Author: Prajatv Kannada

ನವದೆಹಲಿ: ಡಿ.ಕೆ ಶಿವಕುಮಾರ್ (DK Shivakumar) ನನ್ನ ಅಣ್ಣ, ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಹಾಗಾಗಿ ಅವರೇ ಸಿಎಂ ಆಗಬೇಕು ಎಂದು ಸಂಸದ ಡಿ.ಕೆ ಸುರೇಶ್ (D.K Suresh) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ನಿರೀಕ್ಷೆ ಪ್ರಕಾರ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು. ಸತತವಾಗಿ 3 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷ ಸಂಕಷ್ಟದಲ್ಲಿ ಇತ್ತು. ಸೋನಿಯಾ ಗಾಂಧಿ (Sonia Gandhi) ಯವರಿಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಯವರಿಗೆ ಮಾತನ್ನ ಕೊಟ್ಟಿದ್ರು. ಆ ಮಾತಿನಂತೆ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ ಎಂದರು. ಮುಂದಿನ ತೀರ್ಮಾನ ಪಕ್ಷದ ವರಿಷ್ಟರು ತೆಗೆದುಕೊಳ್ಳುತ್ತಾರೆ. ಒಟ್ಟಾರೆ ನಮ್ಮ ಜವಾಬ್ದಾರಿ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದಾಗಿತ್ತು. ಆ ಕೆಲಸವನ್ನು ಸಂಕಷ್ಟ ಸಮಯದಲ್ಲೂ ಸಹ ನಾವು ಮಾಡಿದ್ದೇವೆ ಎಂದು ಹೇಳಿದರು.

Read More

ಕಂಪ್ಲಿ: ತಿರುಪತಿಗೆ ಹೋಗಿ ಹಿಂತಿರುಗುವ ವೇಳೆ ಕ್ರೂಸರ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿ ಕಂಪ್ಲಿ ಪಟ್ಟಣದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಆಂದ್ರಪ್ರದೇಶದ ವೈಎಸ್‌ಆರ್ ಜಿಲ್ಲೆಯ ಕೊಂಡಾಪುರ ಮಂಡಲದ ಏಟೂರು ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಕ್ರೂಸರ್‌ನಲ್ಲಿದ್ದ 17ಜನರಲ್ಲಿ ಕಂಪ್ಲಿಯ ಮಹಿಳೆ ಸೇರಿ ಏಳು ಜನ ಮೃತಪಟ್ಟಿದ್ದಾರೆ. ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಇವರ ಪತ್ನಿ ಲಕ್ಷಿ (40) ಸ್ಥಳದಲ್ಲಿಯೇ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಮಕ್ಕಳಾದ ಮೇಘನಾರೆಡ್ಡಿ(19), ಶಿಲ್ಪಾರೆಡ್ಡಿ (17) ಗಂಭೀರವಾಗಿ ಗಾಯಗೊಂಡಿದ್ದು ಅನಂತಪುರದ ಕೀಮ್ಸ್ ಸವೇರಾ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಮೃತಳ ಅಂತ್ಯಕ್ರಿಯೆ ವೈಎಸ್‌ಆರ್ ಜಿಲ್ಲೆಯ ಜಮ್ಮಲಮಡುಗು ಪಟ್ಟಣದಲ್ಲಿ ಜರುಗಿದೆ.  ರಸ್ತೆ ಅಪಘಾತ ವಿಷಯ ತಿಳಿದು ಗುತ್ತಿಗೆದಾರ ಜಿ.ಭಾಸ್ಕರರೆಡ್ಡಿ ಘಟನಾ ಸ್ಥಳಕ್ಕೆ ತೆರಳಲು ಬೈಕ್‌ನಲ್ಲಿ ಸಾಗಿದ್ದಾಗ ಬಳ್ಳಾರಿ ಬಳಿಯ ಶ್ರೀನಿವಾಸ್ ಕ್ಯಾಂಪ್ ಹೊರವಲಯದಲ್ಲಿ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Read More

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಕಾಂಗ್ರೆಸ್ ಬಹುಮತದಿಂದ ಗೆದ್ದಿದೆ. ಸದ್ಯ ಕರ್ನಾಟಕ ಸಿಎಂ ಗಾದಿಗೇರಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್​ಗೆ ಸಿಎಂ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿಕೆಶಿ ಆಪ್ತ ಜಿ.ಸಿ.ರಾಜು ಪತ್ರ ಬರೆದಿದ್ದಾರೆ. ಇ-ಮೇಲ್ ಮೂಲಕ ಎಐಸಿಸಿ ಅಧ್ಯಕ್ಷ ಖರ್ಗೆಗೆ ಪತ್ರ ರವಾನಿಸಿದ್ದಾರೆ. ಬೆವರು ಸುರಿಸಿ ಪಕ್ಷವನ್ನು ಕಟ್ಟಿದವರಿಗೆ ಅವಕಾಶ ಮಾಡಿಕೊಡಬೇಕು. ಯಾವುದೇ ಕಷ್ಟಪಡದವರು ಪದೇಪದೆ ಅಧಿಕಾರ ಬೇಕೆಂದು ಹೇಳಿದರೆ ನಿಷ್ಠಾವಂತ ಕಾರ್ಯಕರ್ತರು ಯಾಕೆ ಕಷ್ಟ ಪಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಡಿ.ಕೆ.ಶಿವಕುಮಾರ್​ ಊಟ, ನಿದ್ದೆ ಬಿಟ್ಟು ಪಕ್ಷ ಸಂಘಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

Read More

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಮತ್ತೆ ಕಿಡಿಕಾರಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿ.ಎಲ್. ಸಂತೋಷ್ ಪಕ್ಷವನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನ ಮಾಡಿದ್ದಲ್ಲದೇ ನನ್ನನ್ನು ಟಾರ್ಗೆಟ್ ಮಾಡಿದ್ದರು ಎಂದು ಆರೋಪಿಸಿದ್ದಾರೆ. ನಮ್ಮ ಕಡೆ ಬಂದವರನ್ನು ಶೆಟ್ಟರ್ ಸೋಲಿಸಿ ಎಂದು ಪ್ರಚಾರ ಮಾಡಿದರು. ನನ್ನನ್ನು ಟಾರ್ಗೆಟ್ ಮಾಡಿ ಬಿಜೆಪಿಯವರು ನನ್ನನ್ನು ಸೋಲಿಸಿದರು. ಬಿಜೆಪಿಯ ಇಂದಿನ ಪರಿಸ್ಥಿತಿಗೆ ಕೆಲವರ ದುರಹಂಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು.ಬಿಜೆಪಿಯ ಅನೇಕರಿಗೆ ದುರಹಂಕಾರ ಬಂದಿದೆ. ಅದಕ್ಕೆ ಬಿಜೆಪಿಗೆ ಈ ಗತಿ ಬಂದಿದೆ ಎಂದು ಹೇಳಿದರು.

Read More

ಹೈದರಾಬಾದ್: ರಿಯಾದ್‌ನಿಂದ (Riyadh) ಹೈದರಾಬಾದ್‌ಗೆ (Hyderabad) ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ನೊಬ್ಬನನ್ನು ಬಂಧಿಸಿ ಸುಮಾರು 67 ಲಕ್ಷ ರೂ. ಮೌಲ್ಯದ 14 ಚಿನ್ನದ ಬಾರ್‌ಗಳನ್ನು (Gold Bar) ವಶಪಡಿಸಿಕೊಂಡ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. ಹೈದರಾಬಾದ್‌ನ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಿಯಾದ್‌ನಿಂದ ಬಹ್ರೇನ್ ಮೂಲಕ ಹೈದರಾಬಾದ್‌ಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಹೈದರಬಾದ್ ಕಸ್ಟಮ್ಸ್ ಮತ್ತು ಆರ್‌ಜಿಐನ ಕಸ್ಟಮ್ಸ್ ಏರ್ ಇಂಟಲಿಜೆನ್ಸ್ ತಂಡವು ವಿಮಾನದಲ್ಲಿ ಬಂದಿಳಿದ ಆರೋಪಿಯನ್ನು ಬಂಧಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ತಡೆದು ಅವರ ಬ್ಯಾಗ್‌ಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಆರೋಪಿ ತಂದಿದ್ದ ಲೈಟ್‌ನ ಬ್ಯಾಟರಿಯೊಳಗೆ 24 ಕ್ಯಾರೆಟ್‌ನ 14 ಚಿನ್ನದ ಬಾರ್‌ಗಳು ಪತ್ತೆಯಾಗಿದೆ. ಚಿನ್ನದ ಬಾರ್‌ಗಳನ್ನು ಕಸ್ಟಮ್ಸ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಬಾರ್‌ಗಳು ಸುಮಾರು 1287.6 ಗ್ರಾಂ ತೂಕ ಹೊಂದಿದ್ದು, ಅದರ ಮೌಲ್ಯ 67,96,133 ರೂ.ಗಳಾಗಿವೆ. ಭಾರತೀಯ ಕಸ್ಟಮ್ಸ್ ಆ್ಯಕ್ಟ್ (Indian Customs Act) 1962ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ…

Read More

ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳಿಗೆ ನೇಮಕಗೊಂಡಿರುವವರಿಗೆ ಪ್ರಧಾನಿ ನರೇಂದ್ರ ಮೋದಿ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ವೇಳೆ 22 ರಾಜ್ಯಗಳ 45 ಕೇಂದ್ರಗಳಲ್ಲಿ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಆಗಮಿಸಿದ್ದ ನೂತನವಾಗಿ ನೇಮಕಗೊಂಡ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದರು. ಇಲ್ಲಿಯವರೆಗೆ ಪಿಎಂ ಮೋದಿ 2.9 ಲಕ್ಷ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ ಮತ್ತು ಮಂಗಳವಾರದ ಕಾರ್ಯಕ್ರಮದ ನಂತರ ಅವರ ಸಂಖ್ಯೆ 3.6 ಲಕ್ಷಕ್ಕೆ ಏರಲಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಸಮನ್ವಯ ಭವನದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದಲ್ಲದೇ ಬಿಜೆಪಿ ಆಡಳಿತವಿರುವ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ಉದ್ಯೋಗ ಮೇಳದ ಮೂಲಕ ಯುವಕರಿಗೆ ನೇಮಕಾತಿ ಪತ್ರ ವಿತರಿಸಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶಗಳು -ಈ ಸಂದರ್ಭದಲ್ಲಿ, ಕಳೆದ 9 ವರ್ಷಗಳಲ್ಲಿ, ಭಾರತ ಸರ್ಕಾರವು ಸರ್ಕಾರಿ ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಿದೆ ಎಂದು ಹೇಳಿದರು. ಇದನ್ನು ಹೆಚ್ಚು ಪಾರದರ್ಶಕ ಮತ್ತು ನ್ಯಾಯಯುತವಾಗಿಸಲು ಒತ್ತು…

Read More

ಬೆಳಗಾವಿ: ರಾಜಧಾನಿಯನ್ನ ಹೊರತುಪಡಿಸಿ ರಾಜ್ಯದಲ್ಲಿ ಬೆಳಗಾವಿ(Belagavi) ಜಿಲ್ಲೆ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳು ಹೊಂದಿರುವ ಜಿಲ್ಲೆ. ಹದಿನೆಂಟು ಕ್ಷೇತ್ರದ ಪೈಕಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಸಾಕಷ್ಟು ರಣತಂತ್ರವನ್ನ ರೂಪಿಸಿದ್ದವು. ಮುಖ್ಯವಾಗಿ ಜಿಲ್ಲೆಯ ಉಸ್ತುವಾರಿ ಹೊತ್ತು ಅತೀ ಹೆಚ್ಚು ಸ್ಥಾನ ಗೆಲ್ಲಲು ಹೊರಟಿದ್ದ ರಮೇಶ್ ಜಾರಕಿಹೊಳಿ (Ramesh Jarkiholi)ಗೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಹೈಕಮಾಂಡ್ ಮನವೊಲಿಸಿ 6 ಜನ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಿದ್ದರು. ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ್ ಮನ್ನೊಳ್ಕರ್, ಉತ್ತರದಲ್ಲಿ ಡಾ.ರವಿ ಪಾಟೀಲ್, ಯಮಕನಮರಡಿಯಲ್ಲಿ ಬಸವರಾಜ ಹುಂದ್ರಿ, ರಾಮದುರ್ಗದಲ್ಲಿ ಚಿಕ್ಕರೇವಣ್ಣ, ಅಥಣಿಯಲ್ಲಿ ಮಹೇಶ್ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ರಮೇಶ್ ಯಶಸ್ವಿಯಾಗಿದ್ದರು. ಈ 6 ಕ್ಷೇತ್ರದಲ್ಲಿ ಅಭ್ಯರ್ಥಿಗಳು ಸೋತಿದ್ದು ಇದೀಗ ಸಾಹುಕಾರ್​ಗೆ ಭಾರಿ ಹಿನ್ನಡೆಯಾಗಿದೆ. ಅಷ್ಟಕ್ಕೂ ರಮೇಶ್ ಜಾರಕಿಹೊಳಿ ಟಿಕೆಟ್ ಕೊಡಿಸುವುದರಲ್ಲೇ ಎಡವಿ ಈ ಮಟ್ಟಿಗೆ ಮುಖಬಂಗ ಅನುಭವಿಸಿದ್ರೂ ಎನ್ನುವ ಚರ್ಚೆ ಇದೀಗ ದೊಡ್ಡ ಮಟ್ಟದಲ್ಲಿ…

Read More

ವಿಜಯನಗರ : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆ ಕಸರತ್ತು ಜೋರಾಗಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಮೆಗಾ ಫೈಟ್ ನಡೆಯುತ್ತಿದೆ. ಇದರ ನಡುವೆ ಸಿದ್ದರಾಮಯ್ಯಗೆ ಸಿಎಂ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ. ಹೌದು, ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ ಎಂದು ಮೈಲಾರ ಕಾರ್ಣಿಕ ನುಡಿದ ಭವಿಷ್ಯ ನಿಜವಾಗುತ್ತಾ ಎಂಬ ಪ್ರಶ್ನೆ ಮೂಡಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರಲಿಂಗ ದೇಗುಲದಲ್ಲಿ ಪ್ರತಿ ಕಾರ್ಣಿಕ ವಿಧಿವಿಧಾನ ನಡೆಯುತ್ತದೆ. ಈ ವೇಳೆ ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್’ ಕಾರಣಿಕ ನುಡಿದಿದ್ದರು. ಅಂದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ ಎಂದು ವಿಶ್ಲೇಷಿಸಲಾಗಿತ್ತು, ಇದೀಗ ಈ ಭವಿಷ್ಯ ನಿಜವಾಗುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶವನ್ನು ಪಡೆದ ಕೆಲವು ದಿನಗಳ ನಂತರ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಬಗ್ಗೆ ಸಸ್ಪೆನ್ಸ್ ಮುಂದುವರೆದಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಒಬ್ಬರಾದ ಡಿ.ಕೆ.ಶಿವಕುಮಾರ್ ಅವರು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ತಮ್ಮ ವಾದವನ್ನು ಮಂಡಿಸಲು ಇಂದು ದೆಹಲಿಗೆ ಹಾರುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಪಕ್ಷವು ಅಂತಿಮ ಘೋಷಣೆ ಮಾಡುವ ಮೊದಲು ನಿನ್ನೆ ದೆಹಲಿಗೆ…

Read More

ವಿಜಯಪುರ: ವಿಧಾನಸಭೆ ಚುನಾವಣೆ ಬಿಟ್ಟರೆ ತಿಂಗಳಿಂದ ಸದ್ದು ಮಾಡುತ್ತಿರುವ ವಿಷಯ ದಿ ಕೇರಳ ಸ್ಟೋರಿ (The Kerala Story) ಸಿನಿಮಾ. ಅದಾ ಶರ್ಮಾ ನಟನೆಯ ಚಿತ್ರ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ತನ್ನ ಹವಾ ಮುಂದುವರಿಸುತ್ತಿದೆ. ಇದೀಗ ಕೇರಳ ಸ್ಟೋರಿ ನೋಡಲು ವಿಜಯಪುರ (Vijayapura) ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಉಚಿತ ವ್ಯವಸ್ಥೆ ಮಾಡಿದ್ದಾರೆ. ವಿಜಯಪುರ ನಗರದ ಅಪ್ಸರಾ ಚಿತ್ರಮಂದಿರದಲ್ಲಿ 12 ಗಂಟೆಯ ಶೋವನ್ನು ಪ್ರೇಕ್ಷಕರು ಉಚಿತವಾಗಿ ನೋಡಬಹುದಾಗಿದೆ. ಮಂಗಳವಾರ, ಬುಧವಾರ ಹಾಗೂ ಶುಕ್ರವಾರ 3 ದಿನಗಳ ಕಾಲ ಉಚಿತವಾಗಿ ಪ್ರೇಕ್ಷಕರು ವೀಕ್ಷಿಸಲು ಅನುವು ಮಾಡಿ ಕೊಡಲಾಗಿದೆ. ಇದರಿಂದ ಪ್ರೇಕ್ಷಕರು ಖುಷ್ ಆಗಿದ್ದಾರೆ. ಸೋಮವಾರ ಉಡುಪಿಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಕೇರಳ ಸ್ಟೋರಿ ಚಿತ್ರದ ಪ್ರಚಾರ ಕಾರ್ಯ ಭಿನ್ನವಾಗಿ ನಡೆದಿದೆ. ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಕೇರಳದ ಭಕ್ತರೇ ಹೆಚ್ಚು. ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ಚಿತ್ರ ನೋಡಿ ಎಂದು ಬರೆಯಲಾದ…

Read More

ಧಾರವಾಡ : ಕಳೆದ ಮೂವತ್ತೊಂದು ವರ್ಷಗಳಿಂದ ನಾನು ಭಾರತೀಯ ಜನತಾ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಪಕ್ಷದ ನಾಯಕರು ನನಗೆ ದ್ರೋಹ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಪುನಃ ಬಿಜೆಪಿ ಮೇಲೆ ಮುನಿಸು ತೋರಿಸಿದ್ದಾರೆ. ಧಾರವಾಡ ಜಲ್ಲೆಯ ಅದರಗುಂಚಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿ.ಎಲ್‌.ಸಂತೋಷ ಕರ್ನಾಟಕ ರಾಜ್ಯಕ್ಕೆ ನಾನೇ ಪ್ರಧಾನ ಮಂತ್ರಿ ನಾನೇ ಮುಖ್ಯಮಂತ್ರಿ ಎನ್ನುವ ರೀತಿ ವರ್ತನೆ ತೋರಿದ್ದಾರೆ. ಈ ಮೂಲಕ ನನಗೆ ಅನ್ಯಾಯ, ದ್ರೋಹ, ಮೋಸ ಮಾಡಿದ್ದಾರೆ. ಈ ಮೂರು ಕಾರಣದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಿದೆ. ಈ ವೇಳೆ ಸಾವಿರಾರು ಅಭಿಮಾನಿಗಳು ನನಗೆ ಧೈರ್ಯ ನೀಡಿ, ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಕ್ಕೆ ಚುನಾವಣೆಗೆ ನಿಂತಿದ್ದೆ ಎಂದರು. ಇನ್ನು ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಕರ್ನಾಟಕ ಎಂಬ ಮಾತಿತ್ತು, ಆದರೆ ಯಡಿಯೂರಪ್ಪನವರನ್ನು ಮನೆ ಒಳಗೆ ಕೂರಿಸಿ, ಈ ಹಿಂದೆ ಸಿಎಂ…

Read More