ಬೆಂಗಳೂರು ;- ರಾಜ್ಯ ಸರ್ಕಾರವು ಶಾಲಾ ಮಕ್ಕಳ ಮಣಭಾರದ ಬ್ಯಾಗ್ಗೆ ತೂಕ ಮಿತಿ ನಿಗದಿಗೊಳಿಸಿದೆ. ವಿದ್ಯಾರ್ಥಿಗಳ ತರಗತಿಗೆ ಅನುಗುಣವಾಗಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಶಾಲಾ ಬ್ಯಾಗ್ಗಳ ಭಾರವನ್ನು ನಿಗದಿಪಡಿಸಿದೆ. ಹೆಚ್ಚುವರಿ ಭಾರವನ್ನು ವಿದ್ಯಾರ್ಥಿಗಳ ಬೆನ್ನಿನಿಂದ ಕೆಳಗಿಳಿಸುತ್ತಿದೆ. ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಕೊಂಚ ನೆಮ್ಮದಿ ತಂದಿದೆ. ಇದರಿಂದಾಗಿ ಮಕ್ಕಳ ಬೆನ್ನು ಮೂಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆದರೂ ಪೋಷಕರು ಮತ್ತು ಶಿಕ್ಷಕರು ಇದರ ಬಗ್ಗೆ ಅಷ್ಟು ಗಮನ ಹರಿಸಿಲ್ಲ. ಆದರೆ ಈ ಸಮಸ್ಯೆಯ ಗಂಭೀರತೆ ಅರ್ಥ ಮಾಡಿಕೊಂಡಿರುವ ರಾಜ್ಯ ಸರ್ಕಾರ ಇದೀಗ ವಿದ್ಯಾರ್ಥಿಗಳ ಬೆನ್ನ ಮೇಲಿನ ಶಾಲಾ ಬ್ಯಾಗ್ ಭಾರವನ್ನು ಕೊಂಚ ಇಳಿಸಿದೆ.
Author: Prajatv Kannada
ನವದೆಹಲಿ: ವಿದೇಶ ಪ್ರವಾಸ ಮುಗಿಸಿ ವಾಪಸ್ಸಾದ ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದರು. ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಅವರು ಮಣಿಪುರ (Manipura) ದ ಪರಿಸ್ಥಿತಿ ಸೇರಿದಂತೆ ಪ್ರಮುಖ ವಿದ್ಯಮಾನಗಳ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ (AmitShah), ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman), ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ (PK Mishra) ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪ್ರತ್ಯೇಕವಾಗಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮಿತ್ ಶಾ, ಮಣಿಪುರದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh) ಉಪಸ್ಥಿತರಿದ್ದರು. ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮರ್ಥವಾಗಿವೆ ಎಂದು ತಿಳಿಸಿದ್ದಾರೆ.
ನವದೆಹಲಿ: ಅಸ್ಸಾಂನಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಹತ್ತು ತಂಡಗಳನ್ನು ನಿಯೋಜಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) 120ಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ಆದರೆ ನೀರಿನ ಮಟ್ಟವು ಇಂದು ಕಡಿಮೆಯಾಗಲು ಪ್ರಾರಂಭಿಸಿದೆ. “ಅಸ್ಸಾಂನಲ್ಲಿ ಒಟ್ಟು ಹತ್ತು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಈ ತಂಡಗಳು ತಗ್ಗು ಪ್ರದೇಶಗಳಿಂದ ರಕ್ಷಣಾ ಮತ್ತು ಸ್ಥಳಾಂತರಿಸುವಿಕೆ ಕಾರ್ಯಾಚರಣೆ ನಡೆಸುತ್ತಿದ್ದು, ಇಲ್ಲಿಯವರೆಗೆ, 123 ವ್ಯಕ್ತಿಗಳು ಮತ್ತು ಹಲವಾರು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ” ಎಂದು ಎನ್‌ಡಿಆರ್‌ಎಫ್ ವಕ್ತಾರರು ತಿಳಿಸಿದ್ದಾರೆ. ಪ್ರತಿ NDRF ತಂಡವು ಸುಮಾರು 35-40 ಸಿಬ್ಬಂದಿಯನ್ನು ಹೊಂದಿದ್ದು, ಈ ತಂಡಗಳು ಪರಿಹಾರ ಸಾಮಗ್ರಿ ವಿತರಣೆಯಲ್ಲಿ ಸ್ಥಳೀಯ ಅಧಿಕಾರಿಗಳಿಗೆ ಸಹಾಯ ಮಾಡುತ್ತಿವೆ ಎಂದು ವಕ್ತಾರರು ಹೇಳಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ತಗ್ಗು ಪ್ರದೇಶಗಳಲ್ಲಿ ತಂಡಗಳು ವಿಚಕ್ಷಣಾ ಕಾರ್ಯ ನಡೆಸುತ್ತಿವೆ ಅವರು ತಿಳಿಸಿದ್ದಾರೆ.
ಪುಣೆ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪಾಟ್ನಾದಲ್ಲಿ ಕಳೆದ ವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ‘ಪ್ರಧಾನಿ ಹುದ್ದೆ’ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರದ ಬಾರಾಮತಿ ಪಟ್ಟಣದಲ್ಲಿ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದುಬ್ಬರ, ನಿರುದ್ಯೋಗ ಮತ್ತು ಕೋಮುವಾದಿ ಶಕ್ತಿಗಳನ್ನು ನಿಯಂತ್ರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಿದರು. ಪ್ರತಿಪಕ್ಷಗಳ ಸಭೆಯನ್ನು ಟೀಕಿಸಿದ್ದಕ್ಕಾಗಿ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು. ಸಮಾವೇಶದ ಬಗ್ಗೆ ಬಿಜೆಪಿ ಏಕೆ ಚಿಂತಿಸುತ್ತಿದೆ ಎಂದ ಪವಾರ್, ಬಿಜೆಪಿಯವರಿಗೆ ರಾಜಕೀಯ ಪ್ರಬುದ್ಧತೆಯ ಕೊರತೆಯಿದೆ ಎಂದು ಹೇಳಿದ್ದಾರೆ.
ನವದೆಹಲಿ: 6 ಬಹುಸಂಖ್ಯಾತ ಮುಸ್ಲಿಂ ರಾಷ್ಟ್ರಗಳ (Muslim Nations) ಮೇಲೆ 26,000 ಬಾಂಬ್‌ಗಳ ದಾಳಿ (Bomb Attack) ನಡೆಸಿದವರು ಈಗ ಭಾರತದಲ್ಲಿ ಅಲ್ಪ ಸಂಖ್ಯಾತರ ರಕ್ಷಣೆ ಬಗ್ಗೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮೋದಿಯನ್ನು (Narendra Modi) ಕೇಳಬೇಕಿತ್ತು ಎಂಬ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Barack Obama) ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಒಬಾಮ ಅವರು ಅಧಿಕಾರದಲ್ಲಿದ್ದಾಗಲೇ 6 ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆದಿತ್ತು. ಆದ್ರೆ ನಮ್ಮ ಸರ್ಕಾರ ʻಸಬ್ಕಾ ಸಾಥ್, ಸಬ್ಕಾ ವಿಕಾಸ್ʼ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಯುಎಸ್‌ನಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ನವದೆಹಲಿ: ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧದ ಹೋರಾಟವನ್ನು ರಸ್ತೆಯಲ್ಲಲ್ಲ, ನ್ಯಾಯಾಲಯದಲ್ಲಿ ನಡೆಸಲಾಗುತ್ತದೆ ಎಂದು ಕುಸ್ತಿಪಟುಗಳು (Wrestlers) ಎಚ್ಚರಿಕೆ ನೀಡಿದ್ದಾರೆ. ಸಿಂಗ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸುವ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಅಲ್ಲದೇ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ. ಅದು ರಸ್ತೆಯ ಮೇಲಲ್ಲ, ನ್ಯಾಯಾಲಯದಲ್ಲಿ ಎಂದು ಟ್ವಿಟ್ಟರ್‍ನಲ್ಲಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಪ್ರಕಟಿಸಿದ್ದಾರೆ. ಡಬ್ಲ್ಯುಎಫ್‍ಐನ ಚುನಾವಣಾ ಪ್ರಕ್ರಿಯೆಯು ಪ್ರಾರಂಭವಾಗಿದೆ. ಜುಲೈ 11 ರ ಚುನಾವಣೆಗೆ ಸರ್ಕಾರ ನೀಡಿರುವ ಭರವಸೆಗಾಗಿ ಕಾಯುತ್ತೇವೆ. ಅಲ್ಲದೇ ಕೆಲವು ದಿನಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ವಿರಾಮ ತೆಗೆದುಕೊಳ್ಳುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಭುವನೇಶ್ವರ: ಇತ್ತೀಚೆಗಷ್ಟೇ ಭೀಕರ ರೈಲು ದುರಂತ (Odisha Train Accident) ಸಂಭವಿಸಿದ್ದ ಒಡಿಶಾದಲ್ಲಿ (Odisha) ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು 12 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ. ಎರಡು ಬಸ್ಸುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮದುವೆ (Marriage) ಮುಗಿಸಿ ಮನೆಗೆ ತೆರಳುತ್ತಿದ್ದ 12 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಡಿಶಾದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬರ್ಹಾಂಪುರ-ತಪ್ತಪಾಣಿ ರಸ್ತೆಯ ದಿಗಪಹಂಡಿ ಪ್ರದೇಶದ ಬಳಿ ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದೆ ಎಂದು ಬರ್ಹಾಂಪುರ ಪೊಲೀಸ್ ವರಿಷ್ಠಾಧಿಕಾರಿ ಎಂ. ಶರವಣ ವಿವೇಕ್ ತಿಳಿಸಿದ್ದಾರೆ. ಬರ್ಹಾಂಪುರದಲ್ಲಿ ವಿವಾಹಮಹೋತ್ಸವ ಮುಗಿಸಿ ಕೊಂಡು ಪ್ರಯಾಣಿಕರು ದಿಗಪಹಂಡಿ ಬಳಿಕ ಖಂಡದೇಲಿಗೆ ಹಿಂದಿರುಗುತ್ತಿದ್ದರು, ಈ ವೇಳೆ ಅಪಘಾತ ಸಂಭವಿಸಿದೆ. ಇದರಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿ 12 ಮಂದಿ ಮೃತಪಟ್ಟಿದ್ದಾರೆ. 7 ಮಂದಿ ಗಾಯಗೊಂಡಿದ್ದು, ಅವರನ್ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ…
ನಾಗಪುರ;– ಶೀಘ್ರದಲ್ಲೇ ಲೀಟರ್ ಗೆ 15 ರೂ. ದರದ ಎಥನಾಲ್ ಚಾಲಿತ ವಾಹನ ಪರಿಚಯಿಸಲಾಗುತ್ತದೆ ಎಂದು ಕೇಂದ್ರ ಸಚಿವ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ನಾಗಪುರದಲ್ಲಿ ಮಾತನಾಡಿದ ಅವರು, ಎಥನಾಲ್ ಗೆ ಪ್ರತಿ ಲೀಟರ್ 60 ರೂಪಾಯಿ ದರ ಇದ್ದು, ಪೆಟ್ರೋಲ್ ದರ 100 ರೂಪಾಯಿ ದಾಟಿದೆ. ಎಥನಾಲ್ ಶೇಕಡ 40ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್ ಸರಾಸರಿ ದರ 15 ರೂಪಾಯಿ ಆಗಲಿದೆ ಎಂದು ತಿಳಿಸಿದ್ದಾರೆ. ಸಂಪೂರ್ಣವಾಗಿ ಎಥನಾಲ್ ನಿಂದ ಚಾಲನೆಯಾಗುವ ವಾಹನಗಳನ್ನು ಟಿವಿಎಸ್, ಹೀರೋ ಸ್ಕೂಟರ್, ಬಜಾಜ್ ಕಂಪನಿಗಳು ತಯಾರಿಸಲಿದ್ದು, ಶೀಘ್ರವೇ ವಾಹನಗಳು ಮಾರುಕಟ್ಟೆಗೆ ಬರಲಿವೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ತಮ್ಮ ಕಂಪನಿ ಬೆಂಬಲಿಸುತ್ತದೆ ಮತ್ತು ದೇಶದ ವಾಣಿಜ್ಯ ವಿಮಾನಯಾನ ಮಾರುಕಟ್ಟೆಯ ತ್ವರಿತ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೋಯಿಂಗ್ ವಿಮಾನ ಸಂಸ್ಥೆಯ ಸಿಇಒ ಡೇವಿಡ್ ಎಲ್ ಕ್ಯಾಲ್ಹೌನ್ ತಿಳಿಸಿದ್ದಾರೆ. ಮೋದಿ ಅಮೆರಿಕಾಗೆ ಭೇಟಿ ನೀಡಿದ್ದ ವೇಳೆ ಅವನ್ನು ಭೇಟಿಯಾದ ಡೇವಿಡ್, ಎಂಟು ದಶಕಗಳ ಏರೋಸ್ಪೇಷ್ ಪಾಲುದಾರಿಕೆ ಕುರಿತಂತೆ ಮಹತ್ವದ ಚರ್ಚಿಸಿದ್ದರು. ಭಾರತದ ವಾಣಿಜ್ಯ ವಾಯುಯಾನ ಮಾರುಕಟ್ಟೆಯ ಕ್ಷಿಪ್ರ ವಿಸ್ತರಣೆಯಲ್ಲಿ ಮತ್ತು ರಾಷ್ಟ್ರದ ರಕ್ಷಣಾ ಪಡೆಗಳ ಮಿಷನ್ ಸಿದ್ಧತೆ ಮತ್ತು ಆಧುನೀಕರಣದಲ್ಲಿ ಪ್ರಮುಖ ಪಾತ್ರ ವಹಿಸಲು ಬೋಯಿಂಗ್ ಹೆಮ್ಮೆಪಡುತ್ತದೆ ಎಂದರು. ಪ್ರಧಾನಿ ಮೋದಿಯವರ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ನಾವು ಬೆಂಬಲಿಸುತ್ತೇವೆ, ಭಾರತದಲ್ಲಿ 5,000 ಕ್ಕೂ ಹೆಚ್ಚು ಜನರು ಬೋಯಿಂಗ್ ತಂಡದಲ್ಲಿ ನವೀನ ಕೆಲಸಗಳನ್ನು ಮಾಡುತ್ತಿರುವ ಉನ್ನತ-ಗುಣಮಟ್ಟದ ವೃತ್ತಿಜೀವನವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಭಾರತದಲ್ಲಿ ಬೋಯಿಂಗ್‍ನ ಬೆಳೆಯುತ್ತಿರುವ ಹೂಡಿಕೆಗಳು ದೇಶದೊಂದಿಗಿನ ಕಂಪನಿಯ ಪಾಲುದಾರಿಕೆಯ ಬಲವನ್ನು ಮಾತ್ರವಲ್ಲದೆ ವಿಶಾಲವಾದ ಅಮೆರಿಕ-ಭಾರತದ ಆರ್ಥಿಕ…
ಆಸ್ಟಿನ್: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ ತನ್ನನ್ನು ಅಪಹರಿಸುತ್ತಿದ್ದಾನೆಂದು ತಿಳಿದು ಊಬರ್ ಚಾಲಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಟೆಕ್ಸಾಸ್‍ನಲ್ಲಿ ನಡೆದಿದೆ. 48 ವರ್ಷದ ಫೋಬೆ ಕೊಪಸ್ ಎಂಬ ಮಹಿಳೆ ಊಬರ್ ಕಾರು ಚಾಲಕ ಡೇನಿಯಲ್ ಪೀಡ್ರಾ ಗಾರ್ಸಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ. ಮಹಿಳೆಯನ್ನು 1.5 ಮಿಲಿಯನ್ ಡಾಲರ್ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎಲ್ ಪಾಸೊ ಪೊಲೀಸರು ತಿಳಿಸಿದ್ದಾರೆ. ಕೆಂಟುಕಿಯಿಂದ ಬಂದಿದ್ದ ಫೋಬೆ ಕೊಪಸ್ ತನ್ನ ಗೆಳೆಯನನ್ನು ಭೇಟಿ ಮಾಡಲು ಟೆಕ್ಸಾಸ್‍ಗೆ ಊಬರ್‌ನಲ್ಲಿ ತೆರಳಲು ನಿರ್ಧರಿಸಿದ್ದಳು. ಹೆದ್ದಾರಿಯಲ್ಲಿ ಮೆಕ್ಸಿಕೋ ಚಿಹ್ನೆಗಳನ್ನು ನೋಡಿ ತನ್ನನ್ನು ಅಪಹರಿಸುತ್ತಿದ್ದಾನೆ ಎಂದು ತಿಳಿದ ಆಕೆ ಈ ಕೃತ್ಯ ಎಸಗಿದ್ದಾಳೆ. ಮಹಿಳೆ ಚಾಲಕನಿಗೆ ಗುಂಡು ಹಾರಿಸುತ್ತಿದ್ದಂತೆ ಕಾರು ಅಪಘಾತಕ್ಕೀಡಾಗಿದೆ. ಬಳಿಕ ಪೊಲೀಸರಿಗೆ ಕರೆ ಮಾಡುವ ಮೊದಲು ಆಕೆ ಘಟನೆಯ ಫೋಟೋ ತೆಗೆದು ಅದನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಊಬರ್ ಸಂಸ್ಥೆ ಹಿಂಸಾಚಾರವನ್ನು ನಾವು ಸಹಿಸುವುದಿಲ್ಲ. ಮಹಿಳೆಯನ್ನು ಊಬರ್…