ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಕುರ್ಚಿ ಕದನ ಕೊನೆಗೂ ಬಗೆಹರಿದಿದೆ. ಡಿಕೆ ಶಿವಕುಮಾರ್ (DK Shivakumar) ಅವರಿಗೆ ಉಪಮುಖ್ಯಮಂತ್ರಿ ಪಟ್ಟ ದೊರಕಿದೆ. ಆದರೆ ಇದು ನಮಗೆ ಸಂಪೂರ್ಣ ಖುಷಿ ಕೊಟ್ಟಿಲ್ಲ ಎಂದು ಸಂಸದ ಡಿಕೆ ಸುರೇಶ್ (DK Suresh) ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ಡಿಸಿಎಂ ಸ್ಥಾನ ಕೊಟ್ಟಿರುವುದು ನನಗೆ ಸಂಪೂರ್ಣ ಸಂತೋಷವಿಲ್ಲ. ಆದರೆ ರಾಜ್ಯದ ಹಿತದೃಷ್ಟಿಯಿಂದ ನಾವು ನಮ್ಮ ಬದ್ಧತೆಯನ್ನು ಪೂರೈಸಲು ಬಯಸಿದ್ದೇವೆ. ಹೀಗಾಗಿ ಡಿಕೆ ಶಿವಕುಮಾರ್ ಅವರು ಇದನ್ನು ಒಪ್ಪಿಕೊಳ್ಳಬೇಕಾಯಿತು ಎಂದು ತಿಳಿಸಿದರು. ಸಂಭಾವನೆ ವಿಚಾರದಲ್ಲಿ ಕಿರಿಕ್: ‘ಡಾನ್ 3’ ಚಿತ್ರದಿಂದ ಹೊರ ಬಂದ ಶಾರುಖ್ ಖಾನ್ ಮುಂದೆ ಏನಾಗುತ್ತೆ ಎಂಬುದನ್ನು ನೋಡೋಣ. ಡಿಕೆ ಶಿವಕುಮಾರ್ ಅವರು ಸಿಎಂ ಆಗಬೇಕೆಂಬುದು ನನ್ನ ಹಾರೈಕೆ ಆಗಿತ್ತು. ಆದರೆ ಆ ಆಸೆ ಈಡೇರಲಿಲ್ಲ. ಕಾದು ನೋಡೋಣ ಎಂದು ಸುರೇಶ್ ಹೇಳಿದರು. ಕರ್ನಾಟಕ ವಿಧಾನಸಭಾ ಚುನಾವಣೆ (Assembly Election) ಯಲ್ಲಿ ಕಾಂಗ್ರೆಸ್ (Congress) ಗೆದ್ದು ಬೀಗಿದರೂ, ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿ ನಡೆದಿತ್ತು. ಸಿದ್ದರಾಮಯ್ಯ (Siddaramaiah)…
Author: Prajatv Kannada
ಬೆಂಗಳೂರು: ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (MLA Lakshman Savadi)ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದಾರೆ. ಅಮಿತ್ ಶಾ ವಿರುದ್ಧ ವಿ.ಸೋಮಣ್ಣ ವಾಗ್ದಾಳಿ: ಗೆಲ್ಲಿಸಿ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇವೆ ಎಂದಿದ್ದರು! ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡುತ್ತಾರೆ. ನಾನು ಯಾವುದೇ ಸಚಿವಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದೇನೆ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಯಾವುದೇ ಷರತ್ತು ಹಾಕಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದರು.
ಡಿ. ಕೆ. ಶಿವಕುಮಾರ್ ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದ ಶಾಸಕರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರು. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಹ ಉತ್ತಮ ಬಾಂಧವ್ಯ ಹೊಂದಿದ್ದು ಇದೀಗ ಡಿಸಿಎಂ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಜೀವನ ಚರಿತ್ರೆ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ ಗ್ರಾಮದ ಶ್ರೀ ಕೆಂಪೇಗೌಡ ಹಾಗೂ ಶ್ರೀಮತಿ ಗೌರಮ್ಮದಂಪತಿಯ ಪ್ರಥಮ ಪುತ್ರನಾಗಿ ಜನಿಸಿದ ಶ್ರೀ ಡಿ.ಕೆ. ಶಿವಕುಮಾರ್ (ಜನನ 15ನೇ ಮೇ 1962) ತಮ್ಮತಂದೆಯಿಂದಲೇ ನಾಯಕತ್ವದ ಗುಣಗಳನ್ನು ಪಡೆದುಕೊಂಡು ಬಂದರು. 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗವಾದ NSUI ಗೆ ಸೇರ್ಪಡೆಗೊಂಡು ಅನತಿ ಕಾಲದಲ್ಲಿಯೇ ಬೆಂಗಳೂರು ಜಿಲ್ಲೆಯ ಘಟಕದ ಅಧ್ಯಕ್ಷರಾದರು (1981-83). ತದನಂತರ ವಿದ್ಯಾಭ್ಯಾಸಕ್ಕೆಂದು ಬೆಂಗಳೂರು ಸೇರಿದ ಶ್ರೀ ಡಿ.ಕೆ. ಶಿವಕುಮಾರ್ ಆರ್.ಸಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಯುವ ಕಾಂಗ್ರೆಸ್‍ಗೆ ಸೇರಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷರಾಗಿ ಕನಕಪುರ…
ಬೆಂಗಳೂರು: ಇನ್ನೇರಡು ದಿನದಲ್ಲಿ ಕಾಂಗ್ರೆಸ್ನಿಂದ ನೂತನ ರಾಜ್ಯ ಸರ್ಕಾರ ರಚನೆಯಾಗಲಿದ್ದು, ಈ ಮೂಲಕ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಅಂತಿಮವಾಗಿದೆ. ಈ ನಡುವೆ ಅಧಿಕೃತವಾಗಿ ಸರ್ಕಾರ ರಚನೆಗೆ ಕಾಂಗ್ರೆಸ್ ಮುಂದಾಗಿದ್ದು, ಜಿ.ಪರಮೇಶ್ವರ್(Dr. Parameshwar) ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಧಿಕೃತ ಪ್ರತಿನಿಧಿಯಾಗಿ ಜಿ ಪರಮೇಶ್ವರ್ ರಾಜ್ಯಪಾಲರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರ ಪತ್ರ ನೀಡಿದ್ದಾರೆ. ಅಲ್ಲದೇ ಮೇ 20 ರಂದು ನೂತನ ಸಿಎಂ ಪದಗ್ರಹಣ ಕಾರ್ಯಕ್ರಮ ನಡೆಸಲು ಮನವಿ ಸಲ್ಲಿಸಿದ್ದಾರೆ. ಇನ್ನೇರಡು ದಿನದಲ್ಲಿ ಕಾಂಗ್ರೆಸ್ನಿಂದ ನೂತನ ರಾಜ್ಯ ಸರ್ಕಾರ ರಚನೆಯಾಗಲಿದ್ದು, ಮೂಲಕ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಸಿಎಂ ಆಯ್ಕೆ ಅಂತಿಮವಾಗಿದೆ. ಇಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ 30-30 ಸೂತ್ರದ ಅಡಿಯಲ್ಲಿ ಸಿಎಂ ಆಯ್ಕೆ ಮಾಡಲಾಗಿದ್ದು, ಮೊದಲ 30 ತಿಂಗಳು ಸಿದ್ದರಾಮಯ್ಯ ಅವರು ಸಿಎಂ ಆಗಿ, ನಂತರದ 30 ತಿಂಗಳು ಶಿವಕುಮಾರ್ ಸಿಎಂ ಆಗಿ ಅಡಳಿತವನ್ನು ನಡೆಸಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮೇ 20ರಂದು ಸಿಎಂ ಆಗಿ ರಾಜ್ಯವನ್ನು ಮುನ್ನೆಡಸಿಲಿದ್ದಾರೆ.…
2023ರ ಕಾನ್ ಫಿಲ್ಮ್ ಫೆಸ್ಟಿವಲ್ ಫ್ರಾನ್ಸ್ ದೇಶದಲ್ಲಿ ನಡೆದಿದ್ದು ಭಾರತದ ಸೆಲೆಬ್ರಿಟಿಗಳು ಹೆಜ್ಜೆ ಹಾಕಿದ್ದಾರೆ. ಇದೇ ಮೊದಲ ಭಾರಿಗೆ ನಟಿ ಹಾಗೂ ಮಾಡೆಲ್ ಮನುಷಿ ಚಿಲ್ಲರ್ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ. 2017 ರಲ್ಲಿ ಮಾನುಷಿ ಛಿಲ್ಲರ್ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು. ಈ ಮೂಲಕ ಮಾನುಷಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದ ಭಾರತದ ಆರನೇ ಪ್ರತಿನಿಧಿ ಎನಿಸಿಕೊಂಡರು. ಮಾಜಿ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಫೋವಾರಿಯ ಬಿಳಿ ಬಣ್ಣದ ಗೌನ್‌ನಲ್ಲಿ ಕ್ಯಾನೆಸ್‌ಗೆ ಪಾದಾರ್ಪಣೆ ಮಾಡಿದ್ದಾರೆ. ನಟಿ ಅನುಷ್ಕಾ ಶರ್ಮಾ ಕೂಡ ಇದೇ ಮೊದಲ ಭಾರಿಗೆ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಸೈಫ್ ಪುತ್ರಿ ನಟಿ ಸಾರಾ ಅಲಿ ಖಾನ್ ಈ ಭಾರಿಯ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಕ್ಯಾನೆಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2023 ರ ಚೊಚ್ಚಲ ಪ್ರದರ್ಶನದಲ್ಲಿ ಲೆಹೆಂಗಾದಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. 76ನೇ ಕಾನ್ ಫಿಲ್ಮ್ ಫೆಸ್ಟಿವಲ್ ನಲ್ಲಿ…
ಬೆಂಗಳೂರು: ಈರುಳ್ಳಿ ಬೆಲೆ ಏಕಾಏಕಿ ಕುಸಿತಕಂಡಿದ್ದು ಇದರಿಂದ ಈರುಳ್ಳಿ ಬೆಳಗಾರರು ಕಂಗಾಲಾಗಿದ್ದಾರೆ. ಕಳೆದ ವಾರ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಿಂದ ಈರುಳ್ಳಿ ದೊಡ್ಡ ಪ್ರಮಾಣದಲ್ಲಿ ರಾಜಧಾನಿಯ ಮಾರುಕಟ್ಟೆಗೆ ದಾಸ್ತಾನು ಬಂದಿದೆ. ನಗರದ ಯಶವಂತಪುರ ಹಾಗೂ ದಾಸರಹಳ್ಳಿ ಎಪಿಎಂಸಿಗೆ ಬರುತ್ತಿದೆ. ಹೀಗಾಗೀ ಈರುಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಸೀಸನ್ ಅಲ್ಲದ ಕಾರಣ ಕಳೆದ ಒಂದೆರಡು ತಿಂಗಳಿಂದ ಯಶವಂತಪುರ ಮಾರುಕಟ್ಟೆಯ ಈರುಳ್ಳಿ ವಿಭಾಗದಲ್ಲಿ ವಹಿವಾಟು ಕುಸಿತವಾಗಿದೆ. ಏಕಾಏಕಿ ಸೋಮವಾರದಿಂದ ಇಲ್ಲಿಗೆ ದುಪ್ಪಟ್ಟು ಪ್ರಮಾಣದಲ್ಲಿ ಈರುಳ್ಳಿ ಬರುತ್ತಿದ್ದು ಕಡಿಮೆ ಗುಣಮಟ್ಟದ ಹೆಚ್ಚು ಈರುಳ್ಳಿ ಬಂದಿರುವ ಕಾರಣಕ್ಕೆ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದೆ. ಎಪಿಎಂಸಿಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 8-10 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿ ಬೆಲೆ 5-8 ದರದಲ್ಲಿ ಹರಾಜು ಹಾಕಲಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 20 ರೂ. ಗೆ ಮಾರಾಟವಾಗುತ್ತಿದ್ದು ಕಳಪೆ ಈರುಳ್ಳಿಗೆ 10-12 ರೂ. ಮಾತ್ರವೇ ಮಾರಾಟ ಮಾಡಲಾಗುತ್ತಿದೆ. 100 ರೂ.ಗೆ ಏಳು-ಎಂಟು ಕೇಜಿ…
ಲಖನೌ: ಐದು ಬಾರಿ ಐಪಿಎಲ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಸ್ಪೋಟಕ ಬ್ಯಾಟಿಂಗ್ ನಡೆಸಿ ಲಖನೌ ಸೂಪರ್ ಜಯಂಟ್ಸ್ ತಂಡದ 5 ರನ್ ರೋಚಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಮಾರ್ಕಸ್ ಸ್ಟೋಯ್ನಿಸ್ ಅವರನ್ನು ಅಭಿಮಾನಿಗಳು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇಲ್ಲಿನ ಏಕನಾ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಲಖನೌ ಸೂಪರ್ ಜಯಂಟ್ಸ್, ಕೇವಲ 35 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 4ನೇ ವಿಕೆಟ್‌ಗೆ ನಾಯಕ ಕೃಣಾಲ್ ಪಾಂಡ್ಯ (49) ಜೊತೆಗೂಡಿದ ಮಾರ್ಕಸ್ ಸ್ಟೋಯ್ನಿಸ್ (89*) 82 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದ್ದರು. ಆ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು. 18ನೇ ಓವರ್‌ನಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಮಾರ್ಕಸ್ ಸ್ಟೋಯ್ನಿಸ್, ಇಂಗ್ಲೆಂಡ್ ವೇಗಿ ಕ್ರಿಸ್ ಜೋರ್ಡನ್‌ಗೆ 24 ರನ್ ಚಚ್ಚುವ ಮೂಲಕ ತಂಡದ ಮೊತ್ತವನ್ನು 177 ರನ್ ಮೊತ್ತವನ್ನು ದಾಟಿಸಿದ್ದರು. ಮಾರ್ಕಸ್ ಸ್ಟೋಯ್ನಿಸ್ ಬ್ಯಾಟಿಂಗ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟಿತ್ತು. ಏಕೆಂದರೆ…
ಈ ಹಿಂದೆ ಕೇರಳದ ಉರಗಪ್ರಿಯ ಸುರೇಶ ಹಾವಿಗೆ ಮುತ್ತು ಕೊಟ್ಟ ವಿಡಿಯೋ ನೋಡಿದ ನೆನಪಿರಬಹುದು. ಇದೀಗ ನಿಕ್ ಎಂಬಾತ ಕೆರೆದಂಡೆಯ ಮೇಲೆ ಕುಳಿತು ಕಾಳಿಂಗ ಸರ್ಪದ ತಲೆಗೆ ಮುತ್ತಿಟ್ಟು ಸುದ್ದಿಯಲ್ಲಿದ್ದಾನೆ. ದೂರದಿಂದ ಹಾವನ್ನು ಕಂಡರೆ ಅಥವಾ ನೆನಪಿಸಿಕೊಂಡರೆ ಬೆಚ್ಚಿಬೀಳುವ ಅನೇಕರಿಗೆ ಈ ಮುತ್ತುಕೊಡುವ ಪರಿ ಕನಸಿನಲ್ಲಿಯೂ ಕಾಡಬಹುದೇ? ನೋಡಿ ಈ ವಿಡಿಯೋ. Video Player ಈ ವಿಡಿಯೋ ಅನ್ನು ಕಳೆದವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಕಾಳಿಂಗ ಸರ್ಪ ಬರೋಬ್ಬರಿ 12 ಅಡಿ ಉದ್ದ ಇದೆ. ನಿಧಾನವಾಗಿ ಚಲಿಸುವ ಅದನ್ನು ನಿಕ್ ಹಿಡಿಯುತ್ತಾನೆ. ಅದು ಹೆಡೆಯೆತ್ತಿ ನಿಲ್ಲುತ್ತದೆ. ಅದು ಅವನಿಗೆ ಬೆನ್ನು ಮಾಡಿದಾಗ ಮೆಲ್ಲಗೆ ಅವ ಅದರ ತಲೆಗೆ ಮುತ್ತನ್ನು ಕೊಡುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಬೆಚ್ಚಿದ್ದಾರೆ. ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮೇ 31ರಂದು ಅಮೆರಿಕಕ್ಕೆ (America) ಭೇಟಿ ನೀಡಲಿದ್ದು, 10 ದಿನಗಳ ಕಾಲ ದೇಶಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ರಾಹುಲ್ ಗಾಂಧಿ ಜೂನ್ 4 ರಂದು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಸುಮಾರು 5,000 ಅನುವಾಸಿ ಭಾರತೀಯರ (NRI) ಉದ್ದೇಶಿಸಿ ಮಾತನಾಡಲಿದ್ದಾರೆ. ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳಲ್ಲಿ ಚರ್ಚೆ ಮತ್ತು ಭಾಷಣ ನಡೆಸಲಿದ್ದಾರೆ. ಮಾತ್ರವಲ್ಲದೆ ರಾಜಕಾರಣಿಗಳು ಹಾಗೂ ಉದ್ಯಮಿಗಳನ್ನೂ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಕಳೆದ ಬಾರಿ ರಾಹುಲ್ ಗಾಂಧಿ ಲಂಡನ್‌ಗೆ ತೆರಳಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ನೀಡಿದ್ದರು. ಆ ಸಮಯ ಅವರು ಭಾರತ ಸರ್ಕಾರವನ್ನು ಟೀಕಿಸಿದ್ದರು. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಪ್ರಜಾಪ್ರಭುತ್ವ ಒತ್ತಡದಲ್ಲಿ ಹಾಗೂ ಆಕ್ರಮಣದಲ್ಲಿದೆ ಎಂಬುದು ಸಾಕಷ್ಟು ಸುದ್ದಿಯಲ್ಲಿದೆ. ನಾನು ಭಾರತದಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದು, ಆ ಜಾಗದಲ್ಲಿ ಸರಿ ದಾರಿಗೆ ತರುವಂತಹ ಕೆಲಸ ಮಾಡುತ್ತಿದ್ದೇನೆ ಎಂದಿದ್ದರು. ಪ್ರಜಾಸತ್ತಾತ್ಮಕ ಸಂಸತ್ತಿಗೆ ಅಗತ್ಯವಿರುವ ಸಾಂಸ್ಥಿಕ ಚೌಕಟ್ಟು, ಮುಕ್ತ ಪತ್ರಿಕಾ,…
ಬೀಜಿಂಗ್: ಹಿಂದೂ ಮಹಾಸಾಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚೀನಾದ ಮೀನುಗಾರಿಕಾ ದೋಣಿ ಮುಳುಗಿದ್ದು ಅದರಲ್ಲಿದ್ದ ಎಲ್ಲಾ 39 ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಮಾಧ್ಯಮ ವರದಿ ಮಾಡಿದೆ. ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಮುಳುಗಡೆ ಸಂಭವಿಸಿದ್ದು ದೋಣಿಯಲ್ಲಿದ್ದ ಚೀನಾದ 17, ಇಂಡೋನೇಷ್ಯಾದ 17 ಮತ್ತು ಫಿಲಿಪೈನ್ಸ್‍ನ ಐವರು ನಾಪತ್ತೆಯಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಚೀನಾದ ನಾಯಕ ಕ್ಸಿ ಜಿನ್‍ಪಿಂಗ್ ಮತ್ತು ಪ್ರಧಾನಿ ಲಿ ಕಿಯಾಂಗ್ ಅವರು ವಿದೇಶದಲ್ಲಿರುವ ಚೀನೀ ರಾಜತಾಂತ್ರಿಕರಿಗೆ, ಹಾಗೆಯೇ ಕೃಷಿ ಮತ್ತು ಸಾರಿಗೆ ಸಚಿವಾಲಯಗಳಿಗೆ ಬದುಕುಳಿದವರ ಹುಡುಕಾಟದಲ್ಲಿ ಸಹಾಯ ಮಾಡಲು ಮನವಿ ಮಾಡಿದ್ದಾರೆ. ಲುಪೆಂಗ್ಲೈಯುವಾನ್ಯು ಎಂಬ ದೋಣಿ ಶಾಂಡೊಂಗ್‍ನ ಪೂರ್ವ ಪ್ರಾಂತ್ಯದಲ್ಲಿ ನೆಲೆಗೊಂಡಿತ್ತು ಇದನ್ನು ಪೆಂಗ್ಲೈಯಿಂಗ್ಯು ಕಂ. ಲಿಮಿಟೆಡ್ ನಿರ್ವಹಿಸುತ್ತಿತ್ತು ಎಂದು ತಿಳಿಸಲಾಗಿದೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.