ.11:48 ನಿಂದ ಮ.12:37 ತನಕ ಮೇಷ ರಾಶಿ: ಈ ರಾಶಿಯವರಿಗೆ ಈ ಬಾರಿ ಬಂಪರ್ ಕೊಡುಗೆ,ಗುತ್ತಿಗೆ ಆಧಾರಿತ ಉದ್ಯೋಗಿಗಳಿಗೆ ಸಿಹಿಸುದ್ದಿ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಶುಭ ಮಂಗಳ ಕಾರ್ಯ ಜರುಗುವುದು. ಹೊಸ…
ಬಳ್ಳಾರಿ: ಇಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿದೆ. ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಂಬರ್ 2 ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮತ್ತೆ ಕೋರ್ಟ್ಗೆ ಹಾಜರಾಗಲಿದ್ದಾರೆ. ಇದರ ಮಧ್ಯೆ ದರ್ಶನ್ಗೆ ಹಾಗೂ ಅವರ ಕುಟುಂಬಕ್ಕೆ ಬೇಲ್ ವಿಚಾರದಲ್ಲಿ ಹೊಸ ಟೆನ್ಶನ್ ಶುರುವಾಗಿದೆ. ಅತ್ತ ಪವಿತ್ರಾಗೌಡ ಸೇರಿದಂತೆ ಹಲವು ಆರೋಪಿಗಳು ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದ್ರೆ ದರ್ಶನ್ ಮಾತ್ರ ಜೈಲಿನಲ್ಲಿದ್ದು ಇಷ್ಟು ದಿನಗಳಾದ್ರೂ ಕೂಡ ಜಾಮೀನು ಅರ್ಜಿ ಸಲ್ಲಿಸಿರಲಿಲ್ಲ. ಚಾರ್ಜ್ ಶೀಟ್ ಪ್ರತಿ ಸಿಕ್ಕ ನಂತರವಷ್ಟೇ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆರೋಪಿಗಳ ಪರ ವಕೀಲರಿಗೆ ಚಾರ್ಜ್ಶೀಟ್ ಪ್ರತಿ ಸಲ್ಲಿಕೆ ಆಗಲಿದೆ. ದೋಷಾರೋಪ ಪಟ್ಟಿ ಸಿಕ್ಕರೆ ಅನೇಕ ವಿಚಾರಗಳು ರಿವೀಲ್ ಆಗಲಿವೆ. ದರ್ಶನ್ ವಿರುದ್ಧ ಇರುವ ಆರೋಪಗಳು ಈಗಾಗಲೇ ಸಂಚಲನ ಸೃಷ್ಟಿ ಮಾಡಿವೆ. ಅದರ ಜೊತೆ ಮತ್ತೊಂದಿಷ್ಟು ವಿಚಾರಗಳು ಹೊರ ಬರುತ್ತವೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಜೂನ್ 8ರಂದು ರೇಣುಕಾ ಸ್ವಾಮಿ ಹತ್ಯೆ ನಡೆಯಿತು. ಆ ಬಳಿಕ ಶವವನ್ನು ರಾಜ ಕಾಲುವೆಗೆ…
ಕೊಪ್ಪಳ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ, ಕೊಲೆ ಮಾಡಿ ಆಕೆಯನ್ನು ಸುಟ್ಟುಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕುಕನೂರು ತಾಲೂಕಿನ ಅರಕೇರಿ ಗ್ರಾಮದಲ್ಲಿ ಗೀತಾ ಎಂಬಾಕೆಯ ಕೊಲೆಯಾಗಿದೆ. ಪತಿ ದೇವರೆಡ್ಡೆಪ್ಪ ಭಾವಿಕಟ್ಟಿಯಿಂದ ಆಕೆ ಕೊಲೆಯಾಗಿದ್ದಾಳೆ. ಸೆ.6 ರ ರಾತ್ರಿ ಕೊಲೆ ನಡೆದಿದೆ. ಮೃತಳ ಸಹೋದರ ಸಿದ್ಧರೆಡ್ಡಿ ದೂರು ಆಧರಿಸಿ, ಕೊಲೆ ಆರೋಪದಡಿ ದೇವರೆಡ್ಡೆಪ್ಪ ಭಾವಿಕಟ್ಟಿ ಹಾಗೂ ಆತನ ತಂದೆ ಮಲ್ಲಾರೆಡ್ಡೆಪ್ಪ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳಾಗದ ಹಿನ್ನೆಲೆಯಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಮೃತಳ ಕುಟುಂಬಕ್ಕೆ ಸಹಜ ಸಾವು ಎಂದು ಹೇಳಿ, ತರಾತುರಿಯಲ್ಲಿ ಸುಟ್ಟು ಹಾಕಿದ್ದಾರೆ. ಸಂಶಯಗೊಂಡ ಮೃತಳ ಸಹೋದರ ಸಿದ್ಧರೆಡ್ಡಿ ದೂರು ನೀಡಿದ್ದು, ಕುಕನೂರು ಪೊಲೀಸರು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ., ಇಂದಿಗೂ ಅವರ ನ್ಯಾಯಾಂಗ ಬಂಧನ ಮುಕ್ತಾಯವಾಗಲಿದ್ದು ಕೋರ್ಟ್ ನಲ್ಲಿ ವಿಚಾರಣೆ ಬಳಿಕ ಮತ್ತಷ್ಟು ದಿನಗಳ ಕಾಲ ಮುಂದೂಡಲಾಗಿದೆ. ಕೇಸ್ ಸಾಕಷ್ಟು ಸ್ಟ್ರಾಂಗ್ ಆಗಿರೋದ್ರಿಂದ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರಿಗೆ ಜಾಮೀನು ಸಿಗೋದು ದೂರದ ಮಾತಾಗಿದೆ. ಈಗ ದರ್ಶನ್ ಅವರನ್ನು ಪೆರೋಲ್ ಮೇಲೆ ಎರಡು ಗಂಟೆ ಹೊರಗೆ ತರೋ ಪ್ಲಾನ್ ನಡೆದಿದೆ ಎನ್ನುವ ವಿಚಾರ ರಿವೀಲ್ ಆಗಿದೆ. ಅಂದ ಹಾಗೆ ಈ ಯೋಜನೆ ಬಗ್ಗೆ ನಿರ್ಮಾಪಕಿ ಶಿಲ್ಪಾ ಶ್ರೀನಿವಾಸ್ ಹೇಳಿದ್ದಾರೆ. ಅಕ್ಟೋಬರ್ 22ರಂದು ಉಪೇಂದ್ರ ನಿರ್ದೇಶನ ಮಾಡಿದ್ದ ‘ಉಪೇಂದ್ರ’ ಚಿತ್ರಕ್ಕೆ 25 ವರ್ಷ ತುಂಬುತ್ತಿದೆ. ಈ ವಿಶೇಷ ದಿನವನ್ನು ಸಂಭ್ರಮಿಸಲು ಶಿಲ್ಪಾ ನಿರ್ಧರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಯಾಂಡಲ್ವುಡ್ನ ಉಪೇಂದ್ರ, ಸುದೀಪ್, ದರ್ಶನ್ ಸೇರಿ ಎಲ್ಲ ಸ್ಟಾರ್ಗಳನ್ನು ಒಂದೇ ವೇದಿಕೆಗೆ ಕರೆ ತರುವ ಪ್ಲಾನ್ ನಡೆದಿದೆ. ಇದಕ್ಕಾಗಿ ದರ್ಶನ್ ಅವರನ್ನು ಪೆರೋಲ್ ಮೇಲೆ ತರುವ ಆಲೋಚನೆ ಶಿಲ್ಪಾಗೆ ಇದೆ.…
ದಕ್ಷಿಣ ವಿಧಾಸಭಾ ಕ್ಷೇತ್ರದ ದೊಡ್ಡಬೊಮ್ಮಸಂದ್ರದ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಬಂದೊದಗಿದೆ ,ಈ ಕ್ಷೇತ್ರದ ಬಿಜೆಪಿಯ MLA ಆದ ಎಮ್ ಕೃಷ್ಣಪ್ಪನವರಿಗೆ ಈ ಸಮಸ್ಯೆಯ ಬಗ್ಗೆ ಅವರಿವಿಲ್ಲದ ಹಾಗೆ ಬಾಸವಾಗುತ್ತಿದೆ https://youtu.be/yUbiVpcICPU?si=2CfamGFZOBaWb9MK ಡಿಸಿಎಂ ಡಿಕೆ ಶಿವಕುಮಾರ್ ರವರು 15 ದಿನದೊಳಗೆ ಬೆಂಗಳೂರಿನಾದ್ಯಂತ ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದಾರೆ , ನೆನಪಿರಲಿ ನಿಮಗೆ ಬಾಕಿ ಇರೋದು 10 ದಿನಗಳು ಮಾತ್ರ ಎಂದು ತಾಕೀತು ಮಾಡಿದ್ದಾರೆ. ಈ ಸಮಸ್ಯೆಯ ಕುರಿತುಅಂಜನ ಗೌಡ ಬೆಂಗಳೂರು ಕಾರ್ಯದರ್ಶಿಗಳು ಮುನೇಶ( ಆನೇಕಲ್ ವಿಧಾಸಭಾ ಕ್ಷೇತ್ರದ ಅಧ್ಯಕ್ಷರು)ಸರವಣ( ಜಯನಗರ ವಿಧಾಸಭಾ ಕ್ಷೇತ್ರದ ಅಧ್ಯಕ್ಷರು) ಜೋಶುವ ಸೆಂಟೋ ( ಬೆಂಗಳೂರು ದಕ್ಷಿಣ ವಿಧಾಸಭಾ ಕ್ಷೇತ್ರದ ಅಧ್ಯಕ್ಷರು) ಬೆಳಕು ಚೆಲ್ಲಿದರು
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಪ್ಯಾನ್ ಇಂಡಿಯಾ ಯುಐ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸದ್ಯ ಯುಐ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಮಧ್ಯೆ ಚಿತ್ರತಂಡದಿಂದ ಮತ್ತೊಂದು ಹಾಟ್ ನ್ಯೂಸ್ ಹೊರ ಬಿದಿದೆ. ಈ ಸುದ್ದಿ ಕೇಳಿ ಪಡ್ಡೆ ಹುಡುಗರ ಹೃದಯ್ ಚಿಟ್ಟೆಯಂತೆ ಹಾರಾಡೋಕೆ ಶುರುವಾಗಿದೆ. ಯೆಸ್… ಭಾರೀ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಯುಐ ಸಿನಿಮಾಗೆ ಹಾಟ್ ಬ್ಯೂಟಿಯೊಬ್ಬರು ಎಂಟ್ರಿಕೊಡ್ತಿದ್ದಾರೆ. ಉಪ್ಪಿ ಏನೇ ಮಾಡಿದರೂ ಅದನ್ನು ವಿಭಿನ್ನವಾಗಿ ಮಾಡಿ ತೋರಿಸುತ್ತಾರೆ. ಉಪೇಂದ್ರ ನಿರ್ದೇಶನ ಎಂದರೆ ಯಾರೂ ಊಹೆ ಮಾಡದಂತಹ ಸೀನ್ಗಳು ಇದ್ದೆ ಇರುತ್ತವೆ. ಯುಐ ಮೂಲಕ ಜನರಿಗೆ ಏನೋ ಸಂದೇಶ ನೀಡಲು ಹೊರಟಿದ್ದಾರೆ ಎಂದು ಈಗಾಗಲೇ ಗೊತ್ತಾಗಿದೆ. ಇದೆಲ್ಲದರ ನಡುವೆ ಬಾಲಿವುಡ್ ಬ್ಯೂಟಿ ಸಖತ್ ಹಾಟ್ ಹಾಟ್ ಎನಿಸಿರುವ ಸನ್ನಿ ಲಿಯೋನ್ ಯುಐ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂತೆ. ಅಂದ್ಹಾಗೆ ಸನ್ನಿ ಲಿಯೋನ್ ಕನ್ನಡದಲ್ಲಿ ನಟಿಸುತ್ತಿರುವ 3ನೇ ಸಿನಿಮಾ ಇದಾಗಿದೆ. ರಿಯಲ್ ಸ್ಟಾರ್ ಉಪ್ಪಿ ನಟನೆಯ ಯುಐ ಸಿನಿಮಾದ ಕ್ರೇಜ್ ದಿನೇ ದಿನೇ…
ಶಿವಾಜಿನಗರದ ಐತಿಹಾಸಿಕ ಬೆಸಿಲಿಕಾ ಚರ್ಚ್ ಆವರಣದಲ್ಲಿ ನಡೆದ ಸೇಂಟ್ ಮೇರೀಸ್ ಅವರ ಜನ್ಮದಿನದ ಹಬ್ಬದ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. https://youtu.be/kQ2xUo9UGRY?si=fBwcP2a-lDkh61gj ಈ ವೇಳೆ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮಗುರುಗಳಾದ ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೊ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
2024ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ರಂಗೇರಿದೆ. ಜೋ ಬೈಡನ್ ಬಳಿಕ ಅವರ ಸ್ಥಾನಕ್ಕೆ ಯಾರು ಬರ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಒಂದು ಕಡೆ ಕಮಲಾ ಹ್ಯಾರಿಸ್ ಇದ್ರೆ ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ಫೈಪೋಟಿ ನೀಡಿದ್ದಾರೆ. ಈ ಮಧ್ಯೆ ಕಮಲಾ ಹ್ಯಾರಿಸ್ ಆಹ್ವಾನದ ಮೇರೆಗೆ ಡಿಕೆ ಶಿವಕುಮಾರ್ ಕುಟುಂಬ ಸಮೇತ ಅಮೆರಿಕಾಗೆ ತೆರಳಿದ್ದಾರೆ. ಅಮೆರಿಕ ಅಧ್ಯಕ್ಷ ಚುನಾವಣೆ ಅಭ್ಯರ್ಥಿ ಕಮಲಾ ಹ್ಯಾರಿಸ್ ಜೊತೆ ಡಿಕೆಶಿ ನಂಟು ಹೊಂದಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಸಿಎಂ ವಿರುದ್ಧ ಮುಡಾ ಕೇಸ್ ಪ್ರಾಸಿಕ್ಯೂಷನ್ ಶುರುವಾಗಿದ್ದೇ ಆಗಿದ್ದು, ರಾಜ್ಯ ಹಸ್ತಪಾಳಯದಲ್ಲಿ ಸಂಚಲನಕಾರಿ ಬೆಳವಣಿಗೆಗಳು ನಡೀತಾ ಇವೆ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ ಪಾಟೀಲ್ ಸೇರಿದಂತೆ ಕೆಲವು ಘಟಾನುಘಟಿಗಳು ಸಿಎಂ ಕುರ್ಚಿಗಾಗಿ ಕಾಯ್ತಿದ್ದಾರೆ. ಆದರೆ ಇದ್ಯಾವುದರ ಟೆನ್ಷನ್ ಇಲ್ಲದೆ ಡಿಕೆಶಿ ವಿದೇಶ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆ ಸಂಜೆಯೇ ಕುಟುಂಬ ಸಮೇತ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅದಕ್ಕೂ ಮೊದಲು ಮಧ್ಯಾಹ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ…