Author: Prajatv Kannada

ಸೂರ್ಯೋದಯ: 05.54 AM, ಸೂರ್ಯಾಸ್ತ : 06.39 ಪಿಎಂ ಶಾಲಿವಾಹನ ಶಕೆ1945, ಶೋಭಕೃನ್ನಾಮ ಸಂವತ್ಸರ, ಸಂವತ್2079,ವೈಶಾಖ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಚತುರ್ದಶಿ 09:42 PM ತನಕ ನಂತರ ಅಮವಾಸ್ಯೆ ನಕ್ಷತ್ರ: ಇವತ್ತು ಅಶ್ವಿನಿ 07:22 AM ತನಕ ನಂತರ ಭರಣಿ ಯೋಗ: ಇವತ್ತು ಸೌಭಾಗ್ಯ 07:37 PM ತನಕ ನಂತರ ಶೋಭಾನ ಕರಣ: ಇವತ್ತು ವಿಷ್ಟಿ 10:02 AM ತನಕ ನಂತರ ಶಕುನಿ 09:42 PM ತನಕ ನಂತರ ಚತುಷ್ಪಾದ ರಾಹು ಕಾಲ: 01:30 ನಿಂದ 03:00 ವರೆಗೂ ಯಮಗಂಡ: 06:00 ನಿಂದ 07:30 ವರೆಗೂ ಗುಳಿಕ ಕಾಲ: 10:30 ನಿಂದ 12:00 ವರೆಗೂ ಅಮೃತಕಾಲ: 12.15 AM to 01.50 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:46 ನಿಂದ ಮ.12:38 ವರೆಗೂ ಶ್ರೀ ಸೋಮಶೇಖರ್B.Sc ( ವಂಶಪಾರಂಪರಿತ) ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು. Mob.No.93534 88403 ಮೇಷ ರಾಶಿ: (ಅಶ್ವಿನಿ ಭರಣಿ…

Read More

ಬೆಂಗಳೂರು: ಸಿಎಂ ಕುರ್ಚಿ ಕದನ ಕೊನೆಗೂ ಅಂತ್ಯ ಕಂಡಿದೆ. ತಾವೇ ಸಿಎಂ (CM) ಆಗಬೇಕೆಂದು ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ (DK Shivakumar) ಕೊನೆಗೂ ಸಿದ್ದರಾಮಯ್ಯ (Siddaramaiah) ಅವರಿಗೆ ಸ್ಥಾನ ಬಿಟ್ಟು ಕೊಟ್ಟು ಡಿಸಿಎಂ (DCM) ಆಗಲು ಒಪ್ಪಿಗೆ ನೀಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರ ಹಾಗೂ ಗಾಂಧಿ ಕುಟುಂಬದವರ ಆದೇಶಕ್ಕೆ ತಲೆ ಬಾಗಲೇ ಬೇಕಾಗುತ್ತದೆ ಎಂದು ಡಿಕೆಶಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಡಿಕೆಶಿ, ಕರ್ನಾಟಕದ ಜನತೆಗೆ ಬದ್ಧರಾಗಿರಬೇಕು. ಪಾರ್ಲಿಮೆಂಟ್ ಎಲೆಕ್ಷನ್ ಇನ್ನೇನು ಹತ್ತಿರದಲ್ಲೇ ಇದೆ. ಹೀಗಾಗಿ ನಾವು ಬೇರೇನೂ ಮಾಡಲು ಸಾಧ್ಯವಿಲ್ಲ. ನಾನು ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಗಾಂಧಿ ಕುಟುಂಬದವರ ಆದೇಶಕ್ಕೆ ತಲೆ ಬಾಗಲೇ ಬೇಕಾಗಿದೆ. ಪಕ್ಷದಲ್ಲಿ ಹೆಚ್ಚಿನವರು ನಿರ್ಧರಿಸಿದಂತೆ ನಡೆದುಕೊಳ್ಳಲೇ ಬೇಕಾಗಿದೆ ಎಂದು ಹೇಳಿದರು. ಪಕ್ಷದ ಹಿರಿಯರು ಮಾಡಿರುವ ಸೂತ್ರವನ್ನು ಈಗ ಒಪ್ಪಿಕೊಳ್ಳಲೇಬೇಕು. ಕೆಲವೊಮ್ಮೆ ಅವರು ಏನು ಹೇಳುತ್ತಾರೋ ಅದನ್ನು ನಾವು ಕೇಳಲೇ ಬೇಕಾಗುತ್ತದೆ. ಅಂತಿಮವಾಗಿ ನಮಗೆ ದೊಡ್ಡ ಜವಾಬ್ದಾರಿಯಿದೆ.…

Read More

ಬೆಂಗಳೂರು: ತುಷಾರ್ ಗಿರಿನಾಥ್ ಅವಧಿಯಲ್ಲಿನ ಅಕ್ರಮಗಳ ಕುರಿತು ವಿಶೇಷ ತನಿಖೆ ನಡೆಯಲಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರಮೇಶ್‍ ಬಾಬು(Ramesh Babu) ಮನವಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ತುಷಾರ್ ಗಿರಿನಾಥ್ (Tushar Girinath)ತಮ್ಮ ಅಧಿಕಾರದ ಅವಧಿಯಲ್ಲಿ ಕಾಮಗಾರಿಗಳ ಸಹಿತವಾಗಿ ಹಲವಾರು ಅಕ್ರಮಗಳಿಗೆ ಅವಕಾಶ ಕೊಟ್ಟಿರುವ ಆರೋಪವಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯ ಚುನಾವಣಾ ಅಧಿಕಾರಿಯಾಗಿ ಚಿಲುಮೆ ಖಾಸಗಿ ಸಂಸ್ಥೆಗೆ ಮತದಾರರ ಪಟ್ಟಿಯ ಖಾಸಗಿ ವಿವರಗಳನ್ನು ಸಂಗ್ರಹಿಸುವ ಅವಕಾಶ ನೀಡುವುದರ ಮೂಲಕ ಅಕ್ರಮ ಎಸಗಿದ ಆರೋಪ ಅವರ ಮೇಲಿದ್ದು, ಇದೆಲ್ಲವನ್ನೂ ಮುಂದಿಟ್ಟುಕೊಂಡು ತನಿಖೆ ನಡೆಸಬೇಕು ಎಂದು ರಮೇಶ್‍ಬಾಬು ಒತ್ತಾಯಿಸಿದರು. ಹೊಸ ಸರಕಾರ ಆಡಳಿತಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಾಲಿಕೆಗೆ ಸಂಬಂಧಪಟ್ಟಂತೆ ಇವರು ಯಾವುದೇ ಆರ್ಥಿಕ ನಿರ್ಣಯಗಳನ್ನು ತೆಗೆದುಕೊಳ್ಳದಂತೆ ನಿರ್ದೇಶನ ನೀಡಿ. ಮತದಾರರ ಪಟ್ಟಿಯ ಅಕ್ರಮಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ವತಿಯಿಂದ ತನಿಖೆ ಕೈಗೊಳ್ಳಲು ಅವಶ್ಯಕವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಮೇಶ್‍ಬಾಬು ಆಗ್ರಹಿಸಿದರು.

Read More

ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಬ್ಲಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆರೋಪ ಮಾಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಈ ಬಾರಿ ನಾನು ಸಿಎಂ ಆಗಿಲ್ಲ ಅಂದರೆ ನನ್ನ ಜನ್ಮದಲ್ಲಿ ಸಿಎಂ ಆಗೋಕೆ ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ಪಟ್ಟು ಹಿಡಿದಿದ್ದಾರೆ. ಸಿದ್ದರಾಮಯ್ಯ ಸಿ ಎಂ ಆಗಿ, ಪ್ರತಿಪಕ್ಷ ನಾಯಕರಾಗಿ ಈಗ ಮತ್ತೆ ಸಿಎಂ ಆಗಲು ಹೊರಟಿದ್ದಾರೆ. 2009 ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಸಿದ್ದರಾಮಯ್ಯ ಬ್ಲಾಕ್ ಮೇಲ್ ಮಾಡಿದ್ದರು” ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ನಲ್ಲಿ ವಿರೋಧ ಪಕ್ಷ ಸ್ಥಾನ ಕೊಟ್ಟರೆ ಇರುತ್ತೇನೆ, ಇಲ್ಲ ಅಂದರೆ ನನ್ನ ದಾರಿ ನೋಡಿಕೊಳ್ಳುತ್ತೇನೆ ಎಂದಿದ್ದರು. ಹಾಗಾಗಿ ಅಂದು ಪ್ರತಿಪಕ್ಷ ನಾಯಕರಾಗಿದ್ದ ಖರ್ಗೆ ಅವರನ್ನು ಲೋಕಸಭೆಗೆ ಕಳುಹಿಸಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಮಾಡ ಲಾಯಿತು. ಈಗಲೂ ಅದೇ ರೀತಿ ಬ್ಲಾಕ್ ಮೇಲ್ ತಂತ್ರ ಮಾಡುತ್ತಿದ್ದಾರೆ. ನನ್ನ…

Read More

ನವದೆಹಲಿ: ಮುಖ್ಯಮಂತ್ರಿ ಹುದ್ದೆ ತನಗೆ ಸಿಗಬೇಕೆಂದು ಪಟ್ಟು ಹಿಡಿದು ಸಿದ್ದರಾಮಯ್ಯಗೆ (Siddaramaiah) ಚೆಕ್‌ಮೇಟ್‌ ಕೊಟ್ಟಿದ್ದ ʼಕನಕಪುರದ ಬಂಡೆʼ ಒಂದು ಕರೆಯಿಂದ ಕರಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಬುಧವಾರ ಏನಾಯ್ತು? ಬುಧವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಸಿಎಂ ಆಯ್ಕೆ ಕಸರತ್ತು ನಡೆಯಿತು. ರಾಹುಲ್‌ ಗಾಂಧಿ (Rahul Gandhi) ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಜೊತೆ ಮೊದಲು ಮಾತನಾಡಿದರು. ಬಳಿಕ ಡಿಕೆ ಶಿವಕುಮಾರ್‌ (DK Shivakumar) ಜೊತೆ ಸಂಧಾನ ಮಾತುಕತೆ ನಡೆಸಿದರು. ಈ ಸಂಧಾನ ಮಾತುಕತೆ ಡಿಕೆಶಿ ಒಪ್ಪಿಗೆ ಸೂಚಿಸದೇ ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸಕ್ಕೆ ತೆರಳಿದರು. ಇಲ್ಲಿ ನನಗೆ ಸಿಎಂ ಪಟ್ಟ ನೀಡದೇ ಇದ್ದರೂ ಪರ್ವಾಗಿಲ್ಲ ನೀವು ಸಿಎಂ ಆಗಿ ಎಂದು ಹೊಸ ದಾಳ ಉರುಳಿಸಿ ತೆರಳಿದ್ದರು. ತಡರಾತ್ರಿ ಏನಾಯ್ತು? ಒಂದು ಕಡೆ ಸಿದ್ದರಾಮಯ್ಯ ತಂಡ ಇನ್ನೊಂದು ಕಡೆ ಡಿಕೆಶಿ ತಂಡ ದೆಹಲಿಯಲ್ಲಿ ಬೀಡು ಬಿಟ್ಟು ಹೈಕಮಾಂಡ್‌ ಆದೇಶಕ್ಕೆ ಕಾಯುತ್ತಿತ್ತು. ರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ನಿವಾಸದಲ್ಲಿ ನಡೆದ ಹೈಕಮಾಂಡ್‌ ಸಭೆಗೆ…

Read More

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ ಬಹುತೇಕ ಆಯ್ಕೆ ಖಚಿತವಾಗಿದೆ. ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿ ಪಟ್ಟ ದೊರೆತಿದೆ. ಇದು ಇಂದು ಸಂಜೆ 7ಕ್ಕೆ ಬೆಂಗಳೂರಿನಲ್ಲಿ ನಡೆಯುವಂತ ಶಾಸಕಾಂಗ ಪಕ್ಷದ ಸಭೆಯಲ್ಲಿ ಫೈನಲ್ ಆಗಿ ಅಧಿಕೃತ ಘೋಷಣೆಯಾಗಲಿದೆ. ಅದಕ್ಕೂ ಮುನ್ನ ಇಂದು ಬೆಳಿಗ್ಗೆ 9.30ಕ್ಕೆ ದೆಹಲಿಯಲ ಕೆ.ಸಿ ವೇಣುಗೋಪಾಲ್ ನಿವಾಸದಲ್ಲಿ ಸಿಎಂ ಗದ್ದುಗೆ ಗುದ್ದಾಟ ಶಮನಕ್ಕೆ ಬ್ರೇಕ್ ಹಾಕಲು ಬ್ರೇಕ್ ಫಾಸ್ಟ್ ಮೀಟಿಂಗ್ ಅರೆಂಜ್ ಮಾಡಲಾಗಿದೆ. ವೇಣುಗೋಪಾಲ್ ನಿವಾಸದಲ್ಲಿ ನಡೆಯುತ್ತಿರುವಂತ ಬ್ರೇಕ್ ಫಾಸ್ಟ್ ಮೀಟಿಂಗ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ವಿಶೇಷ ಆಹ್ವಾನವನ್ನು ನೀಡಲಾಗಿದೆ. ಡಿಕೆಶಿ ಹಾಗೂ ಸಿದ್ಧರಾಮಯ್ಯಗೆ ವಿಶೇಷ ಆಹ್ವಾನವನ್ನು ನೀಡಲಾಗಿದೆ. ಈ ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಭಾಗಿಯಾಗಲಿರುವಂತ ನಾಯಕರೊಂದಿಗೆ ಕಾಂಗ್ರೆಸ್ ನಾಯಕರು ಅಂತಿಮ ಚರ್ಚೆ ನಡೆಸಿ, ಕರ್ನಾಟಕದ ಮುಂದಿನ ಸಿಎಂ ಹುದ್ದೆಗಾಗಿ ನಡೆಯುತ್ತಿರುವಂತ ಗುದ್ದಾಟಕ್ಕೆ ಬ್ರೇಕ್ ಕೂಡ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಿವಾಸದಲ್ಲಿ ನಡೆಯುತ್ತಿರುವಂತ ಇಂದು ಬೆಳಿಗ್ಗೆಯ ಉಪಹಾರ ಕೂಟವು…

Read More

ಬೆಂಗಳೂರು: ಅಂತೂ ಇಂತೂ ಕೊನೆಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಫೈನಲ್ ಆಗಲಿದೆ. ಮೇ.20ರಂದು 12.30ಕ್ಕೆ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪದಗ್ರಹಣ ಮಾಡಲಿದ್ದಾರೆ. ಈ ಸಂಬಂಧ ಎಐಸಿಸಿ ಅಧ್ಯಕ್ಷರಿಂದ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಮೇ.202ರಂದು ಮಧ್ಯಾಹ್ನ 12.30ಕ್ಕೆ ನೂತನ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಒಟ್ಟಾರೆಯಾಗಿ ಕೆಲ ದಿನಗಳಿಂದ ನಡೆಯುತ್ತಿದ್ದಂತ ಕರ್ನಾಟಕ ಮುಂದಿನ ಸಿಎಂ ಆಯ್ಕೆ ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲೇ ಇಂದು ಸಂಜೆ 7ಕ್ಕೆ ಅಧಿಕೃತ ಘೋಷಣೆಗಾಗಿ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿರುವುದಾಗಿ ತಿಳಿದು ಬಂದಿದೆ. ಈ ಸಿಎಲ್ ಪಿ ಸಭೆಯಲ್ಲೇ ನಾಯಕರ ಹೆಸರು ಕೂಡ ಅಧಿಕೃತವಾಗಿ ಘೋಷಣೆಯಾಗಲಿದೆ.

Read More

ಬೆಂಗಳೂರು: ಚುನಾವಣಾ ಫಲಿತಾಂಶ ಪ್ರಕಟವಾಗಿ 5 ದಿನಗಳ ಬಳಿಕ ಕೊನೆಗೂ ಸಿಎಂ (CM) ಕುರ್ಚಿಯ ಕದನ ಅಂತ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) 2ನೇ ಬಾರಿಗೆ ಅಧಿಕಾರ ಸ್ವೀಕರಿಸಲು ಮುಂದಾಗಿದ್ದು, ಡಿಕೆ ಶಿವಕುಮಾರ್ (DK Shivakumar) ಉಪ ಮುಖ್ಯಮಂತ್ರಿಯಾಗಲು (DCM) ಒಪ್ಪಿಗೆ ನೀಡಿದ್ದಾರೆ. ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಒಟ್ಟಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಮಾಣವಚನದಲ್ಲೂ ಭರ್ಜರಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಕಂಠೀರವ ಸ್ಟೇಡಿಯಂ ಬಳಿ ಸಿಎಂ ಸಿದ್ದರಾಮಯ್ಯ ಅವರ ಫ್ಲೆಕ್ಸ್‌ಗಳು ಈಗಾಗಲೇ ರಾರಾಜಿಸುತ್ತಿವೆ. 2ನೇ ಬಾರಿಗೆ ಅಧಿಕಾರ ಸ್ವೀಕರಿಸುತ್ತಿರುವ ಸಿದ್ದರಾಮಯ್ಯಗೆ ಶುಭಾಶಯಗಳು ಎಂದು ಫ್ಲೆಕ್ಸ್‌ಗಳಲ್ಲಿ ಬರೆಯಲಾಗಿದೆ. ಶನಿವಾರ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಸೇರಿ ಸುಮಾರು 1 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ಬಳಿಕ ಸಿದ್ದರಾಮಯ್ಯನವರು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿ 5 ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದರು.

Read More

ಬೆಂಗಳೂರು: 2023ರ ಮೇ 13ರಂದು ಹೊರಬಿದ್ದ 16ನೇ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ(Karnataka Assembly Elections 2023 Result) ಹೀನಾಯವಾಗಿ ಸೋಲು ಕಂಡ ಮಾಜಿ ಸಚಿವ ಡಾ.ಕೆ.ಸುಧಾಕರ್(Dr K Sudhkar) ಅವರು ಸಮ್ಮಿಶ್ರ ಸರ್ಕಾರ ಪತನ ಕುರಿತು ಹೊಸ ಬಾಂಬ್​​ ಸಿಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ(Siddaramaiah) ಕಾರಣ ಎಂಬಂತೆ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರ ನಿರಾಕರಿಸಲು ಸಾಧ್ಯವೇ? ಎಂದು ಟ್ವೀಟರ್​ನಲ್ಲಿ ಸುಧಾಕರ್ ಪ್ರಶ್ನೆ ಮಾಡಿದ್ದಾರೆ. JDS-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಮ್ಮ ಸಮಸ್ಯೆ ಬಗ್ಗೆ, ನಮಗೆ ಆಗುತ್ತಿದ್ದ ಅನ್ಯಾಯಗಳ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಮಾಡುತ್ತಿದ್ದೆವು. ಸಿದ್ದರಾಮಯ್ಯ ಆಗ ಈ ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತಿಲ್ಲ. ನನ್ನ ಕ್ಷೇತ್ರ, ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು. 2019ರ ಲೋಕಸಭಾ ಚುನಾವಣೆವರೆಗೂ ಸಹಿಸಿಕೊಳ್ಳಿ. ಲೋಕಸಭಾ ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಇರಲ್ಲ. ಹೆಚ್​ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇರಲು ಬಿಡಲ್ಲ ಎಂದು ಹೇಳ್ತಿದ್ದರು. ಸಿದ್ದರಾಮಯ್ಯ ಶಾಸಕರಿಗೆ ಸಮಾಧಾನ ಹೇಳಿ ಕಳುಹಿಸುತ್ತಿದ್ದರು. ಕಾರ್ಯಕರ್ತರು, ಮುಖಂಡರನ್ನು ಉಳಿಸಿಕೊಳ್ಳಲು ರಿಸ್ಕ್ ತೆಗೆದುಕೊಂಡ್ವಿ. ರಾಜೀನಾಮೆ ನೀಡಿ ಮತ್ತೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ಈ ನಡೆಯಲ್ಲಿ ಸಿದ್ದರಾಮಯ್ಯ ಪ್ರೇರಣೆ ಇದೆ. ಇದನ್ನು ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲ ಎನ್ನಲು ಸಾಧ್ಯವೇ? ಎಂದು ಟ್ವೀಟ್​ ಮೂಲಕ ಸಿದ್ದರಾಮಯ್ಯ ವಿರುದ್ಧ ಡಾ.ಸುಧಾಕರ್​ ಆರೋಪ ಮಾಡಿದ್ದಾರೆ. ಸುಧಾಕರ್ ಅವರ ಟ್ವೀಟ್ ಈ ರೀತಿ ಇದೆ 2018ರಲ್ಲಿ ಅಂದಿನ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು. 2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು. ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಮಾನ್ಯ ಸಿದ್ದರಾಮಯ್ಯನವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯನವರು ನಿರಾಕರಿಸಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

Read More

ಭೋಪಾಲ್: ವ್ಯಕ್ತಿಯೊಬ್ಬ ತನ್ನ 13 ವರ್ಷದ ಮಗಳ ಮೃತದೇಹವನ್ನು ಬೈಕಿನಲ್ಲೇ ಸಾಗಿಸಿದ ಘಟನೆಯೊಂದು ಮಧ್ಯಪ್ರದೇಶದ (Madhyapradesh) ಶಹದೋಲ್ ನಲ್ಲಿ ನಡೆದಿದೆ. ವ್ಯಕ್ತಿಯನ್ನು ಲಕ್ಷ್ಮಣ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರು ಕೋಟಾ ಗ್ರಾಮದವರು. ಸಿಂಗ್ ಮಗಳು ಮಾಧುರಿ ಅನಾರೋಗ್ಯದಿಂದ ರಾತ್ರಿ ಮೃತಪಟ್ಟಿದ್ದಾಳೆ. ಮಗಳು ಸಾವನ್ನಪ್ಪುತ್ತಿದ್ದಂತೆಯೇ ಸಿಂಗ್ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು 15 ಕಿ.ಮಿ ಒಳಗಡೆ ಮಾತ್ರ ಅಂಬುಲೆನ್ಸ್ (Ambulance) ಕೊಡುವುದಾಗಿ ತಿಳಿಸಿದ್ದಾರೆ. ಅಲ್ಲದೆ 15 ಕಿ.ಮೀ ಗಿಂತಲೂ ದೂರ ಕ್ರಮಿಸಬೇಕಾದರೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಮಗಳ ಶವವನ್ನು ಬೈಕಿನಲ್ಲಿಯೇ ಸಾಗಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ. ಶಹದೋಲ್ ಕಲೆಕ್ಟರ್ ವಂದನಾ ವೈದ್ಯ ಅವರು ಮಗಳ ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ವಾಹನದ ವ್ಯವಸ್ಥೆ ಮಾಡಿದರು. ಹೀಗಾಗಿ ಅಂತಿಮ ವಿಧಿ-ವಿಧಾನಗಳಿಗಾಗಿ ಮಗಳ ದೇಹವನ್ನು ಮನೆಗೆ ಕೊಂಡೊಯ್ಯಲು ಸಾಧ್ಯವಾಯಿತು ಎಂದು ಸಿಂಗ್ ತಿಳಿಸಿದರು. ಶಹದೋಲ್ ಕಲೆಕ್ಟರ್, ಸಿಂಗ್ ಕುಟುಂಬಕ್ಕೆ ಸ್ವಲ್ಪ ಆರ್ಥಿಕ ಸಹಾಯವನ್ನು ಮಾಡಿದರು.…

Read More