Author: Prajatv Kannada

ಚಿಕ್ಕಬಳ್ಳಾಪುರ: 2023ರ ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Election 2023) ಯಲ್ಲಿ ಮತದಾರರನ್ನ ಮತಗಟ್ಟೆಗಳತ್ತ ಸೆಳೆಯಲು ಭಾರತೀಯ ಚುನಾವಣಾ ಆಯೋಗ ಈ ಸಲ ವಿನೂತನ ರೀತಿಯಲ್ಲಿ ಮತಗಟ್ಟೆಗಳ ಸಜ್ಜಗೊಳಿಸಿ ಮತದಾರರ ಆಕರ್ಷಣೆಗೆ ಯತ್ನಿಸಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬರಪೂರ ಮತದಾನವಾಗಿದ್ದು. ಕೆಲವು ಬೂತ್​ಗಳಲ್ಲಿ ರಾತ್ರಿ 8 ಗಂಟೆಯವರೆಗೂ ಮತದಾನ ನಡೆದಿತ್ತು. ಇದರಿಂದ ಜಿಲ್ಲೆಯಾದ್ಯಂತ ಇರುವ 10,38,828 ಜನ ಮತದಾರರಲ್ಲಿ ಬರೊಬ್ಬರಿ 8,98,310 ಜನ ಮತದಾರರು ಮತ ಚಲಾಯಿಸಿದ್ದಾರೆ. ಇದರಿಂದ ಶೇಕಡಾ 85.83 ರಷ್ಟು ಮತದಾನವಾಗಿದ್ದು. ರಾಜ್ಯದಲ್ಲಿಯೇ ಅತೀ ಹೆಚ್ಚು ಮತದಾನವಾದ ಜಿಲ್ಲೆಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಇದರಿಂದ ಜಿಲ್ಲಾ ಚುನಾವಣಾಧಿಕಾರಿ ಎನ್.ಎಂ.ನಾಗರಾಜ್ ಶ್ರಮಿಸಿದ ಅಧಿಕಾರಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಇನ್ನು ಜಿಲ್ಲೆಯ ಗೌರೀಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಶ್ರಮಿಸಿತ್ತು. ಸ್ವತಃ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ, ಜಿಲ್ಲೆಯಾಧ್ಯಂತ ಮತದಾನದ…

Read More

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಯ ಫಲಿತಾಂಶ ಶನಿವಾರ ಹೊರಬೀಳುತ್ತಿದ್ದು, ಇದೀಗ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ಅಂತೆಯೇ ವ್ಯಕ್ತಿಯೊಬ್ಬರು ಬೆಟ್ಟಿಂಗ್‍ಗೆ ತನ್ನ ಜಮೀನನ್ನೇ ಮಾರಾಟ ಮಾಡಲು ಮುಂದಾಗಿರುವ ಪ್ರಸಂಗವೊಂದು ಮೈಸೂರಿನಲ್ಲಿ ನಡೆದಿದೆ. ಹೌದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ (Yogesh Gowda Betting) ಜಮೀನು ಮಾರಲು ಮುಂದಾದ ಕಾಂಗ್ರೆಸ್ (Congress) ಮುಖಂಡ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಕೆ.ವೆಂಕಟೇಶ್ (K Venkatesh) ಹಾಗೂ ಜೆಡಿಎಸ್ (JDS) ಅಭ್ಯರ್ಥಿ ಕೆ.ಮಹದೇವ್ ( K Mahadev) ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್ ನಡೆದಿದೆ. ಸದ್ಯ ಯೋಗೇಶ್ ಗೌಡ ಮಾತನಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಏನಿದೆ..?: ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡನಾದ ನಾನು 1 ಎಕರೆ 37…

Read More

ಹುಬ್ಬಳ್ಳಿ: ದೇಶ ಸೇವೆ ಸಲ್ಲಿಸಿ ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ, ವೀರ ಯೋಧನನ್ನು ಗ್ರಾಮಸ್ಥರು ಊರಿನ ತುಂದ ಮೆರವಣಿಗೆ ಮಾಡುವುದರ ಮೂಲಕ, ಗೌರವ ಸಲ್ಲಿಸಿರುವ ಸುಂದರ ಕ್ಷಣ ಹುಬ್ಬಳ್ಳಿ ತಾಲ್ಲೂಕಿನ ಗಂಗಿವಾಳ ಗ್ರಾಮದಲ್ಲಿ ಜರುಗಿದೆ. ಹೌದು, ಗಂಗಿವಾಳ ಗ್ರಾಮದ ಸೈನಿಕ ರಾಜೆ ಸಾಜೆಸಾಬ ಮೌಲಾಸಾಬ ಸುಲ್ತಾನನರ ಯೋಧ, 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ, ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದಾಗ ಗಂಗೆವಾಳ ಗ್ರಾಮದ ಗುರುಹಿರಿಯರು, ಯುವಕರು, ಸ್ತ್ರೀ ಸಂಘದವರು ಆರತಿ ಎತ್ತಿ ಸ್ವಾಗತ ಮಾಡಿಕೊಂಡು, ಊರಿನ ತುಂಬ ಮೆರವಣಿಗೆ ಮಾಡುವ ಮುಖಾಂತರ ಗೌರವ ಸಲ್ಲಿಸಿದರು. ಕಲ್ಮೇಶ ಮಂಡ್ಯಾಳ ಹುಬ್ಬಳ್ಳಿ ಧಾರವಾಡ

Read More

ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋದುರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 198 ನೇ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಆದರ್ಶ ಎಂಬ ಪೇದೆಯ ಮೇಲೆ ಚುನಾವಣೆ ಕರ್ತವ್ಯದ ವೇಳೆ ಮತಗಟ್ಟೆಯ ಸಮೀಪ ಕೂಗಾಡಬಾರದು ಎಂದು ಹೇಳಿ ಹೇಳಿ ಕಳುಹಿಸಿದ್ದು. ಕೆಲವು ಸಮಯದ ನಂತರ ಅದೇ ವ್ಯಕ್ತಿ ಬೈದುಕೊಂಡು ಅವಾಜ್ ಹಾಕಿದ್ದು ಹೋಗಿದ್ದು. ಮತ್ತೆ ದ್ವಿಚಕ್ರ ವಾಹನದಲ್ಲಿ ಹಿಂತಿರುಗಿ ಬಂದು ಕರ್ತವ್ಯದಲ್ಲಿದ್ದ ಪೇದೆಯ ಮೇಲೆ ಕಬ್ಬಿಣದ ಮಚ್ಚನ್ನು ಬೀಸಿದ್ದು ಎಡಗೈಯಲ್ಲಿ ತಡೆಯಲು ಹೋದ್ದಾಗ ಎರಡು ಬೆರಳುಗಳಿಗೂ ಮುಖಕ್ಕೂ ಪೆಟ್ಟಾಗಿದ್ದು ಆರೋಪಿ ಅಲ್ಲಿದ್ದ ಓಡಿ ಹೋಗಿದ್ದು ಆರೋಪಿಯ ವಿಳಾಸ ವಿಚಾರಿಸಿಲಾಗಿ ಅರೆಕಡುಕಲು ಗ್ರಾಮದ ವಿಜಯ್ ಕುಮಾರ್ ಎಂದು ತಿಳಿದು ಬಂದಿದ್ದು ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಡ್ಯ :- ಮದ್ದೂರು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಉಗ್ರ ನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಗುರುವಾರ ವಿಜ್ರಂಭಣೆಯಿಂದ ನೆರವೇರಿತು. ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳ ರಥೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸುವ ಮೂಲಕ ಧನ್ಯತಾ ಭಾವ ಮೆರೆದರು. ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಉಗ್ರ ನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರೀಮನ್ ನಾರಾಯಣ, ಶ್ರೀದೇವಿ, ಭೂದೇವಿ ಸಮೇತ ವಿಶೇಷ ಪುಷ್ಪಾಲಂಕಾರದೊಂದಿಗೆ ಮಂಟಪೋತ್ಸವ ಸೇವೆ ಜರುಗಿದವು. ಮಧ್ಯಾಹ್ನ 11.30 ರಿಂದ 12 ಗಂಟೆಯೊಳಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ದೇವರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತಾಧಿಗಳು ರಥ ಎಳೆದು ಹರ್ಷೋದ್ಧಾರ ವ್ಯಕ್ತಪಡಿಸಿದರು. ರಥ ಸಾಗಿದ ಕೋಟೆ ಬೀದಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅರವಟ್ಟಿಗೆಗಳನ್ನು ತೆರೆದು ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತಲ್ಲದೆ ಶ್ರೀ ನರಸಿಂಹ ಸ್ವಾಮಿ ಸೇವಾ ಸಮಿತಿ, ಬ್ರಾಹ್ಮಣ ಸಭಾ…

Read More

ಹುಬ್ಬಳ್ಳಿ: ಕಳೆದ ಎರಡು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಗೆಲುವಿಗಾಗಿ ಬಿರುಸಿನ ಪ್ರಚಾರ ಮಾಡಿದ್ದ ಬಿಜೆಪಿ ಅಭ್ಯರ್ಥಿ ಎಮ್.ಆರ್.ಪಾಟೀಲ್ ಅವರು ಚುನಾವಣೆಯ ಎಲ್ಲಾ ಪ್ರಚಾರಗಳನ್ನು ಮುಗಿಸಿ ಇದೀಗ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ನಿನ್ನೆಯಷ್ಟೇ ಮತದಾನ ಪೂರ್ಣಗೊಂಡಿದ್ದು, ಎಮ್.ಆರ್.ಪಾಟೀಲ್ ಅವರು ಇಂದು ತಮ್ಮ ತಾರಿಹಾಳ ಬಳಿಯ ತೋಟದ ಮನೆಯಲ್ಲಿ ದನ ಕರುಗಳಿಗೆ ಮೇವು ಹಾಕಿ ಬಂದರು, ಮತ್ತು ತಮ್ಮ ಹುಬ್ಬಳ್ಳಿಯ ಮಂಜುನಾಥ ನಗರದಲ್ಲಿನ ತಮ್ಮ ನಿವಾಸದಲ್ಲಿ ಮೊಮ್ಮಕಳಾದ ರಾಘವೇಂದ್ರ ಅನ್ವಿತಾ ಅವರನ್ನು ಆಟ ಆಡಿಸಿದರು. ಮತ್ತು ತಾಯಿ ಶಾರದಾಬಾಯಿ ಚಿಕ್ಕಮಂದಿರು ಸೇರಿದಂತೆ ಕುಟುಂಬ ವರ್ಗದವರೊಂದಿಗೆ ಕಾಲ ಕಳೆದಿದ್ದಾರೆ. ಮನೆಯಲ್ಲಿ ಕ್ಷೇತ್ರದ ನೆರೆ ಹೊರೆಯವರೊಂದಿಗೆ ಮಾತುಕತೆ ನಡೆಸಿ ಅತ್ಯಂತ ಖುಷಿಯಿಂದಲೇ ಕಾಲ ಕಳೆದಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಮ್.ಆರ್.ಪಾಟೀಲ್, ಈ ಬಾರಿಯ ಮತದಾನ ಪ್ರಕ್ರಿಯೆ ನೋಡಿದರೆ ಕ್ಷೇತ್ರದ ಎಲ್ಲ ಜನ ಹಬ್ಬದಂತೆ ಚುನಾವಣೆ ಮಾಡಿದ್ದಾರೆ. ಈ ಬಾರಿ ಕನಿಷ್ಠ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಚುನಾವಣೆಯ…

Read More

ಶಿವಮೊಗ್ಗ: 2 ಖಾಸಗಿ ಬಸ್‌ಗಳ (Bus) ನಡುವೆ ಮುಖಾಮುಖಿ ಡಿಕ್ಕಿ (Collision) ಸಂಭವಿಸಿ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಬಸ್‌ಗಳಲ್ಲಿದ್ದ 34 ಪ್ರಯಾಣಿಕರು ಗಾಯಗೊಂಡಿರುವ ಭೀಕರ ಘಟನೆ ಶಿವಮೊಗ್ಗದ (Shivamogga) ಚೋರಡಿ ಸಮೀಪ ನಡೆದಿದೆ. ಚೋರಡಿ ಸಮೀಪದ ಕುಮುದ್ವತಿ ಸೇತುವೆ ಮೇಲೆ ಶಿವಮೊಗ್ಗದಿಂದ ಆಯನೂರು ಮಾರ್ಗವಾಗಿ ಶಿಕಾರಿಪುರಕ್ಕೆ ತೆರಳುತ್ತಿದ್ದ ಬಸ್ ಹಾಗೂ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ (Accident) ರಭಸಕ್ಕೆ ಎರಡು ಬಸ್‌ಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಂದು ಬಸ್‌ನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಅಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 2 ಬಸ್‌ಗಳಲ್ಲಿ ಸುಮಾರು 70 ರಿಂದ 80 ಪ್ರಯಾಣಿಕರಿದ್ದರು ಎನ್ನಲಾಗಿದೆ. ಅಪಘಾತ ಸಂಭವಿಸಿದ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಸಂಸದ ಬಿವೈ ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಅಶೋಕ್ ನಾಯ್ಕ್, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ,…

Read More

ಮೈಸೂರು: ಫಲಿತಾಂಶಕ್ಕೂ ಮುನ್ನವೇ ಚಾಮುಂಡೇಶ್ವರಿಯಲ್ಲಿ ಬುಕ್ಕಿಂಗ್‌ ಬಡಿದಾಟ ಜೋರಾಗಿದೆ. ಕಾಂಗ್ರೆಸ್‌ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲಿಯೇ ಮಾವಿನಹಳ್ಳಿ ಸಿದ್ದೇಗೌಡ ನಾನು ಯಾರ ಜೊತೆಯೂ ಬುಕ್ಕಿಂಗ್‌ ಆಗಿಲ್ಲ ಎಂದು ಉಪ್ಪು ಮುಟ್ಟಿ ಪ್ರಮಾಣ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಮಾವಿನಹಳ್ಳಿ ಸಿದ್ದೇಗೌಡ, ನಾನು ಯಾವ ಒಳ ಒಪ್ಪಂದವನ್ನು ಮಾಡಿಕೊಂಡಿಲ್ಲ, ಇದು ಮೂಲ ಕಾಂಗ್ರೆಸಿಗ ಮರಿಗೌಡನ ಪಿತೂರಿ, ಜನರ ಗುಂಪು ಕಟ್ಟಿಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ ಹಾಳಾಗಲು ಮರಿಗೌಡ ಕಾರಣ, ನಾನು ಬುಕ್‌ ಆಗಿಲ್ಲ. ಜಿಟಿ ದೇವೇಗೌಡ ಅವರ ಮನೆ ಬಾಗಿಲಿಗೂ ಹೋಗಿಲ್ಲ, ನಾನು ಸೋಲಲಿ ಅಥವಾ ಗೆಲ್ಲಲಿ ಸಿದ್ದರಾಮಯ್ಯ ಅವರನ್ನು ಹೋಗಿ ಭೇಟಿ ಮಾಡಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವರ್ತನೆ ಕುರಿತು ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ಸಿದ್ದರಾಮಯ್ಯ ಕೂಡ ಮಾವಿನಹಳ್ಳಿ ಸಿದ್ದೇಗೌಡ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು. ಅವನೊಬ್ಬ ಮೋಸಗಾರ. ಅವನು ಇಂಥವನು…

Read More

ಬೆಂಗಳೂರು: ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆ ಆಗುವುದು ಖಚಿತ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ (Former CM BS Yeddyurappa)ಹೇಳಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು, ಯಾವುದೇ ಎಕ್ಸಿಟ್ ಪೋಲ್ ಏನೇ ಹೇಳಿದ್ದರೂ ಮತ ಎಣಿಕೆ ನಂತರ ಎಲ್ಲರಿಗೂ ಸತ್ಯ ಗೊತ್ತಾಗಲಿದೆ. ನಮಗೆ ಸ್ಪಷ್ಟವಾದ ಬಹುಮತ ಸಿಗಲಿದೆ. ಮ್ಯಾಜಿಕ್ ಸಂಖ್ಯೆ 113 ( The magic number) ದಾಟುತ್ತೇವೆ. 115ಕ್ಕೂ ಹೆಚ್ಚು ಸೀಟ್ ನಮಗೆ ಸಿಗಲಿದೆ. ಯಾರದೇ ಬೆಂಬಲ ಇಲ್ಲದೇ ನಾವು ಸರ್ಕಾರ ರಚನೆ ಮಾಡುತ್ತೇವೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಬಂದಿದ್ದೇನೆ. ಈ ಆಧಾರದ ಮೇಲೆ ನಾನು ಈ ಮಾತು ಹೇಳುತ್ತಿದ್ದೇನೆ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುತ್ತೇವೆ. ನಾವು ಹೇಳಿದ್ದಕ್ಕಿಂತ ಹೆಚ್ಚು ಸೀಟ್ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.   ಕಾಂಗ್ರೆಸ್ ಸರ್ಕಾರ ರಚನೆ ಮಾಡುತ್ತದೆ ಅನ್ನುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ”ಕಾಂಗ್ರೆಸ್ ನಾಯಕರ…

Read More

ಬೆಂಗಳೂರು: ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ(Karnataka Election 2023) ರ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದ ಡಿ ಕೆ ಸುರೇಶ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಭಾಗಿಯಾಗಿದ್ದರು.  ಬಹಳ ಮಹತ್ವ ಪಡೆದುಕೊಂಡ ತುರ್ತು ಸಭೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆದಿದೆ. 224 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಖುದ್ದು ಫೋನ್ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿರುವ ಸುರ್ಜೇವಾಲಾ, ಆಯಾ ಕ್ಷೇತ್ರಗಳಲ್ಲಿ ಆಗಿರುವಂತಹ ಮತದಾನದ ಮಾಹಿತಿ ಪಡೆದಿದ್ದಾರೆ. ಈಗಾಗಲೆ ಸಿದ್ದರಾಮಯ್ಯ ಜೊತೆ ಕೆಲ ಕಾಲ ಚರ್ಚೆ ನಡೆಸಿರುವ ಸುರ್ಜೇವಾಲಾ, ಎಲ್ಲಾ ಕ್ಷೇತ್ರಗಳಲ್ಲಿನ ಮತದಾನದ ಮಾಹಿತಿ ಸಂಗ್ರಹಿಸಿ ದಾಖಲಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಇದೀಗ ಫಲಿತಾಂಶದ ಬಗ್ಗೆ ವಿವಿಧ ಎಕ್ಸಿಟ್​ ಪೋಲ್​ಗಳು ಪ್ರಕಟವಾಗಿವೆ. ಈ ಬಗ್ಗೆ ಪರ ಮತ್ತು ವಿರೋಧ ಚರ್ಚೆ ಆಗುತ್ತಿದೆ. ಇದರ ಜೊತೆಗೆ ಕಳೆದ 2018ರ ಚುನಾವಣಾ ಸಂದರ್ಭದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯ ಏನಾಗಿತ್ತು ಎಂಬ…

Read More