ಸಿದ್ದರಾಮಯ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ಭೇಟಿ ಮಾಡಿದ್ದಾರೆ. ನವದೆಹಲಿಯ ಜನ್ಪತ್ನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್ ಜತೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಹೆಸರು ಬಹುತೇಕ ಪಕ್ಕಾ ಆಗಿದೆ. ಕಾಂಗ್ರೆಸ್ ಹೈಕಮಾಂಡ್ನಿಂದ ಅಧಿಕೃತ ಘೋಷಣೆ ಬಾಕಿ ಇದ್ದು ರಾಹುಲ್ ಗಾಂಧಿ ಭೇಟಿ ಬಳಿಕ ಅಧಿಕೃತ ಘೋಷಣೆ ಸಾಧ್ಯತೆ. ರಾಹುಲ್ ಗಾಂಧಿಯವರು ಸಿದ್ದರಾಮಯ್ಯ, ಡಿಕೆಶಿ ಜತೆ ಮಾತುಕತೆ ನಡೆಸಿ ಚರ್ಚೆ ಬಳಿಕ ಘೋಷಣೆ ಸಾಧ್ಯತೆ.
Author: Prajatv Kannada
ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ, ಡಿಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಅಧ್ಯಕ್ಷ ಹುದ್ದೆ ಜೊತೆ ಎರಡು ಪ್ರಮುಖ ಖಾತೆಗಳಿಗೆ ಡಿಕೆಶಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಇಂಧನ ಮತ್ತು ನೀರಾವರಿ ಮೇಲೆ ಡಿಕೆ ಶಿವಕುಮಾರ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ನವದೆಹಲಿ: ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವಿನ ಕುರ್ಚಿ ಕದನ ಬಹುತೇಕ ಅಂತ್ಯವಾಗಿದ್ದು, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ (Chief Minister) ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾ ಗಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ, ಡಿಕೆ ಶಿವಕುಮಾರ್ ಅವರಿಗೆ ಪ್ರಬಲವಾದ ಎರಡು ಖಾತೆಗಳೊಂದಿಗೆ ಡಿಸಿಎಂ ಸ್ಥಾನ ನೀಡಲು ಎಐಸಿಸಿ ಮುಂದಾಗಿದೆ. ಅಷ್ಟೇ ಅಲ್ಲದೇ ಕೆಪಿಸಿಸಿ ಅಧ್ಯಕ್ಷರಾಗಿಯೇ ಡಿಕೆ ಶಿವಕುಮಾರ್ ಅವರೇ ಮುಂದುವರಿಯುವ ಸಾಧ್ಯತೆಯಿದೆ. ಸಂಧಾನ ಸೂತ್ರ ಏನು? ಹಟಕ್ಕೆ ಬಿದ್ದರೆ ಸಿಎಂ ಅವಕಾಶ ಬೇರೆಯವರ ಪಾಲಾಗುವ ಸಾಧ್ಯತೆ ಇರುವುದರಿಂದ ರಾಜಿ ಸಂಧಾನ ಮಾಡಿಕೊಂಡರೆ ಇಬ್ಬರಿಗೂ ಲಾಭ ಎಂಬದುನ್ನು ಹೈಕಮಾಂಡ್ ನಾಯಕರು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದಾರೆ. ಪೂರ್ಣಾವಧಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸಿದ್ದರಾಮಯ್ಯ 50:50 ಸೂತ್ರದ ಅಧಿಕಾರ ಹಂಚಿಕೆಗೆ ಸಿದ್ದರಿದ್ದಾರೆ. 2 ವರ್ಷದ ಅವಧಿಗೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದು ಮತ್ತು ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸುವುದು. ಲೋಕಸಭಾ ಚುನಾವಣೆಯ ನಂತರವೂ ಒಂದು ವರ್ಷ ಅವರನ್ನು ಮುಂದುವರಿಸಿ…
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಯೂಸೂಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬುಗೆ (KGF Babu) ಇಡಿ ಸಂಕಷ್ಟ ಎದುರಾಗಿದೆ. ವಿಚಾರಣೆಗೆ ಹಾಜರಾಗುವಂತೆ ಕೆಜಿಎಫ್ ಬಾಬುಗೆ ಇಡಿ ನೋಟಿಸ್ ನೀಡಿದ್ದು, ಇಂದುಶ್ರ(ಮೇ 17) ದೆಹಲಿಯ ಇಡಿ ಕಚೇರಿಯಲ್ಲಿ ಕೆಜಿಎಫ್ ಬಾಬು ವಿಚಾರಣೆಗೆ ಹಾಜರಾಗಲಿದ್ದಾರೆ. ಕೆಜಿಎಫ್ ಬಾಬು ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಗೆ ಕೆಲ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬಾಬು ಒಡೆತನದ ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲರ್ಸ್, ಉಮ್ರಾ ರಿಯಲ್ ಎಸ್ಟೇಟ್ ಕಂಪನಿಗಳ ಮೇಲೆ 20ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡವು ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದ್ದರು. ಬಾಬು ಅವರ ಹಲವು ಕಡೆಗಳ ನೂರಾರು ಕೋಟಿ ರೂ. ಮೌಲ್ಯದ ಜಮೀನು, ನಿವೇಶನ, ಅಪಾರ್ಟ್‌ಮೆಂಟ್, ಕಟ್ಟಡಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಇಡಿ ಕೈ ಸೇರಿದೆ. ಮೊದಲ ಪತ್ನಿ ರುಕ್ಸಾನ, ಎರಡನೆ ಪತ್ನಿ ಶಾಜಿಯಾ, ಮಗಳು ಉಮ್ರಾ ಫರೀಫ್, ಮಗ ಅಫ್ನಾನ್ ಸೇರಿ ಕುಟುಂಬಸ್ಥರ ಹೆಸರಿನಲ್ಲಿ…
ಬೆಂಗಳೂರು: ಬಿ.ಎಸ್ ಯಡಿಯೂರಪ್ಪ (BS Yediyurappa) ರನ್ನು ಸೈಡ್ ಲೈನ್ ಮಾಡಿದ್ರು. ಕಣ್ಣೀರು ಹಾಕಿ ರಾಜೀನಾಮೆ ಕೊಟ್ಟು ಬಂದಾಗಿನಿಂದ ಈ ಇಂಪ್ಯಾಕ್ಟ್ ಆಯ್ತು. ಪಾರ್ಟಿ ಸೂಚನೆ ಮೇರೆಗೆ ಯಡಿಯೂರಪ್ಪ ನನ್ನ ವಿರುದ್ಧ ಮಾತಾಡಿದ್ದಾರೆ. ಯಾರಿಗೆ ಲೀಡರ್ ಶಿಪ್ ಕೊಟ್ಟಿದ್ದೇವೆ ಅನ್ನೋದು ಮುಖ್ಯ. ಯಡಿಯೂರಪ್ಪರನ್ನ ಎರಡು ವರ್ಷ ಇಳಿಸಬಾರದಿತ್ತು. ಯಾಕೆ ಯಡಿಯೂರಪ್ಪ ಅವರನ್ನು ಇಳಿಸಿದ್ರು ಹೈಕಮಾಂಡ್ ಹೇಳಲಿ. ಇದನ್ನ ನಾನು ಕೇಂದ್ರ ನಾಯಕರಿಗೂ ಹೇಳಿದ್ದೆ ಎಂದು ಜಗದೀಶ್ ಶೆಟ್ಟರ್ (Jagadeesh Shettar) ಹೇಳಿದ್ರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಕಾಂಗ್ರೆಸ್ (Congress) ಗೆ ಬಂದ ಮೇಲೆ ದೊಡ್ಡ ಇಂಪ್ಯಾಕ್ಟ್ ಆಗಿದೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಬ್ಯಾಂಕ್ ಕಾಂಗ್ರೆಸ್ ಗೆ ಬೆಂಬಲ ಕೊಟ್ಟಿದೆ. ರಿಸಲ್ಟ್ ನೋಡಿದ್ರೆ ನಿಮಗೆ ಅದು ಗೊತ್ತಾಗುತ್ತೆ. ಬಿಜೆಪಿಯಲ್ಲಿನ ಬೆಳವಣಿಗೆಗೆ ಬಿಜೆಪಿಗೆ ಹೀಗೆ ಆಗಿದೆ. ಒಂದು ಶಾಸಕ ಸ್ಥಾನಕ್ಕೆ ನನಗೆ ಮಾಡಿದ್ದು ಸರಿಯಲ್ಲ. ಒಬ್ಬರ ಮಾತು ಕೇಳಿ ಲಿಂಗಾಯತರಿಗೆ ಕಿರಿಕಿರಿ ಕೊಟ್ಟರು. ಇದನ್ನ ಲಿಂಗಾಯತರು ಸಹಿಸಲಿಲ್ಲ ಎಂದು ಎಚ್ಚರಿಕೆ ನೀಡಿದರು.…
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ(Karnataka Assembly Elections 2023 Result) ಮೇ.13 ರಂದು ಹೊರಬಿದ್ದಿದ್ದು, ಕಾಂಗ್ರೆಸ್(congress) ಪಕ್ಷ ಸ್ಪಷ್ಟ ಬಹುಮತದಿಂದ ಗೆದ್ದು ಬೀಗಿದೆ. ಇತ್ತ ಬಿಜೆಪಿ(BJP)ಯ ಘಟಾನುಘಟಿ ನಾಯಕರು ಸೋಲುಂಡಿದ್ದಾರೆ. ಅದರಂತೆ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿದ್ದ ವಿ ಸೋಮಣ್ಣ(V Somanna) ಅವರು ಹೀನಾಯ ಸೋಲು ಕಂಡಿದ್ದಾರೆ. ಈ ಕುರಿತು ಮಾನತನಾಡಿರುವ ಅವರು ‘ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ. ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ. ಒಂದೊಂದು ಬಾರಿ ಒಳ ಏಟುಗಳು ಆದಾಗ ಇದೆಲ್ಲಾ ಆಗುತ್ತದೆ. ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದಿದ್ದಾರೆ. ಪಕ್ಷ ನನಗೆ ಟಾಸ್ಕ್ ಕೊಟ್ಟ ಮೇಲೆ ತಿರುಗಿಯೂ ನೋಡಲಿಲ್ಲ ಬೆಂಗಳೂರು ನಗರದಲ್ಲಿ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ‘ಚುನಾವಣೆ ಸಂದರ್ಭದಲ್ಲಿ ಪ್ರತಿದಿನ ಬಿ ಎಸ್ ಯಡಿಯೂರಪ್ಪರವರು ಕರೆ ಮಾಡುತ್ತಿದ್ದರು. ಆದರೆ, ಚುನಾವಣೆ ಮುಗಿದ ಇದುವರೆಗೂ ನನಗೆ ಕರೆ ಮಾಡಿಲ್ಲ. ಚಿನ್ನದಂಥ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ. ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಜೊತೆಗೆ ಪಕ್ಷ ಹೇಳಿದ್ದನ್ನು ನಾನು ಮಾಡದೆ ಇನ್ಯಾರು ಮಾಡಲು ಆಗುತ್ತೆ?, ಪಕ್ಷ ನನಗೆ…
ದಿಸ್ಪುರ: ಕಂಟೈನರ್ ಟ್ರಕ್‌ಗೆ (Container Truck) ಕಾರು ಡಿಕ್ಕಿ ಹೊಡೆದ ಪರಿಣಾಮ ಲೇಡಿ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಸ್ಸಾಂನ ಮಹಿಳಾ ಸಬ್ ಇನ್ಸ್ಪೆಕ್ಟರ್ (SI) ಜುನ್ಮೋನಿ ರಾಭಾ (Junmoni Rabha) ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದಲ್ಲಿ ಅಪಘಾತ (Accident) ಸಂಭವಿಸಿದ್ದು, ಹಿಂದಿ ಪೊಲೀಸ್ ಸಿನಿಮಾಗಳ ನಂತರ ‘ಲೇಡಿ ಸಿಂಗಂ’ ಹಾಗೂ ‘ದಬಂಗ್ ಕಾಪ್’ ಎಂಬ ಹೆಸರುಗಳಿಂದ ಜನಪ್ರಿಯವಾಗಿರುವ ಜುನ್ಮೋನಿ ರಾಭಾ (30) ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ವೇಳೆ ರಾಭಾ ತಮ್ಮ ಖಾಸಗಿ ಕಾರಿನಲ್ಲಿ ಏಕಂಗಿಯಾಗಿ ಹೋಗುತ್ತಿದ್ದು, ಪೊಲೀಸ್ ಸಮವಸ್ತ್ರ ಧರಿಸಿರಲಿಲ್ಲ. ನಸುಕಿನ ಜಾವ 2:30ರ ಸುಮಾರಿಗೆ ಮಾಹಿತಿ ತಿಳಿದ ಪೋಲಿಸ್ ತಂಡವು ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸಿ ರಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ರಾಭಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಮೊರಿಕೊಲಾಂಗ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವರಿಯಾಗಿದ್ದ ರಾಭಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ…
ಗದಗ :ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಹುಲಿಗೆಮ್ಮ ದೇವಿಯ ಜಾತ್ರೆಯು ಅದ್ಧೂರಿಯಾಗಿ ನೆರವೇರಿತು. ಪ್ರತಿವರ್ಷ ಆಗಿಹುಣ್ಣಿಮೆ ಬಳಿಕ 9 ನೇ ದಿನಕ್ಕೆ ಶ್ರೀ ಆದಿಶಕ್ತಿ ಹುಲಿಗೆಮ್ಮ ದೇವಿ ಜಾತ್ರೆಯನ್ನ ಮಾಡ್ತಾರೆ. ಮುಖ್ಯವಾಗಿ ಈ ಜಾತ್ರೆಯಲ್ಲಿ ಗ್ರಾಮದ ಯಾರೇ ಇರಲಿ, ಎಷ್ಟೇ ವರ್ಷದಿಂದ ಬೇರೆ ಊರಲ್ಲಿ ನೆಲೆಸಿರಲಿ ಜಾತ್ರೆಗೆ ಬಂದು ಹೋಗಲೇಬೇಕು ಎಂಬ ನಂಬಿಕೆಯ ಭಕ್ತಿ ಇವರಲ್ಲಿದೆ. ಹೀಗಾಗಿ ಗ್ರಾಮದ ಹೆಣ್ಮಕ್ಕಳು, ನೌಕರಸ್ಥರು, ಬೇರೆ ಊರಲ್ಲಿ ನೆಲೆಸಿರೋವ್ರು, ಮದುವೆಯಾಗಿ ಗಂಡನ ಮನೆಗೆ ಹೋದವರು ಸೇರಿದಂತೆ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಹುಲಿಗೆಮ್ಮ ದೇವಿ ಭಕ್ತಾದಿಗಳು ಎಲ್ಲರೂ ಈ ಜಾತ್ರೆಗೆ ಬಂದು ಹೋಗ್ತಾರೆ. ಇನ್ನು ಶ್ರೀ ಆದಿಶಕ್ತಿ ಹುಲಿಗೆಮ್ಮ ದೇವಿ ಜಾತ್ರೆಯು ಪವಾಡಗಳಿಗೆ ಸಾಕ್ಷಿಯಾಗಿದೆ. ಬಾಳಿದಂಡಿಗೆ, ಅಗ್ನಿಕುಂಡ ಹಾಯುವುದು, ಕುದಿಯುವ ಪಾಯಿಸವನ್ನ ಪೂಜಾರಿಗಳು ಕೈ ಹಾಕಿ ತೆಗೆದು ದೇವರಿಗೆ ನೈವೇದ್ಯ ಮಾಡುವಂತಹ ಪವಾಡಗಳು ನಡೆದು ಎಲ್ಲರ ಗಮನ ಸೆಳೆದಿವೆ. ವಿಶೇಷ ಅಂದ್ರೆ ಒಂದು ಮಣ್ಣಿನ ಗಡಿಗೆಯಲ್ಲಿ ಕುದಿಯುವ ಪಾಯಿಸವನ್ನ ಐದಾರು…
ಬೆಂಗಳೂರು: ಸಮ್ಮಿಶ್ರ ಸರ್ಕಾರದ (Coalition Government) ಪತನದಲ್ಲಿ ಸಿದ್ದರಾಮಯ್ಯ ಪಾತ್ರ ಕುರಿತು ಮಾಜಿ ಸಚಿವ ಡಾ.ಕೆ.ಸುಧಾಕರ್ (Dr.K.Sudhakar) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಸಮ್ಮಿಶ್ರ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ (Siddaramaiah) ಪಾತ್ರ ನಿರಾಕರಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ (Tweet) ಮಾಡಿದ್ದಾರೆ. ಟ್ವೀಟ್‌ನಲ್ಲಿ ಏನಿದೆ? 2018ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಮಾನ್ಯ ಸಿದ್ದರಾಮಯ್ಯನವರ ಬಳಿ ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನು ನಡೆಯುತ್ತಿಲ್ಲ, ನನ್ನ ಕ್ಷೇತ್ರದ, ನನ್ನ ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು. 2019ರ ಲೋಕಸಭೆ ಚುನಾವಣೆವರೆಗೂ ಸಹಿಸಿಕೊಳ್ಳಿ, ಲೋಕಸಭೆ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಮಾನ್ಯ ಕುಮಾರಸ್ವಾಮಿ ಅವರ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು. ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನ, ಮುಖಂಡರನ್ನ ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ…
ಮಂಡ್ಯ: ಪರಾಜಿತ ಅಭ್ಯರ್ಥಿ ಮುನಿರಾಜು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವಂತೆ ದೇವರ ಮೊರೆ ಹೋಗಿದ್ದಾರೆ. ಹೌದು ದೇವರ ಮೊರೆ ಹೋಗಿರುವ ಅವರು, “ನಾನು ತಪ್ಪು, ಮೋಸ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ. ಇಲ್ಲ ತನ್ನ ವಿರುದ್ದ ಅಪಪ್ರಚಾರ ಮಾಡಿದವರ ವಂಶ ನಿರ್ನಾಮವಾಗಲಿ” ಎಂದು ಅಪ್ರಚಾರ ಮಾಡಿದವರ ವಿರುದ್ಧ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಿಗೆ ದೂರು ನೀಡಿದ್ದಾರೆ. ಮಳವಳ್ಳಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ದೇವರ ಮುಂದೆ ಕರ್ಫೂರ ಹಚ್ಚಿ ಶಫಥಗೈದಿದ್ದಾರೆ. ಮಳವಳ್ಳಿ ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಚುನಾವಣೆಗೂ ಮೂರು ದಿನಗಳ ಕಾಲ ನಾಪತ್ತೆ ಆಗಿದ್ದರು. ಕೊನೆ ಕ್ಷಣದಲ್ಲಿ ಕ್ಷೇತ್ರದ ಜನರ ಕೈಗೆ ಸಿಗಲಿಲ್ಲ ಎಂದು ಕೆಲ ನಾಯಕರು ಆರೋಪಿಸಿದ್ದರು. ಅದಲ್ಲದೇ ಬೇರೆ ಪಕ್ಷಗಳೊಂದಿಗೆ ಮುನಿರಾಜು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೂ ಆರೋಪ ಹೊರಿಸಲಾಗಿದೆ. ಇತ್ತಬದಿಯಲ್ಲಿ ಕೆಲವರು ಅಪಪ್ರಚಾರ ಮಾಡಿದ್ದ ಬೆನ್ನಲ್ಲೇ ಮುನಿರಾಜು ಸೋಲು ಕಂಡಿದ್ದರು. ಬಿಜೆಪಿ ಅಭ್ಯರ್ಥಿ ಮುನಿರಾಜು, ಕೇವಲ 24 ಸಾವಿರ ಮತಗಳಿಸಲು ಶಕ್ತವಾಗಿದ್ದರು. ಇದೀಗ ಅಪಪ್ರಚಾರದ ವಿರುದ್ದ ಸಿಡಿದೆದ್ದಿರುವ…