Author: Prajatv Kannada

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ (Elephant) ಉಪಟಳ ಮುಂದುವರಿದಿದೆ. ಕಾಡಾನೆ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಗುಳಗಳಲೆ ಹಾಗೂ ಹೆಬ್ಬನಹಳ್ಳಿ ಗ್ರಾಮಗಳಲ್ಲಿ ನಡೆದಿದೆ. ಗುಳಗಳಲೆ ಗ್ರಾಮದ ಕುರ್ಚಿ ಕಾಫಿ ಎಸ್ಟೇಟ್ ರೈಟರ್ ಇನಾಯತ್ (45) ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಸದ್ಯ ಕೂದಲೆಳೆ ಅಂತರದಲ್ಲಿ ಇನಾಯತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳು ಇನಾಯತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆಬ್ಬನಹಳ್ಳಿ ಗ್ರಾಮದಲ್ಲಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಹಬೀದ್ (26) ಮೇಲೆ ಒಂಟಿಸಲಗ ಏಕಾಏಕಿ ದಾಳಿ ನಡೆಸಿದೆ. ಸಲಗದಿಂದ ತಪ್ಪಿಸಿಕೊಂಡಿರುವ ಹಬೀದ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀಟಮ್ಮ ಹೆಸರಿನ ಗುಂಪಿನಲ್ಲಿದ್ದ ಒಂಟಿಸಲಗ ಬೇರ್ಪಟ್ಟು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜನರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದು, ಕಾಡಾನೆ ಹಾವಳಿಗೆ ಪರಿಹಾರ ಕಂಡುಹಿಡಿಯುವಂತೆ ಮಲೆನಾಡು…

Read More

ಚಿಕ್ಕಮಗಳೂರು: ಸಿ.ಟಿ.ರವಿ (C.T.Ravi) ಸೋಲಿಗೆ ಅವರ ನಾಲಿಗೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ (S.L.Bhojegowda) ವ್ಯಾಖ್ಯಾನಿಸಿದ್ದು, ಸೋಲಿಸಿದ ಬಳಿಕ ಸಿ.ಟಿ.ರವಿ ಬುದ್ಧಿವಂತ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ನಗರದ ಹೊಸಮನೆ ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗ ಅವರಿಗೆ ಲಭಿಸಿತ್ತು. ಆದರೆ ಅವರ ನಾಲಿಗೆಯೇ ಅವರನ್ನು ಸೋಲಿಸಿದೆ. ರಾಜಕೀಯದಲ್ಲಿ ಟೀಕೆ ಮಾಡುವುದು ತಪ್ಪಲ್ಲ. ಆದರೆ ಅದಕ್ಕೊಂದು ಇತಿಮಿತಿ ಇರುತ್ತದೆ ಮತ್ತು ಇರಬೇಕು. ರಾಜಕೀಯವಾಗಿ ರಾಜಕೀಯ ಅಸ್ತ್ರದ ಟೀಕೆ ಮಾಡಿದರೆ ಸರಿ. ಆದರೆ ಅದು ವೈಯಕ್ತಿಕ ಟೀಕೆಯಾಗಬಾರದು. ಅದು ಸರಿಯೂ ಅಲ್ಲ. ಸಿ.ಟಿ.ರವಿ ಸದನದ ಒಳಗೆ-ಹೊರಗೆ ಎರಡೂ ಕಡೆ ರಾಜಕೀಯ ಟೀಕೆಯನ್ನು ಬಿಟ್ಟು ವೈಯಕ್ತಿಕ ಟೀಕೆ ಮಾಡಿದ್ದಾರೆ ಎಂದರು. ಟೀಕೆ ಮಾಡುವಾಗ ಅವರ ವ್ಯಕ್ತಿತ್ವ ಮತ್ತು ರಾಜಕೀಯ ಮುತ್ಸದ್ದಿತನದ ಬಗ್ಗೆ ಯೋಚನೆ ಮಾಡಬೇಕು. ಯೋಚಿಸಿ ಮಾತನಾಡಬೇಕು. ಯಾರನ್ನೋ ಮೆಚ್ಚಿಸುವ ಸಲುವಾಗಿ, ಕ್ಷಣಿಕ ಸುಖಕ್ಕೆ ಅಥವಾ ಕಾರ್ಯಕರ್ತರನ್ನು ಮೆಚ್ಚಿಸುವುದಕ್ಕೆ ವೈಯಕ್ತಿಕ…

Read More

ಉಡುಪಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಕಳೆದ ಮೂರು ದಶಕದಲ್ಲೇ ದಾಖಲೆಯ ಸಾಧನೆ ಮಾಡಿದೆ. ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದ್ದು, 65 ಸೀಟು ಗೆದ್ದ ಬಿಜೆಪಿ (BJP) ಅಧಿಕಾರದಿಂದ ಹೊರಬಿದ್ದಿದೆ. ಜೆಡಿಎಸ್ (JDS) 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ರಾಜ್ಯದ ಚಿತ್ರಣ ಅದಲು ಬದಲಾದರೂ ಕೂಡ ಉಡುಪಿಯಲ್ಲಿ (Udupi) ಬಿಜೆಪಿಯ ಹಿಂದಿನ ದಾಖಲೆ ಹಾಗೆಯೇ ಉಳಿದಿದೆ. ಉಡುಪಿಯಲ್ಲಿ ಐದಕ್ಕೆ ಐದು ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಉಡುಪಿಯ ಕೇಸರಿ ಕೋಟೆಗೆ ದಾಳಿ ಮಾಡುವಲ್ಲಿ ವಿಫಲಯತ್ನ ಮಾಡಿದ್ದು, ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯ ಪತಾಕೆಯನ್ನು ಹಾರಿಸಿದೆ. ಐದರಲ್ಲಿ ನಾಲ್ಕು ಹೊಸ ಮುಖಗಳಿಗೆ ಅವಕಾಶ ನೀಡಿದ್ದ ಬಿಜೆಪಿಯ ಹೊಸ ಪ್ರಯೋಗವು ಉಡುಪಿಯಲ್ಲಿ ಗೆಲುವನ್ನು ಸಾಧಿಸಿದೆ. ಇದು ಕಾರ್ಯಕರ್ತರ ಗೆಲುವು. ಬಿಜೆಪಿ ಪಕ್ಷದ ಗೆಲುವು. ಕೇವಲ ಒಂದು ತಿಂಗಳೊಳಗೆ ಇಡೀ ವಿಧಾನಸಭಾ ಕ್ಷೇತ್ರದ ಮನೆಗಳಿಗೆ ಜನರ ಮನಗಳಿಗೆ ನನ್ನನ್ನು ಮುಟ್ಟಿಸುವಲ್ಲಿ ಯಶಸ್ವಿ ಆಗಿದ್ದಾರೆ.…

Read More

ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಮನೆಯಲ್ಲಿ ನೂತನ ಶಾಸಕ ಬಿ.ವೈ.ವಿಜಯೇಂದ್ರ (Vijayendra) ಭೇಟಿ ನೀಡಿ ಸಾಂತ್ವನ ಹೇಳಿದರು. ಶಿವಮೊಗ್ಗದ ಕುಂಸಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಕಳೆದ ಗುರುವಾರ ಎರಡು‌ ಖಾಸಗಿ ಬಸ್‌ಗಳ‌ ನಡುವಿನ ಭೀಕರ ಅಪಘಾತವಾಗಿತ್ತು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. ಶಿಕಾರಿಪುರದ ಮೃತರ ಮನೆಗಳಿಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಈಸೂರು ಗ್ರಾಮದ ಮೃತ ಅರುಣ, ಚಿಕ್ಕಜೋಗಿಹಳ್ಳಿಯ ಮಹೇಶ್ವರಪ್ಪ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಶಿಕಾರಿಪುರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ವಿಜಯೇಂದ್ರ ವಿಜಯ ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮೃತಪಟ್ಟವರ ಮನೆಗೆ ತೆರಳಿ ಮೃತರ ಕುಟುಂಬದವರಿಗೆ ಸಮಾಧಾನ ಹೇಳಿದ್ದಾರೆ.

Read More

ಮೈಸೂರು: ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸ್ಪಷ್ಟ ಬಹುಮತ ಸಾಧಿಸಿದ ಬೆನ್ನಲ್ಲೇ ಮೈಸೂರಿನ ರಂಗಾಯಣ (Mysuru Rangayana) ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ (Addanda C Cariappa) ರಾಜೀನಾಮೆ (Resignation) ನೀಡಿದ್ದಾರೆ. ಅಡ್ಡಂಡ ಕಾರ್ಯಪ್ಪ ಮೈಸೂರು ರಂಗಾಯಣದ ನಿರ್ದೇಶಕರಾದ ಮೇಲೆ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ‘ಟಿಪ್ಪು ನಿಜಕನಸುಗಳು’ ನಾಟಕ ರಚಿಸಿ ವಿವಾದವನ್ನು ಸೃಷ್ಟಿಸಿ ಬಳಿಕ ‘ಸಿದ್ದರಾಮಯ್ಯ ನಿಜ ಕನಸುಗಳು’ ಪುಸ್ತಕ ಬಿಡುಗಡೆ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು.ಚುನಾವಣೆಗೆ ಮುನ್ನ ಉರಿಗೌಡ ಹಾಗೂ ನಂಜೇಗೌಡ ಪಾತ್ರಗಳನ್ನು ಮುನ್ನಲೆಗೆ ತಂದು ಒಕ್ಕಲಿಗ ಹಾಗೂ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿತ್ತು. ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಡ್ಡಂಡ ಕಾರ್ಯಪ್ಪ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Read More

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಯವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ ನಡೆಸಲಾಯಿತು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಪರಮಾಪ್ತ ಭೋಜೇಗೌಡ, ಜೆಡಿಎಸ್ ಅಭ್ಯರ್ಥಿ ಇದ್ದರೂ ಸಿ.ಟಿ ರವಿ ವಿರುದ್ಧ ಭೋಜೇಗೌಡ (Bhoje Gowda) ಅಖಾಡಕ್ಕಿಳಿದಿದ್ದರು. ಈ ಮೂಲಕ ಸಿ.ಟಿ.ರವಿ ಸೋಲಿನ ಮಾಸ್ಟರ್ ಮೈಂಡ್ ಆಗಿದ್ದಾರೆ. ಹೀಗಾಗಿ ಜೆ.ಡಿ.ಎಸ್ ಕಾರ್ಯಕರ್ತರು ಭೋಜೇಗೌಡರಿಗೆ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ಸನ್ಮಾನ ಹಾಗೂ ಅಭಿಷೇಕ ಮಾಡಿದ್ದಾರೆ. ಕಾಂಗ್ರೆಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದ ಭೋಜೇಗೌಡ, ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ಸಿನ ತಮ್ಮಯ್ಯ ಪರ ಮತಯಾಚಿಸಿದ್ದರು. ಬಳಿಕ ಸಿ.ಟಿ.ರವಿ ಬುದ್ಧಿವಂತರಿದ್ದಾರೆ ಎಂದು ಹಾಡಿ ಹೊಗಳಿದ ಭೋಜೇಗೌಡ, ಸಿ.ಟಿ.ರವಿ ಬಹಳ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಿದ್ದರು. ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಯೋಗವೂ ಲಭಿಸಿತ್ತು. ಟೀಕೆಗಳು ತಪ್ಪಲ್ಲ, ಆದರೆ ಅದಕ್ಕೊಂದು ಇತಿಮಿತಿ ಇರುತಿತ್ತು. ರಾಜಕೀಯ ಅಸ್ತ್ರದ ಟೀಕೆ ಸರಿ, ವೈಯಕ್ತಿಕ ಟೀಕೆ ಸರಿಯಲ್ಲ. ಸಿ.ಟಿ ರವಿ ಸದನದ ಒಳಗೆ-ಹೊರಗೆ…

Read More

ಬೀದರ್: ವಿಧಾನಸಭೆಯ ಫಲಿತಾಂಶದ (Election Result) ಬೆನ್ನಲ್ಲೇ ಗಡಿ ಜಿಲ್ಲೆ ಬೀದರ್‌ನ (Bidar) ಬಿಜೆಪಿಯಲ್ಲಿ (BJP) ಭಿನ್ನಮತ ಸ್ಫೋಟವಾಗಿದೆ. ನನ್ನ ಜೊತೆಗೇ ಇದ್ದುಕೊಂಡು ಬೆನ್ನಿಗೆ ಚೂರಿ ಹಾಕಿದರು ಎಂದು ಸ್ವ ಪಕ್ಷದವರ ವಿರುದ್ಧವೇ ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಠಾಕೂರ್ (Ishwar Singh Thakur) ಆಕ್ರೋಶ ಹೊರ ಹಾಕಿದ್ದಾರೆ. ಬೀದರ್‌ನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಈಶ್ವರ್ ಸಿಂಗ್ ಠಾಕೂರ್, ನನ್ನ ಜೊತೆಗೆ ಇದ್ದು 15 ರಿಂದ 20 ಜನ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಮುಖಂಡ ಡಿಕೆ ಸಿದ್ರಾಮ್ ಸೇರಿದಂತೆ ಹಲವರು ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಭಗವಂತ್ ಖೂಬಾ ಒಂದು ಬಾರಿ ಮುಖ ತೋರಿಸಿ ಹೋದರು. ಆದರೆ ನನ್ನ ಪರವಾಗಿ ಖೂಬಾ ಕೆಲಸ ಮಾಡಿಲ್ಲ. ಬಿಜೆಪಿಯಲ್ಲಿ ಇದ್ದು ಈ ಬಾರಿ ಕೆಲವರು ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ. ಆ ತಪ್ಪು ಮಾಡಿದವರಿಗೆ ಆ ಭಗವಂತನೇ ನೋಡಿಕೊಳ್ಳುತ್ತಾನೆ ಎಂದರು. ಪಾರ್ಟಿಯಲ್ಲಿ ಇದ್ದುಕೊಂಡೇ ಡಿಕೆ…

Read More

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ (Nalin Kumar Kateel) ಹಾಗೂ ಡಿವಿ ಸದಾನಂದ ಗೌಡರ (DV Sadananda Gowda) ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಹಿಂದೂ (Hindu) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಬಿಜೆಪಿ ಹೀನಾಯವಾಗಿ ಸೋಲಲು ಕಾರಣರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ’ ಎಂದು ನಳಿನ್‌ ಕುಮಾರ್‌ ಮತ್ತು ಡಿವಿಎಸ್‌ ಫೋಟೋ ಇರುವ ಬ್ಯಾನರ್‌ ಅನ್ನು ನೊಂದ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಪುತ್ತೂರಿನ (Putturu) ಬಸ್ ನಿಲ್ದಾಣದ ಬಳಿ ಹಾಕಲಾಗಿದೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲ ಅವರಿಗೆ ನೀಡದೇ ಅಶಾ ತಿಮ್ಮಪ್ಪ ಗೌಡರಿಗೆ ಟಿಕೆಟ್‌ ನೀಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಅರುಣ್ ಪುತ್ತಿಲ ಬಂಡಾಯವಾಗಿ ಸ್ಪರ್ಧಿಸಿದ ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ರೈ 4,295 ಮತಗಳ ಅಂತರದಿಂದ ಜಯಗಳಿಸಿದ್ದರು. ಅಶೋಕ್‌ ಕುಮಾರ್‌ ರೈ 65,923 ಮತಗಳನ್ನು ಪಡೆದರೆ ಅರುಣ್‌ ಕುಮಾರ್‌ ಪುತ್ತಿಲ 61,628 ಮತಗಳನ್ನು ಗಳಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಆಶಾ ತಿಮ್ಮಪ್ಪ 36,733 ಮತಗಳನ್ನು ಪಡೆದು…

Read More

ಮೈಸೂರು: ಮೈಸೂರಲ್ಲಿ ಪ್ರಧಾನಿ ಮೋದಿಯವರು ರೋಡ್‌ ಶೋ ಮಾಡಿದ್ದ ರಸ್ತೆಯು ಅಪವಿತ್ರವಾಗಿದೆ ಎಂದು ಕಾಂಗ್ರೆಸ್‌ ಕಾರ್ಯರ್ತರು, ಸಗಣಿ, ಗಂಜಲ ಹಾಕಿ ತೊಳೆದು ಸ್ವಚ್ಛ ಮಾಡಿದ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಮೈಸೂರಿನ ಕಾಂಗ್ರೆಸ್‌ ಕಾರ್ಯಕರ್ತರು ಮೋದಿಯವರು ರೋಡ್‌ ಶೋ ಮಾಡಿ ದಸರಾ ಮೆರವಣಿಗೆ ರಾಜ ಮಾರ್ಗಕ್ಕೆ ಕಳಂಕ ತಂದಿದ್ದಾರೆಂದು ಕಿಡಿಕಾರಿದರು. ಬಳಿಕ ಅವರೇ ರಸ್ತೆ ಶುದ್ಧಿ ಮಾಡಿದ್ದಾರೆ. ಗಂಜಲ, ಸಗಣಿ ನೀರಿನಿಂದ ರಾಜ ಮಾರ್ಗವನ್ನ ಶುಚಿಗೊಳಿಸಿದ್ದಾರೆ. ಮೈಸೂರಿನ ಕೆ.ಆರ್ ವೃತ್ತ, ಸಯ್ಯಾಜೀರಾವ್ ರಸ್ತೆಯನ್ನ ಕೈ ಕಾರ್ಯಕರ್ತರು ಶುದ್ಧಿ ಮಾಡಿದ್ದಾರೆ. ಚಾಮುಂಡೇಶ್ವರಿ ಶಾಪದಿಂದ ಕರ್ನಾಟಕದಲ್ಲಿ ಬಿಜೆಪಿ ನೆಲಕಚ್ಚಿದೆ. ನಾಡದೇವಿ ಚಾಮುಂಡೇಶ್ವರಿ ಮೆರವಣಿಗೆ ಸಾಗುವ ದಾರಿಯಲ್ಲಿ ಮೋದಿ ಬಂದಿದ್ದು ಅಪವಿತ್ರ, ರಾಜ ಮಹಾರಾಜರು ಸಾಗಿದ್ದ ಮಾರ್ಗ, ಈಗ ತಾಯಿ ಚಾಮುಂಡೇಶ್ವರಿ ಸಾಗುವ ಮಾರ್ಗ, ಅಂತಹ ಮಾರ್ಗದಲ್ಲಿ ಮೋದಿ ಸಾಗಿದ್ದು ಅಪಶಕುನ. ಇದರಿಂದಾಗಿಯೇ ಬಿಜೆಪಿ ಸೋತಿದೆ. ನಮ್ಮ ಮೈಸೂರು ಪವಿತ್ರವಾಗಿರಬೇಕು ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗುತ್ತಾ ರಸ್ತೆ ಶುಚಿಗೊಳಿಸಿದ್ದಾರೆ. ಹಳೇ ಮೈಸೂರು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿರುವ…

Read More

ಮಂಗಳೂರು: ಕೆಲಸ ಕೊಡಿಸುವ ನೆಪದಲ್ಲಿ 20 ವರ್ಷದ ವಿವಾಹಿತ ಮಹಿಳೆಗೆ ಉದ್ಯಮಿಯೊಬ್ಬರು ಲೈಂಗಿಕ (sexually) ಕಿರುಕುಳ ನೀಡಿದ್ದಾರೆ ಎಂದು  ಆರೋಪ ಕೇಳಿಬಂದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಘಟನೆ ನಡೆದಿದೆ. ಮಹಾವೀರ ಟೆಕ್ಸ್ ಟೈಲ್ ಹಾಗೂ ಮಹಾವೀರ ಸೂಪರ್ ಮಾರ್ಕೆಟ್ ಮಾಲೀಕ ಪ್ರಭಾಕರ ಹೆಗ್ಡೆ ವಿರುದ್ಧ ಮೈಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಹಿಳೆ ಮತ್ತು ಆಕೆಯ ಗಂಡನಿಂದ ದೂರು ನೀಡಲಾಗಿದೆ. ಇತ್ತ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾರೆ. ಉದ್ಯಮಿ ತನ್ನ ಕಾರಿನಲ್ಲಿ ಕಿರುಕುಳ ನೀಡುವಾಗ ಯುವತಿ ಕಿರುಚಾಡಿ ಕಾರಿನಿಂದ ಹೊರಬಂದಿದ್ದಾರೆ. ಬೈಕ್​ನಲ್ಲಿ ಬಂದ ಯುವಕರಿಂದ ಮಹಿಳೆಯ ರಕ್ಷಣೆ ಮಾಡಲಾಗಿದೆ. ತನ್ನ ಸೂಪರ್ ಮಾರ್ಕೇಟ್​ನ ಬಿಲ್ಲಿಂಗ್ ತೋರಿಸೋದಾಗಿ ಕಾರಿನಲ್ಲಿ ಕರೆದೊಯ್ದು ಕಿಡ್ನಾಪ್ ಆರೋಪ ಸಹ ಮಹಿಳೆ ಮಾಡಿದ್ದಾರೆ.

Read More