ಬೆಂಗಳೂರು: ನಗರ್ತಪೇಟೆಯ ಜ್ಯೂವೆಲ್ಲರಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿರುವ ಘಟನೆ ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಮೂಲದ ವಿಷ್ಣು ಸಾವಂತ್ ಸಾವಿಗೀಡಾದ. ವ್ಯಕ್ತಿ. ಈಕೆ ಪತ್ನಿ ವೈಜಯಂತಿ ಎಂಬುವರಿಗೆ ಸುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಮಧ್ಯಾಹ್ನ ಅವಘಡ ಸಂಭವಿಸಿದೆ.ಅಂಬಿಕಾ ರಿಫೈನರಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರ ಸೋನಿ ಎಂಬುವರು ನೀಡಿದ ದೂರಿನ ಮೇರೆಗೆ ಶಾಪ್ ಮಾಲೀಕರಾದ ರಮೇಶ್ ಕೊಠಾರಿ, ಮಹೇಶ್ ಕೊಠಾರಿ, ಕಟ್ಟಡ ಮಾಲೀಕರು ಸೇರಿ ಒಟ್ಟು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಳೆದೊಂದು ಒಂದು ವರ್ಷಗಳಿಂದ ನಗರ್ತಪೇಟೆಯ ಅಂಬಿಕಾ ರೀಫೈನರಿ ಶಾಪ್ ನಲ್ಲಿ ದಂಪತಿ ಚಿನ್ನಾಭರಣ ಕರಗಿಸುವ ಕೆಲಸ ಮಾಡಿಕೊಂಡು ಬಾಡಿಗೆವೊಂದರಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ಹೆಂಡತಿಯು ಊಟದ ಬಾಕ್ಸ್ ತೆಗೆದುಕೊಂಡು ಬಂದಾಗ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡಿದೆ. ಪಕ್ಕದಲ್ಲೇ ಇದ್ದ ದಂಪತಿಗೆ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ…
Author: Prajatv Kannada
ಬೆಂಗಳೂರು: ಆದಾಯಕ್ಕೂ ಹೆಚ್ಚು ಆಸ್ತಿ ಗಳಿಸಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಕೆ.ಆರ್. ಪುರಂ ಕುಬೇರ ತಹಶೀಲ್ದಾರ್ ಅಜಿತ್ ರೈ ಅವರನ್ನು 7 ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ನ್ಯಾಯಾಧೀಶ ರ ಮುಂದೆ ಅಧಿಕಾರಿಗಳು ಹಾಜರುಪಡಿಸಿದ್ದರು. ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾ. ವಿ.ಶ್ರೀಕಾಂತ್ ಅವರು ಈ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಜುಲೈ 6 ಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚನೆ ನೀಡಿದ್ದಾರೆ. ಭ್ರಷ್ಟಾಚಾರ ಆರೋಪದಡಿ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸಹಕಾರನಗರದ ನಿವಾಸ ಸೇರಿ 12 ಕಡೆ ದಾಳಿ ಮಾಡಿ ಪರಿಶೀಲನೆ ಮಾಡಿದ್ದರು. ಪರಿಶೀಲನೆ ವೇಳೆ 40 ಲಕ್ಷ ರೂ. ನಗದು, ಕೋಟ್ಯಂತರ ಮೌಲ್ಯದ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿತ್ತು
ಲಂಡನ್: ಸದ್ಯ ಇಂಗ್ಲೆಂಡ್ (England) ವಿರುದ್ಧ ಟೆಸ್ಟ್ ಸರಣಿಯನ್ನಾಡುತ್ತಿರುವ ಆಸ್ಟ್ರೇಲಿಯಾ ತಂಡದ ಉಪನಾಯಕ ಸ್ಟೀವ್ ಸ್ಮಿತ್ (Steve Smith) ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್ ಪೂರೈಸಿ, ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ (Test Cricket) ವೇಗವಾಗಿ 9 ಸಾವಿರ ರನ್ ಪೂರೈಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಜೊತೆಗೆ 176 ಇನ್ನಿಂಗ್ಸ್‌ಗಳಲ್ಲಿ 9 ಸಾವಿರ ರನ್ ಪೂರೈಸಿದ ರಾಹುಲ್ ದ್ರಾವಿಡ್ (Rahul Dravid) ಅವರ ದಾಖಲೆಯನ್ನ ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ ಆ್ಯಶಸ್ ಟೂರ್ನಿಯಲ್ಲಿ (Ashes Tourney) 2ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸ್ಟೀವ್ ಸ್ಮಿತ್ 95 ರನ್ (162 ಎಸೆತ) ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಬುಧವಾರ ಲಂಡನ್ನಿನ ಲಾರ್ಡ್ಸ್ ಮೈದಾನದಲ್ಲಿ ಆರಂಭವಾದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸೀಸ್ ಪರ ಸ್ಮಿತ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ, 2ನೇ ದಿನದಲ್ಲಿ ಕ್ರೀಸ್ ಮುಂದುವರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳನ್ನು ದಾಖಲಿಸಿದ ಆಸ್ಟ್ರೇಲಿಯಾದ…
ಬೆಂಗಳೂರು: ಜೂನ್ 27 ರಂದು ಐಸಿಸಿ ಏಕದಿನ ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 13ನೇ ಆವೃತ್ತಿಯ ವಿಶ್ವ ಕಪ್ ಟೂರ್ನಿಯಲ್ಲಿ 48 ಪಂದ್ಯಗಳಿಗೆ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. ಹೀಗಾಗಿ ಭಾರತಕ್ಕೆ ಬರಲು ಸಜ್ಜಾಗಿರುವ ಪಾಕಿಸ್ತಾನದವರಿಗೆ, ಹೆದರಬೇಡಿ, ಟೈಟ್ ಸೆಕ್ಯುರಿಟಿ ಕೊಡ್ತೇವೆ ಎಂದು ಕೋಲ್ಕೊತಾ ಕ್ರಿಕೆಟ್ ಸಂಸ್ಥೆಯು ಪಾಕಿಸ್ತಾನಕ್ಕೆ ಭರವಸೆ ನೀಡಿದ್ದು ಆಟಗಾರರಿಗೆ ಎಲ್ಲ ರೀತಿಯ ಭದ್ರತೆಗಳನ್ನು ಒದಗಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ. ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಬಿಗಿ ಭದ್ರತಾ ವ್ಯವಸ್ಥೆಗಳ ಭರವಸೆ ಕೊಟ್ಟಿದ್ದಾರೆ.
ಇತ್ತೀಚೆಗೆ ಸಿನಿಮಾ ರಂಗದ ಮೇಲೆ ಸಿನಿ ಅಭಿಮಾನಿಗಳು ಬೇಸರಿಕೊಳ್ಳುತ್ತಿದ್ದಾರೆ. ಅಸಹ್ಯ ಎನಿಸುವಂತಹ ಅನೇಕ ಸಂಗತಿಗಳು ಚಿತ್ರರಂಗದಲ್ಲಿ ನಡೆಯುತ್ತಿದ್ದು ಇದರಿಂದ ಜನ ಸಿನಿಮಾ ನೋಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಅತ್ತಂದೆ ಘಟನೆಯೊಂದು ತೆಲುಗು ಚಿತ್ರ್ಯೋದ್ಯಮದಲ್ಲಿ ನಡೆದಿದೆ. ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು ಈಗಾಗಲೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಸಹೋದರ ವಿಜಯ್ ದೇವರಕೊಂಡರಂತೆ ಆನಂದ್ ದೇವರಕೊಂಡಾಗೆ ಇನ್ನೂ ಯಶಸ್ಸು ಸಿಕ್ಕಿಲ್ಲ. ಈ ಮಧ್ಯೆ ಆನಂದ್ ಬೇಬಿ ಸಿನಿಮಾದಲ್ಲಿ ನಟಿಸುತ್ತಿದ್ದು ಸದ್ಯ ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ವಿವಾದ ಹುಟ್ಟುಹಾಕಿದೆ. ಬೇಬಿ ಸಿನಿಮಾದ ಪೋಸ್ಟರ್‌ನಲ್ಲಿ ನಾಯಕನ ನಡು ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಸಾಮಾನ್ಯವಾಗಿ ಮಧ್ಯದ ಬೆರಳನ್ನು ತೋರಿಸುವುದು ಕೆಟ್ಟ ಸೂಚನೆಯನ್ನು ತೋರಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನಿನಲ್ಲಿ ಇದಕ್ಕೂ ಶಿಕ್ಷೆಯಿದೆ. ಇಷ್ಟೆಲ್ಲ ಗೊತ್ತಿದ್ದರೂ, ನಾಯಕಿಯ ಫೋಟೋವನ್ನು ಎಡಿಟ್ ಮಾಡಿ, ಮಧ್ಯದ ಬೆರಳ ಮೇಲೆ…
ಟಾಲಿವುಡ್ ನಟಿ ಲಾವಣ್ಯ ತ್ರಿಪಾಠಿ ಸದ್ಯದಲ್ಲೇ ವರುಣ್ ತೇಜ್ ಅವರನ್ನು ಮದುವೆಯಾಗುವ ಮೂಲಕ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಸೊಸೆಯಾಗಲಿದ್ದಾರೆ. ಸದ್ಯದಲ್ಲೇ ವರುಣ್ ತೇಜ್ ಹಾಗೂ ಲಾವಣ್ಯ ಹಸೆಮಣೆ ಏರುತ್ತಿದ್ದು ಈ ಮಧ್ಯೆ ಲಾವಣ್ಯ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿರುವುದು ವರದಿಯಾಗಿದೆ. ಈ ಸುದ್ದಿ ಕೇಳಿ ನಟಿಯ ಅಭಿಮಾನಿಗಳು ಕಂಗಾಲಾಗಿದ್ದಾರೆ. ಲಾವಣ್ಯ ಮೆಗಾ ಫ್ಯಾಮಿಲಿ ಸೊಸೆಯಾಗುತ್ತಾರೆ ಎನ್ನುವ ವಿಷಯ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಇನ್ನು ಲಾವಣ್ಯ ಹಿನ್ನೆಲೆ ಏನು? ಆಕೆಯ ಜಾತಿ ಏನು? ಆಕೆಯ ಆಸ್ತಿ ಮೌಲ್ಯ ಎಷ್ಟು ಅಂತೆಲ್ಲಾ ಅಂತರ್ಜಾಲದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಆಕೆ ತನಗಿರುವ ವಿಚಿತ್ರ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿದ್ದ ವೀಡಿಯೋವೊಂದು ಇದೀಗ ವೈರಲ್ ಆಗಿದೆ. ಸ್ವತಃ ಲಾವಣ್ಯ ತ್ರಿಪಾಠಿ ತಾವು ಟ್ರಿಪೋಫೋಬಿಯಾದಿಂಧ ಬಳಲುತ್ತಿರುವ ಬಗ್ಗೆ ಮಾತನಾಡಿದ್ದರು. ಚರ್ಮದ ರಂಧ್ರಗಳು, ಜೇನುಗೂಡು, ಕಮಲದ ಕಣ್ಣುಗಳ ರಂಧ್ರಗಳ ಅಥವಾ ಉಬ್ಬುಗಳನ್ನು ಹೊಂದಿರುವ ವಸ್ತುವನ್ನು ನೋಡಲು ಆಕೆ ಪ್ರಜ್ಞಾಪೂರ್ವಕವಾಗಿ ಹೆದರುತ್ತೀನಿ. ಇದರಿಂದ ಸಾಕಷ್ಟು ಬಾರಿ ಸಮಸ್ಯೆ…
ರಾಜಧಾನಿ ಬೆಂಗಳೂರು ಸೇರಿ ರಾಜ್ಯದಾದ್ಯಂತ ಬೆಂಗಳೂರು ಬಾಯ್ಸ್’ ಚಿತ್ರ ಇಂದು ತೆರೆಕಾಣುತ್ತಿದೆ. ರಣಧೀರ’, “ಓಂ’ ಹಾಗೂ “ಎ’ ಸಿನಿಮಾಗಳ ನಾಯಕರ ರೀತಿಯಲ್ಲಿ ಸಚಿನ್ ಚೆಲುವರಾಯ ಸ್ವಾಮಿ, ಅಭಿಷೇಕ್ ದಾಸ್, ರೋಹಿತ್ ಮಿಂಚಿದ್ದಾರೆ. ಇವರ ಜೊತೆ ವೈನಿಧಿ ಜಗದೀಶ್, ಸೋನಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. “ಬೆಂಗಳೂರು ಬಾಯ್ಸ್’ ರೋಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಚಿತ್ರವಾಗಿದ್ದು, ಕಾಲೇಜು ಕಥೆ, ಲವ್ ಸ್ಟೋರಿ, ಸೆಂಟಿಮೆಂಟ್‌ನ ಕಾಂಬಿನೇಷನ್ ಇದರಲ್ಲಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ವಿಕ್ರಮ್, “ಇದು ನಾಲ್ವರು ಹುಡುಗರ ಸುತ್ತ ನಡೆಯುವ ಕಥೆ. ಹೆಸರಿಗೆ ತಕ್ಕಂತೆ ಬೆಂಗಳೂರು ಸಿಟಿಯೇ ಈ ಸಿನಿಮಾದ ಹೈಲೈಟ್. ಜೀವಕ್ಕೆ ಜೀವ ಕೊಡುವಂತಿರುವ ಹುಡ್ರು ನಡುವೆ ಒಂದು ಟ್ವಿಸ್ಟ್ ಬಂದಾಗ ಮುಂದೇನಾಗುತ್ತದೆ ಎಂಬುದು ಸಿನಿಮಾದ ಹೈಲೈಟ್. ಇದು ಪಕ್ಕಾ ಇಂದಿನ ಯೂತ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾವಿದು ಎಂದು ಹೇಳಿದ್ದಾರೆ.
ತಮಿಳು ನಟ ಕಮಲ್ ಹಾಸನ್ ನಿತ್ಯ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ಕಮಲ್ ಹಾಸನ್ ಸದ್ಯ ಇಂಡಿಯನ್ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಚಿತ್ರದ ನಿರ್ದೇಶಕ ಎಸ್ ಶಂಕರ್ ಅವರಿಗೆ ದುಬಾರಿ ವಾಚ್ ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕೆಲಸಕ್ಕೆ ರಾಜೀನಾಮೆ ನೀಡಿರುವ ತಮಿಳು ನಾಡಿನ ಮೊದಲ ಬಸ್ ಚಾಲಕಿಗೆ ಕಾರು ಖರೀದಿಸಲು ಚೆಕ್ ನೀಡಿರುವ ಬೆನ್ನಲ್ಲೇ ಇದೀಗ ನಿರ್ದೇಶಕ ಎಸ್ ಶಂಕರ್ ಅವರಿಗೆ ದುಬಾರಿ ವಾಚ್ ಗಿಫ್ಟ್ ಆಗಿ ನೀಡಿದ್ದಾರೆ. ‘ವಿಕ್ರಮ್’ ಸಿನಿಮಾದ ಸೂಪರ್ ಸಕ್ಸಸ್ ಬಳಿಕ ಕಮಲ್ ಹಾಸನ್ ಶಂಕರ್ ನಿರ್ದೇಶನದ ‘ಇಂಡಿಯನ್ 2’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ರಮ್ ಚಿತ್ರದಂತೆಯೇ ಇಂಡಿಯನ್ 2 ಕೂಡ ಸೂಪರ್ ಸಕ್ಸಸ್ ಕಾಣಬೇಕು ಅಂತಾ ಕಮಲ್ ಹಾಸನ್ ಕೆಲಸದಲ್ಲಿ ನಿರತರಾಗಿದ್ದಾರೆ. ಶಂಕರ್ ಸಾರಥ್ಯದ ಈ ಸಿನಿಮಾ ಸೆಟ್ಟೇರಿ ಅನೇಕ ವರ್ಷಗಳೇ ಆಗಿವೆ. ಅನೇಕ ಅಡೆತಡೆಗಳ ಬಳಿಕ ಇಂಡಿಯಾ-2 ಮುಕ್ತಾಯ…
ವಿಜಯ್ ಪ್ರಸಾದ್ ನಿರ್ದೇಶನದ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್ ನ ತೋತಾಪುರಿ 2 ಸಿನಿಮಾದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಭಿನ್ನ ಕಾಣ್ಸೆಪ್ಟ್ ನ ಪೋಸ್ಟರ್ ಗಳು ಜನರ ಮನ ಗೆದ್ದಿದ್ದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ತೆರೆಗೆ ಬಂದಿದ್ದ ತೋತಾಪುರಿ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಿತ್ತು. ಅದೇ ಜೋಶ್ ನಲ್ಲಿ ಚಿತ್ರತಂಡ ತೋತಾಪುರಿ 2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಚಿತ್ರ ತೆರೆಗೆ ತರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ವಿಭಿನ್ನ ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ. ಬಾಲ ಆಂಜನೇಯ, ಬಾಲ ಕೃಷ್ಣ, ಬಾಲ ಗಣಪ ಹೀಗೆ ಜೋಡಿಯ ಪೋಸ್ಟರ್ ಗಳನ್ನು ನಿರ್ಮಾಪಕ ಕೆ.ಎ ಸುರೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಪೋಸ್ಟರ್ ಕಾನ್ಸೆಪ್ಟ್ ಗೂ ಮತ್ತು ಸಿನಿಮಾಗೂ ಸಂಬಂಧವಿರಬಹುದು ಎನ್ನುವ ರೀತಿಯಲ್ಲಿ ಕುತೂಹಲ ಮೂಡಿಸುತ್ತಿದೆ. ಕೆ.ಎ.ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು,…
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು ಇದೀಗ ಆಸ್ಕರ್ ಜ್ಯೂರಿಯಾಗುವ ಅವಕಾಶವನ್ನು ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್ ಟಿ ಆರ್ ಪಡೆದುಕೊಂಡಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ಕೂಡ ಭಾರತೀಯ ಸಿನಿಮಾಗಳತ್ತ ತಿರುಗಿ ನೋಡುವಂತೆ ಮಾಡಿದ್ದು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ. ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆಸ್ಕರ್ ಟೀಮ್, RRR ತಂಡದ ಸದಸ್ಯರಿಗೆ ಮತ್ತೊಂದು ಗೌರವ ಲಭಿಸಿದೆ. ತಂಡದ ನಾಲ್ವರಿಗೆ ಆಸ್ಕರ್ ಜ್ಯೂರಿ ಸದಸ್ಯರಾಗುವ ಅವಕಾಶ ಸಿಕ್ಕಿದೆ. ಅದರಲ್ಲಿ ರಾಮ್ ಚರಣ್, ಜ್ಯೂ.ಎನ್‌ಟಿಆರ್, ಸಂಗೀತ ನಿರ್ದೇಶಕ ಕೀರವಾಣಿ ಅವರಿಗೆ ಆಸ್ಕರ್ ವಿಜೇತರ…