ಸಮಂತಾ ಮಾಜಿ ಪತಿ ನಾಗಚೈತನ್ಯ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಶೋಭಿತ ಮನೆಯಲ್ಲಿ ಮದುವೆ ಶಾಸ್ತ್ರ ಶುರು ಆರಂಭವಾಗಿದ್ದು, ಅವುಗಳ ಸಂಭ್ರಮದ ಫೋಟೋಗಳನ್ನು ಶೋಭಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇತ್ತೀಚೆಗಷ್ಟೇ ನಾಗಚೈತನ್ಯ ಮನೆಯಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ ಮೆಂಟ್ ಮಾಡಲಾಗಿತ್ತು. ಇದೀಗ ಅದ್ದೂರಿಯಾಗಿ ಮದುವೆ ಸಿದ್ದತೆ ನಡೆಯುತ್ತಿದೆ. ಸದ್ದಿಲ್ಲದೆ ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ಆರಂಭವಾಗಿದೆ. ಕೆಂಪು ಬಣ್ಣದ ಸೀರೆಯುಟ್ಟು ನಗುತ್ತಾ ಅರಿಶಿಣವನ್ನು ಕಟ್ಟುವ ಶಾಸ್ತ್ರದಲ್ಲಿ ಶೋಭಿತಾ ಭಾಗಿಯಾಗಿದ್ದಾರೆ. ನಾಗಚೈತನ್ಯ ಹಾಗೂ ಶೋಭಿತಾ ಮದುವೆ ಯಾವಾಗ? ಎಲ್ಲಿ ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಸದ್ಯದ ಮಾಹಿತಿ ಪ್ರಕಾರ ರಾಜಸ್ಥಾನದಲ್ಲಿ ನಾಗಚೈತನ್ಯ ಮತ್ತು ಶೋಭಿತಾ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕುಟುಂಬದಿಂದ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ. ನಾಗಚೈತನ್ಯ 2017ರಲ್ಲಿ ನಟಿ ಸಮಂತಾ ಜೊತೆ ಮದುವೆಯಾಗಿದ್ದರು. ಆದರೆ 2021ರಲ್ಲಿ ಕೆಲ ಮನಸ್ತಾಪಗಳಿಂದ ಇಬ್ಬರೂ ಬೇರೆಯಾದರು. 4 ವರ್ಷಗಳ ದಾಂಪತ್ಯಕ್ಕೆ ಇಬ್ಬರೂ ಅಂತ್ಯ ಹಾಡಿದರು. ಇದೀಗ ನಾಗಚೈತನ್ಯ…
Author: Prajatv Kannada
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಅಬ್ಬರಿಸುತ್ತಿರುವ ವರುಣನ ಆರ್ಭಟ ಮುಂದುವರೆಯುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಬೆಂಗಳೂರಿಗೆ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬುಧವಾರ, ಗುರುವಾರ ಎರಡು ದಿನ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. https://youtu.be/S-5EuabXH3c?si=_T6Mlt–YTzWSu5w ಇದೇ ಕಾರಣಕ್ಕೆ ಇಂದು ನಗರದ ಪ್ರಾಥಮಿಕ, ಫ್ರೌಡಶಾಲೆ, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಇತ್ತ ಮಳೆ ಹೆಚ್ಚಾಗಿದ್ದರ ಎಫೆಕ್ಟ್ ಐಟಿ ವಲಯಗಳಿಗೂ ತಟ್ಟಿದ್ದು, ಅಲರ್ಟ್ ಘೋಷಣೆ ಹಿನ್ನೆಲೆ ಹಲವು ಕಂಪನಿಗಳು ತಮ್ಮ ಸಿಬ್ಬಂದಿಗಳ ಹಿತ ದೃಷ್ಟಿಯಿಂದ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿವೆ. ಇತ್ತ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದ್ದು, 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಮೈಸೂರು, ಮಂಡ್ಯ, ರಾಮನಗರ, ಹಾಸನ, ಕೊಡಗು ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ಬೆಂಗಳೂರಿನಲ್ಲಿ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ನಟ ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗದ ಕಾರಣಕ್ಕೆ ಬಳ್ಳಾರಿಯಲ್ಲೇ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ವೈದ್ಯಕೀಯ ವರದಿ ಕೇಳಿದ ಬೆನ್ನಲ್ಲೇ ವಿಮ್ಸ್‌ನಲ್ಲಿ ದಾಸನಿಗೆ ಸ್ಕ್ಯಾನಿಂಗ್ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ದರ್ಶನ್ ಪರದಾಡುತ್ತಿದ್ದಾರೆ ಎನ್ನಲಾಗಿದೆ. ಇಷ್ಟಿದ್ರೂ ಬಳ್ಳಾರಿಯಲ್ಲಿ ಸ್ಕ್ಯಾನಿಂಗ್ ಬೇಡ, ನಾನು ಬೆಂಗಳೂರಲ್ಲೇ ವೈದ್ಯರನ್ನು ಭೇಟಿ ಮಾಡುತ್ತೇನೆ ಎಂದು ದರ್ಶನ್ ಹೇಳುತ್ತಿದ್ದರು. ಆದ್ರೆ ಬೆನ್ನು ನೋವು ಹೆಚ್ಚಾದ ಕಾರಣಕ್ಕೆ ಚಿಕಿತ್ಸೆ ಅತ್ಯಗತ್ಯ ಅನ್ನೋದು ಅರಿವಾಗಿದೆ. ಹೈಕೋರ್ಟ್ ಕೂಡ ಮೆಡಿಕಲ್ ರಿಪೋರ್ಟ್ ಕೇಳಿರೋದ್ರಿಂದ ಬಳ್ಳಾರಿಯಲ್ಲಿ ದರ್ಶನ್ ಚಿಕಿತ್ಸೆ ಆರಂಭವಾಗಿದೆ. ಮಂಗಳವಾರ ರಾತ್ರಿ 9.10ಕ್ಕೆ ಆ್ಯಂಬುಲೆನ್ಸ್ನಲ್ಲಿ ದರ್ಶನ್ನ ಜೈಲಿನಿಂದ ವಿಮ್ಸ್‌ಗೆ ಕರದೊಯ್ಯಲಾಯ್ತು. ದರ್ಶನ್ ಆಸ್ಪತ್ರೆ ಬಳಿ ಬರ್ತಿದಂತೆ ಅಭಿಮಾನಿಗಳು ಶಿಳ್ಳೆ ಹೊಡೆದು ಹರ್ಷೋದ್ಘಾರ ಕೂಗಿದರು. ಪೊಲೀಸ್ ಭದ್ರತೆಯಲ್ಲಿ ವಿಮ್ಸ್‌ನಲ್ಲಿ ದರ್ಶನ್ ಗೆ…
ಇತ್ತೀಚೆಗೆ ತೆಲುಗಿನ ಬಿಗ್ ಬಾಸ್ ಸೀಸನ್ 8ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ನಾಗಾರ್ಜುನ ನಿರೂಪಣೆಯಲ್ಲಿ ತೆಲುಗಿನ ಬಿಗ್ ಬಾಶ್ ಶೋ ನಡೆಯುತ್ತಿದ್ದು ಇದೀಗ ದೊಡ್ಮನೆಯಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬಂದಿದೆ. ಬಿಗ್ ಬಾಸ್‌ನಲ್ಲಿರುವಾಗಲೇ ಖ್ಯಾತ ಯೂಟ್ಯೂಬರ್ ಗಂಗವ್ವಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಯೂಟ್ಯೂಬರ್ ಗಂಗವ್ವಗೆ 60 ವರ್ಷ ದಾಟಿದರೂ ಯಾವ ಸ್ಪರ್ಧಿಗಳಿಗೂ ಕಮ್ಮಿಯಿಲ್ಲ ಎಂಬಂತೆ ಟಫ್ ಫೈಟ್ ಕೊಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಗಂಗಮ್ಮಗೆ ಸೋಮವಾರ ರಾತ್ರಿ (ಅ.21) ಹೃದಯಾಘಾತವಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಶೋನಲ್ಲಿರುವಾಗಲೇ ಈ ಘಟನೆ ನಡೆದಿದ್ದು, ಕೂಡಲೇ ಅವರಿಗೆ ವೈದ್ಯಕೀಯ ನೆರವು ಒದಗಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ‘ಮೈ ವಿಲೇಜ್ ಶೋ’ ಮೂಲಕ ಯೂಟ್ಯೂಬ್‌ನಲ್ಲಿ ಹಾಸ್ಯ ಭರಿತ ವಿಡಿಯೋಗಳಿಂದ ಖ್ಯಾತಿ ಗಳಿಸಿದ್ದ ಗಂಗವ್ವ ಈ ಹಿಂದೆ ‘ಬಿಗ್ ಬಾಸ್ ಸೀಸನ್ 4’ರಲ್ಲಿ ಕೂಡ ಸ್ಪರ್ಧಿಯಾಗಿದ್ದರು. ಅನಾರೋಗ್ಯ ಸಮಸ್ಯೆಯಿಂದ ಅರ್ಧಕ್ಕೆ ಶೋ ತೊರೆದಿದ್ದರು. ಇದೀಗ ಮತ್ತೆ ತೆಲುಗಿನ ಸೀಸನ್ 8ರಲ್ಲಿ…
ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ ಬಂಕರ್‌ನಲ್ಲಿ ಬರೊಬ್ಬರಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಈ ಹಿಂದೆ ಇಸ್ರೇಲ್ ವಾಯುದಾಳಿ ನಡೆಸಿದ್ದ ಬೈರುತ್‌ನ ಆಸ್ಪತ್ರೆಯ ಕೆಳಗಿರುವ ಬಂಕರ್‌ನಲ್ಲಿ 500 ಮಿಲಿಯನ್ ಡಾಲರ್ ನಗದು ಮತ್ತು ಅಪಾರ ಪ್ರಮಾಣದ ಚಿನ್ನದ ಸಂಗ್ರಹ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಹಿಜ್ಬುಲ್ಲಾದ ಹಣಕಾಸು ಕೇಂದ್ರದ ಬಗ್ಗೆ ಗುಪ್ತಚರ ಮಾಹಿತಿಯನ್ನು ಬಹಿರಂಗಪಡಿಸಿವೆ. ಈ ರಹಸ್ಯ ಬಂಕರ್ ಬೈರುತ್ ನ ಮಧ್ಯದಲ್ಲಿರುವ ಅಲ್ ಸಹೇಲ್ ಆಸ್ಪತ್ರೆಯ ಅಡಿಯಲ್ಲಿದ್ದು, ಇದು ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಅಡಗಿದ್ದ ಬಂಕರ್ ಆಗಿತ್ತು. ಇಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ ಮತ್ತು ನಗದು ಇರಿಸಲಾಗಿತ್ತು. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸುಮಾರು 4194,50,25,000 ರೂ. ಇಸ್ರೇಲ್ ಹಿಜ್ಬುಲ್ಲಾ ವಿರುದ್ಧ ಕಾರ್ಯಾಚರಣೆಯನ್ನು ಹೆಚ್ಚಿಸಿದೆ ಮತ್ತು ಭಾನುವಾರ ರಾತ್ರಿ ಹಲವಾರು ಸ್ಥಳಗಳಲ್ಲಿ ದಾಳಿ ನಡೆಸಿತು. ಈ ದಾಳಿಯ ಉದ್ದೇಶವು ಇರಾನ್ ಬೆಂಬಲಿತ…
ಹಾವೇರಿ:-ಒಂದೇ ದಿನದಲ್ಲಿ ಹೃದಯಾಘಾತ ಸಂಭವಿಸಿ ತಂದೆ ಮಗ ಇಬ್ಬರು ಧಾರುಣ ಸಾವನ್ನಪ್ಪಿದ ಘಟನೆ ಜರುಗಿದೆ. ಜಿಲ್ಲೆಯ ಬಸವೇಶ್ವರ ನಗರದಲ್ಲಿ ಜರುಗಿದೆ. https://youtu.be/hmkXDSW-PEs?si=ODSiJskIsc7qLJVK ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ವಿನಯ್ ಗುಂಡಗಾವಿ ಹಾಗೂ ಡಾ. ವೀರಭದ್ರಪ್ಪ ಗುಂಡಗಾವಿ ಮೃತಪಟ್ಟ ದುರ್ದೈವಿಗಳು. ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿಗೆ ಹಾವೇರಿಯಲ್ಲಿ ಹೃದಯಾಘಾತವಾಗಿದೆ. ಹೃದಯಾಘಾತದಿಂದ ತಂದೆಯೂ ಕೊನೆಯುಸಿರೆಳೆದಿದ್ದಾರೆ. ಮಗ ಡಾ. ವಿನಯ ಹುಬ್ಬಳ್ಳಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಡಾ.ವೀರಭದ್ರಪ್ಪ ಹಾವೇರಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಮತ್ತು ಮಗ ಯಾವಾಗಲೂ ಅತ್ಯಂತ ಪ್ರೀತಿಯಿಂದಲೆ ಇರುತ್ತಿದ್ದರು. ಹೀಗಾಗಿ ಮಗ ಡಾ.ವಿನಯನ ಸಾವಿನ ಸುದ್ದಿ ಕೇಳಿದ ತಂದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಿಚ್ಚ ಸುದೀಪ್ ತಾಯಿ ಸರೋಜ ಸಂಜೀವ್ ವಯೋ ಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸುದ್ದಿ ತಿಳಿದ ರಾಜಕೀಯ ಗಣ್ಯರು, ಸಿನಿಮಾ ರಂಗದ ನಟ, ನಟಿಯರು ಜೊತೆಗೆ ಅಭಿಮಾನಿಗಳು ಮನೆ ಮುಂದೆ ಹಾಜರಿದ್ದರು. ಈ ವೇಳೆ ಕೆಲವರು ನಡೆದುಕೊಂಡ ರೀತಿಗೆ ಸುದೀಪ್ ಪುತ್ರಿ ಸಾನ್ವಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ನಿಜವಾಗಿಯೂ ಸಂತಾಪ ವ್ಯಕ್ತಪಡಿಸುವ ಉದ್ದೇಶದಿಂದ ಬಂದರೆ ಮತ್ತೆ ಕೆಲವರು ಅಲ್ಲಿಯೂ ತಮ್ಮ ಸ್ಟಾರ್ ಗಳನ್ನು ನೋಡಬಹುದು ಎಂಬ ಉದ್ದೇಶದಿಂದಲೇ ಬಂದರು. ಅದರಲ್ಲೂ ಸುದೀಪ್ ತಮ್ಮ ತಾಯಿಯ ಅಂತಿಮ ಯಾತ್ರೆಗಾಗಿ ಒಬ್ಬ ಮಗನಾಗಿ ಕೈಯಲ್ಲಿ ಮಡಕೆ ಹಿಡಿದು ಬಂದರೆ ಅವರನ್ನು ನೋಡಲೆಂದು ಸಾಕಷ್ಟು ಜನ ನೂಕು ನುಗ್ಗಲು ನಡೆಸಿದ್ದರು. ಇದು ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಸುದೀಪ್ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡು ಪಕ್ಕಕ್ಕೆ ಹೋಗಿ ಎಂದು ಕಿರುಚಿದರು. ಕೆಲವರು ಸುದೀಪ್ ರನ್ನು ಅಕ್ಷರಶಃ ತಳ್ಳುತ್ತಿದ್ದರು. ತನ್ನ ಅಮ್ಮನಿಗೆ ವಿದಾಯ ಹೇಳಲೂ ಬಿಡಲಿಲ್ಲ. ಇದು ಸಾನ್ವಿ ಸುದೀಪ್ ಸಿಟ್ಟಿಗೆ ಕಾರಣವಾಗಿದೆ. ಇದರ…
ಬೆಂಗಳೂರು/ಮುಂಬೈ:- ಮುಂಬೈ ಬೆಂಗಳೂರು ವಿಮಾನ ಸೇರಿ ಮತ್ತೆ ಹಲವು ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಮುಂಬೈಯಿಂದ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನವೂ ಸೇರಿದಂತೆ ಇಂಡಿಗೋ, ವಿಸ್ತಾರ ಏರ್ಲೈನ್ಸ್, ಏರ್ ಇಂಡಿಯಾದ ಸುಮಾರು 30 ಹೆಚ್ಚು ವಿಮಾನಗಳಿಗೆ ಮತ್ತೆ ಬಾಂಬ್ ಬೆದರಿಕೆ ಸಂದೇಶ ಬಂದಿವೆ. https://youtu.be/MEHovQANO_k?si=uxwCaWSTZHoCDbjV 10 ಇಂಡಿಗೋ, 10 ವಿಸ್ತಾರ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿವೆ. ಈ ಸಂಬಂಧ ವಿಸ್ತಾರ ಏರ್ಲೈನ್ಸ್ ಪ್ರಕಟಣೆ ಹೊರಡಿಸಿದ್ದು, ಅಕ್ಟೋಬರ್ 21 ರಂದು ಕೆಲವು ವಿಸ್ತಾರಾ ವಿಮಾನಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಭದ್ರತಾ ಬೆದರಿಕೆ ಸಂದೇಶಗಳು ಬಂದಿವೆ. ನಾವು ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದೇವೆ ಮತ್ತು ಅವರು ಎಲ್ಲಾ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ. ನಮ್ಮ ಗ್ರಾಹಕರು, ಸಿಬ್ಬಂದಿ ಮತ್ತು ವಿಮಾನಗಳ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದೆ. 6E-63 ದೆಹಲಿ – ಜೆಡ್ಡಾ, 6E-12 ಇಸ್ತಾಂಬುಲ್ – ದೆಹಲಿ, 6E-83 ದೆಹಲಿ – ದಮ್ಮಾಮ್, 6E-65 ಕೋಜಿಕೋಡ್ – ಜೆಡ್ಡಾ, 6E-67 ಹೈದರಾಬಾದ್ -…
ಬೆಂಗಳೂರು:- ಬಿಎಂಟಿಸಿ ಬಸ್ ಹಾಗೂ ಆಟೊ ನಡುವೆ ಡಿಕ್ಕಿ ಹೊಡೆದ ಪರಿಣಾಮ ಆಟೊ ಚಾಲಕನ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೇಗೂರು ರಸ್ತೆಯ ಬೆಟ್ಟದಾನಪುರ ಕ್ರಾಸ್ ಬಳಿ ಜರುಗಿದೆ. https://youtu.be/1qmxeifuzQk?si=oRDMvle3Fun1tAgT ಹುಲ್ಲಹಳ್ಳಿಗೆ ಡ್ರಾಪ್ ಮಾಡಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೊ ಚಾಲಕನ ಎರಡು ಕಾಲು ಮತ್ತು ಒಂದು ಕೈ ಮುರಿತವಾಗಿದೆ. ಆಟೊ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬನ್ನೇರುಘಟ್ಟ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಸ್ ಮತ್ತು ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ.