Author: Prajatv Kannada

ಸಾಸಿವೆ ಎಣ್ಣೆಯು ಸಾಸಿವೆ ಸಸ್ಯಗಳ ಬೀಜಗಳಿಂದ ಬರುತ್ತದೆ. ಇದು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಹೃದಯರಕ್ತನಾಳದ ಕಾಯಿಲೆಯ ಬೆಳವಣಿಗೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಎಣ್ಣೆಯಿಂದ ಅಡುಗೆ ಮಾಡುವುದು ಗಂಭೀರ ಅಪಾಯವನ್ನು ಉಂಟುಮಾಡಬಹುದು, ವಿಶೇಷವಾಗಿ ಮಕ್ಕಳಿಗೆ. ಜನರು ಸಾಸಿವೆ ಎಣ್ಣೆಯನ್ನು ಅಡುಗೆ ಮತ್ತು ಪರ್ಯಾಯ ಔಷಧದಲ್ಲಿ ದೀರ್ಘಕಾಲ ಬಳಸಿದ್ದಾರೆ. ಇದು ಏಷ್ಯನ್, ಮುಖ್ಯವಾಗಿ ಭಾರತೀಯ, ಪಾಕಪದ್ಧತಿಗಳಲ್ಲಿ ಸಾಮಾನ್ಯವಾಗಿದೆ. ಎಣ್ಣೆಯ ಬಲವಾದ ರುಚಿಯು ಹಾರ್ಸ್ರಡೈಶ್ ಮತ್ತು ವಾಸಾಬಿಯಲ್ಲಿ ಇರುವ ಸಂಯುಕ್ತದಿಂದ ಬರುತ್ತದೆ. ಸಾಸಿವೆ ಎಣ್ಣೆಯು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ಇದು ಹೃದಯರಕ್ತನಾಳದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಸಂಯುಕ್ತವನ್ನು ಸಹ ಹೊಂದಿದೆ. ಆದಾಗ್ಯೂ, ಸಾಸಿವೆ ಎಣ್ಣೆಯ ಬಳಕೆಯು ವಿವಾದಾಸ್ಪದವಾಗಿದೆ ಮತ್ತು ಸಂಭಾವ್ಯ ಅಪಾಯಗಳು ತುಂಬಾ ದೊಡ್ಡದಾಗಿದೆ, ಆಹಾರ ಮತ್ತು ಔಷಧ ಆಡಳಿತ (FDA) ಅಡುಗೆಯಲ್ಲಿ ಅದರ ಬಳಕೆಯನ್ನು ನಿಷೇಧಿಸಿದೆ.  ಹೃದಯರಕ್ತನಾಳದ ಪ್ರಯೋಜನಗಳು ಸಾಸಿವೆ ಎಣ್ಣೆಯು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಸಿವೆ ಎಣ್ಣೆಯಲ್ಲಿ ಮೊನೊಸಾಚುರೇಟೆಡ್…

Read More

ಇಸ್ಲಾಮಾಬಾದ್: ನಿಧಾನವಾಗಿ ಹೃದಯಾಘಾತವಾಗಲಿ ಎಂದು ನನಗೆ ಚುಚ್ಚು ಮದ್ದನ್ನು ನೀಡಿದ್ದರು. ಜೊತೆಗೆ ವಾಶ್ ರೂಂ ಅನ್ನು ಬಳಸಲು ಅನುಮತಿ ನೀಡಿರಲಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಇಮ್ರಾನ್ ಖಾನ್ ವಕೀಲರು ಪ್ರತಿಕ್ರಿಯಿಸಿದ್ದು, ಇಮ್ರಾನ್ ಖಾನ್ ಬಿಡುಗಡೆ ನಂತರ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದೇವೆ. ಈ ವೇಳೆ ಇಮ್ರಾನ್ ಖಾನ್ ಎದೆ ನೋವಿನ ಬಗ್ಗೆ ತಿಳಿಸಿದ್ದಾರೆ ಎಂದಿದ್ದಾರೆ. ಇಮ್ರಾನ್ ಖಾನ್‍ಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಅಷ್ಟೇ ಅಲ್ಲದೇ ನಿಧಾನವಾಗಿ ಹೃದಯಾಘಾತವಾಗಲು ಊಟದಲ್ಲಿ ಇನ್ಸುಲಿನ್ ಅನ್ನು ನೀಡಲಾಗಿದೆ. ಇಮ್ರಾನ್ ಖಾನ್‍ನನ್ನು ಕೊಲ್ಲುವ ಯತ್ನ ನಡೆಯುತ್ತಿದೆ. ಅವರಿಗೆ ಮಲುಗಲು ಬಿಡುತ್ತಿಲ್ಲ. ಶೌಚಾಲಯ ಹಾಗೂ ಹಾಸಿಗೆ ಇಲ್ಲದ ಕೊಳಕು ಕೊಣೆಯಲ್ಲಿ ಇರಿಸಲಾಗಿತ್ತು. ಅವರಿಗೆ ತಿನ್ನಲು ಏನನ್ನು ನೀಡಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿದ್ದ ವೇಳೆ ಜೈಲಿನಲ್ಲಿ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

Read More

ಪಾಕಿಸ್ತಾನ: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಿದ ಬಳಿಕ ಪಾಕಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಇಮ್ರಾನ್ ಖಾನ್ ಬಂಧನವನ್ನು ವಿರೋಧಿಸಿ ದೇಶದ ವಿವಿಧ ರಸ್ತೆಗಳಲ್ಲಿ ವಾಹನಗಳು, ಕಟ್ಟಡಗಳು ಮತ್ತು ಕೆಲಸದ ಸ್ಥಳಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದು ಇದೀಗ ಸರ್ಕಾರದ ವಿರುದ್ಧ 6 ಸೇನಾ ಅಧಿಕಾರಿಗಳು ತಿರುಗಿ ಬಿದಿದ್ದಾರೆ. ಇಮ್ರಾನ್ ಅವರ ಪಕ್ಷದ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ನಿರಂತರವಾಗಿ ಬೀದಿಗಳನ್ನು ಧ್ವಂಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಪಾಕಿಸ್ತಾನದ ಸೇನೆಯಲ್ಲೂ ಉಗ್ರ ಬಂಡಾಯ ಭುಗಿಲೆದ್ದಿದೆ. ಆರು ಹಿರಿಯ ಸೇನಾ ಅಧಿಕಾರಿಗಳು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಮತ್ತು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಪಾಕಿಸ್ತಾನ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಸೇನೆಯ ಮೇಜರ್ ಆದಿಲ್ ರಾಜಾ (ನಿವೃತ್ತ) ಟ್ವೀಟ್‌ನಲ್ಲಿ ಸೇನೆಯ ಆರು ಲೆಫ್ಟಿನೆಂಟ್ ಜನರಲ್‌ಗಳು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಸರ್ಕಾರ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್‌ಮೆಂಟ್ (PDM) ಅನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಾರೆ ಎಂದು…

Read More

ಮುಂಬೈ: ಓದುವ ಸಮಯದಲ್ಲಿ ಮೊಬೈಲ್ (Phone) ಯಾಕೆ ಹೆಚ್ಚು ಬಳಸುತ್ತೀಯಾ ಎಂದು ತಂದೆ (Father) ಕೇಳಿದ್ದಕ್ಕೆ ಹುಡುಗಿಯೊಬ್ಬಳು (Girl) ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ (Pune) ನಡೆದಿದೆ. ಪುಣೆಯ ಘೋಡೆಗಾಂವ್‍ನಲ್ಲಿ 19 ವರ್ಷದ ಹುಡುಗಿ ಓದುತ್ತಿರುವಾಗ ಫೋನ್‍ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಳು. ಇದನ್ನು ನೋಡಿದ ಆಕೆಯ ತಂದೆ ಗದರಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ಹುಡುಗಿಯು ಟೆರೇಸ್‍ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಗೆ ಸಂಬಂಧಿಸಿ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ಮೊದಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ಕುರಿತು ಘೋಡೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತಳ ತಂದೆ ಉದ್ಯಮಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾಳೆ. ಒಬ್ಬಳೆ ಮಗಳಾಗಿದ್ದು, ಈಕೆ 12ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Read More

ಮುಂಬೈ: ಚುನಾವಣೆ ಎದುರಿಸೋಣ, ಯಾರು ಬೇಕೆಂದು ಜನರೇ ಅಂತಿಮ ನಿರ್ಧಾರ ಕೈಗೊಳ್ಳಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (Maharashtra Chief Minister Eknath Shinde)ಹಾಗೂ ಬಿಜೆಪಿಗೆ ಉದ್ಧವ್ ಠಾಕ್ರೆ(Uddhav Thackeray) ಸವಾಲು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಎದುರಿಸೋಣ, ಜನರೇ ನಿರ್ಧಾರ ಕೈಗೊಳ್ಳಲಿ. ಈ ಹಿಂದೆ ನಾನು ನೈತಿಕತೆಯ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಇದೀಗ ಏಕನಾಥ್ ಶಿಂಧೆಯವರೂ ಕೂಡ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಕಳೆದ ವರ್ಷ ಬಂಡಾಯ ಎದ್ದು, ನಮ್ಮ ಸರ್ಕಾರ ಉರುಳಲು ಕಾರಣರಾಗಿದ್ದ ಶಿವಸೇನೆ ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಪ್ರಸ್ತುತ ಸ್ಪೀಕರ್ ವಿದೇಶ ಪ್ರವಾಸದಲ್ಲಿದ್ದಾರೆ. ರಾಜ್ಯಕ್ಕೆ ಮರಳಿದ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಮರಳಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆಂದು ಹೇಳಿದ್ದಾರೆ. ದೇಶದಲ್ಲಿ ನಂಗಾ ನಾಚ್ ನಡೆಯುತ್ತಿದ್ದು, ಇದ್ದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿಲ್ಲಿಸಬೇಕು. ವಿಶ್ವದಾದ್ಯಂತ ಮಹಾರಾಷ್ಟ್ರ…

Read More

ಸೂರ್ಯೋದಯ: 05.55 AM, ಸೂರ್ಯಾಸ್ತ : 06.37 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ವೈಶಾಖ ಮಾಸ, ಕೃಷ್ಣ ಪಕ್ಷ, ಉತ್ತರಾಯಣ, ವಸಂತ ಋತು, ತಿಥಿ: ಇವತ್ತು ಸಪ್ತಮಿ 09:06 AM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಶ್ರವಣ  01:03 PM ತನಕ ನಂತರ ಧನಿಷ್ಠ ಯೋಗ: ಇವತ್ತು ಶುಕ್ಲ 12:18 PM ತನಕ ನಂತರ ಬ್ರಹ್ಮ ಕರಣ: ಇವತ್ತು ಬವ 09:06 AM ತನಕ ನಂತರ ಬಾಲವ 07:57 PM ತನಕ ನಂತರ ಕೌಲವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ:03:00 ನಿಂದ 04:30 ವರೆಗೂ ಗುಳಿಕ ಕಾಲ:07:30 ನಿಂದ 09:00 ವರೆಗೂ ಅಮೃತಕಾಲ: 03.20 AM to 04.49 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:46 ನಿಂದ ಮ.12:38 ವರೆಗೂ ಮೇಷ ರಾಶಿ ನಂಬಿದವರಿಂದಲೇ ಮೋಸ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ ಬರುವುದು, ನಿಮಗೂ ಮೇಲಾಧಿಕಾರಿ ನಡುವೆ ಮಾತಿನ ಚಕಮಕಿ ಸಂಭವ, ಮಕ್ಕಳಿಂದ ಜಗಳ…

Read More

ವಿಜಯಪುರ: ವೋಟಿಂಗ್‌ ಬೆನ್ನಲ್ಲೆ ಮತ ಎಣಿಕೆಗೆ ಕೌಂಟ್‌ಡೌನ್‌ ಶುರುವಾಗಿದ್ದು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಬೆಟ್ಟಿಂಗ್‌ ಹವಾ ಜೋರಾಗಿದೆ. ‘ಈ ಸಲ ಕಪ್‌ ನಮ್ಮದೆ’ ಎಂದು ಮೂರು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ತಮ್ಮ ತಮ್ಮ ನಾಯಕರ ಪರವಾಗಿ ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಚುನಾವಣಾ ಸಮೀಕ್ಷೆಗಳು ಏನೇ ಹೇಳಿದರೂ ನಂಬದ ಸ್ಥಿತಿಯಲ್ಲಿರದೆ ಗೆಲುವು ಪಕ್ಕಾ ಎಂದು ಒಳಗೊಳಗೆ ಗುಲಾಲ್‌ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೆಟ್ಟಿಂಗ್‌ ಸಾಮರ್ಥ್ಯಗಳ ಮೇಲೆ ಅವಲಂಬಿತವಾಗಿದ್ದು, ಚಿನ್ನ, ಬೆಲೆಬಾಳುವ ವಸ್ತುಗಳು, ಬೈಕ್‌ಗಳು ಬೆಟ್ಟಿಂಗ್‌ನಲ್ಲಿ ಪ್ರಮುಖವಾಗಿವೆ. ಮೂರು ಪಕ್ಷಗಳ ಅಭಿಮಾನಿಗಳಿಗೂ ತಮ್ಮ ನಾಯಕ ಗೆಲುವು ಸಾಧಿಸಲಿದ್ದಾನೆ ಎಂದು ಬೆಟ್ಟಿಂಗ್‌ನಲ್ಲಿ ತೊಡಗಿದ್ದು, ಮೇ 13ರಂದು ಇದಕ್ಕೆ ತೆರೆ ಬೀಳಲಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸ್ವಾಭಿಮಾನದಿಂದ ಬೆಟ್ಟಿಂಗ್‌ ನಡೆಸುತ್ತಿದ್ದು, ಜಾತಿವಾರು ಲೆಕ್ಕಾಚಾರ ಮೂಲಕ ಗೆಲುವಿನ ನಗೆ ಬೀರುವ ಧಾವಂತದಲ್ಲಿದ್ದಾರೆ. ಸೋಲು–ಗೆಲುವಿನ ಲೆಕ್ಕಾಚಾರ ತೀವ್ರ ಕುತೂಹಲ ಕೆರಳಿಸಿದ್ದ ಅಸೆಂಬ್ಲಿಅಖಾಡದ ಫಲಿತಾಂಶ ಮಾತ್ರ ಬಾಕಿ ಉಳಿದಿದ್ದು, ಎಲ್ಲರ ಚಿತ್ತ ಮೇ 13ರತ್ತ ನೆಟ್ಟಿದೆ. ಕಳೆದ ಹಲವಾರು ತಿಂಗಳಿನಿಂದ ಮೂರು ಪಕ್ಷಗಳು ಭರ್ಜರಿ ಪ್ರಚಾರ…

Read More

ಕೋಲಾರ: ನಾಡಿನಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದೆ. ಒಂದೇ ದಿನ ಆನೆ ದಾಳಿಗೆ ಇಬ್ಬರು ಬಲಿಯಾದ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಮಲ್ಲನೂರು ಗ್ರಾಮದಲ್ಲಿ ನಡೆದಿದೆ. ಆನೆ ಹಾವಳಿಗೆ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪತಿಚೇನು ಗ್ರಾಮದ ಮಹಿಳೆ ಹಾಗೂ ಮಲ್ಲನೂರು ಪಂಚಾಯಿತಿಯ ಸಪ್ಪನಿಕುಂಟಾ ಗ್ರಾಮದ ಶಿವಲಿಂಗಂ ಎಂಬುವ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದಾರೆ. ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಮಲ್ಲನೂರು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಎರಡು ರಾಜ್ಯಗಳ ಗಡಿ ಗ್ರಾಮಗಳಲ್ಲಿ ಆನೆ ಹಾವಳಿಯಿಂದಾಗಿ ಗ್ರಾಮಸ್ಥರು ಮನೆಯಿಂದ ಆಚೆ ಬರಲು ಕೂಡ ಆತಂಕ ಪಡುವಂತಾಗಿದೆ.

Read More

ಹಾಸನ: ಅಪಘಾತ ಸಂಭವಿಸಿ ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಬಾರದೆ ನಡುರಸ್ತೆಯಲ್ಲೇ ಒದ್ದಾಡಿ ಯುವಕ ಪ್ರಾಣ ಬಿಟ್ಟ ಮನಕಲಕುವ ಘಟನೆ ಹಾಸನ ತಾಲೂಕಿನ ಬೇಲೂರು ರಸ್ತೆಯ ಕಲ್ಕೆರೆ ಗ್ರಾಮದ ಬಳಿ ತಡ ರಾತ್ರಿ ನಡೆದಿದೆ. ಮೂಲತಃ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ ಆನಂದ್ (30) ಮೃತ ದುರ್ದೈವಿ. ಆನಂದ್ ಬೇಲೂರು ಕಡೆಯಿಂದ ಹಾಸನದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದ. ಈ ವೇಳೆ ಮಾರ್ಗ ಮಧ್ಯೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಅಪಘಾತವಾಗಿ ಒಂದು ಗಂಟೆಯಾದರೂ ಸ್ಥಳಕ್ಕೆ ಆಂಬುಲೆನ್ಸ್ ಬಂದಿಲ್ಲ. ತೀವ್ರ ರಕ್ತಸ್ರಾವವಾಗಿ ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಒದ್ದಾಡಿ ನಡುರಸ್ತೆಯಲ್ಲೇ ಯುವಕ ಪ್ರಾಣಬಿಟ್ಟಿದ್ದಾನೆ. ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಮಂಗಳೂರು: ನಗರದ ಪುರಾಣ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಾಲಯ (Kadri Manjunath Temple) ಕ್ಕೆ ಮೂವರು ಅಪರಿಚಿತ ವ್ಯಕ್ತಿಗಳು ನುಗ್ಗಲು ಯತ್ನಿಸಿದ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದ ಮೂವರು ದೇವಾಲಯದ ಆವರಣ ಪ್ರವೇಶಿಸಿದ್ದಾರೆ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಮೂವರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಸೈಗೋಳಿ ನಿವಾಸಿ ಹಸನ್ ಶಾಹಿನ್, ಜಾಫರ್ ಹಾಗೂ ಫಾರೂಕ್‍ನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಮೂವರನ್ನು ಕದ್ರಿ ಠಾಣೆ (Kadri Police Station) ಗೆ ಕರೆದೊಯ್ದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ಶಂಕಿತ ಉಗ್ರ ಶಾರೀಕ್ (Shariq) ಕದ್ರಿ ದೇವಾಲಯವನ್ನು ಟಾರ್ಗೆಟ್ ಮಾಡಿದ್ದ. ಅಲ್ಲದೇ ಕದ್ರಿ ದೇವಾಲಯ ಆವರಣದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿ ಭಯದ ವಾತಾವರಣ ಸೃಷ್ಟಿಸಿದ್ದನು.

Read More