Author: Prajatv Kannada

ಬೆಂಗಳೂರು ;– ಸುಳ್ಳೇ ನಮ್ಮನೆ ದೇವರು ಎಂಬ ಮಾತು ಸಿದ್ದರಾಮಯ್ಯರಿಗೆ ಅನ್ವಯವಾಗಲಿದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರ ಸರಕಾರದ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ದೇಶದ ಎಲ್ಲ ಬಿಪಿಎಲ್ ಕುಟುಂಬಗಳಿಗೆ ನೀಡುವ ಐದು ಕೆಜಿ ಅಕ್ಕಿ ತಮ್ಮದೆಂದು ಯಾವುದೇ ಮುಜುಗರವಿಲ್ಲದೇ ಸುಳ್ಳು ಹೇಳುವುದು. “ಸುಳ್ಳೇ ನಿಮ್ಮನೆ ದೇವರು ಎಂಬುದಕ್ಕೆ ಸಾಕ್ಷಿಯಾಗಿದೆ” ಎಂದು ಕಿಡಿ ಕಾರಿದ್ದಾರೆ. ”ಸಿದ್ದರಾಮಯ್ಯನವರೇ ರಾಜ್ಯದ ಜನತೆಗೆ ನೀವು ಕೊಡಬೇಕಾಗಿರುವುದು ಕೇಂದ್ರ ಸರಕಾರ ನೀಡುತ್ತಿರುವ ಐದು ಕೆಜಿ ಅಕ್ಕಿಯನ್ನು ಹೊರತುಪಡಿಸಿ ನೀವು ನೀಡಿದ ಗ್ಯಾರಂಟಿಯ 10 ಕೆಜಿ ಅಕ್ಕಿ. ಹಿಂದಿನ ಬಾರಿಯಂತೆ ಅಕ್ಕಿ ನಿಂದು ಚೀಲ ನಂದು ಎಂದು ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ” ಎ‌ಂದು ತಿರುಗೇಟು ನೀಡಿದ್ದಾರೆ.

Read More

ಬೆಂಗಳೂರು ;- ಭಾರತ್‌ ಜೋಡೋ ಯಾತ್ರೆಯಲ್ಲಿ ಕೆಜಿಎಫ್​ 2 ಸಂಗೀತ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್​ ವಜಾ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಎಫ್‌ಐಆರ್ ರದ್ದುಪಡಿಸಲು ನ್ಯಾ. ಎಂ. ನಾಗಪ್ರಸನ್ನ ಅವರ ನೇತೃತ್ವದ ಪೀಠ ನಿರಾಕರಿಸಿತು. ಅರ್ಜಿದಾರರು ಅನುಮತಿ ಪಡೆಯದೇ ಸೋರ್ಸ್ ಕೋಡ್ ತಿರುಚಿದ್ದು, ಅದನ್ನು ಬಳಕೆ ಮಾಡಿರುವುದು ಅನುಮಾನರಹಿತವಾಗಿ ದೂರುದಾರರ ಕೃತಿಸ್ವಾಮ್ಯದ ಉಲ್ಲಂಘನೆಗೆ ಸಮನಾಗಿದೆ. ಅರ್ಜಿದಾರರು ದೂರುದಾರರ ಕೃತಿಸ್ವಾಮ್ಯವನ್ನು ಲಘುವಾದ ರೀತಿಯಲ್ಲಿ ಬಳಕೆ ಮಾಡಿದ್ದು, ಇದು ಮೇಲ್ನೋಟಕ್ಕೆ ಸಾಕ್ಷ್ಯ ಪರಿಶೀಲಿಸಬೇಕಾದ ಪ್ರಕರಣವಾಗಿದ್ದು, ತನಿಖೆಯಿಂದ ಹೊರಬರಬೇಕಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

Read More

ಬೆಂಗಳೂರು ;- ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ʼಕಾಸಿಗಾಗಿ ಪೋಸ್ಟಿಂಗ್’ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಟೀಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ ದಕ್ಷ ಅಧಿಕಾರಿಗಳನ್ನು ಹುಡುಕಿ ಪೋಸ್ಟಿಂಗ್ ನೀಡುತ್ತಿದ್ದೇವೆ. ಯಾವುದೇ ಭ್ರಷ್ಟಾಚಾರ ಕೂಡ ನಡೆದಿಲ್ಲ ಎಂದಿದ್ದಾರೆ. ನಾವು ಹಿಂದಿನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದೆವು. ನಾವು ಆರೋಪ ಮಾಡಿ, ನಾವೇ ಭ್ರಷ್ಟಾಚಾರ ಮಾಡಲು ಸಾಧ್ಯವಾ?, ಅದೆಲ್ಲಾ ಸುಳ್ಳು. ನಮ್ಮ ಸರ್ಕಾರದಲ್ಲಿ ಪ್ರಾಮಾಣಿಕ, ದಕ್ಷ ಅಧಿಕಾರಿಗಳಿಗೆ ಮಾತ್ರ ಮಣೆ ಹಾಕುತ್ತೇವೆ ಎಂದರು. ಇನ್ನು ಈ ತಿಂಗಳ ವೇತನಕ್ಕೆ ಸಾರಿಗೆ ನಿಗಮದಲ್ಲಿ ಹಣ ಇಲ್ಲದಿರೋ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸರ್ಕಾರದಿಂದ ನಮಗೆ ಮಹಿಳಾ ಪ್ರಯಾಣಿಕರು ಎಷ್ಟು ಓಡಾಡಿದ್ದಾರೆ ಅನ್ನೋದರ ಬಗ್ಗೆ ಮಾಹಿತಿ ಬೇಕು. ಅದರ ವೆಚ್ಚ ಮಾಹಿತಿ ನೀಡಲಿದ್ದೇವೆ. ಆ ಮೊತ್ತ ಸರ್ಕಾರ ಭರಿಸಲಿದೆ. ನಾಲ್ಕು ಸ್ವಾಮ್ಯದ ಸಂಸ್ಥೆಗಳಿಗೆ ವೇತನ ನೀಡಲಾಗುವುದು. ಊಹೆ ಮಾಡಿಕೊಂಡು ಹೇಳಿದ್ದಕ್ಕೆ ಉತ್ತರ ಕೊಡಲು ಆಗಲ್ಲ. ನಾವು ಸಂಬಳ…

Read More

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನ ಅಜ್ಮಾನ್ ನಗರದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಕೈನ್ಯೂಸ್ ವರದಿ ಮಾಡಿದೆ. ಅಜ್ಮಾನ್ ಒನ್ ವಸತಿ ಸಂಕೀರ್ಣದ 2ನೇ ಗೋಪುರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೆಲ ಅಂತಸ್ತಿನಿಂದ ಮೇಲಿನ ಮಹಡಿಯವರೆಗೆ ಹೊಗೆಯ ಕರಿಮೋಡ ಆವರಿಸಿರುವ ವೀಡಿಯೊವನ್ನು ಅಜ್ಮಾನ್ ಪೊಲೀಸರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬೆಂಕಿಯನ್ನು ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ಹತೋಟಿಗೆ ತರಲಾಗಿದೆ. ಬೆಂಕಿ ಕಾಣಿಸಿಕೊಂಡ ಬಳಿಕ ಅಲ್ಲಿದ್ದ ನಿವಾಸಿಗಳನ್ನು 7 ಬಸ್ಸುಗಳ ಮೂಲಕ ಅಜ್ಮಾನ್ ಮತ್ತು ಶಾರ್ಜಾದಲ್ಲಿರುವ ಹೊಟೇಲ್‌ಗಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ. ಅಜ್ಮಾನ್ ಪೊಲೀಸ್‌ನ ಕಾರ್ಯಾಚರಣೆ ವಿಭಾಗದ ಪ್ರಧಾನ ನಿರ್ದೇಶಕ ಬ್ರಿಗೇಡಿಯರ್ ಅಬ್ದುಲ್ಲಾ ಸೈಫ್ ಅಲ್ ಮತ್ರೂಷಿಯವರನ್ನು ಉಲ್ಲೇಖಿಸಿ ಖಲೀಜಾ ಟೈಮ್ಸ್ ವರದಿ ಮಾಡಿದೆ.

Read More

ತೈಪೆ: ದೇಶದ ಪೂರ್ವ ಕರಾವಳಿ ವ್ಯಾಪ್ತಿಯಲ್ಲಿ ರಷ್ಯಾದ ಎರಡು ಯುದ್ಧ ನೌಕೆಗಳು ಇರುವುದನ್ನು ಪತ್ತೆಯಾಗಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲು ಲಘು ವಿಮಾನಗಳು ಹಾಗೂ ಕಣ್ಗಾವಲು ನೌಕೆಗಳನ್ನು ನಿಯೋಜಿಸಲಾಗಿದೆ ಎಂದು ತೈವಾನ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ರಾತ್ರಿ 11ರ ವೇಳೆಗೆ ನಮ್ಮ ಪೂರ್ವ ತೀರದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಸಂಚರಿಸುತ್ತಿದ್ದಾಗ ರಷ್ಯಾ ನೌಕೆಗಳನ್ನು ಪತ್ತೆ ಮಾಡಲಾಗಿದೆ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈ ಎರಡು ಯುದ್ಧ ನೌಕೆಗಳು ತೈವಾನ್‌ ತೀರದಿಂದ ಎಷ್ಟು ದೂರದಲ್ಲಿವೆ ಎಂಬುದನ್ನು ಖಚಿತಪಡಿಸಿಲ್ಲ. ಚೀನಾ ನೌಕೆಗಳು ತನ್ನ ಸಮುದ್ರ ಪ್ರದೇಶದಲ್ಲಿ ನಿತ್ಯ ಕಾಣಿಸಿಕೊಳ್ಳುತ್ತಿವೆ ಎಂದು ದ್ವೀಪ ರಾಷ್ಟ್ರವಾಗಿರುವ ತೈವಾನ್‌ನಲ್ಲಿ ವರದಿಯಾಗುತ್ತಿರುತ್ತದೆ. ಆದರೆ, ಈ ದ್ವೀಪವು (ತೈವಾನ್‌) ತನ್ನದೇ ಭೂ ಪ್ರದೇಶ ಎಂದು ಹೇಳಿಕೊಂಡಿರುವ ಚೀನಾ, ಅಗತ್ಯಬಿದ್ದರೆ ಮುಂದೊಂದು ದಿನ ಬಲವಂತವಾಗಿ ವಶಪಡಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದೆ.

Read More

ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ದಾಳಿ ಮುಂದುವರೆದಿದೆ. ಇದೀಗ ರಷ್ಯಾದ ಎರಡು ಕ್ಷಿಪಣಿಗಳು ಉಕ್ರೇನ್​​ನ ಕ್ರಾಮಾಟೋರ್ಸ್ಕ್‌ ಮೇಲೆ ದಾಳಿ ನಡೆಸಿದ್ದು ಪರಿಣಾಮ ಓರ್ವ ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 42 ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜನ ಸಂದಣಿ ಇರುವ ಸ್ಥಳಗಳನ್ನು ಗುರುತಿಸಿ ರಷ್ಯಾ ದಾಳಿ ನಡೆಸಿದ್ದು, ಮೊದಲ ಕ್ಷಿಪಣಿಯು ರೆಸ್ಟೋರೆಂಟ್‌ಗೆ ಅಪ್ಪಳಿಸಿತು.ಇದಾದ ಕೆಲ ಹೊತ್ತಿನಲ್ಲಿಯೇ ಎರಡನೇ ಕ್ಷಿಪಣಿ ಕ್ರಾಮಾಟೋರ್ಸ್ಕ್‌ನ ಹೊರವಲಯದಲ್ಲಿರುವ ಹಳ್ಳಿಯೊಂದರ ಮೇಲೆ ನಡೆದಿದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Read More

ಡಿಸಿಎಂ ಡಿಕೆ ಶಿವಕುಮಾರ್​ ಇಂದು ದೆಹಲಿಗೆ ತೆರಳಿದ್ದು, ನಾಳೆ ಕೇಂದ್ರದ ವಿವಿಧ ಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೇಂದ್ರದ ಜಲಸಂಪನ್ಮೂಲ ಮಂತ್ರಿಗಳನ್ನ ಭೇಟಿ ಮಾಡ್ತಿದ್ದೇನೆ. ಯಾವುದೋ ಟ್ರಿಬ್ಯುನಲ್ ಮಾಡೋಕೆ ಹೊರಟಿದ್ದಾರೆ. ಅದು ನಮ್ಮ ರಾಜ್ಯಕ್ಕೆ ಮಾರಕ ಆಗುತ್ತೆ. ಹೀಗಾಗಿ ಕೇಂದ್ರದ ಮಂತ್ರಿಗಳನ್ನ ಭೇಟಿ ಮಾಡಬೇಕಿದೆ ಎಂದಿದ್ದಾರೆ.

Read More

ಬೆಳಗಾವಿ: ಗಣಿತ ಶಿಕ್ಷಕನ ವರ್ಗಾವಣೆ ವಿರೋಧಿಸಿ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆಯ ಸರ್ಕಾರಿ ಹೈಸ್ಕೂಲ್ ನಲ್ಲಿ ನಡೆದಿದೆ. ತಮ್ಮ ಮೆಚ್ಚಿನ ಶಿಕ್ಷಕರ ವರ್ಗಾವಣೆಯಿಂದ ನೊಂದ ಮಕ್ಕಳು ಕ್ಷೀರಭಾಗ್ಯದ ಹಾಲನ್ನೂ ನಿರಾಕರಿಸಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದಾರೆ. ಗಣಿತ ಶಿಕ್ಷಕ ಅಲಗೌಡ ಸೋಲಾಪೂರೆ ಬೇರೆ ಶಾಲೆಗೆ ವರ್ಗಾವಣೆ ಆಗಿದ್ದನ್ನು ವಿರೋಧಿಸಿ ನೂರಾರು ಮಕ್ಕಳು ಪ್ರತಿಭಟನೆ ನಡೆಸಿದ್ದು ಬಿಸಿಲು, ಗಾಳಿ ಎನ್ನದೇ ಶಾಲಾ ಆವರಣದಲ್ಲಿ ಸ್ಥಳಕ್ಕೆ ಬಿಇಒ, ಡಿಡಿಪಿಐ ಆಗಮಿಸುವಂತೆ ಪಟ್ಟು ಹಿಡಿದು ಕೂತಿದ್ದಾರೆ. ಇಂದು ಇಡೀ ದಿನ ಪ್ರತಿಭಟಿಸುತ್ತಿರುವವಿದ್ಯಾರ್ಥಿಗಳ ಪ್ರತಿಭಟನೆಗೆ ಪಾಲಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದು ಮುಂದೇನು ಅನ್ನುವ ಪ್ರಶ್ನೆ ಸದ್ಯ ಎದುರಾಗಿದೆ.

Read More

ರಾಮನಗರ: ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ರಾಮನಗರ ವ್ಯಾಪ್ತಿಯ ತಾವರೆಕೆರೆ ಪೋಲಿಸರು ಬಂಧಿಸಿದ್ದಾರೆ. ದ್ವಿಚಕ್ರ ವಾಹನಗಳ ಕಳ್ಳತನದ ಬಗ್ಗೆ ಕಾರ್ಯಾಚರಣೆ ನಡೆಸುತಿದ್ದ ತಾವರೇಕೆರೆ ಪೊಲೀಸರು ಮಾಹಿತಿ ಸಿಕ್ಕ ಆದರದ ಮೇಳೆ ಖದೀಮರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಆರೋಪಿಗಳಿಂದ ಐದು ಬೈಕ್ ಗಳ ವಶಕ್ಕೆ ಪಡೆದಿದ್ದು, ಈ ಘಟನೆ ಸಂಬಂಧ ಆರೋಪಿಗಳ ಮೇಲೆ ತಾವರೆಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಗಂಗಾವತಿ: ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಗಳನ್ನ ಬಿಡುವಂತೆ ಎಬಿವಿಪಿಯಿಂದ ಗಂಗಾವತಿ ನಗರದ ಶ್ರೀ ಕೃಷ್ಣದೇವರಾಯ ಹತ್ತಿರದ  ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಶಕ್ತಿ ಯೋಜನೆ ಜಾರಿ ಹಿನ್ನೆಲೆ ಬಸ್ ಗಳೆಲ್ಲಾ ಮಹಿಳಾ ಪ್ರಯಾಣಿಕರಿಂದ ತುಂಬುತ್ತಿವೆ. ಆದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದ್ರಿಂದ ತೊಂದರೆ ಆಗಿದ್ದು, ಸಮಯಕ್ಕೆ ಸರಿಯಾಗಿ‌ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿಗಳು ಬಸ್‌ಗಳ ಬಾಗಿಲಿಗೆ ಜೋತುಬಿದ್ದು ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಪ್ರಯಾಣ ಕಲ್ಪಿಸಬೇಕೆಂದು ಆಗ್ರಹಿಸಿ ಕೆಲಹೊತ್ತು ಬಸ್ ನಿಲ್ದಾಣದ ಪ್ರವೇಶ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಲಾಯಿತು. ನಂತರ ಕಂಪ್ಲಿ, ಬೂದಗುಂಪ, ಆನೆಗುಂದಿ, ಕನಕಗಿರಿ ಭಾಗಕ್ಕೆ ತಲಾ 1ಬಸ್ ಹಾಗೂ ಕಾರಟಗಿ ಭಾಗಕ್ಕೆ ಹೆಚ್ಚುವರಿ  ಬಸಗಳನ್ನು ಬಿಡುವಂತೆ ಎಬಿವಿಪಿ ಕಾರ್ಯಕರ್ತರು ಗಂಗಾವತಿ ತಹಸಿಲ್ದಾರ್ ಗೆ ಹಾಗೂ ಕೆಎಸ್ಆರ್ಟಿಸಿ ವಿಭಾಗದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Read More