ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Assembly Election 2023) ಅತೀ ದೊಡ್ಡ ಗೆಲುವಿನ ಪಕ್ಷವಾಗಿ ಕಾಂಗ್ರೆಸ್ (Congress)ಹೊರಹೊಮ್ಮಿದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಮತದಾರ ಪಕ್ಷವನ್ನು ಕೈ ಹಿಡಿದಿದ್ದಾನೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಾಂಗ್ರೆಸ್ ಗೆಲ್ಲಿಸಿದ್ದಕ್ಕೆ ಕರ್ನಾಟಕದ ಜನತೆಗೆ ಧನ್ಯವಾಗಳನ್ನು ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ, ‘ಜನರು ಒಳ್ಳೆ ಕೆಲಸ ಮಾಡಿದರೆ ಒಳ್ಳೆಯವರ ಕೈ ಹಿಡಿತಾರೆ. ಸೋಲಲಿ ಗೆಲ್ಲಲಿ ಜನರ ಮಧ್ಯೆ ಇರಬೇಕು. ಇದು ಕೇವಲ ಒಬ್ಬರ ಗೆಲುವಲ್ಲ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದ್ದಾರೆ. ಹಾಗಾಗಿ ಗೆದ್ದಿದ್ದೇವೆ. ಜೊತೆಗೆ ನಮ್ಮ ಗ್ಯಾರಂಟಿ ಕೂಡ ಕೆಲಸ ಮಾಡಿದೆ. ಗ್ಯಾರಂಟಿಗಳಿಗೆ ಜನ ಸ್ಪಂದಿಸಿದ್ದಾರೆ’ ಎಂದರು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕುರಿತು ಮಾತನಾಡಿದ ಖರ್ಗೆ, ‘ಯಾವುದಕ್ಕೂ ವ್ಯಕ್ತಿಗತವಾಗಿ ಮೋದಿ ವಿರುದ್ದ ಮಾತನಾಡಲ್ಲ. ಆದರೆ ಮೋದಿಯವರು ಇಲ್ಲಿಯೇ ಓಣಿ ಓಣಿ ತಿರುಗಿದ್ದು ಸರಿ ಅನಿಸಿಲ್ಲ. ಅವರ ಕ್ಯಾಂಪೇನ್ ಮಾಡುವ ಅವರ ಸ್ಟೈಲ್ ಗೆ ನಾನು ಯಾವುದೇ ಟೀಕೆ ಮಾಡುವುದಿಲ್ಲ.…
Author: Prajatv Kannada
ಶಿವಮೊಗ್ಗ : ಕೃಷಿಭೂಮಿ ಹೋರಾಟಗಳಿಂದ ಹೆಸರುವಾಸಿಯಾಗಿರುವ ಸಹ್ಯಾದ್ರಿ ಬೆಟ್ಟಗಳ ತಪ್ಪಲು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಿಮ್ಮನೆ ರತ್ನಾಕರ್ ವಿರುದ್ಧ ಆರಗ ಜ್ಞಾನೇಂದ್ರ 11 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ಸತತ ಐದನೇ ಬಾರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ಪರಸ್ಪರ ಸ್ಪರ್ಧಿಸಿದ್ದರು. ಈ ಹಿಂದೆ ಮೂರು ಬಾರಿ ಆರಗ ಜ್ಞಾನೇಂದ್ರ ಗೆಲುವು ಸಾಧಿಸಿದ್ದರೆ ಕಿಮ್ಮನೆ ಎರಡು ಬಾರಿ ಗೆದ್ದಿದ್ದಾರೆ. ಒಟ್ಟಾರೆ 4 ಬಾರಿ ತೀರ್ಥಹಳ್ಳಿ ಕ್ಷೇತ್ರವನ್ನು ಆರಗ ಜ್ಞಾನೇಂದ್ರ ಪ್ರತಿನಿಧಿಸಿದ್ದಾರೆ. ವಿಶೇಷವಾಗಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಎಐಸಿಸಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿದರೆ ರಾಜ್ಯದಲ್ಲಿ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸುತ್ತಿರುವವರಲ್ಲಿ ಆರಗ ಜ್ಞಾನೇಂದ್ರ ಪ್ರಮುಖರು. ಮಲ್ಲಿಕಾರ್ಜುನ ಖರ್ಗೆಯವರು 10 ಬಾರಿ ವಿಧಾನಸಭೆಗೆ ಸ್ಪರ್ಧಿಸಿ ದಾಖಲೆ ನಿರ್ಮಿಸಿದ್ದಾರೆ. ಈಗ ಆರಗ ಜ್ಞಾನೇಂದ್ರ ಕೂಡ 10ನೇ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಜೊತೆಗೆ, 10 ಬಾರಿಯೂ ಒಂದೇ ಪಕ್ಷ ಮತ್ತು ಒಂದೇ ಚಿಹ್ನೆಯಡಿ ಸ್ಪರ್ಧೆ ಮಾಡಿದ್ದಾರೆ. 1983ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲಿ…
ಬೆಂಗಳೂರು: ಬಿಜೆಪಿ ಅಭ್ಯರ್ಥಿ ಎಸ್ ಸುರೇಶ್ ಕುಮಾರ್ ಅವರು ರಾಜಾಜಿನಗರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಸೋಲು ಕಂಡಿದ್ದಾರೆ. ಇನ್ನೂ ಮತ ಎಣಿಕೆ ಆರಂಭದಿಂದಲೂ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ಸುತ್ತಿನಲ್ಲಿ ಪಟ್ಟಣ್ಣ, ಮತ್ತೊಂದು ಸುತ್ತಿನಲ್ಲಿ ಸುರೇಶ್ ಕುಮಾರ್ ಅವರು ಮುನ್ನಡೆ ಪಡೆಯುತ್ತಿದ್ದರು. ಅಂತಿಮ ಎರಡು ಸುತ್ತಿನಲ್ಲಿ ಸುರೇಶ್ ಕುಮಾರ್ ಅವರಿಗೆ ವಿಜಯಮಾಲೆ ಒಲಿದಿದೆ. ಇನ್ನೂ 2023 ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಕ್ಷೇತ್ರಗಳಲ್ಲಿ ರಾಜ್ಯ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಕರ್ನಾಟಕದಲ್ಲಿ ಅರಳಿದ ಕಮಲವನ್ನು ಕಾಂಗ್ರೆಸ್ ಮುದುಡಿಸಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಹಿನ್ನೆಡೆ, ಕಾಂಗ್ರೆಸ್ ಮುನ್ನಡೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದೆ 224 ಕ್ಷೇತ್ರಗಳಲ್ಲಿ 223ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರೆ, ಬಿಜೆಪಿ 224ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಳಿಸಿದೆ. ಮುನ್ನಡೆ – ಬಿಜೆಪಿ: 63 ಕಾಂಗ್ರೆಸ್ : 135 ಜೆಡಿಎಸ್: 22 ಇತರೆ 04 ಬೆಳಗ್ಗೆ 02 ಗಂಟೆವರೆಗೆ ನಡೆದ ಮತ ಮಣಿಕೆ ಪ್ರಕ್ರಿಯೆ ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಹಾಗೂ ಫಲಿತಾಂಶದ ನಿಖರವಾದ ಇಂಚಿಂಚೂ ಮಾಹಿತಿ, ಲೈವ್ ಅಪ್ ಡೇಟ್ ಗಾಗಿ prajaatvkannadanews ಫಾಲೋ ಮಾಡಿ
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು. ರಾಜ್ಯ ವಿಧಾನಸಭಾ ಚುನಾವಣೆಯ (Karnataka Election) ಫಲಿತಾಂಶ ಬಹುತೇಕ ಖಚಿತವಾಗಿದೆ. ಸ್ಪಷ್ಟ ಬಹುಮತ ಕಾಂಗ್ರೆಸ್‌ಗೆ ಬಂದಿದ್ದು, ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್‌ನಲ್ಲಿ ಏನಿದೆ?: ರಾಜ್ಯದ ಜನತೆಯ ಆದೇಶವನ್ನು ನಾನು ಸ್ವಾಗತಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾದೇಶವೇ ಅಂತಿಮ. ಸೋಲು, ಗೆಲುವನ್ನು ನಾನು ಸಮಚಿತ್ತದಿಂದ ಸ್ವೀಕರಿಸುತ್ತೇನೆ. ಆದರೆ, ಈ ಸೋಲು ಅಂತಿಮವಲ್ಲ, ನನ್ನ ಹೋರಾಟ ನಿಲ್ಲುವುದಿಲ್ಲ, ಸದಾ ಜನರ ಜತೆಯಲ್ಲೇ ಇರುತ್ತೇನೆ. ನಮ್ಮ ಪಕ್ಷವನ್ನು ಆಶೀರ್ವದಿಸಿದ ಮಹಾಜನತೆಗೆ ಅಭಿನಂದನೆಗಳು. ನನಗಾಗಲಿ, ನಮ್ಮ ಕುಟುಂಬಕ್ಕೆ ಆಗಲಿ ಸೋಲು, ಗೆಲುವು ಹೊಸದೇನಲ್ಲ. ಈ ಹಿಂದೆ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ರೇವಣ್ಣ, ನಾನೂ ಸೋತಿದ್ದೆವು. ಹಾಗೆಯೇ ಗೆದ್ದಾಗ ಬದ್ಧತೆಯಿಂದ ಜನಸೇವೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರಲಿರುವ ನೂತನ ಸರ್ಕಾರಕ್ಕೆ ಶುಭವಾಗಲಿ.…
ಬೆಂಗಳೂರು: ನಾವು ಒಂದು ವಿಪಕ್ಷವಾಗಿ ಜನರ ಸೇವೆ ಮಾಡುತ್ತೇವೆ. ಕಾಂಗ್ರೆಸ್‌ಗೆ (Congress) ಆಲ್ ದಿ ಬೆಸ್ಟ್ ಎಂದು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ (Election) ಸೋಲು, ಗೆಲುವು ಸಹಜವಾಗಿದೆ. ಕಾಂಗ್ರೆಸ್‌ಗೆ ಜನರು ಆಶೀರ್ವಾದ ಮಾಡಿದ್ದಾರೆ. ನಾವು ಒಂದು ವಿಪಕ್ಷವಾಗಿ ಜನರ ಸೇವೆ ಮಾಡುತ್ತೇವೆ. ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದರು. ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ (Result) ಬಹುತೇಕ ಖಚಿತವಾಗಿದೆ. ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದೆ. ಸರ್ಕಾರ ರಚಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ.
ಬೆಂಗಳೂರು: ಕಾಂಗ್ರೆಸ್‌ಗೆ ಅಭೂತಪೂರ್ ಗೆಲವು ಸಿಕ್ಕ ಹಿನ್ನೆಲೆಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದಾರೆ. ಕರ್ನಾಟಕದ ಅತಿದೊಡ್ಡ ಗೆಲವುಗಿಗೆ ಕಾರಣರಾದ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಬೆಂಗಳೂರು: ಚುನಾವಣೆಯಲ್ಲಿ (Karnataka Election) ಬಿಜೆಪಿಗೆ ಸೋಲಾಗುತ್ತಿದ್ದಂತೆ ಬೊಮ್ಮಾಯಿ (CM Basavaraj Bommai) ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.ಸದ್ಯ ಹಾವೇರಿಯ (Haveri) ಶಿಗ್ಗಾಂವಿಯಲ್ಲಿರುವ ಬೊಮ್ಮಾಯಿ ಇಂದು ಸಂಜೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಮಧ್ಯಾಹ್ನ 12:30ರ ಟ್ರೆಂಡ್ ಪ್ರಕಾರ ಬಿಜೆಪಿ 65, ಕಾಂಗ್ರೆಸ್ 132, ಜೆಡಿಎಸ್ 21, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಬೆಂಗಳೂರು: ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ 500 ಮತಗಳ ಅಂತರದಿಂದ ದಿನೇಶ್ ಗುಂಡೂರಾವ್ ಗೆಲುವು ಸಾಧಿಸಿದ್ದಾರೆ.ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ದಾಟಿದ ಹಿನ್ನೆಲೆ ಕಾಂಗ್ರೆಸ್ ಶಾಸಕರನ್ನು ಒಟ್ಟುಗೂಡಿಸಲು ಕೈ ನಾಯಕರು ಶಾಂಗ್ರಿಲಾ ಹೋಟೆಲ್ನಲ್ಲಿ ಸಭೆ ಸೇರುವ ಸಾಧ್ಯತೆ ಇದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಹಿನ್ನೆಡೆ, ಕಾಂಗ್ರೆಸ್ ಮುನ್ನಡೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದೆ 224 ಕ್ಷೇತ್ರಗಳಲ್ಲಿ 223ರಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರೆ, ಬಿಜೆಪಿ 224ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಳಿಸಿದೆ. ಮುನ್ನಡೆ – ಬಿಜೆಪಿ: 66 ಕಾಂಗ್ರೆಸ್ : 131 ಜೆಡಿಎಸ್: 21 ಇತರೆ 06 ಬೆಳಗ್ಗೆ 01 ಗಂಟೆವರೆಗೆ ನಡೆದ ಮತ ಮಣಿಕೆ ಪ್ರಕ್ರಿಯೆ ಪ್ರತೀ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಹಾಗೂ ಫಲಿತಾಂಶದ ನಿಖರವಾದ ಇಂಚಿಂಚೂ ಮಾಹಿತಿ, ಲೈವ್ ಅಪ್ ಡೇಟ್ ಗಾಗಿ prajaatvkannadanews ಫಾಲೋ ಮಾಡಿ