ಬೆಂಗಳೂರು: ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಇನ್ನುಳಿದಿದ್ದು 5 ಕೆಜಿಗೆ ಹಣ ಕೊಡುತ್ತೇವೆ ಎಂದು ನಿರ್ಧರಿಸಿದ್ದೇ ತಡ ವಿಪಕ್ಷಗಳು ಕೊಂಕು ಹುಡುಕಲು ಶುರುಮಾಡಿದರು. ಅನ್ನಭಾಗ್ಯ ಯೋಜನೆಯ ಮೊದಲ ತುತ್ತಿನಲ್ಲಿಯೇ ಕಲ್ಲು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ (Congress) ಸರ್ಕಾರ ಅನ್ನಭಾಗ್ಯ ಯೋಜನೆ ನೀಡುವುದಾಗಿ ಭರವಸೆ ನೀಡಿತ್ತು. ಈಗ ಪೂರ್ಣ ಪ್ರಮಾಣದಲ್ಲಿ ಅಕ್ಕಿ ಸಿಗದ ಹಿನ್ನೆಲೆ 10 ಕೆಜಿ ಅಕ್ಕಿ ಬದಲಿಗೆ 5 ಕೆಜಿ ಅಕ್ಕಿ ಕೊಟ್ಟು ಉಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ನೀಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಕಾಂಗ್ರೆಸ್ ಸರ್ಕಾರದ ಈ ನಿರ್ಧಾರದ ಕುರಿತು ಮಾಜಿ ಸಿಎಂ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 60 ರೂ.ಗಳಂತೆ ಹತ್ತು ಕೆಜಿಗೆ ತಗುಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ ಜನರಿಗೆ ಕ್ಷಮೆ…
Author: Prajatv Kannada
ನವದೆಹಲಿ: ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಜ್ವರದ ಕೇಸ್ ಹೆಚ್ಚಳ ಹಿನ್ನೆಲೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದೆ. ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ನೇತೃತ್ವದಲ್ಲಿ ನಾಳೆ ನಡೆಯುವ ಈ ವರ್ಚುವಲ್ ಸಭೆಯಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆಯುಕ್ತರು, ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಚಾಮರಾಜನಗರ: ಮೂರು ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಅಧಿಕಾರಿಗಳ ಸಭೆ ನಡೆಸಿಲ್ಲ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ. ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದಾಗ 20ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದರು. ವಿಶೇಷ ಅನುದಾನವನ್ನೂ ನೀಡಿದ್ದರು. ಆದರೆ ಉಸ್ತುವಾರಿ ಸಚಿವರು ಜಿಲ್ಲಾ ಅಭಿವೃದ್ದಿಗೆ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ.
ಬೆಂಗಳೂರು: ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು ಆಗಿದೆ. ಬಿಜೆಪಿ ಪಕ್ಷ ಛಿದ್ರ ಛಿದ್ರ ಆಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಅಂತಿಮ ಘಟ್ಟ ತಲುಪಿದೆ. ಎಷ್ಟೇ ಫೆವಿಕಾಲ್ ಹಾಕಿದರೂ ಕೂಡ ಬಿಜೆಪಿ ಜೋಡಿಸಲು ಆಗುವುದಿಲ್ಲ. ಪಾಪ ನಮ್ಮ ಗ್ಯಾರಂಟಿಗಳಿಂದ ತೊಂದರೆ ಆಗುತ್ತಿದೆ ಅವರಿಗೆ. ಉರಿದುಕೊಂಡಿದ್ದಾರೆ ಉರಿದುಕೊಳ್ಳಲಿ. ಬಿಜೆಪಿಯವರು ಒಂದೊಂದು ತರ ಮಾತಾಡುತ್ತಿದ್ದಾರೆ ಎಂದರು.
ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರ್ಕಾರದ ನಿರ್ಧಾರ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಸರಕಾರ ಬಿಪಿಎಲ್ ಇರುವವರಿಗೆ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ. ಒಂದು ತಿಂಗಳಿಗೆ ಕೇಂದ್ರ ಸರಕಾರಕ್ಕೆ 18ರಿಂದ 19 ಸಾವಿರ ಕೋಟಿ ಖರ್ಚಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರಕಾರದ ಅಕ್ಕಿ ಎಂದು ರಶೀದಿ ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಇದನ್ನು ನಮ್ಮ ಅಕ್ಕಿ ನಮ್ಮ ಅಕ್ಕಿ ಅಂತ ಹೇಳುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆಗೆ ಸ್ಪಷ್ಟ ರೂಪಕೊಟ್ಟು ಅನುಷ್ಠಾನ ಮಾಡಿದ್ದು ನರೇಂದ್ರ ಮೋದಿಯವರು. ನೀವು ಈಗ ಅಕ್ಕಿ ಸಿಕ್ಕಿಲ್ಲ ಹಣ ಕೊಡುತ್ತಿದ್ದೇವೆ ಎನ್ನುತ್ತಿದ್ದೀರಿ. ನೀವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳುವಾಗ ಕೇಂದ್ರದ 5 ಕೆ.ಜಿ ಅಕ್ಕಿ ಸೇರಿ ಅಂತ ಹೇಳಿದ್ದೀರಾ ? ಹಾಗಾದರೆ ಕೇಂದ್ರ ನೀಡುವ ಅಕ್ಕಿಗೆ ರಾಜ್ಯದಿಂದ ಹಣ ನೀಡುತ್ತಿದ್ದೀರಾ? ಜನರಿಗೆ ತಪ್ಪು ಮಾಹಿತಿ ಒದಗಿಸಬೇಡಿ. ನೀವು ಹೇಳಿದ್ದು 10 ಕೆಜಿ ಅಕ್ಕಿ…
ನವದೆಹಲಿ: ಎಲ್ಲಿಯವರೆಗೆ ಪಾಕ್ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತೋ ಅಲ್ಲಿಯವರೆಗೆ ಮಾತುಕತೆ ಇಲ್ಲ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಪಾಕಿಸ್ತಾನದಲ್ಲಿ (Pakistan) ಸಮಸ್ಯೆಗಳಿವೆ ಎಂಬುದು ನಮಗೆ ತಿಳಿದಿದೆ. ಹಾಗೂ ಸಮಸ್ಯೆಗಳ ಗಂಭೀರತೆಯನ್ನು ಗುರುತಿಸುವ ಸಮಯ ಇದಾಗಿದೆ. ಪಾಕಿಸ್ತಾನ ಕತ್ತಲಿನ ವೇಳೆಯಲ್ಲಿ ಭಯೋತ್ಪಾದನೆಯನ್ನು ನಡೆಸಿ, ಹಗಲಿನ ವೇಳೆಯಲ್ಲಿ ವ್ಯಾಪಾರವನ್ನು ನಡೆಸುವ ಪರಿಸ್ಥಿತಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಹಾಗೇನಾದರೂ ಆದರೆ ದೇಶ ಸರಿಯಾಗಿ ಕಾರ್ಯ ನಿರ್ವಹಿಸುವುದರಲ್ಲಿ ವಿಫಲವಾಗುತ್ತದೆ ಎಂದು ಹೇಳಿದ್ದಾರೆ. ಗಡಿಯಲ್ಲಿ ಶಾಂತಿ ನಿರ್ಮಾಣದತ್ತ ಚೀನಾ ಮುಖ ಮಾಡಬೇಕು: ಭಾರತ ಹಾಗೂ ಚೀನಾ (China) ನಡುವಿನ ಗಡಿ ಭಾಗದ ಸ್ಥಿತಿ ಇಂದಿಗೂ ಅಸಹಜವಾಗಿದೆ. ಗಡಿ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದ ಗಳ ಉಲ್ಲಂಘನೆಯಾಗಿರುವುದರಿಂದಾಗಿ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಕಷ್ಟದ ಹಂತದಲ್ಲಿ ಸಾಗುತ್ತಿದೆ. ಯಾವುದೇ ಸಂಬಂಧಗಳು ಪರಸ್ಪರರ ಆಸಕ್ತಿಗಳನ್ನು ಹಾಗೂ ಸೂಕ್ಷ್ಮತೆಗಳಿಗೆ ಗೌರವ ನೀಡಬೇಕು. ಚೀನಾ ಗಡಿಯಲ್ಲಿ ಶಾಂತಿ ನಿರ್ಮಾಣದತ್ತ ಮುಖ ಮಾಡಬೇಕು. ಶಾಂತಿ ಒಪ್ಪಂದಗಳನ್ನು ಮೀರಿ ಕೃತ್ಯಗಳನ್ನು ನಡೆಸಿದರೆ ಕಷ್ಟ…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಸ್ಲಿಂ ಬಾಂಧವರಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ ಮಾಡಿದರು. ತ್ಯಾಗ, ಬಲಿದಾನದ ಸಂಕೇತವಾದ ಹಬ್ಬದಲ್ಲಿ ಭಾಗಿಯಾದ ಮುಸ್ಲಿಂ ಭಾಂಧವರು, ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು. ಪರಸ್ಪರ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಂಡ ಮಕ್ಕಳು ಬಕ್ರೀದ್ ಹಬ್ಬವನ್ನು ಸಂಭ್ರಮಿಸಿದರು.
ಹಾವೇರಿ: ಬಕ್ರೀದ್ (Bakrid) ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ (Idgah Maidan) ನಡೆದ ಆಚರಣೆಯ ನಂತರ ಅಂಜುಮನ್ ಕಮಿಟಿ ಲೆಕ್ಕಪತ್ರ ನಿರ್ವಹಣೆ ವಿಚಾರವಾಗಿ ಮುಸ್ಲಿಂ ಯುವಕರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಈದ್ಗಾ ಮೈದಾನದ ನಿರ್ವಹಣೆಗಾಗಿ ವಂತಿಕೆ ಸಂಗ್ರಹ ವೇಳೆ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಮುಸ್ತಕಾಅಹ್ಮದ್ ಖಾಜಿ ಎಂಬವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿರಾರು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದ ನಂತರ ಈ ಗಲಾಟೆ ನಡೆದಿದೆ. ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು ಆಗಮಿಸಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ.
ಬಡವರಿಗೆ ಕೊಡಲಿಕ್ಕೆ,ಸರ್ಕಾರಕ್ಕೆ ಕೊಡಲಿಕ್ಕೆ ನಿಮ್ಮ ಬಳಿ ಅಕ್ಕಿಯಿಲ್ಲ ಖಾಸಗಿಯವರಿಗೆ 15ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರುವುದಕ್ಕಿದೆಯಾ? ಬಡವರ ಅಕ್ಕಿಯನ್ನು ಕೇಂದ್ರ ಹಣವನ್ನು ಕೊಟ್ಟರೂ ಕೊಡಲಿಲ್ಲ ಹೀಗಾಗಿ ರಾಜ್ಯದ ಜನ್ರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ ಒಬ್ಬ ಎಂಪಿಯಾದರೂ ರಾಜ್ಯಕ್ಕೆ ಅಕ್ಕಿ ಕೊಡು ಅಂತಾ ಕೇಳಿದ್ದಾರಾ? ಯಾಕೆ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲ್ಲ ಅಂತಾ ಕೇಳಿದ್ದಾರಾ? ಬೊಮ್ಮಾಯಿ,ಕಟೀಲ,ಯಡಿಯೂರಪ್ಪನವರು ಒಬ್ಬರಾದರೂ ಮಾತನಾಡಿದ್ದಾರಾ? ಮೋದಿಯವರು ಇದಕ್ಕೆ ಉತ್ತರಿಬೇಕು ಅಂತಾ ಎಚ್ ಕೆ ಆಕ್ರೋಶ
ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪುತ್ರನೂ ಆಗಿರುವ ಮಾಜಿ ಶಾಸಕ ಡಾ. ಯತಿಂದ್ರ ಅವರಿಗೆ ಉನ್ನತ ಸ್ಥಾನ ನೀಡಬೇಕು ಎಂದು ಒತ್ತಾಯಿಸುತ್ತಿರುವ ಬೆಂಬಲಿಗರು ಯತಿಂದ್ರ ಹೆಸರಲ್ಲಿ ನಂಜನಗೂಡು ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ತಗಡೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರಿಂದ ಪೂಜೆ ಸಲ್ಲಿಸಲಾಗಿದೆ. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಡಾ. ಯತಿಂದ್ರ ಹಗಲಿರುಳು ಶ್ರಮಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆ ಯತಿಂದ್ರಗೆ ಉನ್ನತ ಸ್ಥಾನಮಾನ ನೀಡಬೇಕು. ಈ ಮೂಲಕ ಕ್ಷೇತ್ರಕ್ಕೆ ಹಾಗೂ ಜಿಲ್ಲೆಗೆ ಮತ್ತಷ್ಟು ಸೇವೆ ಅವರಿಂದ ದೊರೆಯಲಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.