Author: Prajatv Kannada

ಸೂರ್ಯೋದಯ: 05.56 AM, ಸೂರ್ಯಾಸ್ತ : 06.49 PM ಸೋಮಶೇಖರ್ ಗುರೂಜಿ B.Sc M.935348 8403 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಷಾಢ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಗ್ರೀಷ್ಮ ಋತು, ತಿಥಿ: ಇವತ್ತು ಸಪ್ತಮಿ 12:25 AM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಉತ್ತರ ಫಾಲ್ಗುಣಿ 12:44 PM ತನಕ ನಂತರ ಹಸ್ತ ಯೋಗ: ಇವತ್ತು ವ್ಯತೀಪಾತ 06:07 AM ತನಕ ನಂತರ ವರಿಯಾನ್ ಕರಣ: ಇವತ್ತು ವಿಷ್ಟಿ 01:19 PM ತನಕ ನಂತರ ಬವ ರಾಹು ಕಾಲ:04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 04.46 AM to 06.32 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:52 ನಿಂದ ಮ.12:44 ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ಕಿರು ಪ್ರವಾಸ ಸಾಧ್ಯತೆ, ಸಣ್ಣ ಉದ್ಯಮ ಪ್ರಾರಂಭ ಯೋಜನೆ…

Read More

ರಾಜ್ಯ ಸರ್ಕಾರದಿಂದ (Government) ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ. SC, ST ವಿದ್ಯಾರ್ಥಿಗಳಿಗೆ ಸೋನಾ ಮಸೂರಿ ಅಕ್ಕಿ ವಿತರಿಸಲು ಸಚಿವರು ಆದೇಶ ಹೊರಡಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಕೇಂದ್ರ ಹಾಗೂ ತಾಲೂಕು ಮಟ್ಟದ ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿನಿಲಯಗಳಲ್ಲಿ ವಾಸವಿರುವ ವಿದ್ಯಾರ್ಥಿಗಳು ಸೋನಾ ಮಸೂರಿ ಊಟ ಮಾಡಲಿ ಎಂಬ ಉದ್ದೇಶದಿಂದ 2,50 ಲಕ್ಷ ಮಕ್ಕಳ ಊಟಕ್ಕೆ ಅಕ್ಕಿ ನೀಡಲು ನಿರ್ಧರಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಮಟ್ಟದ ಎಸ್.ಸಿ., ಎಸ್.ಟಿ. ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಊಟಕ್ಕೆ ಸೋನಾಮಸೂರಿ ನೀಡುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ. ನಾಗೇಂದ್ರ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ವಿಕಾಸಸೌಧದ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 2023 -24 ನೇ ಸಾಲಿನ ಎಸ್.ಸಿ.ಎಸ್.ಪಿ & ಟಿ.ಎಸ್.ಪಿ ಆಯವ್ಯಯ ಹಂಚಿಕೆಯ ಬಗ್ಗೆ ನೋಡಲ್ ಏಜೆನ್ಸಿ…

Read More

ಬೆಂಗಳೂರು ;- ಸರ್ಜನ್​ಗಳ ಸೇವೆ ಅಳತೆಗೂ ಮೀರಿದ್ದು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಹೇಳಿದ್ದಾರೆ. ಕರ್ನಾಟಕ ಸ್ಟೇಟ್‌ ಚಾಪ್ಟರ್‌ ಅಸೋಸಿಯೇಷನ್‌ ಆಫ್‌ ಸರ್ಜನ್ಸ್‌ ಆಫ್‌ ಇಂಡಿಯಾ ಹಾಗೂ ಸರ್ಜಿಕಲ್‌ ಸೊಸೈಟಿ ಆಫ್‌ ಬೆಂಗಳೂರು ಶಸ್ತ್ರಚಿಕಿತ್ಸಕರ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಜನ್​ಗಳು ಶಸ್ತ್ರಚಿಕಿತ್ಸೆ ನಡೆಸುವಾಗ ಜೀವನದಲ್ಲಿ ಒಮ್ಮೆ ಮಾತ್ರ ನೋವು ನೀಡುತ್ತಾರೆ. ಆದರೆ ಜೀವನ ಪರ್ಯಂತ ನಗು ನಗುತಾ ಬದುಕು ಸಾಗಿಸುವಂತೆ ನಮ್ಮನ್ನು ಸಜ್ಜುಗೊಳಿಸುತ್ತಾರೆ. ಶಸ್ತ್ರಚಿಕಿತ್ಸಕರು ಮಾನವ ರೂಪದ ದೇವರು ಎಂದರು. ಬಳಿಕ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ ರಮೇಶ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿದ್ದು, ಸಣ್ಣ ಸಣ್ಣ ವಿಚಾರಗಳು ಸಹ ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗುತ್ತಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೋಲ್‌ ಆಗುತ್ತಿವೆ. ವೈದ್ಯಕೀಯ ಕಾನೂನು ರೂಪಿಸುವ ಮುನ್ನ ವೈದ್ಯಕೀಯ ಸಮೂಹದ ಅಭಿಪ್ರಾಯ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ನಿರುಪಯುಕ್ತವಾಗಿದೆ ಎಂದರು. ಈ ವೇಳೆ ಕರ್ನಾಟಕ ಸ್ಟೇಟ್‌…

Read More

ಬಿಜೆಪಿಯಲ್ಲಿ (BJP) ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗ್ತಾನೇ ಇದೆ, ಅಧ್ಯಕ್ಷ ಸ್ಥಾನ ನನಗೆ ಬೇಕು ಅಂತ ಮಾಜಿ ಸಚಿವ ವಿ. ಸೋಮಣ್ಣ ಪಟ್ಟು ಹಿಡಿದಿದ್ದಾರೆ. ಇಷ್ಟು ದಿನ ಸೈಲೆಂಟಾಗಿದ್ದ ಸೋಮಣ್ಣ ಇದ್ದಕ್ಕಿದ್ದಂತೆ ಕಾರ್ಯಕಾರಿಣಿಯಲ್ಲಿ ಆ್ಯಕ್ಟೀವ್ ಆಗಿದ್ದಾರೆ, ಇತ್ತ ಮಾಜಿ ಸಿಎಂ ಬಿಎಸ್ವೈ ಪಕ್ಷದಲ್ಲಿ ಮತ್ತೆ ಸಕ್ರಿಯರಾಗ್ತಿದ್ದು ಹಿಡಿತ ಕೈತಪ್ಪದಂತೆ ಎಚ್ಚರಿಕೆ ವಹಿಸ್ತಿದ್ದಾರೆ. ಸೋಮಣ್ಣರನ್ನ ಬಿಎಲ್ ಸಂತೋಷ್‌ ಮುಂದೆ ಬಿಟ್ಟು ಗೇಮ್ ಶುರುಮಾಡಿದ್ರಾ ಅನ್ನೋ ಅನುಮಾನ ಶುರುವಾಗಿದ್ದು, ಮತ್ತೆ ಬಿಎಸ್ ವೈ BSY – Santosh ಸಂತೋಷ್ ಕೋಲ್ಡ್ ವಾರ್ ತಾರಕ್ಕೇರೊ ಲಕ್ಷಣಗಳು ಕಂಡುಬರ್ತಿವೆ. ವಿಧಾನಸಭಾ ಚುನಾವಣೆಯಲ್ಲಿ ಸೋತುಸುಣ್ಣವಾಗಿರುವ ಬಿಜೆಪಿ ಪಕ್ಷ ಹೊಸ ಸಾರಥಿಯ ಹುಡುಕಾಟದಲ್ಲಿದೆ ಇಷ್ಟುದಿನ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಅಶ್ವಥ್ ನಾರಾಯಣ್, ಸಿಟಿ ರವಿ, ಶೋಭಾ ಕರಂದ್ಲಾಜೆ,ಸುನೀಲ್ ಕುಮಾರ್ ಅನ್ನೋ ಹೆಸರುಗಳು ಕೇಳಿಬರ್ತಿದ್ದೋ. ಇದೀಗ ಈ ರೇಸ್ ಗೆ ವೀರಶೈವ‌ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮಾಜಿ ಸಚಿವ ವಿ.ಸೋಮಣ್ಣ ಬಂದಿದ್ದು ರಣಾಂಗಣ ನಿಧಾನವಾಗಿ ರಂಗೇರ್ತಿದೆ. ಹೈಕಮಾಂಡ್…

Read More

ಆನೇಕಲ್ ;- ಕಲುಷಿತ ನೀರು ಕುಡಿದು ಹಸು ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಜರುಗಿದೆ. ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ನೀರನ್ನು ಶುದ್ಧೀಕರಿಸದೆ ಕಾರ್ಖಾನೆಗಳು ಚರಂಡಿಗೆ ಹರಿದುಬಿಡುತ್ತಿದ್ದು, ಇದರಿಂದ ನೀರು ಕಲುಷಿತಗೊಂಡಿದೆ. ಇದನ್ನು ಸೇವಿಸಿದ ಹಸು ಸಾವನ್ನಪ್ಪಿದೆ. ಸುಶ್ಚಿತ್ ಹರ್ಬಲ್ಸ್,ಎಸ್ ಎಸ್ ಬಯೋಕೆಮ್ಸ್,ಗ್ರೀನ್ ಕೆಂ. ಲೇಕ್ ಕೆಮಿಕಲ್, ಫೈನ್ ಕಲರ್, ನ್ಯಾಚುರಲ್ ಕ್ಯಾಪ್ಸ್,ಕಟ್ರಾ, ಸೋನಿಯಾ ಆರ್ಗನಿಕ್ಸ್ ಇನ್ನಿತರ ಕಾರ್ಖಾನೆಗಳು ಅತ್ತಿಬೆಲೆ ಕೈಗಾರಿಕಾ ಪ್ರದೇಶಕ್ಕೆ ಸೇರಿದ್ದು, ಕಾನೂನುಗಳನ್ನು ಗಾಳಿಗೆ ತೂರಿ ಕೆಮಿಕಲ್ ನೀರನ್ನು ಹೊರಗೆ ಬಿಡುತ್ತಿವೆ. ಮತ್ತೊಂದೆಡೆ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಹೊಗೆಯಿಂದಾಗಿ ಕಾಯಿಲೆ ಬರುವ ಸಾಧ್ಯತೆ ಇದ್ದು, ಸರ್ಕಾರಿ ಶಾಲೆಗಳಿದ್ದರೂ ಸಹ ರಾಜಾರೋಷವಾಗಿ ಕೆಮಿಕಲ್ ನೀರನ್ನು ಹೊರ ಬಿಡುತ್ತಿವೆ. ಇದರಿಂದ ಶಾಲಾ ಮಕ್ಕಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಅಲ್ಲದೇ ಗಬ್ಬು ವಾಸನೆಯಿಂದ ದಿನನಿತ್ಯ ಇಲ್ಲಿನ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆಮಿಕಲ್ ನೀರು ಕುಡಿದು ಆಗಾಗ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ಆದರೂ ಕೂಡ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ನೆರಳೂರು ಗ್ರಾಮ…

Read More

ರಾಮನಗರ: ಹಾರೋಹಳ್ಳಿಯಿಂದ ಬಿಡದಿ ಮಾರ್ಗವಾಗಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಗಲೀಕರಣಕ್ಕೆ ಸರಕಾರ ಈಗಾಗಲೇ ಭೂಮಿಗಳನ್ನು ಕಸಿದುಕೊಂಡಿದ್ದು ಅವರು ನೀಡುತ್ತಿರುವ ಪರಿಹಾರಕ್ಕೆ ಬದಲಿ ನಿವೇಶನ ಸಿಗುವುದಿಲ್ಲ ಆದ್ದರಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದು ಮೇಡಮಾರನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. Video Player 00:00 00:27 ಹಾರೋಹಳ್ಳಿ ತಾಲೂಕಿನ ಮೇಡಮಾರನಹಳ್ಳಿ ಗ್ರಾಮದಲ್ಲಿ ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಗ್ರಾಮಸ್ಥರು, ಈಗಾಗಲೇ ರಸ್ತೆಗೆಂದು ಜಾಗವನ್ನು ಸರಕಾರದವರು ನಿಗಧಿಪಡಿಸಿದ್ದಾರೆ. ಆದರೆ ಈವರೆಗೂ ರಸ್ತೆ ಅಭಿವೃಧ್ಧಿಪಡಿಸುವ ಕೆಲಸವನ್ನು ಮಾಡಲಿಲ್ಲ. ಇತ್ತ ವಾಸಿಸುಯತ್ತಿದ್ದ ಮನೆಗಳ ಜಾಗವನ್ನು ರಸ್ತೆಗಾಗಿ ಬಿಟ್ಟುಕೊಡುತ್ತಿರುವುದಕ್ಕೆ ಸೂಕ್ತವಾದ ಪರಿಹಾರವನ್ನು ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು. Video Player 00:00 00:51 ತುಂಡು ಭೂಮಿಯೂ ಕೈಗಾರಿಕೆ ಪಾಲು; ಇನ್ನು ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಮದ ಸಮೀಪ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಅದಕ್ಕಾಗಿಯೂ ಇದಂತಹ ತುಂಡು ಭೂಮಿಯನ್ನು ಕಿತ್ತುಕೊಳ್ಳಲಾಗಿದೆ ಇದೀಗ ರಸ್ತೆ ಅಗಲೀಕರಣಕ್ಕಾಗಿ ಅಲ್ಪಸ್ವಲ್ಪ…

Read More

ರಾಮನಗರ: ಮನೆ ಕಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ (28), ಗಣೇಶ (25), ಸುದೀಪ (23) ಬಂಧಿತ ಆರೋಪಿಗಳಾಗಿದ್ದು, ಮೈಸೂರು ಜಿಲ್ಲೆ ಟಿ.ನರಸೀಪುರ ಹಾಗೂ ಹಾಸನ ಜಿಲ್ಲೆ ಸಕಲೇಶಪುರ ಮೂಲದ ಕಳ್ಳಾರಾಗಿದ್ದಾರೆ. ಬಂಧಿತರಿಂದ 27 ಲಕ್ಷ ಚಿನ್ನಾಭರಣ, 2 ಬೈಕ್ ಗಳು ವಶಕ್ಕೆ ಪಡೆದಿದ್ದು, ಜೂನ್.21 ರಂದು ಮಾಗಡಿಯಲ್ಲಿ ಕಳ್ಳತನವಾಗಿತ್ತು. ಈ ಘಟನೆ ಸಂಭಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಈ ಘಟನೆ ಸಂಭಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರ ದಾಖಲಾಗಿದೆ.

Read More

ತುಮಕೂರು: ತುಮಕೂರು ಜಿಲ್ಲಾ ವಾಲ್ಮೀಕಿ ಸಮಾಜದಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಚುನಾಯಿತ ಶಾಸಕ, ಸಚಿವರಿಗೆ ಅಭಿನಂದನೆ ಕಾರ್ಯಕ್ರಮವಾಗಿದ್ದು, ತುಮಕೂರು ನಗರದ ಗ್ಲಾಸ್ ಹೌಸ್ ನಲ್ಲಿ ನಡೆಯುತ್ತಿದೆ. ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಸೇರಿದಂತೆ ಹಲವು ಮುಖಂಡರು ಈ ಕಾರ್ಯಕ್ರಮದಲ್ಲಿ  ಭಾಗಿಯಾಗಿದ್ದರು.

Read More

ಬೆಂಗಳೂರು: ಮಹಾರಾಷ್ಟ್ರದ ಸಾಂಗ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಭಾಗವಹಿಸಲು ಕೊಲ್ಲಾಪುರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು. ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಬಾಳಾ ಸಾಹೇಬ್ ತೋರತ್ ಅವರು ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದರು. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಮಹಾ ನಿರ್ಧಾರ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಲೆ, ಶಾಸಕಾಂಗ ಪಕ್ಷದ  ನಾಯಕ ಬಾಳಾ ಸಾಹೇಬ್ ತೋರತ್, ಕೇಂದ್ರದ ಮಾಜಿ ಸಚಿವ ಪೃಥ್ವಿರಾಜ್ ಚೌಹಾಣ್, ಶಾಸಕರಾದ ವಿಕ್ರಂ ಸಾವಂತ್, ವಿಶ್ವಜಿತ್ ಕದಂ ಹಾಜರಿದ್ದರು.

Read More

ಬೆಂಗಳೂರು: ಆತ ವಿದ್ಯಾವಂತಾ.ಚನ್ನಾಗಿ ಓದ್ಕೊಂಡಿದ್ದ.ಒಂದೊಳ್ಳೆ ಕಡೆ ಕೆಲಸನೂ ಸಿಕ್ಕಿತ್ತು.ಆದ್ರೆ ಆತನಿಗಿದ್ದ ಆ ಚಟ ಇವತ್ತು ಜೈಲು ಸೇರುವಂತೆ ಮಾಡಿದೆ.ಸ್ನಾನ ಮಾಡ್ತಿದ್ದ ಮಹಿಳೆಯರನ್ನ ಇಣಿಕಿ ಇಣುಕಿ ನೋಡ್ತಾ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ತಿದ್ದವನಿಗೆ ಯುವತಿಯರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.ಹೀಗೆ ಪಿಜಿಯಲ್ಲಿದ್ದ ಯುವತಿಯರನ್ನ ಕಾಡ್ತಿದ್ದ ಆದ್ರೆ ಕೊನೆಗೂ ವಿಕೃತ ಕಾಮಿ ಖಾಕಿ ಕೈಗೆ ಸಿಕ್ಕಿಬಿದಿದಾನೆ.. ಹೌದು..ಹೀಗೆ  ಮಹಿಳೆಯರ ನಿದ್ದೆ ಕೆಡಿಸಿದ್ದ ಕಾಮುಕನ ಹೆಸರು ಅಶೋಕ್.ಚಿಕ್ಕ ಬಳ್ಳಾಪುರದ ಅಶೋಕ್ ಎಂಎಸ್ಸಿ ಓದ್ತಾ ಇದ್ದ.ಜೊತೆಗೆ ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡ್ತಿದ್ದ.ಕಳೆದ ಕೆಲ ವರ್ಷಗಳಿಂದ  ಹೂಡಿ ತಿಗಳರ ಪಾಳ್ಯದಲ್ಲಿರುವ ಪಿಜಿಯಲ್ಲಿ‌ ಬಂದು ನೆಲೆಸಿದ್ದ.ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇದ್ದಿದ್ದಿದ್ರೆ ಇವತ್ತು ಜೈಲು ಸೇರೊ ಗತಿ ಬರ್ತಾ ಇರ್ಲಿಲ್ಲ.ಈ ಪಾಪಿ ಪಿಜಿ ಎದುರಿರುವ ಲೇಡಿಸ್ ಪಿಜಿ‌‌‌ ಮೇಲೆ ಕಣ್ಣಾಕಿದ್ದ.ಅದ್ರಲ್ಲೂ ಮಹಿಳೆಯರ ಸ್ನಾನದ ಕೋಣೆಯನ್ನೆ ಟಾರ್ಗೆಟ್ ಮಾಡ್ತಿದ್ದ.ಪಿಜಿ ನಲ್ಲಿರೊ‌ ಯುವತಿಯರು ಸ್ನಾನಕ್ಕೆ ಬರ್ತಾ ಇದ್ದಂತೆ ಆ್ಯಕ್ಟಿವ್ ಆಗಿ ಬಿಡ್ತಿದ್ದ.ಯುವತಿಯರ ಸ್ನಾನದ ವಿಡಿಯೋ ತನ್ನ ಮೊಬೈಲ್…

Read More