Author: Prajatv Kannada

ಸೂರ್ಯೋದಯ: 05.54 AM, ಸೂರ್ಯಾಸ್ತ : 06.38 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ವೈಶಾಖ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ತಿಥಿ: ಇವತ್ತು ಏಕಾದಶಿ 01:03 AM ತನಕ ನಂತರ ದ್ವಾದಶಿ 11:36 PM ತನಕ ನಂತರ ತ್ರಯೋದಶಿ ನಕ್ಷತ್ರ: ಇವತ್ತು ಉತ್ತರಾ ಭಾದ್ರ 08:15 AM ತನಕ ನಂತರ ರೇವತಿ ಯೋಗ: ಇವತ್ತು ವಿಷ್ಕುಂಭ01:30 AM ತನಕ ನಂತರ ಪ್ರೀತಿ 11:16 PM ತನಕ ನಂತರ ಆಯುಷ್ಮಾನ್ ಕರಣ: ಇವತ್ತು ಬಾಲವ 01:03 AM ತನಕ ನಂತರ ಕೌಲವ 12:17 PM ತನಕ ನಂತರ ತೈತಲೆ 11:36 PM ತನಕ ನಂತರ ಗರಜ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 03.38 AM to 05.10 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:46 ನಿಂದ ಮ.12:38 ವರೆಗೂ…

Read More

ಬೆಂಗಳೂರು: ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ತೆರಳಿ ಮಲಗಿದ್ದ ಹಲಸೂರು ಗೇಟ್ ಠಾಣೆಯ(Halasur Gate Station) ಎಎಸ್​ಐ ಸಾವನ್ನಪ್ಪಿರುವ ಘಟನೆ ಜರುಗಿದೆ. ಆನಂದ್ ಕುಮಾರ್ ಮೃತ ಎಎಸ್‌ಐ ಎಂದು ಗುರುತಿಸಲಾಗಿದೆ. ಆನಂದ್ ಕುಮಾರ್  ಅವರು, ನಿನ್ನೆ ರಾತ್ರಿ ಪಾಳಿ ಕೆಲಸ ಮಾಡಿ ಮನೆಗೆ ತೆರಳಿ ಮಲಗಿದ್ದರು. ಅವರನ್ನು ಮನೆಯವರು ಏಳಿಸಲು ಮನೆಯವರು ಪ್ರಯತ್ನ ಮಾಡಿದ್ದಾರೆ. ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.  ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ಮಲಗಿದ್ದಾಗಲೇ ಆನಂದ್​ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಆನಂದ್​ ಅವರು ನಾಗರಭಾವಿ ಬಳಿಯ ಮನೆಯಲ್ಲಿ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲದೇ ಪೊಲೀಸ್ ಇಲಾಖೆ ಆನಂದ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

Read More

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (Karnataka CM Race) ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದಿಲ್ಲಿಗೆ ಹೊರಡುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ.ಶಿವಕುಮಾರ್‌(DK. Sivakumar) ಭಾವುಕರಾದರು. ʻನಮ್ಮದು ಅವಿಭಕ್ತ ಮನೆ. ನಮ್ಮ ಮನೆಯ ಸದಸ್ಯರ ಸಂಖ್ಯೆ 135. ನಾನು ಈ ಮನೆಯನ್ನು ಒಡೆಯಲ್ಲ. ಅವರು ನನ್ನನ್ನು ಇಷ್ಟಪಡುತ್ತಾರೋ ಬಿಡುತ್ತಾರೋ, ನಾನೊಬ್ಬ ಜವಾಬ್ದಾರಿಯುತ ಮನುಷ್ಯ. ನಾನು ಬೆನ್ನಿಗೆ ಚೂರಿ ಹಾಕಲ್ಲ, ಬ್ಲ್ಯಾಕ್‌ಮೇಲ್‌ ಮಾಡಲ್ಲ. ಪಕ್ಷ ಹೇಳಿದಂತೆ ಕೇಳುತ್ತೇನೆʼʼ ಎಂದು ಹೇಳಿದರು. ʻʻಕಾಂಗ್ರೆಸ್ ಪಕ್ಷ, ನನ್ನ ಪಾಲಿನ ದೇವರು. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ, ನನಗೆ ತಾಯಿ ಇದ್ದಂತೆ. ದೇವರು ಮತ್ತು ತಾಯಿಗೆ, ಮಕ್ಕಳಿಗೆ ಏನು ನೀಡಬೇಕು ಎಂಬುದು ಗೊತ್ತಿರುತ್ತದೆʼʼ ಎಂದು ಹೇಳಿದರು. ʻʻನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ. ನಾನು ಒಬ್ಬನೇ ಹೋಗುತ್ತಿದ್ದೇನೆ.. ಪ್ರಧಾನ ಕಾರ್ಯದರ್ಶಿ ಒಬ್ಬನೇ ಬರುವಂತೆ ಹೇಳಿದ್ದಾರೆ. ಹೀಗಾಗಿ ಒಬ್ಬನೇ ಹೋಗುತ್ತಿದ್ದೇನೆ. ಯಾರನ್ನೂ ಜತೆಗೆ ಕರೆದೊಯ್ಯುತ್ತಿಲ್ಲʼʼ…

Read More

ಬೆಂಗಳೂರು: ಹಾಡು ಹಗಲೇ ಯುವತಿಗೆ  ಡ್ರ್ಯಾಗರ್ ಹಿಡಿದು ನಡು ರಸ್ತೆಯಲ್ಲಿ ಯುವಕ ಕಿರುಕುಳ ನೀಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ (Bangalore)ನಡೆದಿದೆ. ಬೆಂಗಳೂರಿನ ಪುಲಿಕೇಶಿ ನಗರದ ವಿವೇಕಾನಂದ ನಗರ ರೆಸಿಡೆನ್ಸಿ ಬಳಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ಕಿರುಕುಳದ ದೃಶ್ಯ ದಾಖಲಾಗಿದೆ. ಡ್ಯಾಗರ್ ಹಿಡಿದು ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿ ಮೊಬೈಲ್ ಕಸಿಯಲು ಪಾತಕಿ ಪ್ರಯತ್ನಿಸಿದ್ದಾನೆ. ಆತ ಕಿರುಕುಳ ನೀಡುತ್ತಿದ್ದಂತೆ ಮತ್ತೊಬ್ಬ ಮಹಿಳೆ ಆಕೆಯ ರಕ್ಷಣೆಗೆ ಧಾವಿಸಿ ಬಂದಿದ್ದಾಳೆ. ಇದನ್ನು ನೋಡಿ ಪುಂಡ ಪರಾರಿಯಾಗಿದ್ದಾನೆ. ಮಹಿಳೆಯರಿಗೆ ರಾಜಧಾನಿಯಲ್ಲಿ ರಕ್ಷಣೆ ಇಲ್ಲದಂತಾಗಿದೆಯಾ ಎಂಬ ಪ್ರಶ್ನೆ ಎದ್ದಿದೆ. ಸರಿಯಾಗಿ ಹೊಯ್ಸಳ ಪೆಟ್ರೋಲಿಂಗ್ ಆಗ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೌಡಿಗಳ ಹಾವಳಿಯಿಂದ ಹಗಲಿನಲ್ಲಿಯೇ ಮಹಿಳೆಯರು ಓಡಾಡಲು ಅಸಾಧ್ಯವಾಗುತ್ತಿದೆ ಎಂದು ದೂರಿದ್ದಾರೆ.

Read More

ಮಹದೇವಪುರ: ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಮಾಜಿ ಸಚಿವ ಅರವಿಂದ ಲಿಂಬಾವಳಿಯರವ ಪತ್ನಿ  ಮಂಜುಳಾ ಅರವಿಂದ ಲಿಂಬಾವಳಿಯವರಿಗೆ ಹೂಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಹದೇವಪುರ ಐಟಿಬಿಟಿ ಕ್ಷೇತ್ರ ತೀವ್ರ ಜಿದ್ದಾಜಿದ್ದಿಯ  ಕಣವಾಗಿ ಕೂಡಿತ್ತು. ಕಾಂಗ್ರೆಸ್ ಅಭ್ಯರ್ಥಿ ಎಚ್ ನಾಗೇಶ್ ಅವರ ವಿರುದ್ದ 44,501 ಬಹುಮತದಿಂದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿಯವರು ಭರ್ಜರಿ ವಿಜಯ ಸಾಧಿಸಿದರು. ನೂತನ ಶಾಸಕರನ್ನ ಹೂಡಿ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿಯವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ನೂತನ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು, ತಮ್ಮ ಗೆಲುವಿಗೆ ಕಾರಣರಾದ ಬಿಜೆಪಿ ನಾಯಕರು ಮತ್ತು ಕ್ಷೇತ್ರದ ಎಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ನಮ್ಮ ಪತಿಯವರ ಹಾದಿಯಲ್ಲೆ ನಾನು ನಡೆದು ಕ್ಷೇತ್ರದ ಅಭಿವೃದ್ಧಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು. ಕಳೆದ ಹದಿನೈದು ವರ್ಷದಲ್ಲಿ ಮಹದೇವಪುರ ಕ್ಷೇತ್ರ ಸಾಕಷ್ಟು ಬದಲಾವಣೆ ಆಗಿದ್ದು…

Read More

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election Results 2023) ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದ ನಂತರ ವಿವಿಧ ಕಡೆಗಳಲ್ಲಿ ಬಿಜೆಪಿ (BJP) ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್ (Congress) ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಅವರು, ಕಾಂಗ್ರೆಸ್​​ನ ಹಿಂಸಾ ಸ್ಕೀಮ್​ ನಾವು ಯಾವತ್ತೂ ಸಹಿಸುವುದಿಲ್ಲ ಎಂದಿದ್ದಾರೆ. ಕಾಂಗ್ರೆಸ್​ನ ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ. ಹೊಸಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಹೊಸಕೋಟೆಯಲ್ಲಿ ಒಬ್ಬ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದು, ಇತರ ಇಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಇಂತಹ ಹಿಂಸಾಚಾರದ ಪ್ರವೃತ್ತಿಗೆ ಆಸ್ಪದ ಕೊಡಬಾರದು ಎಂದು ಹೇಳಿದ್ದಾರೆ. ರಾಜ್ಯದ ವಿವಿಧ ಕಡೆಗಳಲ್ಲಿ ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗಿವೆ. ಪಾಕಿಸ್ತಾನದ ಧ್ವಜ ಹಾರಿಸುವುದು ದೇಶದ್ರೋಹದ ಚಟುವಟಿಕೆಯಾಗಿದ್ದು ಇದನ್ನು ನಿಯಂತ್ರಿಸಬೇಕು. ಇಂತಹ ಹಿಂಸಾಚಾರದ ದೇಶದ್ರೋಹಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮುಖಂಡರು ತಮ್ಮೊಳಗಿನ ಭಿನ್ನಮತ ಬದಿಗಿಟ್ಟು ತಾವು…

Read More

ಬೆಂಗಳೂರು: ಅನಾರೋಗ್ಯದ ಹಿನ್ನೆಲೆ ದೆಹಲಿಗೆ ಹೋಗಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Sivakumar) ಹೇಳಿದ್ದಾರೆ. ಸೋಮವಾರ ಬೆಂಗಳೂರಿನ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಕರೆಯ ಮೇರೆಗೆ ಸೋಮವಾರ ಸಂಜೆಯೇ ದೆಹಲಿಗೆ ತೆರಳಬೇಕಿತ್ತು. ಆದರೆ ಅನಾರೋಗ್ಯದ ಹಿನ್ನೆಲೆ ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ನನ್ನ ಆರೋಗ್ಯ ಈಗಲೂ ಸುಧಾರಿಸಿಲ್ಲ, ಆದರೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವುದೇ ನನ್ನ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆ ಮಂಗಳವಾರ ಬೆಳಗ್ಗೆಯೇ ದೆಹಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಸಿಎಂ ಆಯ್ಕೆ ವಿಚಾರದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಬಯಸುವುದಿಲ್ಲ. ಸಿಎಂ ಆಯ್ಕೆಯನ್ನು ನಾನು ಪಕ್ಷದ ಹೈಕಮಾಂಡ್​ಗೆ ಬಿಟ್ಟಿದ್ದೇನೆ. ನನಗೆ ಮುಖ್ಯವಾಗಿರುವುದು ಕಾಂಗ್ರೆಸ್​ ಪಕ್ಷ ಮಾತ್ರ. 135 ಎಂಬುದು ಸಂಖ್ಯೆ ಮಾತ್ರ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಒಂದಾಗಿದ್ದೇವೆ ಮತ್ತು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು. ರಾಜಕೀಯದಲ್ಲಿ ನಾವು ಗೆದ್ದಿದ್ದೇವಾ ಅಥವಾ ಸೋತಿದ್ದೇವಾ ಎಂಬುದು ಮುಖ್ಯ. ಹೇಗೆ ಗೆದ್ದಿದ್ದೇವೆ ಎಂಬುದು ಮುಖ್ಯವಲ್ಲ. ಇವತ್ತು ದೇವರ ದಯೆಯಿಂದ…

Read More

ಆ ಕ್ಷೇತ್ರದಲ್ಲಿ ಗಲಾಟೆ ಗದ್ಸಲದ ರಾಜಕಾರಣಕ್ಕೆ ಈ ಭಾರಿ ಬ್ರೇಕ್ ಬಿದ್ದಿದ್ದು ಮತದಾನ ಶಾಂತಿಯಾಗಿ ನಡೆದಿತ್ತು. ಇನ್ನೂ ಮತದಾನದ ರಿಸಲ್ಟ್ ಬರ್ತಿದ್ದಂತೆ ಶಾಂತವಾಗಿದ್ದ‌ ಹೊಸಕೋಟೆ ಕಾರವಾಗಿದ್ದು ಒರ್ವನ ಹೆಣ ಬಿದ್ದಿದೆ. ಕರ್ನಾಟಕ ವಿಧಾನಸಭೆಯಲ್ಲೇ ಹೈ ಹೋಲ್ಟೇಜ್  ಕ್ಷೇತ್ರವಾಗಿರುವ ಹೊಸಕೋಟೆ ವಿಧಾನಸ ಕ್ಷೇತ್ರದಲ್ಲಿ ಈ ಭಾರಿ ಚುನಾವಣೆ ಈ ಹಿಂದಿಗಿಂತಲೂ ಶಾಂತವಾಗಿ ನಡೆದಿತ್ತು. ಇನ್ನೂ ಚುನಾವಣೆ ಶಾಂತವಾಗಿ ಮುಗಿಯುತ್ತಿದ್ದಂತೆ ಮತ್ತೊಂದು ವರಸೆ ಶುರುವಾಗಿದ್ದು ಚುನಾವಣೆ ವಿಚಾರಕ್ಕೆ ನೆತ್ತರು ಹರಿದಿದೆ. ಹೌದು ಹೊಸಕೋಟೆಯ ಶೆಟ್ಟಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಮತ್ತು ಗಣೇಶಪ್ಪ ಎಂಬ ಅಣ್ಣ ತಮ್ಮಂದಿರ ನಡುವೆ ರಾಜಕೀಯ ವಿಚಾರಕ್ಕೆ ಗಲಾಟೆ ಶುರುವಾಗಿದ್ದು ಕೃಣ್ಙಪ್ಪ ನೀವು ಎಂಟಿಬಿಗೆ ಮತ ಹಾಕಿಲ್ಲ ಅಂತ ಜಗಳ ಶುರು ಮಾಡಿದ್ನಂತೆ. ಇನ್ನೂ ಜಗಳ ಆರಂಭವಾಗ್ತಿದ್ದಂತೆ ಇಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದು ಈವೇಳೆ ಗಣೇಶಪ್ಪನ ಮಗ ಆದಿತ್ಯಾ ಎಂಬುವವನು ಕೃಷ್ಣಪ್ಪನ ಮೇಲೆ ಕುಡಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದು ಹಲ್ಲೆಯಿಂದಾಗಿ‌ ಗಂಬೀರವಾಗಿ ಗಾಯಗೊಂಡಿದ್ದ ಕೃಷ್ಣಪ್ಪ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪಿದ್ದಾನೆ. ಇನ್ನು ಗಲಾಟೆಯಲ್ಲಿ ಗಾಯಗೊಂಡವರನ್ನ…

Read More

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭಾರೀ ಅಂತರದ ಜಯ ದಾಖಲಿಸಿರುವುದರಿಂದ, ಪಕ್ಷವೀಗ ಮೂರು ರಾಜ್ಯಸಭಾ ಸ್ಥಾನಗಳನ್ನು ಅನಾಯಾಸವಾಗಿ ತನ್ನಲ್ಲೇ ಉಳಿಸಿಕೊಳ್ಳಲಿದೆ. ಮುಂದಿನ ವರ್ಷ ರಾಜ್ಯದ ನಾಲ್ವರು ಮೇಲ್ಮನೆ ಸದಸ್ಯರು ನಿವೃತ್ತಿಯಾಗಲಿದ್ದು, ಕಾಂಗ್ರೆಸ್ ತನ್ನ ಮೂರು ರಾಜ್ಯಸಭಾ ಸ್ಥಾನಗಳನ್ನೂ ಉಳಿಸಿಕೊಳ್ಳಲಿದೆ. ಇದೇ ವೇಳೆ ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಪಕ್ಷದ ಬಲ ಐದರಿಂದ ಏಳಕ್ಕೆ ಏರಿಕೆಯಾಗಲಿದೆ. ಮತ್ತೊಂದೆಡೆ, ಹೆಚ್.ಡಿ. ದೇವೇಗೌಡರ ಅಧಿಕಾರಾವಧಿ 2026ರ ಮಧ್ಯದಲ್ಲಿ ಅಂತ್ಯವಾಗಲಿದ್ದು, ಪಕ್ಷ ಇರುವ ಒಂದು ಸ್ಥಾನವನ್ನೂ ಕಳೆದುಕೊಳ್ಳಲಿದೆ. 2024ರಲ್ಲಿ ನಿವೃತ್ತಿಯಾಗುವ ನಾಲ್ವರ ಪಟ್ಟಿಯಲ್ಲಿ ಬಿಜೆಪಿ ತನ್ನ ಏಕೈಕ ಸ್ಥಾನವನ್ನಷ್ಟೇ ಉಳಿಸಿಕೊಳ್ಳಲಿದೆ. ಆದರೆ 2026ರ ವೇಳೆಗೆ ಮೇಲ್ಮನೆಯಲ್ಲಿ ಬಿಜೆಪಿ ಬಲ ಕುಗ್ಗಲಿದೆ. ರಾಜ್ಯ ಸಭೆಯಲ್ಲಿ ಪಕ್ಷ 92 ಸ್ಥಾನಗಳನ್ನು ಹೊಂದಿದ್ದು, ಇದರಿಂದ ಕಮಲದ ಸಂಸದರ ಸಂಖ್ಯೆಯಲ್ಲೇನೂ ಹೆಚ್ಚಿನ ಬದಲಾವಣೆ ಆಗುವುದಿಲ್ಲ. ಆದರೆ ರಾಜ್ಯಸಭೆಯಲ್ಲಿ ಬಹುಮತ ಹೊಂದುವ ಪಕ್ಷದ ಗುರಿಗೆ ಅಡ್ಡಗಾಲಾಗಲಿದೆ. ಯಾರೆಲ್ಲ ನಿವೃತ್ತಿ? ಮುಂದಿನ ವರ್ಷ ನಿವೃತ್ತರಾಗಲಿರುವ ನಾಲ್ವರು ರಾಜ್ಯಸಭಾ ಸದಸ್ಯರಲ್ಲಿ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ರಾಜೀವ್…

Read More

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್(Praveen Sood)  ಅವರು ಸಿಬಿಐ ನಿರ್ದೇಶಕರಾಗಿ(CBI chief )ನೇಮಕವಾಗಿದ್ದಾರೆ. ಇದೇ ಮೇ. 25 ರಂದು ಹಾಲಿ ಸಿಬಿಐ ನಿರ್ದೇಶಕರಾಗಿರುವ ಸುಬೋಧ್ ಕುಮಾರ್ ಜೈಸ್ವಾಲ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಮುಂದಿನ ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ಅವರನ್ನು ನೇಮಿಸಲಾಗಿದೆ. 1984ನೇ ಬ್ಯಾಚ್ ಐಪಿಎಸ್ ಅಧಿಕಾರಿ ಸಮಂತ್ ಗೋಯಲ್ ಹೆಸರು ಸಹ ಕೇಳಿಬಂದಿತ್ತು. ಆದ್ರೆ, ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾ. ಡಿವೈ ಚಂದ್ರಚೂಡ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಂಜನ್ ಚೌಧರಿ ನೇತೃತ್ವದ ಸಮಿತಿಯು 1986ನೇ ಬ್ಯಾಚ್‌ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಇನ್ನು ಯಾರು ಈ ಪ್ರವೀಣ್ ಸೂದ್?  ಡಿಕೆ ಶಿವಕುಮಾರ್​ ನಡುವಿನ ತಕರಾರು ಏನು? ಎನ್ನುವ ವಿವರ ಇಲ್ಲಿದೆ. ಪ್ರವೀಣ್ ಸೂದ್ ಯಾರು..? ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಮೂಲದ ಪ್ರವೀಣ್ ಸೂದ್ 1986ನೇ ಬ್ಯಾಚ್‌ ಕರ್ನಾಟಕ ಕೇಡರ್‌ನ…

Read More