ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮತ್ತೊಂದು ಮಹತ್ವದ ಯೋಜನೆ ಜಾರಿಗಾಗಿ ಮುಹೂರ್ತ ಫಿಕ್ಸ್ ಆಗಿದೆ. ಇಷ್ಟುದಿನ ರಾಜ್ಯದ ಮಹಿಳೆಯರು ಕಾಯುತ್ತಿದ್ದ ಸಮಯ ಈಗ ಬಂದೇ ಬಿಟ್ಟಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಿಸಲು ರಾಜ್ಯ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ಜೂನ್ 27ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಂದುಕೊಂಡಂತೆ ಆದ್ರೆ ಸ್ವಾತಂತ್ರೋತ್ಸವ ದಿನಕ್ಕೆ ಲಕ್ಷ್ಮೀಯರ ಖಾತೆಗೆ ಲಕ್ಷ್ಮೀಯ ಆಗಮನವಾಗಲಿದೆ. ಹಾಗಾದ್ರೆ ಗೃಹಲಕ್ಷ್ಮೀ ಯೋಜನೆ ಜಾರಿಗೆ ಹೇಗೆಲ್ಲಾ ಸರ್ಕಾರ ಸಿದ್ದವಾಗ್ತಿದೆ ಅನ್ನೋ ರಿಪೋರ್ಟ್ ಇಲ್ಲಿದೆ ಮಹಿಳಾ ಮಣಿಗಳಿಗೆ ಶಕ್ತಿಯ ಮೂಲಕ ಭರ್ಜರಿ ಗಿಫ್ಟ್ ಕೊಟ್ಟಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ದೊಡ್ಡ ಗಿಫ್ಟ್ ಕೊಡೋಕೆ ಮುಂದಾಗಿದೆ. ಎಲ್ಲೆಂದರಲ್ಲಿ ಫ್ರೀ ಬರ್ಡ್ನಂತೆ ಓಡಾಡಿ ಅಂತ ನಾರಿಯರಿಗೆ ಫ್ರೀ ಬಸ್ ಪ್ರಯಾಣ ಕಲ್ಪಿಸಿದ್ದ ಸರ್ಕಾರ ಈಗ ಖರ್ಚಿಗೆ ರಾಜ್ಯದ ಎಲ್ಲಾ ಗೃಹಗಳ ಲಕ್ಷ್ಮೀಯರ ಖಾತೆಗೆ ಹಣ ಹಾಕಲು ಮುಂದಾಗಿದೆ.ಜೂನ್ 27 ರಿಂದ ಗೃಹಲಕ್ಷ್ಮೀ ಯೋಜನೆ ನೋಂದಾಣಿ ಪ್ರಕ್ರಿಯೆ ಆರಂಭವಾಗಲಿದ್ದು,ಇದಕ್ಕೆ ಅಂತ ಸರ್ಕಾರ…
Author: Prajatv Kannada
ಬೆಂಗಳೂರು: ಜನಸಾಮಾನ್ಯರಿಗೆ ಶಾಕ್ ಮೇಲೆ ಶಾಕ್ ವಿದ್ಯುತ್ , ಹಾಲು, ಮದ್ಯಪಾನ ಹೀಗೆ ಎಲ್ಲದರ ರೇಟ್ ಗಗನಕ್ಕೇರಿದ್ದು ಈಗ ಟೊಮೆಟೋ ಸರದಿ ಬಂದಿದೆ. ಜನರಿಗೆ ಬರೆ ಹಾಕಿದಂತೆ ಆಗುತ್ತಿದೆ. ಸಾಮಾನ್ಯ ಜನರಿಗಂತು ಇದು ನುಂಗಲಾರದ ತುತ್ತಾಗಿಬಿಟ್ಟಿದಂತೆ ಕಾಣುತ್ತಿದೆ. ನೂರರ ಸನಿಹಕ್ಕೆ ಆಗಮಿಸಿದ ಟೊಮೆಟೊ ದರ ಐದು ಗ್ಯಾರಂಟಿ ಖುಷಿ ನಡುವೆ ಜನತೆಗೆ ಟೊಮಟೋ ದರ ಶಾಕ್ಇನ್ನೆರಡು ದಿನದಲ್ಲಿ ಟೊಮೆಟೊ ದರ ಗಗನಕ್ಕೆ ಸಾಧ್ಯತೆ. 15 Kg ಟೊಮಾಟೋ ಬಾಕ್ಸ್ ಸಾವಿರ ಸನಿಹಕ್ಕೆಇತರೆ ರಾಜ್ಯಗಳಲ್ಲಿ ಭಾರಿ ಮಳೆಟೊಮೆಟೋ ಬಾಂಗ್ಲಾ ದೇಶಕ್ಕೆ ರಫ್ತು ಇದೇ ಮೊದಲ ಬಾರಿಗೆ ರಾಜ್ಯದ ಟೊಮೆಟೋ ಬಾಂಗ್ಲಾಕ್ಕೆ ರಫ್ತು ರಾಜ್ಯದಲ್ಲಿ ಏರಿಕೆಯಾದ ಟೊಮೆಟೋ ಬೆಲೆ ಕೋಲಾರದಿಂದ ಹೊರರಾಜ್ಯಗಳಿಗೆ ಹೆಚ್ಚಿದ ರಫ್ತು ಬೇರೆ ರಾಜ್ಯಗಳಲ್ಲಿ ಟೊಮೆಟೋಗೆ ಭಾರೀ ಡಿಮ್ಯಾಂಡ್ ಇದರಿಂದ ಬೆಂಗಳೂರಿಗೆ ತಟ್ಟಿದ ಬಿಸಿ ಟೊಮಾಟೋ ಖರೀದಿ ಮಾಡಲು ಹಿಂದೇಟು ಹಾಕ್ತಿರೋ ಹೆಂಗಳೆಯರು ಕಳೆದ ವಾರ 30-40 ರೂ. ಇದ್ದ ಟೊಮೆಟೋ ದರ ನಿನ್ನೆ 40-50 ರೂ. ಇಂದು 70-80 ರೂ. ಇನ್ನೆರಡು…
ಬೆಂಗಳೂರು: ಕಾಂಗ್ರೆಸ್ನ ಮಹಾತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ ಭವಿಷ್ಯ ಒಂದು ವಾರದಲ್ಲಿ ನಿರ್ಧಾರವಾಗಲಿದೆ. ಮೂರು ಕೇಂದ್ರೀಯ ಸ್ವಾಮ್ಯದ ಸಂಸ್ಥೆಗಳು ಅಕ್ಕಿ ನೀಡಲು ಮುಂದಾಗಿದ್ದು ಇವುಗಳ ನಿರ್ಧಾರದ ಮೇಲೆ ರಾಜ್ಯ ಸರ್ಕಾರ ತನ್ನ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ಸರ್ಕಾರ ಒಂದು ವಾರಗಳ ಕಾಲ ಸಮಯಾವಕಾಶ ನೀಡಿದೆ. FCI ನೀಡುತ್ತಿದ್ದ ದರಕ್ಕಿಂತ ಈ ಏಜೆನ್ಸಿಗಳ ದರ ಸ್ವಲ್ಪ ಹೆಚ್ಚಳ. FCI ಪ್ರತಿ ಕೆ.ಜಿ ಅಕ್ಕಿಗೆ ಸಾಗಾಣಿಕೆ ವೆಚ್ಚ ಸೇರಿ 36.60 ಪೈಸೆ ನಿಗದಿ ಮಾಡಿತ್ತು. ದರ ಮತ್ತು ಸಾಗಾಣಿಕೆ ವೆಚ್ಚ ಗಮನಿಸಿ ಸರ್ಕಾರ ತೀರ್ಮಾನಕ್ಕೆ ಬರಲಿದೆ. ಸದ್ಯಕ್ಕೆ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅಸಾಧ್ಯ.
ಬೆಂಗಳೂರು: ರಾಜಧಾನಿ ಬೆಂಗಳೂರು ಮಹಿಳೆಯರೆ ಎಚ್ಚರ..ಎಚ್ಚರ. ಹುಡುಗಿಯರು ಸ್ನಾನ ಮಾಡುವ ವಿಡಿಯೋವನ್ನು ಕಾಮುಕನೊಬ್ಬ ಕದ್ದು ಮುಚ್ಚಿ ತಗಿತಾನೆ ಎಚ್ಚರ. ಹೌದು ಇಲ್ಲೊಬ್ಬ ಕಾಮುಕನೊಬ್ಬ ಲೇಡಿಸ್ ಪಿಜಿಯನ್ನೇ ನೋಡುತ್ತಾ ಇರುತ್ತಿದ್ದ. ಯುವತಿಯರು ಸ್ನಾನಕ್ಕೆ ಹೋದಾಗ ಅದರ ವಿಡಿಯೋ ಮಾಡಿ ಮಜಾ ತೆಗೆದುಕೊಳ್ಳುತ್ತಾನೆ. ಇದೇ ರೀತಿ ಯುವತಿಯರ ಸ್ನಾನದ ವಿಡಿಯೋ ಸೆರೆ ಹಿಡಿಯುವಾಗ ಕಾಮುಕ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಚಿಕ್ಕಬಳ್ಳಾಪುರ ಮೂಲದ ಅಶೋಕ್ ಬಂಧಿತ ಯುವಕ ಎಂದು ಗುರುತಿಸಲಾಗಿದೆ. ಮಹದೇವಪುರ ಹೂಡಿಯಲ್ಲಿರುವ ಪಿಜಿ ನಲ್ಲಿ ಆರೋಪಿ ಅಶೋಕ್ ವಾಸ ಮಾಡ್ತಿದ್ದ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಈತನ ಕಾಮ ಪುರಾಣ ಬಯಲಾಗಿದೆ. ಅಶೋಕ್ ವಾಸ ಮಾಡ್ತಿದ್ದ ಪಿಜಿ ಮುಂಭಾಗದಲ್ಲೇ ಲೇಡಿಸ್ ಪಿಜಿ ಇತ್ತು. ಲೇಡಿಸ್ ಪಿಜಿ ಸ್ನಾನದ ರೂಂ ಅನ್ನೇ ಅಶೋಕ್ ನೋಡುತ್ತಾ ಕುಳಿತಿರ್ತಿದ್ದ. ಯುವತಿಯತಿಯರು ಸ್ನಾನ ಮಾಡಲು ಬರ್ತಿದ್ದಂತೆ ಆರೋಪಿ ಅಲರ್ಟ್ ಆಗ್ತಿದ್ದು, ಸ್ನಾನ ಮಾಡ್ತಿದ್ದ ವಿಡಿಯೋ ವೆಂಟಿಲೇಷನ್ ಮೂಲಕ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ. ಹೀಗೆ…
ಬೆಂಗಳೂರು : ನಿವೇಶನ ನೀಡುವುದಾಗಿ ಹಣ ಪಡೆದು ಚಿತ್ರನಟ ಮಾಸ್ಟರ್ ಆನಂದ್ ಗೆ ವಂಚನೆ ಎಸಗಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಲ್ಟಿ ಲೀಪ್ ವೆಂಚರ್ಸ್ ಹೆಸರಿನ ಕಂಪನಿಯು ಆನಂದ್ ಅವರಿಗೆ 18.50 ಲಕ್ಷ ರೂಪಾಯಿ ವಂಚನೆ ಮಾಡಿದ್ದು, ಈ ಸಂಬಂಧ ನಟ ಆನಂದ್ ಅವರು ಬೆಂಗಳೂರಿನ ಚಂದ್ರಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮದಲ್ಲಿ ನಿವೇಶನ ನೀಡುವುದಾಗಿ ಕಂಪೆನಿಯು ಹೇಳಿತ್ತು. ಮನಿಕಾ ಕೆಂ.ಎಂ ಇಂದ ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಅದು ಹೇಳಿತ್ತು. ಕಂಪನಿ ಮಾತು ಕೇಳಿಕೊಂಡು ಮಾಸ್ಟರ್ ಆನಂದ್ ಸೈಟ್ ಖರೀದಿಸಿದ್ದರು. ಆದರೆ, 2020 ರ ಸೆಪ್ಟಂಬರ್ ನಿಂದ 2021 ರ ಅಕ್ಟೋಬರ್ ನ ಅವಧಿಯಲ್ಲಿ ಕಂಪನಿ ತನ್ನನ್ನು ವಂಚಿಸಿದೆ ಎಂದು ಗೊತ್ತಾಗಿದೆ. ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಕಂಪನಿ ಹೇಳಿದ್ದರಿಂದ ಮಾಸ್ಟರ್ ಆನಂದ್ ಆ ಬಳಿಕ ರಾಮಸಂದ್ರದ 2000 ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ ನಿವೇಶನವನ್ನು ಖರೀದಿಸಿದ್ದರು. ಮೊದಲು…
ಬೆಂಗಳೂರು ;- ರಾಜ್ಯದಲ್ಲಿ ಶಕ್ತಿಯೋಜನೆ ಜಾರಿ ಬಂದಿದ್ದೇ ತಡ ಸರ್ಕಾರಿ ಬಸ್ ಗಳು ತುಂಬಿ ತುಳುಕುತ್ತಿವೆ. ಅದರಲ್ಲೂ ವೀಕೆಂಡ್ ನಲ್ಲಿ ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಮಹಿಳೆಯದ್ದೇ ದರ್ಬಾರ್ ಎಂದರೆ ತಪ್ಪಾಗಲಾರದು. ಹೀಗಾಗಿ ಪ್ರತಿ ವೀಕೆಂಡ್ ನಲ್ಲಿ ಉಚಿತ ಪ್ರಯಾಣಕ್ಕೆ ಹೊಸ ರೂಲ್ಸ್ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಶಕ್ತಿ ಯೋಜನೆಯಲ್ಲಿ ಕೆಲ ಮಾರ್ಪಾಡು ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪ್ರತಿ ವೀಕೆಂಡ್ ನಲ್ಲಿಯೂ ನಾಲ್ಕು ಸಾರಿಗೆ ಬಸ್ ಗಳಲ್ಲಿ ಒತ್ತಡ ಹೆಚ್ಚಿದ್ದು, ಹೀಗಾಗಿ ವೀಕೆಂಡ್ ನಲ್ಲಿ ಮಹಿಳೆಯರ ಓಡಾಟಕ್ಕೆ ಶೀಘ್ರದಲ್ಲೇ ಲಗಾಮು ಬೀಳಲಿದೆ. ತಿಂಗಳಾಂತ್ಯದೊಳಗೆ ಶಕ್ತಿ ಯೋಜನೆಗೆ ಹೊಸ ರೂಲ್ಸ್ ಬರಲಿದ್ದು, ಶಕ್ತಿ ಯೋಜನೆಯಲ್ಲಿ ರೂಲ್ಸ್ ಮಾರ್ಪಾಡು ಗೆ ಸಾರಿಗೆ ನಿಗಮಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ವೀಕೆಂಡ್ ನಲ್ಲಿ ನಾಲ್ಕು ಸಾರಿಗೆ ನಿಗಮದ ಬಸ್ ಗಳ ಹೌಸ್ ಪುಲ್ ಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಬಸ್ ಗಳಲ್ಲಿ ರಷ್ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ಷರತ್ತು ಹಾಕುವ ಪ್ಲ್ಯಾನ್…
ಬೆಂಗಳೂರು ;- ರಾಜಧಾನಿ ಬೆಂಗಳೂರಲ್ಲಿ ಸರಗಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯಿಂದ ಸರಗಳ್ಳತಕ್ಕೆ ಯತ್ನಿಸಿದ ಘಟನೆ ಭಾನುವಾರ ಜರುಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿದ್ದು, ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರದಲ್ಲಿ ಭಾನುವಾರ ಸುಮಾರು 7.30 ರ ಸುಮಾರಿಗೆ ಈ ಘಟನೆ ನಡೆದಿತ್ತು. ರಸ್ತೆಯಲ್ಲಿ ಸ್ವಪ್ನ ಎಂಬ ಮಹಿಳೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಸರಗಳ್ಳ ಆಕೆಯ ಸರ ಕಸಿದು ಪರಾರಿಯಾಗಲು ಯತ್ನಿಸಿದ್ಗಾನೆ. ಈ ವೇಳೆ ಮಹಿಳೆ ತಕ್ಷಣ ಚೀರಿಕೊಂಡಿದ್ದಾಳೆ. ಕೂಡಲೇ ಗಾಬರಿಗೊಂಡ ಕಳ್ಳ ಓಡಿ ಹೋಗಿದ್ದಾನೆ. ಈ ವೇಳೆ ರಗಳ್ಳನನ್ನ ಹಿಡಿಯಲು ಯತ್ನಸಿದರೂ ಸಾಧ್ಯವಾಗಲಿಲ್ಲ. ಮಾರಕಾಸ್ತ್ರ ತೋರಿಸಿ ಆರೋಪಿ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು ;– ಜೂನ್ 30ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ,ಯಾದಗಿರಿ, ವಿಜಯಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಮಂಡ್ಯ, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.
ಬೆಂಗಳೂರು ;- ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಮತ್ತೊಂದು ಬಲಿಯಾಗಿದೆ. ಕೆಂಗೇರಿ ಉಪನಗರದ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ವೇಳೆ ಪದ್ಮಲತ ಅವರ ಮೇಲೆ ಬಿಎಂಟಿಸಿ ಹರಿದಿತ್ತು. ವೃದ್ಧೆಯ ಎರಡು ಕಾಲುಗಳ ಮೇಲೆ ಚಾಲಕ ಬಸ್ ಹರಿಬಿಟ್ಟಿದ್ದ. ಜೂನ್ 24ರಂದು ಸಂಜೆ 5 ಗಂಟೆಗೆ ಘಟನೆ ನಡೆದಿತ್ತು. ಅಪಘಾತ ನಡೆದ ತಕ್ಷಣ ಸ್ಥಳೀಯ ಆಸ್ಪತ್ರೆಗೆ ವೃದ್ಧೆಯನ್ನು ಪೊಲೀಸರು ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವಿಗೀಡಾಗಿದ್ದಾರೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ವಿವಿಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ;- ಬಕ್ರೀದ್ ಹಬ್ಬಕ್ಕೆ ಇನ್ನೂ ಮೂರು ದಿನ ಬಾಕಿ ಇರುವಂತೆ ರಾಜಧಾನಿ ಬೆಂಗಳೂರಿನಲ್ಲಿ ಟಗರು, ಕುರಿ ಹಾಗೂ ಮೇಕೆಗಳ ಮಾರಾಟ ಬಿರುಸುಗೊಂಡಿದೆ. ನಾನಾ ಜಿಲ್ಲೆಗಳಿಂದ ವಿವಿಧ ತಳಿಗಳ ಕುರಿ ಹಾಗೂ ಮೇಕೆಗಳ ದಂಡುಗಳೊಂದಿಗೆ ವ್ಯಾಪಾರಿಗಳು ಬೀಡುಬಿಟ್ಟಿದ್ದಾರೆ. ಜೂ. 29ಕ್ಕೆ ಹಬ್ಬವಿದ್ದು, ಗ್ರಾಹಕರು ಈಗಲೇ ಕುರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬಂಡೂರು, ಕಿರಿಗಾವು, ಮೌಳಿ, ಶಿರೋಹಿ, ತಮಿಳುನಾಡು ಕುರಿ, ಬಾಗಲಕೋಟೆ, ಅಮೀನಗಡ, ಗೆಣಸಿ, ಶಿರಾ, ತುಮಕೂರು, ಚಿತ್ರದುರ್ಗ ಮರಿ ಸೇರಿದಂತೆ ವಿವಿಧ ತಳಿಗಳು ಇಲ್ಲಿವೆ. ಬಂಡೂರು ಕುರಿಗಳು ಕನಿಷ್ಠ ₹ 15ಸಾವಿರದಿಂದ ಗರಿಷ್ಠ ₹ 90ಸಾವಿರದವರೆಗೆ ಮಾರಾಟವಾದರೆ, ಅಮೀನಗಡ ತಳಿಯ ಟಗರಿಗೆ ಕನಿಷ್ಠ ₹ 20 ಸಾವಿರದಿಂದ ಗರಿಷ್ಠ ₹ 1.20ಲಕ್ಷದವರೆಗೂ ಬಿಕರಿಯಾಗುತ್ತಿವೆ’ ಎಂದು ವ್ಯಾಪಾರಿ ಚಿಕ್ಕಣ್ಣ ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಅಮೀನಗಡದಿಂದ 60 ಟಗರು ತಂದಿದ್ದೇನೆ. 20 ಟಗರು ಮಾರಾಟವಾಗಿವೆ. ಈ ವರ್ಷ ವ್ಯಾಪಾರ ಕುಸಿದಿದೆ. ಕುರಿ, ಟಗರಿನ ಬೆಲೆಗೆ ಹೋಲಿಸಿದರೆ ಹಸು, ಎತ್ತುಗಳ ಬೆಲೆ ಕಡಿಮೆ. ಗ್ರಾಹಕರು ಅವುಗಳ ಖರೀದಿಗೆ…